ಕೀರ್ತನೆ
116 ನಾನು ಯೆಹೋವನನ್ನ ಪ್ರೀತಿಸ್ತೀನಿ,
ಯಾಕಂದ್ರೆ ಆತನು ನನ್ನ ಧ್ವನಿಯನ್ನ ಕೇಳಿಸ್ಕೊಳ್ತಾನೆ,
ಸಹಾಯಕ್ಕಾಗಿ ನಾನಿಡೋ ಮೊರೆಯನ್ನ ಕೇಳಿಸ್ಕೊಳ್ತಾನೆ.+
2 ಆತನು ಕೇಳಿಸ್ಕೊಳ್ಳೋಕೆ ನನ್ನ ಕಡೆ ಬಾಗ್ತಾನೆ,+
ನಾನು ಸಾಯೋ ತನಕ ಆತನಿಗೆ ಪ್ರಾರ್ಥಿಸ್ತೀನಿ.
ಕಷ್ಟಸಂಕಟಗಳು ನನ್ನನ್ನ ಮುಳುಗಿಸಿಬಿಟ್ಟಿದ್ವು.+
4 ಆದ್ರೆ ನಾನು “ಯೆಹೋವ, ನನ್ನನ್ನ ರಕ್ಷಿಸು!”
ಅಂತ ಹೇಳ್ತಾ ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸಿದೆ.+
ನಮ್ಮ ದೇವರು ಕರುಣಾಮಯಿ.+
6 ಯೆಹೋವ ಅನುಭವ ಇಲ್ಲದವ್ರನ್ನ ಕಾದು ಕಾಪಾಡ್ತಾನೆ.+
ಯಾತನೆಯಿಂದ ನಾನು ಕುಗ್ಗಿಹೋಗಿದ್ದೆ, ಆತನು ನನ್ನನ್ನ ಕಾಪಾಡಿದ.
7 ನನ್ನ ಜೀವಕ್ಕೆ* ಮತ್ತೆ ಶಾಂತಿ ಸಿಗಲಿ,
ಯಾಕಂದ್ರೆ ಯೆಹೋವ ನನ್ನ ಜೊತೆ ದಯೆಯಿಂದ ನಡ್ಕೊಂಡಿದ್ದಾನೆ.
8 ನೀನು ನನ್ನನ್ನ ಸಾವಿಂದ ಬಿಡಿಸಿದೆ,
ನನ್ನ ಕಣ್ಣಲ್ಲಿ ಕಣ್ಣೀರು ಬರೋಕೆ ಬಿಡಲಿಲ್ಲ,
ನನ್ನ ಕಾಲುಗಳನ್ನ ಎಡವೋಕೆ ಬಿಡಲಿಲ್ಲ.+
9 ನಾನು ಎಲ್ಲಿ ತನಕ ಬದುಕಿರ್ತೀನೋ ಅಲ್ಲಿ ತನಕ ಯೆಹೋವನ ಮುಂದೆ ನಡೀತಾನೇ ಇರ್ತಿನಿ.
10 ನನ್ನಲ್ಲಿದ್ದ ನಂಬಿಕೆ ನಾನು ಮಾತಾಡೋ ತರ ಮಾಡಿತು,+
ನಾನು ತುಂಬ ಕಷ್ಟದಲ್ಲಿದ್ದೆ.
11 ನಾನು ತುಂಬ ಹೆದ್ರಿ,
“ಎಲ್ರೂ ಸುಳ್ಳು ಹೇಳೋರೇ”+ ಅಂತ ಹೇಳಿದ್ದೆ.
12 ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ
ಆತನ ಋಣನ ನಾನು ಹೇಗೆ ತೀರಿಸಲಿ?
13 ರಕ್ಷಣೆಯ* ಪಾತ್ರೆಯನ್ನ ತಗೊಂಡು
ಯೆಹೋವನ ಹೆಸ್ರಲ್ಲಿ ನಾನು ಪ್ರಾರ್ಥಿಸ್ತೀನಿ.
15 ಯೆಹೋವನ ದೃಷ್ಟಿಯಲ್ಲಿ ಆತನ ನಿಷ್ಠಾವಂತರ ಮರಣ ತುಂಬಲಾರದ ನಷ್ಟ.*+
16 ಯೆಹೋವ, ನಾನು ನಿನ್ನನ್ನ ಬೇಡ್ಕೊಳ್ತೀನಿ,
ಯಾಕಂದ್ರೆ ನಾನು ನಿನ್ನ ಸೇವಕ.
ಹೌದು ನಾನು ನಿನ್ನ ಸೇವಕ, ನಿನ್ನ ದಾಸಿಯ ಮಗ.
ನೀನು ನನ್ನನ್ನ ಬೇಡಿಗಳಿಂದ ಬಿಡಿಸಿದೆ.+
17 ನಾನು ನಿನಗೆ ಧನ್ಯವಾದ ಹೇಳ್ತಾ ಹಾಡ್ತೀನಿ,+
ನಾನು ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸ್ತೀನಿ.
18 ಆತನ ಜನ್ರ ಮುಂದೆ
ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ.+
19 ಯೆಹೋವನ ಆಲಯದ ಅಂಗಳದಲ್ಲಿ,+
ಯೆರೂಸಲೇಮಿನ ಮಧ್ಯ ನಾನು ಇದನ್ನೆಲ್ಲ ಮಾಡ್ತೀನಿ.