ದೇವರು ಮಾಡಿರುವುದಕ್ಕೆ ನೀವು ಗಣ್ಯತೆಯುಳ್ಳವರಾಗಿದ್ದೀರೊ?
“ಯಾವನಿಗಾದರೂ ನನ್ನ ಹಿಂದೆ ಬರುವ ಅಪೇಕ್ಷೆಯಿರುವಲ್ಲಿ ಅವನು ತನ್ನನ್ನು ನಿರಾಕರಿಸಿ ದಿನೇದಿನೇ ತನ್ನ ಯಾತನಾಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ.”—ಲೂಕ 9:23, NW.
1. ದೇವರು ಕೊಟ್ಟಿರುವ ಅದ್ಭುತ ಕೊಡುಗೆಗಳಲ್ಲಿ ಕೆಲವು ಯಾವುವು?
ನಮ್ಮ ಜೀವಗಳಿಗೆ ನಾವು ದೇವರಿಗೆ ಹಂಗಿಗರು. ಆತನು ಮಾನವ ಜಾತಿಯನ್ನು ಸೃಷ್ಟಿಸಿದಿರ್ದದಿದ್ದರೆ ನಾವು ಹುಟ್ಟುತ್ತಿರಲಿಲ್ಲ. ಆದರೆ ಆತನು ಜೀವಕ್ಕಿಂತ ಹೆಚ್ಚಿನದನ್ನು ಸೃಷ್ಟಿಸಿದನು. ನಾವು ಅನೇಕ ವಿಷಯಗಳಲ್ಲಿ ಆನಂದಿಸುವಂತೆ ಆತನು ನಿರ್ಮಿಸಿದನು: ಆಹಾರದ ರುಚಿ, ಸೂರ್ಯ ಬೆಳಕಿನ ಕಾವು, ಸಂಗೀತದ ಧ್ವನಿ, ವಸಂತಕಾಲ ದಿನದ ಲವಲವಿಕೆ, ಪ್ರೇಮದ ಕೋಮಲತೆ. ಇದಕ್ಕಿಂತಲೂ ಹೆಚ್ಚಾಗಿ ದೇವರು ನಮಗೆ ಒಂದು ಮನಸ್ಡ್ಸನ್ನು, ಆತನ ವಿಷಯವಾಗಿ ಕಲಿಯುವ ಅಪೇಕ್ಷೆಯನ್ನು ಕೊಟ್ಟನು. ಆತನು, ಯಾವುದು ಸ್ವಸ್ಥ ಮಾರ್ಗದರ್ಶನವನ್ನು ನೀಡುತ್ತದೊ, ಹೆಚ್ಚು ಸಂತೋಷಭರಿತ ಜೀವನವನ್ನು ನಡೆಸುವಂತೆ ತೋರಿಸುತ್ತದೊ ಮತ್ತು ಆತನ ನೂತನ ಜಗತ್ತಿನಲ್ಲಿ ಸದಾ ಬದುಕುವ ನಿರೀಕ್ಷೆಯನ್ನು ಒದಗಿಸುತ್ತದೊ ಆ ಬೈಬಲನ್ನು ಪ್ರೇರಿಸಿದನು. ದೇವರು, ನಾವು ಆತನ ಸೇವೆಯಲ್ಲಿ ದೃಢವಾಗಿರುವಂತೆ ಸಹಾಯ ಮಾಡಲಿಕ್ಕಾಗಿ ಪವಿತ್ರಾತ್ಮವನ್ನು, ಸ್ಥಳೀಕ ಸಭೆಯ ಬೆಂಬಲವನ್ನು ಮತ್ತು ಪ್ರಾಯಸ್ಥರಾದ ಪುರುಷ, ಸ್ತ್ರೀಯರನ್ನು ಒದಗಿಸಿದ್ದಾನೆ.—ಆದಿಕಾಂಡ 1:1, 26-28; 2 ತಿಮೊಥಿ 3:15-17; ಇಬ್ರಿಯ 10:24, 25; ಯಾಕೋಬ 5:14, 15.
2. (ಎ) ದೇವರು ನಮಗೆ ಮಾಡಿರುವ ಅತಿ ಮಹತ್ವದ ವಿಷಯವಾವುದು? (ಬಿ) ನಾವು ಕ್ರಿಯೆಗಳ ಮೂಲಕ ರಕ್ಷಣೆ ಸಂಪಾದಿಸಬಹುದೆ?
2 ಇದೆಲ್ಲ ವಿಷಯಗಳಿಗೆ ಸೇರಿಕೆಯಾಗಿ ದೇವರು ತನ್ನ ಪ್ರಥಮಜಾತ ಪುತ್ರನು ತಂದೆಯು ನಿರೀಕ್ಷಿಸುವುದರ ಕುರಿತು ನಮಗೆ ಹೆಚ್ಚು ತಿಳಿಸಲು ಮತ್ತು ಅಂಗೀಕರಿಸುವ ಎಲ್ಲರಿಗೆ “ಬಿಡುಗಡೆ” ಒದಗಿಸಲು ಅವನನ್ನು ಕಳುಹಿಸಿದನು. (ಎಫೆಸ 1:7; ರೋಮಾಪುರ 5:18) ಆ ಪುತ್ರನಾದ ಯೇಸು ಕ್ರಿಸ್ತನಂದದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಈ ಪ್ರಾಯಶ್ಚಿತದ್ತಿಂದ ಸಾಧ್ಯ ಮಾಡಲ್ಪಟ್ಟ ರಕ್ಷಣೆ ಎಷ್ಟು ಅತ್ಯುತ್ಕೃಷ್ಟ ಬೆಲೆಯದ್ದಾಗಿತ್ತೆಂದರೆ ಅದನ್ನು ಸಂಪಾದಿಸಲು ಯಾರೂ ಕೆಲಸ ಮಾಡಸಾಧ್ಯವಿರಲಿಲ್ಲ. ಮತ್ತು ಮೋಶೆಯ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸಿಯಂತೂ ಇದನ್ನು ಸಂಪಾದಿಸಲಿಕ್ಕೆ ಸಾಧ್ಯವೇ ಇರಲಿಲ್ಲ. ಆದುದರಿಂದ ಪೌಲನು ಬರೆದುದು: “ಯಾವನಾದರೂ ಯೇಸುಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ.”—ಗಲಾತ್ಯ 2:16; ರೋಮಾಪುರ 3:20-24.
ನಂಬಿಕೆ ಮತ್ತು ಕ್ರಿಯೆಗಳು
3. ನಂಬಿಕೆ ಮತ್ತು ಕ್ರಿಯೆಗಳ ಕುರಿತು ಯಾಕೋಬನು ಏನು ಹೇಳಿದನು?
3 ರಕ್ಷಣೆಯು ನಂಬಿಕೆಯಿಂದ ಬರುತ್ತದೆ. ಆದರೆ, ದೇವರು ಮಾಡಿರುವ ಸಕಲ ವಿಷಯಗಳಿಗೆ ನಮ್ಮಲ್ಲಿರುವ ನಂಬಿಕೆ ಮತ್ತು ಗಣ್ಯತೆ, ನಮ್ಮನ್ನು ಕ್ರಿಯಾಶೀಲರಾಗಿ ಮಾಡಬೇಕು. ನಮ್ಮ ನಂಬಿಕೆಯನ್ನು ತೋರಿಸುವಂಥ ಕಾರ್ಯಗಳನ್ನು ಮಾಡುವಂತೆ ಅವು ನಮ್ಮನ್ನು ಪ್ರಚೋದಿಸಬೇಕು. ಯೇಸುವಿನ ಮಲತಮ್ಮ ಯಾಕೋಬನು ಬರೆದುದು: “ಕ್ರಿಯೆಗಳಿಲ್ಲದ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.” ಅವನು ಇನ್ನೂ ಹೇಳಿದ್ದು: “ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ. ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು.” ದೆವ್ವಗಳು ಸಹ “ನಂಬಿ ಹೆದರಿ ನಡುಗುತ್ತವೆ,” ಎಂದು ಯಾಕೋಬನು ತೋರಿಸಿದನು. ಆದರೆ ದೆವ್ವಗಳು ದಿವ್ಯ ಕ್ರಿಯೆಗಳನ್ನು ಮಾಡುವುದಿಲ್ಲವೆಂಬುದು ಸ್ಪಷ್ಟ. ಆದರೆ ಅಬ್ರಹಾಮನಲ್ಲಿ ನಂಬಿಕೆಯೂ ಕ್ರಿಯೆಗಳೂ ಇದ್ದವು. “ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬುದು ಕಾಣಬರುತ್ತದಲ್ಲಾ.” ಯಾಕೋಬನು ಪುನಃ ಹೇಳಿದ್ದು: “ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.”—ಯಾಕೋಬ 2:17-26.
4. ತನ್ನನ್ನು ಹಿಂಬಾಲಿಸುವವರು ಏನು ಮಾಡಬೇಕೆಂದು ಯೇಸು ಹೇಳಿದನು?
4 ಸಮರ್ಪಕವಾದ ಕಾರ್ಯಗಳ ಪ್ರಾಮುಖ್ಯತೆಯನ್ನು ಯೇಸು ತೋರಿಸುತ್ತಾ ಹೇಳಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” “ಯಾವನಿಗಾದರೂ ನನ್ನ ಹಿಂದೆ ಬರುವ ಅಪೇಕ್ಷೆಯಿರುವಲ್ಲಿ ಅವನು ತನ್ನನ್ನು ನಿರಾಕರಿಸಿ ದಿನೇದಿನೇ ತನ್ನ ಯಾತನಾಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ.”a ನಾವು ನಮ್ಮನ್ನು “ನಿರಾಕರಿಸು”ವಲ್ಲಿ ಅನೇಕ ವೈಯಕ್ತಿಕ ಆಯ್ಕೆಗಳನ್ನು ತೊರೆಯುತ್ತೇವೆ. ನಮ್ಮಲ್ಲಿರುವ ಸರ್ವವೂ ದೇವರದ್ದೆಂದು ನಾವು ಒಪ್ಪಿಕೊಳ್ಳುವುದರಿಂದ, ಆತನ ದಾಸರೆಂದು ಒಪ್ಪಿಸಿಕೊಟ್ಟು, ಯೇಸು ಮಾಡಿದಂತೆ ಆತನ ಚಿತ್ತವನ್ನು ಕಲಿಯಲು ಮತ್ತು ಮಾಡಲು ಪ್ರಯತ್ನಿಸುತ್ತೇವೆ.—ಮತ್ತಾಯ 5:16; ಲೂಕ 9:23; ಯೋಹಾನ 6:38.
ಜೀವಗಳು ಪ್ರಭಾವಿಸಲ್ಪಡುತ್ತವೆ
5. (ಎ) ನಮ್ಮ ಇಡೀ ಜೀವನ ರೀತಿಯನ್ನು ಯಾವುದು ಪ್ರಭಾವಿಸಬೇಕೆಂದು ಪೇತ್ರನು ಹೇಳಿದನು? (ಬಿ) ಅವನು ಯಾವ ಉತ್ತಮ ಕ್ರಿಯೆಗಳನ್ನು ಶಿಫಾರಸು ಮಾಡಿದನು?
5 ನಮ್ಮ ಪರವಾಗಿ ಅರ್ಪಿಸಲ್ಪಟ್ಟ ಕ್ರಿಸ್ತನ “ಅಮೂಲ್ಯವಾದ ರಕ್ತ” ಎಷ್ಟು ಅತಿಶಯ ಬೆಲೆಯದ್ದೆಂದರೆ ನಮ್ಮ ಪೂರ್ತಿ ಜೀವನ ಮಾರ್ಗದಲ್ಲಿ ಅದಕ್ಕೆ ಗಣ್ಯತೆ ತೋರಿಬರಬೇಕು. ನಮ್ಮ ಗಣ್ಯತೆ ನಾವು ಮಾಡುವಂತೆ ಪ್ರಚೋದಿಸಬೇಕಾದ ಅನೇಕ ಸಂಗತಿಗಳನ್ನು ಅಪೊಸ್ತಲನು ಪಟ್ಟಿಯಾಗಿ ಹೇಳಿದನು. ಅವನು ಸಲಹೆ ನೀಡಿದ್ದು: “ಎಲ್ಲಾ ಕೆಟ್ಟತನವನ್ನು” ವಿಸರ್ಜಿಸಿರಿ. “ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ.” “ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು” ಪ್ರಚಾರ ಮಾಡಿರಿ. “ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು” ಮಾಡಿರಿ. “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ” ಹೇಳಿರಿ. “ಉಳಿದಿರುವ [ನಿಮ್ಮ] ಜೀವಮಾನಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ” ಬದುಕಿರಿ.—1 ಪೇತ್ರ 1:19; 2.1, 2, 9; 3:11, 15; ; 4:2.
6. (ಎ) ಒಂದನೆಯ ಶತಮಾನದ ಕ್ರೈಸ್ತರು ತಮ್ಮ ನಂಬಿಕೆಯನ್ನು ಹೇಗೆ ಪ್ರದರ್ಶಿಸಿದರು? (ಬಿ) ಇದು ನಮಗೆ ಯಾವ ಮಾದರಿಯನ್ನಿಡಬೇಕು?
6 ಒಂದನೆಯ ಶತಮಾನದ ಕ್ರೈಸ್ತರು ತಮ್ಮ ನಂಬಿಕೆಯ ಪ್ರಕಾರ ಬದುಕಿದರು. ಇದು ಅವರ ಹೊರನೋಟ ಮತ್ತು ವ್ಯಕ್ತಿತ್ವಗಳನ್ನು ಬದಲಾಯಿಸಿ ಅವರ ಜೀವನಗಳನ್ನು ದೇವರ ಚಿತ್ತಾನುಸಾರ ಹೊಂದಿಸಿಕೊಳ್ಳುವಂತೆ ಪ್ರಚೋದಿಸಿತು. ನಂಬಿಕೆಯನ್ನು ಉಲ್ಲಂಘಿಸುವ ಬದಲಿಗೆ ಅವರು ದೇಶತ್ಯಾಗ, ಕಲ್ಲೆಸೆಯುಏಕೆ, ಹೊಡೆತ, ಸೆರೆವಾಸ ಮತ್ತು ಮರಣವನ್ನು ತಾಳಿಕೊಂಡರು. (ಅಪೊಸ್ತಲರ ಕೃತ್ಯ 7:58-60; 8:1; 14:19; 16:22; 1 ಕೊರಿಂಥ 6:9-11; ಎಫೆಸ 4:22-24; ಕೊಲೊಸ್ಸೆ 4:3; ಫಿಲೆಮೋನ 9,10) ಸಾ.ಶ. 56ರಲ್ಲಿ ಹುಟ್ಟಿದ್ದ ಪ್ರಸಿದ್ಧ ರೋಮನ್ ಇತಿಹಾಸಗಾರ ಟ್ಯಾಸಿಟಸ್ ಹೇಳಿದಂತೆ, ಕ್ರೈಸ್ತರಿಗೆ, “ಜ್ವಾಲೆಯ ಶಿಕ್ಷೆ ವಿಧಿಸಲ್ಪಟ್ಟು ದಿನದ ಬೆಳಕು ಮುಗಿದಾಗ ರಾತ್ರಿಯಲ್ಲಿ ಬೆಳಕುಗಳಾಗಿ ಅವರನ್ನು ಉಪಯೋಗಿಸಲಾಗುತ್ತಿತ್ತು.” ಆದರೂ ಅವರು ನಂಬಿಕೆಯಲ್ಲಿ ಅಲುಗಾಡಲಿಲ್ಲ!—ದಿ ಆ್ಯನಲ್ಸ್, ಬುಕ್ XV, ಪರಿಚ್ಛೇದ 44.
7. ಕೆಲವರು ಯಾವ ಸ್ಥಿತಿಗಳಲ್ಲಿ ತಾವಿದ್ದೇವೆಂದು ಕಂಡುಕೊಳ್ಳಬಹುದು?
7 ಕೆಲವು ಸಭೆಗಳಲ್ಲಿ ಅನೇಕ ವರುಷಗಳಿಂದ ಕೂಟಗಳಿಗೆ ಹಾಜರಾಗುತ್ತಿರುವವರನ್ನು ನೀವು ನೋಡಬಹುದು. ಅವರು ಯೆಹೋವನ ಸಂಸ್ಥೆಯನ್ನು ಪ್ರೀತಿಸುತ್ತಾರೆ. ತಾವು ಭೇಟಿಯಾಗಿರುವವರಲ್ಲಿ ಯೆಹೋವನ ಜನರು ಅತ್ಯುತ್ತಮರೆಂದು ನೆನಸುತ್ತಾರೆ. ಸತ್ಯದ ಕುರಿತು ಉತ್ತಮ ಹೇಳಿಕೆಗಳನ್ನು ನೀಡುವುದಲ್ಲದೆ ಹೊರಗಿನವರ ಮುಂದೆ ಅವರು ಸತ್ಯದ ಪಕ್ಷವಾದಿಗಳಾಗುತ್ತಾರೆ. ಆದರೂ ಅವರಿಗೆ ಏನೊ ತಡೆಯಿದೆ; ಯಾವುದೊ ಅವರನ್ನು ಹಿಂದೆ ಹಿಡಿದೆಳೆಯುತ್ತದೆ. ಅವರು, ಆ ಪಂಚಾಶತ್ತಮ ದಿನದಲ್ಲಿ ಆ ಮೂರು ಸಾವಿರ ಜನರು ತಕ್ಕೊಂಡ, ಆ ನಂಬಿದ ಇಥಿಯೋಪ್ಯದವನು ಕೇಳಿದ ಮತ್ತು ಆ ಮಾಜಿ ಹಿಂಸಕ ಸೌಲನಿಗೆ, ಯೇಸು ನಿಜವಾಗಿಯೂ ಮೆಸ್ಸೀಯನು ಎಂದು ತಿಳಿದೊಡನೆ ತಕ್ಕೊಳ್ಳಬೇಕೆಂದು ಅನನೀಯನು ಪ್ರೋತ್ಸಾಹಿಸಿದ ಆ ಹೆಜ್ಜೆಯನ್ನು ತೆಗೆದುಕೊಂಡಿರುವುದಿಲ್ಲ. (ಅಪೊಸ್ತಲರ ಕೃತ್ಯ 2:41; 8:36; 22:16) ಇಂಥವರಲ್ಲಿ ಇಂದು ಯಾವುದರ ಕೊರತೆಯಿದೆ? ಅವರೇಕೆ “ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವ” ಹೆಜ್ಜೆಯನ್ನು ಇಟ್ಟಿರುವುದಿಲ್ಲ (1 ಪೇತ್ರ 3:21) ನೀವು ಈ ಸ್ಥಿತಿಯಲ್ಲಿ ಇದ್ದೀರಿ—ಸತ್ಯವನ್ನು ತಿಳಿದರೂ ಅದನ್ನು ಹಿಡಿಯಲು ಹಿಂಜರಿಯುತ್ತೀರಿ—ಎಂದು ಕಂಡುಹಿಡಿಯುವಲ್ಲಿ ಈ ಲೇಖನವನ್ನು ನಿಮಗೆ ವಿಶೇಷ ಪ್ರೀತಿ ತೋರಿಸಿ ತಯಾರಿಸಲಾಗಿದೆ ಎಂಬಂತೆ ವೀಕ್ಷಿಸಿರಿ.
ದೀಕ್ಷಾಸ್ನಾನಕ್ಕಿರುವ ತಡೆಗಳನ್ನು ಜಯಿಸುವುದು
8. ನೀವು ಉತ್ತಮ ವಿದ್ಯಾರ್ಥಿಯಾಗಿಯೆ ಇದ್ದಿಲ್ಲಾದಲ್ಲಿ ಈಗ ತಕ್ಕೊಳ್ಳಬೇಕಾದ ವಿವೇಕದ ಮಾರ್ಗ ಯಾವುದು?
8 ನಿಮಗೆ ಯಾವುದು ತಡೆಯನ್ನುಂಟುಮಾಡಬಹುದು? ಹಿಂದಿನ ಲೇಖನ ತೋರಿಸಿದಂತೆ, ಕೆಲವರಿಗೆ ವ್ಯಕ್ತಿಪರ ಅಧ್ಯಯನವು ಸಮಸ್ಯೆಯಾಗಿರಬಹುದು. ದೇವರು ನಮಗೆ ಅದ್ಭುತಕರವಾದ ಮನಸ್ಸನ್ನು ಕೊಟಿದ್ದಾನೆ ಮತ್ತು ನಾವು ಅದನ್ನು ಆತನ ಸೇವೆಯಲ್ಲಿ ಉಪಯೋಗಿಸುವಂತೆ ಆತನು ಅಪೇಕ್ಷಿಸುತ್ತಾನೆ. ಓದಲಿಕ್ಕೂ ಬಾರದೆ ಇದ್ದ ಕೆಲವರು ಆತನ ಉದ್ದೇಶಗಳನ್ನು ಹೆಚ್ಚು ತಿಳಿಯುವ ಉದ್ದೇಶದಿಂದ ಓದಲು ಕಲಿತಿದ್ದಾರೆ. ನೀವೊ? ನೀವು ಓದು ಬಲ್ಲವರಾಗಿರುವಲ್ಲಿ, ಬೆರೋಯದವರು ಮಾಡಿದಂತೆ, ಹೌದೊ ಅಲ್ಲವೊ ಎಂದು ತಿಳಿಯಲು “ಪ್ರತಿದಿನವೂ ಶಾಸ್ತ್ರವಚನಗಳನ್ನು ಶೋಧಿಸಿ” ನಿಜವಾಗಿಯೂ ಅಧ್ಯಯನ ಮಾಡುತ್ತೀರೊ? ಸತ್ಯದ ಅಗಲ, ಉದ್ದ, ಎತ್ತರ ಮತ್ತು ಆಳವನ್ನು ನೀವು ಕಂಡುಹಿಡಿದಿದ್ದೀರೊ? ನೀವು ದೇವರ ವಾಕ್ಯದೊಳಗೆ ಆಳವಾಗಿ ಅಗೆದಿದ್ದೀರೊ? ಅದೆಷ್ಟು ರೋಮಾಂಚಕವೆಂದು ನೀವು ಕಂಡುಹಿಡಿದಿದ್ದೀರೊ? ದೇವರ ಇಷ್ಟವನ್ನು ತಿಳಿಯುವ ನಿಜ ಬಯಕೆಯನ್ನು ನೀವು ಬೆಳೆಸಿದ್ದೀರೊ? ಸತ್ಯಕ್ಕಾಗಿ ನಿಜ ಹಸಿವು ನಿಮಗಿದೆಯೆ?—ಅಪೊಸ್ತಲರ ಕೃತ್ಯ 17:10, 11; ಎಫೆಸ 3:18.
9. ನಿಮಗೆ ಸಭೆಯಲ್ಲಿ ಯಾರೋ ಒಬ್ಬನೊಂದಿಗೆ ಸಮಸ್ಯೆ ಇರುವಲ್ಲಿ ತಕ್ಕೊಳ್ಳಬೇಕಾದ ಸಮರ್ಪಕವಾದ ದಾರಿ ಯಾವುದು?
9 ಕೆಲವು ಸಲ, ಸಭೆಯಲ್ಲಿರುವ ಒಬ್ಬನೊಂದಿಗೆ ಇರಬಹುದಾದ ನಿಜ ಯಾ ಕಲ್ಪಿತ ಸಮಸ್ಯೆಯ ಕಾರಣ ಕೆಲವರು ತಮ್ಮನ್ನು ಹಿಂದೆ ಹಿಡಿದಿಟ್ಟುಕೊಳ್ಳುತ್ತಾರೆ. ಯಾವನಾದರೂ ನಿಮ್ಮನ್ನು ಗುರುತರವಾಗಿ ನೋಯಿಸಿದ್ದಾನೊ? ಹಾಗಿರುವಲ್ಲಿ, ಯೇಸುವಿನ ಮಾತುಗಳಲ್ಲಿ ಸೂಚಿಸಲ್ಪಟ್ಟಿರುವ ಮಾರ್ಗವನ್ನು ಅನುಸರಿಸಿರಿ: “ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. (ಮತ್ತಾಯ 18:15) ನಿಮಗೆ ನೋವಾಗಿದೆ ಎಂದು ಅವನಿಗೆ ತಿಳಿದೇ ಇರುವುದಿಲ್ಲವೆಂದು ಕಂಡುಹಿಡಿಯಲು ನಿಮಗೆ ಆಶ್ಚರ್ಯವಾದೀತು. ಆದರೆ ಅವನಿಗೆ ತಿಳಿದಿರುವುದಾದರೂ, ನೀವು ‘ನಿಮ್ಮ ಸಹೋದರನನ್ನು ಸಂಪಾದಿಸಿಕೊಂಡೀರಿ.’ ಅವನು ಇತರರನ್ನು ಮುಗ್ಗರಿಸದಂತೆಯೂ ನೀವು ಅವನಿಗೆ ಸಹಾಯ ಮಾಡಬಹುದು. ಇದಲ್ಲದೆ, ಇದರ ಕುರಿತು ಯೋಚಿಸುವಲ್ಲಿ, ನೀವು ನಿಜವಾಗಿಯೂ ಯಾರನ್ನು ಸೇವಿಸುತ್ತೀರಿ, ಆ ವ್ಯಕ್ತಿಯನ್ನೊ, ದೇವರನ್ನೊ? ದೇವರ ಕಡೆಗೆ ನಿಮಗಿರುವ ಪ್ರೀತಿಯು, ಅಪೂರ್ಣ ಮನುಷ್ಯನ ದೋಷ ನಿಮ್ಮ ಪ್ರೀತಿಯ ಮಧ್ಯೆ ಬರುವಂತೆ ನೀವು ಬಿಡುವಷ್ಟೂ ಪರಿಮಿತವೆ?
10, 11. ರಹಸ್ಯ ಪಾಪವು ನಿಮ್ಮನ್ನು ತಡೆದಿರುವಲ್ಲಿ ನೀವೇನು ಮಾಡಬೇಕು?
10 ರಹಸ್ಯದ ಪಾಪವು ದೀಕ್ಷಾಸ್ನಾನದಿಂದ ಒಬ್ಬನನ್ನು ತಡೆಯಬಹುದು. ಈ ಪಾಪ ಹಿಂದೆ ನಡೆದದ್ದಾಗಿರಬಹುದು ಯಾ ಈ ಕೆಟ್ಟ ಗುಣ ಈಗಲೂ ನಡೆಯುತ್ತಿರಬಹುದು. ಇದು ಸಮಸ್ಯೆಯಾಗಿರುವಲ್ಲಿ ಇದು ಅದನ್ನು ತಿದ್ದುವ ಕಾಲವಲವ್ಲೆ? (1 ಕೊರಿಂಥ 7:29-31) ಅನೇಕ ಯೆಹೋವನ ಜನರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿತ್ತು. ಬೈಬಲು ಹೇಳುವುದು: “ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪ ಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿ ಕಾಲಗಳು ಬರುವವು.”—ಅಪೊಸ್ತಲರ ಕೃತ್ಯ 3:19.
11 ನೀವು ಈ ಹಿಂದೆ ಏನು ಮಾಡಿರುವುದಾದರೂ ಪಶ್ಚಾತ್ತಾಪ ಪಟ್ಟು ಪರಿವರ್ತನೆ ಹೊಂದಿ, ದೇವರಿಂದ ಕ್ಷಮಾಪಣೆಯನ್ನು ಕೇಳಬಲ್ಲಿರಿ. “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ, ಬಂಡುತನ, ಕಾಮಾಭಿಲಾಷೆ, ದುರಾಶೆ, . . . ಇವುಗಳನ್ನು ವಿಸರ್ಜಿಸಿ ಬಿಡಿರಿ. . . ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದೀರ್ದಲ್ಲವೇ. ಈ ಸ್ವಭಾವವು ಅದನ್ನು ಸೃಪ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.” ನೀವು ನಿಮ್ಮ ಜೀವವನ್ನು ಆತನ ಮಾರ್ಗಗಳಿಗೆ ಹೊಂದಿಸಿಕೊಂಡು, ಶುದ್ಧ ಮನಸ್ಸಾಕ್ಷಿಯನ್ನು ಅನುಭವಿಸಿ, ಆತನ ನೂತನ ಲೋಕದಲ್ಲಿ ನಿತ್ಯಜೀವದ ನಿರೀಕ್ಷೆಯಿಂದಿರಬಲ್ಲಿರಿ. ಇದು ನೀವು ಪಡುವ ಯಾವ ಶ್ರಮವನ್ನಾದರೂ ಸಾರ್ಥಕ ಮಾಡುವುದಿಲ್ಲವೆ?—ಕೊಲೊಸ್ಸೆ 3:5-10; ಯೆಶಾಯ 1:16, 18; 1 ಕೊರಿಂಥ 6:9-11; ಇಬ್ರಿಯ 9:14.
12. ತಂಬಾಕು, ಮದ್ಯದ ದುರುಪಯೋಗ ಯಾ ಚಟ ಹಿಡಿಸುವ ಅಮಲೌಷಧ, ನಿಮ್ಮ ಮತ್ತು ಶುದ್ಧ ಮನಸ್ಸಾಕ್ಷಿಯ ಮಧ್ಯೆ ನಿಂತಿರುವಲ್ಲಿ ನೀವೇನು ಮಾಡಬೇಕು?
12 ನಿಮಗೂ ಶುದ್ಧ ಮನಸ್ಸಾಕ್ಷಿಗೂ ಮಧ್ಯೆ ತಂಬಾಕಿನ ಉಪಯೋಗ, ಮದ್ಯದ ದುರುಪಯೋಗ ಯಾ ಅಮಲೌಷಧ ಚಟ ಬಂದು ನಿಂತಿದೆಯೆ? ಇಂಥ ಜೀವಾಪಾಯಕಾರಿ ಚಟಗಳು ದೇವರ ಅದ್ಭುತಕರವಾದ ಜೀವದ ಕೊಡುಗೆಗೆ ಅಗೌರವ ತರುವುದಿಲವ್ಲೆ? ಇಂಥ ಅಭ್ಯಾಸಗಳು ನಿಮ್ಮನ್ನು ತಡೆಯುತ್ತಿರುವುದಾದರೆ ಅವುಗಳನ್ನು ತಿದ್ದಲು ಇದೇ ಸಮಯವೆಂಬುದು ನಿಶ್ಚಯ. ಈ ಅಭ್ಯಾಸಗಳು ನಿಮ್ಮ ಜೀವದ ಮೌಲ್ಯಕ್ಕೆ ಸಮಾನವೆ? ಪೌಲನು ಹೇಳಿದ್ದು: “ನಾವು ಶರೀರಾತ್ಮದ ಕಲ್ಮಶಗಳನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ನಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” ಇದನ್ನು ಮಾಡಲಿಕ್ಕಾಗಿ ನೀವು ದೇವರ ನಿರ್ಮಲವೂ ನೀತಿಯದ್ದೂ ಆಗಿರುವ ಮಾರ್ಗಗಳನ್ನು ಸಾಕಷ್ಟು ಗಣ್ಯ ಮಾಡುತ್ತೀರೊ?b—2 ಕೊರಿಂಥ 7:1.
ಪ್ರಾಪಂಚಿಕ ವಸ್ತುಗಳು
13, 14. (ಎ) ಪ್ರಾಪಂಚಿಕ ಗುರಿಗಳ ಕುರಿತು ಶಾಸ್ತ್ರ ಏನು ಹೇಳುತ್ತದೆ? (ಬಿ) ಸ್ವರ್ಗೀಯ ವಿಷಯಗಳನ್ನು ಪ್ರಥಮವಾಗಿಡುವುದು ಏಕೆ ಪ್ರಾಮುಖ್ಯ?
13 ಇಂದಿನ ಜಗತ್ತು ಸಾಫಲ್ಯ ಮತ್ತು “ಬದುಕು ಬಾಳಿನ ಡಂಬ” ವನ್ನು ಇತರ ಎಲ್ಲ ಸಂಗತಿಗಳಿಗಿಂತಲೂ ಮುಂದೆ ಇಡುತ್ತದೆ. ಆದರೆ ಯೇಸು, ‘ಪ್ರಾಪಂಚಿಕ ಚಿಂತೆ ಮತ್ತು ಐಶ್ವರ್ಯದಿಂದುಂಟಾಗುವ ಮೋಸವನ್ನು’ ದೇವರ ವಾಕ್ಯವನ್ನು ಅಡಗಿಸುವ “ಮುಳ್ಳುಗಿಡ”ಗಳಿಗೆ ಹೋಲಿಸುತ್ತಾನೆ. ಅವನು ಹೀಗೂ ಕೇಳಿದನು: “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟ ಪಟ್ಟರೆ ಪ್ರಯೋಜನವೇನು?”—1 ಯೋಹಾನ 2:16; ಮಾರ್ಕ 4:2-8, 18, 19; ಮತ್ತಾಯ 16:26.
14 ಪಕ್ಷಿಗಳು ಆಹಾರ ಕಂಡುಕೊಳ್ಳುವಂತೆ ಮತ್ತು ಹೂವುಗಳು ಸೊಗಸಾಗಿ ಅರಳುವಂತೆ ದೇವರೇ ಏರ್ಪಡಿಸಿದನೆಂದು ಯೇಸು ಸೂಚಿಸಿ ಕೇಳಿದ್ದು: “ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೆ. . . ದೇವರು. . . ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನು.” ಯೇಸು, ವಿವೇಕದಿಂದ, ಪ್ರಾಪಂಚಿಕ ವಿಷಯಗಳ ಕುರಿತು “ತವಕಪಡಬೇಡಿರಿ” ಎಂದು ಹೇಳಿ, ಬಳಿಕ ಕೂಡಿಸಿದ್ದು: “ನೀವಾದರೋ ದೇವರ ರಾಜ್ಯಕ್ಕಾಗಿ ತವಕ ಪಡಿರಿ; ಇದರ ಕೂಡ ಅವೂ ನಿಮಗೆ ದೊರಕುವವು.” ನಾವು ಸ್ವರ್ಗೀಯ ವಿಷಯಗಳನ್ನು ಪ್ರಥಮವಾಗಿಡಬೇಕೆಂದೂ, ಏಕೆಂದರೆ, “ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ” ಎಂದೂ ಅವನು ತೋರಿಸಿದನು.—ಲೂಕ 12:22-31; ಮತ್ತಾಯ 6:20, 21.
ದೇವರ ಸಹಾಯದಿಂದ ಭಕ್ತಿಯ ಸೇವೆ
15. ಪ್ರಥಮ ಶತಕದ ಕ್ರೈಸ್ತರು ನಮಗೆ ಯಾವ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾರೆ?
15 ಇತರರಿಗೆ ಸಾಕ್ಷಿ ನೀಡುವುದು ನಿಮ್ಮ ಸಮಸ್ಯೆಯಾಗಿದೆಯೆ? ಲಜ್ಜೆ ನಿಮ್ಮನ್ನು ತಡೆದು ಹಿಡಿಯುತ್ತದೆಯೆ? ಹಾಗಿರುವಲ್ಲಿ, ಪ್ರಥಮ ಶತಕದ ಕ್ರೈಸ್ತರಿಗೂ ನಮಗೆ ಇಂದಿರುವ ಅನಿಸಿಕೆಗಳೆ ಇದ್ದವೆಂದು ನೆನಪಿಸಿಕೊಳ್ಳಿರಿ. ದೇವರು ಅನೇಕ ವಿವೇಕಿಗಳನ್ನೂ ಬಲಾಢ್ಯರನ್ನೂ ಆರಿಸಿಕೊಳ್ಳಲಿಲ್ಲ. ಬದಲಾಗಿ, “ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ. (1 ಕೊರಿಂಥ 1:26-29) ಈ “ಸಾಧಾರಣ” ಜನರನ್ನು ಬಲಾಢ್ಯರಾಗಿದ್ದ ಧರ್ಮ ಮುಖಂಡರು ವಿರೋಧಿಸಿ ಅವರು ಸಾರುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಿದರು. ಆಗ ಕ್ರೈಸ್ತರೇನು ಮಾಡಿದರು? ಅವರು ಪ್ರಾರ್ಥಿಸಿದರು. ಅವರು ದೇವರಿಂದ ಧೈರ್ಯಕ್ಕಾಗಿ ಬೇಡಿಕೊಂಡರು ಮತ್ತು ಆತನು ಅವರಿಗೆ ಧೈರ್ಯವನ್ನು ಕೊಟ್ಟನು. ಇದರ ಪರಿಣಾಮವಾಗಿ ಅವರ ಸಂದೇಶ ಯೆರೂಸಲೇಮಿನಲ್ಲಿ ತುಂಬಿ, ಆ ಬಳಿಕ ಇಡೀ ಜಗತ್ತನ್ನು ಕಂಪಿಸಿತು!—ಅಪೊಸ್ತಲರ ಕೃತ್ಯ 4:1-4, 13, 17, 23, 24, 29-31; 5:28, 29; ಕೊಲೊಸ್ಸೆ 1:23.
16. ಇಬ್ರಿಯ 11ನೆಯ ಅಧ್ಯಾಯದಲ್ಲಿ ವರ್ಣಿಸಿರುವ ‘ಸಾಕ್ಷಿಗಳ ಮೇಘ’ದಿಂದ ನಾವೇನು ಕಲಿಯುತ್ತೇವೆ?
16 ಆದುದರಿಂದ, ಮನುಷ್ಯ ಭಯ ನಮ್ಮ ಮತ್ತು ನಮ್ಮ ದೇವರ ಸೇವೆಯ ಮಧ್ಯೆ ಬರಲೇ ಬಾರದು. ಇಬ್ರಿಯ 11ನೇ ಅಧ್ಯಾಯ, ಮನುಷ್ಯರಿಗಲ್ಲ, ದೇವರಿಗೆ ಭಯಪಟ್ಟ ‘ಸಾಕ್ಷಿಗಳ’ ಮಹಾ ‘ಮೇಘ’ದ ಕುರಿತು ತಿಳಿಸುತ್ತದೆ. ನಾವೂ ಇದೇ ರೀತಿಯ ನಂಬಿಕೆಯನ್ನು ತೋರಿಸಬೇಕು. ಅಪೊಸ್ತಲನು ಬರೆದುದು: “ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಎಲ್ಲಾ ಪಾಪವನ್ನೂ ನಾವು ಸಹ ತೆಗೆದಿಟ್ಟು. . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”—ಇಬ್ರಿಯ 12:1.
17. ದೇವರು ಯೆಶಾಯನ ಮೂಲಕ ಯಾವ ಪ್ರೋತ್ಸಾಹ ನೀಡಿದನು?
17 ದೇವರು ತನ್ನ ಸೇವಕರಿಗೆ ಮಹತ್ತರವಾದ ಸಹಾಯವನ್ನು ಒದಗಿಸಬಲ್ಲನು. ವಿಶ್ವ ನಿರ್ಮಾಣಿಕನು ಯೆಶಾಯನಿಗೆ ಹೇಳಿದ್ದು: “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಓಡಿ ದಣಿಯರು, ನಡೆದು ಬಳಲರು.”—ಯೆಶಾಯ 40:31.
18. ರಾಜ್ಯ ಸಾರುವಿಕೆಯಲ್ಲಿ ಭಾಗವಹಿಸುವಾಗ ಲಜ್ಜೆಯನ್ನು ನೀವು ಹೇಗೆ ಜಯಿಸಬಹುದು?
18 ಸ್ಥಳೀಕ ಸಭೆಗಳಲ್ಲಿ ನೀವು ನೋಡುವ ಧೈರ್ಯವಂತರೂ ಸಂತುಷ್ಟರೂ ಆದ ಸಾಕ್ಷಿಗಳು, ಭೂಮ್ಯಾದ್ಯಂತವಿರುವ ಹುರುಪಿನ ನಾಲ್ವತ್ತು ಲಕ್ಷಕ್ಕೂ ಹೆಚ್ಚು ಸಾಕ್ಷಿಗಳ ಕೇವಲ ಒಂದು ಚಿಕ್ಕ ಭಾಗವಾಗಿದ್ದಾರೆ. ಯೇಸು ಕ್ರಿಸ್ತನು ತಾನೆ ಮುಂತಿಳಿಸಿದ ಈ ಕೆಳಗಣ ಕೆಲಸದಲ್ಲಿ ಭಾಗಿಗಳಾಗಲು ಅವರು ಸಂತೋಷಿಸುತ್ತಾರೆ: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು. ಆಗ ಅಂತ್ಯವು ಬರುವದು.” ನೀವು ಅರ್ಹರಾಗಿದ್ದರೂ ರಾಜ್ಯದ ಸಾರುವಿಕೆ ನಿಮಗೆ ಒಂದು ಸಮಸ್ಯೆಯಾಗಿರುವಲ್ಲಿ, ಶುಶ್ರೂಷೆಯನ್ನು ಉತ್ತಮವಾಗಿ ಮಾಡುವ ಒಬ್ಬ ಪುರುಷ ಯಾ ಸ್ತ್ರೀ ಸಾಕ್ಷಿಯೊಂದಿಗೆ ಸಾರಲು ಹೋಗುವಂತೆ ಏಕೆ ಕೇಳಿಕೊಳ್ಳಬಾರದು? ದೇವರು ನಿಜವಾಗಿಯೂ “ಬಲಾಧಿಕ್ಯ”ವನ್ನು ಒದಗಿಸುತ್ತಾನೆ. ಮತ್ತು ಈ ಭಕ್ತಿಯ ಸೇವೆಯು ಎಷ್ಟು ಸಂತೋಷಕರವೆಂದು ಕಂಡುಹಿಡಿಯುವಾಗ ನಿಮಗೆ ಆಶ್ಚರ್ಯವಾದೀತು.—ಮತ್ತಾಯ 24:14; 2 ಕೊರಿಂಥ 4:7; ಇದಲ್ಲದೆ ಕೀರ್ತನೆ 56:11; ಮತ್ತಾಯ 5:11,12; ಫಿಲಿಪ್ಪಿ 4:13 ನ್ನೂ ನೋಡಿ.
19. ಯಾವ ಕಲಿಸುವ ಕೆಲಸವನ್ನು ಮಾಡುವಂತೆ ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು?
19 ರಾಜ್ಯದ ಸಂದೇಶವನ್ನು ಗಣ್ಯ ಮಾಡುವವರು ಅದರಂತೆ ವರ್ತಿಸಬೇಕೆಂದು ಯೇಸು ಅಪೇಕ್ಷಿಸುತ್ತಾನೆ. ಅವನು ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಅಜ್ಞಾಪಿಸಿದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಉಪದೇಶ ಮಾಡಿರಿ.”—ಮತ್ತಾಯ 28:19,20.
20. ನೀವು ಆತ್ಮಿಕವಾಗಿ ಮುಂದುವರಿಯುವುದಾದರೆ ಬೇಗನೆ ಯಾವ ಪ್ರಶ್ನೆಯನ್ನು ಕೇಳುವುದು ಯೋಗ್ಯವಾಗಿದ್ದೀತು?
20 ದೇವರ ಆಶೀರ್ವಾದ, ಯೇಸುವಿನ “ಅಮೂಲ್ಯವಾದ ರಕ್ತ” ಮತ್ತು ಅನಂತ ಜೀವನದ ಅದ್ಭುತಕರವಾದ ನಿರೀಕ್ಷೆ, ಇವುಗಳಿಗೆ ನಿಮ್ಮ ಗಣ್ಯತೆ ನಿಮ್ಮನ್ನು ಕ್ರಿಯಾಶೀಲವಾಗಿ ಮಾಡುತ್ತದೆಯೆ? (1 ಪೇತ್ರ 1:19) ದೇವರ ನೀತಿಯ ಆವಶ್ಯಕತೆಗಳಿಗೆ ನೀವು ನಿಮ್ಮ ಜೀವವನ್ನು ಹೊಂದಿಸಿಕೊಂಡಿದ್ದೀರೊ? ಶಿಷ್ಯರನ್ನಾಗಿ ಮಾಡುವುದರಲ್ಲಿ ನೀವು ಕ್ರಮವಾಗಿ ಭಾಗವಹಿಸುತ್ತೀರೊ? ನೀವು ನಿಮ್ಮನ್ನು ನಿರಾಕರಿಸಿ, ನಿಮ್ಮ ಜೀವವನ್ನು ದೇವರಿಗೆ ಸಮರ್ಪಿಸಿಕೊಂಡಿದ್ದೀರೊ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಜವಾಬು ನಿಶ್ಚಯವಾಗಿಯೂ ಹೌದಾಗಿರುವಲ್ಲಿ, ನೀವು ಹಾಜರಾಗುವ ಸಭೆಯ ಹಿರಿಯರಿಗೆ, ಆ ಇಥಿಯೋಪ್ಯದವನು ಫಿಲಿಪ್ಪನಿಗೆ ಕೇಳಿದ ಪ್ರಶ್ನೆಯನ್ನು ಕೇಳುವ ಸಮಯ ಇದಾಗಿರಬಹುದು: “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?”—ಅಪೊಸ್ತಲರ ಕೃತ್ಯ 8:36. (w90 8/1)
[ಅಧ್ಯಯನ ಪ್ರಶ್ನೆಗಳು]
a ದ ಜೆರೂಸಲೇಮ್ ಬೈಬಲ್ ಇದನ್ನು “ತನ್ನನ್ನು ತೊರೆದು ಬಿಟ್ಟು” ಎಂದೂ ಜೆ.ಬಿ. ಫಿಲಿಪ್ಸ್ ಭಾಷಾಂತರ, “ತನ್ನ ಸಕಲ ಹಕ್ಕನ್ನು ತ್ಯಜಿಸಿ” ಎಂದೂ ದ ನ್ಯೂ ಇಂಗ್ಲಿಷ್ ಬೈಬಲ್, “ಸ್ವಯಮನ್ನು ಹಿಂದೆ ಬಿಟ್ಟು” ಎಂದೂ ಭಾಷಾಂತರಿಸುತ್ತದೆ.
b ಇಂಥ ಚಟವನ್ನು ಬಿಟ್ಟು ಬಿಡುವ ಮಾಹಿತಿಗೆ, ದ ವಾಚ್ಟವರ್, ಫೆಬ್ರವರಿ 1, 1981, ಪುಟ 3-12; ಜೂನ್ 1, 1973, ಪುಟ 336-43; ಮತ್ತು ಅವೇಕ್! ಜುಲೈ 8, 1982, ಪುಟ 3-12; ಮೇ 22, 1981, ಪುಟ 3-11 ನೋಡಿ. ಇವು ಯೆಹೋವನ ಸಾಕ್ಷಿಗಳ ಸ್ಥಳೀಕ ರಾಜ್ಯ ಸಭಾಗೃಹಗಳ ಲೈಬ್ರೆರಿಗಳಲ್ಲಿ ದೊರೆಯಬಹುದು.
ನೆನಪಿದೆಯೆ?
▫ ದೇವರಿಗೆ ಕೃತಜ್ಞರಾಗಲು ನಮಗೆ ಯಾವ ವಿಶೇಷ ಕಾರಣಗಳಿವೆ?
▫ ನಂಬಿಕೆ ಮತ್ತು ಗಣ್ಯತೆ ಏನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು?
▫ ನಮ್ಮ ಮತ್ತು ದೇವರಿಗೆ ವಿಧೇಯತೆಯ ಮಧ್ಯೆ ಯಾವ ಸಮಸ್ಯೆಗಳು ನಿಲ್ಲಬಹುದು, ಮತ್ತು ನಾವು ಅದರ ವಿಷಯ ಏನು ಮಾಡಬಲ್ಲೆವು?
▫ ಇದುವರೆಗೆ ದೀಕ್ಷಾಸ್ನಾನವಾಗಿರದವರು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
[ಪುಟ 13 ರಲ್ಲಿರುವ ಚೌಕ]
ನಾನು ಯಾವ ವಿಧದ “ನೆಲ”?
ಯೇಸು ಬೀಜ ಬಿತ್ತಲು ಹೋದವನ ಉಪಮೆಯನ್ನು ಕೊಟ್ಟನು. ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು, ಪಕ್ಷಿಗಳು ಅವುಗಳನ್ನು ತಿಂದವು. ಇತರ ಬೀಜಗಳು ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಇವು ಚಿಗುರಿದರೂ, ಸೂರ್ಯನು ಮೇಲೆ ಬಂದಾಗ ಬಾಡಿ ಸತ್ತವು. ಇನ್ನು ಕೆಲವು, ಮುಳ್ಳುಗಿಡಗಳ ಮಧ್ಯೆ ಬಿದ್ದು ಅಡಗಿಸಲ್ಪಟ್ಟವು. ಈ ಮೂರು ಗುಂಪುಗಳು ಈ ಕೆಳಗಿನವುಗಳನ್ನು ಪ್ರತಿನಿಧೀಕರಿಸುತ್ತವೆಂದು ಯೇಸು ಹೇಳಿದನು: ಒಂದನೆಯವನು, “ಪರಲೋಕರಾಜ್ಯದ ವಾಕ್ಯವನ್ನು ಕೇಳಿ ತಿಳುಕೊಳ್ಳದೆ” ಇರುವವನು; ಎರಡನೆಯವನು, ವಾಕ್ಯವನ್ನು ಅಂಗೀಕರಿಸಿದರೂ “ಸಂಕಟವಾಗಲಿ ಹಿಂಸೆಯಾಗಲಿ” ಬಂದು ಅದರ ಝಳ ಬಡಿಯುವಾಗ ತಿರುಗಿಸಲ್ಪಡುವವನು; ಮತ್ತು ಮೂರನೆಯವನು, “ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ಆ ವಾಕ್ಯವನ್ನು ಅಡಗಿಸಿ” ಬಿಡುವ ವ್ಯಕ್ತಿ.
ಆದರೆ ಯೇಸು ಒಳ್ಳೆಯ ನೆಲದ ಮೇಲೆ ಬೀಳುವ ಬೀಜಗಳ ಕುರಿತೂ ಹೇಳಿದನು. ಇವನು “ವಾಕ್ಯವನ್ನು ಕೇಳಿ ತಿಳುಕೊಂಡು ಫಲವಂತ”ನಾಗುವವನು.—ಮತ್ತಾಯ 13:3-8, 18-23.
ಆದುದರಿಂದ, ‘ನಾನು ಯಾವ ವಿಧದ “ನೆಲ”ವಾಗಿದ್ದೇನೆ?’ ಎಂದು ಕೇಳಿಕೊಳ್ಳುವುದು ಹಿತಕರ.
[ಪುಟ 14 ರಲ್ಲಿರುವ ಚೌಕ]
ಅವರು ತಮ್ಮ ನಂಬಿಕೆಗೋಸ್ಕರ ಸತ್ತರು
ನಂಬಿಕೆಯನ್ನು ಉಲ್ಲಂಘಿಸುವುದರ ಬದಲು ಸಾಯುವುದೇ ಲೇಸೆನ್ನುವವರ ಪರಿಚಯ ನಿಮಗಿದೆಯೆ? ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳು ಹೀಗೆ ಮಾಡಿದ್ದಾರೆ. ದ ನಾಝಿ ಸ್ಟೇಟ್ ಎಂಡ್ ದ ನ್ಯೂ ರಿಲಿಜನ್ಸ್: ಫೈವ್ ಕೇಸ್ ಸಡ್ಟೀಸ್ ಇನ್ ನಾನ್ಕನ್ಫರ್ಮಿಟಿ ಎಂಬ ಪುಸ್ತಕದಲ್ಲಿ ಡಾ. ಕ್ರಿಸ್ಟಿನ್ ಕಿಂಗ್ ಬರೆದುದು: “ಜರ್ಮನ್ ಸಾಕ್ಷಿಗಳಲ್ಲಿ ಇಬ್ಬರಲ್ಲಿ ಒಬ್ಬರು ಸೆರೆವಾಸಿಗಳಾದರು. ನಾಲ್ವರಲ್ಲಿ ಒಬ್ಬರು ಪ್ರಾಣನಷ್ಟಪಟ್ಟರು.”
1945ರಲ್ಲಿ ಕೊನೆಗೆ ಶಿಬಿರಗಳ ಭೀಕರತೆ ಮುಗಿದಾಗ “ಸಾಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು ಮತ್ತು ಯಾರೂ ರಾಜಿ ಮಾಡಿರಲಿಲ್ಲ.” ದ ನಾಝಿ ಪರ್ಸೆಕ್ಯುಶನ್ ಆಫ್ ದ ಚರ್ಚಸ್ ಪುಸ್ತಕದಲ್ಲಿ, ಜೆ. ಎಸ್. ಕಾನ್ವೆ ಸಾಕ್ಷಿಗಳ ಕುರಿತು ಬರೆದುದು: “ಗೆಸ್ಟಾಪೊ ಭಯವಾದದ ಪೂರ್ಣ ಬಲದೆದುರಿನಲ್ಲಿ ಇನ್ನಾವ ಪಂಥವೂ ಇದೇ ರೀತಿಯ ದೃಢತೆಯನ್ನು ಪ್ರದರ್ಶಿಸಿರುವುದಿಲ್ಲ.”
ಯೆಹೋವನ ಸಾಕ್ಷಿಗಳಿಗೆ ಹಿಂಸೆ ಬಂದದ್ದು ರಾಜಕೀಯ ಯಾ ಕುಲಸಂಬಂಧವಾಗಿಯಲ್ಲ. ಬದಲು, ದೇವರ ಮೇಲೆ ಅವರಿಗಿರುವ ಪ್ರೀತಿ ಮತ್ತು ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಉಲ್ಲಂಘನೆಗೆ ಅವರ ನಿರಾಕರಣೆಯ ನಿಮಿತ್ತವೆ ಅವರು ಕಷ್ಟವನ್ನು ಅನುಭವಿಸಿದರು.