ನಮ್ಮ ವಾಚಕರಿಂದ
ಮನೆ ಬಿಟ್ಟು ಹೋಗುವ ಮಕ್ಕಳು “ಮಕ್ಕಳು ಮನೆ ಬಿಟ್ಟು ಹೋಗುವಾಗ” ಎಂಬ ಲೇಖನಮಾಲೆಯಿಂದ ನಾನು ಸಾಂತ್ವನವನ್ನು ಪಡೆದುಕೊಂಡೆ. (ಫೆಬ್ರವರಿ 8, 1998) ಮೂರು ವರ್ಷಗಳ ಹಿಂದೆ, ನಮ್ಮ ನಾಲ್ವರು ಮಕ್ಕಳಲ್ಲಿ ಮೂವರು ಮನೆ ಬಿಟ್ಟು ಹೋದರು. ಅವರು ಎಂದಾದರೂ ಮನೆ ಬಿಟ್ಟು ಹೋಗುವರೆಂಬ ನಿರೀಕ್ಷೆಯೊಂದಿಗೆ ನಾನು ಅವರನ್ನು ಬೆಳೆಸಿದೆನಾದರೂ, ಒಂದೇ ಸಮಯದಲ್ಲಿ ಮೂವರೂ ಹೋಗುವರೆಂದು ನಾನೆಂದೂ ನೆನಸಿರಲಿಲ್ಲ! ಹೆತ್ತವರ ಅನಿಸಿಕೆಗಳಿಗಾಗಿ ವಾಚ್ಟವರ್ ಸಂಸ್ಥೆಯು ತೋರಿಸುವ ಚಿಂತೆಯನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ.
ಎಮ್. ಎಸ್., ಜಪಾನ್
ಈಗ ನನ್ನ ಹೆಂಡತಿ ಮತ್ತು ನಾನು, ನಮ್ಮ ಸ್ವದೇಶದ ಹೊರಗೆ ವಿಶೇಷ ಪಯನೀಯರರಾಗಿ, ಇಲ್ಲವೆ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಸಲ್ಲಿಸುತ್ತಾ ಇದ್ದೇವೆ. ನಾವು ದೂರವಿದ್ದರೂ, ನಮ್ಮ ಹೆತ್ತವರು ನಮ್ಮಿಂದ ಪ್ರೀತಿಸಲ್ಪಡುತ್ತಾರೆ ಮತ್ತು ನಮಗೆ ಪ್ರಿಯರಾಗಿದ್ದಾರೆ ಎಂಬುದನ್ನು ಅವರಿಗೆ ಹೇಗೆ ತೋರಿಸಿಕೊಡಬೇಕು ಎಂಬುದರ ಕುರಿತಾದ ನಿಮ್ಮ ಸಲಹೆಯು ನಿಜವಾಗಿಯೂ ಪ್ರಾಯೋಗಿಕವಾಗಿದೆ.
ಎಮ್. ಎಮ್. ಎಸ್., ಬ್ರೆಸಿಲ್
ನನಗೆ 11 ವರ್ಷ ಪ್ರಾಯ. ಮನೆಯ ಕೆಲಸಗಳನ್ನು ನಾನು, ವಯಸ್ಕ ಜೀವಿತಕ್ಕೆ ತರಬೇತಿಯೋಪಾದಿ ವೀಕ್ಷಿಸಲಿಲ್ಲ. ಆದರೆ ಈ ಲೇಖನಗಳು ಭಿನ್ನವಾಗಿ ಯೋಚಿಸುವಂತೆ ನನಗೆ ಸಹಾಯ ಮಾಡಿವೆ. ಯುವ ಜನರಾದ ನಮ್ಮ ಕುರಿತು ಕಾಳಜಿ ವಹಿಸುವುದಕ್ಕಾಗಿ ನಿಮಗೆ ಉಪಕಾರಗಳು.
ಡಿ. ಯು. ಯುಗೋಸ್ಲಾವಿಯ
ಹೆತ್ತವರ ವಿರೋಧ ನಾನು ಈಗ ತಾನೇ ಫೆಬ್ರವರಿ 8, 1998ರ ಸಂಚಿಕೆಯನ್ನು ಪಡೆದು, “ಯುವ ಜನರು ಪ್ರಶ್ನಿಸುವುದು . . . ನನ್ನ ಹೆತ್ತವರು ನನ್ನ ವಿವಾಹವನ್ನು ವಿರೋಧಿಸುವುದಾದರೆ ಆಗೇನು?” ಎಂಬ ಲೇಖನವನ್ನು ಓದಿದೆ. ನನ್ನ ಮಗಳ ವಿವಾಹವನ್ನು ವಿರೋಧಿಸುವುದು ತಪ್ಪೆಂದು ನಾನು ನೆನೆಸಿದೆ. ಆದರೆ ನಾನು ಚಿಂತಿಸಿದ ಸಕಲ ವಿಷಯವೂ ಆ ಲೇಖನದಲ್ಲಿತ್ತು. ಅವಳ ಎಳೆಯ ಪ್ರಾಯ, ಭಾವೀ ಸಂಗಾತಿಯ ವ್ಯಕ್ತಿತ್ವ, ಅವಿಶ್ವಾಸಿಯೊಂದಿಗೆ ಅವಳು ಇಜ್ಜೋಡಾಗುವ ಪ್ರತೀಕ್ಷೆ, ಏಡ್ಸ್ನ ಸಾಧ್ಯತೆ ಮತ್ತು ಸಂಸ್ಕೃತಿ
ಯಲ್ಲಿನ ಭಿನ್ನತೆಗಳ ಕುರಿತು ನಾನು ಚಿಂತಿಸುವಂತೆ ಮಾಡಿದವು. ಈ ಲೇಖನವು ನನ್ನ ಮಗಳ ಹೃದಯವನ್ನು ಸ್ಪರ್ಶಿಸಲೆಂದು ನಾನು ಪ್ರಾರ್ಥಿಸುತ್ತೇನೆ.
ಎನ್. ಬಿ., ಅಮೆರಿಕ
ಎಂತಹ ಸುಲಿಖಿತ ಲೇಖನ! ಬಹಳ ಸೂಕ್ಷ್ಮವಾದ ವಿಷಯವನ್ನು ಪ್ರಸ್ತಾಪಿಸಿ, ಅದನು ತುಂಬ ಚೆನ್ನಾಗಿ ನಿರೂಪಿಸಿದಿರಿ. ಅನೇಕ ವಿಭಿನ್ನ ವಾದಾಂಶಗಳನ್ನು ಉಲ್ಲೇಖಿಸಿ, ಈ ವಿಷಯಗಳ ಕುರಿತು ಓದುಗನು ಸಹಾನುಭೂತಿಯುಳ್ಳವನಾಗಿರುವಂತೆ ಸಹಾಯಮಾಡಿದಿರಿ.
ಎಸ್. ಕೆ., ಅಮೆರಿಕ
ನಾನು ಎಂಟು ವರ್ಷಗಳಿಂದ ಪೂರ್ಣ ಸಮಯದ ಸೌವಾರ್ತಿಕನಾಗಿದ್ದೇನೆ. ನನ್ನ ಹೆತ್ತವರು ಸಹ ಕ್ರೈಸ್ತರಾಗಿದ್ದಾರೆ. ಮತ್ತು ವಿವಾಹವಾಗುವ ವಿಷಯದಲ್ಲಿ, ಅವರ ಮತ್ತು ನನ್ನ ಅಭಿಪ್ರಾಯ ಭಿನ್ನವಾಗಿತ್ತು. ಈ ಸಹಾಯಕಾರಿ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ನಿಮಗೆ ತುಂಬ ಉಪಕಾರಗಳು.
ಟಿ. ಸಿ. ಎಫ್., ಟ್ಯಾನ್ಸಾನಿಯ
ಕ್ರೈಸ್ತ ವೈವಿಧ್ಯ “ಬೈಬಲಿನ ದೃಷ್ಟಿಕೋನ: ಕ್ರೈಸ್ತ ಏಕತೆಯು ವೈವಿಧ್ಯಕ್ಕೆ ಪರವಾನಗಿ ನೀಡುತ್ತದೊ?” ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರಗಳು. (ಫೆಬ್ರವರಿ 8, 1998) ಯೆಹೋವನನ್ನು ನಾನು ಹೆಚ್ಚು ತಿಳಿದಷ್ಟು, ಆತನ ಸಂಸ್ಥೆಯ ಭಾಗವಾಗಿರಲು ನಾನು ಹೆಚ್ಚು ಸಂತೋಷಿಸುತ್ತೇನೆ. ಇಲ್ಲಿ ನಾವು ವ್ಯಕ್ತಿತ್ವಗಳ ವೈವಿಧ್ಯತೆಯಲ್ಲಿ ಆನಂದಿಸಸಾಧ್ಯವಿದೆ.
ಐ. ಪಿ., ಸ್ಲೋವೆನಿಯ
ನನಗೆ 15 ವರ್ಷ ಪ್ರಾಯ. ನಾನು ಎಚ್ಟರ! ಪತ್ರಿಕೆಯನ್ನು ಕ್ರಮವಾಗಿ ಓದುತ್ತೇನೆ. ವಿಶೇಷವಾಗಿ ನಾನು ಈ ಲೇಖನವನ್ನು ಗಣ್ಯಮಾಡಿದೆ. ಅದರಲ್ಲಿನ ಒಂದು ಭಾಗವು, ಪ್ರಮೋದವನ ಹಾಗೂ ಅದು ಹೇಗಿರುವುದು ಎಂಬುದರ ಕುರಿತು ಚರ್ಚಿಸಿತು. ಪರಿಪೂರ್ಣ ಮಾನವರು ಹೇಗಿರುವರೆಂದು ಮತ್ತು ನಾವೆಲ್ಲರೂ ತೋರಿಕೆ ಹಾಗೂ ಆಲೋಚನೆಗಳಲ್ಲಿ ಸಮಾನರಾಗಿ ಇರುವೆವೊ ಎಂದು ನಾನು ಯೋಚಿಸುತ್ತಿದ್ದೆ. ಮಾನವರಲ್ಲಿ ಹಾಗೂ ಪ್ರಾಣಿಗಳಲ್ಲಿ ಬಹಳಷ್ಟು ವೈವಿಧ್ಯತೆ ಇರುವುದೆಂದು ಈಗ ನನಗೆ ಅರ್ಥವಾಗುತ್ತದೆ.
ಜೆ. ಕೆ., ಅಮೆರಿಕ