ಯುವ ಜನರು ಪ್ರಶ್ನಿಸುವುದು . . .
ಸಲಿಂಗಿ ಕಾಮ ಅದು ನಿಜವಾಗಿಯೂ ಅಷ್ಟು ಕೆಟದೆ?
“ನಾನು ಮಗುವಾಗಿದ್ದಾಗಿನಿಂದಲೂ ಸಲಿಂಗಿ ಕಾಮದ ಬಯಕೆಗಳು ನನಗಿದ್ದವು. ನಾನು ಅವುಗಳನ್ನು ಅರ್ಥ ಮಾಡಿಕೊಳ್ಳದ ಕಾರಣ ನಾನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ. ಇದು ಸ್ನೇಹಿತನೊಬ್ಬನೊಂದಿಗೆ ತೀರ ಕೆಟ್ಟದಾದ ಒಂದು ವಿಷಯವನ್ನು ಮಾಡುವಂತೆ ನನ್ನನ್ನು ಮುನ್ನಡೆಸಿತು. ಅಪರಾಧದ ಒಂದು ಗಾಢವಾದ ಭಾವನೆಯು ನನ್ನಲ್ಲಿತ್ತು, ಮತ್ತು ಯೆಹೋವನು ಎಂದಿಗೂ ನನ್ನನ್ನು ಕ್ಷಮಿಸನೆಂದು ನಾನೆಣಿಸಿದ್ದೆ.”
“ನಮ್ಮ ಮಕ್ಕಳು ಸಲಿಂಗಿ ಕಾಮವನ್ನು ಹಿಂಬಾಲಿಸುವಂತೆ ಟಿವಿಯು ಪ್ರಯತ್ನಿಸುತ್ತಿದೆ.” ಇದು ವಾಣಿಜ್ಯ ಸಂಸ್ಥೆಯ ವಾರ್ತಾಪತ್ರಿಕೆಯ ಅಂಕಣಕಾರನೊಬ್ಬನಿಂದ ಬರೆಯಲ್ಪಟ್ಟ ಲೇಖನದ ಶಿರೋನಾಮವಾಗಿತ್ತು. ಬರಹಗಾರನು ಗಮನಿಸಿದ್ದು: “ಸಲಿಂಗಿ ಕಾಮದ ಜೀವನ ಶೈಲಿಯನ್ನು ಸಕಾರಾತ್ಮಕವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ, ಅಹಿತವಾಗುವಷ್ಟು [ವಿಪರೀತ] ಕಾರ್ಯಕ್ರಮಗಳಿಗೆ ಟೆಲಿವಿಷನ್ ಪ್ರೇಕ್ಷಕರು ಒಳಪಡಿಸಲ್ಪಡುತ್ತಾರೆ.” ಆದರೂ, ಈ ದಿನಗಳಲ್ಲಿ ಯುವ ಜನರ ನಡುವೆ ಸಲಿಂಗಿ ಕಾಮವನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿರುವ ಅನೇಕ ಸಾಧನಗಳಲ್ಲಿ ಟಿವಿ ಕೇವಲ ಒಂದಾಗಿದೆ. ಸಲಿಂಗಿ ಕಾಮವನ್ನು ಬೆಂಬಲಿಸುವ ಪ್ರಚಾರಕಾರ್ಯವು ಶಿಕ್ಷಕರು, ಸಮಾನಸ್ಥರು, ಚಲನ ಚಿತ್ರಗಳು, ಪುಸ್ತಕಗಳು, ಮತ್ತು ಪತ್ರಿಕೆಗಳ ಮೂಲಕ ಸಹ ಪ್ರವರ್ಧಿಸಲ್ಪಡುತ್ತಿದೆ.
ವೈದ್ಯಕೀಯ ವೃತ್ತಿಯೂ ಸಲಿಂಗಿ ಕಾಮವನ್ನು ಪ್ರವರ್ಧಿಸುವವರೊಂದಿಗೆ ಜೊತೆಗೂಡಿದೆ. ಸಾಂಪ್ರದಾಯಿಕವಾಗಿ, ವೈದ್ಯರು ಸಲಿಂಗಿ ಕಾಮವನ್ನು ಒಂದು ಅಸ್ವಸ್ಥತೆಯಾಗಿ ದೃಷ್ಟಿಸಿದ್ದರು. ಆದರೆ 1973ರಲ್ಲಿ, ಇನ್ನು ಮುಂದೆ ಸಲಿಂಗಿ ಕಾಮವು ಒಂದು ಮನೋರೋಗದ ಅಸ್ವಸ್ಥತೆಯಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ಅಮೆರಿಕನ್ ಸೈಕಿಆ್ಯಟ್ರಿಕ್ ಅಸೋಸಿಏಷನ್ ಪ್ರಕಟಿಸಿತು. ಅಂದಿನಿಂದ, ವೈದ್ಯಕೀಯ ವೃತ್ತಿಯಲ್ಲಿರುವ ಅನೇಕರು, ಬಹುಮಟ್ಟಿಗೆ ಅದನ್ನು ಸಂಪೂರ್ಣವಾಗಿ ಅಂಗೀಕೃತವೆಂದು ಘೋಷಿಸುವ ಮಟ್ಟದ ವರೆಗೆ ಸಲಿಂಗಿ ಕಾಮದ ಜೀವನ ಶೈಲಿಯನ್ನು ಬೆಂಬಲಿಸಿದ್ದಾರೆ. ಉದಾಹರಣೆಗೆ, ಮನೋರೋಗ ಚಿಕಿತ್ಸಕರಾದ ಆಲ್ಬರ್ಟ್ ಎಲಿಸ್ಲ್, ಸಲಿಂಗಿ ಕಾಮದ ಸಂಬಂಧಗಳು “ಎಂದಿಗೂ ವ್ಯತಿರಿಕ್ತವಾಗಿರುವುದಿಲ್ಲ, ಬದಲಾಗಿ ಸ್ವಸ್ಥಕರವಾದ ಮಾನವ ಲೈಂಗಿಕ ನಡವಳಿಕೆಯಿಂದ ಕೂಡಿರುತ್ತವೆ. . . . ನೀವು ಇಷ್ಟಪಡುವುದಾದರೆ ಅವುಗಳನ್ನು ಅನುಭವಿಸಿರಿ, ಮತ್ತು ಅವುಗಳನ್ನು ‘ತಪ್ಪು’ ಅಥವಾ ‘ಕ್ಷೋಭೆ’ಗೊಳಿಸುವಂತಹದ್ದಾಗಿ ನೀವು ನಂಬುವಂತೆ ನಿಮಗೆ ಪ್ರಚಾರ ಮಾಡಲು ಯಾರನ್ನೂ ಅನುಮತಿಸದಿರಿ” ಎಂದು ತಿಳಿಸಿದರು.
ಅಂತಹ ನೋಟಗಳು ಎಷ್ಟು ವ್ಯಾಪಕವಾಗಿವೆಯೆಂದರೆ ನ್ಯೂಸ್ವೀಕ್ ಪತ್ರಿಕೆಯು ವರದಿಸುವುದು: “ಮಾಧ್ಯಮಗಳಲ್ಲಿ ಕಣ್ಣಿಗೆ ಕಟ್ಟುವಂತೆ ವರ್ಣಿಸಲ್ಪಡುವ ಮಾತುಗಳು ಮತ್ತು ಚಿತ್ರಗಳ ಮೂಲಕ ಮತ್ತು ಅಂಗೀಕಾರದ ಹೊಸ ವಾತಾವರಣದ ಮೂಲಕ, ಹದಿವಯಸ್ಕರು ಹೆಚ್ಚು ಬಹಿರಂಗವಾಗಿ ಸಲಿಂಗಿ ಕಾಮ ಹಾಗೂ ಉಭಯಲಿಂಗತ್ವ (ಬೈಸೆಕ್ಷ್ಯುಅಲಿಟಿ)ದೊಂದಿಗೆ ಪ್ರಯೋಗನಡೆಸುತ್ತಿದ್ದಾರೆ.” ಗತ ಸಮಯಗಳಲ್ಲಿ ಹದಿವಯಸ್ಕರು ಒಂದೇ ಲಿಂಗಜಾತಿಯ ಅಕ್ರಮ ಪ್ರಣಯಗಳಿಗೆ ಬಹಳ ಪ್ರಬಲವಾಗಿ ಅಸಮ್ಮತಿ ಸೂಚಿಸಿದರೂ, ಇಂದು ವೃದ್ಧಿಯಾಗುತ್ತಿರುವ ಸಂಖ್ಯೆಯಲ್ಲಿ ಯುವ ಜನರು ಅದನ್ನು “ಕಾಲಾನುಗುಣವಾದ ಶೈಲಿ”ಯೋಪಾದಿ ವೀಕ್ಷಿಸುತ್ತಾರೆಂದು ಹೇಳುವುದು ಅತಿಶಯೋಕ್ತಿಯಾಗಿರುವುದಿಲ್ಲ. ಸಲಿಂಗಿ ಕಾಮದ ಕೃತ್ಯಗಳಲ್ಲಿ ಒಳಗೂಡದ ಯುವ ಜನರೂ ಅನೇಕವೇಳೆ ಅದನ್ನು ಮಾಡುವ ಇತರರ ಕುರಿತು ಬಹಳ ಸಹಿಷ್ಣುಗಳಾಗಿದ್ದಾರೆ. “ನನ್ನ ಒಬ್ಬ ಸ್ನೇಹಿತನು ನನಗೆ ಅವನೊಬ್ಬ ಸಲಿಂಗಿ ಕಾಮಿಯಾಗಿದ್ದನೆಂದು ಹೇಳಿದ್ದಲ್ಲ, ನಾನು ಇನ್ನೂ ಅವನ ಸ್ನೇಹಿತನಾಗಿರುತ್ತಿದ್ದೆ ಎಂದು ನಾನು ಊಹಿಸುತ್ತೇನೆ” ಎಂದು ಡಾರನ್ ಎಂಬ ಯೌವನಸ್ಥನೊಬ್ಬನು ಹೇಳುತ್ತಾನೆ. ತಾನು “ಹುಡುಗಿಯರನ್ನು ಮಾತ್ರ ಇಷ್ಟಪಡುತಿದ್ತುದ”ರಿಂದ ತಾನು ನಿಜವಾಗಿಯೂ ಸಹಜ ಸ್ಥಿತಿಯಲ್ಲಿರಲಾರೆನೆಂದು ಕಾಲೇಜಿನ ಒಬ್ಬ ಯುವ ವಿದ್ಯಾರ್ಥಿಯು ಚಿಂತೆಯನ್ನು ಸಹ ವ್ಯಕ್ತಪಡಿಸಿದನು!
ಹೀಗೆ ಇಂದಿನ ಸ್ವೇಚ್ಛಾಚಾರದ ವಾತಾವರಣವು ಕ್ರೈಸ್ತ ಯುವ ಜನರಿಗೆ—ವಿಶೇಷವಾಗಿ ಕೆಲವೊಂದು ಅನಿರ್ದಿಷ್ಟ ಕಾರಣಗಳಿಗಾಗಿ ಒಂದೇ ಲಿಂಗಜಾತಿಯವರ ಕಡೆಗೆ ಲೈಂಗಿಕ ಆಕರ್ಷಣೆಯಿರುವಂತೆ ಅನಿಸುವವರಿಗೆ—ಗೊಂದಲಮಯವಾಗಿರಬಲ್ಲದು.a ಸಲಿಂಗಿ ಕಾಮವು ದೇವರನ್ನು ಅಸಂತೋಷಪಡಿಸುತ್ತದೆ ಎಂದು ಅವರಿಗೆ ತಿಳಿದಿದೆ ಮತ್ತು, ಅದನ್ನು ತ್ಯಜಿಸಲು ಅವರು ಪ್ರಾಮಾಣಿಕವಾಗಿ ಬಯಸುತ್ತಾರೆ. ಆದರೂ, ಕೆಲವೊಮ್ಮೆ, ತಮ್ಮ ಭಾವನೆಗಳನ್ನು ನಿಯಂತ್ರಿಸುವ ಹೋರಾಟವು ಎಷ್ಟು ಬಳಲಿಸಸಾಧ್ಯವಿದೆಯೆಂದರೆ, ಸಲಿಂಗಿ ಕಾಮದ ಕುರಿತಾದ ಬೈಬಲಿನ ದೃಷ್ಟಿಕೋನವು ಯೋಗ್ಯವಾದ್ದೊ ಅಥವಾ ಸಮಂಜಸವಾದದ್ದೊ ಎಂದು ಅವರು ಕುತೂಹಲಪಡಲಾರಂಭಿಸಬಹುದು. ‘ಸಲಿಂಗಿ ಕಾಮವು ನಿಜವಾಗಿಯೂ ಅಷ್ಟು ಕೆಟ್ಟದ್ದೆ?’ ಎಂದು ಅವರು ಕುತೂಹಲಪಡಬಹುದು.
ದೇವರ ವಾಕ್ಯವು ಹೇಳುವ ವಿಷಯ
ಉತ್ತರವಾಗಿ, 1 ಕೊರಿಂಥ 6:9, 10ರಲ್ಲಿ ಅಪೊಸ್ತಲ ಪೌಲನು ಹೇಳಿದ ವಿಷಯವನ್ನು ನೀವೇ ಓದಿರಿ: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು [“ಪುರುಷ ವ್ಯಭಿಚಾರಿಗಳು” ನ್ಯೂ ಇಂಟರ್ನ್ಯಾಷನಲ್ ವರ್ಷನ್; “ಪೌರುಷವಿಲ್ಲದವರು” ಕಿಂಗ್ ಜೇಮ್ಸ್ ವರ್ಷನ್] ಪುರುಷಗಾಮಿಗಳು [“ಪುರುಷ ಮೈಥುನಿಗಳು” ಜೆರೂಸಲೇಮ್ ಬೈಬಲ್; “ಸಲಿಂಗಿ ಕಾಮದ ದುರ್ಮಾರ್ಗಿಗಳು” ಟುಡೇಸ್ ಇಂಗ್ಲಿಷ್ ವರ್ಷನ್] ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” ತಮ್ಮ ಅನೈತಿಕ ಸಂಬಂಧಗಳಲ್ಲಿ ನಿಷ್ಪಯ್ರತ್ನದ ಒಂದು ಲೈಂಗಿಕ ಪಾತ್ರವನ್ನು ಕೈಗೊಳ್ಳುವವರ ಮತ್ತು ಹೆಚ್ಚು ಕ್ರಿಯಾಶೀಲ “ಪುರುಷ” ಪಾತ್ರವನ್ನು ಪಡೆಯುವವರ ಕುರಿತು ಪೌಲನು ನಿರ್ದಿಷ್ಟವಾಗಿ ಪ್ರಸ್ತಾಪಿಸಿದನೆಂಬುದನ್ನು ಗಮನಿಸಿರಿ. ಹೀಗೆ ಎಲ್ಲ ಸಲಿಂಗಿ ಕಾಮಿ ಕೃತ್ಯಗಳನ್ನು ದೇವರು ಅಸಮ್ಮತಿಸುತ್ತಾನೆಂದು ಅವನು ಸ್ಪಷ್ಟಪಡಿಸಿದನು.
ಇದು ರೋಮಾಪುರದವರಿಗೆ 1:18-27ರಲ್ಲಿರುವ ಪೌಲನ ಮಾತುಗಳಿಂದ ಸಹ ಸ್ಪಷ್ಟವಾಗಿಗುತ್ತದೆ: “ದುಷ್ಟತನವನ್ನು ನಡಿಸಿ ಸತ್ಯವನ್ನು ಅಣಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ತೋರಿಬರುತ್ತದೆ. . . . ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಾನಹೀನಮಾಡಿಕೊಳ್ಳಲಿ ಎಂದು ದೇವರು ಅವರನ್ನು ಹೊಲಸಾದ ನಡತೆಗೆ ಒಪ್ಪಿಸಿದನು. . . . ಅವರು ಇಂಥದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು. ಹೇಗಂದರೆ ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದ ಭೋಗವನ್ನು ಅನುಸರಿಸಿದರು. ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ”ದರು. ಇಲ್ಲಿ ನಿರ್ದಿಷ್ಟವಾಗಿ ಪೌಲನು ಸ್ತ್ರೀ ಮತ್ತು ಪುರುಷ ಸಲಿಂಗಿ ಕಾಮವನ್ನು ಖಂಡಿಸಿದನು. ಸಲಿಂಗಿ ಕಾಮದ ರೂಢಿಗಳನ್ನು ಅಸ್ವಾಭಾವಿಕ ಮತ್ತು “ಅವಲಕ್ಷಣ” ಎಂದು ಅವನು ಖಂಡಿಸಿದನು.
ಅಸ್ವಸ್ಥಕರವೊ ಸ್ವಸ್ಥಕರವೊ?
ಬೈಬಲಿನ ದೃಷ್ಟಿಕೋನವು ಕೇವಲ ಪ್ರಾಚೀನ, ಅಪ್ರಚಲಿತವಾದದ್ದಾಗಿದೆ ಎಂದು ಹೇಳುವ ಮೂಲಕ ಪ್ರಾಯಶಃ ಅನೇಕರು ಇದಕ್ಕೆ ಪ್ರತಿಕ್ರಿಯಿಸಸಾಧ್ಯವಿದೆ. ಆದರೆ ನೀವು ಅದರ ಕುರಿತು ಆಲೋಚಿಸುವಾಗ, ನಮ್ಮ ಶಾರೀರಿಕ, ಮಾನಸಿಕ, ಭಾವನಾತ್ಮಕ, ಮತ್ತು ಆತ್ಮಿಕ ಸಂಘಟನೆಯನ್ನು ನಮ್ಮ ಸೃಷ್ಟಿಕರ್ತನಿಗಿಂತಲೂ ಹೆಚ್ಚು ಉತ್ತಮವಾಗಿ ಯಾರು ತಿಳಿದಿದ್ದಾರೆ? ದೇವರು ಪುರುಷನನ್ನು ಮತ್ತು ಸ್ತ್ರೀಯನ್ನು ಉಂಟುಮಾಡಿದನು, ಹಾಗೂ ಪರಸ್ಪರ ಮಹತ್ತಾದ ಆಕರ್ಷಣೆಯನ್ನು ಆತನು ಅವರಲ್ಲಿ ಇಟ್ಟನು. (ಆದಿಕಾಂಡ 1:27, 28) ಅವರು ಒಂದೇ ಲಿಂಗಜಾತಿಯ ಒಬ್ಬರೆಡೆಗೆ ಲೈಂಗಿಕ ಆಕರ್ಷಣೆಯನ್ನು ಹೊಂದಿರುವಂತೆ ಆತನು ಅವರನ್ನು ಉಂಟುಮಾಡಲಿಲ್ಲ. ಇದಲ್ಲದೆ, ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯ ನಡುವೆ ಲೈಂಗಿಕ ಸಂಬಂಧಗಳು ವಿವಾಹದ ಏರ್ಪಾಡಿನೊಳಗೆ ಮಾತ್ರವೇ ಸಂಭವಿಸಬೇಕು ಎಂದು ದೇವರು ನಿಷ್ಕರ್ಷಿಸಿದ್ದಾನೆ.—ಇಬ್ರಿಯ 13:4.
ಇದು ನಮ್ಮಲ್ಲಿ ಕ್ಲಿಷ್ಟತೆಗಳನ್ನು ಉಂಟುಮಾಡುವುದಿಲ್ಲ. ಯೆಶಾಯ 48:17, NWರಲ್ಲಿ “ನಿಮ್ಮನ್ನು ಪ್ರಯೋಜನಪಡಿಸಿಕೊಳ್ಳಲಿಕ್ಕಾಗಿ ನಿಮಗೆ ಬೋಧಿಸು”ವವನಾಗಿದ್ದೇನೆ ಎಂದು ಯೆಹೋವ ದೇವರು ಹೇಳುತ್ತಾನೆ. ಹೌದು, ನಮಗೆ ಯಾವುದು ಸಹಾಯ ಮಾಡುತ್ತದೆ ಮತ್ತು ಯಾವುದು ನಮಗೆ ಹಾನಿಯನ್ನುಂಟುಮಾಡುತ್ತದೆ ಎಂಬುದು ಆತನಿಗೆ ಗೊತ್ತಿದೆ. ಕೆಲವರಿಗೆ ಬೈಬಲಿನ ಬೋಧನೆಗಳು ಅನುಸರಿಸಲು ಕಷ್ಟಕರವಾಗಿ ಕಾಣಬಹುದಾದರೂ, ಅವುಗಳು ಯಾವಾಗಲೂ ‘ಸ್ವಸ್ಥ ಬೋಧನೆ’ಗಳಾಗಿವೆ, ಅಂದರೆ ಮನಸ್ಸು ಮತ್ತು ದೇಹಕ್ಕೆ ಪ್ರಯೋಜನಕರವಾಗಿವೆ. (ತೀತ 2:1) ಮತ್ತೊಂದು ಕಡೆಯಲ್ಲಿ, ಸಲಿಂಗಿ ಕಾಮವು ಒಬ್ಬನ ಶಾರೀರಿಕ, ಭಾವನಾತ್ಮಕ ಮತ್ತು ಆತ್ಮಿಕ ಕ್ಷೇಮಕ್ಕೆ ಕೇವಲ ವಿನಾಶಕರವಾಗಿರಸಾಧ್ಯವಿದೆ.
ಸಲಿಂಗಿ ಕಾಮಿ ಜೀವನ ಶೈಲಿಯು ಎಷ್ಟು ಅಸ್ವಸ್ಥಕರವಾಗಿದೆ ಎಂಬುದಕ್ಕೆ ಏಯ್ಡ್ಸ್ನ ಬಿಕ್ಕಟ್ಟು ಒಂದು ಉದಾಹರಣೆ. ಉತ್ತರ ಅಮೆರಿಕದಲ್ಲಿ, ಬೇರೆ ಯಾವುದೇ ವ್ಯಕ್ತಿಗಳಿಗಿಂತಲೂ ಹೆಚ್ಚಾಗಿ ಸಲಿಂಗಿ ಕಾಮಿ ಪುರುಷರು ಈ ರೋಗವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳು ಅತ್ಯಧಿಕ. ಆದರೆ ಸಲಿಂಗಿ ಕಾಮಿಗಳನ್ನು ಸಾಮಾನ್ಯವಾಗಿ ಬಾಧಿಸುವ ಅಸ್ವಸ್ಥತೆ—ಯಕೃತ್ತಿನ ಊತ (ಹೆಪಟೈಟಿಸ್), ಯಕೃತ್ತಿನ ಸೋಂಕುಗಳು, ಮೇಹರೋಗ, ಸಿಫಿಲಿಸ್, ಮತ್ತು ಜಠರಾಂತ್ರ ಪ್ಯಾರಸೈಟ್—ಗಳ ಶ್ರೇಣಿಯಲ್ಲಿ ಏಯ್ಡ್ಸ್ ಕೇವಲ ಒಂದಾಗಿದೆ. ಈ ರೋಗದ ಹಬ್ಬುವಿಕೆಯನ್ನು ಯಾವುದು ಪ್ರಚೋದಿಸುತ್ತದೆ? ಡಾ. ಜೋಸೆಫ್ ನಿಕಾಲೊಸ್ ವಿವರಿಸುವುದು: “ಸಲಿಂಗಿ ಕಾಮಿ ಜೀವನ ಶೈಲಿಯ ನಿರ್ಬಂಧಿತ, ವ್ಯಸನಕರ ಅಂಶಗಳು ಅನೇಕ ಬರಹಗಾರರಿಂದ ದಾಖಲಿಸಲ್ಪಟ್ಟಿವೆ.” “ಸಲಿಂಗಿ ಕಾಮಿ ಪುರುಷರಲ್ಲಿ 28 ಪ್ರತಿಶತ ಮಂದಿ ಒಂದು ಸಾವಿರ ಅಥವಾ ಹೆಚ್ಚು ಸಹಭಾಗಿಗಳೊಂದಿಗೆ ಲೈಂಗಿಕ ಸಂಭೋಗಗಳನ್ನು ನಡೆಸಿದ್ದರು. . . . ಬಿಳಿಯ ಸಲಿಂಗಿ ಕಾಮಿ ಪುರುಷರಲ್ಲಿ ಬಹುಮಟ್ಟಿಗೆ 50 ಪ್ರತಿಶತ ಮಂದಿ . . . ತಾವು ಕಡಿಮೆ ಪಕ್ಷ 500 ಬೇರೆ ಬೇರೆ ಲೈಂಗಿಕ ಸಹಭಾಗಿಗಳನ್ನು ಹೊಂದಿದ್ದೆವೆಂದು ಅವರು ಹೇಳಿದರು” ಎಂದು ಒಂದು ವ್ಯಾಪಕವಾದ ಅಧ್ಯಯನವು ಪ್ರಕಟಪಡಿಸಿತು.
ಅನೇಕ ಸಲಿಂಗಿ ಕಾಮಿಗಳ ನಡುವೆ “ಅಂತರ್ವೈಯಕ್ತಿಕ ಬದ್ಧತೆ, ಆಪತ್ತೆ, ಅಥವಾ ಜವಾಬ್ದಾರಿಯ ಭಯಗಳು ಇರುತ್ತವೆ . . . ವ್ಯಕ್ತಿಸ್ವರೂಪವಿಲ್ಲದ ಲೈಂಗಿಕತೆಗಾಗಿ ತ್ವರಿತವಾದ ಹಂಬಲಿಸುವಿಕೆಯು ಕೆಲವೊಮ್ಮೆ ವಿಪರೀತ ಬಲಾತ್ಕಾರದ ಗುಣವನ್ನು ಹೊಂದಿದೆ. ಈ ವ್ಯಕ್ತಿಗಳಲ್ಲಿ ಅನೇಕರು ಒಂದೇ ದಿನ ಅಥವಾ ಸಂಜೆಯಲ್ಲಿ ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚು ಲೈಂಗಿಕ ಸಂಭೋಗಗಳಲ್ಲಿ ಒಳಗೂಡಿದಿರ್ದಬಹುದು” ಎಂದು ಹೋಮೊಸೆಕ್ಷ್ಯುಅಲ್ ಬಿಹೇವಿಯರ್ ಎಂಬ ಪುಸ್ತಕವು ವಿವರಿಸುತ್ತದೆ. ಅಂತಹ ಅನಿಯಂತ್ರಿತ ನಡವಳಿಕೆಯು ಸ್ವಸ್ಥಕರವಾಗಿರಸಾಧ್ಯವಿದೆಯೆ? ಬದಲಾಗಿ ಅದು, ಅಸ್ವಸ್ಥಕರವೂ ಅವಮಾನಕರವೂ ಆಗಿಲ್ಲವೆ? ಅಂತಹ ತೀವ್ರಾಭಿಲಾಷೆಯ ಸ್ವೇಚ್ಛಾ ಸಂಪರ್ಕದಲ್ಲಿ ಒಳಗೂಡುವವರು ಸ್ಪಷ್ಟವಾಗಿಗಿ “ಕೆಟ್ಟತನದ ದಾಸ”ರಾಗಿದ್ದಾರೆ.—2 ಪೇತ್ರ 2:19.
ಅದಲ್ಲದೆ, ಹೆಚ್ಚಿನ ಸಲಿಂಗಿ ಕಾಮದ ಲೈಂಗಿಕತೆಯು ಅಸಹ್ಯವೂ, ಹಿಂಸಾತ್ಮಕವೂ, ಮತ್ತು ಪೂರಾ ಕ್ರೂರವಾದದ್ದೂ ಆಗಿದೆ. ಅಪೊಸ್ತಲ ಪೌಲನು ಹೇಳಿದ್ದು: “ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಮಾತಾಡುವದಾದರೂ ನಾಚಿಕೆಗೆ ಕಾರಣವಾಗಿದೆ.” (ಎಫೆಸ 5:12) ಅಂಥ ಹಿಂಸಾಕೃತ್ಯವು, “ಸಂತೋಷ”ದ ಜೀವನ ಶೈಲಿಯೆಂದೆಣಿಸುವ, ಆದರೆ ಅದರ ಹೊರ ತೋರಿಕೆಯ ಕೆಳಗೆ ಅಡಗಿರುವ ಕೋಪ ಮತ್ತು ವೇದನೆಯನ್ನು ಸೂಚಿಸುತ್ತದೆ. ತಾವು ಸ್ವೇಚ್ಛಾ ಸಂಪರ್ಕಿಗಳಲ್ಲ ಎಂದು ಕೆಲವು ಸಲಿಂಗಿ ಕಾಮಿಗಳು ಪ್ರತಿಪಾದಿಸುವುದು ನಿಜ. ಆದರೆ ಒಬ್ಬನೇ ಸಹಭಾಗಿಯನ್ನು ಹೊಂದಿರುವ ಸಲಿಂಗಿ ಕಾಮಿಗಳು ಅಲ್ಪ ಸಂಖ್ಯೆಯಲ್ಲಿದ್ದಾರೆ—ಮತ್ತು ಅವರ ಸಂಬಂಧಗಳು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿವೆ. ಒಂದೇ ಲಿಂಗಜಾತಿಯ ಸಂಭೋಗಗಳು ದೀರ್ಘಕಾಲ ಉಳಿದಾಗಲೂ, ಅವು ಬೈಬಲಿನಲ್ಲಿ ವಿವರಿಸಲ್ಪಟ್ಟಿರುವ ಪ್ರೀತಿಯ ಫಲವಾಗಿರಸಾಧ್ಯವಿಲ್ಲ. ಅಂತಹ ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ.”—1 ಕೊರಿಂಥ 13:4, 5.
ಪರಿಣಾಮಗಳು
ರೋಮಾಪುರ 1:27ರಲ್ಲಿ ಪೌಲನು ಹೇಳುವುದು: “ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ ಲೈಂಗಿಕ ವಕ್ರ ಸ್ವಭಾವದ ಫಲವನ್ನು ತಮ್ಮಲ್ಲಿ ಹೊಂದುವವರಾದರು.” (ಜೆ. ಬಿ. ಫಿಲಿಪ್ಸ್ರ ದ ನ್ಯೂ ಟೆಸ್ಟಮೆಂಟ್ ಇನ್ ಮಾಡರ್ನ್ ಇಂಗ್ಲಿಷ್) ಯಾವ ವಿಧಗಳಲ್ಲಿ? ಈ ಪರಿಣಾಮಗಳಲ್ಲಿ ಒಂದರ ಕುರಿತು ಹೋಮೊಸೆಕ್ಷ್ಯುಅಲ್ ಬಿಹೇವಿಯರ್ ಪುಸ್ತಕವು ವರದಿ ಮಾಡುವುದು: “ಅರ್ಥಗರ್ಭಿತವಾಗಿ ವಿರುದ್ಧಲಿಂಗಕಾಮಿಗಳಿಗಿಂತಲೂ ಹೆಚ್ಚಾಗಿ ಸಲಿಂಗಿ ಕಾಮಿ ಸ್ತ್ರೀಯರು ವಿಪರೀತ ಮದ್ಯಪಾನದ ಉಪಯೋಗ ಮತ್ತು ದುರುಪಯೋಗದಿಂದ ಕಷ್ಟಾನುಭವಿಸುತ್ತಾರೆ.” ಯುವ ಸಲಿಂಗಿ ಕಾಮಿ ಪುರುಷರಲ್ಲಿ ಆತ್ಮಹತ್ಯದ ಪ್ರಯತ್ನಗಳು ಅಸಹಜವಾಗಿ ಸಾಮಾನ್ಯವಾಗಿವೆ ಎಂದು ಕೆಲವು ಸಂಶೋಧಕರು ಸಹ ಪ್ರತಿಪಾದಿಸುತ್ತಾರೆ.
ಎಲ್ಲ ವಿಷಯಗಳಲ್ಲಿ ಅತ್ಯಂತ ಹೆಚ್ಚು ಹಾನಿಕರವಾದುದು ಒಬ್ಬನ ಆತ್ಮಿಕತೆಗೆ ಆಗುವ ಪರಿಣಾಮಗಳೇ. ಸಲಿಂಗಿ ಕಾಮಿಗಳು ಸ್ವತಃ “ಮಾನಸಿಕವಾಗಿ ಅಂಧಕಾರದಲ್ಲಿದ್ದಾರೆ, ಮತ್ತು ದೇವರಿಗೆ ಸಂಬಂಧಿಸಿರುವ ಜೀವದಿಂದ ವಿಮುಖರಾಗಿ” ಕಂಡುಕೊಳ್ಳುತ್ತಾರೆ. (ಎಫೆಸ 4:18, NW) ಆದರೆ ಬೈಬಲಿನ ನಿಯಮಗಳ ಕುರಿತಾದ ಅವರ ಜ್ಞಾನದ ಹೊರತಾಗಿಯೂ ಒಂದೇ ಲಿಂಗಜಾತಿಯ ಕಡೆಗೆ ತಾವು ಆಕರ್ಷಿತರಾಗಿರುವದನ್ನು ಕಂಡುಕೊಳ್ಳುವ ದೇವ ಭಯವುಳ್ಳ ಯುವ ಜನರ ಕುರಿತಾಗಿ ಏನು? ಸ್ಪಷ್ಟವಾಗಿಗಿ, ಅವರು ಹೋರಾಡಬೇಕಾದ ಒಂದು ನೈಜ ಹೋರಾಟವು ಅವರಿಗಿದೆ. ನಿಶ್ಚಯವಾಗಿ, ಸಲಿಂಗಿ ಕಾಮವನ್ನು ದೇವರು ಹೇಗೆ ದೃಷ್ಟಿಸುತ್ತಾನೆ ಎಂಬುದನ್ನು ತಿಳಿಯುವುದು ಅಂತಹವರಿಗೆ ‘ಕೆಟ್ಟತನವನ್ನು ಹೇಸಲು’ ಸಹಾಯ ಮಾಡುತ್ತದೆ. (ರೋಮಾಪುರ 12:9) ತಪ್ಪಾದ ಅಪೇಕ್ಷೆಗಳಿಗೆ ಒಳಪಡಿಸಿಕೊಳ್ಳುವುದನ್ನು ತಡೆಗಟ್ಟಲಿಕ್ಕಾಗಿ ಅವರು ತೆಗೆದುಕೊಳ್ಳಬಲ್ಲ ಅನೇಕ ಪ್ರಾಯೋಗಿಕ ಹೆಜ್ಜೆಗಳು ಸಹ ಇವೆ. ಇದು ಮುಂದಿನ ಲೇಖನದ ವಿಷಯವಾಗಿರುವುದು.
[ಅಧ್ಯಯನ ಪ್ರಶ್ನೆಗಳು]
a ನಮ್ಮ ಹಿಂದಿನ ಸಂಚಿಕೆಯಲ್ಲಿ “ಯುವ ಜನರು ಪ್ರಶ್ನಿಸುವುದು . . . ನನಗೆ ಈ ಅನಿಸಿಕೆಗಳೇಕೆ?” ಎಂಬ ಲೇಖನವನ್ನು ನೋಡಿರಿ.
[ಪುಟ 32 ರಲ್ಲಿರುವ ಚಿತ್ರ]
ಸಲಿಂಗಿ ಕಾಮಿ ಜೀವನ ಶೈಲಿಯು ಸ್ವೇಚ್ಛಾ ಸಂಪರ್ಕ, ಭಾವನಾತ್ಮಕ ಆಶಾಭಂಗ, ಮತ್ತು ರೋಗದಿಂದ ಗುರುತಿಸಲ್ಪಡುತ್ತದೆ