ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಾರೆ
“ಮಾನವ ಜೀವಿಗಳು ಮತ್ತು ನೈಸರ್ಗಿಕ ಲೋಕವು ಒಂದು ಸಂಘರ್ಷಣೆಯ ಕಾರ್ಯಗತಿಯಲ್ಲಿವೆ. . . . [ಪರಿಸರಕ್ಕಿರುವ] ಬೆದರಿಕೆಗಳನ್ನು ವಿಮುಖಗೊಳಿಸಲು ಕೇವಲ ಕೆಲವೊಂದು ದಶಕಗಳು ಉಳಿದಿವೆ.”
ಯುಸಿಎಸ್ (ಆಸ್ಥೆಯುಳ್ಳ ವಿಜ್ಞಾನಿಗಳ ಒಕ್ಕೂಟ) ಇಂದ ನೀಡಲ್ಪಟ್ಟ ಈ ಎಚ್ಚರಿಕೆಯು, ಒಂದು ಕೆನೇಡಿಯನ್ ವೈದ್ಯಕೀಯ ಪತ್ರಿಕೆಯಾದ, ಆ್ಯನಲ್ಸ್ನಲ್ಲಿ ಪ್ರಕಟಿಸಲ್ಪಟ್ಟಿತು. ಮನುಷ್ಯನ ಜೀವಕ್ಕೆ ಬೆದರಿಕೆಹಾಕುವ ಅಭ್ಯಾಸಗಳು ಮುಂದುವರಿಯುವುದಾದರೆ, ಇವು “ಲೋಕವನ್ನು ಎಷ್ಟೊಂದು ಬದಲಾಯಿಸಬಹುದೆಂದರೆ, ನಮಗೆ ತಿಳಿದಿರುವ ರೀತಿಯಲ್ಲಿ ಜೀವವನ್ನು ಪೋಷಿಸಲು ಅದು ಅಶಕ್ತವಾಗಿರುವುದು” ಎಂದು ವರದಿಯು ಕೂಡಿಸುತ್ತದೆ.
ಗಮನಿಸಬೇಕಾದ ತುರ್ತಿನ ಸಮಸ್ಯೆಗಳಲ್ಲಿ ಉದಾಹರಿಸಲ್ಪಟ್ಟ ಕೆಲವು ವಿಷಯಗಳು, ಓಸೋನ್ ವಿರೇಚನೆ; ಜಲ ಮಾಲಿನ್ಯ; ಅರಣ್ಯನಾಶ; ಮಣ್ಣು ಫಲವತ್ತಿನ ಕುಗ್ಗುವಿಕೆ; ಮತ್ತು 2100 ವರ್ಷದಷ್ಟಕ್ಕೆ ಈಗ ಜೀವಿಸುತ್ತಿರುವ ಎಲ್ಲ ಜಾತಿಗಳಲ್ಲಿ ಮೂರನೇ ಒಂದು ಭಾಗ ಒಳಗೂಡಬಹುದಾದ ಜೀವಿಜಾತಿಗಳ ಅಳಿವು. “ಜೀವನದ ಪರಸ್ಪರ ಅವಲಂಬಿತ ಜಾಲದೊಂದಿಗಿನ ನಮ್ಮ ಗೊಡವೆಯು, ಯಾವುದರ ಕ್ರಿಯಾಶಕ್ತಿಯನ್ನು ನಾವು ಅಪರಿಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೋ, ಆ ಜೀವಶಾಸ್ತ್ರೀಯ ವ್ಯವಸ್ಥೆಗಳ ಕುಸಿತಗಳನ್ನೊಳಗೊಂಡು, ಬಹುವ್ಯಾಪಕ ಪರಿಣಾಮಗಳನ್ನು ಉಂಟುಮಾಡಬಲ್ಲದು,” ಎಂದು ಯುಸಿಎಸ್ ಹೇಳುತ್ತದೆ.
ನೋಬೆಲ್ ಪಾರಿತೋಷಕ ಪಡೆದುಕೊಂಡ 104 ವಿಜ್ಞಾನಿಗಳನ್ನು ಒಳಗೊಂಡು, ಲೋಕವ್ಯಾಪಕವಾಗಿ 1,600ಕ್ಕಿಂತ ಹೆಚ್ಚು ವಿಜ್ಞಾನಿಗಳಿಂದ ಯುಸಿಎಸ್ ಆಸ್ಥೆಗಳು ಸಮರ್ಥಿಸಲ್ಪಟ್ಟಿವೆ. ಯುಸಿಎಸ್ಗನುಸಾರ, “ವ್ಯಾಪಕ ಮಾನವ ದುರವಸ್ಥೆಯು ತಡೆಯಲ್ಪಡಬೇಕಾದಲ್ಲಿ, ಭೂಮಿಯ ಕುರಿತಾದ ನಮ್ಮ ಆಡಳಿತದಲ್ಲಿ ಒಂದು ಬದಲಾವಣೆಯ ಅಗತ್ಯವಿದೆ ಎಂದು ಜಗತ್ತಿನ ವೈಜ್ಞಾನಿಕ ಸಮುದಾಯದ ಈ ಹಿರಿಯ ಸದಸ್ಯರು ಎಲ್ಲ ಮಾನವರನ್ನು ಎಚ್ಚರಿಸುತ್ತಾರೆ.”
ಮನುಷ್ಯನು ನಿಜವಾಗಿಯೂ “ಭೂಮಿಯನ್ನು ನಾಶಮಾಡು”ತ್ತಿದ್ದಾನೆ ಎಂದು ಬೈಬಲ್ ಒಪ್ಪುತ್ತದೆ. (ಪ್ರಕಟನೆ 11:18, NW) ಅದು ಲೋಕದ ಆಡಳಿತದಲ್ಲಿ ಒಂದು ಬದಲಾವಣೆಯು ಅಗತ್ಯವಿದೆ ಎಂಬುದನ್ನು ಕೂಡ ಸಮ್ಮತಿಸುತ್ತದೆ. (ಯೆರೆಮೀಯ 10:23; ದಾನಿಯೇಲ 2:44) ವಾಸ್ತವದಲ್ಲಿ, ಅಂಥ ಒಂದು ಬದಲಾವಣೆಯು, ಮನುಷ್ಯನ ಪರಿಶ್ರಮಗಳ ಮುಖಾಂತರವಲ್ಲ, ಬದಲಿಗೆ ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥಿಸಲು ಕಲಿಸಿದ ಆ ಸ್ವರ್ಗೀಯ ಸರಕಾರವಾದ, ದೇವರ ರಾಜ್ಯದ ಮುಖಾಂತರ ಸಂಭವಿಸುವುದೆಂಬುದಾಗಿ ಬೈಬಲ್ ವಾಗ್ದಾನಿಸುತ್ತದೆ.—ಕೀರ್ತನೆ 145:16; ಯೆಶಾಯ 11:1-9; ಮತ್ತಾಯ 6:9, 10.
[ಪುಟ 42 ರಲ್ಲಿರುವ ಚಿತ್ರ ಕೃಪೆ]
Photo: Godo-Foto