ಜ್ಞಾನೋಕ್ತಿ
5 ನನ್ನ ಮಗನೇ, ನಾನು ಹೇಳೋ ವಿವೇಕದ ಮಾತುಗಳನ್ನ ಕೇಳು.
ವಿವೇಚನಾ ಶಕ್ತಿ ಬಗ್ಗೆ ನಾನು ಕಲಿಸೋದನ್ನ ಶ್ರದ್ಧೆಯಿಂದ ಕೇಳಿಸ್ಕೊ.+
2 ಆಗ ನೀನು ನಿನ್ನ ಬುದ್ಧಿಯನ್ನ ಕಾಪಾಡ್ಕೊಳ್ತೀಯ.
ನಿನ್ನ ತುಟಿಗಳು ಸತ್ಯಾನೇ ಹೇಳುತ್ತೆ.+
5 ಅವಳ ಕಾಲು ಸಾವಿನ ಹತ್ರ ಓಡುತ್ತೆ.
ಅವಳ ಹೆಜ್ಜೆ ನೇರವಾಗಿ ಸ್ಮಶಾನಕ್ಕೆ* ಕರ್ಕೊಂಡು ಹೋಗುತ್ತೆ.
6 ಜೀವ ಕೊಡೋ ದಾರಿ ಬಗ್ಗೆ ಅವಳು ಸ್ವಲ್ಪನೂ ಯೋಚಿಸಲ್ಲ.
ಅವಳ ಕಾಲು ಎಲ್ಲೆಲ್ಲೊ ಅಲೆಯುತ್ತೆ, ಅವು ಎಲ್ಲಿಗೆ ಕರ್ಕೊಂಡು ಹೋಗುತ್ತೆ ಅಂತ ಅವಳಿಗೆ ಗೊತ್ತಿಲ್ಲ.
7 ಹಾಗಾಗಿ ನನ್ನ ಮಗನೇ,* ನನ್ನ ಮಾತು ಕೇಳು.
ನಾನು ಹೇಳೋ ವಿಷ್ಯಗಳನ್ನ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡಬೇಡ.
11 ಹಾಗೇನಾದ್ರೂ ಆದ್ರೆ ನಿನ್ನ ಜೀವನದ ಕೊನೇಲಿ
ನಿನ್ನ ಬಲ ಕಮ್ಮಿ ಆದಾಗ, ಶರೀರ ಶಕ್ತಿ ಕಳ್ಕೊಂಡಾಗ ಕೊರಗ್ತೀಯ.+
12 ಆಗ ಹೀಗೆ ಅಂದ್ಕೊಳ್ತೀಯ “ಅಯ್ಯೋ! ನಾನು ಯಾಕೆ ಶಿಸ್ತನ್ನ ದ್ವೇಷಿಸಿದೆ?
ನನ್ನನ್ನ ತಿದ್ದಿದಾಗ ಹೃದಯ ಯಾಕೆ ಬೇಡ ಅಂದಿತು?
13 ನಾನು ನನ್ನ ಬೋಧಕರ ಮಾತುಗಳನ್ನ ಕೇಳಿಲ್ಲ,
ನನ್ನ ಶಿಕ್ಷಕರಿಗೆ ಗಮನಕೊಡಲಿಲ್ಲ.
16 ನಿನ್ನ ಬುಗ್ಗೆಗಳು ನಿನ್ನ ಮನೆಯಿಂದ ಹೊರಗೆ ಹರಿಬೇಕಾ?
ನಿನ್ನ ನದಿ ನೀರು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಹರಿದುಹೋಗಬೇಕಾ?+
17 ಅವು ಇರೋದು ನಿನಗೆ,
ಬೇರೆಯವ್ರಿಗೆ ಅಲ್ಲ.+
19 ಅವಳು ನಿನ್ನ ಪ್ರೀತಿಯ ಹೆಣ್ಣುಜಿಂಕೆ, ಆಕರ್ಷಕವಾದ ಬೆಟ್ಟದ ಮೇಕೆ.+
ಅವಳ ಮೊಲೆಗಳು ನಿನ್ನನ್ನ ಯಾವಾಗ್ಲೂ ತೃಪ್ತಿಪಡಿಸಲಿ.*
ಅವಳ ಪ್ರೀತಿಯ ಬಂಧನದಲ್ಲಿ ನೀನು ಸದಾಕಾಲ ಸೆರೆಯಾಗಿರು.+
20 ಹೀಗಿರುವಾಗ ನನ್ನ ಮಗನೇ, ನಡತೆಗೆಟ್ಟ* ಸ್ತ್ರೀಗೆ ಯಾಕೆ ಮರುಳಾಗ್ತೀಯ?
ನಾಚಿಕೆಗೆಟ್ಟ* ಹೆಂಗಸನ್ನ ಯಾಕೆ ಅಪ್ಕೊಳ್ತೀಯ?+
22 ಕೆಟ್ಟವನಿಗೆ ಅವನ ತಪ್ಪುಗಳೇ ಉರ್ಲು,
ಅವನ ಪಾಪಗಳೇ ಅವನನ್ನ ಹಗ್ಗದ ತರ ಕಟ್ಟಿಹಾಕುತ್ತೆ.+
23 ಅವನು ಅತಿಯಾದ ಮೂರ್ಖತನದಿಂದ ಅಡ್ಡದಾರಿ ಹಿಡಿತಾನೆ.
ಶಿಸ್ತು ಸ್ವೀಕರಿಸದೆ ಇದ್ದದ್ರಿಂದ ಸಾಯ್ತಾನೆ.