ಸುವರ್ಣ ನಿಯಮ ಈಗಲೂ ಯಾಕೆ ಮೌಲ್ಯತೆಯುಳ್ಳದ್ದು?
ಶುದ್ಧ ಬಂಗಾರವು ಎಂದಿಗೂ ಕಳೆಗುಂದುವುದಿಲ್ಲ, ಆದುದರಿಂದಲೇ ಬಂಗಾರದಿಂದ ರಚಿಸಿದ ಆಭರಣಗಳು ಅಪೇಕ್ಷಿಸಲ್ಪಡುತ್ತವೆ ಮತ್ತು ಬೆಲೆಯುಳ್ಳದ್ದಾಗಿರುತ್ತವೆ. ಚಿನ್ನದ ವಸ್ತುಗಳನ್ನು ಬಿಸಾಡುವುದರ ಬದಲು ಅಕ್ಕಸಾಲಿಗನು ಈ ಮೂಲ್ಯತೆಯ ಲೋಹದ ಮೇಲೆ ಕೆಲಸ ಮಾಡಿ ಇತರ ಕಲಾತ್ಮಕ ಹೊಸ ಆಕಾರವನ್ನು ಉಂಟುಮಾಡುತ್ತಾನೆ ಯಾಕಂದರೆ ಬಂಗಾರವು ತನ್ನ ಕ್ರಯವನ್ನು ಉಳಿಸಿಕೊಳ್ಳುತ್ತದೆ.
ತದ್ರೀತಿಯಲ್ಲಿ, ಯೇಸುವು ಸುವರ್ಣ ನಿಯಮವನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಉಚ್ಛರಿಸಿದರೂ, ಅದರ ಮೌಲ್ಯವು ಕಡಿಮೆಯಾಗಲಿಲ್ಲ. ಅದರ ಮೌಲ್ಯತೆಗೆ ಕಾರಣಗಳೇನು ಎಂದು ಲೋಹ ಪರೀಕ್ಷೆ ಯಾ ಮಾಪನಮಾಡುವುದರ ಮೂಲಕ, ಇಂದು ಅದು ನಮಗೆ ಹೇಗೆ ಮೌಲ್ಯತೆಯದ್ದಾಗಿರುತ್ತದೆಂದು ನಾವು ಹೆಚ್ಚು ಗಣ್ಯತೆಮಾಡಲು ಆಗುತ್ತದೆ.
ಯೇಸುವು ಸುವರ್ಣ ನಿಯಮವನ್ನು ಕೊಟ್ಟಾಗ, “ಆದುದರಿಂದ, ಜನರು ನಿಮಗೆ ಮಾಡಬೇಕೆಂದು ಬಯಸುವ ಎಲ್ಲಾ ಸಂಗತಿಗಳನ್ನು, ನೀವು ಕೂಡಾ ಅದನ್ನೇ ಅವರಿಗೆ ಮಾಡತಕ್ಕದ್ದು,” ಅವನು ಕೂಡಿಸಿದ್ದು: “ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.” (ಮತ್ತಾಯ 7:12, NW) ಅವನನ್ನು ಆಲಿಸುತ್ತಿದ್ದ ಯೇಸುವಿನ ಶಿಷ್ಯರು ಮತ್ತು ಇತರರು ಇದನ್ನು ಹೇಗೆ ಅರ್ಥ ಮಾಡಿಕೊಂಡರು?
“ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ”
“ಧರ್ಮಶಾಸ್ತ್ರ” ವೆನ್ನುವಾಗ ಆದಿಕಾಂಡದಿಂದ ಧರ್ಮೋಪದೇಶಕಾಂಡದ ತನಕದ ಬೈಬಲಿನ ಮೊದಲ ಐದು ಪುಸ್ತಕಗಳ ಆರಂಭದ ಬರವಣಿಗೆಗಳಿಗೆ ನಿರ್ದೇಶಿಸಲ್ಪಟ್ಟಿತ್ತು. ದುಷ್ಟತನವನ್ನು ಕೊನೆಗೊಳಿಸುವ ಒಂದು ಸಂತಾನವನ್ನು ಉತ್ಪಾದಿಸುವ ದೇವರ ಉದ್ದೇಶವನ್ನು ಇದು ಪ್ರಕಟಿಸುತ್ತದೆ. (ಆದಿಕಾಂಡ 3:15) ಈ ಆರಂಭದ ಬೈಬಲ್ ಪುಸ್ತಕಗಳಲ್ಲಿ ಮೋಶೆಯು ಮಧ್ಯಸ್ಥನಾಗಿ ಸೀನಾಯಿ ಪರ್ವತದಲ್ಲಿ ಇಸ್ರಾಯೇಲ್ ಜನಾಂಗಕ್ಕೆ ಯೆಹೋವನು ಸಾ.ಶ.ಪೂ. 1513 ರಲ್ಲಿ ಕೊಟ್ಟ ನಿಯಮಶಾಸ್ತ್ರ ಇಲ್ಲವೇ ಆಜ್ಞೆಗಳ ಒಂದು ಪಟ್ಟಿಯೂ ಸೇರಿತ್ತು.
ಸುತ್ತಲಿರುವ ಅನ್ಯ ಜನಾಂಗಗಳಿಂದ ದೈವಿಕ ನಿಯಮ ಇಸ್ರಾಯೇಲ್ಯರನ್ನು ಪ್ರತ್ಯೇಕಿಸಿತ್ತು ಮತ್ತು ಯೆಹೋವನ ಮುಂದಿರುವ ಅವರ ಮೆಚ್ಚಿಕೆಯ ನಿಲುವನ್ನು ಭಂಗಗೊಳಿಸುವ ಯಾವುದನ್ನೇ ಇಸ್ರಾಯೇಲ್ಯರು ಮಾಡಬಾರದಿತ್ತು. ಅವರು ಅವನ ಸಂಪೂರ್ಣ ಆಸ್ತಿಯಾಗಿದ್ದರು ಮತ್ತು ಅವನಿಂದ ಆಶೀರ್ವಾದಗಳನ್ನು ಪಡೆಯಲು ಅವರು ಆ ರೀತಿ ಇರಬೇಕಿತ್ತು. (ವಿಮೋಚನಕಾಂಡ 19:5; ಧರ್ಮೋಪದೇಶಕಾಂಡ 10:12, 13) ದೇವರಿಗೆ ಅವರಿಗಿರುವ ಹಂಗುಗಳ ಜತೆಗೆ ಮೋಶೆಯ ನಿಯಮವು ಇಸ್ರಾಯೇಲಿನಲ್ಲಿದ್ದ ಪರದೇಶಸ್ಥರಿಗೆ ಒಳಿತನ್ನು ಮಾಡುವ ಜವಾಬ್ದಾರಿಯನ್ನು ವಿವರಿಸಿಯದೆ. ಉದಾಹರಣೆಗೆ ಅದು ತಿಳಿಸಿದ್ದು: “ಪರದೇಶದವರೂ ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.” (ಯಾಜಕಕಾಂಡ 19:34) ಇಸ್ರಾಯೇಲಿನ ರಾಜರುಗಳ ಕಾಲದಲ್ಲಿ, ಯೆರೂಸಲೇಮಿನಲ್ಲಿ ದೇವರ ಆಲಯವನ್ನು ಕಟ್ಟುವುದರಲ್ಲಿ ಭಾಗಿಗಳಾಗುವಂತಹ ಅನೇಕ ಸುಯೋಗಗಳಲ್ಲಿ ಪರದೇಶಸ್ಥರು ಪಾಲಿಗರಾದರು.—1 ಪೂರ್ವಕಾಲವೃತ್ತಾಂತ 22:2.
ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ನಿಯಮ ಶಾಸ್ತ್ರ ವು ವ್ಯಭಿಚಾರ, ನರಹತ್ಯೆ, ಕಳ್ಳತನ ಮತ್ತು ಲೋಭತ್ವವನ್ನು ನಿಷೇಧಿಸಿತ್ತು. ಈ ಪ್ರತಿಬಂಧಕಾಜ್ಞೆಗಳೊಟ್ಟಿಗೆ “ಬೇರೆಲ್ಲಾ ಯಾವುದೇ ಕಟ್ಟಳೆಗಳು ಇವೆಯೋ” ಅವೆಲ್ಲಾ ಈ ಸೂತ್ರದಲ್ಲಿ ಒಳಗೂಡಿವೆ: “ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು.” ಅಪೊಸ್ತಲನು ಕೂಡಿಸಿದ್ದು: “ಪ್ರೀತಿಯು ಒಬ್ಬನ ನೆರೆಯವನಿಗೆ ಯಾವ ಕೇಡನ್ನೂ ಮಾಡುವುದಿಲ್ಲ; ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ.”—ರೋಮಾಪುರದವರಿಗೆ 13:9, 10.
ವಿವರಿಸಲ್ಪಟ್ಟ ನಿಯಮ ಶಾಸ್ತ್ರ ವು ಸುವರ್ಣ ನಿಯಮಕ್ಕೆ ನಿಜ ಬುನಾದಿಯಾಗಿರುವುದಾದರೆ, “ಪ್ರವಾದಿಗಳ” ಕುರಿತಾಗಿ ಏನು?
ಹಿಬ್ರಿಯ ಶಾಸ್ತ್ರ ಗಳ ಪ್ರವಾದಿಗಳ ಪುಸ್ತಕಗಳು ತದ್ರೀತಿಯಲ್ಲಿ ಸುವರ್ಣ ನಿಯಮದ ಮೌಲ್ಯತೆಗಳನ್ನು ಸ್ಥಿರೀಕರಿಸುತ್ತವೆ. ದೇವರೋಪಾದಿ ಯೆಹೋವನು ನಂಬಿಗಸ್ತಿಕೆಯಿಂದ ಅವನ ಉದ್ದೇಶವನ್ನು ನೆರವೇರಿಸುತ್ತಾನೆ ಎಂದು ತೋರಿಸುತ್ತದೆ. ತಮ್ಮ ಹಟಮಾರಿತನದ ಕೃತ್ಯಗಳಿಗಾಗಿ ನಿಜ ಪಶ್ಚಾತ್ತಾಪ ಪ್ರದರ್ಶಿಸಿ, ಅಪರಿಪೂರ್ಣರಾದರೂ ಅವನ ಚಿತ್ತವನ್ನು ಮಾಡಲು ಪ್ರಯತ್ನಿಸುವ ತನ್ನ ನಂಬಿಗಸ್ತ ಸೇವಕರನ್ನು ಅವನು ಆಶೀರ್ವದಿಸುತ್ತಾನೆ. “ನಿಮ್ಮನ್ನು ತೊಳೆದು ಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ; ಸದಾಚಾರವನ್ನು ಅಭ್ಯಾಸಿಸಿರಿ; ನ್ಯಾಯ ನಿರತರಾಗಿರಿ, ಹಿಂಸಕನನ್ನು ತಿದ್ದಿ ಸರಿಪಡಿಸಿರಿ, ಅನಾಥನಿಗೆ ನ್ಯಾಯ ತೀರಿಸಿರಿ, ವಿಧವೆಯ ಪಕ್ಷವಾಗಿ ವಾದಿಸಿರಿ.”—ಯೆಶಾಯ 1:16, 17.
ಇತರರಿಗೆ ಮತ್ತು ದೇವರಿಗೆ ದೇವರ ಜನರು ಒಳಿತನ್ನು ಮಾಡಿದಾಗ, ಯೆಹೋವನು ಅವನ ಬೆಂಬಲವನ್ನು ವಾಗ್ದಾನಿಸಿದ್ದಾನೆ. “ಯೆಹೋವನು ಹೀಗನ್ನುತ್ತಾನೆ—ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ; . . . ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದ ಮಾನವನು ಭಾಗ್ಯವಂತನು.”—ಯೆಶಾಯ 56:1, 2.
ಕ್ರಿಸ್ತನು ಅವನ ಸಭೆಯನ್ನು ಮಾರ್ಗದರ್ಶಿಸುತ್ತಾನೆ
ಕ್ರಿಸ್ತನು ನಿಯಮ ಶಾಸ್ತ್ರ ಮತ್ತು ಪ್ರವಾದಿಗಳ ವಚನಗಳನ್ನು ನೆರವೇರಿಸಲು ಬಂದನು ಮತ್ತು ಅವನ ಸಮಯದಿಂದ ಯೆಹೋವನ ನಿತ್ಯ ಉದ್ದೇಶವು ಪ್ರಗತಿಯಾಗುತ್ತಾ ಇದೆ. (ಮತ್ತಾಯ 5:17; ಎಫೆಸದವರಿಗೆ 3:10, 11, 17-19) ಮೋಶೆಯ ಹಳೆಯ ನಿಯಮ ಶಾಸ್ತ್ರ ದ ಸ್ಥಾನದಲ್ಲಿ ಹೊಸ ಒಡಂಬಡಿಕೆ ಬಂತು, ಇದು ಯೆಹೂದ್ಯ ಮತ್ತು ಅನ್ಯ ಜನಾಂಗಗಳ ಅಭಿಷಿಕ್ತ ಕ್ರೈಸ್ತರನ್ನು ಒಟ್ಟಿಗೆ ಮಾಡುತ್ತದೆ. (ಯೆರೆಮೀಯ 31:31-34) ಆದಾಗ್ಯೂ, ನಮ್ಮ ದಿನಗಳ ಕ್ರೈಸ್ತ ಸಭೆಯು ಈಗಲೂ ಸುವರ್ಣ ನಿಯಮವನ್ನು ಪಾಲಿಸುತ್ತದೆ. ಮತ್ತು ಇಲ್ಲಿ ಈ ನಿಯಮದ ಮೌಲ್ಯತೆಯನ್ನು ಸ್ವೀಕರಿಸಲು ಇನ್ನೊಂದು ಕಾರಣವಿರುತ್ತದೆ: ಆಧುನಿಕ ದಿನಗಳ ಕ್ರೈಸ್ತ ಸಭೆಯ ಕ್ರಿಯಾಶೀಲ ಶಿರಸ್ಸಾಗಿ ಕ್ರಿಸ್ತನು ಇದ್ದಾನೆ. ಅವನು ತನ್ನ ಆಜ್ಞೆಗಳನ್ನು ಬದಲಾಯಿಸಲಿಲ್ಲ. ಅವನ ಪ್ರೇರಿತ ಸಲಹೆಯು ಇಂದು ಒಳಿತಾಗಿದ್ದು ಜ್ಯಾರಿಯಲ್ಲಿರುತ್ತದೆ.
ಈ ಭೂಮಿಯನ್ನು ಬಿಟ್ಟು ಹೋಗುವ ಮುನ್ನ, ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವಂತೆ ಮತ್ತು ಅವರಿಗೆ “ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ” ಕಲಿಸಲು ಅವನ ಹಿಂಬಾಲಕರಿಗೆ ಆಜ್ಞಾಪಿಸಿದನು. ಆ ಆಜ್ಞಾಪನೆಯಲ್ಲಿ ಸುವರ್ಣ ನಿಯಮವೂ ಕೂಡಿದೆ. ಯೇಸುವು ತನ್ನ ಶಿಷ್ಯರಿಗೆ ವಾಗ್ದಾನಿಸಿದ್ದು: “ನೋಡಿರಿ ! ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ತನಕ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 28:19, 20.
ಲೂಕ 6:31 ರಲ್ಲಿ ದಾಖಲಿಸಿದ ಪ್ರಕಾರ, ಯೇಸುವು ಅಪ್ಪಣೆ ಕೊಟ್ಟದ್ದು: “ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅಂಥದ್ದನ್ನೇ ನೀವು ಅವರಿಗೆ ಮಾಡಿರಿ.” ಇತರರಿಗೆ ಒಳ್ಳೆಯದನ್ನು ಮಾಡುವ ಮೊದಲ ಹೆಜ್ಜೆ ತೆಗೆದುಕೊಳ್ಳುವುದರಲ್ಲಿ ಯೇಸುವು ಎಂತಹ ಒಂದು ಉತ್ತಮ ಮಾದರಿಯಾಗಿದ್ದಾನೆ!
ಅವನ ಐಹಿಕ ಶುಶ್ರೂಷೆಯ ಸಮಯಾವಧಿಯಲ್ಲಿ ಜನರು ಏನೆಲ್ಲಾ ಸಂಗತಿಗಳನ್ನು ತಾಳಿಕೊಳ್ಳಬೇಕು ಎಂದು ಜಾಗರೂಕತೆಯಿಂದ ಅವಲೋಕಿಸಿದನು ಮತ್ತು ಅವರ ಕಡೆಗೆ ಅವನಿಗೆ ಭಾವನೆಯಿತ್ತು. ಅವನ ಪ್ರಚಾರದ ಒಂದು ಪ್ರಯಾಣದಲ್ಲಿ, ಅವನು ಜನಸಮೂಹಗಳನ್ನು ಕಂಡು ಅವರಿಗಾಗಿ ಕನಿಕರ ಪಟ್ಟನು. ಅದಕ್ಕಿಂತಲೂ ಹೆಚ್ಚಾಗಿ ಅವರಿಗೆ ನೆರವಾಗಲು ಏರ್ಪಾಡುಗಳನ್ನು ಮಾಡಿದನು. ಹೇಗೆ? ಅಧಿಕ ತೀವ್ರತಮವಾಗಿ ಸಾರುವ ಚಟುವಟಿಕೆಯನ್ನು ಮಾಡಲು ಸಂಸ್ಥಾಪಿಸಿದರ್ದ ಮೂಲಕ ಅವನ ಶಿಷ್ಯರು ಜನರ ಮನೇ ಬಾಗಲಿಗೆ ಹೋಗುವಂತೆ ಆಯಿತು. ಅವನು ಮಾರ್ಗದರ್ಶಿಸಿದ್ದು: “ನೀವು ಯಾವುದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರು ಎಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ.” ಯೇಸುವಿನ ಮುಂದಿನ ಮಾತುಗಳಿಂದ ಈ ಕೆಲಸದ ಮೇಲೆ ಅವನ ತಂದೆಯ ಆಶೀರ್ವಾದ ಮತ್ತು ಅವನ ಬೆಂಬಲ ಇತ್ತೆಂದು ಸ್ಪಷ್ಟವಾಗಿ ಕಾಣಬಹುದು: “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿ ಕೊಟ್ಟಾತನನ್ನೇ ಸೇರಿಸಿ ಕೊಳ್ಳುವವನಾಗಿದ್ದಾನೆ. . . . ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲ ಅವನಿಗೆ ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 9:36–10:42.
ಆ ಸುವರ್ಣ ನಿಯಮದಲ್ಲಿ ಇತರರ ಪರವಾಗಿ ಸಕಾರಾತ್ಮಕ ಕೃತ್ಯಗಳನ್ನು ನಡಿಸುವುದು ಒಳಗೂಡಿದೆ ಎಂದು ಇನ್ನೊಂದು ಸಂದರ್ಭದಲ್ಲಿ ಯೇಸುವಿನ ತರ್ಕದಲ್ಲಿ ಕಾಣಬರುತ್ತದೆ: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. ನಿಮಗೆ ಮೇಲನ್ನು ಮಾಡುವವರಿಗೇ ನೀವು ಮೇಲನ್ನು ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. . . . ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರ ಮಾಡಿರಿ. . . . ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವುದು.”(ಲೂಕ 6:32, 33, 35) ಆದುದರಿಂದ, ಇಂದೂ ಮೌಲ್ಯತೆಯುಳ್ಳ ಸುವರ್ಣ ನಿಯಮವನ್ನು ಪರಿಪಾಲಿಸುವುದರಿಂದ, ನಾವು ವೈಯಕ್ತಿಕವಾಗಿ ತಿಳಿಯದ ಜನರಿಗೂ ಒಳಿತನ್ನು ಮಾಡಲು ಪ್ರಥಮ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ನಮ್ಮನ್ನು ಅದು ಪ್ರಚೋದಿಸುತ್ತದೆ.
ಈಗಲೂ ಮೌಲ್ಯತೆಯದ್ದು, ಈಗಲೂ ಪರಿಣಾಮಕಾರೀ
ಸುವರ್ಣ ನಿಯಮವು ಈಗಲೂ ಮೌಲ್ಯತೆಯದ್ದಾಗಿದೆ ಎಂಬ ಪ್ರಾಯಶಃ ಅತಿ ನಿರ್ಣಾಯಕ ರುಜುವಾತು, ಆ ನಿಯಮಕ್ಕನುಸಾರ ಜೀವಿಸುವವರ ನೈಜ ಅನುಭವಗಳಿಂದ ಬರುತ್ತದೆ. ದೇವರ ನಿಯಮಗಳಿಗನುಸಾರ ತಮ್ಮ ದೈನಂದಿನ ನಡತೆಯಲ್ಲಿ ಬದುಕುವಂತಹ ಕ್ರೈಸ್ತರು ಮಹಾ ಆನಂದವನ್ನು ಮತ್ತು ಆಗಾಗ್ಯೆ, ಅನಿರೀಕ್ಷಿತ ಆಶೀರ್ವಾದಗಳನ್ನು ಕಂಡುಕೊಳ್ಳುತ್ತಾರೆ. ವೈದ್ಯಕೀಯ ಶುಶ್ರೂಷೆ ಪಡೆಯುವಲ್ಲಿನ ಕಾರ್ಮಿಕರಿಗೆ ಒಬ್ಬ ಕ್ರೈಸ್ತ ಸ್ತ್ರೀಯು ವಿನಮ್ರಳೂ, ದಯಾಪರಳೂ ಆಗಿದ್ದುದರಿಂದ ಅವಳ ಜಾಗ್ರತೆ ವಹಿಸುವಲ್ಲಿ ದಾದಿಯರು ಮತ್ತು ವೈದ್ಯರು ತಮ್ಮ ಎಲ್ಲೆ ಮೀರಿ ಅವಳಿಗೆ ಸಹಾಯ ಮಾಡುವುದನ್ನು ಅವಳು ಕಂಡುಕೊಂಡಳು.
ಶೀಘ್ರವಾಗಿ ರಾಜ್ಯ ಸಭಾಗೃಹಗಳನ್ನು ಕಟ್ಟುವ ಯೋಜನೆಗಳಲ್ಲಿ ಒಳಗೂಡಿರುವ ಯೆಹೋವನ ಸಾಕ್ಷಿಗಳು ಸುವರ್ಣ ನಿಯಮದ ಮೌಲ್ಯತೆಯ ಪರವಾಗಿ ಸಾಕ್ಷ್ಯ ನೀಡಶಕ್ತರು. ಏನನ್ನು ಯೋಜಿಸಲಾಗಿದೆ ಎನ್ನುವುದರ ಕುರಿತಾಗಿ ಕಟ್ಟೋಣದ ನಿವೇಶನದ ಆಸುಪಾಸಿನಲ್ಲಿ ಜೀವಿಸುವ ಜನರಿಗೆ ತಿಳಿಸಲು ಮಾಡಿದ ದಯಾಪರ ಭೇಟಿಗಳು ಸಕಾರಾತ್ಮಕ ಪ್ರತಿವರ್ತನೆಗಳನ್ನು ಹೊಂದಿವೆ. ರೀತಿ ಮೊದಲು ಸಾಕ್ಷಿಗಳನ್ನು ವಿರೋಧಿಸುತ್ತಿದ್ದವರು, ತಮ್ಮ ನೆರೆಯವರಿಗೆ ಒಳ್ಳೆಯದನ್ನು ಸಾಕ್ಷಿಗಳು ಮಾಡುತ್ತಾರೆ ಎಂದವರು ಅವಲೋಕಿಸ ಶಕ್ತರಾಗಿದ್ದಾರೆ ಮತ್ತು ತಮ್ಮ ಕೆಲಸಗಳಲ್ಲಿ ದೇವರ ಜನರು ಸಹಕರಿಸುವುದನ್ನು ಕಣ್ಣಾರೆ ಕಾಣುತ್ತಾರೆ. ಫಲಿತಾಂಶವಾಗಿ, ನೇರವಾಗಿ ಯಾ ಒದಗಿಸುವಿಕೆಗಳು ಸಿಗುವಂತೆ ಮಾಡುವುದರಿಂದ ಕಟ್ಟಡದ ನಿರ್ಮಾಣ ಕೆಲಸದಲ್ಲಿ ಕೆಲವರು ನೆರವಾಗಿದ್ದಾರೆ.—ಜೆಕರ್ಯ 8:23 ನ್ನು ಹೋಲಿಸಿರಿ.
ಒಂದು ಅಂಗಡಿಯಿಂದ ಇಂಗ್ಲೆಂಡಿನ ಲಂಡನಿನಲ್ಲಿ ಇರಾನ್ ದೇಶದ ಸಾಕ್ಷಿಯೊಬ್ಬನು ಕೆಲವೊಂದು ಆಹಾರವನ್ನು ಖರೀದಿಸಿದಾಗ, ಅಂಗಡಿಗಾರನು ಅವನನ್ನು ಅವಮಾನಿಸಿದನು ಕಾರಣ ಅವನು ವಿದೇಶಿಯನಾಗಿದ್ದನು. ಆದರೂ ಸಾಕ್ಷಿಯು ವಿಚಲಿತನಾಗದೇ, ದಯೆಯಿಂದ ಮತ್ತು ಜಾಣತನದಿಂದ ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದೂ, ಆದುದರಿಂದ ಇತರ ರಾಷ್ಟ್ರಗಳ ಜನರ ಕಡೆಗೆ ಅವನಿಗೆ ಯಾವುದೇ ಕಡು ಮನೋಭಾವ ಇಲ್ಲವೆಂದೂ ವಿವರಿಸಿದನು. ಬದಲಾಗಿ, ಎಲ್ಲಾ ನೆರೆಹೊರೆಯಲ್ಲಿ ಬೈಬಲ್ ಸಂದೇಶದೊಂದಿಗೆ ತಾನವರನ್ನು ಸಂದರ್ಶಿಸಿದನು. ಫಲಿತಾಂಶ? ಕೇಳಿದ ಆಹಾರದ ವಸ್ತುಗಳೊಟ್ಟಿಗೆ ಹೆಚ್ಚು ರಸಭಕ್ಷ್ಯಗಳನ್ನು ಅಂಗಡಿಗಾರನು ಕೂಡಿಸಿದನು.
ನಿಜವಾಗಿಯೂ ಸುವರ್ಣ ನಿಯಮವು ಕೇವಲ ಅಂತಹ ಚಿಕ್ಕರೂಪದ ದಯೆಯ ಕ್ರಿಯೆಗಳಿಗೆ ಸೀಮಿತವಾಗಿಲ್ಲ. ನಿಶ್ಚಯವಾಗಿ, ಅದರ ಅತ್ಯುತ್ತಮ ವ್ಯಕ್ತಪಡಿಸುವಿಕೆಯು, ದೇವರ ರಾಜ್ಯದ ಸುವಾರ್ತೆಯೊಂದಿಗೆ ಲೋಕವ್ಯಾಪಕವಾಗಿ ತಮ್ಮ ನೆರೆಯವರ ಮನೆಗಳನ್ನು ಕ್ರಮವಾಗಿ ಭೇಟಿ ನೀಡುವುದರಿಂದ ಒಳಿತನ್ನು ಮಾಡುವುದೇ ಆಗಿದೆ.
ಸುವರ್ಣ ನಿಯಮಕ್ಕನುಸಾರ ಜೀವಿಸುವುದು
ಸುವರ್ಣ ನಿಯಮವನ್ನು ಅನ್ವಯಿಸುವುದು ಅಂದರೆ ನಿಮ್ಮ ಗಮನವನ್ನು ಇತರರೆಡೆಗೆ ತಿರುಗಿಸುವುದೇ ಆಗಿದೆ. ಇದು ಒಂದು ಸಕಾರಾತ್ಮಕ ಮಾರ್ಗದರ್ಶಕವಾಗಿದೆ. ನಿಮ್ಮ ಸುತ್ತಲಿರುವವರಿಗೆ ಒಳಿತನ್ನು ಮಾಡಲು ನೀವು ಸಂದರ್ಭಗಳನ್ನು ಹುಡುಕುವಿರಿ. ಇತರರಿಗಾಗಿ ಶ್ರಮ ವಹಿಸುವವರೂ, ಗಮನ ಹರಿಸುವವರೂ ಆಗಿದ್ದು, ಅವರಲ್ಲಿ ವೈಯಕ್ತಿಕ ಅಭಿರುಚಿ ತೆಗೆದು ಕೊಳ್ಳಿರಿ ! (ಫಿಲಿಪ್ಪಿಯವರಿಗೆ 2:4) ಹೀಗೆ ಮಾಡುವುದರಿಂದ, ನೀವು ವಿಫುಲವಾದ ಆಶೀರ್ವಾದಗಳನ್ನು ಕೊಯ್ಯುವಿರಿ. ನೀವು ಯೇಸುವಿನ ಬುದ್ಧಿವಾದವನ್ನು ಅನುಸರಿಸುವವರಾಗಿರುವಿರಿ: “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:16) ಇದರ ಫಲವಾಗಿ, ನೀವು ಆತುರತೆಯಿಂದ ಯೆಹೋವನನ್ನು ಹುಡುಕುವುದರಿಂದ ಮತ್ತು ಸುವರ್ಣ ನಿಯಮದ ಪ್ರಕಾರ ಪ್ರತಿ ದಿನ ಜೀವಿಸುವುದರಿಂದ, ಯೆಹೋವನು ನಿಮ್ಮ ಬಹುಮಾನ-ದಾತನಾಗುವನು.—ಇಬ್ರಿಯರಿಗೆ 11:6. (w89 11/1)