ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಗ್ರೀನ್ಲೆಂಡಿನ ದೂರದ ನೆಲಸುನಾಡುಗಳನ್ನು ತಲಪುವುದು
ಯೆಹೋವನ ಸಾಕ್ಷಿಗಳು ಅನೇಕ ದಶಕಗಳಿಂದ ಸುವಾರ್ತೆಯನ್ನು ಸಾರುವುದರಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಉಪಯೋಗಿಸಿದ್ದಾರೆ. ಆತನ ವಾಕ್ಯವಾದ ಬೈಬಲಿನಲ್ಲಿ ವ್ಯಕ್ತಪಡಿಸಲ್ಪಟ್ಟಿರುವಂತಹ ರೀತಿಯಲ್ಲಿ ಈ ಪತ್ರಿಕೆಗಳು ಯೆಹೋವನ ವಿವೇಕವನ್ನು ಉನ್ನತಕ್ಕೇರಿಸುತ್ತವೆ. ಬೈಬಲ್ ಪ್ರವಾದನೆಗೆ ಸಂಬಂಧಿಸುವ ಲೋಕ ಘಟನೆಗಳ ಮೇಲೆ ಅವು ಕಾವಲನ್ನಿಡುತ್ತವೆ ಮತ್ತು ಸಮಕಾಲೀನ ಸಮಸ್ಯೆಗಳಿಗೆ ಬೈಬಲಿನ ಸಮಂಜಸವಾದ ಸಲಹೆಯನ್ನು ಅವು ಅನ್ವಯಿಸುತ್ತವೆ.—ಯಾಕೋಬ 3:17.
1994 ರಲ್ಲಿ, ಗ್ರೀನ್ಲೆಂಡಿನಲ್ಲಿರುವ ಸಾಕ್ಷಿಗಳು ಸಾಧ್ಯವಿದ್ದಷ್ಟು ಜನರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲು ಒಂದು ವಿಶೇಷ ಪ್ರಯತ್ನವನ್ನು ಮಾಡಿದರು. ಬೇಸಗೆಯ ಸಮಯದಲ್ಲಿ, ಗ್ರೀನ್ಲೆಂಡಿನಲ್ಲಿರುವ ಕೆಲವು ಅತಿ ದೂರದ ನೆಲಸುನಾಡುಗಳನ್ನು ಭೇಟಿಮಾಡಲು ಅವರು ಏರ್ಪಾಡುಗಳನ್ನು ಮಾಡಿದರು. ರಾಜ್ಯ ಘೋಷಕರ ಒಂದು ಗುಂಪು, ದೋಣಿಯ ಮೂಲಕ 4,000 ಕಿಲೋಮೀಟರ್ಗಳಿಗಿಂತಲೂ ಹೆಚ್ಚು ದೂರದ ಗ್ರಾನಾರ್ಗ್ಗೆ (ಟೂಲಿ) ಪಶ್ಚಿಮ ಕರಾವಳಿಯ ತನಕ ಪ್ರಯಾಣಿಸಿ, ಭೂಗೋಲದ ಉತ್ತರದಲ್ಲಿರುವ ಸಮುದಾಯಗಳಲ್ಲಿ ಕೆಲವನ್ನು ತಲಪಿದರು. ಅವರ ಪ್ರಯಾಣಕ್ಕೆ ಏಳು ವಾರಗಳು ತಗಲಿದವು. ಪೂರ್ವ ಕರಾವಳಿಯಲ್ಲಿ, ಒಬ್ಬ ಸಾಕ್ಷಿ ದಂಪತಿಗಳು ಇಡ್ಡಾರ್ಗ್ಗ್ರಾರ್ಡಾರ್ಮೀಟ್ನಲ್ಲಿದ್ದ ನೆಲಸುನಾಡನ್ನು ತಲಪಿದರು ಮತ್ತು ಪ್ರಥಮ ಬಾರಿ ಅದನ್ನು ಸುವಾರ್ತೆಯೊಂದಿಗೆ ವ್ಯವಸ್ಥಿತವಾಗಿ ಆವರಿಸಿದರು.
ಆ ವರ್ಷದ ಆರಂಭದ ಭಾಗದಲ್ಲಿ, ಎಪ್ರಿಲ್ ತಿಂಗಳಲ್ಲಿ ಗ್ರೀನ್ಲೆಂಡಿನ ಜನರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ 7,513 ಪ್ರತಿಗಳು ನೀಡಲ್ಪಟ್ಟವು. ಅದರ ಅರ್ಥ, 127 ರಾಜ್ಯ ಘೋಷಕರಲ್ಲಿ ಪ್ರತಿಯೊಬ್ಬರು ಸರಾಸರಿ 59 ಪತ್ರಿಕೆಗಳನ್ನು ನೀಡಿದರು—ಪ್ರತಿ 7 ನಿವಾಸಿಗಳಿಗೆ 1 ಪತ್ರಿಕೆ. ಆ ತಿಂಗಳಲ್ಲಿ, ಎಚ್ಚರ! ಪತ್ರಿಕೆಯು “ಸ್ತನದ ಕ್ಯಾನ್ಸರ್—ಪ್ರತಿಯೊಬ್ಬ ಮಹಿಳೆಯ ಭಯ” ಎಂಬ ಮುಖ್ಯ ಶೀರ್ಷಿಕೆಯ ಕೆಳಗೆ ಲೇಖನಗಳ ಒಂದು ಸರಣಿಯನ್ನು ಸಾದರಪಡಿಸಿತು. 140 ಪತ್ರಿಕೆಗಳನ್ನು ನೀಡಿದ್ದ ಒಬ್ಬ ಸಾಕ್ಷಿ, ಆ ಎಚ್ಚರ! ಪತ್ರಿಕೆಯ ಪ್ರತಿಗಳನ್ನು ಒಬ್ಬ ಟೆಲಿವಿಷನ್ ವರದಿಗಾರ್ತಿಯೊಂದಿಗೆ ಬಿಟ್ಟುಬಂದಳು. ಒಂದೆರಡು ದಿವಸಗಳ ನಂತರ, ಒಂದು ಟೆಲಿವಿಷನ್ ವಾರ್ತಾ ಕಾರ್ಯಕ್ರಮವು ಸ್ತನದ ಕ್ಯಾನ್ಸರಿನ ಕುರಿತಾದ ಆ ಲೇಖನಗಳನ್ನು ಸಾದರಪಡಿಸಿತು. ಗ್ರೀನ್ಲೆಂಡಿಕ್ ಭಾಷಾಂತರದ ಗುಣಮಟ್ಟವನ್ನು ವರದಿಗಾರ್ತಿ ಹೊಗಳುತ್ತಿದ್ದಂತೆ, ಹಲವಾರು ಪುಟಗಳನ್ನು ತೋರಿಸುತ್ತಾ ಆಕೆ ಆ ಪತ್ರಿಕೆಯನ್ನು ಟೆಲಿವಿಷನಿನ ಮೇಲೆ ಪ್ರದರ್ಶಿಸಿದಳು. ಪ್ರತಿಬಂಧಕ ಆರೋಗ್ಯಾರೈಕೆಯೆಂದು ಎಚ್ಚರ! ಪತ್ರಿಕೆಯಿಂದ ಕೊಡಲ್ಪಟ್ಟ ವ್ಯಾವಹಾರಿಕ ಸಲಹೆಗಳನ್ನು ಸಹ ಅವಳು ಎತ್ತಿಹೇಳಿದಳು.
ಆರಂಭದಲ್ಲಿ ವರದಿಗಾರ್ತಿಯೊಂದಿಗೆ ಪತ್ರಿಕೆಗಳನ್ನು ಬಿಟ್ಟುಹೋಗಿದ್ದ ಸಾಕ್ಷಿಯು ಸಹ ಅದೇ ಟಿವಿ ಕಾರ್ಯಕ್ರಮದಲ್ಲಿ ಸಂದರ್ಶಿಸಲ್ಪಟ್ಟಳು. ಯೆಹೋವನ ಸಾಕ್ಷಿಗಳ ಕುರಿತಾದ ಅನೇಕ ಪ್ರಶ್ನೆಗಳನ್ನು ಅವಳು ಉತ್ತರಿಸಿದಳು ಮತ್ತು ಆ ತಿಂಗಳಿನಲ್ಲಿ ಪತ್ರಿಕೆಗಳ ವ್ಯಾಪಕವಾದ ವಿತರಣೆಯ ಕುರಿತಾಗಿ ಮಾತಾಡಿದಳು. ಬೈಬಲಿನಲ್ಲಿ ಕಂಡುಬರುವ ವ್ಯಾವಹಾರಿಕ ವಿವೇಕದ ಕುರಿತಾಗಿಯೂ ಅವಳು ಹೇಳಿಕೆಗಳನ್ನು ನೀಡಿದಳು ಮತ್ತು ಅಂತಹ ಸಮಂಜಸವಾದ ಸಲಹೆಯು ಇಂದಿನ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡಬಲ್ಲದೆಂದು ಸೂಚಿಸಿದಳು.
ಗ್ರೀನ್ಲೆಂಡಿಕ್ ಕ್ಯಾನ್ಸರ್ ಸೊಸೈಟಿಯ ಅಧ್ಯಕ್ಷರ ಸಂದರ್ಶನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಈ ವಿಷಯದ ಮೇಲೆ ತನ್ನ ಭಾಷೆಯಲ್ಲಿ ಇಷ್ಟು ಉತ್ತಮ ಮತ್ತು ಬೋಧಪ್ರದ ವಿಷಯವನ್ನು ತಾನೆಂದೂ ನೋಡಿರಲಿಲ್ಲವೆಂದು ಅವಳು ಹೇಳಿದಳು. ಅನಂತರ ಅವಳು, ಸ್ತನದ ಕ್ಯಾನ್ಸರಿನ ವಿಷಯದಲ್ಲಿ ಆಸಕ್ತರಾಗಿರುವವರೆಲ್ಲರೂ ಎಚ್ಚರ!ದ ಲೇಖನಗಳನ್ನು ಓದುವಂತೆ ಆಮಂತ್ರಿಸಿದಳು. ಅವರ ಆರಂಭದ ಹೆಜ್ಜೆಗಾಗಿ ಯೆಹೋವನ ಸಾಕ್ಷಿಗಳಿಗೆ ಆಭಾರಿಗಳಾಗಿರಲು ಸಕಾರಣವಿದೆಯೆಂದು ಅವಳು ಹೇಳಿದಳು.
ಗ್ರೀನ್ಲೆಂಡಿನಲ್ಲಿರುವಂತೆ, ಲೋಕದ ಸುತ್ತಲಿರುವ ಯೆಹೋವನ ಸಾಕ್ಷಿಗಳು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸುತ್ತಾರೆ. (ಕೊಲೊಸ್ಸೆ 1:23; ಅ. ಕೃತ್ಯಗಳು 1:8) ಕಾವಲಿನಬುರುಜು ಮತ್ತು ಎಚ್ಚರ! ವನ್ನು ಒಳಗೊಂಡು, ಬೈಬಲ್ ಸಾಹಿತ್ಯದ ಉಪಯೋಗದೊಂದಿಗೆ, ಅವರು ಎಲ್ಲಾ ವಿಧದ ಜನರಿಗೆ ಸದ್ಯದ ದಿನದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ ಹಾಗೂ ಒಂದು ಉತ್ತಮ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯನ್ನು ಕೊಡುತ್ತಾರೆ.
[ಪುಟ 8ರಲ್ಲಿರುವಚಿತ್ರ]
(For fully formatted text, see publication)
ಗ್ರಾನಾರ್ಗ್ (ಟೂಲಿ)
ಇಡ್ಡಾರ್ಗ್ಗ್ರಾರ್ಡಾರ್ಮೀಟ್
ನೂಕ್ (ಗಾಡ್ಹಾಬ್)