ಕ್ರೈಸ್ತ ಕುಟುಂಬವು ವೃದ್ಧರಿಗೆ ಸಹಾಯ ಮಾಡುತ್ತದೆ
“ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ; ನನ್ನ ಬಲವು ಕುಂದಿದಾಗ ಕೈಬಿಡಬೇಡ.”—ಕೀರ್ತನೆ 71:9.
1. ಅನೇಕ ಸಂಸ್ಕೃತಿಗಳಲ್ಲಿ ವೃದ್ಧರು ಹೇಗೆ ಉಪಚರಿಸಲ್ಪಡುತ್ತಾರೆ?
“ಅಪಪ್ರಯೋಗಕ್ಕೆ ಒಳಗಾಗಿರುವ ವೃದ್ಧರಲ್ಲಿ ಸುಮಾರು ಏಳರಲ್ಲಿ ಆರು ಮಂದಿ (86%) ಅವರ ಸ್ವಂತ ಕುಟುಂಬಗಳಿಂದ ಅನೌಪಚಾರಕ್ಕೆ ಒಳಗಾಗಿದ್ದಾರೆಂದು ಸಮೀಕ್ಷೆಗಳು ಸೂಚಿಸುತ್ತವೆ,” ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿತು. ಮಾಡರ್ನ್ ಮಟ್ಯೂರಿಟಿ ಪತ್ರಿಕೆಯು ಹೇಳಿದ್ದು: “ವೃದ್ಧರನ್ನು ಹಿಂಸಿಸುವುದು ಮರೆಯಿಂದ ಬಯಲಾಗಿ ಹೊರಬಂದು, ರಾಷ್ಟ್ರೀಯ ಪತ್ರಿಕೆಗಳ ಪುಟಗಳನ್ನು ಸೇರಿರುವ, ಅತ್ಯಾಧುನಿಕ [ಕುಟುಂಬ ಹಿಂಸಾಚಾರ] ವಾಗಿರುತ್ತದೆ.” ಹೌದು, ಅನೇಕ ಸಂಸ್ಕೃತಿಗಳಲ್ಲಿ ವೃದ್ಧರು ಅತಿಯಾದ ಅಪಪ್ರಯೋಗ ಮತ್ತು ಅಸಡ್ಡೆಗೆ ಬಲಿಗಳಾಗಿದ್ದಾರೆ. ನಮ್ಮ ಕಾಲವು ನಿಜವಾಗಿಯೂ ಅನೇಕರು, “ಸ್ವಾರ್ಥಚಿಂತಕರೂ . . . ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ” ಆಗಿರುವ ಸಮಯವಾಗಿರುತ್ತದೆ.—2 ತಿಮೊಥೆಯ 3:1-3.
2. ಹೀಬ್ರು ಶಾಸ್ತ್ರಗ್ರಂಥಕ್ಕನುಸಾರ, ಯೆಹೋವನು ವೃದ್ಧರನ್ನು ಹೇಗೆ ವೀಕ್ಷಿಸುತ್ತಾನೆ?
2 ಆದರೂ ಪುರಾತನ ಇಸ್ರಾಯೇಲಿನಲ್ಲಿ ವೃದ್ಧರ ಉಪಚಾರವು ಆ ರೀತಿಯಲ್ಲಿ ನಡಿಯುತ್ತಿರಲಿಲ್ಲ. ನಿಯಮವು ನಮೂದಿಸಿದ್ದು: “ತಲೆನರೆತ ವೃದ್ಧರ ಮುಂದೆ ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು.” ಪ್ರೇರಿತ ಸುಜ್ಞ ಜ್ಞಾನೋಕ್ತಿಗಳ ಪುಸ್ತಕವು ನಮಗೆ ಬುದ್ಧಿ ಹೇಳುವುದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.” ಅದು ಆಜ್ಞಾಪಿಸುವುದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” ಎರಡೂ ಲಿಂಗಜಾತಿಗಳ ವಯೋವೃದ್ಧರಿಗಾಗಿ ಮೋಶೆಯ ಧರ್ಮಶಾಸ್ತ್ರವು ಗೌರವ ಮತ್ತು ಪರಿಗಣನೆಯನ್ನು ಕಲಿಸಿತ್ತು. ಸ್ಫುಟವಾಗಿಯೇ, ವೃದ್ಧರು ಗೌರವಿಸಲ್ಪಡಬೇಕೆಂದು ಯೆಹೋವನು ಬಯಸುತ್ತಾನೆ.—ಯಾಜಕಕಾಂಡ 19:32; ಜ್ಞಾನೋಕ್ತಿ 1:8; 23:22.
ಬೈಬಲ್ ಕಾಲಗಳಲ್ಲಿ ವೃದ್ಧರ ಆರೈಕೆಯು
3. ತನ್ನ ಮುದೀ ತಂದೆಗಾಗಿ ಯೋಸೇಫನು ಹೇಗೆ ಕನಿಕರವನ್ನು ತೋರಿಸಿದನು?
3 ಗೌರವವು ಕೇವಲ ಮಾತುಗಳಲ್ಲಿ ಅಲ್ಲ ಪರಿಗಣನೆಯ ಕ್ರಿಯೆಗಳಿಂದಲೂ ತೋರಿಸಲ್ಪಡಬೇಕಿತ್ತು. ತನ್ನ ವಯೋವೃದ್ಧ ತಂದೆಗೆ ಯೋಸೇಫನು ಮಹಾ ಕನಿಕರವನ್ನು ತೋರಿಸಿದನು. ಯಾಕೋಬನು ಕಾನಾನಿನಿಂದ ಸುಮಾರು 300 ಕಿಲೊಮೀಟರ್ಗೂ ಹೆಚ್ಚು ದೂರದ ಐಗುಪ್ತಕ್ಕೆ ಪ್ರಯಾಣಮಾಡುವಂತೆ ಅವನು ಬಯಸಿದನು. ಆದುದರಿಂದ ಯಾಕೋಬನಿಗೆ “ಐಗುಪ್ತದೇಶದ ಒಳ್ಳೇ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ ಹೆಣ್ಣು ಕತ್ತೆಗಳ ಮೇಲೆ ತನ್ನ ತಂದೆಯ ಪ್ರಯಾಣಕ್ಕೆ ಬೇಕಾದ ದವಸಧಾನ್ಯಗಳನ್ನೂ ಬೇರೆ ತಿನ್ನುವ ಪದಾರ್ಥಗಳನ್ನೂ” ಯೋಸೇಫನು ಕಳುಹಿಸಿಕೊಟ್ಟನು. ಯಾಕೋಬನು ಗೋಷೆನ್ಗೆ ಆಗಮಿಸಿದಾಗ, ಯೋಸೇಫನು ಅವನ ಬಳಿಗೆ ಹೋಗಿ, “ತಂದೆಯನ್ನು ಬಹಳ ಹೊತ್ತಿನ ವರೆಗೆ ಅಪ್ಪಿಕೊಂಡು ಅತ್ತನು.” ಯೋಸೇಫನು ತನ್ನ ತಂದೆಯ ಮೇಲೆ ಆಳವಾದ ಮಮತೆಯ ಮಳೆಗರೆದನು. ವೃದ್ಧರಿಗಾಗಿ ಪರಿಗಣನೆಯ ಎಂತಹ ಪ್ರೇರೇಪಕ ಉದಾಹರಣೆಯು!—ಆದಿಕಾಂಡ 45:23; 46:5, 29.
4. ರೂತಳು ಅನುಸರಿಸಲು ಒಂದು ಒಳ್ಳೆಯ ಮಾದರಿಯಾಗಿದ್ದಾಳೆ ಏಕೆ?
4 ವೃದ್ಧರಿಗಾಗಿ ದಯಾಪರತೆಯಲ್ಲಿ ಅನುಕರಿಸತಕ್ಕ ಇನ್ನೊಂದು ಸುಂದರವಾದ ಮಾದರಿಯು ರೂತಳು. ಅನ್ಯಳಾಗಿದ್ದಾಗ್ಯೂ, ವೃದ್ಧ, ವಿಧವೆಯಾಗಿದ್ದ ತನ್ನ ಯೆಹೂದ್ಯ ಅತ್ತೆ ನೊವೊಮಿಯೊಂದಿಗೆ ಆಕೆಯು ಆಪ್ತ ಸಹವಾಸದಲ್ಲಿ ಉಳಿದಳು. ಆಕೆ ತನ್ನ ಸ್ವಂತ ಜನರನ್ನು ತ್ಯಜಿಸಿಬಿಟಳ್ಟು ಮತ್ತು ಇನ್ನೊಬ್ಬ ಗಂಡನನ್ನು ಹೊಂದದೆ ಇರುವ ಅಪಾಯಕ್ಕೆ ತಲೆಗೊಡಲು ಸಿದ್ಧಳಾದಳು. ಅವಳು ತನ್ನ ಸ್ವಂತ ಜನರೆಡೆಗೆ ಹಿಂತಿರುಗುವಂತೆ ನೊವೊಮಿಯು ಒತ್ತಾಯಿಸಿದಾಗ, ಬೈಬಲಿನಲ್ಲಿರುವ ಕೆಲವು ಅತಿ ಸುಂದರವಾದ ಮಾತುಗಳಿಂದ ರೂತಳು ಉತ್ತರಕೊಟ್ಟದ್ದು: “ನಿನ್ನನ್ನು ಬಿಟ್ಟು ಹಿಂತಿರುಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ.” (ರೂತ್ 1:16, 17) ಮೈದುನಧರ್ಮದ ಮದುವೆಯ ಏರ್ಪಾಡಿನ ಕೆಳಗೆ, ವಯಸ್ಕನಾದ ಬೋವಜನನ್ನು ಮದುವೆಯಾಗಲು ಸಿದ್ಧಳಾದಾಗಲೂ ರೂತಳು ಉತ್ತಮ ಗುಣಗಳನ್ನು ತೋರಿಸಿದಳು.—ರೂತಳು ಅಧ್ಯಾಯಗಳು 2 ರಿಂದ 4.
5. ಜನರೊಂದಿಗೆ ವ್ಯವಹರಿಸುವಲ್ಲಿ ಯೇಸು ಯಾವ ಗುಣಗಳನ್ನು ತೋರಿಸಿದನು?
5 ಯೇಸು ಜನರೊಂದಿಗಿನ ತನ್ನ ವ್ಯವಹಾರಗಳಲ್ಲಿ ತದ್ರೀತಿಯ ಮಾದರಿಯನ್ನಿಟ್ಟನು. ಆತನು ತಾಳ್ಮೆಯುಳ್ಳವನೂ, ಕನಿಕರವುಳ್ಳವನೂ, ದಯಾಪರನೂ ಮತ್ತು ಚೈತನ್ಯವೀಯುವಾತನೂ ಆಗಿದ್ದನು. ದುರ್ಬಲತೆಯಿಂದಾಗಿ 38 ವರ್ಷಗಳ ತನಕ ನಡೆಯಲಶಕ್ತನಾಗಿದ್ದ ಒಬ್ಬ ಬಡ ಮನುಷ್ಯನಲ್ಲಿ ಆತನು ವ್ಯಕ್ತಿಪರ ಆಸಕ್ತಿಯನ್ನು ತೆಗೆದುಕೊಂಡು, ಅವನನ್ನು ವಾಸಿಮಾಡಿದನು. ವಿಧವೆಯರಿಗೆ ಆತನು ಪರಿಗಣನೆಯನ್ನು ತೋರಿಸಿದನು. (ಲೂಕ 7:11-15; ಯೋಹಾನ 5:1-9) ಹಿಂಸಾಕಂಭದ ಮೇಲೆ ತನ್ನ ವೇದನಾಮಯ ಮರಣದ ಯಾತನೆಯ ಸಮಯದಲ್ಲೂ, ಪ್ರಾಯಶಃ 50 ರುಗಳ ಪ್ರಾರಂಭದ ವಯಸ್ಸಿನಲ್ಲಿರಬಹುದಾಗಿದ್ದ ತನ್ನ ತಾಯಿಯ ಪರಾಮರಿಕೆಯು ಮಾಡಲ್ಪಡುವಂತೆ ಖಾತರಿ ಮಾಡಿಕೊಂಡನು. ಕಪಟಿಗಳಾದ ಅವನ ಶತ್ರುಗಳಿಗೆ ಹೊರತು ಯೇಸು ಪ್ರತಿಯೊಬ್ಬನಿಗೆ ಚೈತನ್ಯಕರವಾದ ಸಂಗಾತಿಯಾಗಿದ್ದನು. ಹೀಗೆ, ಅವನು ಹೇಳಶಕ್ತನಾದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.”—ಮತ್ತಾಯ 9:36; 11:28, 29; ಯೋಹಾನ 19:25-27.
ಯಾರು ಪರಿಗಣನೆಗೆ ಯೋಗ್ಯರು?
6. (ಎ) ಯಾರು ವಿಶೇಷ ಪರಾಮರಿಕೆಗೆ ಅರ್ಹರಾಗಿದ್ದಾರೆ? (ಬಿ) ಯಾವ ಪ್ರಶ್ನೆಗಳನ್ನು ನಾವು ಸ್ವತಃ ಕೇಳಬಹುದು?
6 ಪರಾಮರಿಕೆಯ ವಿಷಯದಲ್ಲಿ ಯೆಹೋವ ದೇವರು ಮತ್ತು ಆತನ ಪುತ್ರ ಯೇಸು ಕ್ರಿಸ್ತನು ಅಷ್ಟು ಉತ್ತಮ ಮಾದರಿಯನ್ನು ಇಟ್ಟಿರುತ್ತಾರಾದರ್ದಿಂದ, ಸಮರ್ಪಿತ ಕ್ರೈಸ್ತರು ಅವರ ಮಾದರಿಯನ್ನು ಅನುಸರಿಸುವುದು ತೀರ ಯುಕ್ತವಾಗಿದೆ. ನಮ್ಮ ಮಧ್ಯೆ ಅನೇಕ ವರ್ಷಗಳಿಂದ ಕಷ್ಟಪಟ್ಟವರೂ ಹೊರೆಹೊತ್ತವರೂ ಆಗಿರುವ ಕೆಲವರು—ತಮ್ಮ ಜೀವಿತಗಳ ಇಳಿತರ ವರ್ಷಗಳನ್ನು ಪ್ರವೇಶಿಸಿರುವ ವೃದ್ಧರಾದ ಸಹೋದರ ಮತ್ತು ಸಹೋದರಿಯರು ನಮಗಿದ್ದಾರೆ. ಕೆಲವರು ನಮ್ಮ ಹೆತ್ತವರು ಅಥವಾ ಅಜ್ಜ-ಅಜಿಯ್ಜಂದಿರು ಆಗಿರಲೂಬಹುದು. ನೀವು ಅವರನ್ನು ಅಲ್ಪ ಮೂಲ್ಯರೆಂದು ಭಾವಿಸುತ್ತೀರೋ? ಅವರೊಂದಿಗೆ ಅನುಗ್ರಹ ತೋರುವ ನಡತೆಯನ್ನು ಮತ್ತು ಸಲಿಗೆಯ ವರ್ತನೆಯನ್ನು ನಾವು ತೋರಿಸುತ್ತೇವೋ? ಇಲ್ಲವೆ ಅವರ ವಿಸ್ತಾರವಾದ ಅನುಭವವನ್ನು ಮತ್ತು ವಿವೇಕವನ್ನು ನಿಜವಾಗಿ ಗಣ್ಯಮಾಡುತ್ತೇವೋ? ಕೆಲವರು ವೃದ್ಧಾಪ್ಯಕ್ಕೆ ಅಸಾಮಾನ್ಯವಾಗಿರದ ಮಾನಸಿಕ ವೈಲಕ್ಷಣ್ಯಗಳಿಂದ ಮತ್ತು ಭ್ರಮೆಗಳಿಂದ ನಮ್ಮ ತಾಳ್ಮೆಯನ್ನು ಪರೀಕೆಗ್ಷೆ ಹಾಕಬಹುದು ನಿಜ. ಆದರೆ ನಿಮ್ಮನ್ನು ಕೇಳಿಕೊಳ್ಳಿರಿ: ‘ಆ ಪರಿಸ್ಥಿತಿಗಳ ಕೆಳಗೆ ನಾನು ಅವರಿಗಿಂತ ಎಷ್ಟೊಂದು ಭಿನ್ನವಾಗಿರುವೆನು?’
7. ವೃದ್ಧ ಜನರೊಂದಿಗೆ ಅನುಭೂತಿಯಿಂದಿರುವ ಅಗತ್ಯವನ್ನು ಯಾವುದು ಚಿತ್ರೀಕರಿಸುತ್ತದೆ?
7 ವೃದ್ಧರಿಗಾಗಿ ಒಬ್ಬ ಎಳೆಯ ಹುಡುಗಿಯ ಕನಿಕರದ ಕುರಿತು ಮಧ್ಯ ಪೂರ್ವದಿಂದ ಒಂದು ಮನತಟ್ಟುವ ಕಥೆ ಇದೆ. ಒಬ್ಬಾಕೆ ಅಜಿಯ್ಜು ಅಡಿಗೆ ಮನೆಯಲ್ಲಿ ನೆರವಾಗುತ್ತಿದ್ದಾಗ ಒಂದು ಗಾಜಿನ ಪೇಟ್ಲನ್ನು ಅಕಸ್ಮಾತ್ತಾಗಿ ಕೆಳಗೆ ಹಾಕಿ ಒಡೆದಳು. ತನ್ನ ಸ್ವಂತ ಅಚತುರತೆಗಾಗಿ ಆಕೆ ಕಲಕಿಹೋದಳು; ಅವಳ ಮಗಳು ಅದಕ್ಕೂ ಹೆಚ್ಚು ರೇಗಿಕೊಂಡಳು. ತರುವಾಯ ಆಕೆ [ಮಗಳು] ತನ್ನ ಸ್ವಂತ ಚಿಕ್ಕ ಮಗಳನ್ನು ಕರೆದು, ಅಜಿಗ್ಜಾಗಿ ಒಂದು ಒಡೆಯಲಾರದ ಮರದ ಪೇಟ್ಲನ್ನು ಖರೀದಿಸುವಂತೆ ಸ್ಥಳಿಕ ಅಂಗಡಿಗೆ ಕಳುಹಿಸಿದಳು. ಹುಡುಗಿಯು ಎರಡು ಮರದ ಪೇಟ್ಲುಗಳೊಂದಿಗೆ ಹಿಂತಿರುಗಿದಳು. ತಾಯಿ ತಗಾದೆ ಮಾಡಿದಳು: “ಎರಡು ಪೇಟ್ಲುಗಳನ್ನೇಕೆ ಖರೀದಿಸಿದಿ?” ಮೊಮ್ಮಗಳು, ಅನುಮಾನಿಸುತ್ತಾ, ಉತ್ತರಿಸಿದ್ದು: “ಒಂದು ಅಜಿಗ್ಜೆ ಮತ್ತು ಇನ್ನೊಂದು ನಿಮಗೆ, ನೀವು ಮುದುಕಿಯಾದಾಗ.” ಹೌದು, ಈ ಲೋಕದಲ್ಲಿ ನಾವೆಲ್ಲರೂ ಮುಪ್ಪಿನ ಪ್ರತೀಕ್ಷೆಯನ್ನು ಎದುರಿಸುತ್ತೇವೆ. ತಾಳ್ಮೆ ಮತ್ತು ದಯೆಯಿಂದ ಉಪಚರಿಸಲ್ಪಡುವುದನ್ನು ನಾವು ಗಣ್ಯಮಾಡುವುದಿಲ್ಲವೇ?—ಕೀರ್ತನೆ 71:9.
8, 9. (ಎ) ನಮ್ಮ ಮಧ್ಯೆ ಇರುವ ವೃದ್ಧರನ್ನು ನಾವು ಹೇಗೆ ಉಪಚರಿಸಬೇಕು? (ಬಿ) ಇತ್ತೀಚೆಗೆ ಕ್ರೈಸ್ತರಾಗಿರುವ ಕೆಲವರು ಏನನ್ನು ನೆನಪಿಡುವ ಅಗತ್ಯವಿದೆ?
8 ನಮ್ಮ ಅನೇಕ ವೃದ್ಧ ಸಹೋದರ ಮತ್ತು ಸಹೋದರಿಯರ ಹಿಂದೆ ನಂಬಿಗಸ್ತ ಕ್ರೈಸ್ತ ಚಟುವಟಿಕೆಯ ಒಂದು ದೀರ್ಘ ದಾಖಲೆ ಇದೆಯೆಂಬದನ್ನು ಎಂದೂ ಮರೆಯಬೇಡಿರಿ. ಅವರು ಖಂಡಿತವಾಗಿಯೂ ನಮ್ಮ ಗೌರವ ಮತ್ತು ಪರಿಗಣನೆಗೆ, ನಮ್ಮ ದಯೆಯುಳ್ಳ ಸಹಾಯ ಮತ್ತು ಉತ್ತೇಜನಕ್ಕೆ ಅರ್ಹರಾಗಿದ್ದಾರೆ. ಜ್ಞಾನಿ ಮನುಷ್ಯನು ಸರಿಯಾಗಿಯೇ ಹೇಳಿದ್ದು: “ನರೇಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.” ಮತ್ತು ಆ ನರೆತ ತಲೆಯು, ಗಂಡಾಗಿರಲಿ ಹೆಣ್ಣಾಗಿರಲಿ, ಗೌರವಿಸಲ್ಪಡಬೇಕು. ಈ ಮುಪ್ಪಿನ ಪುರುಷರು ಮತ್ತು ಸ್ತ್ರೀಯರಲ್ಲಿ ಕೆಲವರು ನಂಬಿಗಸ್ತ ಪಯನೀಯರರಾಗಿ ಇನ್ನೂ ಸೇವೆ ಮಾಡುತ್ತಿದ್ದಾರೆ, ಮತ್ತು ಅನೇಕ ಪುರುಷರು ಸಭೆಗಳಲ್ಲಿ ಹಿರಿಯರಾಗಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಾ ಇದ್ದಾರೆ; ಕೆಲವರು ಸಂಚಾರ ಮೇಲ್ವಿಚಾರಕರಾಗಿ ಆದರ್ಶ ಸೇವೆಯನ್ನು ನಡಿಸುತ್ತಿದ್ದಾರೆ.—ಜ್ಞಾನೋಕ್ತಿ 16:31.
9 ಪೌಲನು ತಿಮೊಥೆಯನಿಗೆ ಬುದ್ಧಿ ಹೇಳಿದ್ದು: “ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರಿಗೆ ಬುದ್ಧಿಹೇಳು.” (1 ತಿಮೊಥೆಯ 5:1, 2) ಅನಾದರಣೆಯುಕ್ತ ಲೋಕದಿಂದ ಇತ್ತೀಚೆಗೆ ಕ್ರೈಸ್ತ ಸಭೆಯೊಳಗೆ ಬಂದಿರುವವರು, ಪ್ರೀತಿಯಲ್ಲಿ ಆಧಾರಿತವಾಗಿರುವ ಪೌಲನ ಮಾತುಗಳನ್ನು ವಿಶೇಷವಾಗಿ ಹೃದಯಕ್ಕೆ ತೆಗೆದುಕೊಳ್ಳಬೇಕು. ಯುವ ಜನರೇ, ಶಾಲೆಯಲ್ಲಿ ನೀವು ನೋಡಿರಬಹುದಾದ ಕೆಟ್ಟ ವರ್ತನೆಗಳನ್ನು ಅನುಕರಿಸಬೇಡಿರಿ. ವೃದ್ಧ ಸಾಕ್ಷಿಗಳ ದಯೆಯುಳ್ಳ ಬುದ್ಧಿವಾದಕ್ಕಾಗಿ ಮುನಿಯಬೇಡಿರಿ. (1 ಕೊರಿಂಥ 13:4-8; ಇಬ್ರಿಯ 12:5, 6, 11) ಆದರೂ, ಅನಾರೋಗ್ಯದಿಂದಲೋ ಯಾ ಆರ್ಥಿಕ ಸಮಸ್ಯೆಗಳಿಂದಲೋ ವೃದ್ಧರಿಗೆ ಸಹಾಯ ಬೇಕಾದಾಗ, ಅವರಿಗೆ ನೆರವಾಗುವ ಪ್ರಧಾನ ಜವಾಬ್ದಾರಿಕೆಯು ಯಾರಿಗಿದೆ?
ವೃದ್ಧರ ಆರೈಕೆಯಲ್ಲಿ ಕುಟುಂಬದ ಪಾತ್ರ
10, 11. (ಎ) ಬೈಬಲ್ಗೆ ಅನುಸಾರವಾಗಿ, ವೃದ್ಧರ ಪರಾಮರಿಕೆಯಲ್ಲಿ ಯಾರು ಮುಂದಾಳುತನ ವಹಿಸಬೇಕು? (ಬಿ) ವೃದ್ಧರ ಆರೈಕೆ ಮಾಡುವುದು ಯಾವಾಗಲೂ ಸುಲಭವಲ್ಲ ಏಕೆ?
10 ಆದಿ ಕ್ರೈಸ್ತ ಸಭೆಯಲ್ಲಿ, ವಿಧವೆಯರ ಆರೈಕೆಯ ವಿಷಯದಲ್ಲಿ ಸಮಸ್ಯೆಗಳೆದ್ದವು. ಅಂಥ ಆವಶ್ಯಕತೆಗಳನ್ನು ನಿಭಾಯಿಸುವ ವಿಧವನ್ನು ಅಪೊಸ್ತಲ ಪೌಲನು ಸೂಚಿಸಿದ್ದು ಹೇಗೆ? “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು. ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:3, 4, 8.
11 ಕೊರತೆಯಲ್ಲಿರುವಾಗ, ವೃದ್ಧ ಜನರಿಗೆ ಸಹಾಯ ಮಾಡಲು ಆಪ್ತ ಕುಟುಂಬ ಸದಸ್ಯರು ಮೊದಲಿನವರಾಗಿರಬೇಕು.a ಈ ರೀತಿಯಲ್ಲಿ, ಹೆತ್ತವರು ವರ್ಷಗಳ ತನಕ ಅವರಿಗೆ ಒದಗಿಸಿದ ಪ್ರೀತಿ, ಕೆಲಸ, ಮತ್ತು ಆರೈಕೆಗಾಗಿ ಬೆಳೆದ ಮಕ್ಕಳು ಗಣ್ಯತೆ ತೋರಿಸಬಲ್ಲರು. ಇದು ಅಷ್ಟೇನೂ ಸುಲಭವಾಗಿರಲಿಕ್ಕಿಲ್ಲ. ಜನರು ಹಳಬರಾದಂತೆ, ಅವರು ಸಹಜವಾಗಿಯೇ ನಿಧಾನಗೊಳ್ಳುತ್ತಾರೆ, ಕೆಲವರು ಕೆಲಸಮಾಡಲೂ ಅಶಕ್ತರಾಗುತ್ತಾರೆ. ಇನ್ನು ಕೆಲವರು, ಪ್ರಾಯಶಃ ಅದನ್ನು ಗ್ರಹಿಸದೆಯೇ, ಸ್ವಾರ್ಥಮಗ್ನರೂ ತಗಾದೆಮಾಡುವವರೂ ಆಗಬಹುದು. ಆದರೆ ನಾವು ಕೂಸುಗಳಾಗಿದ್ದಾಗ, ನಾವು ಸಹ ಸ್ವಾರ್ಥಮಗ್ನರೂ ತಗಾದೆಮಾಡುವವರೂ ಆಗಿರಲಿಲ್ಲವೇ? ಮತ್ತು ನಮ್ಮ ಹೆತ್ತವರು ನಮಗೆ ಸಹಾಯ ಮಾಡಲು ಆತುರದಿಂದ ಬಂದಿರಲಿಲ್ಲವೇ? ಈಗ ಅವರ ವೃದ್ಧಾಪ್ಯದಲ್ಲಿ ವಿಷಯಗಳು ಬದಲಾಗಿವೆ. ಆದುದರಿಂದ ಏನು ಅಗತ್ಯವಿದೆ? ಕನಿಕರ ಮತ್ತು ತಾಳ್ಮೆ.—ಹೋಲಿಸಿರಿ 1 ಥೆಸಲೊನೀಕ 2:7, 8.
12. ವೃದ್ಧರ—ಮತ್ತು ಕ್ರೈಸ್ತ ಸಭೆಯಲ್ಲಿರುವ ಬೇರೆ ಎಲ್ಲರ ಆರೈಕೆಯಲ್ಲಿ ಯಾವ ಗುಣಗಳು ಬೇಕಾಗಿವೆ?
12 ಅಪೊಸ್ತಲ ಪೌಲನು ಬರೆದಾಗ ಈ ವ್ಯಾವಹಾರ್ಯ ಬುದ್ಧಿವಾದವನ್ನು ಕೊಟ್ಟನು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರನ್ನೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [ಯೆಹೋವನು, NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” ಸಭೆಯಲ್ಲಿ ನಾವು ಈ ರೀತಿಯ ಪ್ರೀತಿ ಮತ್ತು ಕನಿಕರವನ್ನು ತೋರಿಸಲೇಬೇಕಾದರೆ, ಕುಟುಂಬದಲ್ಲಿ ನಾವದನ್ನು ಎಷ್ಟೋ ಹೆಚ್ಚಾಗಿ ತೋರಿಸಬೇಕಾಗಿದೆಯಲ್ಲವೇ?—ಕೊಲೊಸ್ಸೆ 3:12-14.
13. ವೃದ್ಧ ಹೆತ್ತವರು ಯಾ ಅಜ್ಜ-ಅಜಿಯ್ಜಂದಿರಲ್ಲದೆ ಬೇರೆ ಯಾರಿಗೆ ಸಹಾಯ ಬೇಕಾಗಬಹುದು?
13 ಕೆಲವು ಸಾರಿ ಈ ರೀತಿಯ ಸಹಾಯವು ಕೇವಲ ಹೆತ್ತವರಿಗೆ ಯಾ ಅಜ್ಜ-ಅಜಿಯ್ಜರಿಗೆ ಮಾತ್ರವಲ್ಲದೆ, ಬೇರೆ ವೃದ್ಧ ಸಂಬಂಧಿಕರಿಗೂ ಬೇಕಾದೀತು. ಮಕ್ಕಳಿಲ್ಲದ ಕೆಲವು ಮಿಷನೆರಿಗಳು ಅನೇಕ ವರ್ಷಗಳನ್ನು ಮಿಷನೆರಿ ಸೇವೆಯಲ್ಲಿ, ಸಂಚಾರ ಶುಶ್ರೂಷೆಯಲ್ಲಿ, ಮತ್ತು ಬೇರೆ ಪೂರ್ಣ ಸಮಯದ ಚಟುವಟಿಕೆಯಲ್ಲಿ ಕಳೆದಿರುತ್ತಾರೆ. ಅವರು ನಿಜವಾಗಿಯೂ ರಾಜ್ಯವನ್ನು ತಮ್ಮ ಜೀವನದಲ್ಲೆಲ್ಲಾ ಪ್ರಥಮವಾಗಿಟ್ಟರು. (ಮತ್ತಾಯ 6:33) ಹೀಗಿರಲಾಗಿ, ಅವರೆಡೆಗೆ ಪರಾಮರಿಕೆಯ ಭಾವವನ್ನು ತೋರಿಸುವುದು ಯುಕ್ತವಾಗಿರದೇ? ವಾಚ್ ಟವರ್ ಸೊಸೈಟಿಯು ಅದರ ವೃದ್ಧ ಬೆತೆಲ್ ಸದಸ್ಯರನ್ನು ಪರಾಮರಿಕೆ ಮಾಡುವ ರೀತಿಯಲ್ಲಿ ಖಂಡಿತವಾಗಿಯೂ ನಮಗೆ ಒಂದು ಉತ್ತಮ ಮಾದರಿಯು ಇದೆ. ಬ್ರೂಕ್ಲಿನ್ನ ಮುಖ್ಯ ಕಾರ್ಯಾಲಯದಲ್ಲಿ ಮತ್ತು ಸೊಸೈಟಿಯ ಹಲವಾರು ಬ್ರಾಂಚ್ಗಳಲ್ಲಿ ಹಲವಾರು ವೃದ್ಧ ಸಹೋದರರು ಮತ್ತು ಸಹೋದರಿಯರು ದೈನಂದಿನದ ಗಮನವನ್ನು, ಈ ಕೆಲಸಕ್ಕಾಗಿ ನೇಮಿಸಲ್ಪಟ್ಟ ತರಬೇತಾದ ಕುಟುಂಬ ಸದಸ್ಯರಿಂದ ಪಡೆಯುತ್ತಾರೆ. ತಮ್ಮ ಸ್ವಂತ ಹೆತ್ತವರು ಯಾ ಅಜ್ಜ-ಅಜಿಯ್ಜಂದಿರೋ ಎಂಬಂತೆ ಈ ವೃದ್ಧರ ಆರೈಕೆಮಾಡಲು ಅವರು ಸಂತೋಷಪಡುತ್ತಾರೆ. ಅದೇ ಸಮಯದಲ್ಲಿ ವೃದ್ಧರ ಅನುಭವದಿಂದ ಅವರು ಹೆಚ್ಚನ್ನು ಕಲಿಯುತ್ತಾರೆ.—ಜ್ಞಾನೋಕ್ತಿ 22:17.
ಆರೈಕೆಯಲ್ಲಿ ಸಭೆಯ ಪಾತ್ರ
14. ಆದಿ ಕ್ರೈಸ್ತ ಸಭೆಯಲ್ಲಿ ವೃದ್ಧರಿಗಾಗಿ ಯಾವ ಒದಗಿಸುವಿಕೆಯು ಮಾಡಲ್ಪಟ್ಟಿತು?
14 ಅನೇಕ ದೇಶಗಳಲ್ಲಿ ಇಂದು ವೃದ್ಧರಿಗಾಗಿ ವೃದ್ಧಾಪ್ಯದ ವಿಶ್ರಾಂತಿ ವೇತನದ ವ್ಯವಸ್ಥೆಗಳು ಹಾಗೂ ಸರಕಾರದಿಂದ ಒದಗಿಸಲ್ಪಡುವ ವೈದ್ಯಕೀಯ ಆರೈಕೆ ಇವೆ. ಎಲ್ಲಿ ಅವರಿಗೆ ಹಾಗೆ ಮಾಡುವ ಅರ್ಹತೆ ಇದೆಯೇ ಅಲ್ಲಿ ಈ ಒದಗಿಸುವಿಕೆಗಳ ಪೂರ್ಣ ಉಪಯೋಗವನ್ನು ಕ್ರೈಸ್ತರು ಮಾಡಬಲ್ಲರು. ಆದರೂ, ಒಂದನೆಯ ಶತಮಾನದಲ್ಲಿ, ಅಂಥ ಒದಗಿಸುವಿಕೆಗಳು ಇರಲಿಲ್ಲ. ಆದುದರಿಂದ ಕ್ರೈಸ್ತ ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಲು ಸಕಾರಾತ್ಮಕ ಹೆಜ್ಜೆಯನ್ನು ತೆಗೆದುಕೊಂಡಿತು. ಪೌಲನು ಮಾರ್ಗದರ್ಶಿಸಿದ್ದು: “ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿಲ್ಲದ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ [ಸಭಾ ಸಹಾಯ ಪಡೆಯಲು] ಸೇರಿಸಬಹುದು; ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿರಬೇಕು; ಅಂದರೆ ಮಕ್ಕಳನ್ನು ಸಾಕಿದವಳಾಗಲಿ ಅತಿಥಿ ಸತ್ಕಾರವನ್ನು ಮಾಡಿದವಳಾಗಲಿ ದೇವಜನರಿಗೆ ಉಪಕಾರವನ್ನು ಮಾಡಿದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಲಿ ಆಗಿರಬೇಕು.” ಹೀಗೆ, ವೃದ್ಧರಿಗೆ ಸಹಾಯ ಮಾಡುವುದರಲ್ಲಿ ಸಭೆಗೆ ಸಹ ಒಂದು ಪಾತ್ರವಿದೆಯೆಂದು ಪೌಲನು ತೋರಿಸಿದನು. ನಂಬುವ ಮಕ್ಕಳಿಲ್ಲದ ಆತ್ಮಿಕ ಮನಸ್ಸಿನ ಸ್ತ್ರೀಯರು ಅಂಥ ಸಹಾಯಕ್ಕೆ ಯೋಗ್ಯತೆ ಪಡೆದರು.—1 ತಿಮೊಥೆಯ 5:9, 10.
15. ಸರಕಾರದಿಂದ ಒದಗಿಸಲ್ಪಡುವ ನೆರವನ್ನು ಪಡೆಯಲಿಕ್ಕಾಗಿ ಸಹಾಯದ ಅಗತ್ಯವಿರಬಹುದೇಕೆ?
15 ವೃದ್ಧರಿಗಾಗಿ ಸರಕಾರದಿಂದ ಒದಗಿಸುವಿಕೆಗಳಿರುವಲ್ಲಿ, ಅಂಜಿಸುವಂತೆ ತೋರುವ ಕಾಗದಪತ್ರಗಳ ಕೆಲಸವು ಸಾಮಾನ್ಯವಾಗಿ ಇರುತ್ತದೆ. ವೃದ್ಧರು ಅಂಥ ಸಹಾಯಕ್ಕಾಗಿ ಅರ್ಜಿಮಾಡಲು, ಪಡೆಯಲು, ಮತ್ತು ಏರಿಳಿವುಗಳನ್ನು ಮಾಡಲು ಸಹ ಶಕ್ತರಾಗುವಂತೆ ಸಹಾಯ ನೀಡಲು ಏರ್ಪಡಿಸುವುದು ಸಭಾ ಮೇಲ್ವಿಚಾರಕರಿಗೆ ಯುಕ್ತವಾಗಿದೆ. ಕೆಲವೊಮ್ಮೆ ಪರಿಸ್ಥಿತಿಗಳಲ್ಲಿ ಬದಲಾವಣೆಗಳು ವಿಶ್ರಾಂತಿ ವೇತನದ ವೃದ್ಧಿಯಲ್ಲಿ ಫಲಿಸಬಹುದು. ಆದರೆ, ವೃದ್ಧರಿಗೆ ಪರಾಮರಿಕೆಯು ನೀಡಲ್ಪಡುವಂತೆ ಮೇಲ್ವಿಚಾರಕರು ಏರ್ಪಡಿಸ ಸಾಧ್ಯವಿರುವ ಬೇರೆ ಅನೇಕ ವ್ಯಾವಹಾರ್ಯ ವಿಷಯಗಳೂ ಇವೆ. ಅವುಗಳಲ್ಲಿ ಕೆಲವು ಯಾವುವು?
16, 17. ಸಭೆಯಲ್ಲಿ ವೃದ್ಧರಿಗೆ ಯಾವ ವಿವಿಧ ರೀತಿಯಲ್ಲಿ ನಾವು ಆತಿಥ್ಯವನ್ನು ತೋರಿಸಬಹುದು?
16 ಆತಿಥ್ಯವನ್ನು ತೋರಿಸುವುದು ಹಿಂದೆ ಬೈಬಲ್ ಕಾಲಕ್ಕೆ ವಿಸ್ತರಿಸಿರುವ ಒಂದು ಪದ್ಧತಿಯಾಗಿದೆ. ಇಂದೂ ಅನೇಕ ಮಧ್ಯ ಪ್ರಾಚ್ಯ ದೇಶಗಳಲ್ಲಿ, ಅಪರಿಚಿತರಿಗೆ ಕಡಿಮೆಪಕ್ಷ ಒಂದು ಕಪ್ ಚಹ ಯಾ ಕಾಫಿ ನೀಡುವಷ್ಟರ ಮಟ್ಟಿಗಾದರೂ ಅತಿಥಿಸತ್ಕಾರವು ತೋರಿಸಲ್ಪಡುತ್ತದೆ. ಹೀಗಿರಲಾಗಿ, ಪೌಲನು ಇದನ್ನು ಬರೆದಿರುವುದರಲ್ಲಿ ಆಶ್ಚರ್ಯವೇನಿಲ್ಲ: “ದೇವಜನರಿಗೆ ಕೊರತೆ ಬಂದಾಗ ಸಹಾಯಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ.” (ರೋಮಾಪುರ 12:13) ಅತಿಥಿಸತ್ಕಾರದ ಗ್ರೀಕ್ ಪದ ಫಿಲೋಕೆನ್ಷಿಯ ಕ್ಕೆ, “ಅಪರಿಚಿತರಿಗಾಗಿ ಪ್ರೀತಿ (ಮಮತೆ ಯಾ ದಯಾಪರತೆ)” ಎಂಬ ಅಕ್ಷರಾರ್ಥವಿದೆ. ಕ್ರೈಸ್ತನು ಅಪರಿಚಿತರಿಗೆ ಆತಿಥ್ಯಮಾಡುವವನಾಗಿ ಇರಬೇಕಾದರೆ, ನಂಬಿಕೆಯಲ್ಲಿ ಅವನಿಗೆ ಸಂಬಂಧಿಕರಾಗಿರುವವರಿಗೆ ಅದನ್ನು ಅವನೆಷ್ಟೋ ಹೆಚ್ಚಾಗಿ ಮಾಡತಕ್ಕದ್ದಲ್ಲವೋ? ಕೆಲವೊಮ್ಮೆ ಒಂದು ಊಟದ ಆಮಂತ್ರಣವು ವೃದ್ಧ ವ್ಯಕ್ತಿಯ ದಿನಚರ್ಯೆಯಲ್ಲಿ ಒಂದು ಸ್ವಾಗತಾರ್ಹ ವಿರಾಮವಾಗಿ ಪ್ರತಿನಿಧಿಸುತ್ತದೆ. ನಿಮ್ಮ ಸಾಮಾಜಿಕ ಗೋಷ್ಠಿಗಳಲ್ಲಿ ವಿವೇಕದ ವಾಣಿ ಮತ್ತು ಅನುಭವವು ನಿಮಗೆ ಬೇಕಿದ್ದರೆ, ವೃದ್ಧರನ್ನು ಒಳಗೂಡಿಸಿರಿ.—ಹೋಲಿಸಿರಿ ಲೂಕ 14:12-14.
17 ವೃದ್ಧ ಜನರನ್ನು ಪ್ರೋತ್ಸಾಹಿಸಬಲ್ಲ ಅನೇಕ ವಿಧಗಳು ಇರುತ್ತವೆ. ರಾಜ್ಯ ಸಭಾ ಗೃಹಕ್ಕೆ ಇಲ್ಲವೆ ಸಮ್ಮೇಳನಕ್ಕೆ ಹೋಗಲು ಒಂದು ಕಾರ್ ಗುಂಪನ್ನು ನಾವು ಏರ್ಪಡಿಸಿದಲ್ಲಿ, ಸವಾರಿಯನ್ನು ಸ್ವಾಗತಿಸುವ ಕೆಲವು ವೃದ್ಧರು ಅಲ್ಲಿದ್ದಾರೋ? ಅವರೇ ಕೇಳುವ ತನಕ ಕಾಯಬೇಡಿರಿ. ಅವರನ್ನು ಒಯ್ಯಲು ನೀಡಿಕೊಳ್ಳಿರಿ. ಇನ್ನೊಂದು ವ್ಯಾವಹಾರಿಕ ಸಹಾಯವು ಅವರ ವಸ್ತುಗಳನ್ನು ಖರೀದಿಸುವುದೇ. ಅಥವಾ ಅವರು ಶಕ್ತರಾಗಿದ್ದರೆ, ನಮ್ಮ ವಸ್ತುಗಳನ್ನು ಖರೀದಿಸುವ ಸಂಚಾರದಲ್ಲಿ ಅವರನ್ನು ನಮ್ಮೊಂದಿಗೆ ಒಯ್ಯಬಹುದೇ? ಆದರೆ ಒಂದುವೇಳೆ ಆವಶ್ಯಬಿದ್ದರೆ, ಅವರು ವಿಶ್ರಮಿಸಿ, ದಣುವಾರಿಸಿಕೊಳ್ಳ ಶಕ್ತರಾಗುವಂತೆ ಅಲ್ಲಿ ಸ್ಥಳಗಳಿವೆಯೋ ಎಂದು ಖಾತರಿ ಮಾಡಿಕೊಳ್ಳಿರಿ. ತಾಳ್ಮೆ ಮತ್ತು ದಯೆಯು ಕೇಳಿಕೊಳ್ಳಲ್ಪಡುವುದೆಂಬದಕ್ಕೆ ಸಂದೇಹವಿಲ್ಲ, ಆದರೆ ವಯೋವೃದ್ಧನ ಯಥಾರ್ಥ ಕೃತಜ್ಞತೆಯು ಅತ್ಯಂತ ಪ್ರತಿಫಲದಾಯಕವಾಗಿರಬಲ್ಲದು.—2 ಕೊರಿಂಥ 1:11.
ಸಭೆಗೆ ಒಂದು ಸುಂದರವಾದ ಆಸ್ತಿ
18. ವೃದ್ಧ ಜನರು ಸಭೆಗೆ ಆಶೀರ್ವಾದವಾಗಿದ್ದಾರೆ ಏಕೆ?
18 ಸಭೆಯಲ್ಲಿ ಬೂದುಬಣ್ಣದ ಮತ್ತು ನರೆತ ಕೂದಲುಗಳನ್ನು (ಹಾಗೂ ವೃದ್ಧಾಪ್ಯದಿಂದ ಬೋಳಾದ ತಲೆಗಳನ್ನು) ನೋಡುವುದು ಅದೆಷ್ಟು ಹಿತಕರವು! ಯುವ ಜನರ ಚೈತನ್ಯ ಮತ್ತು ಓಜಸ್ಸಿನ ನಡುವೆ—ಯಾವುದೇ ಸಭೆಗೆ ಒಂದು ನಿಜ ಆಸ್ತಿಯಾದ ವಿವೇಕ ಮತ್ತು ಅನುಭವದ ಪ್ರೋಕ್ಷನೆಯು ನಮಗಿದೆಂದು ಇದರರ್ಥ. ಅವರ ಜ್ಞಾನವು ಒಂದು ಬಾವಿಯಿಂದ ಸೇದಲ್ಪಡಬೇಕಾದ ಚೇತನಕರ ನೀರಿನಂತಿದೆ. ಜ್ಞಾನೋಕ್ತಿ 18:4 ತಿಳಿಸಿರುವ ಪ್ರಕಾರವೇ ಅದು ಇದೆ: “ಸತ್ಪುರುಷನ ನುಡಿಯು ಆಳವಾದ ನೀರು, ಜ್ಞಾನದ ಬುಗ್ಗೆ, ಹರಿಯುವ ತೊರೆ.” ತಾವು ಬೇಕಾಗಿದ್ದಾರೆ ಮತ್ತು ಗಣ್ಯಮಾಡಲ್ಪಡುತ್ತಾರೆ ಎಂದು ಭಾವಿಸುವುದು ವೃದ್ಧರಿಗೆ ಅದೆಷ್ಟು ಪ್ರೋತ್ಸಾಹದಾಯಕವು!—ಹೋಲಿಸಿರಿ ಕೀರ್ತನೆ 92:14.
19. ತಮ್ಮ ವೃದ್ಧ ಹೆತ್ತವರಿಗಾಗಿ ಕೆಲವರು ಹೇಗೆ ತ್ಯಾಗಗಳನ್ನು ಮಾಡಿದ್ದಾರೆ?
19 ಪೂರ್ಣ ಸಮಯದ ಸೇವೆಯಲ್ಲಿರುವ ಕೆಲವರು ವೃದ್ಧರೂ ಅಸ್ವಸ್ಥರೂ ಆದ ಹೆತ್ತವರನ್ನು ನೋಡಿಕೊಳ್ಳುವುದಕ್ಕಾಗಿ ತಮ್ಮ ಸುಯೋಗಗಳನ್ನು ಬಿಟ್ಟುಕೊಡುವ ಅಗತ್ಯವನ್ನು ಕಂಡಿದ್ದಾರೆ. ಯಾರು ಮುಂಚೆ ತಮಗಾಗಿ ತ್ಯಾಗವನ್ನು ಮಾಡಿದ್ದರೋ ಅವರಿಗಾಗಿ ಒಂದು ತ್ಯಾಗವನ್ನು ಮಾಡಿದ್ದಾರೆ. ಹಿಂದೆ ಮಿಷನೆರಿಗಳಾಗಿದ್ದ ಮತ್ತು ಈಗಲೂ ಪೂರ್ಣ ಸಮಯದ ಸೇವೆಯಲ್ಲಿರುವ ಒಬ್ಬ ದಂಪತಿಗಳು ವೃದ್ಧರಾದ ತಮ್ಮ ಹೆತ್ತವರ ಪರಾಮರಿಕೆಗಾಗಿ ಸ್ವದೇಶಕ್ಕೆ ಹಿಂತಿರುಗಿದರು. ಇದನ್ನು 20 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಅವರು ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆ ಪುರುಷನ ತಾಯಿಯನ್ನು ನರ್ಸಿಂಗ್ ಹೋಮ್ನಲ್ಲಿ ಹಾಕಬೇಕಾಯಿತು. ಈಗ 60 ರ ವಯಸ್ಸಿನಲ್ಲಿರುವ ಗಂಡನು 93 ವರ್ಷ ಪ್ರಾಯದ ತನ್ನ ತಾಯಿಯನ್ನು ಪ್ರತಿ ದಿನ ಸಂದರ್ಶಿಸುತ್ತಾನೆ. ಅವನು ವಿವರಿಸುವುದು: “ನಾನಾಕೆಯನ್ನು ಹೇಗೆ ತ್ಯಜಿಸಬಲ್ಲೆ? ಅವಳು ನನ್ನ ತಾಯಿ!” ಬೇರೆ ವಿದ್ಯಮಾನಗಳಲ್ಲಿ ಸಭೆಗಳು ಮತ್ತು ವ್ಯಕ್ತಿಗಳು ಮುಂದೆ ಬಂದು ವೃದ್ಧರ ಪರಾಮರಿಕೆ ಮಾಡಲು ನೀಡಿಕೊಂಡದರ್ದಿಂದ, ಅವರ ಮಕ್ಕಳು ತಮ್ಮ ನೇಮಕಗಳಲ್ಲಿ ಉಳಿಯಲು ಸಾಧ್ಯವಾಗಿದೆ. ಅಂಥ ನಿಸ್ವಾರ್ಥ ಪ್ರೀತಿಯು ಸಹ ಮಹಾ ಪ್ರಶಂಸೆಗೆ ಅರ್ಹವಾಗಿದೆ. ಪ್ರತಿಯೊಂದು ಸನ್ನಿವೇಶವು ಮನಸ್ಸಾಕ್ಷಿಪೂರ್ವಕವಾಗಿ ನಿರ್ವಹಿಸಲ್ಪಡಬೇಕು ಯಾಕಂದರೆ ವೃದ್ಧರು ದುರ್ಲಕ್ಷಿಸಲ್ಪಡಬಾರದು. ನೀವು ನಿಮ್ಮ ವೃದ್ಧ ಹೆತ್ತವರನ್ನು ಪ್ರೀತಿಸುತ್ತೀರೆಂಬದನ್ನು ತೋರಿಸಿರಿ.—ವಿಮೋಚನಕಾಂಡ 20:12; ಎಫೆಸ 6:2, 3.
20. ವೃದ್ಧರ ಪರಾಮರಿಕೆಯಲ್ಲಿ ಯೆಹೋವನು ನಮಗೆ ಯಾವ ಮಾದರಿಯನ್ನು ಕೊಟ್ಟಿದ್ದಾನೆ?
20 ನಿಶ್ಚಯವಾಗಿಯೂ, ನಮ್ಮ ವೃದ್ಧ ಸಹೋದರ ಮತ್ತು ಸಹೋದರಿಯರು ಕುಟುಂಬ ಮತ್ತು ಸಭೆಗೆ ಸುಂದರ ಕಿರೀಟವಾಗಿದ್ದಾರೆ. ಯೆಹೋವನು ಅಂದದ್ದು: “ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನು ಉಂಟುಮಾಡಿದೆನು, ನಾನೇ ಹೊರುವೆನು, ಹೌದು ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.” ಅದೇ ತಾಳ್ಮೆ ಮತ್ತು ಪರಾಮರಿಕೆಯನ್ನು ಕ್ರೈಸ್ತ ಕುಟುಂಬದಲ್ಲಿರುವ ನಮ್ಮ ವೃದ್ಧ ಸಹೋದರ ಮತ್ತು ಸಹೋದರಿಯರ ಕಡೆಗೆ ನಾವು ತೋರಿಸುವಂತಾಗಲಿ.—ಯೆಶಾಯ 46:4; ಜ್ಞಾನೋಕ್ತಿ 16:31.
[ಅಧ್ಯಯನ ಪ್ರಶ್ನೆಗಳು]
a ವೃದ್ಧರಿಗೆ ಸಹಾಯ ಮಾಡಲು ಕುಟುಂಬ ಸದಸ್ಯರು ಏನು ಮಾಡಬಲ್ಲರೆಂಬ ಸವಿಸ್ತಾರ ಸಲಹೆಗಳಿಗಾಗಿ, ಕಾವಲಿನಬುರುಜು, ದಶಂಬರ 1, 1987 ನೋಡಿರಿ.
ನಿಮಗೆ ನೆನಪಿದೆಯೇ?
▫ ವೃದ್ಧರ ಪರಾಮರಿಕೆಯ ಯಾವ ಬೈಬಲ್ ಮಾದರಿಗಳು ನಮಗಿವೆ?
▫ ನಾವು ವೃದ್ಧರನ್ನು ಹೇಗೆ ಉಪಚರಿಸಬೇಕು?
▫ ಕುಟುಂಬ ಸದಸ್ಯರು ತಮ್ಮ ವೃದ್ಧ ಪ್ರಿಯ ಜನರಿಗೆ ಹೇಗೆ ಗಮನಕೊಡಬಲ್ಲರು?
▫ ವೃದ್ಧರಿಗೆ ಸಹಾಯ ಕೊಡಲು ಸಭೆಯು ಏನು ಮಾಡಬಲ್ಲದು?
▫ ವೃದ್ಧರು ನಮಗೆಲ್ಲರಿಗೆ ಆಶೀರ್ವಾದವಾಗಿರುವುದೇಕೆ?
[ಪುಟ 23 ರಲ್ಲಿರುವ ಚಿತ್ರ]
ವೃದ್ಧೆ ನೊವೊಮಿಗೆ ರೂತಳು ದಯೆಯನ್ನೂ ಗೌರವವನ್ನೂ ತೋರಿಸಿದಳು
[ಪುಟ 24 ರಲ್ಲಿರುವ ಚಿತ್ರ]
ವೃದ್ಧರು ಸಭೆಯ ಮೂಲ್ಯವುಳ್ಳ ಸದಸ್ಯರಾಗಿರುತ್ತಾರೆ