ಒಳ್ಳೆಯ ಆರೋಗ್ಯ ಅದರ ಕುರಿತು ನೀವೇನು ಮಾಡಸಾಧ್ಯವಿದೆ?
“ಆಧುನಿಕ ಮದ್ದುಗಳ ಕೆಲವು ಪ್ರದರ್ಶನಾತ್ಮಕ ಯಶಸ್ವೀಗಳ ಫಲವಾಗಿ, ಆರೋಗ್ಯವನ್ನು ಸಮಾಜವು ಮತ್ತು ವ್ಯಕ್ತಿಗಳು ತಾವಾಗಿಯೇ ಸಂಪಾದಿಸ ಬಹುದಾದರೂ, ಜನರಿಗೆ ವೈದ್ಯರು ಅದನ್ನು ಕೊಡುವಂಥ ಒಂದು ವಿಷಯವೆಂದು ಲೋಕದ ಹಲವೆಡೆ ಒಂದು ಮನೋಭಾವವು ಆಂಶಿಕವಾಗಿ ಹಬ್ಬಿದೆ.” ಹೀಗೆಂದು ಜಾಗತಿಕ ಆರೋಗ್ಯ ಸಂಸ್ಥೆಯ ಅಧಿಕೃತ ಪತ್ರಿಕೆಯಾದ ವರ್ಲ್ಡ್ ಹೆಲ್ತ್ನಲ್ಲಿ ಡಾ. ಹಾಲ್ಪ್ಡಾನ್ ಮಹ್ಲಾರ್ ಬರೆದಿದ್ದಾರೆ.
ವಾಸ್ತವದಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬಹಳಷ್ಟನ್ನು ನೀಡುತ್ತಾ ಇದ್ದಾರೆ. ಆದಾಗ್ಯೂ, ಅವರು ಆಡುವ ಪಾತ್ರವು ಮುಖ್ಯವಾಗಿ ಗುಣಪಡಿಸುವಿಕೆಯಾಗಿದೆ. ಏನಾದರೂ ಹೆಚ್ಚು ಕಡಿಮೆ ಆದಾಗ ನಾವು ಅವರ ಸೇವೆಯನ್ನು ಉಪಯೋಗಿಸುತ್ತೇವೆ, ಆದರೆ ನಾವು ಚೆನ್ನಾಗಿದ್ದಾಗ ಅವರ ಕುರಿತು ಯೋಚಿಸುವುದು ಬಹಳ ಅಪರೂಪ. ಹಾಗಾದರೆ ನಾವಾಗಿಯೇ ಉತ್ತಮ ಆರೋಗ್ಯವನ್ನು ಗಳಿಸಬೇಕಾದರೆ ನಾವೇನು ಮಾಡ ಬಹುದು?
ಆರೋಗ್ಯಕರ ಜೀವಿತಕ್ಕೆ ಮಾರ್ಗದರ್ಶಕಗಳು
ಸಾಮಾನ್ಯವಾಗಿ, ಒಳ್ಳೆಯ ಆರೋಗ್ಯವು ಮೂರು ಮುಖ್ಯ ವಾಸ್ತವಾಂಶಗಳ ಮೇಲೆ ಆತುಕೊಂಡಿರುತ್ತದೆಂದು ತಜ್ಞರು ಒಪ್ಪುತ್ತಾರೆ: ಸಮತೂಕದ ಆಹಾರ ಕ್ರಮ, ಕ್ರಮವಾದ ವ್ಯಾಯಾಮ ಮತ್ತು ಜವಾಬ್ದಾರಿಯುತ ಜೀವಿತ. ಈ ವಿಷಯಗಳ ಮೇಲೆ ಸಮಾಚಾರಕ್ಕೇನೂ ಕೊರತೆಯಿಲ್ಲ ಮತ್ತು ಅದರಲ್ಲಿರುವುದು ಹೆಚ್ಚಿನ ಸಮಾಚಾರಗಳು ವ್ಯಾವಹಾರಿಕವೂ, ಪ್ರಯೋಜನಕರವೂ ಆಗಿವೆ. “ನಿಮ್ಮ ಆಹಾರ ಕ್ರಮ ಮತ್ತು ನಿಮ್ಮ ಆರೋಗ್ಯ” ಮತ್ತು “ವ್ಯಾಯಾಮ, ದೇಹದಾರ್ಢ್ಯ ಮತ್ತು ಆರೋಗ್ಯ” ಎಂಬ ಆವರಣಗಳಲ್ಲಿ ನಮ್ಮ ಆರೋಗ್ಯಕ್ಕೆ ಸಂಬಂಧಿತವಾದ ಆಹಾರ ಕ್ರಮ ಮತ್ತು ವ್ಯಾಯಾಮಗಳ ಕುರಿತಾಗಿ ಕೆಲವು ನಿಖರ ಹಾಗೂ ಪ್ರಚಲಿತ ಯೋಚನೆಗಳನ್ನು ಪ್ರಸ್ತಾಪಿಸಲಾಗಿದೆ.
ಬಹಳಷ್ಟು ಸಹಾಯಕಾರೀ ಸಮಾಚಾರಗಳು ದೊರಕುವುದಾದರೂ. ಹೆಚ್ಚಿನ ಜನರ ಆದ್ಯತೆಗಳ ಪಟ್ಟಿಯಲ್ಲಿ ಒಳ್ಳೆಯ ಆರೋಗ್ಯವನ್ನು ಸಂಪಾದಿಸುವುದು ನಿರಾಶಕರವಾಗಿಯೇ ಮೊದಲ ಸ್ಥಾನದಲ್ಲಿ ಇಲ್ಲವೆಂದು ವಾಸ್ತವಾಂಶಗಳು ತೋರಿಸುತ್ತವೆ. ಇನ್ನಿತರ ಸಂಗತಿಗಳೊಂದಿಗೆ, “ತೂಕವನ್ನು ಇಳಿಸುವುದು ಹೇಗೆ ಎಂದು ಎಲ್ಲರಿಗೆ ತಿಳಿದಿದೆ,” ಎಂದು ವಾಷಿಂಗ್ಟನ್ನ ರೋಗ ನಿರೋಧಕ ಮತ್ತು ಆರೋಗ್ಯ ವರ್ಧಕ ಆಫೀಸಿನ ಡಾ. ಮಾರಿಯೊನ್ ನೆಸ್ಲ್ ಹೇಳಿದರು, “ಆದರೂ ಹೆಚ್ಚು ಭಾರವಾಗಿರುವಿಕೆಯು ಅಷ್ಟೇನೂ ಬದಲಾದದ್ದು ಕಂಡು ಬರುವುದಿಲ್ಲ.” ಅವಳ ಆಫೀಸಿಗನುಸಾರ ಅಮೆರಿಕದಲ್ಲಿ ನಾಲ್ವರಲ್ಲಿ ಒಬ್ಬರು ಶೇಕಡಾ 20 ಹೆಚ್ಚು ಭಾರವುಳ್ಳವಾಗಿದ್ದಾರೆ.
ತದ್ರೀತಿಯಲ್ಲಿ ಅಮೆರಿಕದ ಆರೋಗ್ಯ ಸಂಖ್ಯಾಸಂಗ್ರಹಣದ ರಾಷ್ಟ್ರೀಯ ಕೇಂದ್ರದ ಒಂದು ಅಧ್ಯಯನವು ಪ್ರಕಟಿಸಿದ್ದು: “ಸಾಮಾನ್ಯವಾಗಿ 1977 ಮತ್ತು 1983ರ ನಡುವೆ ಅಶುಭಕರ ಆರೋಗ್ಯದ ಹವ್ಯಾಸಗಳು ಏರಿರುವಂತೆ ಕಾಣುತ್ತದೆ.” “ಅಶುಭಕರ ಆರೋಗ್ಯ ಹವ್ಯಾಸಗಳು” ಇವು ಯಾವುವು? ನ್ಯೂನ್ಯ ಪೋಷಣೆ, ಜಾಡ್ಯಗಳು ಮತ್ತು ಮಾಲಿನ್ಯದಂತಹ ವ್ಯಕ್ತಿಯೊಬ್ಬನಿಗೆ ಹತೋಟಿಯಿಲ್ಲದಂತಹ ಸಮಸ್ಯೆಗಳೇನೂ ಅಲ್ಲ. ಬದಲಿಗೆ, ವ್ಯಕ್ತಿಯೊಬ್ಬನ ಪೂರ್ಣ ಜವಾಬ್ದಾರಿಕೆಯೊಳಗೆ ಬರುವ ವಾಸ್ತವ ಸಂಗತಿಗಳು ಅವಾಗಿವೆ—ಧೂಮಪಾನ, ಅತಿಯಾಗಿ ತಿನ್ನುವುದು ಮತ್ತು ಅತಿಯಾಗಿ ಕುಡಿಯುವುದು ಮತ್ತು ಮಾದಕೌಷಧದ ದುರುಪಯೋಗ.
ಸ್ಪಷ್ಟವಾಗಿ, ಉತ್ತಮ ಆರೋಗ್ಯವನ್ನು ಸಂಪಾದಿಸಲು ಏನು ಮಾಡಬೇಕು ಎಂಬುದರ ಕುರಿತು ವೈದ್ಯಕೀಯ ಯಾ ವೈಜ್ಞಾನಿಕ ಸಮಾಚಾರಕ್ಕಿಂತಲೂ ಹೆಚ್ಚಿನದ್ದು ಅವಶ್ಯಕವಾಗಿದೆ. ನಮ್ಮ ವೈಯಕ್ತಿಕ ಜವಾಬ್ದಾರಿಕೆಗನುಸಾರ ಜೀವಿಸಲು ಹೆಚ್ಚಿನ ಪ್ರೋತ್ಸಾಹನೆಯು ಬೇಕಾಗಿದೆ. ಉತ್ತಮ ಆರೋಗ್ಯಕ್ಕೆ ಸಹಾಯಕವಾದವುಗಳನ್ನು ಮಾಡಲು ನಾವು ಪ್ರಚೋದಿಸಲ್ಪಡಬೇಕಾಗಿದೆ ಮಾತ್ರವಲ್ಲ, ಅದನ್ನು ಕೆಡವುವ ಸಂಗತಿಗಳಿಂದ ದೂರವಾಗಿರಲು ಪ್ರೇರಿಸಲ್ಪಡಬೇಕಾಗಿದೆ. ಅರೋಗ್ಯಕರ ಜೀವಿತಗಳನ್ನು ಜೀವಿಸಲು ನಮಗೆ ಸಹಾಯವಾಗುವಂತೆ ಅಂತಹ ಪ್ರೋತ್ಸಾಹನೆ ಮತ್ತು ಪ್ರಚೋದನೆಯನ್ನು ನಾವೆಲ್ಲಿ ಪಡೆಯಬಲ್ಲೆವು?
ಅನೇಕ ಜನರಿಗೆ ಇದು ತಿಳಿದಿಲ್ಲವಾದರೂ, ವೈದ್ಯ-ಗ್ರಂಥಕರ್ತನಾದ ಎಸ್.ಐ. ಮೆಕ್ಮಿಲನ್ ಅವನ ನನ್ ಆಫ್ ದೀಸ್ ಡಿಸ್ಇಸಸ್ ಪುಸ್ತಕದ ಮುನ್ನುಡಿಯಲ್ಲಿ ಹೀಗಂದಿದ್ದಾನೆ: “ಆಧುನಿಕ ಮದ್ದುಗಳ ಎಲ್ಲಾ ಪ್ರಯತ್ನಗಳ ನಡುವೆಯೂ, ಏರುತ್ತಿರುವ ಕೆಲವೊಂದು ಅಂಟುರೋಗಗಳಿಂದ, ಅನೇಕ ಮಾರಕ ಕ್ಯಾನ್ಸರ್ಗಳಿಂದ ಮತ್ತು ಉದ್ದವಾದ ಕೈಚೀಲದಂತಿರುವ ನರವ್ಯಾಧಿಗಳಿಂದ, ಬೈಬಲಿನ ಮಾರ್ಗದರ್ಶಿಗಳು ವಾಚಕನನ್ನು ರಕ್ಷಿಸಸಾಧ್ಯವಿದೆಂದು ವಾಚಕನು ಕಂಡುಕೊಂಡಾಗ ಅವನ ಕುತೂಹಲ ಕೆರಳಿಸಲ್ಪಡುತ್ತದೆ ಎಂದು ನಾನು ನಿಶ್ಚಯವುಳ್ಳವನಾಗಿದ್ದೇನೆ. . . . ಸಮಾಧಾನವು ಕೋಶಗಳಲ್ಲಿ (ಕ್ಯಾಪ್ಸೂಲ್) ಬರುವದಿಲ್ಲ.”
ಬೈಬಲು ಒಂದು ವೈದ್ಯಕೀಯ ಪಠ್ಯ ಪುಸ್ತಕ ಯಾ ಒಂದು ಆರೋಗ್ಯದ ಕೈಪಿಡಿಯಲ್ಲದಿದ್ದರೂ ಕೂಡಾ, ಅದು ಫಲದಾಯಕ ಹವ್ಯಾಸಗಳು ಮತ್ತು ಒಳ್ಳೆಯ ಆರೋಗ್ಯವುಂಟಾಗುವ ಸೂತ್ರಗಳನ್ನು ಮತ್ತು ಮಾರ್ಗದರ್ಶಕಗಳನ್ನು ಒದಗಿಸುತ್ತದೆ ಎಂದು ಈ ಹೇಳಿಕೆಗಳಿಂದ ನಾವು ಕಾಣಸಾಧ್ಯವಿದೆ. ಈ ಸೂತ್ರಗಳಲ್ಲಿ ಕೆಲವು ಯಾವುವು?
ಭಾವನೆಗಳು ಮತ್ತು ಜೀವನದ ಹೊರ ನೋಟ
ಉದಾಹರಣೆಗೆ, “ನಮ್ಮ ರೋಗಗಳಲ್ಲಿ ಅಧಿಕಾಂಶಗಳಿಗೆ ಹೆದರಿಕೆ, ವ್ಯಥೆ, ಮತ್ಸರ, ಮುನಿಸಿ ಕೊಳ್ಳುವಿಕೆ ಮತ್ತು ದ್ವೇಷ ಮುಂತಾದ ಭಾವನೆಗಳು ಜವಾಬ್ದಾರವಾಗಿರುತ್ತವೆಂದು ವೈದ್ಯಕೀಯ ವಿಜ್ಞಾನವು ಒಪ್ಪುತ್ತದೆ,” ಹೀಗೆಂದು ಮೇಲೆ ಉದ್ಧರಿಸಲ್ಪಟ್ಟ ಡಾ. ಮೆಕ್ಮಿಲನ್ ಹೇಳಿದನು. “ಅಂದಾಜು ಮಾಡುವಿಕೆಯಲ್ಲಿ ಶೇಕಡಾ 60ರಿಂದ ಹತ್ತಿರ ಹತ್ತಿರ 100ಕ್ಕೆ ವ್ಯತ್ಯಾಸವಿದೆ.”
ಇದನ್ನು ಪರಿಹರಿಸಲು ಏನು ಮಾಡ ಸಾಧ್ಯವಿದೆ? ಆಸಕ್ತಕರವಾಗಿಯೇ, ಸುಮಾರು 3,000 ವರ್ಷಗಳ ಹಿಂದೆ ಬೈಬಲು ಸೂಚಿಸಿದ್ದು: “ಶಾಂತ ಹೃದಯವು ದೇಹಕ್ಕೆ ಜೀವಾಧಾರವು; ಮತ್ಸರವು ಎಲುಬಿಗೆ ಕ್ಷಯ.”(ಜ್ಞಾನೋಕ್ತಿ 14:30,NW) ಆದರೆ ಒಬ್ಬನು “ಒಂದು ಶಾಂತ ಹೃದಯ”ವನ್ನು ಹೇಗೆ ಪಡೆಯಬಹುದು? ಬೈಬಲಿನ ಬುದ್ಧಿವಾದವು ಹೀಗಿದೆ: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.” (ಎಫೆಸ್ಯದವರಿಗೆ 4:31) ಇನ್ನೊಂದು ಮಾತಿನಲ್ಲಿ, ಒಳ್ಳೆಯ ಆರೋಗ್ಯವನ್ನು ಆನಂದಿಸಬೇಕಾದರೆ, ನಾವು ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಕಲಿಯಬೇಕು.
ಇದು, ವಾಸ್ತವದಲ್ಲಿ ಆಧುನಿಕ ಕೆಲವು ಮನೋರೋಗ ಚಿಕಿತ್ಸಕರ ಮತ್ತು ಮನೋಶಾಸ್ತ್ರಜ್ಞರ ಸಲಹೆಗಳಿಗೆ ವ್ಯತಿರಿಕ್ತವಾಗಿದೆ. ನಾವು ನಮ್ಮ ಭಾವನೆಗಳನ್ನು ಅದುಮಿ ಹಿಡಿಯುವುದರ ಬದಲು ಅದಕ್ಕನುಸಾರ ವರ್ತಿಸುವಂತೆ ಅವರು ಶಿಫಾರಸು ಮಾಡುತ್ತಾರೆ. ಒಬ್ಬನು ತನ್ನ ಹಬೆಯನ್ನು ಹೊರಗೆ ಹಾಕಿ, ತನ್ನ ಕೋಪವನ್ನು ಪ್ರದರ್ಶಿಸುವುದಾದರೆ, ಸುತ್ತುಗಟ್ಟಿ ಇದ್ದು ಮತು ಕ್ಷೋಭೆಗೊಳಗಾಗಿದ್ದೇನೆ ಎಂದೆಣಿಸುವವನಿಗೆ ತಾತ್ಕಾಲಿಕ ಶಮನವನ್ನು ತರಬಹುದು. ಆದರೆ ಅವನು ಸುತ್ತಲೂ ಇದ್ವವರೊಂದಿಗಿನ ಸಂಬಂಧಕ್ಕೆ ಅದೇನು ಮಾಡುತ್ತದೆ ಮತ್ತು ಅವರಿಂದ ಯಾವ ರೀತಿಯ ಪ್ರತಿಕ್ರಿಯೆ ಉಂಟಾಗಬಹುದು? ಬಿಗುಪುತನ ಮತ್ತು ತಿಕ್ಕಾಟದ ನರವೇದನೆಯಾಗುತ್ತದೆ ಎಂದು ಊಹಿಸಲು ಕಷ್ಟವಾಗಲಿಕ್ಕಿಲ್ಲ, ಅಲ್ಲದೇ, ಪ್ರಾಯಶಃ ದೈಹಿಕ ಹಾನಿಯು ಒಂದು ವೇಳೆ ಪ್ರತಿಯೊಬ್ಬನು ತನ್ನ ಭಾವನೆಗಳನ್ನು ಹತೋಟಿಯಲ್ಲಿಡಲು ಪ್ರಯತ್ನಿಸದೇ, ಅದಕ್ಕನುಸಾರ ವರ್ತಿಸಿದರೆ ಉಂಟಾಗುವ ಸಾಧ್ಯತೆಯಿದೆ. ಇದು ಕೊನೆ ಮುಟ್ಟದ ವಿಷವೃತ್ತವನ್ನು ಉಂಟುಮಾಡುತ್ತದೆ.
ನಿಜವಾಗಿಯೂ ಈ ಹಾನಿಕರ ಭಾವನೆಗಳನ್ನು ಹತೋಟಿಯಲ್ಲಿಡುವುದು, ವಿಶೇಷವಾಗಿ ಒಬ್ಬನು ಸಿಟ್ಟು ಮತ್ತು ಕೋಪೋದ್ರೇಕಗೊಳ್ಳುವ ಪ್ರವೃತ್ತಿಯವನಾಗಿರುವುದಾದರೆ, ಅಷ್ಟೊಂದು ಸುಲಭವಲ್ಲ. ಆದುದರಿಂದಲೇ ಬೈಬಲು ಹೇಳುತ್ತಾ ಮುಂದುವರಿಯುವುದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.” (ಎಫೆಸದವರಿಗೆ 4:32) ಇನ್ನೊಂದು ಮಾತಿನಲ್ಲಿ, ಹಾನಿಕರ ನಕಾರಾತ್ಮಕ ಭಾವನೆಗಳನ್ನು ನಿರ್ಧಾರಾತ್ಮಕವಾದವುಗಳಿಂದ ನಾವು ಸ್ಥಾನಪಲ್ಲಟಮಾಡಬೇಕು ಎಂದು ಅದು ಹೇಳುತ್ತದೆ.
ಇತರರೆಡೆಗಿನ ಅಂತಹ ನಿರ್ಧಾರಾತ್ಮಕ ಭಾವನೆಗಳು ನಮಗೇನು ಮಾಡುತ್ತವೆ? “ಜಾಗ್ರತೆ ವಹಿಸುವುದು ಜೀವವಿಜ್ಞಾನಕ್ಕೆ ಸಂಬಂಧಿಸಿದ್ದು,” ಅನ್ನುತ್ತಾನೆ ತನ್ನ ದ ಬ್ರೊಕನ್ ಹಾರ್ಟ್ ಎಂಬ ಪುಸ್ತಕದಲ್ಲಿ ಡಾ. ಜೇಮ್ಸ್ ಲಿಂಚ್ ಬರೆಯುತ್ತಾನೆ. “ಅಪ್ಪಣೆ ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು’ ಎಂಬದು ಕೇವಲ ನೀತಿಬೋಧೆಯಲ್ಲ—ಅದೊಂದು ಶರೀರಶಾಸ್ತ್ರಕ್ಕೆ ಸಂಬಂಧಿಸಿದ್ದೂ ಆಗಿದೆ.” ತರಬಹುದಾದ ಉತ್ತಮ ಸಂಬಂಧಗಳ ಕುರಿತು ಮಾತಾಡುತ್ತಾ ರೋಬರ್ಟ್ ಟೆಯ್ಲರ್, ಮನೋರೋಗಚಿಕತ್ಸಕನು ಕೂಡಿಸಿದ್ದು: “ಆಪತ್ತಿನ ಸಮಯದಲ್ಲಿ ನೀವು ಸಹಾಯಕ್ಕಾಗಿ ಹೋಗಬಹುದಾದ ಜನರು ನಿಮಗಿದ್ದಾರೆ ಎಂಬ ಅರಿವು ತಾನೇ ಸುರಕ್ಷಿತತೆಯ, ಆಶಾವಾದದ ಮತ್ತು ನಿರೀಕ್ಷೆಯ ಅತಿ ಪ್ರಾಮುಖ್ಯ ಭಾವನೆಗಳನ್ನು ಒದಗಿಸಬಲ್ಲದು—ಇವೆಲ್ಲವೂ ಒತ್ತಡಕ್ಕೆ ಪರಿಹಾರ ತರುವ ವಿಷಹಾರಿಯೋಪಾದಿ ಇದೆ.” ಈ ರೀತಿಯಲ್ಲಿ, ಇಂದಿನ ವೈದ್ಯಕೀಯವು ನರವ್ಯೂಹದ ರೋಗಗಳೆಂದು ಕರೆಯಲ್ಪಡುವ ಕೆಲವು ರೋಗಗಳಿಗೆ ಚಿಕಿತ್ಸೆಯನ್ನು ತರಲು ಪ್ರಯತ್ನಿಸಬಹುದಾದರೂ, ಬೈಬಲಿನ ಸರಳ ಮಾರ್ಗದರ್ಶಕಗಳು, ಅವು ಮೊದಲ ಸ್ಥಳದಲ್ಲಿ ಸಂಭವಿಸದಂತೆ ತಡೆಗಟ್ಟಲು ಸಹಾಯಮಾಡಬಲ್ಲವು. ಬೈಬಲಿನ ಮಾರ್ಗದರ್ಶಕಗಳನ್ನು ಅನ್ವಯಿಸಲು ಇಚ್ಛೆಯುಳ್ಳ ಯಾರೇ ಆಗಲಿ, ಅದರಿಂದ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಪ್ರಯೋಜನ ಪಡೆಯುವನು.
ಹವ್ಯಾಸಗಳು ಮತ್ತು ಚಟಗಳು
ನಮ್ಮ ಭಾವನಾತ್ಮಕ ಹಾಗೂ ದೈಹಿಕ ಯೋಗಕ್ಷೇಮವನ್ನು ಬಾಧಿಸುವ ಇನ್ನೊಂದು ಸಂಗತಿ ನಾವು ನಮ್ಮ ದೇಹವನ್ನು ನೋಡಿ ಕೊಳ್ಳುವ ವಿಧಾನ. ಸಮಂಜಸವಾದ ನಮ್ಮ ವತಿಯ ಪ್ರಯತ್ನಗಳೊಂದಿಗೆ—ಯೋಗ್ಯವಾಗಿ ತಿನ್ನುವುದು, ಬೇಕಾದಷ್ಟು ವ್ಯಾಯಾಮ ಮತ್ತು ವಿಶ್ರಾಂತಿ ಪಡೆಯುವುದು, ನಿರ್ಮಲವಾಗಿಟ್ಟುಕೊಳ್ಳುವುದು ಮತ್ತು ಇತ್ಯಾದಿ—ನಮ್ಮ ದೇಹವು ಸ್ವತಃ ತನ್ನ ಜೋಪಾಸನೆ ಮಾಡಿಕೊಳ್ಳುತ್ತದೆ. ಆದಾಗ್ಯೂ ನಾವು ಹವ್ಯಾಸದ ರೀತಿಯಲ್ಲಿ ಅದನ್ನು ದುರುಪಯೋಗಗೊಳಿಸಿದರೆ, ಬಲು ಬೇಗನೆ ಯಾ ತಡವಾಗಿ ಅದು ಕೆಡುತ್ತದೆ ಮತ್ತು ನಾವದರ ದುಷ್ಪರಿಣಾಮಗಳಿಂದ ಬಾಧಿಸಲ್ಪಡುವೆವು.
ಬೈಬಲಿನ ಸಲಹೆಯು ಹೀಗಿದೆ: “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಳ್ಳೋಣ.” (2 ಕೊರಿಂಥದವರಿಗೆ 7:1) ಇಂತಹ ಸಲಹೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು ಮತ್ತು ಸಿಗುವ ಪ್ರಯೋಜನಗಳು ಯಾವುವು? ವಾಷಿಂಗ್ಟನ್ನಲ್ಲಿರುವ ವರ್ಲ್ಡ್ವಾಚ್ ಇನ್ಸ್ಟಿಟ್ಯೂಟ್ನ ಈ ಕೆಳಗಿನ ವರದಿಯನ್ನು ಗಮನಿಸಿರಿ: “ಲೋಕದ ಜನಸಂಖ್ಯೆಗಿಂತಲೂ ಹೆಚ್ಚು ವೇಗದಲ್ಲಿ ಅಂದರೆ ಪ್ರತಿ ವರ್ಷ ಶೇಕಡಾ 2.1 ರಷ್ಟು ಧೂಮಪಾನ ಮಾಡುವ ಜಾಡ್ಯವು ಬೆಳೆಯುತ್ತದೆ. . . . ತಂಬಾಕು ಉಪಯೋಗದ ಬೆಳವಣಿಗೆಯು 80ರ ಆರಂಭದ ದಶಕದಲ್ಲಿ ಸ್ವಲ್ಪ ನಿಧಾನಿಸಿದರೂ, ಮುಖ್ಯವಾಗಿ ಆರ್ಥಿಕ ಕಾರಣಗಳಿಗಾಗಿ, ಆದರೆ ಅದರ ವೃದ್ಧಿಯು ಈಗ ತೀವ್ರವಾಗಿ ಪುನಃ ಏರುತ್ತಾ ಇದೆ. ಈಗ ನೂರು ಕೋಟಿಗಿಂತಲೂ ಹೆಚ್ಚಿನವರು ಸೇದುತ್ತಾರೆ, ಸರಾಸರಿ ವರ್ಷಕ್ಕೆ 5,000 ಕೋಟಿಯಷ್ಟು ಸಿಗರೇಟುಗಳು ಖರ್ಚಾಗುತ್ತವೆ, ಅಂದರೆ ಪ್ರತಿ ದಿನ ಅರ್ಧ ಪ್ಯಾಕ್ಗಿಂತಲೂ ಹೆಚ್ಚು.”
ಈ ‘ಬೆಳೆಯುತ್ತಿರುವ ಜಾಡ್ಯದ’ ಪರಿಣಾಮವೇನು? ಇದರಲ್ಲಿ ಕೊಟ್ಟಿರುವ ಆವರಣವು ಅನುದ್ವೇಗದಿಂದ ಆಲೋಚಿಸಲು ಸಾಕಷ್ಟು ಗ್ರಾಸವನ್ನು ಒದಗಿಸಿದೆ. ಆದರೆ ಪಟ್ಟಿಯು ಯಾವುದೇ ಅರ್ಥದಲ್ಲಿ ಮುಗಿದಿರುವುದಿಲ್ಲ, ಆದರೆ ಸಂದೇಶವು ಸುಸ್ಪಷ್ಟವಾಗಿದೆ: ತಂಬಾಕು ಚಟವು ಶಕ್ತಿಶಾಲಿಯೂ, ದುಬಾರಿ ಬೆಲೆಯದ್ದೂ ಆಗಿರುತ್ತದೆ. ಇದು ಚಟವಿದ್ದವರ ಮತ್ತು ಅವನ ಸುತ್ತಲೂ ಇರುವವರ ಆರೋಗ್ಯವನ್ನು ಕೆಡಿಸುವ ಒಂದು ಮೈಲಿಗೆಯ ಹವ್ಯಾಸವಾಗಿದೆ.
ಈ ಹವ್ಯಾಸವನ್ನು ನಿಲ್ಲಿಸುವ ಪ್ರಯತ್ನದ ಕುರಿತಾಗಿ ಏನು? ಧೂಮಪಾನ ವಿರೋಧದ ಎಲ್ಲಾ ಚಟುವಟಿಕೆಯಿದ್ದರೂ, ಲೋಕ ವ್ಯಾಪಕವಾಗಿ ಯಶಸ್ವಿಯು ಕೊಂಚವೇ. ತಂಬಾಕು ಹವ್ಯಾಸವನ್ನು ತೊರೆಯುವುದು ಒಂದು ಶ್ರಮಪೂರಿತ ಮೇಲೇರಾದ ಹೋರಾಟವಾಗಿದೆ. ಈ ಹವ್ಯಾಸವನ್ನು ಮುರಿಯುವುದರಲ್ಲಿ ನಾಲ್ವರಲ್ಲಿ ಕೇವಲ ಒಬ್ಬನು ಮಾತ್ರ ಯಶಸ್ವೀಯಾಗಿದ್ದಾನೆಂದು ಸಂಶೋಧನೆಯು ತೋರಿಸುತ್ತದೆ. ಧೂಮಪಾನವು ಆರೋಗ್ಯಕ್ಕೆ ಹಾನಿ ಎಂಬ ಎಲ್ಲಾ ಎಚ್ಚರಿಕೆಗಳು ಸಾಕಷ್ಟು ಪ್ರೋತ್ಸಾಹನೆಯನ್ನು ಪಡೆದಿಲ್ಲವೆಂದು ವ್ಯಕ್ತವಾಗುತ್ತದೆ.
ಆದಾಗ್ಯೂ, ಮೇಲೆ ಉದ್ಧರಿಸಿದ ಬೈಬಲ್ ಬುದ್ಧಿವಾದದೊಂದಿಗೆ ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸಬೇಕೆಂಬ ಕ್ರೈಸ್ತರಿಗಿರುವ ಆಜ್ಞೆಯು, ಈಗ ಯೆಹೋವನ ಸಾಕ್ಷಿಗಳಾಗಿರುವ ಸಾವಿರಾರು ಮಂದಿಯನ್ನು ಧೂಮಪಾನವನ್ನು ನಿಲ್ಲಿಸುವಂತೆ ನಡಿಸಿದೆ. ಪ್ರತಿ ವಾರ ಹಲವಾರು ತಾಸು ಕೂಡಿಬರುವ ಅವರ ರಾಜ್ಯ ಸಭಾಗೃಹಗಳಲ್ಲಾಗಲೀ ಯಾ ಹಲವಾರು ದಿನಗಳ ತನಕ ಸಾವಿರಾರು ಮಂದಿ ಒಟ್ಟಾಗಿ ಸೇರುವ ಅವರ ಅಧಿವೇಶನಗಳಲ್ಲಾಗಲೀ ಅವರಲ್ಲಿ ಯಾರೇ ಒಬ್ಬನು ಸಿಗರೇಟು ಸೇದುವುದನ್ನು ನೀವು ಕಾಣಲಾರಿರಿ. ಇತರರು ಯಾವುದನ್ನು ಸಾಧಿಸಲು ತಪ್ಪಿರುತ್ತಾರೋ ಅದನ್ನು ಪೂರೈಸಲು ಅವಶ್ಯಕವಾದ ದೃಢತೆಯನ್ನು, ಬೈಬಲಿನ ಮಾರ್ಗದರ್ಶಕಗಳನ್ನು ಸ್ವೀಕರಿಸಲು ಮತ್ತು ಅನ್ವಯಿಸಲು ಅವರಿಗಿರುವ ಇಚ್ಛೆಯು ಒದಗಿಸಿದೆ.
ಇತರ ಹಾನಿಕರ ಅಭ್ಯಾಸಗಳಲ್ಲಿ ಮಿತಿಮೀರಿ ಮದ್ಯಪಾನಮಾಡುವುದು, ಮಾದಕೌಷಧದ ದುರುಪಯೋಗ, ಮಾರಕ ರೋಗಗಳು ಬರಬಹುದಾದ ರೀತಿಯ ಕಾನೂನುರೀತ್ಯ ಲೈಂಗಿಕತೆ ಮತ್ತು ಉಪದ್ರವೀ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಇತರ ಅನೇಕ ಸಂಗತಿಗಳು ಸೇರಿವೆ. ಈ ಸಮಸ್ಯೆಗಳೊಂದಿಗೆ ವ್ಯವಹರಿಸುವುದರಲ್ಲಿ ಆರೋಗ್ಯದ ಅಧಿಕಾರಿಗಳಿಗೆ ಸಾಕಷ್ಟು ಸಮಯವಿಲ್ಲದಿರುವವುದಾದರೂ, ಬೈಬಲಾದರೋ ವ್ಯಾವಹಾರಿಕವೂ, ಸಮಂಜಸವೂ ಆದ ಸಲಹೆಯನ್ನು ಕೊಡುವುದನ್ನು ನೀವು ಕಾಣುವಿರಿ.a—ಜ್ಞಾನೋಕ್ತಿ 20:1; ಅ.ಕೃತ್ಯಗಳು 15:20, 29; 1 ಕೊರಿಂಥ್ಯದವರಿಗೆ 6:13, 18.
ಎಲ್ಲಾ ರೋಗಗಳು ಅಂತ್ಯಗೊಳ್ಳುವ ಸಮಯ
ಒಳ್ಳೆಯ ಆರೋಗ್ಯ ಕಾಪಿಡಲು ನಾವು ಎಷ್ಟೇ ಪ್ರಯತ್ನಿಸ ಬಹುದಾದರೂ ನಿಜ ವಾಸ್ತವತೆಯೇನಂದರೆ ಸದ್ಯಕ್ಕೆ ನಾವು ರೋಗಿಗಳಾಗುತ್ತೇವೆ ಮತ್ತು ಸಾಯುತ್ತೇವೆ. ಆದರೂ ಮಾನವನ ನಿರ್ಮಾಣಿಕನಾದ ಯೆಹೋವ ದೇವರು ಮನುಷ್ಯನು ಯಾಕೆ ರೋಗಿಯಾಗುತ್ತಾನೆ ಮತ್ತು ಸಾಯುತ್ತಾನೆ ಎಂದು ಹೇಳುವುದು ಮಾತ್ರವಲ್ಲ, ಎಲ್ಲಾ ರೀತಿಯ ರೋಗಗಳ ಮತ್ತು ಮರಣದ ಮೇಲೆ ಕೂಡಾ ಬಲು ಬೇಗನೇ ಜಯ ಗಳಿಸುವ ಸಮಯ ಬರಲಿರುವುದು ಎಂದು ನಮಗೆ ತಿಳಿಸಿದ್ದಾನೆ.—ರೋಮಾಪುರದವರಿಗೆ 5:12.
ಯೆಶಾಯ 33:24ರಲ್ಲಿ ಒಂದು ಬೈಬಲ್ ಪ್ರವಾದನೆಯು ವಾಗ್ದಾನಿಸುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಪ್ರಕಟಣೆ 21:4 ಕೂಡ ಆಶ್ವಾಸನೆಯನ್ನೀಯುವುದು: “(ದೇವರು) ತಾನೇ ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವುದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” ಹೌದು, ಇದೇ ಭೂಮಿಯ ಮೇಲೆ ಒಂದು ಹೊಸ ಲೋಕವನ್ನು ನಿರ್ಮಾಣಿಕನು ವಾಗ್ದಾನಿಸಿದ್ದಾನೆ, ಇಲ್ಲಿ ಮಾನವ ಕುಟುಂಬದ ಸಂಪತ್ತಾಗಿ ರೋಮಾಂಚಕರ ಆರೋಗ್ಯ ಮತ್ತು ನಿತ್ಯಜೀವವಿರುವದು, ಹೀಗೆ ಮನುಷ್ಯರು ಮಾನವ ಪರಿಪೂರ್ಣತೆಗೆ ಏರಿಸಲ್ಪಡುವರು!—ಯೆಶಾಯ 65:17-25. (g89 12/8)
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಸಮಾಚಾರಕ್ಕಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಹೆಪ್ಪಿನೆಸ್—ಹೌ ಟು ಫೈಂಡ್ ಇಟ್ ಪುಸ್ತಕದ 10ನೆಯ ಅಧ್ಯಾಯವನ್ನು ನೋಡಿರಿ.
[ಪುಟ 8ರಲ್ಲಿರುವಚೌಕ]
ನಿಮ್ಮ ಆಹಾರಕ್ರಮ ಮತ್ತು ನಿಮ್ಮ ಆರೋಗ್ಯ
ಒಂದು ನೀವು . . . ಧೂಮಪಾನ ಮಾಡದಿರುವುದಾದರೆ ಯಾ ಆತಿಯಾಗಿ ಮದ್ಯಪಾನಮಾಡದಿರುವುದಾದರೆ, ನೀವು ತೆಗೆದುಕೊಳ್ಳುವ ಬೇರೆ ಯಾವುದೇ ಕ್ರಿಯೆಗಿಂತ ಆಹಾರದ ನಿಮ್ಮ ಆರಿಸುವಿಕೆಯು ನಿಮ್ಮ ದೀರ್ಘಕಾಲದ ಆರೋಗ್ಯದ ಪ್ರತೀಕ್ಷೆಯ ಮೇಲೆ ಪ್ರಭಾವ ಬೀರಸಾಧ್ಯವಿದೆ.”—ಡಾ. ಸಿ. ಎವರೆಟ್ ಕೂಪ್, ಅಮೆರಿಕದ ಮಾಜಿ ಸರ್ಜನ್ ಜನರಲ್.
ಇತ್ತೀಚೆನ ವರ್ಷಗಳಲ್ಲಿ, ಕೈಗಾರಿಕಾ ರಾಷ್ಟ್ರಗಳ ಆಹಾರ ಕ್ರಮದ ಕೆಲವು ನಿರ್ದಿಷ್ಟ ವಿಷಯಗಳು ಜನರ ಆರೋಗ್ಯದ ಮೇಲೆ ಹಾನಿಕರ ಪ್ರಭಾವ ಬೀರುವ ಕುರಿತು ಮಾತಾಡಿರುತ್ತಾರೆ. ತಂಬಾಕು, ಮದ್ಯಪಾನ, ಉಪ್ಪು, ಮತ್ತು ಸಕ್ಕರೆಯಂತಹ ವಸ್ತುಗಳ ಕಡೆಗೆ ಗಮನ ಸೆಳೆಯುವುದರೊಟ್ಟಿಗೆ, ಅನೇಕರ ಆಹಾರ ಕ್ರಮದಲ್ಲಿ ಕೊಬ್ಬು ಮತ್ತು ಕೊಲೆಸ್ಟರೊಲ್ ಹೆಚ್ಚಿದ್ದು, ನಾರುಪದಾರ್ಥ ಕಡಿಮೆ ಇರುವುದರ ಕಡೆಗೆ ವಿಶೇಷ ಗಮನ ಸೆಳೆದಿರುತ್ತಾರೆ.
ಡಾ.ಕೂಪ್ ಮುಂದುವರಿಸುವುದು, “ನಮ್ಮ ಅತ್ಯಂತ ದೊಡ್ಡ ಚಿಂತೆಯೆಂದರೆ ಆಹಾರದಲ್ಲಿ ಅತಿಯಾಗಿ ಕೊಬ್ಬನ್ನು ಸೇವಿಸುವುದು ಮತ್ತು ಇದಕ್ಕೆ ಸಂಬಂಧಿತ ಅಸ್ತಿಗತ ವ್ಯಾಧಿಗಳಾದ ಹೃದಯದ ರಕ್ತನಾಳಗಳ ರೋಗಗಳು, ಕೆಲವು ತರಹದ ಕ್ಯಾನ್ಸರ್ಗಳು, ಮಧುಮೇಹ ರೋಗ, ಹೆಚ್ಚಿನ ರಕ್ತದೊತ್ತಡ, ಪಾರ್ಶ್ವವಾಯು ಹೊಡೆತ, ಮತ್ತು ಬೊಜ್ಜು ಬೆಳೆಯುವಿಕೆ ಇವುಗಳೇ.” ತದ್ರೀತಿಯಲ್ಲಿ ಬ್ರಿಟಿಶ್ ಸರ್ಜನ್ ಡಾ. ಡೆನಿಸ್ ಬರ್ಕಿಟ್ ಮತ್ತು ಇನ್ನಿತರರು ನಾರುಪದಾರ್ಥಗಳ ಕೊರತೆಯಿರುವ ಆಹಾರ ಮತ್ತು ಹೃದಯದ ರಕ್ತನಾಳಗಳ ರೋಗಗಳು, ಕರುಳು ಕ್ಯಾನ್ಸರ್ಗಳು, ಜಠರದ ಕರುಳಿನ ಅಕ್ರಮಗಳು, ಮಧುಮೇಹ ರೋಗ, ಮತ್ತು ಇತರ ರೋಗಗಳ ನಡುವೆ ಇರುವ ಕೊಂಡಿಯ ಕುರಿತು ಗಮನ ಸೆಳೆಯುತ್ತಾರೆ.
ನಮ್ಮ ಆಹಾರದ ಕ್ರಮವು ಯಾವ ವಿಧದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಯಲ್ಪಟ್ಟಿಲ್ಲ ಇಲ್ಲವೇ ಎಲ್ಲಾ ಆರೋಗ್ಯದ ನಿಪುಣರ ನಡುವೆ ಪೂರ್ಣ ಒಮ್ಮತವೂ ಇಲ್ಲ. ಆದರೂ ನಮ್ಮ ಗಮನ ಹರಿಸಲು ಅರ್ಹವಾದ ಕೆಲವು ವೈದ್ಯಕೀಯ ವಾಸ್ತವಾಂಶಗಳು ಅಲ್ಲಿವೆ.
ಕೊಬ್ಬನ್ನು ಕಡಿಮೆಗೊಳಿಸಿರಿ
ರಕ್ತದಲ್ಲಿ ಉನ್ನತ ಮಟ್ಟದ ಕೊಲೆಸ್ಟರೊಲ್, ಕೊಬ್ಬಿರುವ ಮದ್ಯಸಾರವು ಹೃದ್ರೋಗಕ್ಕೆ ನೇರವಾಗಿ ಗಂಡಾಂತರ ತರುವುದಕ್ಕೆ ಸಂಬಂಧಿಸಿದೆ. ಹೃದ್ರೋಗವಿರುವವರು, ಅದರ ಇತಿಹಾಸವಿರುವ ಕುಟುಂಬದಿಂದ ಬಂದವರು ಮತ್ತು ಅದರ ಗಂಡಾಂತರವನ್ನು ಆದಷ್ಟು ಕಡಿಮೆಗೊಳಿಸಲು ಬಯಸುವವರು, ತಮ್ಮ ರಕ್ತದ ಕೊಲೆಸ್ಟರೊಲ್ನ್ನು ಸುರಕ್ಷಿತ ಮಟ್ಟದಲ್ಲಿಡುವುದರಿಂದ ಒಳಿತನ್ನು ಮಾಡುವರು.
ರಕ್ಷಣೆಯ ಮೊದಲ ಸಾಲಿನಲ್ಲಿ ಸಾಮಾನ್ಯವಾಗಿ ಕೊಲೆಸ್ಟರೊಲ್—ಇದು ಮಾಂಸದಲ್ಲಿ, ಮೊಟ್ಟೆಯಲ್ಲಿ ಮತ್ತು ಕ್ಷೀರ ಉತ್ಪಾದನೆಗಳಂತಹ ಎಲ್ಲಾ ಪ್ರಾಣಿ ಆಹಾರದಲ್ಲಿ ಇರುತ್ತದೆ, ಆದರೆ ಸಸ್ಯ ಆಹಾರದಲ್ಲಿರುವುದಿಲ್ಲ—ಕಡಿಮೆಯಿರುವ ಆಹಾರ ಪದ್ಧತಿಯನ್ನು ಶಿಫಾರಸು ಮಾಡಲಾಗಿದೆ. ಆದಾಗ್ಯೂ ಇತ್ತೀಚೆಗಿನ ಅಧ್ಯಯನಗಳಲ್ಲಿ ಕಂಡು ಬಂದದ್ದೇನಂದರೆ ಒಬ್ಬನ ರಕ್ತದಲ್ಲಿನ ಕೊಲೆಸ್ಟರೊಲ್ ಮಟ್ಟದ ಮೇಲೆ ಕೇವಲ ಕೊಲೆಸ್ಟರೊಲ್ ತುಂಬಿದ ಆಹಾರವನ್ನು ತಿಂದರೆ ಮಿತ ಪರಿಣಾಮವುಂಟಾಗುವುದು. ಆದರೆ ಆಹಾರದಲ್ಲಿ ಪೂರಣವಾಗಿರುವ ಕೊಬ್ಬು (ಪ್ರಾಣಿಗಳ ಕೊಬ್ಬು, ಚಿಕ್ಕದ್ದು ಮಾಡಿದ ತರಕಾರಿ, ತಾಳೆ ಮತ್ತು ತೆಂಗಿನೆಣ್ಣೆಗಳು) ಹೆಚ್ಚಿನ ಜನರಲ್ಲಿ ರಕ್ತದ ಕೊಲೆಸ್ಟರೊಲ್ ಗಮನಾರ್ಹವಾಗಿ ಏರುತ್ತದೆ. ಆದ ಕಾರಣ ಈಗ ಒತ್ತಿ ಹೇಳುವುದು ‘ಕೊಬ್ಬನ್ನು ಕಡಿಮೆ ಮಾಡಿರಿ’. ಕಡಿಮೆ ಮತ್ತು ತೆಳು ಮಾಂಸವನ್ನು ತಿನ್ನಿರಿ, ತೋರುವ ಕೊಬ್ಬನ್ನು ತೆಗೆಯಿರಿ, ಕೋಳಿಯ ಚರ್ಮವನ್ನು ಸುಲಿಯಿರಿ ಮತ್ತು ಮೊಟ್ಟೆಯ ಹಳದಿ ಭಾಗ, ಪೂರ್ಣ ಮಿಶ್ರ ಮಾಡದ ಹಾಲು, ಗಟ್ಟಿ ಮಾಡಿದ ಚೀಸ್ ಮತ್ತು ತಾಳೆ ಯಾ ತೆಂಗಿನೆಣ್ಣೆಯಿರುವ ಸಂಸ್ಕರಿಸಲ್ಪಟ್ಟ ಆಹಾರಗಳನ್ನು ಉಪಯೋಗಿಸುವುದನ್ನು ಮಿತಗೊಳಿಸಿರಿ.
ಪೂರಣಗೊಂಡಿರುವ ಕೊಬ್ಬುಗಳಿಗೆ ರಕ್ತದ ಕೊಲೆಸ್ಟರೊಲ್ ಮಟ್ಟವನ್ನು ಹೆಚ್ಚಿಸುವ ಪ್ರವೃತ್ತಿಯಿರುವುದಾದರೆ, ಅಪೂರಣಗೊಂಡಿರುವ ದ್ರವ್ಯ ಎಣ್ಣೆಗಳಿಗೆ (ಒಲಿವ್, ಸೊಯಾಬಿನ್, ಕುಸುಂಬೆ ಹೂವು, ಧಾನ್ಯ ಮತ್ತು ಇತರ ತರಕಾರೀ ಎಣ್ಣೆಗಳು), ಕೊಬ್ಬಿರುವ ಮೀನುಗಳು ಮತ್ತು ಚಿಪ್ಪುಮೀನು ಇದಕ್ಕೆ ತದ್ವಿರುದ್ಧವಾಗಿ ಕ್ರಿಯೆ ಗೈಯುತ್ತವೆ. ಇದರಲ್ಲಿ ಕೆಲವು ಒಳ್ಳೆಯ ಕೊಲೆಸ್ಟರೊಲ್ನ—ಎಚ್ಡಿಎಲ್ (ದಪ್ಪಗಾಗಿರುವ ಲಿಪೊಪ್ರೋಟಿನ್)ನ ಮೊತ್ತವನ್ನು ಏರಿಸಲು ಸಹಾಯ ಕೂಡಾ ಮಾಡ ಬಹುದು, ಇಲ್ಲವೇ ರಕ್ತದಲ್ಲಲಿನ್ಲ ಕೇಡು ಮಾಡುವ ಕೊಲೆಸ್ಟರೊಲ್ನ್ನು, ಎಲ್ಡಿಎಲ್ (ತೆಳ್ಳಗಾಗಿರುವ ಲಿಪೊಪ್ರೋಟಿನ್) ಕಡಿಮೆಗೊಳಿಸಲು ಬಹುದು.
ಹೆಚ್ಚು ನಾರುಪದಾರ್ಥವನ್ನು ತಿನ್ನಿರಿ
ಕೊಬ್ಬನ್ನು ಕಡಿಮೆಗೊಳಿಸುವುದು ಕಥೆಯ ಕೇವಲ ಒಂದು ಭಾಗ. ನಯವಾಗಿ ಪುಡಿಮಾಡಿದ ಮತ್ತು ಸಂಸ್ಕರಿಸಲ್ಪಟ್ಟ ಆಹಾರಗಳು—ಬಿಳಿ ಹಿಟ್ಟು, ಸಕ್ಕರೆ, ರಾಸಾಯನಿಕ ಮಿಶ್ರಣಗಳು ಮತ್ತು ಇತ್ಯಾದಿ—ಇವುಗಳಲ್ಲಿ ನಾರು ಪದಾರ್ಥ ಪೂರ್ಣವಾಗಿ ಏನೂ ಇರುವುದಿಲ್ಲ. ಅದರ ಫಲಿತಾಂಶವಾಗಿ ನಾಗರೀಕತೆಯ ರೋಗಗಳು: ಮಲಬದ್ಧತೆ, ಮೂಲವ್ಯಾಧಿ, ಅಂತ್ರವೃದ್ಧಿ, ಡೈವರ್ಟಿಕುಲೊಸಿಸ್, ಕೊಲೊರೆಕಲ್ಟ್ ಕ್ಯಾನ್ಸರ್, ಮಧುಮೇಹ ರೋಗ, ಹೃದ್ರೋಗ ಮತ್ತು ಇತರ ರೋಗಗಳು. “ಕಡಿಮೆ ನಾರು ಪದಾರ್ಥವಿರುವ ಆಹಾರ ಸೇವಿಸುವವರು ಹೆಚ್ಚು ಅಂತಹ ಆಹಾರ ಸೇವಿಸುವವರಿಗಿಂತ ಮೂರು ಪಟ್ಟು ಸಾಯುವ ಗಂಡಾಂತರದಲ್ಲಿರುತ್ತಾರೆ,” ಎಂದು ಲಾನ್ಸೆಟ್ನಲ್ಲಿ ಒಂದು ವರದಿ ಹೇಳುತ್ತದೆ.
ನಾರು ಪದಾರ್ಥದ ಆಹಾರ ಎರಡು ವಿಧದಲ್ಲಿ ತನ್ನ ಪಾತ್ರವನ್ನು ಆಡುತ್ತದೆ. ನಮ್ಮ ಜೀರ್ಣಾಂಗಗಳ ಮೂಲಕ ಅದು ಹಾದುಹೋಗುವಾಗ ನೀರನ್ನು ಹೀರಿ ಕೊಳ್ಳುತ್ತದೆ, ಮತ್ತು ನಮ್ಮ ಜೀರ್ಣಾಂಗದ ಪಥದಿಂದ ಬಲು ಬೇಗನೇ ಹಾದು ಹೋಗುತ್ತದೆ. ಆರೋಗ್ಯದ ತಜ್ಞರು ಎಣಿಸುವುದೇನಂದರೆ ಅದು ಹಾಗೆ ಹೋಗುವಾಗ ಹಾನಿಕರ ವಸ್ತುಗಳನ್ನು ಕೊಂಡೊಯ್ಯುತ್ತವೆ ಮತ್ತು ಅವುಗಳನ್ನು ಶರೀರದಿಂದ ಹೊರಗೆ ಹಾಕುವುದನ್ನು ತೀವ್ರಗೊಳಿಸುತ್ತದೆ. ಕೆಲವು ಕರಗುವ ನಾರುಗಳು ಸಕ್ಕರೆ ಮತ್ತು ಎಲ್ಡಿಎಲ್ ಕೊಲೆಸ್ಟರೊಲ್ನ ಮಟ್ಟವನ್ನು ರಕ್ತದಲ್ಲಿ ಕಾಪಿಡುವುದನ್ನು ಕಾಣಲಾಗಿದೆ—ಇದು ಮಧುಮೇಹಿ ರೋಗಿಗಳಿಗೆ ಒಂದು ವರವಾಗಿದೆ.
ನಾರು ಪದಾರ್ಥದ ಈ ಜ್ಞಾನದಿಂದ ನಿಮಗೇನು ಪ್ರಯೋಜನವಾಗಬಹುದು? ಸಾಧ್ಯವಿದ್ದರೆ ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿ ಮತ್ತು ಪೂರ್ಣ ಕಾಳಿನ ಉತ್ಪಾದನೆಗಳನ್ನು ಪ್ರಮಾಣಕ್ಕನುಸಾರವಾಗಿ ಹೆಚ್ಚಿಸಿರಿ. ಬಿಳಿಯಿಂದ ಪೂರ್ಣ ಗೋದಿಗೆ ಮತ್ತು ಪೂರ್ಣ ಕಾಳಿನ ಧಾನ್ಯಗಳನ್ನು ಬೆಳಗ್ಗಿನ ಉಪಹಾರಕ್ಕೆ ಬಳಸಿರಿ. ತರಕಾರಿ ಕಾಯಿಬೀಜಗಳು ನಾರು ಪದಾರ್ಥದ ಅತಿ ಉತ್ತಮ ಉಗಮ. ಮತ್ತು ಪಿಷ್ಟದಲ್ಲಿ—ಬಟಾಟೆ ಮತ್ತು ಅನ್ನ—ಕ್ಯಾನ್ಸರ್ ನಿರೋಧಕ ಘಟಕಗಳಿರುತ್ತವೆ.
ನಿಮ್ಮ ಆರೋಗ್ಯವನ್ನು ಬಾಧಿಸುವ ನಿಮ್ಮ ಆಹಾರ ಕ್ರಮದ ಇತರ ಅನೇಕ ವಿಚಾರಗಳು ಖಂಡಿತವಾಗಿಯೂ ಇವೆ. ಆದಾಗ್ಯೂ, ತೀವ್ರವಾಗಿ ಜನರ ಆಹಾರ ಕ್ರಮದಲ್ಲಿ ಕೊಬ್ಬನ್ನು ಕಡಿಮೆಗೊಳಿಸುವುದು ಮತ್ತು ನಾರು ಪದಾರ್ಥಗಳನ್ನು ಅಧಿಕಗೊಳಿಸುವುದು ಅತೀ ಪ್ರಮುಖ ವಿಚಾರಗಳಾಗಿವೆ.
[ಪುಟ 10ರಲ್ಲಿರುವಚೌಕ]
ವ್ಯಾಯಾಮ, ದೇಹದಾರ್ಢ್ಯ ಮತ್ತು ಆರೋಗ್ಯ
ಸುಮಾರು 17,000 ಮಂದಿಯ 40 ವರ್ಷಗಳ ಅಧ್ಯಯನವು, ವಾರಕ್ಕೆ ಒಂದು ಯಾ ಎರಡು ತಾಸುಗಳಷ್ಟು ಕಡಿಮೆ ವ್ಯಾಯಾಮ ಮಾಡಿದವರು (ಸುಮಾರು 500 ಕ್ಯಾಲರಿಗಳನ್ನು ಉಪಯೋಗಿಸಿದವರು) ಸಾಯುವುದರಲ್ಲಿ ಶೇಕಡಾ 15ರಿಂದ 20ರಷ್ಟು ವ್ಯಾಯಾಮ ಮಾಡದವರಿಗಿಂತ ಇಳಿತವಿರುವುದನ್ನು ಕಂಡು ಕೊಂಡಿದೆ. ಕಠಿಣವಾಗಿ ವ್ಯಾಯಾಮ ಮಾಡಿದವರಲ್ಲಿ (ಸುಮಾರು 2,000ದಷ್ಟು ಕ್ಯಾಲರಿಗಳನ್ನು ಉಪಯೋಗಿಸುವವರು) ಮರಣದ ವೇಗವು ಮೂರನೆಯ ಒಂದು ಪಾಲು ಕಡಿಮೆ. ಬೇರೆ ಅಧ್ಯಯನಗಳು ಕೂಡಾ ಅದೇ ತೀರ್ಮಾನಕ್ಕೆ ಬಂದಿವೆ: ಕ್ರಮವಾದ ವ್ಯಾಯಾಮವು ಅಧಿಕ ರಕ್ತದ ಒತ್ತಡದ, ರಕ್ತನಾಳಗಳ ಹೃದ್ರೋಗದ, ಮತ್ತು ಪ್ರಾಯಶಃ ಕ್ಯಾನ್ಸರಿನ ಗಂಡಾಂತರಗಳನ್ನು ಕಡಿಮೆಗೊಳಿಸುತ್ತದೆ. ಕ್ರಮದ ವ್ಯಾಯಾಮವು ಹೆಚ್ಚು ತೂಕದ, ಕನಿಷ್ಟ ಸ್ವ-ಗೌರವದ, ಬಿಗುಪುತನದ, ಉದ್ವೇಗದ, ಮತ್ತು ಹತಾಶೆಯ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ.
ಕ್ರಮದ ವ್ಯಾಯಾಮವು ಇದೆಲ್ಲಾವನ್ನು ಮಾಡಲು ಕಾರಣವೇನಾಗಿರ ಬಹುದೆಂದರೆ ಅದು ವ್ಯಕ್ತಿಯೊಬ್ಬನ ದೈಹಿಕ ಸಾಮರ್ಥ್ಯವನ್ನು ಮತ್ತು ಸಹಿಷ್ಣುತೆಯನ್ನು ಏರಿಸುತ್ತದೆ. ಇನ್ನೊಂದು ಮಾತಿನಲ್ಲಿ, ಕ್ರಮದ ವ್ಯಾಯಾಮವು ಒಬ್ಬನನ್ನು ದೇಹದಾರ್ಢ್ಯತೆಯುಳ್ಳವನಾಗಿ ಮಾಡುತ್ತದೆ. ದೇಹದಾರ್ಢ್ಯತೆಯು ಒಳ್ಳೆಯ ಆರೋಗ್ಯದ ಖಾತರಿಯನ್ನು ಕೊಡದಿರುವುದಾದರೂ, ದೈಹಿಕವಾಗಿ ದಾರ್ಢ್ಯತೆಯುಳ್ಳ ವ್ಯಕ್ತಿಯ ಶರೀರ ರೋಗಗಳಿಗೆ ತುತ್ತಾಗುವುದು ಬಹಳ ವಿರಳ. ಒಂದು ವೇಳೆ ರೋಗ ಬಂದರೂ, ಗುಣಮುಖನಾಗುವುದು ಬಲುಬೇಗ. ದೇಹ ದಾರ್ಢ್ಯತೆಯು ಒಬ್ಬನ ಮಾನಸಿಕ ಮತ್ತು ಭಾವನಾತ್ಮಕ ಯೋಗ ಕ್ಷೇಮಕ್ಕೆ ನೆರವಾಗ ಬಹುದು ಹಾಗೂ ಮುದಿತನದ ಪರಿಣಾಮಗಳನ್ನು ನಿಧಾನಿಸ ಬಹುದು.
ಯಾವುದು ಮತ್ತು ಎಷ್ಟು?
ವ್ಯಾಯಾಮದ ಕುರಿತಾದ ಸಾಮಾನ್ಯ ಪ್ರಶ್ನೆಗಳು, ಯಾವ ವಿಧದ ವ್ಯಾಯಾಮಗಳು ಮತ್ತು ಎಷ್ಟು? ಇದು ಒಬ್ಬನು ಏನನ್ನು ಪೂರೈಸಲು ಬಯಸುತ್ತಾನೆಂಬುದರ ಮೇಲೆ ನಿಜವಾಗಿ ಆತುಕೊಂಡಿದೆ. ಒಬ್ಬ ಒಲಿಂಪಿಕ್ ಕ್ರೀಡಾಳು ದೇಹ ದಾರ್ಢ್ಯತೆಯನ್ನು ಕಾಪಾಡ ಬೇಕಾದರೆ ದೀರ್ಘಕಾಲ ಮತ್ತು ಕಠಿಣವಾಗಿ ತರಬೇತಿ ಮಾಡಬೇಕು. ಹೆಚ್ಚಿನ ಜನರಿಗೆ, ತೂಕ ಇಳಿಸುವುದು, ದೇಹಾಕೃತಿ ರೂಪಿಸಿಕೊಳ್ಳುವುದು, ಅಧಿಕ ಆರೋಗ್ಯದಲ್ಲಿ ಆನಂದಿಸುವುದು ಇಲ್ಲವೇ ಕೇವಲ ಹಿತಭಾವನೆಯುಳ್ಳವನಾಗಿ ಇರುವುದು ಧ್ಯೇಯವಾಗಿ ಇರಬಹುದು. ಅವರಿಗೆ, ಅನೇಕ ಆರೋಗ್ಯ ತಜ್ಞರು ಸಹಮತಿಸುವಂತೆ, ದೇಹ ದಾರ್ಢ್ಯತೆಯನ್ನು ಉಳಿಸಿಕೊಳ್ಳಲು ವಾರಕ್ಕೆ ಮೂರು ಬಾರಿ 20ರಿಂದ 30 ನಿಮಿಷಗಳಷ್ಟು ವ್ಯಾಯಾಮ ಮಾಡಿದರೆ ಸಾಕು. ಆದರೆ ಯಾವ ವಿಧದ ವ್ಯಾಯಾಮ?
ದೇಹದಾರ್ಢ್ಯತೆಯಲ್ಲಿ ಒಬ್ಬನ ಶಾರೀರಿಕ ಸಾಮರ್ಥ್ಯ, ವಯಸ್ಸು ಮತ್ತು ಸಹಿಷ್ಣುತೆಯು ಒಳಗೂಡಿದೆ, ಆ ಮೂಲಕ ಒಬ್ಬನ ಹೃದಯ ಬಡಿತದ ಮತ್ತು ಉಸಿರಾಟದ ಗತಿಯನ್ನು ಕೆಲಸ ಮಾಡುವಾಗ ಏರಿಸುವುದೇ ವ್ಯಾಯಾಮದ ಗುರಿಯಾಗಿರ ಬೇಕು. ಇದನ್ನು ಸಾಮಾನ್ಯವಾಗಿ ಎರೊಬಿಕ್ (ಆಮ್ಲಜನಕ ಸೇವನೆಯ) ವ್ಯಾಯಾಮಗಳೆಂದು ಕರೆಯಲ್ಪಡುತ್ತವೆ. ಓಡುವುದು, ತೀವ್ರವಾಗಿ ನಡೆಯುವುದು, ಎರೊಬಿಕ್ ನರ್ತನ, ಹಗ್ಗ ಹಿಡಿದು ಕುಪ್ಪಳಿಸುವುದು, ಈಜುವುದು ಮತ್ತು ಸೈಕಲ್ ತುಳಿಯುವುದು ಎರೊಬಿಕ್ ವ್ಯಾಯಾಮಗಳ ಸಾಮಾನ್ಯ ವಿಧಾನಗಳು, ಅನುಕೂಲತೆಯ, ಸವಲತ್ತುಗಳ ಮತ್ತು ಸಾಧನಗಳ ಬೆಲೆ, ದೇಹಹಾನಿಯಾಗುವ ಸಾಧ್ಯತೆ, ಮತ್ತು ಇತ್ಯಾದಿ ಇವೆಲ್ಲಾವುಗಳ ನೋಟದಲ್ಲಿ ಪ್ರತಿಯೊಂದಕ್ಕೆ ಅದರದ್ದೇ ಅನುಕೂಲತೆಗಳು ಮತ್ತು ಅನಾನುಕೂಲತೆಗಳು ಇರುತ್ತವೆ.
ಇತರ ವಿಧದ ವ್ಯಾಯಾಮಗಳು ಸ್ನಾಯುಗಳನ್ನು ಮತ್ತು ಶರೀರದ ಆಕೃತಿಯನ್ನು ಬಲಗೊಳಿಸುತ್ತವೆ. ಇವುಗಳಲ್ಲಿ ಯಂತ್ರಗಳ ಮತ್ತು ಭಾರ ಎತ್ತುವ ಸಾಧನೆಗಳ ವ್ಯಾಯಾಮಗಳಿರುತ್ತವೆ. ಅಂತಹ ವ್ಯಾಯಾಮಗಳು ಒಬ್ಬನ ಶಾರೀರಿಕ ಬಲವನ್ನು ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತವೆ ಮತ್ತು ಒಬ್ಬನ ಹಾವಭಾವ ಮತ್ತು ತೋರಿಸುವಿಕೆಯನ್ನು ಕೂಡಾ ಪ್ರಗತಿಗೊಳಿಸ ಬಹುದು—ಇವೆಲ್ಲಾವು ಒಳ್ಳೆಯ ದೇಹ ದಾರ್ಢ್ಯತೆಯನ್ನು ಗಳಿಸುವ ಯತ್ನಗಳಾಗಿವೆ.
ನಮ್ಮ ಶಾಲೆಯ ದಿನಗಳ ಅಂಗಸಾಧನೆಯ ವ್ಯಾಯಾಮಗಳ ಕುರಿತೇನು? ಆ ಸಮಯದಲ್ಲಿ ನಾವದನ್ನು ಮೆಚ್ಚಿದ್ದೇವೋ ಇಲ್ಲವೋ, ಏನೇ ಇರಲಿ ಅವು ನಮಗೆ ಬಹಳಷ್ಟು ಒಳಿತನ್ನು ಮಾಡಿವೆ. ದೇಹದ ಚಾಚುವಿಕೆ, ತಿರುಗುವಿಕೆ ಮತ್ತು ತಿರುಚುವುದು ದೇಹವನ್ನು ಮಣಿಸುತ್ತದೆ. ಹಾರುವುದು ಮತ್ತು ಒದೆಯುವುದು ಹೃದಯದ ಬಡಿತವನ್ನು ತೀವ್ರಗೊಳಿಸುತ್ತದೆ. ಕೆಳಕ್ಕೆ ಕುಳಿತು ಕೊಳ್ಳುವುದು, ಮೇಲಕ್ಕೆ ದೂಡುವುದು ಮತ್ತು ಗದ್ದವನ್ನು ಮೇಲಕ್ಕೆ ಮಾಡಿ ವ್ಯಾಯಾಮ ಮಾಡುವುದು ಸ್ನಾಯುಗಳನ್ನು ಬಲಗೊಳಿಸುತ್ತದೆ. ಈ ರೀತಿ ಚಾಚಿಕೊಳ್ಳುವ ವ್ಯಾಯಾಮಗಳ ಪ್ರಯೋಜನವೇನಂದರೆ ವಯಸ್ಸಾದಷ್ಟಕ್ಕೆ ಒಬ್ಬನ ದೇಹವು ಮಣಿಯುವಂತಾಗಿದ್ದು, ಚಟುವಟಿಕೆಯುಳ್ಳವನಾಗಿ ಇರಲು ಸಾಧ್ಯ ಮಾಡುತ್ತದೆ.
ಕೊನೆಯಲ್ಲಿ, ವಿನೋದವನ್ನು ಉಂಟು ಮಾಡುವ ಕ್ರೀಡೆಗಳಿವೆ—ಟೆನಿಸ್, ರ್ಯಾಕೆಟ್ ಚೆಂಡು, ಮೃದು ಚೆಂಡು, ನೀರ್ಗಲ್ಲಿನ ಮೇಲೆ ಜಾರಾಟ ಮತ್ತು ಅನೇಕ ಚಟುವಟಿಕೆಗಳು. ಇಂತಹ ಕ್ರೀಡೆಗಳಲ್ಲಿ ಹೆಚ್ಚು ಪ್ರಯೋಜನವೆಂದರೆ ಏಕರೀತಿಯ ವ್ಯಾಯಾಮಗಳಿಗಿಂತ ಇವು ಹೆಚ್ಚು ವಿನೋದಕರ ಮತ್ತು ವ್ಯಾಯಾಮವನ್ನು ಕ್ರಮವಾಗಿ ವ್ಯಕ್ತಿಯೊಬ್ಬನು ಮಾಡಲು ಬೇಕಾದ ಒಂದು ವಿಚಾರ ಅಲ್ಲಿದೆ. ಎಷ್ಟೊಂದು ನಿಪುಣತೆಯಿಂದ ಮತ್ತು ದುಡಿಸಿ ಕೊಂಡು ಒಬ್ಬನು ಇದರ ಬೆನ್ನಟ್ಟುತ್ತಾನೆಂಬುದರ ಮೇಲೆ ಇತರ ವ್ಯಾಯಾಮಗಳಿಂದಾಗುವಷ್ಟು ಶ್ರಮವನ್ನು ಒದಗಿಸುತ್ತವೋ ಇಲ್ಲವೋ ಎಂಬದು ಹೊಂದಿಕೊಂಡಿದೆ. ಹೇಗಿದ್ದರೂ, ಅವು ದೇಹವನ್ನು ಯೋಗ್ಯ ಸ್ಥಿತಿಗೆ ತರಲು, ಸಹಜೋಡಣೆಯಲ್ಲಿ ಪ್ರಗತಿಸಲು ಮತ್ತು ಮಣಿಯುವಿಕೆ ಮತ್ತು ಚುರುಕುತನವನ್ನು ವರ್ಧಿಸಲು ಸಹಾಯ ಮಾಡುವವು.
ಆರಿಸಲು ಅಷ್ಟೊಂದು ವಿಧದ ವ್ಯಾಯಾಮಗಳು ಇರುವಾಗ, ಯಶಸ್ಸಿನ ಗುಟ್ಟು ಇರುವುದು, ನೀವು ಆನಂದಿಸಬಹುದಾದ ಯಾವುದಾದರೂ ಒಂದು ಯಾ ಅವುಗಳಲ್ಲಿ ಕೆಲವನ್ನು ಸೇರಿಸಿ ಮಾಡುವುದು. ಇದು ನಿಮ್ಮ ಉದ್ದೇಶಗಳಿಗೆ ಅಂಟಿ ಕೊಂಡಿರಲು ಸಾಧ್ಯವಾಗುತ್ತದೆ, ವ್ಯಾಯಾಮ ಆರಂಭಿಸುವ ಪ್ರಾಯಸ್ಥರಲ್ಲಿ 60ರಿಂದ 70 ಶೇಕಡಾ ಒಂದು ಯಾ ತದನಂತರ ತ್ಯಜಿಸುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ. ಎಷ್ಟು ವ್ಯಾಯಾಮ ಮಾಡುತ್ತೀರೆಂಬದು ಮುಖ್ಯವಲ್ಲ ಅದರ ಕ್ರಮಬದ್ಧತೆಯು ಮುಖ್ಯ ಎಂದು ನೆನಪಿನಲ್ಲಿಡಿರಿ. ಬೇರೆ ಬೇರೆ ಸಮಯಗಳಲ್ಲಿ ವಿವಿಧ ರೀತಿಯ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನೀವು ನಿಮ್ಮ ದೇಹಕ್ಕೆ ಸಮಗ್ರ ರೀತಿಯ ಬೆಳವಣಿಗೆಯನ್ನು ಕೊಡುತ್ತೀರಿ, ಹೀಗೆ ಸಮತೂಕದಲ್ಲಿ ದೇಹದಾರ್ಢ್ಯತೆಯನ್ನು ಬೆಳಸುತ್ತೀರಿ.
ನೀವು ಆರಿಸುವ ಚಟುವಟಿಕೆಯು ನಿಮ್ಮ ಪ್ರಾಯ ಮತ್ತು ನಿಮ್ಮ ಮೊದಲ ಆರೋಗ್ಯದ ಮೇಲೆ ನಿರ್ಣಯಿಸಲ್ಪಡಬೇಕು. ಒಂದು ವ್ಯಾಯಾಮದ ಕಾರ್ಯಕ್ರಮದಲ್ಲಿ ಒಬ್ಬನು ಆರಂಭಿಸುವ ಮೊದಲು, ಆರೋಗ್ಯದ ಸಮಸ್ಯೆಯಿದ್ದವರು ಅವರ ವೈದ್ಯರನ್ನು ಭೇಟಿಯಾಗತಕ್ಕದ್ದು. ಏನೇ ಇರಲಿ, ನಿಧಾನವಾಗಿ ಆರಂಭಿಸಿರಿ, ಮತ್ತು ಪ್ರಗತಿ ಮಾಡಿದಷ್ಟಕ್ಕೆ ಹೆಚ್ಚಿಸಿರಿ. ನೀವು ಆರಿಸುವ ವ್ಯಾಯಾಮದ ವಿಧಗಳನ್ನು ಕಲಿಯಿರಿ—ಈ ವಿಷಯದ ಮೇಲೆ ಪುಸ್ತಕಗಳ ಮತ್ತು ಮಾರ್ಗದರ್ಶನೆಗಳ ಕೊರತೆಯೇನೂ ಇಲ್ಲ—ಮತ್ತು ನಿಮ್ಮ ಪ್ರಯತ್ನಗಳಿಂದ ಆನಂದ ಮತ್ತು ಪ್ರಯೋಜನವನ್ನು ಪಡೆಯುವಿರಿ.
[ಪುಟ 12ರಲ್ಲಿರುವಚೌಕ]
ಧೂಮಪಾನದ ಬೆಲೆ
◻ ಪರಿಸರದಲ್ಲಿರುವ ಬೇರೆ ಯಾವುದೇ ವಿಷಕಾರೀ ವಸ್ತುಗಿಂತ ಪ್ರಾಯಸ್ಥರಲ್ಲಿ ತಂಬಾಕು ಅತಿ ಹೆಚ್ಚು ಸಂಕಟ ಮತ್ತು ಮರಣಕ್ಕೆ ಕಾರಣವಾಗಿದೆ.
◻ ಪ್ರತಿವರ್ಷ ಲೋಕವ್ಯಾಪಕವಾಗಿ ಜೀವಗಳನ್ನು ಆಹುತಿ ತೆಗೆದುಕೊಳ್ಳುವುದು ಸುಮಾರು 25 ಲಕ್ಷಕ್ಕೆ ಹತ್ತರಿಸಿದೆ, ಇದು ಎಲ್ಲಾ ಮರಣಗಳ ಶೇಕಡಾ 5ರಷ್ಟು ಆಗುತ್ತದೆ.
◻ ಆರ್ಥಿಕ ನಷ್ಟದೊಂದಿಗೆ ಆರೋಗ್ಯದ ವೆಚ್ಚ (ಅಮೆರಿಕದಲ್ಲಿ) 38 ಸಾವಿರ ಮಿಲಿಯದಿಂದ 95 ಸಾವಿರ ಮಿಲಿಯ ಡಾಲರುಗಳಷ್ಟು ಇಲ್ಲವೇ ಪ್ರತಿಯೊಂದು ಪ್ಯಾಕಿಗೆ 1.25ರಿಂದ 3.15 ಡಾಲರುಗಳಾಗುತ್ತದೆ. ಇದರಲ್ಲಿ ತಂಬಾಕುವಿನ ಬೆಲೆ ಸೇರಿಲ್ಲ—ಅದು ತಾನೇ ಪ್ರತಿ ವರ್ಷಕ್ಕೆ 30 ಸಾವಿರ ಮಿಲಿಯ ಡಾಲರುಗಳಾಗುತ್ತವೆ.
◻ ಅನಾಸಕ್ತ ಸೇದುವವರು ಪ್ರಾಯಶಃ ಶ್ವಾಸಕೋಶದ ಕ್ಯಾನ್ಸರಿನಿಂದ ಸಾಯುವವರಿಗಿಂತ ಮೂರು ಪಟ್ಟು ಹೆಚ್ಚಾಗ ಬಹುದು ಯಾಕಂದರೆ ಅವರು ಧೂಮಪಾನದ ಹೊಗೆಗೆ ತುತ್ತಾಗದಿರುತ್ತಿದ್ದರೆ, ಅವರು ಇದ್ದಂತೆ ಇರುತ್ತಿದ್ದರು.
◻ ತಾಯಂದಿರು ಧೂಮಪಾನ ಮಾಡುವುದರಿಂದ ಅವರ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯಗಳಲ್ಲಿ ಕುಂಠಿತಗೊಳ್ಳಬಹುದು ಮತ್ತು ಹಲವಾರು ದೇಶಗಳಲ್ಲಿ ಐದನೆಯ ಒಂದು ಭಾಗದಷ್ಟು ಮಕ್ಕಳು ಈ ರೀತಿಯಲ್ಲಿ ಧೂಮಪಾನದ ಹೊಗೆಗೆ ತುತ್ತಾಗಿರುತ್ತಾರೆ.