ಹೃದಯವನ್ನು ಸ್ಪರ್ಶಿಸುವ ಒಂದು ಪತ್ರಿಕೆ
ಮಾಹಿತಿ ಅಥವಾ ಮನೋರಂಜನೆಗಾಗಿರುವ ವಾಚಕನ ಹಸಿವನ್ನು ತಣಿಸಲಿಕ್ಕಾಗಿ, ಭೂಗೋಳದಾದ್ಯಂತ ಅಸಂಖ್ಯಾತ ಪತ್ರಿಕೆಗಳು ಪ್ರಕಾಶಿಸಲ್ಪಡುತ್ತವೆ.
ನಿಮ್ಮ ಕೈಯಲ್ಲಿರುವ ಪತ್ರಿಕೆಯನ್ನು ಯಾವುದು ಬಹಳ ಅಸಾಧಾರಣವಾದದ್ದಾಗಿ ಮಾಡುತ್ತದೆ? ಜರ್ಮನಿಯಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಿಂದ ಸ್ವೀಕರಿಸಲ್ಪಟ್ಟ ಈ ಮುಂದಿನ ಪತ್ರವು, ಒಂದು ಉತ್ತರವನ್ನು ಒದಗಿಸಬಹುದು:
“ಪ್ರಿಯ ಸಹೋದರರೇ, ನಿಮ್ಮ ಪ್ರಯತ್ನಗಳು ಹಾಗೂ ಕೆಲಸಕ್ಕಾಗಿ ನಿಮಗೆ ಬಹಳ ಉಪಕಾರ. ನನ್ನ ಇಬ್ಬರು ಪುತ್ರರೂ ನಾನೂ ಕೂಟದಿಂದ ಹಿಂದಿರುಗಿದಾಗ, ಸಮಯವು ರಾತ್ರಿ 9:30 ಆಗಿತ್ತಾದರೂ, ನನಗೆ ಇತ್ತೀಚಿನ ಕಾವಲಿನಬುರುಜು ಪತ್ರಿಕೆಯನ್ನು [ಆಡಿಯೊಕ್ಯಾಸೆಟ್ನಲ್ಲಿ] ಕೇಳಿಸಿಕೊಳ್ಳಬೇಕಾಗಿತ್ತು. ನಾನು ಪಾತ್ರೆಗಳನ್ನು ತೊಳೆದಂತೆ, ನಾನು ಮೊದಲ ಅಭ್ಯಾಸ ಲೇಖನ (ಎಪ್ರಿಲ್ 1, 1995)ವನ್ನು ಆಲಿಸಲಾರಂಭಿಸಿದೆ. ಅದನ್ನು ಪುನಃ ಒಮ್ಮೆ ಆಲಿಸಬೇಕೆಂಬ ಅನಿಸಿಕೆ ನನಗಾಯಿತು, ಆದುದರಿಂದ ನಾನು ಅಡಿಗೆಮನೆಯಲ್ಲಿನ ನನ್ನ ಕೆಲಸವನ್ನು ಅಡ್ಡೈಸಿ, ಆ ಟೇಪ್ನೊಂದಿಗೆ ಕಾವಲಿನಬುರುಜು ಪತ್ರಿಕೆಯಲ್ಲಿ [“ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!”] ಎಂಬ ಲೇಖನವನ್ನು ಓದಿದೆ. ಅದು ನನ್ನ ಹೃದಯವನ್ನು ಸ್ಪರ್ಶಿಸಿತು, ವಿಶೇಷವಾಗಿ ನಾಲ್ಕು ಮತ್ತು ಐದನೆಯ ಪ್ಯಾರಗ್ರಾಫ್ಗಳು. ಮತ್ತು ಬಳಿಕ ಕಣ್ಣೀರು ಹರಿಯಲಾರಂಭಿಸಿತು—ಆದರೆ ಹೆಚ್ಚು ಸಮಯದ ವರೆಗಲ್ಲ. ನಾನು ಜೀವಂತಳೂ ಆತನ ಜನರಿಗೆ ಸೇರಿದವಳೂ ಆಗಿರುವುದಕ್ಕಾಗಿ ಮತ್ತು ಇನ್ನಿತರ ಅನೇಕರೊಂದಿಗೆ ನಾನೂ ಆತನ ನಾಮವನ್ನು ಪ್ರಸಿದ್ಧಪಡಿಸಸಾಧ್ಯವಾದುದಕ್ಕಾಗಿ, ನಾನು ಯೆಹೋವನಿಗೆ ಕೃತಜ್ಞಳಾಗಿದ್ದೇನೆ. ನಿಜವಾಗಿಯೂ ನಿಷ್ಪ್ರಯೋಜಕರೆಂದು ಭಾವಿಸಿಕೊಳ್ಳಲು ಯಾವ ಕಾರಣವೂ ಇರುವುದಿಲ್ಲ. ಯೆಹೋವನ ಆತ್ಮವು ಆತನ ಜನರೊಂದಿಗಿದೆ. ನಾವೆಲ್ಲರೂ ಐಕ್ಯರಾಗಿದ್ದುಕೊಂಡು, ತಾಳಿಕೊಳ್ಳೋಣ ಮತ್ತು ನಂಬಿಕೆಯಲ್ಲಿ ದೃಢರಾಗಿ ನಿಲ್ಲೋಣ. ಕ್ರೈಸ್ತ ಮಮತೆಯೊಂದಿಗೆ, ನಂಬಿಕೆಯಲ್ಲಿರುವ ನಿಮ್ಮ ಸಹೋದರಿ.”
ಕಾವಲಿನಬುರುಜು ಪತ್ರಿಕೆಯು ಮಾಹಿತಿಗಿಂತಲೂ ಹೆಚ್ಚಿನದ್ದನ್ನು ಒದಗಿಸುತ್ತದೆ. ಇದು ತನ್ನ ವಾಚಕರ ಹೃದಯಗಳನ್ನು ಸ್ಪರ್ಶಿಸುತ್ತದೆ ಹಾಗೂ ಆತ್ಮಿಕ ಪೋಷಣೆಗಾಗಿಯೂ ಸಮಯೋಚಿತವಾದ ಉತ್ತೇಜನಕ್ಕಾಗಿಯೂ ಇರುವ ಅವರ ಬಯಕೆಯನ್ನು ತೃಪ್ತಿಪಡಿಸುತ್ತದೆ. ಹೌದು, ಕಾವಲಿನಬುರುಜು ಪತ್ರಿಕೆಯು “ಹೊತ್ತುಹೊತ್ತಿಗೆ ಆಹಾರ”ವನ್ನು ಒದಗಿಸುತ್ತದೆ.—ಮತ್ತಾಯ 24:45.