ರೂತ್
3 ನೊವೊಮಿ ರೂತ್ಗೆ “ಮಗಳೇ, ನೀನು ಸುಖವಾಗಿ ಬಾಳಬೇಕು. ಅದಕ್ಕಾಗಿ ನಿನಗೆ ಮದುವೆ ಮಾಡಿಸ್ತಿನಿ.+ 2 ಬೋವಜ ನಮ್ಮ ಸಂಬಂಧಿಕ ಅಲ್ವಾ?+ ನೀನು ಅವನ ಹೊಲದಲ್ಲಿ ಕೆಲಸ ಮಾಡೋ ಹೆಂಗಸ್ರ ಜೊತೆ ಇಷ್ಟು ದಿನ ಇದ್ದೆ. ಇವತ್ತು ಸಂಜೆ ಕಣದಲ್ಲಿ ಬಾರ್ಲಿ ತೂರುವಾಗ ಬೋವಜ ಅಲ್ಲೇ ಇರ್ತಾನೆ. 3 ನೀನು ಸ್ನಾನಮಾಡಿ, ಸುಗಂಧ ತೈಲ ಹಚ್ಕೊ. ಒಳ್ಳೇ ಬಟ್ಟೆ ಹಾಕೊಂಡು ಕಣಕ್ಕೆ ಹೋಗು. ಅವನು ತಿಂದು ಕುಡಿಯೋ ತನಕ ಕಾಣಿಸ್ಕೊಳ್ಳಬೇಡ. 4 ಎಲ್ಲಿ ಮಲಗ್ತಾನೆ ಅಂತ ನೋಡು. ಆಮೇಲೆ ಅಲ್ಲಿ ಹೋಗಿ ಅವನ ಕಾಲ ಮೇಲೆ ಹಾಕಿರೋ ಹೊದಿಕೆ ತೆಗೆದು ಅಲ್ಲಿ ಮಲಗು. ಮುಂದೆ ನೀನೇನು ಮಾಡಬೇಕು ಅಂತ ಅವ್ನೇ ಹೇಳ್ತಾನೆ” ಅಂದಳು.
5 ಅದಕ್ಕೆ ರೂತ್ “ನೀನು ಹೇಳಿದ್ದೆಲ್ಲ ಮಾಡ್ತಿನಿ” ಅಂದಳು. 6 ಆಮೇಲೆ ಕಣಕ್ಕೆ ಹೋಗಿ ಅತ್ತೆ ಹೇಳಿದ ಹಾಗೇ ಮಾಡಿದಳು. 7 ಬೋವಜ ಊಟಮಾಡಿ ಖುಷಿಯಾಗಿದ್ದ. ಆಮೇಲೆ ಧಾನ್ಯದ ರಾಶಿ ಪಕ್ಕದಲ್ಲಿ ಮಲಗಿದ. ಆಗ ರೂತ್ ಮೆಲ್ಲ ಹೋಗಿ ಅವನ ಕಾಲ ಮೇಲಿರೋ ಹೊದಿಕೆ ಸರಿಸಿ ಅಲ್ಲೇ ಮಲಗಿದಳು. 8 ಮಧ್ಯರಾತ್ರಿ ಬೋವಜ ನಡುಗ್ತಾ ಎದ್ದು ಕೂತ. ಆಗ ಕಾಲ ಹತ್ರ ಒಬ್ಬ ಸ್ತ್ರೀ ಮಲಗಿರೋದನ್ನ ನೋಡಿ 9 “ಯಾರಮ್ಮ ನೀನು?” ಅಂತ ಕೇಳಿದ. ಅವಳು “ನಾನು ನಿಮ್ಮ ಸೇವಕಿ ರೂತ್. ನನ್ನ ಹತ್ರದ ಸಂಬಂಧಿ+ ನೀನಾಗಿರೋದ್ರಿಂದ ದಯವಿಟ್ಟು ನನ್ನ ಬಿಡಿಸಿ ಸಂರಕ್ಷಣೆ ಕೊಡು” ಅಂದಳು. 10 ಆಗ ಬೋವಜ “ಮಗಳೇ ಯೆಹೋವ ನಿನ್ನನ್ನ ಆಶೀರ್ವದಿಸ್ಲಿ. ನೀನು ಶಾಶ್ವತ ಪ್ರೀತಿಯನ್ನ ಮುಂಚೆಗಿಂತ+ ಈಗ ಹೆಚ್ಚಾಗಿ ತೋರಿಸಿದ್ದಿಯ. ಯಾಕಂದ್ರೆ ಬಡ ಅಥವಾ ಶ್ರೀಮಂತ ಯುವಕನ ಹಿಂದೆ ನೀನು ಹೋಗಲಿಲ್ಲ. 11 ನೀನೇನೂ ಹೆದರಬೇಡ. ನೀನು ಗುಣವಂತೆ ಅಂತ ಎಲ್ರಿಗೂ ಗೊತ್ತು. ಹಾಗಾಗಿ ನೀನು ಹೇಳಿದ್ದೆಲ್ಲಾ ಮಾಡ್ತಿನಿ.+ 12 ನಾನು ನಿನ್ನ ಹತ್ರದ ಸಂಬಂಧಿನೇ.+ ಆದ್ರೆ ನನಗಿಂತ ಹತ್ರದ ಸಂಬಂಧಿ ಇನ್ನೊಬ್ಬ ಇದ್ದಾನೆ.+ 13 ಈ ರಾತ್ರಿ ಇಲ್ಲೇ ಇರು. ಬೆಳಗ್ಗೆ ನೋಡೋಣ. ಅವನಿಗೆ ಇಷ್ಟ ಇದ್ರೆ ನಿನ್ನನ್ನ ಬಿಡಿಸ್ಲಿ.+ ಇಲ್ಲಾಂದ್ರೆ ಜೀವ ಇರೋ ದೇವರಾದ ಯೆಹೋವನ ಆಣೆ, ನಾನೇ ನಿನ್ನನ್ನ ಬಿಡಿಸ್ಕೊಳ್ತೀನಿ. ಬೆಳಗಾಗೋ ತನಕ ಇಲ್ಲೇ ಮಲಗು” ಅಂದ.
14 ಹಾಗಾಗಿ ರೂತ್ ಬೆಳಿಗ್ಗೆ ತನಕ ಅವನ ಕಾಲ ಹತ್ರ ಮಲಗಿದ್ದಳು. ಜನ್ರ ಕಣ್ಣಿಗೆ ಬೀಳಬಾರದು ಅಂತ ಬೆಳಕು ಹರಿಯೋ ಮುಂಚೆನೇ ಎದ್ದಳು. ಒಬ್ಬ ಸ್ತ್ರೀ ಕಣಕ್ಕೆ ಬಂದಿದ್ದು ಜನ್ರಿಗೆ ಗೊತ್ತಾಗೋದು ಬೋವಜನಿಗೆ ಇಷ್ಟ ಇರಲಿಲ್ಲ. 15 ಆಮೇಲೆ ಅವನು “ನಿನ್ನ ಹೊದಿಕೆ ತಂದು ಇಲ್ಲಿ ಹಾಸು” ಅಂದ. ಹಾಸಿದಾಗ ಆರು ಸೆಯಾ ಬಾರ್ಲಿ* ಹಾಕಿ ಅವಳ ಮೇಲೆ ಹೊರಿಸಿ ಪಟ್ಟಣಕ್ಕೆ ಹೋದ.
16 ರೂತ್ ಅತ್ತೆ ಹತ್ರ ಹೋದಳು. ಅತ್ತೆ “ಹೋದ ಕೆಲಸ ಏನಾಯ್ತಮ್ಮಾ?”* ಅಂತ ಕೇಳಿದಳು. ರೂತ್ ಬೋವಜ ಮಾಡಿದ್ದೆಲ್ಲ ಹೇಳಿದಳು. 17 “‘ಅತ್ತೆ ಹತ್ರ ಬರಿಗೈಲಿ ಹೋಗಬೇಡ’ ಅಂತ ಹೇಳಿ ಈ ಆರು ಸೆಯಾ ಬಾರ್ಲಿ ಕೊಟ್ಟ” ಅಂತಾನೂ ಹೇಳಿದಳು. 18 ಆಗ ನೊವೊಮಿ “ಮಗಳೇ ಮುಂದೆ ಏನಾಗುತ್ತೆ ಅಂತ ಕಾಯ್ತಾ ಇರು. ಈ ವಿಷ್ಯ ಬಗೆಹರಿಸೋ ತನಕ ಅವನು ಇವತ್ತು ನಿದ್ದೆ ಮಾಡಲ್ಲ” ಅಂದಳು.