ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bi7 ಪು. 5
  • ಮುನ್ನುಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುನ್ನುಡಿ
  • ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
ಮುನ್ನುಡಿ

ಮುನ್ನುಡಿ

ಪವಿತ್ರ ಶಾಸ್ತ್ರಗ್ರಂಥವು ದೇವಪ್ರೇರಣೆಯಿಂದ ಹೀಬ್ರು, ಆರಮೇಯಿಕ್‌ ಮತ್ತು ಗ್ರೀಕ್‌ ಭಾಷೆಗಳಲ್ಲಿ ಬರೆಯಲ್ಪಟ್ಟಿತು. ದೇವರ ವಾಕ್ಯದಿಂದ ‘ಎಲ್ಲ ಜನಾಂಗಗಳು’ ಪ್ರಯೋಜನ ಪಡೆಯಬೇಕಾದರೆ ಶಾಸ್ತ್ರಗ್ರಂಥವನ್ನು ಅನೇಕ ಭಾಷೆಗಳಿಗೆ ತರ್ಜುಮೆಮಾಡುವ ಅಗತ್ಯವಿದೆ. (ಮತ್ತಾಯ 24:14) ಮತ್ತಾಯದಿಂದ ಹಿಡಿದು ಪ್ರಕಟನೆಯ ವರೆಗಿನ ಇಪ್ಪತ್ತೇಳು ಪುಸ್ತಕಗಳನ್ನು, ಸಾ.ಶ. ಒಂದನೆಯ ಶತಮಾನದಲ್ಲಿ ಪ್ರೇರಿತ ಕ್ರೈಸ್ತ ಲೇಖಕರು ಮೂಲತಃ ಗ್ರೀಕ್‌ ಭಾಷೆಯಲ್ಲಿ ಬರೆದಿರುವ ಕಾರಣ ಅವುಗಳನ್ನು “ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥ” ಎಂದು ಕರೆಯಲಾಗುತ್ತದೆ.

ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರವು ಪ್ರಥಮವಾಗಿ 1950ರಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಪ್ರಕಟವಾಯಿತು. ಇದು ಮುಖ್ಯವಾಗಿ ಅತಿ ಪುರಾತನಕಾಲದ ಗ್ರೀಕ್‌ ಹಸ್ತಪ್ರತಿಗಳಿಗೆ ಹೊಂದಿಕೆಯಾಗಿರುವ ಪ್ರಸಿದ್ಧ ವೆಸ್ಟ್‌ಕಾಟ್‌ ಮತ್ತು ಹಾರ್ಟ್‌ ಗ್ರೀಕ್‌ ಮೂಲಪಾಠದ ಮೇಲೆ ಆಧಾರಿತವಾಗಿದೆ. ನೂತನ ಲೋಕ ಭಾಷಾಂತರದ ಭಾಷಾಂತರವು ಗ್ರೀಕ್‌ ಮೂಲಪಾಠವನ್ನು ಸಾಧ್ಯವಿರುವಷ್ಟು ಪ್ರಾಮಾಣಿಕತೆಯಿಂದ ಅನುವಾದಿಸಿದೆ. ಈ ಕನ್ನಡ ಅನುವಾದವು ಇಂಗ್ಲಿಷ್‌ ಆವೃತ್ತಿಯ ಮೇಲೆ ಆಧಾರಗೊಂಡಿದ್ದು ಅದಕ್ಕೆ ಸಮಾನವಾದ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದೆ.

ಈ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪ್ರಧಾನ ಗ್ರಂಥಪಾಠದಲ್ಲಿ ದೇವರ ಅದ್ವಿತೀಯ ನಾಮವಾದ ಯೆಹೋವ ಎಂಬ ನಾಮವು 237 ಬಾರಿ ಕಂಡುಬರುತ್ತದೆ. ಈ ಆವೃತ್ತಿಯ ಪರಿಶಿಷ್ಟ 1 ಇದಕ್ಕೆ ಕಾರಣವನ್ನು ಕೊಡುತ್ತದೆ ಮತ್ತು ಛಾಯಾಚಿತ್ರಗಳನ್ನು ಸಹ ಒದಗಿಸುತ್ತದೆ. ದೇವರ ನಾಮದ ಪವಿತ್ರೀಕರಣದ ಪ್ರಾಧಾನ್ಯ ಮತ್ತು ರಕ್ಷಣೆಗಾಗಿ ಎಲ್ಲರೂ ಆ ನಾಮದಲ್ಲಿ ಕೋರುವ ಆವಶ್ಯಕತೆಯ ಕಾರಣ, ಈ ಭಾಷಾಂತರವು ಯೆಹೋವನ ಹೆಸರನ್ನು ಪವಿತ್ರ ಶಾಸ್ತ್ರಗ್ರಂಥದಲ್ಲಿ ಅದಕ್ಕಿರುವ ನ್ಯಾಯಸಮ್ಮತವಾದ ಸ್ಥಾನಕ್ಕೆ ಹಿಂದಿರುಗಿಸುತ್ತದೆ.—ಮತ್ತಾಯ 6:9; ರೋಮನ್ನರಿಗೆ 10:13.

ನೂತನ ಲೋಕ ಭಾಷಾಂತರ ಎಂಬ ಹೆಸರು, ಸರ್ವ ಮಾನವಕುಲದ ಪ್ರಯೋಜನಾರ್ಥವಾಗಿರುವ ನೀತಿಯ ನೂತನ ಲೋಕವೊಂದರ ಕುರಿತು ಇರುವ ದೇವರ ವಾಗ್ದಾನದ ಮೇಲೆ ಆಧಾರಿತವಾಗಿದೆ. (2 ಪೇತ್ರ 3:13) ಪವಿತ್ರ ಶಾಸ್ತ್ರಗ್ರಂಥದ ದಿವ್ಯ ಗ್ರಂಥಕರ್ತನನ್ನು ಪ್ರೀತಿಸುವ ಈ ಕೃತಿಯ ಅನುವಾದಕರು, ಆತನ ಆಲೋಚನೆಗಳನ್ನು ಮತ್ತು ಪ್ರಕಟನೆಗಳನ್ನು ಸಾಧ್ಯವಾದಷ್ಟು ನಿಷ್ಕೃಷ್ಟವಾಗಿ ರವಾನಿಸಲು ತಮಗೆ ಆತನ ಕಡೆಗೆ ಇರುವ ವಿಶೇಷ ಜವಾಬ್ದಾರಿಯನ್ನು ಮನಗಾಣುತ್ತಾರೆ. ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು’ ಪ್ರಯತ್ನಿಸುವ ಯಥಾರ್ಥ ಹೃದಯದ ವಾಚಕರಿಗೆ ಈ ಭಾಷಾಂತರವು ಅತಿ ಪ್ರಯೋಜನಕರವಾಗಿರಲಿ ಎಂಬುದು ನಮ್ಮ ಕೋರಿಕೆ.—1 ತಿಮೊಥೆಯ 2:4.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ