ಯಂಗ್ ಪೀಪಲ್ ಆಸ್ಕ್ ಎಂಬ ಪುಸ್ತಕಕ್ಕೆ ವಾಚಕರ ಪ್ರತಿಕ್ರಿಯೆ
ಕೆಲವರು ಇದರಲ್ಲಿ ತಮಗೆನೋ ಫಜೀತಿಯಿದೆ ಎಂದೆಣಿಸಿದರು. ಶೆರೀಡ ಎಂಬ 15 ವಯಸ್ಸಿನ ಹುಡುಗಿ, “ಇವರೇನೋ ನಮ್ಮ ನಡತೆಯ ವಿಷಯ ಬುದ್ಧಿಹೇಳಲಿಕ್ಕಿದ್ದಾರೆ” ಎಂದೆಣಿಸಿದಳು. ಇತರರು ತುಸು ಹೆದರಿದರು. ಹತ್ತು ವಯಸ್ಸಿನ ತಿಮೊಥಿ ಎಂಬ ಬ್ರಿಟಿಷ್ ಹುಡುಗ ನೆನಪಿಸುವುದು: “ನನ್ನ ಅಮ್ಮ, ಅಪ್ಪರಿಂದ ನಾನು ಪ್ರತ್ಯೇಕ ಕುಳಿತುಕೊಳ್ಳಬೇಕೆಂದು ತಿಳಿದು ಬಂದಾಗ ನನಗೆ ಹೋಗಲು ಮನಸ್ಸಾಗಲಿಲ್ಲ.”
ಈ ಕಳವಳಕ್ಕೆ ಕಾರಣ? ಯೆಹೋವನ ಸಾಕ್ಷಿಗಳ 1989ರ “ದಿವ್ಯ ಭಕ್ತಿ” ಜಿಲ್ಲಾ ಸಮ್ಮೇಳನಗಳಲ್ಲಿa ಶುಕ್ರವಾರ ಬೆಳಿಗ್ಗೆ ಮಾಡಲ್ಪಟ್ಟ ಒಂದು ಪ್ರಕಟನೆ. 10ರಿಂದ 19 ವಯಸ್ಸಿನ ಯುವಜನರು ಕಾದಿರಿಸಲ್ಪಟ್ಟ ಸ್ಥಳದಲ್ಲಿ ಕೂತುಕೊಳ್ಳಬೇಕೆಂದು ಅದು ಹೇಳಿತು. ಆದರೆ, ಕ್ವೆಶ್ಚನ್ಸ್ ಯಂಗ್ ಪೀಪ್ಲ್ ಆಸ್ಕ್—ಆನ್ಸರ್ಸ್ ದೆಟ್ ವರ್ಕ್ ಎಂಬ ಪುಸ್ತಕ ಬಿಡುಗಡೆಯಾಗಿ ನೆರೆದಿದ್ದ ಯುವಜನರಿಗೆ ಉಚಿತವಾಗಿ ಕೊಡಲ್ಪಟ್ಟಾಗ ಇದ್ದ ಭಯವೆಲ್ಲ ಹೋಗಿಬಿಟ್ಟಿತು. ಅವರ ಪ್ರತಿಕ್ರಿಯೆ?
“ನನಗೆ ಮಾತೇ ಹೊರಡಲಿಲ್ಲ; ಕಣ್ಣೀರು ಸುರಿಯಿತು.”—ಮೈಕ್.
“ಪುಸ್ತಕದಲ್ಲಿರುವ ಆಶ್ಚರ್ಯಕರವಾದ ಮಾಹಿತಿಯನ್ನು ಕಂಡು ನನಗೆ ಕಣ್ಣೀರು ಬಂತು. ಅದು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಬಂದ ಕೊಡುಗೆ ಎಂಬ ನಿಜತ್ವವೇ ಅವರಿಗೆ ನಮ್ಮ ವಿಷಯ ಎಷ್ಟು ಚಿಂತೆಯಿದೆಯೆಂಬುದಕ್ಕೆ ಮಾದರಿ.”—ಹದಿನೆಂಟು ವಯಸ್ಸಿನ ಮಾರ್ಜಿ.
ಯಾರ ತಂದೆ ಇತ್ತೀಚೆಗೆ ಸತ್ತಿದ್ದನೊ ಆ ಹತ್ತು ವಯಸ್ಸಿನ ನವೊಮಿ ಪುಸ್ತಕವನ್ನು ವಿಶೇಷವಾಗಿ ಗಣ್ಯ ಮಾಡಿದಳು. ಅವಳು ಜ್ಞಾಪಿಸಿಕೊಳ್ಳುವುದು:
“ಇದು, ಅಪ್ಪನಿಲ್ಲದೆ ನಾವು ಹೋದ ಪ್ರಥಮ ದೊಡ್ಡ ಎಸೆಂಬ್ಲಿ. ಮೊದಲನೆಯ ದಿನ ನಾನು ತುಂಬ ದುಃಖಿತಳಾಗಿದ್ದೆ. ಆದರೆ, ನಮ್ಮ ಸಹೋದರರು ಮತ್ತು ನಮ್ಮ ಸ್ವರ್ಗೀಯ ಪಿತನಾದ ಯೆಹೋವನು, ನಮ್ಮ ಅಪ್ಪ ನೂತನ ಲೋಕದಲ್ಲಿ ಹಿಂದೆ ಬರುವ ತನಕ ನಮ್ಮನ್ನು ಪರಾಮರಿಸುತ್ತಿದ್ದಾರೆಂದು ತಿಳಿದಾಗ ನನಗೆ ಸಂತಸವಾಯಿತು.”
ಈ ಪುಸ್ತಕದಲ್ಲಿ, ಅವೇಕ್! ಪತ್ರಿಕೆಯಲ್ಲಿ 1982ರಿಂದ 1989ರ ವರೆಗೆ ಬಂದಿದ್ದ “ಯಂಗ್ ಪೀಪ್ಲ್ ಆಸ್ಕ್. . . ” ಎಂಬ ಲೇಖನಗಳಲ್ಲಿ ಸುಮಾರು ಅರ್ಧಾಂಶ ಸಂಕ್ಷಿಪ್ತ ರೂಪದಲ್ಲಿದೆ. ಇದರಲ್ಲಿ 39 ಅಧ್ಯಾಯಗಳು ಹತ್ತು ವಿಷಯ ವಿಭಾಗಗಳಾಗಿ ಏರ್ಪಡಿಸಲ್ಪಟ್ಟಿವೆ. (ಮುಂದಿನ ಪುಟದಲ್ಲಿ ಬಾಕ್ಸ್ ನೋಡಿ.) ಒಂದು ಅನುಕೂಲವಾದ ಪುಸ್ತಕದಲ್ಲಿ ಇಷ್ಟೆಲ್ಲ ಮಾಹಿತಿ ಇರುವುದರ ಪ್ರಯೋಜನವೇನು? ಒಬ್ಬ ಯುವವ್ಯಕ್ತಿ ಹೇಳುವುದು: “ಅನೇಕ ವೇಳೆ ಹಿಂದಿನ ‘ಯಂಗ್ ಪೀಪ್ಲ್ ಆಸ್ಕ್. . . ’ ಲೇಖನಗಳನ್ನು, ನನ್ನ ಸಮಸ್ಯೆಗಳ ಸಹಾಯಕ್ಕಾಗಿ ನೋಡಬೇಕೆಂದು ನನಗೆ ತಿಳಿದಿತ್ತು, ಆದರೆ ನಾನದನ್ನು ನೋಡಲಿಲ್ಲ. ಈಗ ಎಂದು ಬೇಕಾದರೂ ಮಾರ್ಗದರ್ಶನಕ್ಕಾಗಿ ನನಗೆ ಒಂದು ಪುಸ್ತಕವಿದೆ.”
ಈ ಯಂಗ್ ಪೀಪ್ಲ್ ಆಸ್ಕ್ ಪುಸ್ತಕದಲ್ಲಿ ದೃಷ್ಟಿರುಚಿಯ ಶಕ್ತಿಯೂ ಇದೆ. “ವರ್ಣರಂಜಿತ ಚಿತ್ರಗಳು ನನಗೆ ಹಿಡಿಸುತ್ತವೆ” ಎನ್ನುತ್ತಾಳೆ 11 ವಯಸ್ಸಿನ ಹೆದರ್. ಆ ಫೋಟೋಗಳಲ್ಲಿ ಜಗತ್ತಿನ ಎಲ್ಲ ಕಡೆಗಳ ಯುವಜನರ ಚಿತ್ರಗಳಿವೆ. ಒಬ್ಬ ಕೆನೇಡಿಯನ್ ಯುವ ವ್ಯಕ್ತಿ ಹೇಳಿದ್ದು: “ಅದರ ಚಿತ್ರಗಳು ಅತ್ಯಂತ ಮುಗ್ಧಗೊಳಿಸಿ ಸಮಸ್ಯೆಗಳ ಎದುರಲ್ಲಿ ನಮಗಿರುವ ನಿಜ ಅನಿಸಿಕೆಯನ್ನು ಉತ್ತಮವಾಗಿ ಪ್ರತಿನಿಧೀಕರಿಸುತ್ತವೆ.” ಹೀಗಿರುವಾಗ, ಅನೇಕ ಯುವಜನರು ಅದು ದೊರೆತ ಕೂಡಲೆ ಅದರ ಒಳಗಿರುವುದನ್ನು ಕಬಳಿಸತೊಡಗಿದ್ದು ಆಶ್ಚರ್ಯವಲ್ಲ.
‘ನನಗೆ ಓದುವುದನ್ನು ನಿಲ್ಲಿಸಲಿಕ್ಕಾಗಲಿಲ್ಲ’
ಒಬ್ಬ 17 ವಯಸ್ಸಿನ ಹುಡುಗಿ ಹೊಟೇಲಿನ ಕಾಗದದಲ್ಲಿ ಬರೆದುದು:
“ನಾವು ಸಮ್ಮೇಳನದಿಂದ ಮನೆಗೆ ಅರ್ಧ ದಾರಿ ಬಂದಿದ್ದೇವೆ ಮತ್ತು ನಮಗೆ ಇನ್ನು ನಾಲ್ಕು ತಾಸು ಕಾರಿನಲ್ಲಿ ಪ್ರಯಾಣ ಮಾಡಲಿಕ್ಕಿದೆ. ನಾನು ಆಗಲೆ ಹತ್ತು ಅಧ್ಯಾಯಗಳನ್ನು ಓದಿದ್ದೇನೆ.”
ಕೆಲವರಿಗೆ ವಿಷಯಾನುಕ್ರಮಣಿಕೆಯಿಂದಲೇ ರುಚಿ ಹಿಡಿಯಿತು:
“ನಾನು ವಿಷಯಾನುಕ್ರಮಣಿಕೆಯನ್ನು ಓದಿದಾಗ ನನ್ನ ಸ್ವಂತ ಜೀವನವನ್ನು ನೋಡಿದಂತಿತ್ತು. ಅಲ್ಲಿ ಕೇಳಿರುವ ಅನೇಕ ಪ್ರಶ್ನೆಗಳು ನಾನೇ ಒಂದಲ್ಲ ಒಂದು ಸಾರಿ ಕೇಳಿಕೊಂಡಿದ್ದ ಪ್ರಶ್ನೆಗಳಾಗಿದ್ದವು.”—ಹದಿನಾರು ವಯಸ್ಸಿನ ಕ್ಯಾಥಿ.
“ಓದುಗರಲ್ಲದ” ಹಲವರು ಓದುವಂತೆ ನಡಿಸಲ್ಪಟ್ಟರು:
“ನನಗೆ ಓದುವುದರಲ್ಲಿ ಅಷ್ಟು ಮನಸ್ಸಿಲ್ಲ, ಆದರೆ ಈ ಪುಸ್ತಕ ಓದಲಾರಂಭಿಸಿದರೆ ಕೆಳಗೆ ಇಡಲಾಗದಷ್ಟು ಒಳ್ಳೆಯದಿದೆ. ನಾನು ಮೂರು ದಿನಗಳಲ್ಲಿ ಸುಮಾರು ಇಡೀ ಪುಸ್ತಕವನ್ನೆ ಓದಿದ್ದೇನೆ.”—ಹದಿನೈದು ವಯಸ್ಸಿನ ಜೆನಿಫರ್.
“ನಾನು ಅಷ್ಟು ಉತ್ತಮ ಓದುಗಳೂ ಅಲ್ಲ, ಹೆಚ್ಚು ಓದುವುದೂ ಇಲ್ಲ. ನಾನು ಸಮ್ಮೇಳನದಿಂದ ಮನೆಗೆ ಬಂದ ಮೇಲೆ ನನಗೆ ತುಂಬ ಆಯಾಸವಾಗಿತ್ತು ಮತ್ತು ಕಣ್ಣು ತೆರೆದಿಡಲೇ ಆಗುತ್ತಿರಲಿಲ್ಲ. ಆದರೆ ನಾನು ಈ ಪುಸ್ತಕ ತೆರೆದು, ಓದಲಾರಂಭಿಸಿ ಒಂದು ಇಡೀ ಅಧ್ಯಾಯವನ್ನು ಮುಗಿಸಿದೆ! ಅಂದಿನಿಂದ ಈ ರಾತ್ರಿಯ ತನಕ ನಾನು ಪ್ರತಿದಿನ ಒಂದೊಂದು ಅಧ್ಯಾಯವನ್ನು ಓದಿದ್ದೇನೆ—ಇಂದು ಎರಡು ಓದಿದೆ!”—ಹದಿನೇಳು ವಯಸ್ಸಿನ ಟಿಫನಿ.
ಹಲವು ಸಂದೇಹವಾದಿಗಳೂ ಇದ್ದರು:
“ಪುಸ್ತಕದ ಕೆಲವು ಭಾಗಗಳು ನನ್ನಷ್ಟು ವಯಸ್ಕರಿಗಲ್ಲವೆಂದು ನಾನೆಣಿಸಿದೆ. ಆದುದರಿಂದ ನಾನು, ‘ಲೈಂಗಿಕತೆ ಮತ್ತು ನೀತಿನಡತೆಗಳು’ ಎಂಬ 6ನೆಯ ವಿಭಾಗವನ್ನು ಓದತೊಡಗಿದೆ. ನಾನು ಕೆಲವು ದೊಡ್ಡ ನಿರ್ಣಯಗಳನ್ನು ಮಾಡುವಂತೆ ಇದು ನನಗೆ ತುಂಬ ಸಹಾಯ ಮಾಡಿತು. ಈ ಪುಸ್ತಕಕ್ಕೆ ಯಾರೂ ತೀರಾ ಪ್ರಾಯಸ್ಥರಲ್ಲ!”—ಹತ್ತೊಂಭತ್ತು ವಯಸ್ಸಿನ ಸಬ್ರೀನ.
ಹೌದು, ಓದಿ ಮುಗಿಸಿದ ಬಳಿಕ, ಒಮ್ಮೆ ಓದುವುದು ಸಾಲದು ಎಂದು ಕೆಲವರ ಅಭಿಪ್ರಾಯ:
“ನನಗೆ ಒಂದು ವರ್ಷ ಹಿಂದೆ ದೀಕ್ಷಾಸ್ನಾನವಾಯಿತು, ಆದರೆ ಪರಿಸ್ಥಿತಿ ಕೆಡಲಾಗಿ ನಾನು ಖಿನ್ನಳಾದೆ. ಒಮ್ಮೆ ಮನೆಬಿಟ್ಟು ಓಡಿಹೋದದ್ದೂ ಉಂಟು! ಹೀಗಿರುವಾಗ ಈ ಹೊಸ ಪುಸ್ತಕ ದೊರೆತಾಗ ನನಗೆ ಏನು ಬೇಕಾಗಿತ್ತೆಂದು ಯೆಹೋವನು ತಿಳಿದಿದ್ದನೆಂದು ಎಣಿಸಿದೆ. ಇದು ಅದ್ಭುತಕರ! ನಾನು ಆಗಲೆ ಎರಡಾವರ್ತಿ ಓದಿದ್ದೇನೆ.”— ಜೆ.ಎಸ್.
“ಎರಡನೆಯ ಸಲ ಓದುವಾಗ ಸುಲಭವಾಗುವಂತೆ ನಾನು ಪ್ರತಿಯೊಂದು ವಚನವನ್ನೂ ಪುಸ್ತಕದೊಳಗೆ ಪದಶಃ ಬರೆಯುತ್ತಿದ್ದೇನೆ. ಇದು ಅತಿಶಯೋಕ್ತಿಯಲ್ಲ: ಈ ಪುಸ್ತಕ ನನ್ನನ್ನು ಹೆಚ್ಚು ಉತ್ತಮ ವ್ಯಕ್ತಿಯಾಗಿ ಮಾಡಿಯದೆ.”—ಹದಿನೆಂಟು ವಯಸ್ಸಿನ ಐಡ.
‘ನೀವೇನು ಮಾಡಬೇಕೆಂದು ನಿಮಗೆ ಹೇಳಲಾಗುತ್ತದೆ ಎಂದು ನಿಮಗನಿಸುವುದೇ ಇಲ್ಲ’
ಈ ಯಂಗ್ ಪೀಪ್ಲ್ ಆಸ್ಕ್ ಪುಸ್ತಕ ಹೊರಬಂದು ಒಂದು ವರ್ಷ ಗತಿಸಿದರೂ ಇದನ್ನು ಮಾನ್ಯ ಮಾಡುವ ಹೇಳಿಕೆಗಳು ಇನ್ನೂ ಬರುತ್ತಾ ಇವೆ. ಇದರ ಸಾಫಲ್ಯಕ್ಕೆ ಅಂಶಿಕ ಕಾರಣವು ಇದು ಯುವಜನರಿಗೆ ಸಂಬೋಧಿಸಲ್ಪಟ್ಟಿರುವುದಾದರೂ ಮಕ್ಕಳಾಟಿಕೆಯನ್ನು ಮಾತಾಡದೆ ಇರುವುದೇ ಎಂಬುದಕ್ಕೆ ಸಂಶಯವಿಲ್ಲ. ತಮಗೆ ಸಾರಲಾಗುತ್ತಿದೆ ಎಂದು ವಾಚಕರು ಎಣಿಸುವಂತೆಯೂ ಇದನ್ನು ಬರೆಯಲಾಗಿರುವುದಿಲ್ಲ. ಹಲವು ಯುವಜನರು ಹೀಗೆನ್ನುತ್ತಾರೆ:
“ಈ ಪುಸ್ತಕದಲ್ಲಿ ತುಸು ಹಾಸ್ಯರಸವೂ ಇದೆ. ದೇವರ ವಾಕ್ಯವಾದ ಬೈಬಲಿನ ಬೆಂಬಲವುಳ್ಳ ಇದು ಯಾವ ಹದಿಪ್ರಾಯದ ಪತ್ರಿಕೆಗಿಂತಲೂ ಎಷ್ಟೋ ಉತ್ತಮವಾಗಿದೆ.”
“ನೀವು ಏನು ಮಾಡಬೇಕೆಂದು ನಿಮಗೆ ಹೇಳಲಾಗುತ್ತದೆ ಎಂದು ನಿಮಗೆ ಅನಿಸುವುದೇ ಇಲ್ಲ. ಬದಲಿಗೆ, ನಿಮಗೆ ಅನೇಕ ಸಾಧ್ಯತೆಗಳ ಅರಿವನ್ನೂ ಅವುಗಳಲ್ಲಿ ಪ್ರತಿಯೊಂದರ ಪರಿಣಾಮವನ್ನೂ ಇದು ಕೊಡುತ್ತದೆ. ಯೆಹೋವನ ದೃಷ್ಟಿಕೋನವನ್ನು ಇದು ಸ್ಪಷ್ಟವಾಗಿ ಸದಾ ಕೊಟ್ಟು ಶಾಸ್ತ್ರಾಧಾರವನ್ನು ನೀಡುತ್ತದೆ.”
ಅನೇಕರು ಅದರ ಬರಹದ ಧಾಟಿಗೆ ಮತ್ತು ಅವರ ಅನಿಸಿಕೆಗಳಿಗೆ ಅದು ತೋರಿಸಿರುವ ಒಳನೋಟಕ್ಕೆ ಗಣ್ಯತೆ ತೋರಿಸಿದ್ದಾರೆ.
“ನನ್ನ ತಂದೆ ನನಗೆ ಯಾವ ರೀತಿಯ ಮಮತೆಯನ್ನೂ ತೋರಿಸಿಲ್ಲ, ಆದರೆ ಈ ಪುಸ್ತಕದ ಸಲಹೆ ನಮ್ಮ ಪ್ರಯೋಜನಕ್ಕಾಗಿ ಬುದ್ಧಿಹೇಳುವ ಪ್ರೀತಿಯ ತಂದೆಯಿಂದ ಬಂದಂತ್ತಿತ್ತು.”—ಸೆಫ್ಟಾನೊ, ಇಟೆಲಿ.
“ನಾನು ಮುದ್ರಿತ ಪುಟವನ್ನು ಓದುತ್ತಿಲ್ಲ, ಚಿತಪರಿಚಿತನೊಂದಿಗೆ ಮಾತಾಡುತ್ತಿದ್ದೇನೆ ಎಂದು ಒಡನೆ ನನಗೆನಿಸಿತು.”—ಮಿರ್ಯಮ್, ಇಟೆಲಿ.
“ಉಪಯೋಗಿಸಲಾದ ಅನೇಕ ಉದಾಹರಣೆಗಳು ಮನೆಗೆ ನಿಕಟವಾಗಿದ್ದುದರಿಂದ ನಾನು ಅವಕ್ಕೆ ಪೂರ್ಣ ಸಂಬಂಧ ಕಲ್ಪಿಸಸಾಧ್ಯವಿತ್ತು.”—ಹದಿಹರೆಯದ ಒಬ್ಬಳು.
“ಆಡಳಿತ ಮಂಡಲಿಯಲ್ಲಿ ಹದಿಹರೆಯದವರಿಲವ್ಲೆಂದು ನನಗೆ ಗೊತ್ತು. ಆದರೂ ನೀವು ಯುವಜನರ ಕುರಿತು ಬರೆಯುವದೆಲ್ಲ ಅಷ್ಟು ನಿಷ್ಕೃಷ್ಟ; ಯೆಹೋವನೊಂದಿಗೆ ನೇರವಾಗಿ ಮಾತಾಡಿದಂತೆ ಇದಿದೆ.”—ಹದಿನೈದು ವಯಸ್ಸಿನ ಆಬ್ರಿ.
ಯುವಜನರಿಗೆ ಮಾತ್ರವಲ್ಲ
ಅನೇಕ ಅಧ್ಯಾಯಗಳು ವಯಸ್ಕ ಕ್ರೈಸ್ತರ ಸಮಸ್ಯೆಗಳಿಗೆ, ಅಂದರೆ ಲಜ್ಜಾಸ್ವಭಾವ, ಖಿನ್ನತೆ, ಒಂಟಿಗ ಭಾವನೆ, ನಿರುದ್ಯೋಗ, ಇತ್ಯಾದಿಗಳಿಗೆ ಒಳನೋಟವನ್ನು ಒದಗಿಸುತ್ತವೆ. ಆದುದರಿಂದ ಅನೇಕ ವಯಸ್ಕರು ಈ ಪುಸ್ತಕಕ್ಕೆ ಗಣ್ಯತೆ ತೋರಿಸಿರುವುದು ಆಶ್ಚರ್ಯವಲ್ಲ. ಯೆಹೋವನ ಸಾಕ್ಷಿಗಳ ಸಂಚಾರ ಶುಶ್ರೂಷಕನೊಬ್ಬನ ಪತ್ನಿ ಹೇಳಿದ್ದು:
“ನನ್ನ ಗಂಡನಿಗೂ ನನಗೂ ನಮ್ಮವೇ ಆದ ಮಕ್ಕಳಿಲ್ಲ. ಆದರೂ ವಿಷಯವು ಹೇಳಲ್ಪಟಿರುವ ವಿಧ ನಮಗೂ ಪ್ರಯೋಜನಕರವೆಂದು ನನಗೆ ತಿಳಿದು ಬಂತು. ಪುಸ್ತಕದ ಶೀರ್ಷಿಕೆ, ‘ಕ್ವೆಸ್ಚನ್ಸ್ ಪೀಪ್ಲ್ ಆಸ್ಕ್—ಆನ್ಸರ್ಸ್ ದೆಟ್ ವರ್ಕ್’ ಎಂದಾಗಿದ್ದರೂ ಅದು ಸರಿಯೇ ಆಗುತ್ತಿತ್ತು!”
ಇತರ ವಯಸ್ಕರು ಹೃತ್ಪೂರ್ವಕವಾಗಿ ಇದನ್ನು ಒಪ್ಪುತ್ತಾರೆ:
“ನನ್ನ 41ರ ಯುವಜೀವಿತಕ್ಕೆ ಅತಿ ಪ್ರಯೋಜನಕರವಾದ ವಾಕ್ಯ, ಪದಸಮೂಹ ಮತ್ತು ಮೂಲಸೂತ್ರಗಳು ಅದರಲ್ಲಿವೆ.”
“ಯುವಜನರಿಗಾಗಿ ಬರೆಯಲ್ಪಟ್ಟ ಪುಸ್ತಕ 61 ವಯಸ್ಸಿನ ಹೆಂಗಸಿಗೆ ಸಹಾಯ ಮಾಡೀತೆಂದು ನೀವೆಣಿಸಲಾರಿರಿ. ಆದರೆ ನನ್ನ ಗತಜೀವನದ ಕುರಿತು ನಾನು ಸಕಾರಾತ್ಮಕವಾಗಿ ಯೋಚಿಸಿ ನನ್ನ ಹೆತ್ತವರ ವಿರುದ್ಧ ನನ್ನಲ್ಲಿದ್ದ ಅಸೂಯೆಯನ್ನು ಅದು ಹೋಗಲಾಡಿಸಿತು.”
“ನಾನು ‘ಹೆಚ್ಚು ಪ್ರಾಯವಾದವರೂ ಕೇಳುತ್ತಾರೆ’ ಎಂದು ಕಂಡುಕೊಂಡೆ. ನನ್ನನ್ನು ತಿಳಿದುಕೊಳ್ಳಲು ನನ್ನ ದೀರ್ಘ ಕ್ರಿಸ್ತೀಯ ವರ್ಷಗಳಲ್ಲಿ ಇನ್ನಾವುದೂ ನನಗೆ ಇಷ್ಟು ಸಹಾಯ ಮಾಡಿದ್ದಿಲ್ಲ. ಅಮುಖ್ಯವಾಗಿ ಹೇಳುವುದಾದರೆ, ನಾನೀಗ 74 ವಯಸ್ಸಿನ ತರುಣ.”
ಅನೇಕ ಕ್ರೈಸ್ತ ಹೆತ್ತವರಿಂದಲೂ ಪತ್ರಗಳು ಬಂದಿವೆ:
“ನನಗೆ ಮೂವರು ಹದಿಹರೆಯದವರಿದ್ದಾರೆ ಮತ್ತು ಈ ಪುಸ್ತಕ ನನ್ನ ಪ್ರಾರ್ಥನೆಗಳಿಗೆ ಉತ್ತರ. ನೀವು ನಮಗೋಸ್ಕರ ಅಲ್ಲಿರುವುದಕ್ಕೆ ಉಪಕಾರ. ಸೈತಾನನು ನನ್ನ ಮಕ್ಕಳನ್ನು ಸೆಳೆಯಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾನೆ. ಆದರೆ ಈಗ ಈ ಸಮಯೋಚಿತ ಪುಸ್ತಕದ ದೆಸೆಯಿಂದ ನಾನು ಸಾಧ್ಯವಿರುವುದನ್ನು ನಿಪುಣತೆಯಿಂದ ಮಾಡಲು ಸಜ್ಜಿತಳಾಗಿದ್ದೇನೆ.”
“ಈ ವ್ಯವಸ್ಥೆ ದಿನದಿನವೂ ನಮ್ಮನ್ನು ಸವೆಯಿಸುತ್ತದೆ. ನನ್ನ ಚಿಕ್ಕ ಮಗನಿಗೆ ಈಗ 12 ವಯಸ್ಸು ಮತ್ತು ಕಳೆದ ವರ್ಷದಿಂದ ಅವನ ಆತ್ಮಿಕ ಅಭಿರುಚಿಗೆ ತೀರಾ ಪೆಟ್ಟು ಬಿದಿದ್ದೆ. ಆದರೆ ಈಗ ಸಮ್ಮೇಳನ ಮತ್ತು ಈ ಹೊಸ ಪುಸ್ತಕದ ಪರಿಣಾಮವಾಗಿ ಅವನು ದೀಕ್ಷಾಸ್ನಾನಕ್ಕೆ ಪ್ರಯತ್ನಿಸುವುದನ್ನು ನೋಡುವುದು ಎಷ್ಟು ಒಳ್ಳೆಯದೆಂಬುದನ್ನು ವರ್ಣಿಸುವುದು ಅಸಾಧ್ಯ.”
“ನನ್ನ ಮಕ್ಕಳು ಪುಸ್ತಕ ಅಂಗೀಕರಿಸಿದಾಗ ನನಗೆ ಕಣ್ಣೀರು ಬಂತು. ಇನ್ನಾವ ಧರ್ಮಸಂಸ್ಥೆಯೂ ತನ್ನ ಯುವಜನರ ವಿಷಯದಲ್ಲಿ ಇಷ್ಟು ಪರಾಮರಿಕೆ ವಹಿಸುವುದಿಲ್ಲ!”
“ನಾನು ಒಂಟಿಗ ತಾಯಿ. ಕೆಲವು ಸಲ ತಾಯಿಯಾಗಲು ಅನರ್ಹಳು ಎಂದೆಣಿಸಿ ನಾನು ನಿಜವಾಗಿಯೂ ಭಯಪಡುತ್ತೇನೆ. ನನ್ನ ಹಿರೀಮಗನಿಗೆ 11 ವಯಸ್ಸು ಮತ್ತು ಅವನನ್ನು ಮೆಚ್ಚದ ಉಪಾಧ್ಯಾಯನು ಅವನಿಗಿದ್ದಾನೆ. ಯಂಗ್ ಪೀಪ್ಲ್ ಆಸ್ಕ್ ಪುಸ್ತಕದಲ್ಲಿ ಈ ಸ್ಥಿತಿಯನ್ನು ನಿಭಾಯಿಸುವ ಒಂದು ಅಧ್ಯಾಯವಿದೆಯೆಂದು ನೋಡುವುದು ಎಷ್ಟು ದುಃಖಶಾಮಕ!”
ಅನೇಕರು, ಪ್ರತಿ ಅಧ್ಯಾಯದ ಅಂತ್ಯದಲ್ಲಿ ತೋರಿಬರುವ “ಚರ್ಚೆಗಾಗಿ ಪ್ರಶ್ನೆಗಳು” ಎಂಬ ವಿಭಾಗದ ಕಾರ್ಯಸಾಧಕತೆಯ ಕುರಿತು ಬರೆದರು:
“ನಮ್ಮ ಕುಟುಂಬ ಬೈಬಲ್ ಅಧ್ಯಯನದ ಭಾಗವಾಗಿ ನಾವು ಸೇರಿ ಈ ಪುಸ್ತಕವನ್ನು ಓದಿದೆವು. ಇದು ನಮ್ಮೆಲ್ಲರನ್ನು ನಿಕಟವಾಗಿರಿಸಿದೆ. ಮಕ್ಕಳು ಪ್ರಶ್ನೆಗಳನ್ನು ಅನಾಯಾಸವಾಗಿ ಕಾಣುವುದನ್ನು ನಾನು ನೋಡುತ್ತೇನೆ ಮತ್ತು ಸುಲಭವಾಗಿ ಹೊರತರಲಾಗದ ಅನಿಸಿಕೆಗಳನ್ನು ಹೊರತರುವಂತೆ ಇದು ನಿಜವಾಗಿಯೂ ಸಹಾಯ ಮಾಡುತ್ತದೆ.”
ನಿಜವಾಗಿಯೂ ಕಾರ್ಯಸಾಧಕವಾದ ಉತ್ತರಗಳು!
ಆದರೆ ಈ ಪುಸ್ತಕದ ಮೌಲ್ಯದ ಪರೀಕ್ಷೆ ಅದರ ಜನಪ್ರಿಯತೆಯಲ್ಲಲ್ಲ, ಅದರ ಪ್ರಾಯೋಗಿಕತೆಯಲ್ಲಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅದರ ಉತ್ತರಗಳು ನಿಜವಾಗಿಯೂ ಕಾರ್ಯಸಾಧಕವೆ? ಅನೇಕ ಯುವಜನರು ಉತ್ಸಾಹಪೂರ್ವಕವಾಗಿ ಹೌದೆನ್ನುತ್ತಾರೆ:
“ನಾನು ಈ ಪುಸ್ತಕವನ್ನು ಓದುವುದಕ್ಕೆ ಮೊದಲು ರಾಜ್ಯ ಸಭಾಗೃಹಕ್ಕೆ ನನ್ನ ತಾಯಿ ಮತ್ತು ತಂಗಿಯೊಂದಿಗೆ ಸುಮ್ಮನೆ ಹೋಗುತ್ತಿದ್ದೆ, ಏಕೆಂದರೆ ನನಗೆ ಮನೆಯಲ್ಲಿ ಒಬ್ಬನೆ ಕುಳಿತುಕೊಳ್ಳಲಾಗುತ್ತಿರಲಿಲ್ಲ. ನಾನು ಇಬ್ಬಗೆಯ ಜೀವನ ನಡೆಸುತ್ತಿದ್ದೆ. ಈಗ ಅದೆಲ್ಲ ತುಂಬ ಸುಧಾರಣೆಯಾಗಿದೆ.”
“ಒಬ್ಬನು ಸತ್ಯವನ್ನು ಬಿಡಬಹುದು, ಆದರೆ ಸತ್ಯ ಅವನನ್ನು ಬಿಡುವುದಿಲ್ಲ. 27ನೇ ವಯಸ್ಸಿನಲ್ಲಿ ನಾನು ಒಂಟಿಗನಾಗಿ, ಭಯದಿಂದ ಮತ್ತು ಪಶ್ಚಾತ್ತಾಪ ಪಟ್ಟು ರಾಜ್ಯ ಸಭಾಗೃಹಕ್ಕೆ ಪುನಃ ಬರಪ್ರಯತ್ನಿಸಿದೆ. ನನ್ನಲ್ಲಿ ತೀರಾ ಕೆಟ್ಟ ಹವ್ಯಾಸಗಳಿದ್ದವು ಮತ್ತು ದೇವರು ನನ್ನನ್ನು ಎಂದಿಗೂ ಕ್ಷಮಿಸನು ಎಂದು ನಾನೆಣಿಸಿದ್ದೆ. ಆದರೆ ಒಬ್ಬ ಪ್ರಾಯಸ್ಥ ಸಹೋದರಿ ನನಗೆ ಒಂದು ಹೊಸ ಯಂಗ್ ಪೀಪ್ಲ್ ಆಸ್ಕ್ ಪುಸ್ತಕ ಕೊಟ್ಟರು. ಅದು ನನ್ನ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಅವುಗಳನ್ನು ಹೇಗೆ ನಿಭಾಯಿಸುವುದೆಂದು ತಿಳಿಸಿತು. ನನಗೆ ಅಳುಬಂತು. ಈ ಪುಸ್ತಕಕ್ಕೆ ಎಷ್ಟು ಮಾನ್ಯತೆ ವ್ಯಕ್ತಪಡಿಸಿದರೂ ಸಾಲದು. ಎಂಥ ಕಾರ್ಯಸಾಧಕವಾದ ಉತ್ತರಗಳು!!!”
“ಈ ಪುಸ್ತಕ ನಾನು ಗಂಭೀರವಾಗಿ ಯೋಚಿಸುವಂತೆ ಮಾಡಿತು. ಮೊದಲಲ್ಲಿ, ನಾನೊಬ್ಬ ಯೆಹೋವನ ಸಾಕ್ಷಿಯೆಂದು ನಾನೆಣಿಸಿಕೊಂಡಿರಲಿಲ್ಲ. ನನಗೊಬ್ಬ ಪ್ರೇಯಸಿಯಿದ್ದಳು. ನನಗೆ ಲೌಕಿಕ ಜನರ ಒಡನಾಟವಿತ್ತು. ಕದಿಯುವ ಅಭ್ಯಾಸವೂ ಇತ್ತು. ಆದರೆ ಈ ಪುಸ್ತಕವನ್ನು ಓದಿದ ಬಳಿಕ ನಾನು ಜೀವನದಲ್ಲಿ ತಪ್ಪುಮಾಡುತ್ತಿದ್ದೇನೆಂದು ತಿಳಿದುಬಂತು. ಆಗ, ನನ್ನನ್ನು ಕ್ಷಮಿಸಲಿಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ ಈ ಅದ್ಭುತಕರವಾದ ಹೊಸ ಪುಸ್ತಕಕ್ಕಾಗಿ ಆತನಿಗೆ ಉಪಕಾರ ಹೇಳಿದೆ.”
ಇವು, ಬಂದಿರುವ ನೂರಾರು ಪತ್ರಗಳಲ್ಲಿ ಕೇವಲ ಕೆಲವು. ಯುವಜನರಾದ ನಿಮ್ಮ ಇಂಥ ಉತ್ತಮ ಪ್ರತಿಕ್ರಿಯೆಯಿಂದ ನಮಗೆ ಉತ್ತೇಜನವೂ ಆಳವಾದ ಪ್ರೇರಣಶಕ್ತಿಯೂ ಸಿಕ್ಕಿದೆ. ನೀವು ಸಮರ್ಪಕವಾದುದನ್ನು ಮಾಡಬಯಸುತ್ತೀರೆಂಬುದು ಸ್ಪಷ್ಟ, ಮತ್ತು ಯೆಹೋವನು ತನ್ನ ವಾಕ್ಯದಲ್ಲಿ ಪ್ರೀತಿಯಿಂದ ಒದಗಿಸಿರುವ ಮಾರ್ಗದರ್ಶನವನ್ನು ನೀವು ಗಣ್ಯಮಾಡುತ್ತೀರಿ. ಮತ್ತು ದೇವರ ವಾಕ್ಯದಿಂದ ಬರುವ ಉತ್ತರಗಳು ನಿಜವಾಗಿಯೂ ಕಾರ್ಯಸಾಧಕ ಎಂಬುದೂ ವ್ಯಕ್ತ!
ಹೀಗಿರುವುದರಿಂದ, ಎಚ್ಚರ! ಪತ್ರಿಕೆಯಲ್ಲಿ “ಯುವಜನರು ಪ್ರಶ್ನಿಸುವುದು. . . ” ಎಂಬ ಲೇಖನಮಾಲೆಯು ನಿಮಗೆ ಸಂಬಂಧಿಸುವ ವಿಷಯಗಳ ಮೇಲೆ ಸ್ವಸ್ಥವಾದ ಬೈಬಲಾಧಾರಿತ ಸಲಹೆಯನ್ನು ಕೊಡುತ್ತಾ ಮುಂದುವರಿಯುವುದೆಂದು ತಿಳಿಯಲು ನೀವು ಸಂತೋಷಪಟ್ಟೀರಿ. ಒಂದು ಲೇಖನವನ್ನೂ ಓದಲು ತಪ್ಪಬೇಡಿರಿ! ಮತ್ತು ಆಗಲೆ ಓದಿರದಿರುವಲ್ಲಿ, ಕ್ವೆಶ್ಚನ್ಸ್ ಯಂಗ್ ಪೀಪ್ಲ್ ಆಸ್ಕ್—ಆನ್ಸರ್ಸ್ ದೆಟ್ ವರ್ಕ್ ಎಂಬ ಪುಸ್ತಕವನ್ನು ಮತ್ತೆ ಮತ್ತೆ ಓದಿರಿ.b ನಿಮ್ಮ ಸಹಪಾಠಿಗಳೊಂದಿಗೆ ಅದರಲ್ಲಿ ಭಾಗಿಗಳಾಗಿರಿ. ಉಲ್ಲೇಖಿಸಲಾಗಿರುವ ಶಾಸ್ತ್ರವಚನಗಳನ್ನು ತೆರೆದು ನೋಡಿರಿ. ಅದರ ಅಧ್ಯಾಯಗಳನ್ನು ನಿಮ್ಮ ಹೆತ್ತವರೊಂದಿಗೆ ಚರ್ಚಿಸಿರಿ. ಅದರ ಸಲಹೆಯನ್ನು ಅನ್ವಯಿಸಿಕೊಳ್ಳಿರಿ. ನೀವು 16 ವಯಸ್ಸಿನ ಕೆಂಟ್ ಎಂಬವನೊಡನೆ ಸಮ್ಮತಿಸುವಿರೆಂಬುದು ನಿಸ್ಸಂದೇಹ. ಅವನಂದದ್ದು: “ಇದು ನನ್ನ ಜೀವನದ ಅತ್ಯಂತ ಸುಲಭ ಪ್ರೇರಣೆಯ ವರ್ಷಗಳಲ್ಲಿ ಸಹಾಯಮಾಡಲು ಒಂದು ಕೈಪಿಡಿಯಂತಿದೆ.” (g90 9/8)
[ಅಧ್ಯಯನ ಪ್ರಶ್ನೆಗಳು]
a ಜೂನ್ 1989ರಿಂದ ಆರಂಭವಾಗಿ ಲೋಕವ್ಯಾಪಕವಾಗಿ ನಡೆಯಿತು.
b ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯುವಲ್ಲಿ ದೊರೆಯುತ್ತದೆ.
[ಪುಟ 11 ರಲ್ಲಿರುವ ಚೌಕ/ಚಿತ್ರಗಳು]
ಪರಿವಿಡಿ
ಪ್ರಕರಣ 1
ಗೃಹರಂಗ:
ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸುವುದು
ಅಧ್ಯಾಯ ಪುಟ
1 ನಾನು ಏಕೆ ‘ನನ್ನ ತಂದೆ ಮತ್ತು ನನ್ನ ತಾಯಿಯನ್ನು ಸನ್ಮಾನಿಸಬೇಕು?’ 11
2 ನನ್ನ ಹೆತ್ತವರು ನನ್ನನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? 18
3 ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ನಾನು ಹೇಗೆ ಮಾಡಬಹುದು? 26
4 ಅಪ್ಪ ಮತ್ತು ಅಮ್ಮ ಬೇರ್ಪಟ್ಟದ್ದೇಕೆ? 34
5 ನನ್ನ ತಂದೆ (ಯಾ ತಾಯಿ)ಯ ಪುನರ್ವಿವಾಹವನ್ನು ನಾನು ಹೇಗೆ ನಿಭಾಯಿಸಬಲ್ಲೆ? 42
6 ನನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಹೊಂದಿಕೊಂಡು ಹೋಗುವುದು ಅಷ್ಟು ಕಷ್ಟವೇಕೆ? 50
7 ನಾನು ಮನೆಬಿಟ್ಟು ಹೋಗಬೇಕೇ? 56
ಪ್ರಕರಣ 2
ನೀವು ಮತ್ತು ನಿಮ್ಮ ಸಮಾನಸ್ಥರು
8 ನಾನು ನಿಜ ಸ್ನೇಹಿತರನ್ನು ಹೇಗೆ ಸಂಪಾದಿಸಬಲ್ಲೆ? 65
9 ಸಮಾನಸ್ಥರ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ? 73
ಪ್ರಕರಣ 3
ನೀವು ಹೇಗೆ ಕಾಣುತ್ತೀರಿ ಎಂಬುದರ ಕಡೆಗೆ ಒಂದು ನೋಟ
10 ಸೌಂದರ್ಯವು ಎಷ್ಟು ಪ್ರಾಮುಖ್ಯ? 82
11 ನನ್ನ ಬಟ್ಟೆಬರೆ ವಾಸ್ತವವಾದ ನನ್ನನ್ನೇ ತೋರಿಸುತ್ತದೆಯೆ? 90
ಪ್ರಕರಣ 4
ನನಗೆ ಏಕೆ ಈ ರೀತಿ ಅನಿಸುತ್ತದೆ?
12 ನನಗೆ ನನ್ನ ಮೇಲೆಯೆ ಏಕೆ ಇಷ್ಟವಿಲ್ಲ? 98
13 ನಾನು ಅಷ್ಟು ಖಿನ್ನನಾಗುವುದು ಏಕೆ? 104
14 ನಾನು ನನ್ನ ಒಂಟಿಗಭಾವನೆ ಹೋಗುವಂತೆ ಹೇಗೆ ಮಾಡಬಲ್ಲೆ? 115
15 ನಾನು ಅಷ್ಟು ಲಜ್ಜೆಪಡುವುದೇಕೆ? 121
16 ನನ್ನಂತೆ ಕೊರಗುವುದು ಸಾಮಾನ್ಯವೇ? 127
ಪ್ರಕರಣ 5
ಶಾಲೆ ಮತ್ತು ಕೆಲಸ
17 ನಾನು ಶಾಲೆ ಬಿಡಬೇಕೆ? 134
18 ನಾನು ನನ್ನ ಶ್ರೇಣಿಗಳನ್ನು ಹೇಗೆ ಅಭಿವೃದ್ಧಿಗೊಳಿಸಬಲ್ಲೆ? 140
19 ಹುಡುಗರು ನನ್ನನ್ನು ಏಕೆ ನನ್ನಷ್ಟಕ್ಕೆ ಇರುವಂತೆ ಬಿಡುವುದಿಲ್ಲ?
150
20 ನನ್ನ ಉಪಾಧ್ಯಾಯರೊಂದಿಗೆ ನಾನು ಹೇಗೆ ಹೊಂದಿಕೊಂಡು ಹೋಗಬಲ್ಲೆ?
158
21 ನನಗೆ ಕೆಲಸ ದೊರೆಯುವುದು (ಮತ್ತು ಅದನ್ನು
ಭದ್ರವಾಗಿರಿಸುವುದು!) ಹೇಗೆ ಸಾಧ್ಯ? 166
22 ನಾನು ಯಾವ ಜೀವನೋಪಾಯವನ್ನು ಆರಿಸಿಕೊಳ್ಳಬೇಕು? 174
ಪ್ರಕರಣ 6
ಲೈಂಗಿಕತೆ ಮತ್ತು ನೀತಿ ನಡತೆಗಳು
23 ವಿವಾಹಕ್ಕೆ ಮುಂಚಿತವಾದ ಸಂಭೋಗದ ವಿಷಯದಲ್ಲೇನು? 181
24 ವಿವಾಹಪೂರ್ವ ಸಂಭೋಗ ಬೇಡವೆಂದು ನಾನು ಹೇಗೆ ಹೇಳಬಲ್ಲೆ? 192
25 ಮುಷ್ಟಿ ಮೈಥುನ—ಇದೆಷ್ಟು ಚಿಂತಾರ್ಹ? 198
26 ಮುಷ್ಟಿ ಮೈಥುನ—ಈ ಪ್ರಚೋದನೆಯನ್ನು ನಾನು ಹೇಗೆ
ಹೋರಾಡಬಲ್ಲೆ? 205
27 ಪ್ರಾಮಾಣಿಕತೆ—ಇದು ಸದಾ ಅತ್ಯುತ್ತಮ ಕಾರ್ಯನೀತಿಯೆ? 212
ಪ್ರಕರಣ 7
ಡೇಟಿಂಗ್, ಪ್ರಣಯ ಮತ್ತು ವಿರುದ್ಧ ಲಿಂಗಜಾತಿ
28 ನಾನು ಮೋಹಪರವಶತೆಯನ್ನು ಹೇಗೆ ಕೊನೆಗಾಣಿಸಬಲ್ಲೆ? 219
29 ನಾನು ಡೇಟಿಂಗ್ ಮಾಡಲು ಸಿದ್ಧನಾಗಿದ್ದೇನೊ? 225
30 ನಾನು ವಿವಾಹಕ್ಕೆ ಸಿದ್ಧನೊ? 236
31 ಅದು ನಿಜ ಪ್ರೇಮವೆಂದು ನನಗೆ ಹೇಗೆ ಗೊತ್ತು? 242
32 ನಾನು ಸಫಲ ರೀತಿಯ ಪ್ರಣಯಸಂಬಂಧವನ್ನು ಹೇಗೆ ಮುಂದುವರಿಸಬಲ್ಲೆ? 252
ಪ್ರಕರಣ 8
ಮಾದಕ ಪದಾರ್ಥ ಮತ್ತು ಮದ್ಯದ ಪಾಶ
33 ಕುಡಿಯುವುದು—ಏಕೆ ಬೇಡ? 262
34 ಮಾದಕ ವಸ್ತುಗಳಿಗೆ ಏಕೆ ಬೇಡವೆನ್ನಬೇಕು? 272
ಪ್ರಕರಣ 9
ಬಿಡುವಿನ ಸಮಯ
35 ನಾನು ಏನು ಓದುತ್ತೇನೊ ಅದು ಪ್ರಾಮುಖ್ಯವೊ? 283
36 ನನ್ನ ಟೀವೀ ನೋಡುವ ಅಭ್ಯಾಸಗಳನ್ನು ನಾನು ಹೇಗೆ
ನಿಯಂತ್ರಿಸಬಲ್ಲೆ? 289
37 ನಾನು ಒಮ್ಮೊಮ್ಮೆ ಏಕೆ ಮಜಾ ಮಾಡಬಾರದು? 296
ಪ್ರಕರಣ 10
ನಿಮ್ಮ ಭವಿಷ್ಯ
38 ನನಗೆ ಭವಿಷ್ಯತ್ತಿನಲ್ಲಿ ಏನಿದೆ? 305
39 ನಾನು ಹೇಗೆ ದೇವರ ಹತ್ತಿರಕ್ಕೆ ಬರಬಲ್ಲೆ? 311
[ಪುಟ 12ರಲ್ಲಿರುವಚೌಕ]
‘ಈ ಪುಸ್ತಕದಲ್ಲಿ ನನ್ನ ಮೆಚ್ಚಿನ ಭಾಗ . . . ’
ಯಂಗ್ ಪೀಪ್ಲ್ ಆಸ್ಕ್ ಪುಸ್ತಕದ (ಕೆಳಗೆ ಕೊಟ್ಟಿರುವ) ಹತ್ತು ಪ್ರಕರಣಗಳಲ್ಲಿ ಯಾವುದು ವಿಶೇಷವಾಗಿ ತಮಗೆ ಸಹಾಯ ಮಾಡಿತೆಂದು ಅನೇಕ ಯುವಜನರು ಹೇಳಿಕೆಗಳನ್ನು ಕೊಟ್ಟರು:
ಗೃಹರಂಗ: “ನಾನೂ ನನ್ನ ಸಹೋದರಿಯೂ ಸದಾ ಜಗಳಾಡುತ್ತೇವೆ. ಆದರೆ ಈ ಪುಸ್ತಕ ನಾನು ಅವಳಿಗೆ ಸದ್ಗುಣ ತೋರಿಸುವಂತೆ ಸಹಾಯ ಮಾಡಿದೆ. ಮತ್ತು ನಾವು ಮತ್ತೂ ಜಗಳಾಡುವಲ್ಲಿ ತಪ್ಪಾಯಿತೆಂದೂ ಯೋಚಿಸದೆ ಮಾತಾಡಿಬಿಟ್ಟೆವೆಂದೂ ಹೇಳುತ್ತೇವೆ.”
“ನನ್ನ ಸಹೋದರಿಗೆ ಯಾವುದು ಬೇಕೊ ಅದೆಲ್ಲ ದೊರೆಯುತ್ತಿತ್ತೆಂದು ನಾನು ಮೊದಲು ಎಣಿಸುತ್ತಿದ್ದೆ. ಆದರೆ ಅದು ಹೊಟ್ಟೆಕಿಚ್ಚೆಂದು ಈಗ ನನಗೆ ಗೊತ್ತಾಗಿದೆ. ನನ್ನ ಹೆತ್ತವರು ಪಕ್ಷಪಾತ ತೋರಿಸುತ್ತಿಲ್ಲವೆಂದೂ ಪ್ರೀತಿಯನ್ನು ಹಬ್ಬಿಸಲು ತಮ್ಮಿಂದಾಗುವಷ್ಟು ಪ್ರಯತ್ನಿಸುತ್ತಿದ್ದಾರೆಂದೂ ನನಗೆ ತಿಳಿದು ಬಂದಿದೆ.”
“ನನ್ನ ಅಪ್ಪ ಅಮ್ಮ ಬೇರ್ಪಟ್ಟದ್ದು ನನ್ನಿಂದಾಗಿ ಅಲ್ಲವೆಂದು ತಿಳಿಯಲು ಇದು ಸಹಾಯ ಮಾಡಿತು.”
ನೀವು ಮತ್ತು ನಿಮ್ಮ ಸಮಾನಸ್ಥರು: “ನನಗೆ ಮಿತ್ರನು ಬೇಕಿರುವಲ್ಲಿ ನಾನೇ ಮಿತ್ರನಾಗಬೇಕೆಂದು ತಿಳಿಯುವಂತೆ ಇದು ಸಹಾಯ ಮಾಡಿತು. ಅಲ್ಲದೆ, ಕೆಟ್ಟ ಒಡನಾಡಿಗಳಾದ ಮಕ್ಕಳೊಂದಿಗೆ ತಿರುಗಾಡಬಾರದೆಂದೂ ನಾನು ಕಲಿತೆ.”
ನೀವು ಹೇಗೆ ಕಾಣುತ್ತೀರಿ ಎಂಬುದರ ಕಡೆಗೆ ಒಂದು ನೋಟ: “ನಾನು ವಿಪರೀತ ದಪ್ಪವಾಗಿದ್ದೇನೆಂದೆಣಿಸಿ ಅನೇಕ ದಿನಗಳ ತನಕ ಹೆಚ್ಚುಕಡಮೆ ಏನೂ ತಿನ್ನುತ್ತಿರಲಿಲ್ಲ. ಆದರೆ ಮರುದಿನ ಕಬಳಿಸಿ ತಿಂದು ಭಾರವನ್ನೆಲ್ಲ ಹಿಂದೆ ಪಡೆಯುತ್ತಿದ್ದೆ. ನಾನು ಕುರೂಪಿ, ಆಕರ್ಷಣೆ ಇಲ್ಲದವಳು ಎಂದು ನಿಶ್ಚಯಿಸಿದೆ. ಒಬ್ಬ ಮೆಚ್ಚಿನ ಮಿತ್ರಳು ನಾನು ‘ಸೌಂದರ್ಯ’ ದ ಪ್ರಕರಣ ಓದುವಂತೆ ಹೇಳಿದಳು. ಓದುತ್ತಿದ್ದಾಗ ಕಣ್ಣೀರು ಸುರಿಯತೊಡಗಿತು. ಈಗ ನನಗೆ ಆದ್ಯತೆಗಳು ನೆಟ್ಟಗಾಗಿವೆ. ನಾನು ದೇವರ ಸೇವೆಯ ಮೇಲೆ—ನನ್ನ ತೋರಿಕೆಯ ಮೇಲಲ್ಲ—ಮನಸ್ಸಿಡುತ್ತಿದ್ದೇನೆ.”
ನನಗೆ ಏಕೆ ಈ ರೀತಿ ಅನಿಸುತ್ತದೆ?: “ನಾನು ತೀರಾ ಅಂದರೆ ಆತ್ಮಹತ್ಯದ ಬಲವಾದ ವಿಚಾರಗಳು ಬರುವಷ್ಟು ಖಿನ್ನಳಾಗಿದ್ದೆ. ಈಗ ನಾನು ಭಯಗಳನ್ನು ಎದುರಿಸಲು ಪ್ರಯತ್ನಿಸುತ್ತಿದ್ದು ವೈದ್ಯರ ಸಹಾಯ ಪಡೆದಿದ್ದೇನೆ. ಈ ‘ಎಡೆಬಿಡದ ಭೀತಿ’ ಗೆ ಅಂತ್ಯವಿದೆ ಎಂದು ಓದಿ ನೆಮ್ಮದಿ ಹೊಂದಿದೆ.”
ಶಾಲೆ ಮತ್ತು ಕೆಲಸ: “ಶಾಲೆಯಲ್ಲಿ ಗುಣಾಂಕ ಮತ್ತು ಹುಡುಗರ ಕಿರುಕುಳದ ವಿಷಯದಲ್ಲಿ ನಾನು ಉಪದ್ರವಿತನಾಗಿದ್ದೇನೆ. ಈ ಸಲಹೆಯನ್ನು ನಾನು ಶಾಲೆಯಲ್ಲಿ ಉಪಯೋಗಿಸಲಿದ್ದೇನೆ.”
ಲೈಂಗಿಕತೆ ಮತ್ತು ನೀತಿ ನಡತೆಗಳು: “ತಪ್ಪು ಮಾಡಲು ಹದಿಹರೆಯದವರ ಮೇಲೆ ತುಂಬ ಒತ್ತಡಗಳಿವೆ, ಆದರೆ ಬೈಬಲ್ ಸೂತ್ರಗಳನ್ನು ಅನ್ವಯಿಸುವುದರ ಮೂಲಕ ನನ್ನ ಸಮಾನಸ್ಥರನ್ನು ತಡೆಯಬಲ್ಲೆ.”
“ನನಗೆ ಮುಷ್ಟಿ ಮೈಥುನದ ಸಮಸ್ಯೆ ಇದೆ, ಮತ್ತು ಇದು ನನಗೆ ತುಂಬ ಸಂಕಟ ಕೊಡುತ್ತಿದೆ. ಆದರೆ ನಾನು ಈ ಸಲಹೆಯನ್ನು ಕಾರ್ಯರೂಪಕ್ಕೆ ಹಾಕಲು ನಿಜ ಪ್ರಯತ್ನ ಮಾಡಿ ನನ್ನ ಸ್ವರ್ಗೀಯ ಪಿತನ ಅತ್ಯುತ್ತಮ ಯುವಕನಾಗ ಪ್ರಯತ್ನಿಸುತ್ತೇನೆ.”
ಡೇಟಿಂಗ್, ಪ್ರಣಯ ಮತ್ತು ವಿರುದ್ಧ ಲಿಂಗಜಾತಿ: “ಈಗ ಕೆಲವು ಸಮಯದಿಂದ ನಾನು ಒಬ್ಬ ಹುಡುಗಿಯಲ್ಲಿ ತುಂಬ ಮೋಹಪರವಶನಾಗಿದ್ದೇನೆ. ನಾನು ಅವಳ ಮುಂದೆ ಮೂರ್ಖನಂತೆ ವರ್ತಿಸಿ ನನ್ನನ್ನು ಪೇಚಾಟದಲ್ಲಿ ಸಿಕ್ಕಿಸಿಕೊಳ್ಳುವುದಿಲ್ಲ. ಆದರೂ ಪುಸ್ತಕದಲ್ಲಿ ವರ್ಣಿಸಿದ ಅನಿಸಿಕೆ ನನ್ನಲ್ಲಿತ್ತು. ಇದು ಕೇವಲ ಮೋಹಪರವಶತೆ ಮತ್ತು ನಾನಿನ್ನೂ ಡೇಟಿಂಗ್ ಮಾಡುವ ವಯಸ್ಸಿಗೆ ಬಂದಿಲ್ಲವೆಂದು ತಿಳಿಯಲು ಈ ಪುಸ್ತಕ ಸಹಾಯ ಮಾಡಿತು.”
ಮಾದಕ ಪದಾರ್ಥ ಮತ್ತು ಮದ್ಯದ ಪಾಶ: “ನಾನು ಹೈಸ್ಕೂಲಿನಲ್ಲಿ ಹೊಸ ವಿದ್ಯಾರ್ಥಿ, ಆದರೆ ಅವರು ಆಗಲೆ ನನಗೆ ಮಾದಕ ವಸ್ತು ನೀಡಿದ್ದಾರೆ. ಆದರೆ ನಾನು ಬೇಡವೆಂದು ಹೇಳಲು ಪುಸ್ತಕ ನನಗೆ ಸಹಾಯ ಮಾಡುತ್ತದೆ.”
ಬಿಡುವಿನ ಸಮಯ: “ಸೋಮವಾರದಿಂದ ಶುಕ್ರವಾರದ ತನಕ ನಾನು ಟೀವೀ ನೋಡುತ್ತಿದ್ದೆ. ಪುಸ್ತಕವು ನನ್ನ ಟೀವೀ ನೋಡುವ ಸಮಯವನ್ನು ಕಡಿಮೆ ಮಾಡುವಂತೆ—ಭಾನುವಾರ ಮತ್ತು ಶುಕ್ರವಾರ ಮಾತ್ರ—ಸಹಾಯ ಮಾಡಿತು!”
ನಿಮ್ಮ ಭವಿಷ್ಯ: “ಬೈಬಲು ಬೇಸರ ಹಿಡಿಸುತ್ತದೆಂದು ನಾನು ಎಣಿಸುತ್ತಿದ್ದೆ, ಆದರೆ ಈಗ ಹಾಗಿಲ್ಲ! ಪ್ರತಿ ದಿವಸ 15 ನಿಮಿಷ ಓದಲು ನಾನು ಪ್ರಯತ್ನಿಸುತ್ತೇನೆ!”
“ಇದು ಪ್ರಾರ್ಥನೆಯಲ್ಲಿ ನನಗೆ ನಿಜವಾಗಿಯೂ ಸಹಾಯ ಮಾಡಿಯದೆ. ನಾನೀಗ ಯೆಹೋವನೊಂದಿಗೆ ಆಪ್ತ ಮಿತ್ರನಂತೆ ಮಾತಾಡಬಲ್ಲೆ.”
[ಪುಟ 10 ರಲ್ಲಿರುವಚಿತ್ರ]
ಫ್ರಾನ್ಸಿನ ಒಂದು ಯುವಗುಂಪು, ಯಂಗ್ ಪೀಪ್ಲ್ ಆಸ್ಕ್ ಪುಸ್ತಕವನ್ನು ಒದಗಿಸಿದರ್ದಲ್ಲಿ ಯೆಹೋವನ ಮತ್ತು ಆತನ ಸಂಘಟನೆಯ ‘ಪ್ರೀತಿಯ ಸಂರಕ್ಷಣೆ ಮತ್ತು ಬೆಂಬಲ’ ದ ದ್ಯೋತಕವಾಗಿ ಈ ಫೋಟೋವನ್ನು ಕಳುಹಿಸಿದರು