ದುರ್ಘಟನೆಗಳು ಅದೃಷವ್ಟೋ ಅಥವಾ ಪ್ರಾಸಂಗಿಕವೋ?
ಆ ಕರ್ಷಕ ಫ್ಯಾಷನ್ ಮಾಡೆಲ್ ನವಯುವತಿ ಕ್ರಿಸ್ಟೀನ, ಬ್ರಾಜಿಲ್ನ ಸಾವೊ ಪೌಲೊದ ಕಾರ್ಯಮಗ್ನ ನವಾ ಡಿ ಝಯೋ ಬೀದಿಯನ್ನು ದಾಟುತ್ತಿದ್ದಾಗ ಮುಂದಿನಿಂದ ಸಮೀಪಿಸುತ್ತಿದ್ದ ಬಸ್ಸನ್ನು ಕಂಡಿರಲಿಲ್ಲ. ಡ್ರೈವರನು ತನ್ನ ವಾಹನವನ್ನು ನಿಲ್ಲಿಸಲು ದುರ್ಘಟವಾಗಿ ಪ್ರಯತ್ನಿಸಿದನು, ಆದರೆ ವೇಳೆ ಮೀರಿಹೋಗಿತ್ತು. ಕ್ರಿಸ್ಟೀನಳು ವಾಹನದಡಿಗೆ ಬಿದ್ದು ಸತ್ತುಹೋದಳು.
ಈ ಘಾತಕ ದುರಂತವು ಬ್ರೆಜಿಲಿಯನ್ ವಾರ್ತಾಪತ್ರಿಕೆ ಯು ಎಸ್ಟಾಡೋ ಡೆ ಸಾ. ಪೌಲೋದ ಮುಖ ಪುಟದಲ್ಲಿ ವರದಿಯಾಗಿತ್ತು. (ಜುಲೈ 29, 1990) ಆದರೂ ಬ್ರಾಜಿಲ್ನಲ್ಲಿ ಪ್ರತಿವರುಷ ನಡಿಯುವ 50,000 ವಾಹನ ಅಪಘಾತಗಳಲ್ಲಿ ಅದು ಕೇವಲ ಒಂದು. ಮತ್ತು ಅಂಥ ದುರಂತಗಳಲ್ಲಿ ಇನ್ನು ಸಾವಿರಾರು ಮಂದಿ ಅಂಗವಿಹೀನರಾಗುವಾ, ಇತರರಾದರೋ ಯಾವ ಜಖಂ ಇಲ್ಲದೇ ಪಾರಾಗುತ್ತಾರೆ. ಹಾಗಾದ, ಈ ಯುವತಿಯೇಕೆ ಪಾರಾಗಲಿಲ್ಲ? ಅವಳು ಆ ದಿನ ಸಾಯುವುದು ದೈವವಿಧಿಯಾಗಿತ್ತೋ?
ವಿಷಯವು ಹಾಗೆಂದು ಅಸಂಖ್ಯಾತ ಜನರು ವಾದಿಸುತ್ತಾರೆ. ಅವರು ಅದೃಷ್ಟದಲ್ಲಿ ನಂಬಿಕೆ ಇಡುತ್ತಾರೆ, ಒಬ್ಬನ ಮರಣದ ವೇಳೆಯೇ ಮುಂತಾದ ಪ್ರಾಮುಖ್ಯ ಘಟನೆಗಳು ಪೂರ್ವನಿರ್ಧಾರಿತ ಅನ್ನುತ್ತಾರೆ. ಈ ನಂಬಿಕೆಯು, “ಅದೃಷ್ಟದ ವಿರುದ್ಧ ಯಾರಿಗೂ ಹೋರಾಡ ಸಾಧ್ಯವಿಲ್ಲ,” “ಅವನ ಸಮಯ ಬಂತು, ಅವನು ಸತ್ತನು,” ಅಥವಾ “ಆಗಲಿಕ್ಕಿರುವುದೇ ಆಗುವದು” ಮುಂತಾದ ಹೇಳಿಕೆಗಳಿಗೆ ಜನ್ಮಕೊಟ್ಟಿದೆ. ಇಂಥ ಜನಪ್ರಿಯ ನುಡಿಗಳಲ್ಲಿ ಏನಾದರೂ ಸತ್ಯವಿದೆಯೇ? ನಾವು ಕೇವಲ ಅದೃಷ್ಟದ ಆಟದ ಕೆಳಗೆ ಒತ್ತೆಯಾಗಿಡಲ್ಪಟ್ಟ ದಾಸರೋ?
ಅದೃಷ್ಟವಾದವು ಅಥವಾ ಎಲ್ಲಾ ಘಟನೆಗಳು ಮುಂದಾಗಿ ಗೊತ್ತುಮಾಡಲ್ಪಟ್ಟಿವೆ ಎಂಬ ಕಲ್ಪನೆಯು ಪುರಾತನ ಗ್ರೀಕರ ಮತ್ತು ರೋಮನರ ನಡುವೆ ಅಸ್ತಿತ್ವದಲ್ಲಿತ್ತು. ಇಂದು ಸಹಾ ಅನೇಕ ಧರ್ಮಗಳಲ್ಲಿ ಈ ನಂಬಿಕೆಯು ಬಲವಾಗಿ ನೆಲೆಸಿರುತ್ತದೆ. ದೃಷ್ಟಾಂತಕ್ಕಾಗಿ ಇಸ್ಲಾಂ, ಕುರಾನ್ನ ಈ ಮಾತುಗಳನ್ನು ಆಧಾರವಾಗಿ ಕೊಡುತ್ತದೆ: “ಅಲ್ಲಾನ ಅಪ್ಪಣೆಯ ಹೊರತು ಮತ್ತು ಅವನು ಗೊತ್ತುಮಾಡಿದ ಸಮಯದ ಹೊರತು ಯಾರೊಬ್ಬನೂ ಎಂದೂ ಸಾಯಲಾರನು.” ಕ್ರೈಸ್ತ ಪ್ರಪಂಚದಲ್ಲೂ ಅದೃಷ್ಟದಲ್ಲಿ ನಂಬಿಕೆಯು ಸರ್ವಸಾಮಾನ್ಯವಾಗಿದೆ ಮತ್ತು ಜೋನ್ ಕ್ಯಾಲ್ವಿನ್ರಿಂದ ಕಲಿಸಲ್ಪಟ್ಟ ಆದಿ ನಿರ್ಧಾರದ ಬೋಧನೆಯಿಂದ ಪೋಷಿಸಲ್ಪಟ್ಟಿದೆ. ಆದುದರಿಂದ ಪಾದ್ರಿಗಳು ಒಂದು ನಿರ್ದಿಷ್ಟ ಆಕಸ್ಮಿಕ ಘಟನೆಯನ್ನು, “ಅದು ದೈವ ಸಂಕಲ್ಪ” ಎಂದು ಹೇಳಿ ದುಃಖಿತ ಸಂಬಂಧಿಕರನ್ನು ಸಂತೈಸುವುದು ಸಾಮಾನ್ಯ ಸಂಗತಿಯಾಗಿದೆ.
ದುರ್ಘಟನೆಗಳು ಅದೃಷ್ಟದ ಉತ್ಪಾದನೆ ಎಂಬ ವೀಕ್ಷಣೆಯಾದರೋ ವ್ಯವಹಾರಜ್ಞಾನ, ಪ್ರತ್ಯಕ್ಷ ಅನುಭವ ಮತ್ತು ತರ್ಕಬದ್ಧತೆಗೆ ವಿರುದ್ಧವಾಗಿ ಹೋಗುತ್ತದೆ. ಉದಾಹರಣೆಗೆ ವಾಹನಾವಘಾತಗಳು, ದೈವಿಕ ಹಸ್ತಕ್ಷೇಪದ ಫಲಿತಾಂಶಗಳೆಂದು ಹೇಳುವುದು ಕಷ್ಟ ಯಾಕಂದರೆ ಸಾಮಾನ್ಯವಾಗಿ ಒಂದು ಕೂಲಂಕುಶ ತನಿಖೆಯು ಅದಕ್ಕೆ ಒಂದು ಪೂರ್ಣ ತರ್ಕಬದ್ಧ ಕಾರಣವನ್ನು ತೋರಿಸಿಕೊಡುತ್ತದೆ. ಅದಲ್ಲದೆ, ಸೀಟ್ ಬೆಲ್ಟ್ನ್ನು ಧರಿಸುವುದೇ ಮುಂತಾದ—ಸಮಂಜಸ ಮುಂಜಾಗ್ರತೆಗಳನ್ನು ತಕ್ಕೊಂಡಲ್ಲಿ ಮಾರಕ ದುರಂತಗಳ ಸಂಭಾವ್ಯತೆಗಳನ್ನು ಬಹಳಷ್ಟು ಕಡಿಮೆ ಮಾಡಬಹುದೆಂದು ನಮಗೆ ಸಂಖ್ಯಾಸಂಗ್ರಹಣಗಳು ಸ್ಪಷ್ಟವಾಗಿಗಿ ತೋರಿಸುತ್ತವೆ. ಯಾವುದೇ ಸುರಕ್ಷಾ ಮುಂಜಾಗ್ರತೆಗಳು ಪೂರ್ವ ನಿಯೋಜಿತ ದೈವ ಸಂಕಲ್ಪವನ್ನು ನಿಜವಾಗಿ ನಿಷ್ಫಲಗೊಳಿಸ ಶಕವ್ತೋ?
ಆದರೂ, ಅದೃಷ್ಟದಲ್ಲಿ ನಂಬಿಕೆಯು ನಂಬುವವನ ಮೇಲೆ ಪ್ರತಿಕೂಲ ಪ್ರಭಾವವನ್ನು ಹಾಕುತ್ತದೆ. ವೇಗದ ಮಿತಿ ಮತ್ತು ಸಂಚಾರ ಸಂಜ್ಞೆಗಳನ್ನು ದುರ್ಲಕ್ಷಿಸುವುದು ಅಥವಾ ಸರಾಯಿ ಯಾ ಮಾದಕ ದ್ರವ್ಯದ ಮತ್ತಿನ ಕೆಳಗೆ ವಾಹನ ನಡಿಸುವುದೇ ಮುಂತಾದ ಹುಚ್ಚುಸಾಹಸಗಳನ್ನು ಅದು ಪ್ರೋತ್ಸಾಹಿಸುವುದಿಲ್ಲವೇ? ದುರಂತಗಳು ತಮಗೆ ತಟ್ಟಿದಾಗ ದೇವರನ್ನು ದೂರುವಂತೆ ಅದೃಷ್ಟವಾದವು ಕೆಲವರನ್ನು ಪ್ರೇರೇಪಿಸುವದಂತೂ ಇನ್ನಷ್ಟು ಗಂಭೀರ ವಿಷಯ. ಕೋಪ ಮತ್ತು ನಿಸ್ಸಹಾಯಕತೆಯಿಂದ ಕೂಡಿ ಮತ್ತು ದೇವರ ಲಕ್ಷಿಸುವುದಿಲ್ಲವೆಂಬ ಖಾತ್ರಿಯಿಂದ ಅವರು, ನಂಬಿಕೆಯನ್ನು ಕೂಡಾ ಕಳಕೊಳ್ಳಬಹುದು. ಕವಿ ಎಮರ್ಸ್ನ್ ಯುಕ್ತವಾಗಿಯೇ ನುಡಿದದ್ದು: “ಜೀವಿತದ ಅತ್ಯಂತ ಕಹಿಯಾದ ದುರಂತದ ಅಂಶವು ಬರಿಯ ದೈವವಿಧಿ ಅಥವಾ ಅದೃಷ್ಟದಲ್ಲಿ ನಂಬಿಕೆಯೇ.”
ಆದರೆ ದುರ್ಘಟನೆ ಮತ್ತು ಅಪಘಾತಗಳ ಕುರಿತು ಬೈಬಲ್ ಏನನ್ನುತ್ತದೆ? ಇವೆಲ್ಲಾ ಅದೃಷ್ಟದ ಕೆಲಸಗಳು ಎಂದು ಅದು ನಿಜವಾಗಿ ಕಲಿಸುತ್ತದೋ? ಅಷ್ಟಲ್ಲದೆ, ರಕ್ಷಣೆಗಾಗಿ ನಮಗಿರುವ ಪ್ರತೀಕ್ಷೆಗಳ ಕುರಿತು ಅದೇನನ್ನುತ್ತದೆ? ಆ ವಿಷಯದಲ್ಲಿ ನಮಗೇನಾದರೂ ಆಯ್ಕೆಯು ಇರುತ್ತದೋ? (w91 10/15)
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಜೀವನದಲ್ಲಿ ಅತ್ಯಂತ ಕಹಿಯಾದ ದುರಂತದ ಅಂಶವು ಬರಿಯ ದೈವವಿಧಿ ಅಥವಾ ಅದೃಷ್ಟದಲ್ಲಿ ನಂಬಿಕೆಯೇ.” ರಾಲ್ಫ್ ವಾಲ್ಡೋ ಎಮರ್ಸನ್