ಜೆಕರ್ಯ
2 ನಾನು ಕಣ್ಣೆತ್ತಿ ನೋಡಿದಾಗ ಅಳೆಯೋ ದಾರವನ್ನ ಕೈಯಲ್ಲಿ ಹಿಡ್ಕೊಂಡು ನಿಂತಿದ್ದ ಒಬ್ಬ ವ್ಯಕ್ತಿಯನ್ನ ನೋಡಿದೆ.+ 2 ಆಗ ಅವನಿಗೆ “ನೀನು ಎಲ್ಲಿಗೆ ಹೋಗ್ತಿದ್ಯಾ?” ಅಂತ ಕೇಳಿದೆ.
ಅದಕ್ಕೆ ಅವನು “ನಾನು ಯೆರೂಸಲೇಮಿನ ಅಗಲ ಮತ್ತು ಉದ್ದ ಅಳೆದು ನೋಡೋಕೆ ಹೋಗ್ತಿದ್ದೀನಿ”+ ಅಂದ.
3 ಇಗೋ! ನನ್ನ ಜೊತೆ ಮಾತಾಡ್ತಿದ್ದ ದೇವದೂತ ಹೋದ. ಅವನನ್ನ ಭೇಟಿ ಮಾಡೋಕೆ ಇನ್ನೊಬ್ಬ ದೇವದೂತ ಬಂದ. 4 ಆ ದೇವದೂತ ಅವನಿಗೆ ಹೀಗಂದ: “ಓಡಿ ಹೋಗಿ ಆ ಯುವಕನಿಗೆ ಹೀಗೆ ಹೇಳು: ‘“ಯೆರೂಸಲೇಮ್ ಪಟ್ಟಣ ಗೋಡೆಗಳಿಲ್ಲದ ಪಟ್ಟಣದ ತರ ಆಗುತ್ತೆ.+ ಯಾಕಂದ್ರೆ ಅಲ್ಲಿ ಜನ್ರ ಸಂಖ್ಯೆ ಮತ್ತು ಪ್ರಾಣಿಗಳ ಸಂಖ್ಯೆ ತುಂಬ ಹೆಚ್ಚಾಗುತ್ತೆ.+ 5 ನಾನೇ ಅದ್ರ ಸುತ್ತ ಬೆಂಕಿಯ ಗೋಡೆ ತರ ಇರ್ತಿನಿ.+ ನನ್ನ ಮಹಿಮೆಯಿಂದ ಅದನ್ನ ತುಂಬಿಸ್ತೀನಿ”+ ಅಂತ ಯೆಹೋವ ಹೇಳ್ತಿದ್ದಾನೆ.’”
6 “ಬನ್ನಿ! ಓಡಿ ಬನ್ನಿ! ಉತ್ತರದ ದೇಶದಿಂದ ಹೊರಟು ಬನ್ನಿ”+ ಅಂತ ಯೆಹೋವ ಹೇಳ್ತಿದ್ದಾನೆ.
“ಯಾಕಂದ್ರೆ ನಾನು ನಿಮ್ಮನ್ನ ನಾಲ್ಕು ದಿಕ್ಕುಗಳಿಗೆ ಚದರಿಸಿಬಿಟ್ಟಿದ್ದೀನಿ”+ ಅಂತ ಯೆಹೋವ ಹೇಳ್ತಿದ್ದಾನೆ.
7 “ಚೀಯೋನೇ, ಹೊರಟು ಬಾ! ಬಾಬೆಲಿನ ಮಗಳ ಜೊತೆ ವಾಸಿಸ್ತಾ ಇರುವವಳೇ ತಪ್ಪಿಸ್ಕೊಂಡು ಬಾ.+ 8 ಮಹಿಮೆಯನ್ನ ಪಡ್ಕೊಂಡ ಮೇಲೆ ಸೈನ್ಯಗಳ ದೇವರಾದ ಯೆಹೋವ ನಿಮ್ಮನ್ನ ಲೂಟಿ ಮಾಡಿದ ದೇಶಗಳಿಗೆ ನನ್ನನ್ನ ಕಳಿಸಿ+ ನಿಮಗೆ ಹೀಗೆ ಹೇಳ್ತಿದ್ದಾನೆ: ‘ನಿಮ್ಮನ್ನ ಮುಟ್ಟುವವರು ನನ್ನ ಕಣ್ಣು ಗುಡ್ಡೆಯನ್ನ* ಮುಟ್ತಿದ್ದಾರೆ.+ 9 ನಾನು ಅವ್ರ ಮೇಲೆ ಕೈ ಎತ್ತುತ್ತೀನಿ. ಅವ್ರ ಸೇವಕರೇ ಅವ್ರನ್ನ ಕೊಳ್ಳೆ ಹೊಡೆಯೋ ತರ ಮಾಡ್ತೀನಿ.’+ ಆಗ ಸೈನ್ಯಗಳ ದೇವರಾದ ಯೆಹೋವನೇ ನನ್ನನ್ನ ಕಳಿಸಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ.”
10 ಯೆಹೋವ ಹೇಳೋದು ಏನಂದ್ರೆ: “ಚೀಯೋನಿನ+ ಪುತ್ರಿಯೇ, ಖುಷಿಯಿಂದ ಆರ್ಭಟಿಸು. ಯಾಕಂದ್ರೆ ನಾನು ಬರ್ತಿದ್ದೀನಿ+ ಮತ್ತು ನಾನು ನಿನ್ನ ಮಧ್ಯ ವಾಸಿಸ್ತೀನಿ.+ 11 ಆ ದಿನದಲ್ಲಿ ಎಷ್ಟೋ ದೇಶಗಳ ಜನ ಯೆಹೋವನಾದ ನನ್ನ ಜೊತೆ ಬಂದು ಸೇರ್ಕೊಳ್ತಾರೆ.+ ನನ್ನ ಜನ್ರಾಗ್ತಾರೆ. ನಾನು ನಿಮ್ಮ ಮಧ್ಯ ವಾಸಿಸ್ತೀನಿ.” ಆಗ ಸೈನ್ಯಗಳ ದೇವರಾದ ಯೆಹೋವನೇ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ. 12 ಯೆಹೋವ ಪವಿತ್ರ ನೆಲದಿಂದ ಯೆಹೂದವನ್ನ ತನ್ನ ಸ್ವಂತ ಆಸ್ತಿಯಾಗಿ ತಗೊಳ್ತಾನೆ. ಆತನು ಯೆರೂಸಲೇಮನ್ನ ಮತ್ತೊಮ್ಮೆ ಆರಿಸ್ಕೊಳ್ತಾನೆ.+ 13 ಜನ್ರೇ ನೀವೆಲ್ಲ ಯೆಹೋವನ ಮುಂದೆ ಮೌನವಾಗಿರಿ. ಯಾಕಂದ್ರೆ ಆತನು ಕ್ರಮ ತಗೊಳ್ಳೋಕೆ ತನ್ನ ಪವಿತ್ರ ನಿವಾಸದಿಂದ ಹೊರಟಿದ್ದಾನೆ.