ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಮೂತ್-ಲಾಬ್ಬೆನ್* ರಾಗದಲ್ಲಿದೆ.
א [ಆಲೆಫ್]
2 ನಾನು ನಿನ್ನಲ್ಲಿ ಖುಷಿಪಡ್ತೀನಿ, ಸಂತೋಷಪಡ್ತೀನಿ.
ಸರ್ವೋನ್ನತನೇ, ನಿನ್ನ ಹೆಸ್ರನ್ನ ಸ್ತುತಿಸ್ತೀನಿ.*+
ב [ಬೆತ್]
3 ನನ್ನ ಶತ್ರುಗಳು ವಾಪಸ್ ಹೋಗುವಾಗ,+
ನಿನ್ನ ಮುಂದೆ ಎಡವಿಬಿದ್ದು ನಾಶವಾಗಿ ಹೋಗ್ತಾರೆ.
4 ಯಾಕಂದ್ರೆ ನೀನು ನನ್ನ ಪರ ವಾದಿಸಿ ನನಗೆ ನ್ಯಾಯ ಸಿಗೋ ತರ ಮಾಡ್ತೀಯ.
ನಿನ್ನ ಸಿಂಹಾಸನದ ಮೇಲೆ ಕೂತು ನ್ಯಾಯವಾಗಿ ತೀರ್ಪು ಕೊಡ್ತೀಯ.+
ג [ಗಿಮೆಲ್]
5 ನೀನು ಜನ್ರನ್ನ ಗದರಿಸಿ+ ಕೆಟ್ಟವರನ್ನ ನಾಶಮಾಡಿದೆ.
ಅವ್ರ ಹೆಸ್ರನ್ನ ಶಾಶ್ವತವಾಗಿ ಅಳಿಸಿಹಾಕಿದೆ.
6 ಶತ್ರುಗಳು ಶಾಶ್ವತವಾಗಿ ನಿರ್ನಾಮ ಆದ್ರು,
ನೀನು ಅವ್ರ ಪಟ್ಟಣಗಳನ್ನ ಬೇರುಸಹಿತ ಕಿತ್ತುಹಾಕಿದೆ,
ಅವ್ರ ನೆನಪುಗಳೂ ಇಲ್ಲದ ಹಾಗೆ ಮಾಡಿದೆ.+
ה [ಹೆ]
7 ಆದ್ರೆ ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ,+
ನ್ಯಾಯ ತೀರಿಸೋಕೆ ಆತನು ತನ್ನ ಸಿಂಹಾಸನವನ್ನ ದೃಢವಾಗಿ ಸ್ಥಾಪಿಸಿದ್ದಾನೆ.+
ו [ವಾವ್]
10 ನಿನ್ನ ಹೆಸ್ರನ್ನ ತಿಳ್ಕೊಳ್ಳೋರು ನಿನ್ನ ಮೇಲೆ ಭರವಸೆ ಇಡ್ತಾರೆ.+
ಯೆಹೋವನೇ, ನಿನ್ನನ್ನ ಹುಡುಕೋರ ಕೈಯನ್ನ ನೀನು ಯಾವತ್ತೂ ಬಿಡಲ್ಲ.+
ז [ಜಯಿನ್]
11 ಚೀಯೋನಿನಲ್ಲಿರೋ ಯೆಹೋವನಿಗೆ ಹಾಡಿ ಹೊಗಳಿ.
ಆತನ ಕೆಲಸಗಳ ಬಗ್ಗೆ ಜನರಿಗೆ ಹೋಗಿ ಹೇಳಿ.+
12 ಯಾಕಂದ್ರೆ ಆತನು ನೊಂದವರನ್ನ ನೆನಪು ಮಾಡ್ಕೊತ್ತಾನೆ, ಅವ್ರ ರಕ್ತ ಸುರಿಸಿದವರನ್ನ ಸುಮ್ಮನೆ ಬಿಡಲ್ಲ.+
ನೊಂದವರ ಗೋಳಾಟವನ್ನ ಯಾವ ಕಾರಣಕ್ಕೂ ಆತನು ಮರಿಯಲ್ಲ.+
ח [ಹೆತ್]
13 ಯೆಹೋವನೇ, ನನಗೆ ದಯೆ ತೋರಿಸು. ಸಾವಿನ ದವಡೆಯಿಂದ ನನ್ನನ್ನ ಎತ್ತುವವನೇ,+
ಶತ್ರುಗಳಿಂದ ನಾನು ಅನುಭವಿಸ್ತಿರೋ ಯಾತನೆಯನ್ನ ನೋಡು.
14 ಆಗ ನಾನು ನಿನ್ನ ಕೆಲಸಗಳ ಬಗ್ಗೆ ಚೀಯೋನಿನ ಮಗಳ ಬಾಗಿಲ ಹತ್ರ ಹೊಗಳೋಕೆ ಆಗುತ್ತೆ.+
ನಿನ್ನ ರಕ್ಷಣೆಯ ಕೆಲಸಗಳನ್ನ ನೋಡಿ ಖುಷಿಪಡೋಕೆ ಆಗುತ್ತೆ.+
ט [ಟೆತ್]
15 ಜನಾಂಗಗಳು ತೋಡಿದ ಗುಂಡಿಗಳಲ್ಲಿ ಅವೇ ಬಿದ್ದು ಮುಳುಗಿದ್ವು.
ಅವರು ರಹಸ್ಯವಾಗಿ ಬಚ್ಚಿಟ್ಟಿದ್ದ ಬಲೆಗೆ ಅವ್ರ ಕಾಲೇ ಸಿಕ್ಕಿಹಾಕೊಳ್ತು.+
16 ಯೆಹೋವ ಕೊಡೋ ತೀರ್ಪುಗಳಿಂದ ಆತನು ಎಂಥ ದೇವರು ಅಂತ ಗೊತ್ತಾಗುತ್ತೆ.+
ಕೆಟ್ಟವನ ಕುಯುಕ್ತಿ ಅವನನ್ನೇ ಸಿಕ್ಕಿಕೊಳ್ಳೋ ತರ ಮಾಡುತ್ತೆ.+
ಹಿಗ್ಗಯಾನ್* (ಸೆಲಾ)
י [ಯೋದ್]
17 ದುಷ್ಟರು ಸಮಾಧಿಗೆ* ಹೋಗ್ತಾರೆ,
ದೇವರನ್ನ ಮರೆತು ಹೋಗೋ ದೇಶಗಳೆಲ್ಲ ಅಲ್ಲಿಗೇ ಹೋಗುತ್ತೆ.
כ [ಕಾಫ್]
19 ಯೆಹೋವನೇ, ಒಬ್ಬ ಮನುಷ್ಯ ಜಯ ಸಾಧಿಸೋಕೆ ಬಿಡಬೇಡ.
ದೇಶಗಳಿಗೆ ನಿನ್ನ ಮುಂದೆ ತೀರ್ಪು ಆಗಲಿ.+
20 ಯೆಹೋವನೇ, ಅವರಲ್ಲಿ ಭಯ ಹುಟ್ಟಿಸು.+
ಅವರು ಬರೀ ಮನುಷ್ಯರು ಅಂತ ಅವರಿಗೆ ಗೊತ್ತಾಗಲಿ. (ಸೆಲಾ)