ಆತ್ಮ-ಸಂಯಮದ ಫಲವನ್ನು ಬೆಳೆಸುವುದು
“ದೇವರಾತ್ಮದಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಫಶಾಂತಿ ದಯೆ ಉಪಕಾರ ನಂಬಿಕೆ ಸೌಮ್ಯತೆ ಆತ್ಮ-ಸಂಯಮ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವಾದರೂ ಆಕ್ಷೇಪಿಸುವುದಿಲ್ಲ.”—ಗಲಾತ್ಯ 5:22, 23, NW.
1. ಆತ್ಮ-ಸಂಯಮದ ಅತ್ಯುತ್ತಮ ಮಾದರಿಗಳನ್ನು ನಮಗೆ ಯಾರು ಕೊಟ್ಟಿದ್ದಾರೆ, ಯಾವ ವಚನಗಳಲ್ಲಿ ಇದು ಕಂಡು ಬರುತ್ತದೆ?
ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನಮಗೆ ಆತ್ಮ-ಸಂಯಮದ ಅತ್ಯುತ್ತಮ ಮಾದರಿಗಳನ್ನು ಕೊಟ್ಟಿರುತ್ತಾರೆ. ಏದೆನಿನಲ್ಲಿ ಮನುಷ್ಯನ ಅವಿಧೇಯತ್ವದಿಂದ ಹಿಡಿದು ಸತತವಾಗಿ ಯೆಹೋವನು ಈ ಗುಣವನ್ನು ತೋರಿಸುತ್ತಾ ಹೋಗಿದ್ದಾನೆ. (ಯೆಶಾಯ 42:14 ಹೋಲಿಸಿ.) ಆತನು “ದೀರ್ಫಶಾಂತನು” ಎಂಬದಾಗಿ ಹಿಬ್ರೂ ಶಾಸ್ತ್ರದಲ್ಲಿ ಒಂಭತ್ತು ಸಾರಿ ನಾವು ಓದುತ್ತೇವೆ. (ವಿಮೋಚನಕಾಂಡ 34:6) ಅದಕ್ಕೆ ಆತ್ಮ-ಸಂಯಮವು ಬೇಕೇ ಬೇಕು. ಮತ್ತು ದೇವ ಕುಮಾರನೂ ಖಂಡಿತವಾಗಿ ಆತ್ಮ-ಸಂಯಮವನ್ನು ತೋರಿಸಿದ್ದಾನೆ ಯಾಕಂದರೆ “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ.” (1 ಪೇತ್ರ 2:23) ಆದರೂ “ಹನ್ನೆರಡು ಗಣಗಳಿಗಿಂತಲೂ ಹೆಚ್ಚು ಮಂದಿ ದೇವದೂತರನ್ನು” ಬೆಂಬಲಕ್ಕಾಗಿ ಕಳುಹಿಸಿಕೊಡುವಂತೆ ಯೇಸು ಕೇಳಿಕೊಳ್ಳಬಹುದಿತ್ತು.—ಮತ್ತಾಯ 26:53.
2. ಅಪರಿಪೂರ್ಣ ಮಾನವರಿಂದ ಆತ್ಮ-ಸಂಯಮವು ತೋರಿಸಲ್ಪಟ್ಟ ಯಾವ ಉತ್ತಮ ಶಾಸ್ತ್ರೀಯ ಉದಾಹರಣೆಗಳು ನಮಗಿವೆ?
2 ಅಪರಿಪೂರ್ಣ ಮಾನವರಿಂದಲೂ ಆತ್ಮ-ಸಂಯಮವು ತೋರಿಸಲ್ಪಟ್ಟ ಉತ್ತಮ ಶಾಸ್ತ್ರೀಯ ಮಾದರಿಗಳೂ ನಮಗಿವೆ. ಉದಾಹರಣೆಗಾಗಿ, ಯಾಕೋಬನ ಮಗನಾದ ಯೋಸೇಫನ ಜೀವನದ ಒಂದು ಗಮನಾರ್ಹ ಘಟನೆಯಲ್ಲಿ, ಈ ಗುಣವು ಪ್ರದರ್ಶಿಸಲ್ಪಟ್ಟಿತು. ಪೋಟೀಫರನ ಹೆಂಡತಿಯು ಅವನನ್ನು ಮೋಹಿಸಲು ಪ್ರಯತ್ನಿಸಿದಾಗ ಎಂಥ ಆತ್ಮ ಸಂಯಮವನ್ನು ಯೋಸೇಫನು ತೋರಿಸಿದನು! (ಆದಿಕಾಂಡ 39:7-9) ಬಾಬೇಲಿನ ರಾಜನ ಭೋಜನ ಪದಾರ್ಥಗಳನ್ನು ತಿನ್ನಲು ಮೋಶೆಯ ನಿಯಮ ಶಾಸ್ತ್ರದ ನಿರ್ಬಂಧಗಳಿಂದಾಗಿ ನಿರಾಕರಿಸಿದ ಮೂಲಕ ಆತ್ಮ-ಸಂಯಮವನ್ನು ಪ್ರದರ್ಶಿಸಿದ ಆ ನಾಲ್ವರು ಹಿಬ್ರೂ ಯುವಕರ ಆದರ್ಶ ಮಾದರಿ ಕೂಡಾ ನಮಗಿದೆ.—ದಾನಿಯೇಲ 1:8-17.
3. ತಮ್ಮ ಸ್ವದರ್ತನೆಗಳಿಗೆ ಯಾರು ಪ್ರಸಿದ್ಧರಾಗಿದ್ದಾರೆ, ಇದು ಯಾವ ಪ್ರಮಾಣದಿಂದ ತೋರಿಬರುತ್ತದೆ?
3 ಆತ್ಮ-ಸಂಯಮದ ಆಧುನಿಕ ಮಾದರಿಯಾಗಿ ಯೆಹೋವನ ಸಾಕ್ಷಿಗಳನ್ನು ಇಡೀಯಾಗಿ ನಾವು ತಕ್ಕೊಳ್ಳಬಹುದು. “ಲೋಕದಲ್ಲಿರುವ ಅತ್ಯುತ್ತಮ ಸ್ವದರ್ತನೆಯ ಗುಂಪುಗಳಲ್ಲಿ ಅವರು ಒಬ್ಬರು” ಎಂಬದಾಗಿ ನ್ಯೂ ಕ್ಯಾಥ್ಲಿಕ್ ಎನ್ಸೈಕ್ಲೊಪೀಡಿಯ ಕೊಟ್ಟ ಹೊಗಳಿಕೆಗೆ ಅವರು ಅರ್ಹರಾಗಿದ್ದಾರೆ. “ಸಾಕ್ಷಿಗಳು ತಾವೇನನ್ನು ಶಾಸ್ತ್ರವಚನಗಳಿಂದ ಕಲಿಯುತ್ತಾರೋ ಅವನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಾರೆ” ಎಂದು ಫಿಲಿಪ್ಪೀನ್ ವಿಶ್ವವಿದ್ಯಾಲಯದ ಒಬ್ಬ ಶಿಕ್ಷಕರು ಹೇಳಿರುತ್ತಾರೆ. 1989ರಲ್ಲಿ ವಾರ್ಷಾದಲ್ಲಿ ನಡೆದ ಸಾಕ್ಷಿಗಳ ಅಧಿವೇಶನದ ಕುರಿತು ಒಬ್ಬ ಪೋಲಿಷ್ ವರದಿಗಾರನು ಬರೆದದ್ದು: “55,000 ಜನರು ಮೂರು ದಿನಗಳಲ್ಲಿ ಒಂದು ಸಿಗರೇಟನ್ನಾದರೂ ಸೇದಲಿಲ್ಲ! . . . ಈ ಅತಿಮಾನುಷ ಶಿಸ್ತಿನ ಪ್ರದರ್ಶನೆಯು ಅಚ್ಚರಿಯಿಂದ ಬೆರೆತ ಶ್ಲಾಘನೆಯಿಂದ ನನ್ನನ್ನು ಪ್ರಭಾವಿತನನ್ನಾಗಿ ಮಾಡಿದೆ.”
ದೇವರಿಗೆ ಭಯಪಡುವುದು ಮತ್ತು ಕೆಟ್ಟದ್ದನ್ನು ಹಗೆಮಾಡುವುದು
4. ಆತ್ಮ-ಸಂಯಮವನ್ನು ತೋರಿಸುವುದರಲ್ಲಿ ಒಂದು ಮಹತ್ತಾದ ಸಹಾಯಕವು ಯಾವುದು?
4 ಆತ್ಮ-ಸಂಯಮವನ್ನು ಬೆಳೆಸುವುದರಲ್ಲಿ ಒಂದು ಅತಿ ಮಹತ್ತಾದ ಸಹಾಯಕವು ದೇವರ ಭಯವೇ, ನಮ್ಮ ಪ್ರೀತಿಯುಳ್ಳ ಸ್ವರ್ಗೀಯ ತಂದೆಯನ್ನು ಅಪ್ರಸನ್ನಗೊಳಿಸುವ ಆರೋಗ್ಯಕರ ಅಂಜಿಕೆಯೇ. ದೇವರಿಗೆ ಭಯಭಕ್ತಿಯನ್ನು ತೋರಿಸುವುದು ನಮಗೆ ಅದೆಷ್ಟು ಮಹತ್ವದ್ದೆಂಬದು, ದೇವರ ವಾಕ್ಯವು ಅದನ್ನು ಅನೇಕ ಸಲ ತಿಳಿಸಿರುವ ನಿಜತ್ವದಿಂದ ಕಂಡುಬರುತ್ತದೆ. ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಬಲಿಕೊಡಲು ಸಿದ್ಧನಾಗಿದ್ದಾಗ, ದೇವರು ಅಂದದ್ದು: “ನಿನ್ನ ಹುಡುಗನ ಮೇಲೆ ಕೈಹಾಕಬೇಡ. ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸಲು ಹಿಂತೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂತು.” (ಆದಿಕಾಂಡ 22:12) ಆ ಸಂದರ್ಭದಲ್ಲಿ ಭಾವೋದ್ರೇಕದ ಒತ್ತಡ ಬಹಳವಿತ್ತು. ಆದ್ದರಿಂದ ದೇವರ ಆಜೆಗ್ಞನುಸಾರ ತನ್ನ ಪ್ರಿಯ ಮಗನಾದ ಇಸಾಕನನ್ನು ವಧಿಸಲು ತನ್ನ ಕತ್ತಿಯನ್ನೆತ್ತುವ ಬಿಂದುವಿಗೆ ಮುಂದರಿಯಲು ಅಬ್ರಹಾಮನು ಬಹಳಷ್ಟು ಆತ್ಮ-ಸಂಯಮವನ್ನು ತಕ್ಕೊಂಡಿರಬೇಕು. ಹೌದು, ದೇವರ ಭಯವು ಆತ್ಮ-ಸಂಯಮವನ್ನು ತೋರಿಸಲು ನಮಗೆ ನೆರವಾಗುವುದು.
5. ನಮ್ಮ ಆತ್ಮ-ಸಂಯಮ ತೋರಿಸುವಿಕೆಯಲ್ಲಿ ಕೆಟ್ಟದ್ದನ್ನು ಹಗೆ ಮಾಡುವಿಕೆಯು ಯಾವ ಪಾತ್ರವನ್ನು ವಹಿಸುತ್ತದೆ?
5 ಯೆಹೋವನ ಭಯಕ್ಕೆ ನಿಕಟವಾಗಿ ಸಂಬಂಧಿಸಿರುವಂಥಾದ್ದು—ಕೆಟ್ಟದ್ದನ್ನು ಹಗೆ ಮಾಡುವುದೇ. ಜ್ಞಾನೋಕ್ತಿ 8:13ರಲ್ಲಿ ನಾವು ಓದುವುದು: “ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ.” ಸರದಿಯಲ್ಲಿ, ಪಾಪ ದ್ವೇಷವು ಆತ್ಮ-ಸಂಯಮವನ್ನು ತೋರಿಸಲು ನಮಗೆ ಸಹಾಯ ಮಾಡುತ್ತದೆ. ಆಗಿಂದಾಗ್ಯೆ ದೇವರ ವಾಕ್ಯವು ನಮಗೆ ಕೆಟ್ಟದ್ದನ್ನು ಹಗೆಮಾಡಲು—ಹೌದು, ಅದನ್ನು ಹೇಸಲು ಉಪದೇಶ ಮಾಡಿದೆ. (ಕೀರ್ತನೆ 97:10; ಆಮೋಸ 5:14, 15; ರೋಮಾಪುರ 12:9) ಯಾವುದು ಕೆಟ್ಟದ್ದೋ ಅದು ಹೆಚ್ಚಾಗಿ ಎಷ್ಟು ಸುಖದಾಯಕ, ಎಷ್ಟು ಆಕರ್ಷಕ ಮತ್ತು ಎಷ್ಟು ಮನಮೋಹಕವೆಂದರೆ, ಅದರ ವಿರುದ್ಧವಾಗಿ ನಮ್ಮನ್ನು ಭದ್ರಪಡಿಸಲು ನಾವದನ್ನು ದ್ವೇಷಿಸಬೇಕೇ ಹೊರತು ಬೇರೆ ಮಾರ್ಗವಿಲ್ಲ. ಯಾವುದು ಕೆಟ್ಟದ್ದೋ ಅದನ್ನು ಈ ರೀತಿ ಹಗೆ ಮಾಡುವಿಕೆಯು ಆತ್ಮ-ಸಂಯಮವನ್ನು ತೋರಿಸುವ ನಮ್ಮ ನಿರ್ಧಾರದ ಮೇಲೆ ಬಲವುಳ್ಳ ಪ್ರಭಾವವನ್ನು ಹಾಕುತ್ತದೆ ಮತ್ತು ಹೀಗೆ ನಮಗೆ ಒಂದು ಸುರಕ್ಷೆಯಾಗಿ ಕಾರ್ಯ ನಡಿಸುತ್ತದೆ.
ಆತ್ಮ-ಸಂಯಮ, ವಿವೇಕದ ಮಾರ್ಗವು
6. ಆತ್ಮ-ಸಂಯಮವನ್ನು ತೋರಿಸುವ ಮೂಲಕ ನಮ್ಮ ಸ್ವಾರ್ಥಪರ ಪ್ರವೃತ್ತಿಗಳನ್ನು ನಿಗ್ರಹಿಸುವುದು ಏಕೆ ವಿವೇಕಪ್ರದವು?
6 ಆತ್ಮ-ಸಂಯಮವನ್ನು ತೋರಿಸುವುದರಲ್ಲಿ ಇನ್ನೊಂದು ವಿವೇಕದ ಮಾರ್ಗವು ಈ ಗುಣವನ್ನು ಪ್ರದರ್ಶಿಸುವುದರಲ್ಲಿರುವ ವಿವೇಕವನ್ನು ಗಣ್ಯಮಾಡುವುದೇ. ನಮ್ಮ ಸ್ವಂತ ಪ್ರಯೋಜನಕ್ಕಾಗಿ ಆತ್ಮ-ಸಂಯಮವನ್ನು ತೋರಿಸುವಂತೆ ಯೆಹೋವನು ನಮ್ಮನ್ನು ಕೇಳಿಕೊಳ್ಳುತ್ತಾನೆ. (ಯೆಶಾಯ 48:17, 18) ಆತ್ಮ-ಸಂಯಮವನ್ನು ತೋರಿಸುವ ಮೂಲಕ ನಮ್ಮ ಸ್ವಾರ್ಥಪರ ಪ್ರವೃತ್ತಿಗಳನ್ನು ನಿಗ್ರಹಿಸುವುದು ಎಷ್ಟು ವಿವೇಕದ್ದೆಂದು ತೋರಿಸುವ ಬಹಳಷ್ಟು ಸೂಚನೆಯು ಆತನ ವಾಕ್ಯದಲ್ಲಿ ಅಡಕವಾಗಿದೆ. ದೇವರ ಬದಲಾಗದ ನಿಯಮಗಳನ್ನು ನಾವೆಂದಿಗೂ ತಪ್ಪಿಸಿಕೊಳ್ಳಲಾರೆವು. ಆತನ ವಾಕ್ಯವು ನಮಗೆ ಹೇಳುವುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” (ಗಲಾತ್ಯ 6:7, 8) ಇದರ ಒಂದು ಸುವ್ಯಕ್ತ ಉದಾಹರಣೆಯು ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿದೆ. ಜನರು ಮಿತಿಮೀರಿ ತಿನ್ನುವುದರಿಂದ ಮತ್ತು ಕುಡಿಯುವದರಿಂದ ಅನೇಕ ಕೆಡುಕುಗಳು ಉಂಟಾಗುತ್ತವೆ. ಅಂಥ ಎಲ್ಲಾ ಸ್ವಾರ್ಥಪರತೆಗೆ ಬಿಟ್ಟುಕೊಡುವಿಕೆಯು ವ್ಯಕ್ತಿಯ ಆತ್ಮ-ಗೌರವವನ್ನು ಅಪಹರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ಇತರರೊಂದಿಗಿನ ತನ್ನ ಸಂಬಂಧವನ್ನು ಸಹಾ ಕೆಡಿಸದ ಹೊರತು ವ್ಯಕ್ತಿಯೊಬ್ಬನು ಸ್ವಾರ್ಥಪರತೆಗೆ ಇಳಿಯಲಾರನು. ಎಲ್ಲಾದಕ್ಕಿಂತ ಗಂಭೀರವಾಗಿ, ಆತ್ಮ-ಸಂಯಮದ ಕೊರತೆಯು ನಮ್ಮ ಸ್ವರ್ಗೀಯ ತಂದೆಯೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಬಲ್ಲದು.
7. ಜ್ಞಾನೋಕ್ತಿ ಪುಸ್ತಕದ ಒಂದು ಮುಖ್ಯವಿಷಯವು ಯಾವುದು, ಯಾವ ಬೈಬಲ್ ವಚನಗಳು ಅದನ್ನು ತೋರಿಸುತ್ತವೆ?
7 ಆದುದರಿಂದ ಸ್ವಾರ್ಥಪರತೆಯು ಆತ್ಮ-ಪರಾಭವವೆಂದು ನಾವು ನಮಗೆ ಸದಾ ತಿಳಿಸುತ್ತಿರಬೇಕು. ಆತ್ಮ-ಶಾಸನವನ್ನು ಒತ್ತಿಹೇಳುವ ಜ್ಞಾನೋಕ್ತಿ ಪುಸ್ತಕದ ಒಂದು ಎದ್ದುಕಾಣುವ ಮುಖ್ಯವಿಷಯವು—_ಸ್ವಾರ್ಥಪರತೆ ಲಾಭಕರವಲ್ಲ ಮತ್ತು ಆತ್ಮ ಸಂಯಮವನ್ನು ತೋರಿಸುವುದರಲ್ಲಿ ವಿವೇಕವಿದೆ ಎಂಬದೆ. (ಜ್ಞಾನೋಕ್ತಿ 14:29; 16:32) ಮತ್ತು ಆತ್ಮ-ಶಾಸನದಲ್ಲಿ ಯಾವುದು ಕೆಟ್ಟದ್ದೋ ಅದನ್ನು ವರ್ಜಿಸುವುದಕ್ಕಿಂತ ಹೆಚ್ಚಿನದ್ದು ಸೇರಿದೆ ಎಂಬದಕ್ಕೆ ಗಮನಕೊಡುವಂತಾಗಲಿ. ಆತ್ಮ-ಶಾಸನ ಅಥವಾ ಆತ್ಮ-ಸಂಯಮವು, ಯಾವುದು ಒಳ್ಳೆದೋ ಅದನ್ನು ಮಾಡಲು ಕೂಡಾ ಬೇಕಾಗಿದೆ, ಇದು ಕಷ್ಟಕರವಾಗಬಹುದು ಯಾಕೆಂದರೆ ಅದು ನಮ್ಮ ಪಾಪಪೂರ್ಣ ಪ್ರವೃತ್ತಿಗಳನ್ನು ವಿರೋಧಿಸುತ್ತದೆ.
8. ಆತ್ಮ-ಸಂಯಮವನ್ನು ತೋರಿಸುವುದರಲ್ಲಿರುವ ವಿವೇಕವನ್ನು ಯಾವ ಅನುಭವವು ಎತ್ತಿಹೇಳುತ್ತದೆ?
8 ಒಂದು ಬ್ಯಾಂಕಿನ ಸರದಿಯ ಸಾಲಿನಲ್ಲಿ ಯೆಹೋವನ ಸಾಕ್ಷಿಯೊಬ್ಬನು ನಿಂತಿದ್ದಾಗ ಇನ್ನೊಬ್ಬನು ಅವನನ್ನು ದೂಡಿ ಮುಂದೆ ಹೋಗಿನಿಂತ ಒಂದು ಸಂಗತಿಯಲ್ಲಿ ಆತ್ಮ-ಸಂಯಮವನ್ನು ತೋರಿಸುವುದರಲ್ಲಿರುವ ವಿವೇಕವು ವ್ಯಕ್ತವಾಗುತ್ತದೆ. ಸಾಕ್ಷಿಯು ತುಸು ಕೋಪಗೊಂಡರೂ, ಆತ್ಮ-ಸಂಯಮವನ್ನು ಅವನು ತೋರಿಸಿದನು. ಒಂದು ರಾಜ್ಯ ಸಭಾಗೃಹದ ಯೋಜನೆಗೆ ನಿರ್ದಿಷ್ಟ ಇಂಜಿನಿಯರನ ಸಹಿಯನ್ನು ಪಡೆಯಲು ಅದೇ ದಿನ ಅವನನ್ನು ನೋಡಲಿಕ್ಕಿತ್ತು. ಮತ್ತು ಆ ಇಂಜಿನಿಯರನು ಯಾರಾಗಿ ರುಜುವಾದನು? ಏಕೆ, ಬ್ಯಾಂಕಿನಲ್ಲಿ ಅವನನ್ನು ದೂಡಿ ಮುಂದೆ ಹೋಗಿ ನಿಂತ ಆ ಮನುಷ್ಯನೇ! ಆ ಇಂಜಿನಿಯರನು ಅತ್ಯಂತ ಸ್ನೇಹವನ್ನು ತೋರಿಸಿದನು ಮಾತ್ರವಲ್ಲ ಕ್ರಮದ ಫೀಜುಗಿಂತ ಹತ್ತನೇ ಒಂದಂಶವನ್ನು ಕಡಿಮೆ ಮಾಡಿದನು. ಆ ದಿನದಾರಂಭದಲ್ಲಿ ತನ್ನನ್ನು ಉದ್ರೇಕಗೊಳ್ಳದಂತೆ ತಡೆದು ಆತ್ಮ-ಸಂಯಮ ತೋರಿಸಿದಕ್ಕಾಗಿ ಆ ಸಾಕ್ಷಿಯು ಎಷ್ಟು ಸಂತೋಷ ಪಟ್ಟನು!
9. ಶುಶ್ರೂಷೆಯಲ್ಲಿ ಕೆಟ್ಟ ಬೈಗಳ ಪ್ರತಿವರ್ತನೆಯನ್ನು ನಾವು ಎದುರಿಸುವಾಗ ವಿವೇಕದ ಮಾರ್ಗವು ಯಾವುದು?
9 ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ನಾವು ಪದೇ ಪದೇ ಮನೆಯಿಂದ ಮನೆಗೆ ಹೋಗುವಾಗ ಅಥವಾ ಬೀದಿಬದಿಯಲ್ಲಿ ನಿಂತು ಹಾದುಹೋಕರ ಆಸಕ್ತಿಯನ್ನು ನಮ್ಮ ಸಂದೇಶದ ಕಡೆಗೆ ಸೆಳೆಯಲು ಪ್ರಯತ್ನಿಸುವಾಗ, ಕೆಟ್ಟ ಬೈಗಳನ್ನು ನಾವು ಕೇಳುತ್ತೇವೆ. ವಿವೇಕದ ಮಾರ್ಗವು ಯಾವುದು? ಸುಜ್ಞ ಹೇಳಿಕೆಯು ಜ್ಞಾನೋಕ್ತಿ 15:1ರಲ್ಲಿ ಕೊಡಲ್ಪಟ್ಟಿದೆ: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು.” ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ಆತ್ಮ-ಸಂಯಮವನ್ನು ನಾವು ಅಭ್ಯಾಸಿಸುವ ಅಗತ್ಯವಿದೆ. ಮತ್ತು ಯೆಹೋವನ ಸಾಕ್ಷಿಗಳು ಇದನ್ನು ಸತ್ಯವಾಗಿ ಕಂಡಿರುವುದು ಮಾತ್ರವೇ ಅಲ್ಲ ಇತರರು ಕೂಡಾ ಕಂಡಿರುತ್ತಾರೆ. ಆತ್ಮ-ಸಂಯಮದ ವಾಸಿಕಾರಕ ಮೂಲ್ಯತೆಯು ವೈದ್ಯಕೀಯ ಕಸುಬಿನವರಿಂದ ಹೆಚ್ಚೆಚ್ಚಾಗಿ ಗಣ್ಯಮಾಡಲ್ಪಡುತ್ತಾ ಇದೆ.
ನಿಸ್ವಾರ್ಥ ಪ್ರೀತಿಯು ಸಹಾಯಕಾರಿ
10, 11. ಆತ್ಮ-ಸಂಯಮವನ್ನು ತೋರಿಸುವುದರಲ್ಲಿ ಪ್ರೀತಿಯು ಒಂದು ನಿಜ ಸಹಾಯಕವಾಗಿದೆಯೇಕೆ?
10 1 ಕೊರಿಂಥ 13:4-8ರಲ್ಲಿ ಪೌಲನು ಪ್ರೀತಿಯ ಕುರಿತು ಕೊಟ್ಟ ವರ್ಣನೆಯು ಆತ್ಮ-ಸಂಯಮವನ್ನು ತೋರಿಸಲು ಅದರ ಶಕ್ತಿ ನಮಗೆ ಸಹಾಯ ಮಾಡಬಲ್ಲದೆಂದು ತೋರಿಸುತ್ತದೆ. “ಪ್ರೀತಿ ಬಹು ತಾಳ್ಮೆಯುಳ್ಳದ್ದು.” ತಾಳ್ಮೆಯುಳ್ಳವರಾಗಬೇಕಾದರೆ ಆತ್ಮ-ಸಂಯಮವು ಬೇಕೇ ಬೇಕು. “ಪ್ರೀತಿ ಹೊಟ್ಟೆಕಿಚ್ಚು ಪಡುವುದಿಲ್ಲ, ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.” ಪ್ರೀತಿಯ ಗುಣವು ನಮ್ಮ ಆಲೋಚನೆಗಳನ್ನು ಭಾವೋದ್ರೇಕಗಳನ್ನು ಅಂಕೆಯಲಿಡ್ಲುವಂತೆ, ಹೊಟ್ಟೆಕಿಚ್ಚುಪಡುವ, ಹೊಗಳಿಕೊಳ್ಳುವ ಅಥವಾ ಉಬ್ಬಿಕೊಳ್ಳುವ ಯಾವುದೇ ಸ್ವಭಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅವುಗಳಿಗೆ ತೀರಾ ವಿರುದ್ಧವಾಗಿರುವಂತೆ ಪ್ರೀತಿಯು ನಮ್ಮನ್ನು ಪ್ರೇರೇಪಿಸುತ್ತದೆ, ನಮ್ಮನ್ನು ನಮ್ರರನ್ನಾಗಿ ಮಾಡುತ್ತದೆ, ಯೇಸುವಿನಂತೆ ದೀನಮನಸ್ಸುಳ್ಳವರಾಗಿ ಮಾಡುತ್ತದೆ.—ಮತ್ತಾಯ 11:28-30.
11 “ಪ್ರೀತಿ ಮರ್ಯಾದೆಗೆಟ್ಟು ನಡಿಯುವುದಿಲ್ಲ” ಎಂದು ಪೌಲನು ಮತ್ತೂ ಹೇಳುತ್ತಾನೆ. ಎಲ್ಲಾ ಸಮಯಗಳಲ್ಲಿ ಮರ್ಯಾದೆಯಿಂದ ನಡೆಯಲು ಸಹಾ ಆತ್ಮ-ಸಂಯಮವು ಬೇಕು. ಪ್ರೀತಿಯ ಗುಣವು ನಮ್ಮನ್ನು ದುರಾಶೆಯಿಂದ, ಕೇವಲ ‘ಸ್ವಪ್ರಯೇಜನವನ್ನೇ ಚಿಂತಿಸುವದರಿಂದ’ ತಡೆಯುತ್ತದೆ. ಪ್ರೀತಿಯು “ಸಿಟ್ಟುಗೊಳ್ಳುವದಿಲ್ಲ.” ಬೇರೆಯವರ ಮಾತುಗಳಿಂದ ಮತ್ತು ಕ್ರಿಯೆಗಳಿಂದಾಗಿ ಚಿತಾಯಿಸಲ್ಪಡುವದು ಅದೆಷ್ಟು ಸುಲಭ. ಆದರೆ ಪ್ರೀತಿಯು ಆತ್ಮ-ಸಂಯಮವನ್ನು ತೋರಿಸುವಂತೆ ಮತ್ತು ಅನಂತರ ನಾವು ವಿಷಾದ ಪಡುವಂಥ ವಿಷಯಗಳನ್ನು ಹೇಳದಂತೆ ಮತ್ತು ಮಾಡದಂತೆ ನೆರವಾಗುತ್ತದೆ. ಪ್ರೀತಿಯು “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” ಒಂದು ಸೇಡಿಗೆ ಇಂಬುಕೊಡುವ ಅಥವಾ ಕೋಪವನ್ನು ಮನಸ್ಸಿನಲ್ಲಿಡುವ ಪ್ರವೃತ್ತಿಯು ಮಾನವ ಸಹಜ ಸ್ವಭಾವವಾಗಿದೆ. ಆದರೆ ಅಂಥ ವಿಚಾರಗಳನ್ನು ಮನಸ್ಸಿನಿಂದ ತೆಗೆಯುವಂತೆ ಪ್ರೀತಿಯು ಸಹಾಯ ಮಾಡುವುದು. ಪ್ರೀತಿಯು “ಅನೀತಿಯನ್ನು ನೋಡಿ ಸಂತೋಷ ಪಡುವದಿಲ್ಲ.” ಯಾವುದು ಅನೀತಿಯೋ ಅದನ್ನು, ಅಂದರೆ ಅಶ್ಲೀಲಚಿತ್ರಗಳಲ್ಲಿ ಅಥವಾ ಹೊಲಸಾದ ಟೀವೀ ಧಾರವಾಹಿಗಳಲ್ಲಿ ಸಂತೋಷ ಪಡದಿರಲು ಆತ್ಮ-ಸಂಯಮದ ಅಗತ್ಯವಿದೆ. ಪ್ರೀತಿಯು “ಎಲ್ಲವನ್ನು ಸಹಿಸಿಕೊಳ್ಳುತ್ತದೆ” ಮತ್ತು “ಎಲ್ಲವನ್ನು ತಾಳಿಕೊಳ್ಳುತ್ತದೆ.” ವಿಷಯಗಳನ್ನು ಸಹಿಸಿಕೊಳ್ಳಲು, ಕಷ್ಟಕರವಾದ ಅಥವಾ ಭಾರವಾದ ಸಂಗತಿಗಳನ್ನು ತಾಳಿಕೊಳ್ಳಲು ಮತ್ತು ಅವು ನಮ್ಮನ್ನು ನಿರುತ್ತೇಜನಗೊಳಿಸದಂತೆ, ಅದೇ ರೀತಿಯ ಪ್ರತೀಕಾರ ಸಲ್ಲಿಸದಂತೆ, ಅಥವಾ ಯೆಹೋವನ ಸೇವೆಯನ್ನು ಬಿಟ್ಟುಬಿಡುವ ಪ್ರವೃತ್ತಿಯನ್ನು ತಾಳದಂತೆ ಆತ್ಮ-ಸಂಯಮವು ನಮಗೆ ಆವಶ್ಯವಾಗಿ ಬೇಕು.
12. ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನಮಗಾಗಿ ಮಾಡಿರುವ ಎಲ್ಲದಕ್ಕಾಗಿ ನಮ್ಮ ಗಣ್ಯತೆಯನ್ನು ತೋರಿಸುವ ಒಂದು ಮಾರ್ಗವು ಯಾವುದು?
12 ನಾವು ನಮ್ಮ ಸ್ವರ್ಗೀಯ ತಂದೆಯನ್ನು ನಿಜವಾಗಿ ಪ್ರೀತಿಸುವುದಾದರೆ ಮತ್ತು ಆತನ ಆಶ್ಚರ್ಯಕರ ಗುಣಗಳನ್ನು ಮತ್ತು ನಮಗಾಗಿ ಆತನು ಮಾಡಿರುವ ಎಲ್ಲವನ್ನು ಗಣ್ಯ ಮಾಡುವುದಾದರೆ, ಎಲ್ಲಾ ಸಮಯದಲ್ಲಿ ಆತ್ಮ-ಸಂಯಮವನ್ನು ತೋರಿಸುವ ಮೂಲಕ ಆತನನ್ನು ಮೆಚ್ಚಿಸ ಬಯಸುವೆವು. ಅಲ್ಲದೇ, ನಾವು ನಿಜವಾಗಿಯೂ ನಮ್ಮ ಕರ್ತನೂ ಬೋಧಕನೂ ಆಗಿರುವ ಯೇಸು ಕ್ರಿಸ್ತನನ್ನು ಪ್ರೀತಿಸುವುದಾದರೆ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲವನ್ನು ಗಣ್ಯ ಮಾಡುವುದಾದರೆ, ‘ನಮ್ಮ ಹಿಂಸಾಕಂಭವನ್ನು ಹೊತ್ತುಕೊಂಡು ಆತನನ್ನು ಸತತವಾಗಿ ಹಿಂಬಾಲಿಸುವ’ ಆತನ ಆಜ್ಞೆಯನ್ನು ಪಾಲಿಸ ಬಯಸುವೆವು. (ಮಾರ್ಕ 8:34) ಇದಕ್ಕಾಗಿ ನಾವು ಆತ್ಮ-ಸಂಯಮವನ್ನು ಅವಶ್ಯವಾಗಿ ತೋರಿಸಬೇಕು. ನಮ್ಮ ಕ್ರೈಸ್ತ ಸಹೋದರ ಮತ್ತು ಸಹೋದರಿಯರ ಕಡೆಗೆ ಪ್ರೀತಿಯು ಸಹಾ ಸ್ವಾರ್ಥಪರ ಮಾರ್ಗವನ್ನು ಅನುಸರಿಸಿ ಅವರನ್ನು ನೋಯಿಸುವದರಿಂದ ನಮ್ಮನ್ನು ದೂರವಿರಿಸುತ್ತದೆ.
ನಂಬಿಕೆ ಮತ್ತು ದೀನತೆ ಸಹಾಯಕಗಳಾಗಿ
13. ಆತ್ಮ-ಸಂಯಮವನ್ನು ತೋರಿಸಲು ನಂಬಿಕೆಯು ನಮಗೆ ಸಹಾಯ ಮಾಡಬಲ್ಲದ್ದೇಕೆ?
13 ಆತ್ಮ-ಸಂಯಮವನ್ನು ತೋರಿಸಲು ಇನ್ನೊಂದು ಮಹಾ ಸಹಾಯಕವು ದೇವರಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನಂಬಿಕೆಯೇ. ಯೆಹೋವನಲ್ಲಿ ಭರವಸ ಇಡುವಂತೆ ಮತ್ತು ವಿಷಯಗಳನ್ನು ಸರಿಪಡಿಸಲು ಆತನ ಕ್ಲುಪ್ತಕಾಲಕ್ಕಾಗಿ ಕಾಯುವಂತೆ ನಂಬಿಕೆಯು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅಪೊಸ್ತಲ ಪೌಲನು ಇದೇ ವಿಷಯವನ್ನು ರೋಮಾಪುರ 12:19ರಲ್ಲಿ ಸೃಷ್ಟಗೊಳಿಸುತ್ತಾ ಅಂದದ್ದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದಿರ್ರಿ . . . ಯಾಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ.” ಈ ವಿಷಯದಲ್ಲಿ ದೀನತೆಯು ಸಹಾ ನಮಗೆ ಸಹಾಯ ಮಾಡಬಲ್ಲದು. ನಾವು ದೀನರಾಗಿದ್ದರೆ, ಊಹಿಸುವಂಥ ಯಾ ನಿಜವಾದ ಹಾನಿಗಳಿಗಾಗಿ ಬೇಗನೇ ಕೋಪಗೊಳ್ಳಲಾರೆವು. ದುಡುಕಿ ಪ್ರತೀಕಾರ ತೋರಿಸುವ ಬದಲಿಗೆ ಆತ್ಮ-ಸಂಯಮವನ್ನು ತೋರಿಸಿ ಯೆಹೋವನಿಗಾಗಿ ಕಾಯಲು ಮನಸ್ಸುಳ್ಳವರಾಗುವೆವು.—ಕೀರ್ತನೆ 37:1, 8, ಹೋಲಿಸಿ.
14. ಆತ್ಮ-ಸಂಯಮದಲ್ಲಿ ಬಹು ಕೊರತೆಯಿದ್ದವರು ಸಹಾ ಅದನ್ನು ಗಳಿಸಿಕೊಳ್ಳ ಸಾಧ್ಯವಿದೆಯೆಂದು ಯಾವ ಅನುಭವ ತೋರಿಸುತ್ತದೆ?
14 ಥಟ್ಟನೆ ಕ್ರೋಧದಿಂದ ಕೆರಳುವ ಸ್ವಭಾವದ ಒಬ್ಬ ಮನುಷ್ಯನ ಅನುಭವದಿಂದ ಆತ್ಮ-ಸಂಯಮವನ್ನು ತೋರಿಸಲು ನಾವು ಕಲಿಯ ಸಾಧ್ಯವಿದೆ ಎಂಬದನ್ನು ಪ್ರಬಲವಾಗಿ ಮನವರಿಕೆ ಮಾಡುತ್ತದೆ. ಅವನೆಷ್ಟು ಕೋಷ್ಟಿನಿದ್ದನೆಂದರೆ ಅವನೂ ಅವನ ತಂದೆಯೂ ಮಾಡುತ್ತಿದ್ದ ರಂಪಕ್ಕಾಗಿ ಪೋಲೀಸರು ಕರೆಯಲ್ಪಟ್ಟಾಗ, ಬೇರೆಯವರು ಅವನನ್ನು ಹಿಡಿಯುವ ಮುಂಚೆ ಅವನು ಮೂವರು ಪೋಲೀಸರನ್ನು ಉರುಳಿಸಿಬಿಟ್ಟಿದ್ದನು! ಆದರೂ ಸಮಯಾನಂತರ, ಅವನು ಯೆಹೋವನ ಸಾಕ್ಷಿಗಳ ಸಂಪರ್ಕಕ್ಕೆ ಬಂದನು ಮತ್ತು ಆತ್ಮದ ಫಲಗಳಲ್ಲಿ ಒಂದಾದ ಆತ್ಮ-ಸಂಯಮವನ್ನು ತೋರಿಸಲು ಕಲಿತನು. (ಗಲಾತ್ಯ 5:22, 23) ಇಂದು, 30 ವರ್ಷಗಳ ಅನಂತರ, ಈ ಮನುಷ್ಯನು ಇನ್ನೂ ಯೆಹೋವನನ್ನು ನಂಬಿಕೆಯಿಂದ ಸೇವಿಸುತ್ತಿದ್ದಾನೆ.
ಕುಟುಂಬ ವೃತ್ತದೊಳಗೆ ಆತ್ಮ-ಸಂಯಮ
15, 16. (ಎ) ಒಬ್ಬ ಗಂಡನಿಗೆ ಆತ್ಮ-ಸಂಯಮ ತೋರಿಸಲು ಯಾವುದು ಸಹಾಯಕಾರಿಯಾಗುವದು? (ಬಿ) ಯಾವ ಪರಿಸ್ಥಿತಿಯಲ್ಲಿ ಆತ್ಮ-ಸಂಯಮವು ವಿಶೇಷವಾಗಿ ಬೇಕಾಗಿದೆ ಎಂಬದು ಯಾವ ಅನುಭದಿಂದ ತೋರಿಬರುತ್ತದೆ? (ಸಿ) ಪತ್ನಿಯಿಂದ ಆತ್ಮ-ಸಂಯಮ ತೋರಿಸಲ್ಪಡುವ ಅಗತ್ಯವಿದೆಯೇಕೆ?
15 ಕುಟುಂಬ ವೃತ್ತದೊಳಗೆ ಆತ್ಮ-ಸಂಯಮವು ನಿಶ್ಚಯವಾಗಿ ಬೇಕು. ಗಂಡನು ತನ್ನ ಹೆಂಡತಿಯನ್ನು ತನ್ನ ಹಾಗೆ ಪ್ರೀತಿಸಬೇಕಾದರೆ ಅವನು ತನ್ನ ಆಲೋಚನೆಗಳನ್ನು, ಮಾತುಗಳನ್ನು ಮತ್ತು ಕ್ರಿಯೆಗಳನ್ನು ಬಹಳ ಸಂಯಮದಿಂದ ನಡಿಸುವಂತೆ ಕೇಳಲ್ಪಡುತ್ತದೆ. (ಎಫೆಸ 5:28, 29) ಹೌದು, 1 ಪೇತ್ರ 3:7ರ ಅಪೊಸ್ತಲ ಪೇತ್ರನ ಮಾತುಗಳನ್ನು ಪಾಲಿಸಲು ಗಂಡಂದಿರಿಗೆ ಆತ್ಮ-ಸಂಯಮದ ಅಗತ್ಯವಿದೆ: “ಗಂಡಂದಿರೇ, ನಿಮ್ಮ ಹೆಂಡತಿಯರೊಂದಿಗೆ ವಿವೇಕದಿಂದ ಒಗತನ ಮಾಡಿರಿ.” ವಿಶೇಷವಾಗಿ ಅವನ ಪತ್ನಿಯು ನಂಬದವಳಾಗಿರುವಾಗ, ನಂಬುವ ಗಂಡನು ಆತ್ಮ-ಸಂಯಮವನ್ನು ತೋರಿಸುವದು ಅವಶ್ಯಕ.
16 ದೃಷ್ಟಾಂತಕ್ಕಾಗಿ: ಒಬ್ಬ ಹಿರಿಯನಿಗೆ ಅತ್ಯಂತ ಸಿಡುಕಿನ ನಂಬದ ಪತ್ನಿಯೊಬ್ಬಳಿದ್ದಳು. ಆದರೂ ಅವನು ಆತ್ಮ-ಸಂಯಮವನ್ನು ತೋರಿಸಿದನು ಮತ್ತು ಇದು ಅವನಿಗೆ ಎಷ್ಟು ಪ್ರಯೋಜನವಾಯಿತೆಂದರೆ ಅವನ ಡಾಕ್ಟರರು ಅವನಿಗಂದದ್ದು: “ಜೋನ್, ನೀನು ಒಂದಾ ಅತ್ಯಂತ ತಾಳ್ಮೆಯುಳ್ಳ ಮನುಷ್ಯನು ಇಲ್ಲವೇ ಒಂದು ಪ್ರಬಲವಾದ ಧರ್ಮವು ನಿನಗಿದೆ.” ಹೌದು, ನಮಗೊಂದು ಪ್ರಬಲವಾದ ಧರ್ಮವಿದೆ ಯಾಕೆಂದರೆ “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ,” ಮತ್ತು ಅದು ನಮಗೆ ಆತ್ಮ-ಸಂಯಮ ತೋರಿಸಲು ಸಾಧ್ಯಮಾಡುತ್ತದೆ. (2 ತಿಮೊಥಿ 1:7) ಅದಲ್ಲದೇ, ಹೆಂಡತಿಯು ಸಹಾ ವಿಶೇಷವಾಗಿ ಗಂಡನು ನಂಬದವನಾಗಿರುವಾಗ ಅವನಿಗೆ ಅಧೀನಳಾಗಿರಲು ಆತ್ಮ-ಸಂಯಮವನ್ನು ತೋರಿಸುವ ಅಗತ್ಯವಿದೆ.—1 ಪೇತ್ರ 3:1-4.
17. ಹೆತ್ತವ-ಮಗುವಿನ ಸಂಬಂಧದಲ್ಲಿ ಆತ್ಮ-ಸಂಯಮವು ಮಹತ್ವವುಳ್ಳದೇಕ್ದೆ?
17 ಹೆತ್ತವ-ಮಗುವಿನ ಸಂಬಂಧದಲ್ಲೂ ಆತ್ಮ-ಸಂಯಮವು ತೋರಿಸಲ್ಪಡುವ ಅಗತ್ಯವಿದೆ. ಆತ್ಮ-ಸಂಯಮವುಳ್ಳ ಮಕ್ಕಳು ಇರಬೇಕಾದರೆ, ಮೊತ್ತಮೊದಲಾಗಿ ಹೆತ್ತವರು ಸ್ವತಃ ಒಂದು ಒಳ್ಳೇ ಮಾದರಿಯನ್ನು ಇಡಬೇಕು. ಮತ್ತು ಮಕ್ಕಳಿಗೆ ಒಂದಲ್ಲ ಒಂದು ರೀತಿಯ ಶಿಕ್ಷೆಯ ಅಗತ್ಯವಿರುವಾಗ, ಅದನ್ನು ಯಾವಾಗಲೂ ಶಾಂತಭಾವದಿಂದ ಮತ್ತು ಪ್ರೀತಿಯಲ್ಲಿ ಕೊಡಬೇಕು; ಇದಕ್ಕೂ ನಿಜ ಆತ್ಮ-ಸಂಯಮವು ಬೇಕಾಗಿದೆ. (ಎಫೆಸ 6:4; ಕೊಲೊಸ್ಸೆಯ 3:21) ಅಲ್ಲದೇ, ಮಕ್ಕಳು ತಾವು ಹೆತ್ತವರನ್ನು ನಿಜವಾಗಿ ಪ್ರೀತಿಸುತ್ತೇವೆಂದು ತೋರಿಸಲು ವಿಧೇಯತೆಯು ಬೇಕಾಗಿದೆ, ಮತ್ತು ವಿಧೇಯರಾಗಲು ಖಂಡಿತವಾಗಿಯೂ ಆತ್ಮ-ಸಂಯಮವು ಆವಶ್ಯಕವಾಗಿದೆ.—ಎಫೆಸ 6:1:3; 1 ಯೋಹಾನ 5:3 ಹೋಲಿಸಿ.
ದೇವರು ಒದಗಿಸುವ ಸಹಾಯಕಗಳನ್ನು ಉಪಯೋಗಕ್ಕೆ ಹಾಕುವುದು
18-20. ಆತ್ಮ-ಸಂಯಮ ತೋರಿಸಲು ಸಹಾಯಕಾರಿಯಾದ ಗುಣಗಳನ್ನು ಬೆಳೆಸಲಿಕ್ಕಾಗಿ ಯಾವ ಮೂರು ಆತ್ಮಿಕ ಒದಗಿಸುವಿಕೆಗಳ ಸದುಪಯೋಗವನ್ನು ನಾವು ಮಾಡಬೇಕು?
18 ದೇವರ ಭಯದಲ್ಲಿ, ನಿಸ್ವಾರ್ಥ ಪ್ರೀತಿಯಲ್ಲಿ, ನಂಬಿಕೆಯಲ್ಲಿ, ಕೆಟ್ಟತನವನ್ನು ಹಗೆಮಾಡುವುದರಲ್ಲಿ ಮತ್ತು ಆತ್ಮ-ಸಂಯಮದಲ್ಲಿ ಬೆಳೆಯಲು, ಯೆಹೋವ ದೇವರು ಒದಗಿಸಿರುವ ಎಲ್ಲಾ ಸಹಾಯದ ಸದುಪಯೋಗವನ್ನು ನಾವು ಮಾಡುವ ಅಗತ್ಯವಿದೆ. ಆತ್ಮ-ಸಂಯಮವನ್ನು ತೋರಿಸಲು ನಮಗೆ ಸಹಾಯಕಾರಿಯಾಗಬಲ್ಲ ಮೂರು ಆತ್ಮಿಕ ಒದಗಿಸುವಿಕೆಗಳನ್ನು ನಾವೀಗ ಚರ್ಚಿಸೋಣ. ಮೊದಲನೆಯದಾಗಿ, ಅಮೂಲ್ಯ ಸುಯೋಗವಾದ ಪ್ರಾರ್ಥನೆಯು ಅಲ್ಲಿದೆ. ಪ್ರಾರ್ಥನೆ ಮಾಡಲು ನಾವೆಂದೂ ತೀರಾ ಕಾರ್ಯಮಗ್ನರಾಗಿರಬಾರದು. ಹೌದು, ನಾವು “ಎಡೆಬಿಡದೆ ಪ್ರಾರ್ಥನೆ” ಮಾಡಲು, “ಬೇಸರಗೊಳ್ಳದೆ ಪ್ರಾರ್ಥನೆ” ಮಾಡಲು ಬಯಸಬೇಕು. (1 ಥೆಸಲೊನೀಕ 5:17; ರೋಮಾಪುರ 12:12) ಆತ್ಮ-ಸಂಯಮದ ಬೆಳೆಸುವಿಕೆಯನ್ನು ಒಂದು ಪ್ರಾರ್ಥನೆಯ ವಿಷಯವಾಗಿ ನಾವು ಮಾಡೋಣ. ಆದರೆ ಆತ್ಮ-ಸಂಯಮವನ್ನು ತೋರಿಸಲು ಕೊರತೆಯುಳ್ಳವರಾದಾಗ, ಪಶ್ಚಾತ್ತಾಪದಿಂದ ಕ್ಷಮೆಗಾಗಿ ನಮ್ಮ ತಂದೆಗೆ ವಿಜ್ಞಾಪನೆಯನ್ನು ಮಾಡೋಣ.
19 ಆತ್ಮ-ಸಂಯಮವನ್ನು ಪ್ರದರ್ಶಿಸುವುದರಲ್ಲಿ ಸಹಾಯದ ಎರಡನೆಯ ಕ್ಷೇತ್ರವು, ದೇವರ ವಾಕ್ಯದಿಂದ ಮತ್ತು ಆ ವಾಕ್ಯವನ್ನು ತಿಳಿದುಕೊಳ್ಳಲು ಮತ್ತು ಶಾಸ್ತ್ರವಚಗಳನ್ನು ಅನ್ವಯಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುವ ಸಾಹಿತ್ಯಗಳ ಅಭ್ಯಾಸದಿಂದ ಬರುವ ಸಹಾಯವನ್ನು ಪಡಕೊಳ್ಳುವದೇ. ನಮ್ಮ ಪವಿತ್ರ ಸೇವೆಯ ಈ ಭಾಗವನ್ನು ದುರ್ಲಕ್ಷಿಸುವದು ಅತಿ ಸುಲಭ! ನಾವು ಆತ್ಮ-ಸಂಯಮವನ್ನು ತೋರಿಸುತ್ತಾ, ಬೈಬಲಿಗಿಂತ ಅಧಿಕ ಮಹತ್ವದ ವಾಚನೀಯ ಸಮಾಚಾರವು ಬೇರೆ ಇಲ್ಲವೆಂದೂ ಮತ್ತು ಅದು “ನಂಬಿಗಸ್ತನೂ ವಿವೇಕಿಯೂ ಆದ ಆಳಿನಿಂದ” ಒದಗಿಸಲ್ಪಟ್ಟಿದೆಯೆಂದೂ ನಮಗೆ ಪದೇ ಪದೇ ನೆನಪಿಸುತ್ತಾ ಇರಬೇಕು ಮತ್ತು ಹೀಗೆ ಅದಕ್ಕೆ ಪ್ರಥಮತೆಯನ್ನು ಕೊಡಬೇಕು. (ಮತ್ತಾಯ 24:45-47) ಜೀವಿತವೆಂದೂ ಇದು ಮತ್ತು ಅದು ಅಲ್ಲ, ಒಂದಾ ಇದನ್ನು ಅಥವಾ ಅದನ್ನು ಮಾಡಲು ಆರಿಸಿಕೊಳ್ಳುವ ಅಗತ್ಯ ಅಲ್ಲಿದೆ ಎಂಬ ಮಾತು ಸೂಕ್ತವು. ನಾವು ನಿಜವಾಗಿಯೂ ಆತ್ಮಿಕ ಪುರುಷರು ಮತ್ತು ಸ್ತ್ರೀಯರು ಆಗಿದ್ದೇವೋ? ಆತ್ಮಿಕ ಅಗತ್ಯತೆಯ ಅರುಹು ನಮಗಿರುವುದಾದರೆ, ಟೀವೀಯನ್ನು ಆಫ್ ಮಾಡಿ, ನಮ್ಮ ಕೂಟಗಳಿಗಾಗಿ ತಯಾರಿಸಲು ಅಥವಾ ಆಗಲೇ ಟಪ್ಪಾಲಿನಲ್ಲಿ ಬಂದ ಕಾವಲಿನಬುರುಜು ಓದಲು ಸಮಯ ತಕ್ಕೊಳ್ಳಲು ಬೇಕಾದ ಆತ್ಮ-ಸಂಯಮವನ್ನು ಉಪಯೋಗಿಸುವೆವು.
20 ಮೂರನೆಯದಾಗಿ, ನಮ್ಮ ಸಭಾಕೂಟಗಳಿಗೆ ಮತ್ತು ದೊಡ್ಡ ಸಮ್ಮೇಳನ ಮತ್ತು ಅಧಿವೇಶನಗಳಿಗೆ ತಕ್ಕದಾದ ಮಹತ್ವ ಕೊಡುವ ವಿಷಯವೂ ಅಲ್ಲಿದೆ. ಅಂಥ ಎಲ್ಲಾ ಕೂಟಗಳು ನಮಗೆ ಖಚಿತವಾಗಿ ಬೇಕೋ? ಅದರಲ್ಲಿ ಭಾಗವಹಿಸಲು ತಯಾರುಮಾಡಿ ನಾವು ಬರುತ್ತೇವೋ ಮತ್ತು ಸಂದರ್ಭ ದೊರೆತಾಗ ಅದರಲ್ಲಿ ಪಾಲಿಗರಾಗುತ್ತೇವೋ? ಎಷ್ಟರ ಮಟ್ಟಿಗೆ ನಾವು ನಮ್ಮ ಕೂಟಗಳಿಗೆ ತಕ್ಕದಾದ ಮಹತ್ವಕೊಡುತ್ತೇವೋ ಅಷ್ಟರವರೆಗೆ ಎಲ್ಲಾ ಪರಿಸ್ಥಿತಿಗಳ ಕೆಳಗೆ ಆತ್ಮ-ಸಂಯಮವನ್ನು ತೋರಿಸುವ ನಮ್ಮ ನಿರ್ಧಾರದಲ್ಲಿ ಬಲವನ್ನು ಹೊಂದುವೆವು.
21. ಆತ್ಮದ ಫಲವಾದ ಆತ್ಮ-ಸಂಯಮವನ್ನು ಬೆಳೆಸುವುದಕ್ಕಾಗಿ ನಾವು ಆನಂದಿಸಬಲ್ಲ ಕೆಲವು ಬಹುಮಾನಗಳು ಯಾವುವು?
21 ಎಲ್ಲಾ ಸಮಯದಲ್ಲಿ ಆತ್ಮ-ಸಂಯಮವನ್ನು ತೋರಿಸುವರೇ ಪ್ರಯಾಸಪಡುವುದಕ್ಕಾಗಿ ನಾವು ಯಾವ ಬಹುಮಾನವನ್ನು ನಿರೀಕ್ಷಿಸಬಹುದು? ಒಂದು ವಿಷಯವೇನಂದರೆ ಸ್ವಾರ್ಥತ್ವದ ಕಹಿಯಾದ ಫಲವನ್ನು ನಾವೆಂದೂ ಕೊಯ್ಯಲಾರೆವು. ನಮಗೆ ಆತ್ಮ-ಗೌರವವಿರುವದು ಮತ್ತು ಒಂದು ಶುದ್ಧ ಮನಸ್ಸಾಕ್ಷಿಯು ಇರುವದು. ಎಷ್ಟೋ ತೊಂದರೆಗಳಿಂದ ನಾವು ನಮ್ಮನ್ನು ತಪ್ಪಿಸಿಕೊಳ್ಳುವೆವು ಮತ್ತು ಜೀವದ ದಾರಿಯಲ್ಲಿ ಉಳಿಯುವೆವು. ಅದಲ್ಲದೆ, ಇತರರಿಗೆ ಮಾಡಸಾಧ್ಯವಿರುವ ಅತ್ಯಂತ ಮಹತ್ತಾದ ಒಳ್ಳಿತನ್ನು ನಾವು ಮಾಡಶಕ್ತರಾಗುವೆವು. ಎಲ್ಲದಕ್ಕಿಂತ ಹೆಚ್ಚಾಗಿ, ಜ್ಞಾನೋಕ್ತಿ 27:11ನ್ನು ನಾವು ಪಾಲಿಸುವವರಾಗುವೆವು: “ಮಗನೇ, ನನ್ನ ಜ್ಞಾನವನ್ನು ಪಡಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” ಮತ್ತು ಅದು ನಮಗೆ ದೊರೆಯಶಕ್ತನಾದ ಅತ್ಯಂತ ಮಹತ್ತಾದ ಬಹುಮಾನವು—ನಮ್ಮ ಪ್ರೀತಿಯುಳ್ಳ ಸ್ವರ್ಗೀಯ ತಂದೆಯಾದ ಯೆಹೋವನ ಹೃದಯವನ್ನು ಸಂತೋಷ ಪಡಿಸುವ ಸೌಭಾಗ್ಯವು! (w91 11/15)
ನಿಮಗೆ ನೆನಪಿದೆಯೇ?
▫ ದೇವರ ಭಯವು ಆತ್ಮ-ಸಂಯಮವನ್ನು ತೋರಿಸಲು ನಮಗೆ ಹೇಗೆ ಸಹಾಯಕವಾಗುತ್ತದೆ?
▫ ಆತ್ಮ-ಸಂಯಮ ತೋರಿಸಲು ಪ್ರೀತಿ ನಮಗೆ ಸಹಾಯವಾಗುವದೇಕೆ?
▫ ಕುಟುಂಬ ಸಂಬಂಧಗಳಲ್ಲಿ ಆತ್ಮ-ಸಂಯಮವು ಹೇಗೆ ಸಹಾಯಕಾರಿಯಾಗಿದೆ?
▫ ಆತ್ಮ-ಸಂಯಮವನ್ನು ಬೆಳೆಸಬೇಕಾದರೆ ಯಾವ ಒದಗಿಸುವಿಕೆಗಳ ಸದುಪಯೋಗವನ್ನು ನಾವು ಮಾಡಬೇಕು?
[ಪುಟ 15 ರಲ್ಲಿರುವ ಚಿತ್ರ]
ಯೋಸೇಫನು ಶೋಧನೆಗೆ ಒಳಗಾದಾಗ ಆತ್ಮ-ಸಂಯಮವನ್ನು ತೋರಿಸಿದನು
[ಪುಟ 17 ರಲ್ಲಿರುವ ಚಿತ್ರ]
ಮಗುವಿಗೆ ಶಿಕ್ಷೆಯನ್ನು ಶಾಂತಿಭಾವದಿಂದ ಮತ್ತು ಪ್ರೀತಿಯಲ್ಲಿ ಕೊಡುವುದಕ್ಕೆ ನಿಜ ಆತ್ಮ-ಸಂಯಮ ಬೇಕಾಗಿದೆ