ಹೊತ್ತಿಗೆ ಮುಂಚೆ ಏಳುವಾತನು
ಭೂಮಧ್ಯ ಸಮುದ್ರ ಕ್ಷೇತ್ರದ ಫಲ ವೃಕ್ಷಗಳಲ್ಲಿ ಬಾದಾಮಿಯ ಮರವು ಅತ್ಯಂತ ಹೆಚ್ಚು ಗಮನಾರ್ಹವಾದದ್ದು. ಜನವರಿ ಅಥವಾ ಫೆಬ್ರವರಿಯ ಕೊನೆಯಲ್ಲಿ—ಬೇರೆ ಹೆಚ್ಚಿನ ಮರಗಳಿಗಿಂತ ಬಹಳ ಮುಂಚೆಯೇ—ಅದು ತನ್ನ ಚಳಿಗಾಲದ ಜಡತೆಯಿಂದ ಎಚ್ಚರಗೊಳ್ಳುತ್ತದೆ! ಮತ್ತು ಎಂತಹ ಎಚ್ಚರಿಸುವಿಕೆಯದು! ಇಡೀ ವೃಕ್ಷವು ಮೆಲುಪಾದ ಗುಲಾಬಿ ಯಾ ಬಿಳಿಯ ಹೂವುಗಳ, ಎರಡನೆಯದ್ದು ಸ್ವಲ್ಪಮಟ್ಟಿಗೆ ವಯೋವೃದ್ಧರ ಬಿಳೀಗೂದಲನ್ನು ಹೋಲುವ, ಹೊದಿಕೆಯಿಂದ ಆವರಿಸಲ್ಪಡುತ್ತದೆ.—ಹೋಲಿಸಿರಿ ಪ್ರಸಂಗಿ 12:5.
ಪ್ರಾಚೀನ ಇಬ್ರಿಯರು ಬಾದಾಮಿಯ ಮರವನ್ನು, ಅದರ ಹೊತ್ತಿಗೆ ಮುಂಚಿನ ಹೂಬಿಡುವಿಕೆಗೆ ಸೂಚಿಸುತ್ತಾ ಅದನ್ನು “ಎಚ್ಚರಿಸುವಾತನು” ಎಂದು ಕರೆದಿರುತ್ತಾರೆ. ಈ ಗುಣಲಕ್ಷಣವು ಒಂದು ಪ್ರಾಮುಖ್ಯ ಸಂದೇಶವನ್ನು ಉದಾಹರಿಸುವುದಕ್ಕಾಗಿ ಯೆಹೋವನಿಂದ ಉಪಯೋಗಿಸಲ್ಪಟ್ಟಿತ್ತು. ಯೆರೆಮೀಯನ ಶುಶ್ರೂಷೆಯ ಆರಂಭದಲ್ಲಿ, ದರ್ಶನದಲ್ಲಿ ಅವನಿಗೆ ಬಾದಾಮಿಯ ಒಂದು ರೆಂಬೆಯನ್ನು ತೋರಿಸಲಾಯಿತು. ಅದರ ಅರ್ಥವೇನಾಗಿತ್ತು? ಯೆಹೋವನು ವಿವರಿಸಿದನು: “ನನ್ನ ಮಾತನ್ನು ನೆರವೇರಿಸುವದಕ್ಕೆ ಎಚ್ಚರಗೊಂಡಿದ್ದೇನೆ ಎಂದು ತಿಳಿದುಕೋ.”—ಯೆರೆಮೀಯ 1:12.
ಬಾದಾಮಿಯ ಮರವು ಹೊತ್ತಿಗೆ ಮುಂಚೆ ಹೇಗೆ ‘ಏಳುತ್ತದೋ’ ಹಾಗೆ, ಯೆಹೋವನು ತನ್ನ ಜನರಿಗೆ ಅವಿಧೇಯತೆಯ ಫಲಿತಾಂಶಗಳ ಕುರಿತು ಎಚ್ಚರಿಸುವುದಕ್ಕೆ ತನ್ನ ಪ್ರವಾದಿಗಳನ್ನು ಕಳುಹಿಸುವರೆ ‘ಹೊತ್ತಿಗೆ ಮುಂಚೆ ಏಳುತ್ತಿದ್ದನು.’ (ಯೆರೆಮೀಯ 7:25) ಮತ್ತು ತನ್ನ ಪ್ರವಾದನಾ ಮಾತುಗಳು ಪೂರೈಸಲ್ಪಡುವ ತನಕ—ಅವನು ವಿಶ್ರಮಿಸನು—‘ಎಚ್ಚರಗೊಂಡೇ’ ಇರುವನು. ಹೀಗೆ ಸಾ.ಶ.ಪೂ. 607 ರಲ್ಲಿ, ನೇಮಿತ ಸಮಯದಲ್ಲಿ, ಯೆಹೋವನ ತೀರ್ಪು ಧರ್ಮಭ್ರಷ್ಟ ಯೆಹೂದ ಜನಾಂಗದ ಮೇಲೆ ಬಂತು.
ನಾವು ಜೀವಿಸುವ ದುಷ್ಟ ವ್ಯವಸ್ಥೆಯ ವಿರುದ್ಧವಾಗಿ ತದ್ರೀತಿಯ ತೀರ್ಪು ಬರಲಿದೆಯೆಂದು ದೇವರ ವಾಕ್ಯವು ಮುಂತಿಳಿಸುತ್ತದೆ. (ಕೀರ್ತನೆ 37:9, 10; 2 ಪೇತ್ರ 3:10-13) ಅಂಥ ನ್ಯಾಯ ತೀರ್ಪಿನ ಕ್ರಿಯೆಗೆ ಸೂಚಿಸುತ್ತಾ, ಪ್ರವಾದಿ ಹಬಕ್ಕೂಕನು ನಮಗೆ ಆಶ್ವಾಸನೆ ಕೊಡುವುದು: “ಅದು [ದರ್ಶನವು] ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, . . . ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ಯೆಹೋವನು ತನ್ನ ಮಾತುಗಳನ್ನು ಪೂರೈಸುವುದಕ್ಕಾಗಿ ಅವುಗಳ ವಿಷಯವಾಗಿ ಎಚ್ಚರದಿಂದಿರುವನೆಂದು ಸುಂದರವಾದ ಬಾದಾಮಿ ಹೂವು ನಮಗೆ ಜ್ಞಾಪಕವನ್ನು ಕೊಡುತ್ತದೆ. (w93 2/15)
[ಪುಟ 32 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.