ಸಂತೋಷಭರಿತ ಹೃದಯದಿಂದ ದಾನಕೊಡುವುದು
ದಾನಕೊಡುವ ವಿಷಯದಲ್ಲಿ ಅಪೊಸ್ತಲ ಪೌಲನು, “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” ಎಂದು ಬರೆದನು. (2 ಕೊರಿಂ. 9:7) ಯೆಹೋವನು ಶುದ್ಧಾರಾಧನೆಗೆ ಬೆಂಬಲ ನೀಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ. ತನ್ನ ಸೇವಕರು ಸ್ವಯಂಪ್ರೇರಿತರಾಗಿ ಸಂತೋಷದಿಂದ ದಾನಕೊಡುವ ಮೂಲಕ ತಮ್ಮ ಭಕ್ತಿಯನ್ನು ತೋರಿಸುವಂತೆ ಬಿಡುತ್ತಾನೆ. ಇತಿಹಾಸದಾದ್ಯಂತ ಆತನ ಜನರು ಈ ವಿಷಯಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಮೂರು ಉದಾಹರಣೆಗಳನ್ನು ಪರಿಗಣಿಸಿರಿ.
ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿದಾಗ ಅವರು ದೇವದರ್ಶನ ಗುಡಾರವನ್ನು ಕಟ್ಟುವಂತೆ ಆದೇಶಿಸಿದನು. ಇದಕ್ಕೆ ಸಾಮಗ್ರಿಗಳು ಬೇಕಾಗಿದ್ದುದರಿಂದ ಕಾಣಿಕೆಗಳನ್ನು ಕೊಡುವಂತೆ ಇಸ್ರಾಯೇಲಿನ ಜನರನ್ನು ಕೇಳಿಕೊಳ್ಳಲಾಯಿತು. ಇದಕ್ಕೆ ಪ್ರತಿಕ್ರಿಯಿಸುತ್ತಾ “ಯಾರಾರನ್ನು ಹೃದಯವು ಪ್ರೇರಿಸಿತೋ” ಅವರು ಚಿನ್ನ, ಬೆಳ್ಳಿ, ಒಡವೆಗಳು ಮತ್ತು ಇತರ ಸಾಮಗ್ರಿಗಳನ್ನು ತಂದುಕೊಟ್ಟರು. ಜನರು ಎಷ್ಟು ಉದಾರವಾಗಿ ಕೊಟ್ಟರೆಂದರೆ ಅವರು ಕೊಡುವುದನ್ನು ನಿಲ್ಲಿಸುವಂತೆ ವಿನಂತಿಸುತ್ತಾ ಒಂದು ಪ್ರಕಟನೆಯನ್ನು ಮಾಡಬೇಕಾಯಿತು.—ವಿಮೋ. 35:5, 21; 36:6, 7.
ಶತಮಾನಗಳ ಬಳಿಕ ದೇವಾಲಯವನ್ನು ಕಟ್ಟಲಿಕ್ಕಿದ್ದಾಗ ದೇವಜನರು ಶುದ್ಧಾರಾಧನೆಗೆ ತಮ್ಮ ಬೆಂಬಲವನ್ನು ತೋರಿಸಲು ಮತ್ತೊಂದು ಸಂದರ್ಭವು ಒದಗಿಬಂದಿತ್ತು. ರಾಜ ದಾವೀದನು ಈ ಯೋಜನೆಗೆ ದೊಡ್ಡ ಮೊತ್ತದ ವೈಯಕ್ತಿಕ ಕಾಣಿಕೆಯನ್ನು ಕೊಟ್ಟನು ಮತ್ತು ಇತರರು ಕೂಡ ಕೊಡುವಂತೆ ಪ್ರೋತ್ಸಾಹಿಸಿದನು. ಜನರು ತೀವ್ರಾಸಕ್ತಿಯಿಂದ ಕೊಟ್ಟರು. ನಂಬುತ್ತೀರೋ ಇಲ್ಲವೋ ಚಿನ್ನ ಮತ್ತು ಬೆಳ್ಳಿಯ ರೂಪದಲ್ಲಿ ಜನರು ಕೊಟ್ಟ ಕಾಣಿಕೆ ಮಾತ್ರ ಸದ್ಯದ ಮೌಲ್ಯಕ್ಕನುಸಾರ ನೂರು ಲಕ್ಷ ಕೋಟಿ ಡಾಲರುಗಳಷ್ಟಿತ್ತು! ಜನರು ಯೆಹೋವನಿಗೆ ಸ್ವಯಂಪ್ರೇರಿತ ಕಾಣಿಕೆಗಳನ್ನು ಕೊಡುವ ವಿಷಯದಲ್ಲಿ ಹರ್ಷಾನಂದಪಟ್ಟರು.—1 ಪೂರ್ವ. 29:3-9; 2 ಪೂರ್ವ. 5:1.
ಯೇಸು ಕ್ರಿಸ್ತನ ಆದಿ ಹಿಂಬಾಲಕರು ಸಹ ಸಂತೋಷದಿಂದ ಕೊಡುವ ಮನೋಭಾವವನ್ನು ತೋರಿಸಿದರು. ಕ್ರಿ.ಶ. 33ರ ಪಂಚಾಶತ್ತಮ ದಿನದಂದು ಸುಮಾರು 3,000 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಅವರಲ್ಲಿ ಹೆಚ್ಚಿನವರು ಯೆರೂಸಲೇಮಿನ ನಿವಾಸಿಗಳಾಗಿರಲಿಲ್ಲ. ಅವರಲ್ಲಿದ್ದ ಬಡವರು ಪಟ್ಟಣದಲ್ಲೇ ಉಳಿದು ಅವರು ಹೊಸದಾಗಿ ತಿಳಿದುಕೊಂಡ ನಂಬಿಕೆಯ ಕುರಿತು ಹೆಚ್ಚನ್ನು ಕಲಿಯಸಾಧ್ಯವಾಗುವಂತೆ ಹಣಕಾಸಿಗೆ ಸಂಬಂಧಪಟ್ಟ ಸಂಪನ್ಮೂಲಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಲಾಯಿತು. ಅಗತ್ಯದಲ್ಲಿದ್ದವರಿಗೆ ನೆರವಾಗಲಿಕ್ಕಾಗಿ ಸಹೋದರರು ಆಸ್ತಿಪಾಸ್ತಿಯನ್ನು ಮಾರಿ ಸಿಕ್ಕಿದ ಹಣವನ್ನು ಅಪೊಸ್ತಲರಿಗೆ ತಂದುಕೊಟ್ಟರು. ನಂಬಿಕೆ ಮತ್ತು ಪ್ರೀತಿಯ ಇಂಥ ಅಭಿವ್ಯಕ್ತಿಯನ್ನು ನೋಡಿ ಯೆಹೋವನಿಗೆ ಎಷ್ಟು ಸಂತೋಷವಾಗಿದ್ದಿರಬೇಕು!—ಅ. ಕಾ. 2:41-47.
ಇಂದು ಕ್ರೈಸ್ತರು ತಮ್ಮ ಸಮಯ, ಶಕ್ತಿ ಮತ್ತು ನಿಧಿಗಳನ್ನು ಶುದ್ಧಾರಾಧನೆಯ ಬೆಂಬಲಾರ್ಥವಾಗಿ ಉದಾರವಾಗಿಯೂ ಸಂತೋಷದಿಂದಲೂ ಕೊಡುವುದನ್ನು ಮುಂದುವರಿಸಿದ್ದಾರೆ. ನೀವು ಸಹ ಇದನ್ನು ಮಾಡಸಾಧ್ಯವಿರುವ ಕೆಲವು ವಿಧಾನಗಳನ್ನು ಕೆಳಗೆ ಕೊಡಲ್ಪಟ್ಟಿರುವ ಚೌಕವು ತೋರಿಸಿಕೊಡುತ್ತದೆ.
[ಪುಟ 18, 19ರಲ್ಲಿರುವ ಚೌಕ]
ಕೆಲವರು ದಾನಕೊಡುವ ವಿಧಗಳು
ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು
ಅನೇಕರು, “ಲೋಕವ್ಯಾಪಕ ಕೆಲಸ” ಎಂದು ಗುರುತುಮಾಡಲಾಗಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ತಾವು ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್ ಮಾಡುತ್ತಾರೆ.
ಪ್ರತಿ ತಿಂಗಳಲ್ಲಿ ಸಭೆಗಳು ಈ ಮೊತ್ತವನ್ನು ತಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತರಾಗಿ ಹಣವನ್ನು ದಾನವಾಗಿ ಕೊಡಬಯಸುವವರೂ ನೇರವಾಗಿ ಅದನ್ನು ತಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಕಳುಹಿಸಬಹುದು. (ಕೆಳಗೆ ಕೊಡಲಾಗಿರುವ ವಿಭಾಗಗಳಲ್ಲಿ ನಮೂದಿಸಲಾದ ಸ್ವಯಂಪ್ರೇರಿತ ದಾನಗಳನ್ನು ಸಹ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಕಳುಹಿಸಬಹುದು.) ಬ್ರಾಂಚ್ ಆಫೀಸುಗಳ ವಿಳಾಸಗಳನ್ನು ಈ ಪತ್ರಿಕೆಯ 2ನೇ ಪುಟದಲ್ಲಿ ಕೊಡಲಾಗಿದೆ. ಚೆಕ್ಗಳಲ್ಲಿ “ವಾಚ್ ಟವರ್”ಗೆa ಸಂದಾಯವಾಗಬೇಕೆಂದು ನಿಖರವಾಗಿ ನಮೂದಿಸಿರಿ. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರ ಇಂತಹ ಕಾಣಿಕೆಗಳೊಂದಿಗೆ ಜೊತೆಗೂಡಿರಬೇಕು.
ಷರತ್ತುಬದ್ಧ ದಾನದ ಏರ್ಪಾಡುb
ಹಣವನ್ನು ಲೋಕವ್ಯಾಪಕವಾಗಿ ಉಪಯೋಗಿಸಲಾಗುವಂತೆ ಅದನ್ನು ವಾಚ್ ಟವರ್ ಸೊಸೈಟಿಯ ಬಳಿ ಇಡಬಹುದು. ಆದರೆ, ಹಣವನ್ನು ವಿನಂತಿಸಲಾಗುವಾಗ ಅದನ್ನು ಹಿಂದಿರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ಚ್ಯಾರಿಟಬಲ್ ಯೋಜನೆc
ನೇರವಾದ ಹಣದ ಕೊಡುಗೆಗಳೊಂದಿಗೆ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಕಾಣಿಕೆಕೊಡುವ ವಿಧಾನಗಳಿವೆ. ಈ ಮುಂದಿನ ವಿಧಾನಗಳು ಅದರಲ್ಲಿ ಒಳಗೂಡಿವೆ:
ವಿಮೆ: ವಾಚ್ ಟವರ್ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿಯೊಂದಿಗೆ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಅವು ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.
ಸ್ಟಾಕ್ಗಳು ಮತ್ತು ಬಾಂಡ್ಗಳು: ಸ್ಟಾಕ್ ಹಾಗೂ ಬಾಂಡ್ಗಳನ್ನು ನೇರವಾದ ಕೊಡುಗೆಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು ಅಥವಾ ಕಾನೂನುಬದ್ಧವಾಗಿ ಹೊರಡಿಸಲ್ಪಟ್ಟ ಉಯಿಲಿನ ಮುಖಾಂತರ ವಾಚ್ ಟವರ್ ಅನ್ನು ಫಲಾನುಭವಿಯಾಗಿ ಹೆಸರಿಸಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಜೀವದಿಂದಿರುವ ವರೆಗೂ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುವ ಒಂದು ನೇಮಿತ ಸಂಸ್ಥೆಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.
ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ವಾಚ್ ಟವರ್ ಸೊಸೈಟಿಗೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ವಾಚ್ ಟವರ್ ಸೊಸೈಟಿಯನ್ನುd ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಕೆಲವು ದೇಶಗಳಲ್ಲಿ, ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದು.
“ಚ್ಯಾರಿಟಬಲ್ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಸ್ವಲ್ಪ ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, “ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್ ಯೋಜನೆ”e ಎಂಬ ಬ್ರೋಷರ್ ಅನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ತಯಾರಿಸಲಾಗಿದೆ. ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಈ ಬ್ರೋಷರನ್ನು ತಯಾರಿಸಲಾಗಿದೆ. ಬ್ರೋಷರನ್ನು ಓದಿದ ಮತ್ತು ತಮ್ಮ ಸ್ವಂತ ಕಾನೂನು ಇಲ್ಲವೆ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಬೆಂಬಲ ನೀಡಲು ಶಕ್ತರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ಪತ್ರ ಅಥವಾ ಫೋನಿನ ಮೂಲಕ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳನ್ನು ಅಥವಾ ನಿಮ್ಮ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.
Jehovah’s Witnesses,
Post Box 6440,
Yelahanka,
Bangalore 560 064,
Karnataka.
Telephone: (080) 28468072
[ಪಾದಟಿಪ್ಪಣಿಗಳು]
a ಭಾರತದಲ್ಲಾದರೆ, “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಸಂದಾಯವಾಗಬೇಕೆಂದು ನಮೂದಿಸತಕ್ಕದ್ದು.
b ಭಾರತಕ್ಕೆ ಅನ್ವಯಿಸುವುದಿಲ್ಲ.
c ಗಮನಿಸಿ: ತೆರಿಗೆಯ ವಿಧಿನಿಯಮಗಳು ವಿಭಿನ್ನ ದೇಶಗಳಲ್ಲಿ ವಿಭಿನ್ನವಾಗಿರಬಲ್ಲವು. ನಿಮ್ಮ ಅಕೌಂಟೆಂಟ್ ಅಥವಾ ವಕೀಲನೊಂದಿಗೆ ಮಾತಾಡಿ ತೆರಿಗೆ ನಿಯಮಗಳು ಮತ್ತು ಯೋಜನೆಯ ಬಗ್ಗೆ ತಿಳಿದುಕೊಳ್ಳಿರಿ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್ ಆಫೀಸನ್ನು ಸಹ ಸಂಪರ್ಕಿಸಿರಿ.
d ಭಾರತದಲ್ಲಿ, “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ.”
e ಭಾರತದಲ್ಲಿ ಲಭ್ಯವಿಲ್ಲ.