ನೀವು ನಿಮ್ಮ ಪ್ರಾರ್ಥನೆಗಳನ್ನು ಹೇಗೆ ಪುಷ್ಟೀಕರಿಸಬಲ್ಲಿರಿ?
ಯೆಹೋವ ದೇವರ ಪ್ರೀತಿಯ ಒದಗಿಸುವಿಕೆಗಳಲ್ಲಿ ಪ್ರಾರ್ಥನೆಯು ಅಪೂರ್ವವಾದದ್ದಾಗಿದೆ. ವಿರೋಧಿಗಳು ನಿಮ್ಮ ಬೈಬಲನ್ನು ವಶಪಡಿಸಿಕೊಳ್ಳಬಹುದು ಅಥವಾ ಸಹ ಆರಾಧಕರೊಂದಿಗೆ ಒಟ್ಟುಗೂಡುವುದರಿಂದ ನಿಮ್ಮನ್ನು ತಡೆಯಬಹುದು, ಆದರೆ ಯಾರೂ ನಿಮ್ಮಿಂದ ಪ್ರಾರ್ಥನೆಯನ್ನು ಕಸಿದುಕೊಳ್ಳಲಾರರು. ಪ್ರಾರ್ಥನೆಯ ಮೌಲ್ಯವನ್ನು ಒತ್ತಿಹೇಳುವುದು ಅಸಾಧ್ಯ. ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರು ಈ ಸುಯೋಗವನ್ನು ಆದರಿಸಿ, ಅದರ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳುವುದು ಎಷ್ಟೊಂದು ಪ್ರಾಮುಖ್ಯ. ನಿಮ್ಮ ಪ್ರಾರ್ಥನೆಗಳನ್ನು ಪುಷ್ಟೀಕರಿಸಲು ನಿಮಗೆ ಏನು ಸಹಾಯ ಮಾಡಬಲ್ಲದು?
ಬೈಬಲು ಒಂದು ಪ್ರಾರ್ಥನಾ ಪುಸ್ತಕವಾಗಿರುವುದಿಲ್ಲ. ಆದರೂ ಅದನ್ನು, ಪ್ರಾರ್ಥನೆಯ ಕುರಿತು ಮಾನವಕುಲದ ಅತ್ಯಂತ ಮಹತ್ತಾದ ಪಠ್ಯಪುಸ್ತಕವೆಂದು ವರ್ಣಿಸಸಾಧ್ಯವಿದೆ. ಹೀಬ್ರು ಶಾಸ್ತ್ರವಚನಗಳೇ ಸುಮಾರು 150 ಕ್ಕಿಂತ ಹೆಚ್ಚು ಪ್ರಾರ್ಥನೆಗಳನ್ನು ಹೊಂದಿರುತ್ತವೆ. ಕೆಲವು ಚಿಕ್ಕವು; ಮಿಕ್ಕವು ಉದ್ದವಾಗಿವೆ. ಅವು ರಾಜರಿಂದ ಅಥವಾ ಬಂದಿವಾಸಿಗಳಿಂದ, ವಿಜಯೋತ್ಸಾಹದಲ್ಲಿ ಅಥವಾ ಸಂಕಟದಲ್ಲಿ, ಬಹಿರಂಗವಾಗಿ ಅಥವಾ ಖಾಸಗಿಯಾಗಿ ನುಡಿಯಲ್ಪಟ್ಟಿದ್ದವು. ಕೀರ್ತನೆ 65:2 ರಲ್ಲಿ ದಾವೀದನು ಹಾಡಿದಂತೆ, “ಪ್ರಾರ್ಥನೆಯನ್ನು ಕೇಳುವವ” ನಾದ ಯೆಹೋವನ ಬಳಿಗೆ “ನರರೆಲ್ಲರು” ಬರುತ್ತಾರೆ. ಪ್ರಾರ್ಥನೆಗಳ ಕುರಿತು ಇಷ್ಟೊಂದು ವಿಸ್ತಾರವಾದ ಸಂಗ್ರಹವನ್ನು ದಾಖಲಿಸುವಂತೆ ದೇವರು ಬೈಬಲಿನ ಬರಹಗಾರರನ್ನು ಯಾಕೆ ಪ್ರೇರೇಪಿಸಿದನು?
ಆ ಪ್ರಶ್ನೆಯನ್ನು ಉತ್ತರಿಸಲು 2 ತಿಮೊಥೆಯ 3:16 (NW)ನ್ನು ಪರಿಗಣಿಸಿರಿ. ಅದು ಹೇಳುವುದು: “ಎಲ್ಲ ಶಾಸ್ತ್ರವಚನವು ದೇವರಿಂದ ಪ್ರೇರಿತವೂ ಲಾಭದಾಯಕವೂ ಆಗಿದೆ.” ಹೀಗೆ, ಶಾಸ್ತ್ರೀಯ ಪ್ರವಾದನೆ, ಸೂತ್ರಗಳು ಮತ್ತು ಇತಿಹಾಸದಂತೆ, ಬೈಬಲಿನಲ್ಲಿರುವ ಪ್ರಾರ್ಥನೆಗಳು ನಮ್ಮನ್ನು ಮಾರ್ಗದರ್ಶಿಸಲಿಕ್ಕಾಗಿ ಇವೆ. ಈ ಪ್ರಾರ್ಥನೆಗಳು ನಮಗೆ ಹೇಗೆ ಲಾಭದಾಯಕವಾಗಿರಬಲ್ಲವು?
ಶಾಸ್ತ್ರೀಯ ಪ್ರಾರ್ಥನೆಗಳನ್ನು ನಿಕಟವಾಗಿ ಪರೀಕ್ಷಿಸುವದರಿಂದ, ನಮ್ಮ ಸ್ವಂತ ಸನ್ನಿವೇಶಗಳಿಗೆ ಹೋಲುವಂತಹ ಸನ್ನಿವೇಶಗಳಲ್ಲಿ ಹೇಳಲ್ಪಟ್ಟ ಪ್ರಾರ್ಥನೆಗಳನ್ನು ನಾವು ಗುರುತಿಸಬಹುದು. ಪ್ರಾರ್ಥನೆಗಳು ಉದ್ದೇಶ ಮತ್ತು ಪರಿಸ್ಥಿತಿಗನುಸಾರ ಹೇಗೆ ವ್ಯತ್ಯಾಸ ಹೊಂದುತ್ತವೆಂದು ನಾವು ಕಲಿಯುವೆವು. ಇನ್ನೂ ಹೆಚ್ಚಾಗಿ, ನಾವು ಸ್ತುತಿ ಮತ್ತು ಉಪಕಾರದ ಹೊಸ ವಾಕ್ಸರಣಿಗಳನ್ನು ಕಂಡುಹಿಡಿಯಬಲ್ಲೆವು ಮತ್ತು ನಮ್ಮ ಬಿನ್ನಹ ಮತ್ತು ಯಾಚನೆಗಳಿಗೆ ಹೊಸತಾದ ಶಬ್ದಗಳನ್ನು ಕಂಡುಕೊಳ್ಳುವೆವು. ಸಂಕ್ಷಿಪ್ತದಲ್ಲಿ, ಬೈಬಲಿನಲ್ಲಿರುವ ಪ್ರಾರ್ಥನೆಗಳು ನಾವು ನಮ್ಮ ಸ್ವಂತ ಪ್ರಾರ್ಥನೆಗಳನ್ನು ಪುಷ್ಟೀಕರಿಸುವಂತೆ ಸಹಾಯ ಮಾಡಬಲ್ಲವು.
ಯಾರು ಯೇಸುವಿನ ತಾಯಿಯಾದಳೋ, ಆ ಮರಿಯಳು, ಬೈಬಲಿನಲ್ಲಿ ದಾಖಲಿಸಲ್ಪಟ್ಟಿದ್ದ ಒಂದು ಪ್ರಾರ್ಥನೆಯಲ್ಲಿ ಉಪಯೋಗಿಸಲ್ಪಟ್ಟಂತಹ ವಾಕ್ಸರಣಿಗಳಿಂದ ಪ್ರಯೋಜನ ಪಡೆದಂತಹ ಒಬ್ಬ ವ್ಯಕ್ತಿಯಾಗಿದ್ದಳೆಂದು ತೋರುತ್ತದೆ. ಆಕೆ ತನ್ನ ಸಂಬಂಧಿಯಾಗಿದ್ದ ಎಲಿಸಬೇತಳನ್ನು, ಅವರಿಬ್ಬರು ದೈವಿಕ ನೆರವಿನಿಂದ ಒಬ್ಬ ಮಗನನ್ನು ಗರ್ಭ ತಾಳಿದ ನಂತರ, ಭೇಟಿ ಮಾಡಿದಳು. ಮರಿಯಳು ದೇವರಿಗೆ ಸ್ತುತಿಉಪಕಾರಗಳನ್ನು ಸಲ್ಲಿಸಿದಳು, ಮತ್ತು ಅವಳ ಕೆಲವು ಶಬ್ದಗಳು ಹೀಬ್ರು ಶಾಸ್ತ್ರವಚನಗಳಲ್ಲಿ ಒಂದು ಪ್ರಾರ್ಥನೆಯಲ್ಲಿ ಒಳಗೂಡಿದ್ದಂತಹವುಗಳಿಗೆ ಗಮನಾರ್ಹವಾಗಿ ಹೋಲುತ್ತವೆ. ಪ್ರವಾದಿಯಾದ ಸಮುವೇಲನ ತಾಯಿಯಾದ ಹನ್ನಳಿಂದ ನುಡಿಯಲ್ಪಟ್ಟ ಪ್ರಾರ್ಥನೆಯೊಂದಿಗೆ ಅವಳು ಪರಿಚಿತಳಾಗಿದ್ದದ್ದು ಸಂಭವನೀಯವೆಂದು ತೋರುತ್ತದೆ. 1,000 ಕ್ಕಿಂತಲೂ ಹೆಚ್ಚು ವರ್ಷಗಳ ಮುಂಚೆ, ಹನ್ನಳು ಸಹ ದೇವರ ಸಹಾಯದಿಂದ ಒಬ್ಬ ಮಗನನ್ನು ಗರ್ಭ ತಾಳಿದಳ್ದು. ಅದು ತನ್ನ ಸ್ವಂತ ಭಾವನೆಗಳನ್ನು ಪ್ರತಿಬಿಂಬಿಸಿತೆಂಬ ಕಾರಣದಿಂದ ಮರಿಯಳು ಈ ಪ್ರಾರ್ಥನೆಯ ಮೇಲೆ ಮನನ ಮಾಡಿದಿರ್ದಬಹುದೋ?—1 ಸಮುವೇಲ 2:1-10; ಲೂಕ 1:46-55.
ನಿಮ್ಮ ಕುರಿತಾಗಿ ಏನು? ನಿಮ್ಮ ಸ್ವಂತ ಪರಿಸ್ಥಿತಿಗಳಿಗೆ ತದ್ರೀತಿಯದ್ದಾಗಿರುವ ಪರಿಸ್ಥಿತಿಗಳ ಕೆಳಗೆ ನುಡಿಯಲ್ಪಟ್ಟ ಒಂದು ಬೈಬಲ್ ಪ್ರಾರ್ಥನೆಯನ್ನು ನೀವು ನೆನಪಿಸಬಲ್ಲಿರೋ? ಅಂತಹ ಪ್ರಾರ್ಥನೆಗಳನ್ನು ಕಂಡುಹಿಡಿಯುವುದು, ಓದುವುದು ಮತ್ತು ಮನನ ಮಾಡುವುದು ದೇವರೊಂದಿಗಿನ ನಿಮ್ಮ ಸ್ವಂತ ಸಂಸರ್ಗವನ್ನು ಪುಷ್ಟೀಕರಿಸಲು ಸಹಾಯ ಮಾಡುವುದು. ಮುಂದಿನ ಲೇಖನದಲ್ಲಿ, ಪವಿತ್ರ ಶಾಸ್ತ್ರವಚನಗಳಿಂದ ತೆಗೆದಂತಹ ಮೂರು ಪ್ರಾರ್ಥನೆಗಳನ್ನು ಪರೀಕ್ಷಿಸಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅವುಗಳು, ಪ್ರಾಯಶಃ ನಿಮ್ಮವುಗಳಿಗೆ ಹೋಲುವಂತಹ ವಿಭಿನ್ನ ಪರಿಸ್ಥಿತಿಗಳ ಕೆಳಗೆ ನುಡಿಯಲ್ಪಟ್ಟಿದ್ದವು.