ಪ್ರೀತಿ (ಅಗಾಪೆ)—ಅದೇನಲ್ಲ ಮತ್ತು ಅದೇನಾಗಿದೆ
“ನಿಮ್ಮ ಸಹೋದರ ಸ್ನೇಹಕ್ಕೆ [ವಾತ್ಸಲ್ಯ, NW] . . . ಪ್ರೀತಿಯನ್ನೂ ಕೂಡಿಸಿರಿ.”—2 ಪೇತ್ರ 1:5, 7.
1. (ಎ) ಬೈಬಲು ಯಾವ ಗುಣಕ್ಕೆ ಸರ್ವೋತ್ಕೃಷ್ಟತೆಯನ್ನು ಕೊಡುತ್ತದೆ? (ಬಿ) “ಪ್ರೀತಿ” ಯೆಂದು ಆಗಾಗ್ಗೆ ಭಾಷಾಂತರಿಸಲ್ಪಟ್ಟ ನಾಲ್ಕು ಗ್ರೀಕ್ ಪದಗಳು ಯಾವುವು, ಮತ್ತು ಅವುಗಳಲ್ಲಿ 1 ಯೋಹಾನ 4:8 ರಲ್ಲಿ ಉಲ್ಲೇಖಿಸಲ್ಪಟ್ಟದ್ದು ಯಾವುದಾಗಿದೆ?
ದೇವರ ವಾಕ್ಯವಾದ ಬೈಬಲು ಪ್ರಾಮುಖ್ಯತೆಯನ್ನು ಕೊಡುವ ಒಂದು ಗುಣ ಅಥವಾ ಸದ್ಗುಣ ಇರುವುದಾದರೆ, ಅದು ಪ್ರೀತಿಯಾಗಿದೆ. ಕ್ರೈಸ್ತ ಶಾಸ್ತ್ರವಚನಗಳ ಮೂಲ ಭಾಷೆಯಾದ ಗ್ರೀಕ್ನಲ್ಲಿ, “ಪ್ರೀತಿ” ಎಂಬುದಾಗಿ ಅನೇಕ ಬಾರಿ ಭಾಷಾಂತರಿಸಲ್ಪಟ್ಟ ನಾಲ್ಕು ಪದಗಳಿವೆ. ಈಗ ನಾವು ಗಮನಿಸುವ ಪ್ರೀತಿಯು, ಲೈಂಗಿಕ ಆಕರ್ಷಣೆಯ ಮೇಲೆ ಆಧಾರಿತವಾದ ಈರೋಸ್ನ ಕುರಿತಾಗಲಿ (ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ಕಂಡುಬರದ ಒಂದು ಪದ), ಅಥವಾ ರಕ್ತ ಸಂಬಂಧದ ಮೇಲೆ ಆಧಾರಿತವಾದ ಒಂದು ಭಾವನೆಯನ್ನು ವ್ಯಕ್ತಪಡಿಸುವ, ಸ್ಟಾರ್ಜಿಯ ಕುರಿತಾಗಲಿ, ಅಥವಾ ಮುಂಬರುವ ಲೇಖನದೊಂದಿಗೆ ಸಂಬಂಧಿಸಿದ, ಪರಸ್ಪರ ಪರಿಗಣನೆಯ ಮೇಲಾಧಾರಿತವಾದ, ಹೃತ್ಪೂರ್ವಕ ಸ್ನೇಹದ ಪ್ರೀತಿಯನ್ನು ಸೂಚಿಸುವ ಫಿಲಿಯದ ಕುರಿತಾಗಲಿ ಅಲ್ಲ. ಬದಲಾಗಿ, ಅದು ಅಗಾಪೆ ಯಾಗಿದೆ—ಇದು ಮೂಲಸೂತ್ರದಿಂದ ಆಧಾರಿತವಾದ ಪ್ರೀತಿಯಾಗಿದ್ದು, ಅಪೊಸ್ತಲ ಯೋಹಾನನು “ದೇವರು ಪ್ರೀತಿಸ್ವರೂಪಿ” ಎಂದು ಉಲ್ಲೇಖಿಸಿದ ಪ್ರೀತಿಯಾಗಿದ್ದು, ನಿಸ್ವಾರ್ಥತೆಯೊಂದಿಗೆ ಸಮಾನಾರ್ಥಕವಾದದ್ದು ಎಂದು ಹೇಳಬಹುದಾಗಿದೆ.—1 ಯೋಹಾನ 4:8.
2. ಪ್ರೀತಿ (ಅಗಾಪೆ)ಯ ಕುರಿತಾಗಿ ಏನು ಹೇಳಲ್ಪಟ್ಟಿದೆ?
2 ಈ ಪ್ರೀತಿ (ಅಗಾಪೆ)ಯ ಕುರಿತಾಗಿ, ಪ್ರೊಫೆಸರ್ ವಿಲಿಯಂ ಬಾರ್ಕ್ಲೆ ಅವರ ನ್ಯೂ ಟೆಸ್ಟಮೆಂಟ್ ವರ್ಡ್ಸ್ನಲ್ಲಿ ಹೇಳುವುದು: “ಅಗಾಪೆ, ಮನಸ್ಸಿ ನೊಂದಿಗೆ ಸಂಬಂಧವನ್ನು ಹೊಂದಿದೆ: [ಬಹುಶಃ ಫಿಲಿಯ ದಲ್ಲಿರುವಂತೆಯೇ] ನಮ್ಮ ಹೃದಯಗಳಲ್ಲಿ ಆಹ್ವಾನಿಸಿಲ್ಲದ ವಿಚಾರಗಳನ್ನು ಕೆರಳಿಸುವ ಕೇವಲ ಒಂದು ಭಾವಾವೇಶವು ಅದಾಗಿರುವುದಿಲ್ಲ; ನಾವು ಉದ್ದೇಶಪೂರ್ವಕವಾಗಿ ಜೀವಿಸುವ ಒಂದು ಮೂಲ ತತ್ವವು ಅದಾಗಿದೆ. ಅಗಾಪೆಯು ಚಿತ್ತದೊಂದಿಗೆ ಅತ್ಯುಚವ್ಚಾದ ಸಂಬಂಧವನ್ನು ಹೊಂದಿರುತ್ತದೆ. ಇದೊಂದು ಗೆಲವು, ವಿಜಯ, ಮತ್ತು ಸಾಧನೆಯಾಗಿದೆ. ಯಾವನೂ ಅವನ ವೈರಿಗಳನ್ನು ಎಂದೂ ಸ್ವಭಾವಸಿದ್ಧವಾಗಿ ಪ್ರೀತಿಸಿದ್ದಿಲ್ಲ. ಒಬ್ಬನ ವೈರಿಗಳನ್ನು ಪ್ರೀತಿಸುವುದು ನಮ್ಮೆಲ್ಲಾ ಸ್ವಭಾವಸಿದ್ಧ ಪ್ರವೃತ್ತಿಗಳನ್ನು ಮತ್ತು ಮನೋಭಾವಗಳನ್ನು ಗೆಲ್ಲುವುದಾಗಿದೆ. ಈ ಆಗಾಪೆಯು . . . ನಿಜತ್ವದಲ್ಲಿ ಪ್ರೀತಿಸಸಾಧ್ಯವಿಲ್ಲದವರನ್ನು ಪ್ರೀತಿಸುವ, ನಾವು ನೆಚ್ಚದ ಜನರನ್ನು ಪ್ರೀತಿಸುವ, ಶಕ್ತಿಯಾಗಿದೆ.”
3. ಯೇಸು ಕ್ರಿಸ್ತ ಮತ್ತು ಪೌಲರು ಪ್ರೀತಿಯ ಮೇಲೆ ಯಾವ ಒತ್ತನ್ನು ಹಾಕಿದ್ದಾರೆ?
3 ಹೌದು, ಇತರ ಎಲ್ಲಾ ಆರಾಧನೆಯ ಬಗೆಗಳಿಂದ ಯೆಹೋವ ದೇವರ ಶುದ್ಧ ಆರಾಧನೆಯನ್ನು ವ್ಯತ್ಯಾಸ ಮಾಡುವ ವಿಷಯಗಳಲ್ಲಿ ಈ ರೀತಿಯ ಪ್ರೀತಿಯ ಮೇಲಿನ ಒತ್ತು ಸೇರಿರುತ್ತದೆ. ತಕ್ಕುದ್ದಾಗಿಯೆ ಯೇಸು ಕ್ರಿಸ್ತನು ಎರಡು ಮಹಾನ್ ಆಜ್ಞೆಗಳನ್ನು ಸ್ಪಷ್ಟವಾಗಿಗಿ ನಮೂದಿಸಿದನು: “ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೇಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ.” (ಮಾರ್ಕ 12:29-31) ಅಪೊಸ್ತಲ ಪೌಲನು ಪ್ರೀತಿಯ ಮೇಲೆ ಅದೇ ಒತ್ತಡವನ್ನು 1 ಕೊರಿಂಥದವರಿಗೆ 13 ನೇ ಅಧ್ಯಾಯದಲ್ಲಿ ಹಾಕಿದ್ದಾನೆ. ಪ್ರೀತಿಯು ಪ್ರಧಾನ ಅವಶ್ಯವಾದ ಗುಣವೆಂದು ಒತ್ತಿ ಹೇಳಿದ ಅನಂತರ, ಅವನು ಹೀಗೆ ಹೇಳುವುದರ ಮೂಲಕ ಮುಕ್ತಾಯಗೊಳಿಸಿದನು: “ಹೀಗಿರುವುದರಿಂದ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.” (1 ಕೊರಿಂಥದವರಿಗೆ 13:13) ಪ್ರೀತಿಯು ತನ್ನ ಅನುಯಾಯಿಗಳನ್ನು ಗುರುತಿಸುವ ಚಿಹ್ನೆಯಾಗಿರುವುದೆಂದು ಯೇಸು ತಕ್ಕುದ್ದಾಗಿಯೆ ಹೇಳಿದನು.—ಯೋಹಾನ 13:35.
ಪ್ರೀತಿಯು ಅಲ್ಲದಾಗಿರುವ ವಿಷಯಗಳು
4. 1 ಕೊರಿಂಥ 13:4-8 ರಲ್ಲಿ ಪೌಲನು ಪ್ರೀತಿಯ ಕುರಿತಾಗಿ ಎಷ್ಟು ನಕಾರಾತ್ಮಕ ಮತ್ತು ಎಷ್ಟು ಸಕಾರಾತ್ಮಕ ಅಂಶಗಳನ್ನು ಪ್ರಸ್ತಾಪಿಸಿದ್ದಾನೆ?
4 ಪ್ರೀತಿಯು ಏನಾಗಿರುತ್ತದೆ ಎಂದು ಹೇಳುವುದಕ್ಕಿಂತ ಅದು ಏನಾಗಿರುವುದಿಲ್ಲ ಎಂದು ಹೇಳುವುದು ಸುಲಭವೆಂಬುದನ್ನು ಪರಿಗಣಿಸಲಾಗಿರುತ್ತದೆ. ಅದರಲ್ಲಿ ಸ್ವಲ್ಪ ಸತ್ಯಾಂಶವಿದೆ, ಯಾಕಂದರೆ ಅಪೊಸ್ತಲ ಪೌಲನು ಪ್ರೀತಿಯ ಮೇಲಿನ ಅವನ ಅಧ್ಯಾಯದಲ್ಲಿ, 1 ಕೊರಿಂಥದವರಿಗೆ 13ನೇ ಅಧ್ಯಾಯ 4 ರಿಂದ 8 ವಚನಗಳಲ್ಲಿ, ಪ್ರೀತಿಯು ಏನಾಗಿಲ್ಲ ಎಂಬ ಒಂಬತ್ತು ವಿಷಯಗಳನ್ನು ಮತ್ತು ಅದು ಏನಾಗಿದೆ ಎಂಬ ಏಳು ವಿಷಯಗಳನ್ನು ತಿಳಿಸುತ್ತಾನೆ.
5. “ಹೊಟ್ಟೆಕಿಚ್ಚು” ಹೇಗೆ ವಿವರಿಸಲ್ಪಟ್ಟಿದೆ, ಮತ್ತು ಶಾಸ್ತ್ರವಚನಗಳಲ್ಲಿ ಒಂದು ಸಕಾರಾತ್ಮಕ ಅರ್ಥದಲ್ಲಿ ಅದು ಹೇಗೆ ಉಪಯೋಗಿಸಲ್ಪಟ್ಟಿದೆ?
5 ಪ್ರೀತಿಯು ಏನಲ್ಲವೆಂಬುದನ್ನು, ಅದು “ಹೊಟ್ಟೆಕಿಚ್ಚುಪಡುವದಿಲ್ಲ” ಎಂದು ಪೌಲನು ಪ್ರಥಮವಾಗಿ ಹೇಳಿದನು. ಹೊಟ್ಟೆಕಿಚ್ಚಿನ ಸಕಾರಾತ್ಮಕ ಮತ್ತು ನಕಾರಾತ್ಮಕ ರೂಪಗಳಿರುವುದರಿಂದಾಗಿ ಸ್ವಲ್ಪ ವಿವರಣೆಯ ಅಗತ್ಯವಿದೆ. ಒಂದು ನಿಘಂಟು “ಹೊಟ್ಟೆಕಿಚ್ಚ”ನ್ನು “ಪ್ರತಿಸ್ಪರ್ಧಿಯನ್ನು ಸಹಿಸಲಾರದಿರುವಿಕೆ” ಎಂಬುದಾಗಿ ಮತ್ತು “ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುವಿಕೆ” ಎಂಬುದಾಗಿ ಅರ್ಥವಿವರಣೆಯನ್ನೀಯುತ್ತದೆ. ಹೀಗೆ, ಮೋಶೆಯು ವಿಮೋಚನಕಾಂಡ 34:14 ರಲ್ಲಿ ಹೇಳಿದ್ದು: “ಸ್ವಗೌರವವನ್ನು ಕಾಪಾಡಿಕೊಳ್ಳುವವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡಬೀಳಬಾರದು.” ವಿಮೋಚನಕಾಂಡ 20:5 ರಲ್ಲಿ, ಯೆಹೋವನನ್ನುವುದು: “ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವದಿಲ್ಲ.” ಅದೇ ರೀತಿಯಲ್ಲಿ ಅಪೊಸ್ತಲ ಪೌಲನು ಬರೆದದ್ದು: “ಯಾಕಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ.”—2 ಕೊರಿಂಥ 11:2.
6. ಪ್ರೀತಿಯು ಯಾಕೆ ಹೊಟ್ಟೆಕಿಚ್ಚುಪಡುವುದಿಲ್ಲವೆಂದು ಯಾವ ಶಾಸ್ತ್ರೀಯ ಉದಾಹರಣೆಗಳು ತೋರಿಸುತ್ತವೆ?
6 “ಹೊಟ್ಟೆಕಿಚ್ಚಿ”ಗೆ ವಿಶಾಲವಾಗಿ ಕೆಟ್ಟದಾದ ಒಳಾರ್ಥವಿರಲಾಗಿ, ಆ ಕಾರಣಕ್ಕಾಗಿಯೇ ಅದನ್ನು ಗಲಾತ್ಯ 5:20 ರಲ್ಲಿ ಶರೀರಭಾವದ ಕರ್ಮಗಳೊಂದಿಗೆ ಪಟ್ಟಿ ಮಾಡಲಾಗಿದೆ. ಹೌದು, ಅಂಥ ಹೊಟ್ಟೆಕಿಚ್ಚು ಸ್ವಾರ್ಥದ್ದಾಗಿದೆ ಮತ್ತು ದ್ವೇಷವನ್ನು ಉತ್ಪಾದಿಸುತ್ತದೆ, ಮತ್ತು ದ್ವೇಷವು ಪ್ರೀತಿಗೆ ವಿರುದ್ಧವಾದುದ್ದಾಗಿದೆ. ಹೊಟ್ಟೆಕಿಚ್ಚು, ಕಾಯಿನನು ಹೇಬೆಲನನ್ನು ಕೊಂದುಹಾಕುವಷ್ಟರವರೆಗೆ ದ್ವೇಷಿಸುವಂತೆ ಮಾಡಿತು, ಮತ್ತು ಅದು, ಯೋಸೇಫನ ಹತ್ತು ಮಲ ಸಹೋದರರು ಅವನನ್ನು ಕೊಲ್ಲುವಷ್ಟರವರೆಗೆ ದ್ವೇಷಿಸುವಂತೆ ಮಾಡಿತು. ರಾಜ ಅಹಾಬನು ನಾಬೋತನ ದ್ರಾಕ್ಷೇತೋಟಕ್ಕಾಗಿ ಹೊಟ್ಟೆಕಿಚ್ಚಿನಿಂದ ಆಸೂಯೆಗೊಂಡಂತೆ, ಇತರರ ಸ್ವತ್ತುಗಳಿಗಾಗಿ ಯಾ ಸ್ಥಾನಕ್ಕಾಗಿ ಪ್ರೀತಿಯು ಹೊಟ್ಟೆಕಿಚ್ಚಿನಿಂದ ಆಸೂಯೆಗೊಳ್ಳುವುದಿಲ್ಲ.—1 ಅರಸುಗಳು 21:1-19.
7. (ಎ) ಬಡಾಯಿಕೊಚ್ಚಿಕೊಳ್ಳುವುದರಿಂದ ಯೆಹೋವನು ಅಸಂತೋಷಗೊಳ್ಳುತ್ತಾನೆಂದು ಯಾವ ಘಟನೆಯು ತೋರಿಸುತ್ತದೆ? (ಬಿ) ನಿರ್ಲಕ್ಷ್ಯದಿಂದಲೂ ಸಹ ಪ್ರೀತಿಯು ಯಾಕೆ ಬಡಾಯಿಕೊಚ್ಚಿಕೊಳ್ಳುವುದಿಲ್ಲ?
7 ಅನಂತರ ಪೌಲನು ಪ್ರೀತಿಯು “ಹೊಗಳಿಕೊಳ್ಳುವದಿಲ್ಲ” ಎಂದು ನಮಗೆ ಹೇಳುತ್ತಾನೆ. ಹೊಗಳಿಕೊಳ್ಳುವುದು ಪ್ರೀತಿಯ ಕೊರತೆಯನ್ನು ತೋರಿಸುತ್ತದೆ, ಯಾಕಂದರೆ ಅದು ಒಬ್ಬನನ್ನು ಇತರರಿಗಿಂತ ಮೇಲಿನ ಸ್ಥಾನದಲ್ಲಿ ಇರಿಸಿಕೊಳ್ಳುವಂತೆ ಮಾಡುತ್ತದೆ. ರಾಜ ನೆಬೂಕದ್ನೆಚ್ಚರನು ಬಡಾಯಿ ಕೊಚ್ಚಿಕೊಂಡಾಗ ಅವನನ್ನು ದೀನಾವಸೆಗ್ಥೆ ತಂದ ವಿಧಾನದಿಂದ ಯೆಹೋವನು ಬಡಾಯಿಕೋರರನ್ನು ಮೆಚ್ಚುವುದಿಲ್ಲ ಎಂಬುದನ್ನು ಕಾಣಬಹುದು. (ದಾನಿಯೇಲ 4:30-35) ಒಬ್ಬನು ತನ್ನ ಸ್ವಂತ ಸಾಧನೆ ಯಾ ಸ್ವತ್ತುಗಳೊಂದಿಗೆ ಅತಿಯಾಗಿ ತೃಪ್ತಿಗೊಂಡ ಕಾರಣ ಹೊಗಳಿಕೊಳ್ಳುವಿಕೆಯು ಅನೇಕಬಾರಿ ಆಲೋಚನೆ ಇಲ್ಲದೆ ಮಾಡಲ್ಪಡುತ್ತದೆ. ಕೆಲವರು ಕ್ರೈಸ್ತ ಶುಶ್ರೂಷೆಯಲ್ಲಿ ಅವರ ಯಶಸ್ಸಿನ ಕುರಿತು ಬಡಾಯಿಕೊಚ್ಚಲು ಒಲವುಳ್ಳವರಾಗಬಹುದು. ಇತರರು, ಬಹುಮಟ್ಟಿಗೆ 50,000 ಡಾಲರುಗಳಷ್ಟು ಬೆಲೆಯುಳ್ಳ ಹೊಸ ವಾಹನವನ್ನು ತಾನು ಖರೀದಿಸಿದನ್ನು ತನ್ನ ಸ್ನೇಹಿತರಿಗೆ ತಿಳಿಸಲು ದೂರವಾಣಿ ಕರೆಯನ್ನು ಮಾಡಲು ಅಂತರ್ಯದಲ್ಲಿ ಪ್ರೇರಿಸಲ್ಪಟ್ಟ ಹಿರಿಯನಂತೆ ಇರಬಹುದು. ಇವೆಲ್ಲವು ತನ್ನ ಕೇಳುಗರಿಗಿಂತ ಬಡಾಯಿ ಕೊಚ್ಚುವವನು ಅತ್ಯುತ್ತಮನೆಂದು ಪ್ರದರ್ಶಿಸುವುದರಿಂದಾಗಿ ಪ್ರೀತಿಯದ್ದಾಗಿರುವುದಿಲ್ಲ.
8. (ಎ) ಉಬ್ಬಿಕೊಂಡವರ ಕಡೆಗೆ ದೇವರ ಮನೋಭಾವವು ಏನಾಗಿದೆ? (ಬಿ) ಪ್ರೀತಿಯು ಆ ರೀತಿಯಲ್ಲಿ ವರ್ತಿಸುವುದಿಲ್ಲ ಯಾಕೆ?
8 ಅನಂತರ ಪ್ರೀತಿಯು “ಉಬ್ಬಿಕೊಳ್ಳುವುದಿಲ್ಲ” ಎಂದು ನಮಗೆ ತಿಳಿಸಲಾಗಿದೆ. ಉಬ್ಬಿಕೊಂಡ, ಯಾ ಅಹಂಕಾರಿಯಾದವನೊಬ್ಬನು ಪ್ರೀತಿರಾಹಿತ್ಯದಿಂದ ತನ್ನನ್ನೇ ಹೆಚ್ಚಿಸಿಕೊಳ್ಳುತ್ತಾನೆ. ಅಂಥ ಮನೋಭಾವವು ಅತಿ ಅವಿವೇಕದ್ದಾಗಿದೆ ಯಾಕಂದರೆ “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:6) ಪ್ರೀತಿಯಾದರೋ ಅದರ ವಿರುದ್ಧವಾಗಿ ಕಾರ್ಯ ನಡಿಸುತ್ತದೆ; ಅದು ಇತರರನ್ನು ಶ್ರೇಷ್ಠರೆಂದು ಗಮನಿಸುತ್ತದೆ. ಪೌಲನು ಫಿಲಿಪ್ಪಿಯದವರಿಗೆ 2:2, 3 ರಲ್ಲಿ ಬರೆದದ್ದು: “ಐಕಮತ್ಯವುಳ್ಳವರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿ ಇರಲಿ; ಅನ್ಯೋನ್ಯಭಾವವುಳ್ಳವರೂ ಒಂದೇ ಗುರಿಯಿಟ್ಟುಕೊಂಡವರೂ ಆಗಿರ್ರಿ. ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.” ಅಹಂಕಾರಿ ವ್ಯಕ್ತಿ ಜಗಳಗಂಟಿಗತನದ ಕಾರಣ ಇತರರು ಅಹಿತಕರ ಭಾವವನ್ನು ತಾಳುವಂತೆ ಮಾಡುವಾಗ, ಮೇಲಿನ ವಚನದಂಥ ಮನೋಭಾವವು ಇತರರರು ನೆಮ್ಮದಿಯ ಭಾವನೆಯನ್ನು ಹೊಂದುವಂತೆ ಮಾಡುತ್ತದೆ.
9. ಪ್ರೀತಿಯು ಮರ್ಯಾದೆಗೆಟ್ಟು ನಡೆಯುವುದಿಲ್ಲ ಯಾಕೆ?
9 ಮುಂದಕ್ಕೆ ಪೌಲನು ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ” ವೆಂದು ಹೇಳುತ್ತಾನೆ. “ಮರ್ಯಾದೆಗೆಟ್ಟ” ಎಂಬ ಶಬ್ದವನ್ನು “ಸಭ್ಯತೆ ಯಾ ನೈತಿಕತೆಗಳಿಗೆ ಘೋರ ಅಸಭ್ಯ ಯಾ ಆಕ್ರಮಣ” ಎಂದು ನಿಘಂಟು ಅರ್ಥ ಕೊಡುತ್ತದೆ. ಮರ್ಯಾದೆಗೆಟ್ಟು (ಪ್ರೀತಿರಹಿತವಾಗಿ) ನಡೆಯುವವನು ಇತರರ ಭಾವನೆಗಳನ್ನು ಅಗೌರವಿಸುತ್ತಾನೆ. ಅನೇಕ ಬೈಬಲ್ ತರ್ಜುಮೆಗಳು ಆ ಗ್ರೀಕ್ ಪದವನ್ನು “ಉಗ್ರ” ಎಂದು ಭಾಷಾಂತರಿಸುತ್ತವೆ. ಅಂಥವನು ಯೋಗ್ಯ ಮತ್ತು ಸದಭಿರುಚಿಯಲ್ಲಿ ಉಚಿತವೆಂದೆಣಿಸುವುದನ್ನು ಧಿಕ್ಕರಿಸುತ್ತಾನೆ. ನಿಶ್ಚಯವಾಗಿಯೂ, ಉಗ್ರ ಅಥವಾ ಅಸಭ್ಯವಾದ ಎಲ್ಲಾ ವಿಷಯಗಳು, ಅತಿರೇಕತೆಯನ್ನು ಮತ್ತು ಆಘಾತವನ್ನುಂಟುಮಾಡಬಹುದಾದ ವಿಚಾರಗಳನ್ನು ಕೂಡ ಇತರರ ಕಡೆಗಿರುವ ಪ್ರೀತಿಪೂರ್ಣ ಪರಿಗಣನೆಯು ತಳ್ಳಿಹಾಕುವ ಅರ್ಥದಲ್ಲಿದೆ.
ಪ್ರೀತಿಯು ಅಲ್ಲದಾಗಿರುವ ಇತರ ವಿಷಯಗಳು
10. ಯಾವ ರೀತಿಯಲ್ಲಿ ಪ್ರೀತಿಯು ಸ್ವಪ್ರಯೇಜನವನ್ನು ಚಿಂತಿಸುವುದಿಲ್ಲ?
10 ಅನಂತರ ನಮಗೆ ಹೇಳಲ್ಪಟ್ಟಿದೆಯೇನಂದರೆ, ನಮ್ಮ ಮತ್ತು ಹಾಗೆಯೇ ಇತರರ ವೈಯಕ್ತಿಕ ಅಭಿರುಚಿಗಳ ಕುರಿತಾದ ಪ್ರಶ್ನೆಯು ಅಲ್ಲಿರುವಾಗ, ಪ್ರೀತಿಯು “ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ.” ಮತ್ತೊಂದು ಸ್ಥಳದಲ್ಲಿ ಅಪೊಸ್ತಲನು ಹೇಳಿದ್ದು: “ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ.” (ಎಫೆಸ 5:29) ಆದರೂ, ನಮ್ಮ ಅಭಿರುಚಿಗಳು ಬೇರೊಬ್ಬರ ಅಭಿರುಚಿಗಳೊಂದಿಗೆ ಸ್ಪರ್ಧಿಸುವಾಗ, ಅಬ್ರಹಾಮನು ಲೋಟನೊಂದಿಗೆ ಮಾಡಿದಂತೆಯೇ, ನಾವು ಪ್ರೀತಿಯಿಂದ ಇತರ ವ್ಯಕ್ತಿಯು ತನ್ನ ಆಯ್ಕೆಯನ್ನು ಹೊಂದುವಂತೆ ಬಿಟ್ಟುಬಿಡಬೇಕು.—ಆದಿಕಾಂಡ 13:8-11.
11. ಪ್ರೀತಿಯು ಸಿಟ್ಟುಗೊಳ್ಳುವುದಿಲ್ಲ ಎಂಬುದರ ಅರ್ಥವೇನು?
11 ಪ್ರೀತಿಯು ಅತಿ ಬೇಗನೆ ಕ್ಷೋಭೆಗೊಳಗಾಗುವುದಿಲ್ಲ. ಆದುದರಿಂದಲೇ ಪೌಲನು ನಮಗೆ ಹೇಳುವುದೇನಂದರೆ ಪ್ರೀತಿಯು “ಸಿಟ್ಟುಗೊಳ್ಳುವದಿಲ್ಲ.” ಅದು ತೆಳುವಾದ ಚರ್ಮವುಳ್ಳದ್ದಲ್ಲ. ಅದು ಆತ್ಮ ಸಂಯಮವನ್ನು ಅಭ್ಯಾಸಿಸುತ್ತದೆ. ವಿಶೇಷವಾಗಿ ವಿವಾಹಿತ ದಂಪತಿಗಳು, ಒಂದು ಗಟ್ಟಿಯಾದ, ತಾಳ್ಮೆರಹಿತ, ಕೋಪದ ಸ್ವರದಿಂದ ಅಥವಾ ಒಬ್ಬರಿಗೊಬ್ಬರು ರೇಗಾಡುವುದರ ವಿರುದ್ಧ ಎಚ್ಚರಿಕೆಯಿಂದಿರುವ ಮೂಲಕ ಈ ಬುದ್ಧಿವಾದವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸುಲಭವಾಗಿ ಸಿಟ್ಟುಗೇಳಿಸುವ ಪರಿಸ್ಥಿತಿಗಳಿರುತ್ತವೆ, ಆ ಕಾರಣದಿಂದಲೇ ತಿಮೊಥೆಯನಿಗೆ ಸಲಹೆಯನ್ನು ನೀಡುವ ಅನಿಸಿಕೆ ಪೌಲನಿಗಾಯಿತು: “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವುದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ”—ಹೌದು, ಸಿಟ್ಟುಗೊಳ್ಳದೆ—“ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು.”—2 ತಿಮೊಥೆಯ 2:24, 25.
12. (ಎ) ಯಾವ ರೀತಿಯಲ್ಲಿ ಪ್ರೀತಿಯು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ? (ಬಿ) ಅಪಕಾರವನ್ನು ಮನಸ್ಸಿನಲ್ಲಿಡುವುದು ಯಾಕೆ ಅವಿವೇಕತನವಾಗಿದೆ?
12 ಪ್ರೀತಿಯು ಅಲ್ಲದ್ದಾಗಿರುವ ವಿಷಯಗಳೊಂದಿಗೆ ಮುಂದುವರಿಯುವಾಗ, ಪೌಲನು ಸಲಹೆಯನ್ನೀಯುವುದು: “ಪ್ರೀತಿಯು . . . ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” ಪ್ರೀತಿಯು ಅಪಕಾರವನ್ನು ಕುರಿತು ಗಮನಿಸುವುದಿಲ್ಲವೆಂದು ಇದರ ಅರ್ಥವಲ್ಲ. ನಾವು ಗಂಭೀರವಾಗಿ ಬಾಧಿಸಲ್ಪಟ್ಟಾಗ ವಿಷಯಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕೆಂದು ಯೇಸು ತೋರಿಸಿದನು. (ಮತ್ತಾಯ 18:15-17) ಆದರೆ ನಾವು ಕೋಪಿಸಿಕೊಳ್ಳುವುದನ್ನು, ದ್ವೇಷ ಭಾವನೆಗಳನ್ನು ತ್ಯಜಿಸದೆ ಮುಂದುವರಿಸುವುದನ್ನು ಪ್ರೀತಿಯು ಸಮ್ಮತಿಸುವುದಿಲ್ಲ. ಕ್ಷಮಿಸುವವರಾಗಿರುವುದು ಮತ್ತು ಒಂದು ಶಾಸ್ತ್ರೀಯ ವಿಧಾನದಲ್ಲಿ ವಿಷಯವೊಂದು ನಿರ್ವಹಿಸಲ್ಪಟ್ಟ ಕೂಡಲೆ ಅದರ ಕುರಿತು ಮರೆಯುವುದೇ ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದಿರುವುದರ ಅರ್ಥವಾಗಿದೆ. ಹೌದು, ಒಂದು ತಪ್ಪಿನ ಕುರಿತು ಸತತವಾಗಿ ಚಿಂತಿಸುವ ಮೂಲಕ, ಒಂದು ಅಪಕಾರವನ್ನು ಮನಸ್ಸಿನಲ್ಲಿಡುವ ಮೂಲಕ ಸ್ವತಃ ನಿಮ್ಮನ್ನು ಹಿಂಸಿಸಿಕೊಳ್ಳದಿರ್ರಿ ಅಥವಾ ನಿಮ್ಮನ್ನೇ ಸಂಕಟಕ್ಕೆ ಗುರಿಮಾಡಿಕೊಳ್ಳಬೇಡಿರಿ!
13. ಅನ್ಯಾಯವನ್ನು ನೋಡಿ ಸಂತೋಷಪಡಬಾರದು ಎಂಬುದರ ಅರ್ಥವೇನು, ಮತ್ತು ಪ್ರೀತಿಯು ಯಾಕೆ ಅದನ್ನು ಮಾಡುವುದಿಲ್ಲ?
13 ಅದಲ್ಲದೆ, ಪ್ರೀತಿಯು “ಅನ್ಯಾಯವನ್ನು ನೋಡಿ ಸಂತೋಷಪಡುವುದಿಲ್ಲ,” ವೆಂದು ನಮಗೆ ಹೇಳಲ್ಪಟ್ಟಿದೆ. ಹಿಂಸಾತ್ಮಕ ಮತ್ತು ಲಂಪಟ ಸಾಹಿತ್ಯದ ಜನಪ್ರಿಯತೆ, ಚಲನಚಿತ್ರಗಳು, ಮತ್ತು ಟೀವೀ ಕಾರ್ಯಕ್ರಮಗಳ ಮೂಲಕ ನೋಡಸಾಧ್ಯವಿರುವಂತೆ, ಲೋಕವು ಅನ್ಯಾಯವನ್ನು ನೋಡಿ ಸಂತೋಷಪಡುತ್ತದೆ. ಅಂತಹ ಎಲ್ಲಾ ಸಂತೋಷಪಡುವಿಕೆಯು ಸ್ವಾರ್ಥದ್ದಾಗಿದ್ದು, ಇತರರ ಹಿತಕ್ಕಾಗಲಿ ಅಥವಾ ದೇವರ ನೀತಿಯ ನಿಯಮಗಳಿಗಾಗಲಿ ಗಣ್ಯತೆಯಿಲ್ಲದ್ದಾಗಿಯೂ ಇದೆ. ಅಂಥ ಎಲ್ಲಾ ಸಂತೋಷ ಪಡುವಿಕೆಯು ಶರೀರಭಾವವನ್ನು ಕುರಿತು ಬಿತ್ತುವದಾಗಿದೆ ಮತ್ತು ತಕ್ಕ ಸಮಯದಲ್ಲಿ ಶಾರೀರಿಕವಾಗಿ ನೀತಿಭ್ರಷ್ಟತೆಯನ್ನು ಕೊಯ್ಯುತ್ತದೆ.—ಗಲಾತ್ಯ 6:8.
14. ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲ್ಲವೆಂದು ಭರವಸೆಯಿಂದ ಯಾಕೆ ಹೇಳಸಾಧ್ಯವಿದೆ?
14 ಪ್ರೀತಿಯು ಮಾಡದೇ ಇರುವ ಕೊನೆಯ ವಿಷಯ: “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” ಪ್ರೀತಿಯು ಎಂದಿಗೂ ಬಿದ್ದುಹೋಗದೆ ಇರುವುದಕ್ಕೆ ಅಥವಾ ಅಂತ್ಯಗೊಳ್ಳದೇ ಇರುವುದಕ್ಕೆ ಒಂದು ಕಾರಣವೇನಂದರೆ ದೇವರು ಪ್ರೀತಿಸ್ವರೂಪಿಯಾಗಿದ್ದಾನೆ, ಮತ್ತು ಆತನು “ಸರ್ವಯುಗಗಳ ಅರಸ” ನಾಗಿದ್ದಾನೆ. (1 ತಿಮೊಥೆಯ 1:17) ರೋಮಾಪುರ 8:38, 39 ರಲ್ಲಿ, ನಮ್ಮ ಕಡೆಗೆ ದೇವರಿಗಿರುವ ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲವ್ಲೆಂಬ ಭರವಸೆಯು ನಮಗೆ ನೀಡಲ್ಪಟ್ಟಿದೆ: “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” ಅದು ಕೊರತೆಯನ್ನೆಂದಿಗೂ ಕಾಣದಿರುವುದರಿಂದಲೂ ಕೂಡ ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ. ಯಾವುದೇ ಸಂದರ್ಭದಲ್ಲಿ, ಯಾವುದೇ ಸವಾಲಿನ ಅರ್ಹತೆಗಳನ್ನು ಮುಟ್ಟುವ ಸಾಮರ್ಥ್ಯವು ಪ್ರೀತಿಗೆ ಇದೆ.
ಪ್ರೀತಿಯಾಗಿರುವ ವಿಷಯಗಳು
15. ಯಾಕೆ ಅಪೊಸ್ತಲ ಪೌಲನು ಪ್ರೀತಿಯ ಕುರಿತಾದ ಸಕಾರಾತ್ಮಕ ಅಂಶಗಳಲ್ಲಿ ತಾಳ್ಮೆಯನ್ನು ಪ್ರಥಮವಾಗಿ ಪಟ್ಟಿಮಾಡುತ್ತಾನೆ?
15 ಪ್ರೀತಿಯಾಗಿರುವ ಸಕಾರಾತ್ಮಕ ವಿಷಯಗಳಿಗೆ ಬರುವಾಗ, ಪೌಲನು ಆರಂಭಿಸುವುದು: “ಪ್ರೀತಿ ಬಹು ತಾಳ್ಮೆಯುಳ್ಳದ್ದು.” ತಾಳ್ಮೆಯ ಹೊರತು, ಅಂದರೆ ತಾಳ್ಮೆಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳದ ಹೊರತು ಕ್ರೈಸ್ತ ಸಹವಾಸದಂತಹ ಒಂದು ವಿಷಯವು ಇರಲಾರದೆಂದು ಹೇಳಲ್ಪಟ್ಟಿದೆ. ಅದು ಹಾಗೆ ಯಾಕಂದರೆ ನಾವೆಲ್ಲರೂ ಅಪರಿಪೂರ್ಣರಾಗಿದ್ದೇವೆ, ಮತ್ತು ನಮ್ಮ ಅಪರಿಪೂರ್ಣತೆಗಳು ಮತ್ತು ನ್ಯೂನತೆಗಳು ಇತರ ಜನರಿಗೆ ಒಂದು ಪ್ರಯೋಗ ಪರೀಕೆಯ್ಷಾಗಿದೆ. ಪ್ರೀತಿಯು ಅದೇನಾಗಿದೆ ಎನ್ನುವುದನ್ನು ವಿವರಿಸಲು ಅಪೊಸ್ತಲ ಪೌಲನು ಈ ನೋಟವನ್ನು ಪ್ರಥಮವಾಗಿ ದಾಖಲಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ!
16. ಯಾವ ವಿಧಗಳಲ್ಲಿ ಒಂದು ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ದಯೆಯನ್ನು ತೋರಿಸಬಲ್ಲರು?
16 ಪೌಲನು ಸ್ಪಷ್ಟವಾಗಿಗಿ ತಿಳಿಸುವುದೇನಂದರೆ ಪ್ರೀತಿಯು “ದಯೆ” ಯುಳ್ಳದ್ದಾಗಿದೆ. ಅಂದರೆ ಪ್ರೀತಿಯು ಸಹಾಯಕರವಾದದ್ದೂ, ವಿವೇಚನೆಯುಳ್ಳದ್ದೂ, ಇತರರ ಕಡೆಗೆ ಪರಿಗಣನೆಯುಳ್ಳದ್ದೂ ಆಗಿದೆ. ದೊಡ್ಡ ಮತ್ತು ಸಣ್ಣ ವಿಷಯಗಳಲ್ಲಿ ತಾನೇ ದಯೆಯು ತನ್ನನ್ನು ವಿಶದಪಡಿಸಿಕೊಳ್ಳುತ್ತದೆ. ನೆರೆಕರೆಯ ಭಾವದ ಸಮಾರ್ಯದವನು ಕಳ್ಳರ ಕೈಗೆ ಸಿಕ್ಕಿದ ಮನುಷ್ಯನಿಗೆ ನಿಶ್ಚಯವಾಗಿ ದಯೆ ತೋರಿಸುತ್ತಿದ್ದನು. (ಲೂಕ 10:30-37) “ದಯವಿಟ್ಟು” ಎಂದು ಹೇಳುವುದರಲ್ಲಿ ಪ್ರೀತಿಯು ಸಂತೋಷಗೊಳ್ಳುತ್ತದೆ. ಉದಾಹರಣೆಗೆ, “ರೊಟ್ಟಿಯನ್ನು ದಾಟಿಸು” ಎಂಬುದು ಒಂದು ಆಜ್ಞೆಯಾಗಿದೆ. ಅದನ್ನು “ದಯಮಾಡಿ” ಎಂಬ ಮುನ್ನುಡಿಯಿಂದ ಆರಂಭಿಸುವುದು ಒಂದು ವಿನಂತಿಯನ್ನಾಗಿ ಮಾಡುತ್ತದೆ. 1 ಪೇತ್ರ 3:7 ರಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ಪಾಲಿಸುವಾಗ ಪುರುಷರು ಅವರ ಹೆಂಡತಿಯರ ಕಡೆಗೆ ದಯೆಯುಳ್ಳವರಾಗುತ್ತಾರೆ: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” ತಮ್ಮ ಗಂಡಂದಿರಿಗೆ “ಭಯಭಕ್ತಿ” ಯನ್ನು ತೋರಿಸುವಾಗ ಸ್ತ್ರೀಯರು ದಯೆತೋರಿಸುವವರಾಗಿದ್ದಾರೆ. (ಎಫೆಸ 5:33) ಎಫೆಸ 6:4 ರಲ್ಲಿರುವ ಸಲಹೆಯನ್ನು ಅನುಸರಿಸುವಾಗ ತಂದೆಗಳು ತಮ್ಮ ಮಕ್ಕಳ ಕಡೆಗೆ ದಯೆತೋರಿಸುವವರಾಗಿದ್ದಾರೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ.”
17. ಪ್ರೀತಿಯು ಸತ್ಯಕ್ಕೆ ಜಯವಾಗುವುದನ್ನು ನೋಡಿ ಸಂತೋಷಪಡುವ ಎರಡು ವಿಧಗಳು ಯಾವುವು?
17 ಪ್ರೀತಿಯು ಅನ್ಯಾಯವನ್ನು ನೋಡಿ ಸಂತೋಷಪಡದೆ “ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ.” ಸತ್ಯ ಮತ್ತು ಪ್ರೀತಿಗಳು ಪರಸ್ಪರ ನಿಕಟವಾಗಿ ಮುಂದುವರಿಯುತ್ತವೆ—ದೇವರು ಪ್ರೀತಿಸ್ವರೂಪಿಯಾಗಿದ್ದಾನೆ, ಮತ್ತು ಅದೇ ಸಮಯದಲ್ಲಿ, ಆತನು “ಸತ್ಯ ದೇವರಾಗಿದ್ದಾನೆ.” (ಕೀರ್ತನೆ 31:5, NW) ಸತ್ಯವು ವಿಜಯಿಯಾಗುವುದನ್ನು ನೋಡುವಲ್ಲಿ ಪ್ರೀತಿಯು ಸಂತೋಷಗೊಳ್ಳುತ್ತದೆ ಮತ್ತು ಅಸತ್ಯವನ್ನು ಬಯಲುಪಡಿಸುತ್ತದೆ; ಇಂದು ಯೆಹೋವನ ಆರಾಧಕರ ಸಂಖ್ಯೆಯಲ್ಲಿ ಮಹತ್ತಾದ ಅಭಿವೃದ್ಧಿಯು ಸಂಭವಿಸುತ್ತಿರಲು ಇದು ಅಂಶಿಕವಾಗಿದೆ. ಹಾಗಿದ್ದರೂ, ಸತ್ಯವು ಅನ್ಯಾಯದೊಂದಿಗೆ ತದ್ವಿರುದ್ಧವಾಗಿರುವುದರಿಂದ, ಪ್ರೀತಿಯು ಬಹುಶಃ ನ್ಯಾಯವನ್ನು ನೋಡಿ ಸಂತೋಷಪಡುತ್ತದೆ ಎಂಬ ಅಭಿಪ್ರಾಯವಿರಬಹುದು. ಯೆಹೋವನ ಸಾಕ್ಷಿಗಳು, ಮಹಾ ಬಾಬೆಲಿನ ಪತನವಾಗುವಾಗ ಮಾಡಲು ಆಜ್ಞಾಪಿಸಲ್ಪಟ್ಟಂತೆಯೇ, ಪ್ರೀತಿಯು ನ್ಯಾಯಕ್ಕೆ ಜಯವಾಗುವುದನ್ನು ನೋಡಿ ಸಂತೋಷಪಡುತ್ತದೆ.—ಪ್ರಕಟನೆ 18:20.
18. ಯಾವ ಅರ್ಥದಲ್ಲಿ ಪ್ರೀತಿಯು ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ?
18 ಪೌಲನು ಇನ್ನೂ ನಮಗೆ ಹೇಳುವುದೇನಂದರೆ ಪ್ರೀತಿಯು “ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ.” ಕಿಂಗ್ಡಮ್ ಇಂಟರ್ಲಿನಿಯರ್ ತೋರಿಸುವಂತೆ, ಅದರ ಅಭಿಪ್ರಾಯವೇನಂದರೆ ಪ್ರೀತಿಯು ಎಲ್ಲಾ ವಿಷಯಗಳನ್ನು ಅಡಗಿಸುತ್ತದೆ. ದುಷ್ಟರು ಮಾಡಲು ಒಲವುಳ್ಳವರಾಗಿರುವಂತೆ, ಅದು ಸಹೋದರನೊಬ್ಬನ “ಪಾಪವನ್ನು ಎತ್ತಿ ಆಡುವುದಿಲ್ಲ.” (ಕೀರ್ತನೆ 50:20; ಜ್ಞಾನೋಕ್ತಿ 10:12; 17:9) ಹೌದು, 1 ಪೇತ್ರ 4:8 ರಲ್ಲಿರುವಂತೆಯೇ ಇಲ್ಲಿರುವ ಅಭಿಪ್ರಾಯವು ಒಂದೇ ಆಗಿದೆ: “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” ನಿಶ್ಚಯವಾಗಿಯೂ, ಯೆಹೋವನ ವಿರುದ್ಧ ಮತ್ತು ಕ್ರೈಸ್ತ ಸಭೆಯ ವಿರುದ್ಧ ಗಂಭೀರ ಪಾಪಗಳನ್ನು ಮುಚ್ಚದಂತೆ ನಿಷ್ಠೆಯು ಒಬ್ಬನನ್ನು ತಡೆಯುವುದು.
19. ಯಾವ ವಿಧದಲ್ಲಿ ಪ್ರೀತಿಯು ಎಲ್ಲವನ್ನೂ ನಂಬುತ್ತದೆ?
19 ಪ್ರೀತಿಯು “ಎಲ್ಲವನ್ನೂ ನಂಬುತ್ತದೆ.” ಪ್ರೀತಿಯು ನಕಾರಾತ್ಮಕವಾದುದಲ್ಲ, ಅದು ಸಕಾರಾತ್ಮಕವಾದದ್ದಾಗಿದೆ. ಪ್ರೀತಿಯು ಸುಲಭವಾಗಿ ಮೋಸಗೊಳ್ಳುತ್ತದೆಂದು ಇದರ ಅರ್ಥವಲ್ಲ. ಭಾವೋದ್ರೇಕಕಾರಿ ಹೇಳಿಕೆಗಳನ್ನು ನಂಬುವುದರಲ್ಲಿ ಪ್ರೀತಿಯು ಕ್ಷಿಪ್ರವಿಲ್ಲ. ಆದರೆ ಒಬ್ಬನು ದೇವರಲ್ಲಿ ನಂಬಿಕೆಯನ್ನಿಡಲು, ಅವನು ನಂಬಿಕೆಯನ್ನಿಡುವ ಅಪೇಕ್ಷೆಯುಳ್ಳವನಾಗಿರಬೇಕು. ಆದುದರಿಂದ ಪ್ರೀತಿಯು ಅನಿಶ್ಚಿತವಾದುದಲ್ಲ, ಅನುಚಿತವಾಗಿ ದೇವರೇ ಇಲ್ಲವೆಂದು ತಾತ್ತಿಕ್ವವಾಗಿ ಹೇಳಿಕೆಯನ್ನೀಯುವ ನಾಸ್ತಿಕನಂತೆ ನಂಬುವದನ್ನು ಅದು ಪ್ರತಿಭಟಿಸುವುದಿಲ್ಲ. ನಾವು ಎಲ್ಲಿಂದ ಬಂದೆವು, ನಾವು ಯಾಕೆ ಇಲ್ಲಿದ್ದೇವೆ, ಮತ್ತು ಭವಿಷ್ಯವು ಹೇಗಿರುವುದು, ಎಂಬುದನ್ನು ತಿಳಿಯುವುದು ಕೇವಲ ಅಸಾಧ್ಯವಾದದ್ದಾಗಿದೆ ಎಂದು ಸೈದ್ಧಾಂತಿಕವಾಗಿ ಪ್ರತಿಪಾದಿಸುವ, ಅಜೇಯ್ಞತಾ ವಾದಿಯಂತೆಯೂ ಇದು ಇಲ್ಲ. ಈ ಎಲ್ಲಾ ವಿಷಯಗಳ ಕುರಿತು ದೇವರ ವಾಕ್ಯವು ನಮಗೆ ಭರವಸೆಯನ್ನು ಕೊಡುತ್ತದೆ. ಪ್ರೀತಿಯು ಕೂಡ ಇದನ್ನು ನಂಬಲು ಸಿದ್ಧವಾಗಿದೆ ಯಾಕಂದರೆ ಅದು ಅನುಚಿತವಾಗಿ ಸಂಶಯಾಸ್ಪದವಾಗಿರುವದಿಲ್ಲ, ಅದು ವಿಶ್ವಾಸವುಳ್ಳದ್ದಾಗಿದೆ.
20. ಪ್ರೀತಿಯು ನಿರೀಕ್ಷೆಯೊಂದಿಗೆ ಹೇಗೆ ಸಂಬಂಧವನ್ನು ಹೊಂದಿದೆ?
20 ಅಪೊಸ್ತಲ ಪೌಲನು ಇನ್ನೂ ನಮಗೆ ಭರವಸೆಯನ್ನೀಯುವುದೇನಂದರೆ, ಪ್ರೀತಿಯು “ಎಲ್ಲವನ್ನೂ ನಿರೀಕ್ಷಿಸುತ್ತದೆ.” ಪ್ರೀತಿಯು ನಕಾರಾತ್ಮಕವಾಗಿರದೆ, ಸಕಾರಾತ್ಮಕವಾಗಿರುವುದರಿಂದ, ದೇವರ ವಾಕ್ಯದಲ್ಲಿ ವಾಗ್ದಾನಿಸಿರುವ ಎಲ್ಲಾ ವಿಷಯಗಳಲ್ಲಿಯೂ ಬಲವಾದ ನಿರೀಕ್ಷೆಯನ್ನು ಅದು ಹೊಂದಿದೆ. “ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುತ್ತದೆಂದು ಉಳುವದೂ, ಒಕ್ಕುವವನು ತನಗೆ ಪಾಲು ದೊರಕುತ್ತದೆಂದು ಒಕ್ಕುವದೂ ನ್ಯಾಯ,” ಎಂದು ನಮಗೆ ಹೇಳಲ್ಪಟ್ಟಿದೆ. (1 ಕೊರಿಂಥ 9:10) ಪ್ರೀತಿಯು ನಂಬಿಕೆಯುಳ್ಳದ್ದಾಗಿರುವಂತೆಯೇ, ಯಾವಾಗಲೂ ಒಳಿತಿಗಾಗಿ ನಿರೀಕ್ಷಿಸುವುದರಿಂದ, ಅದು ನಿರೀಕ್ಷೆಯುಳ್ಳದ್ದೂ ಆಗಿದೆ.
21. ಪ್ರೀತಿಯು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ ಎಂಬುದಕ್ಕೆ ಯಾವ ಶಾಸ್ತ್ರೀಯ ಭರವಸೆಯು ಇದೆ?
21 ಕೊನೆಯದಾಗಿ, ನಮಗೆ ಭರವಸೆಕೊಡಲ್ಪಟ್ಟಿದೆಯೇನಂದರೆ, ಪ್ರೀತಿಯು “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ಯಾವ ಕಾರಣದಿಂದ ಅದು ಹಾಗೆ ಮಾಡಲು ಶಕವ್ತಾಗಿದೆ ಎಂಬುದನ್ನು ಅಪೊಸ್ತಲ ಪೌಲನು 1 ಕೊರಿಂಥ 10:13 ರಲ್ಲಿ ನಮಗೆ ಹೇಳುತ್ತಾನೆ: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಇಬ್ರಿಯ 12:2, 3 ರಲ್ಲಿ ನಮಗೆ ಜ್ಞಾಪಿಸಲ್ಪಡುವಂತೆ, ತಾಳ್ಮೆಯಿಂದ ಸಹಿಸಿಕೊಂಡ ದೇವರ ಸೇವಕರ ಅನೇಕ ಉದಾಹರಣೆಗಳನ್ನು ಶಾಸ್ತ್ರವಚನಗಳಲ್ಲಿ ನೋಡುವಂತೆ ನಮಗೆ ಪ್ರೀತಿಯು ಪ್ರಚೋದನೆಯನ್ನೀಯುತ್ತದೆ, ಅವರಲ್ಲಿ ಅತಿ ಪ್ರಮುಖನಾದವನು ಯೇಸು ಕ್ರಿಸ್ತನಾಗಿದ್ದಾನೆ.
22. ದೇವರ ಮಕ್ಕಳಂತೆ, ಯಾವ ಸರ್ವೋತ್ಕೃಷ್ಟ ಗುಣವನ್ನು ವ್ಯಕ್ತಪಡಿಸುವುದರಲ್ಲಿ ನಾವು ಯಾವಾಗಲೂ ಆಸಕ್ತರಾಗಿರಬೇಕು?
22 ನಿಜವಾಗಿಯೂ, ಪ್ರೀತಿ (ಅಗಾಪೆ) ಸರ್ವೋತ್ಕೃಷ್ಟ ಗುಣವಾಗಿದ್ದು ನಾವು ಕ್ರೈಸ್ತರೋಪಾದಿ, ಯೆಹೋವನ ಸಾಕ್ಷಿಗಳೋಪಾದಿ, ಅದು ಏನಾಗಿದೆ ಮತ್ತು ಅದೇನಾಗಿಲ್ಲ ಎಂಬುದನ್ನು ಅಭ್ಯಾಸಿಸುವ ಆವಶ್ಯಕತೆಯಿದೆ. ದೇವರ ಮಕ್ಕಳಂತೆ, ನಾವು ದೇವರಾತ್ಮದ ಈ ಫಲವನ್ನು ವ್ಯಕ್ತಪಡಿಸುವುದರಲ್ಲಿ ಯಾವಾಗಲೂ ಆಸಕ್ತಿಯುಳ್ಳವರಾಗಿರೋಣ. ಹಾಗೆ ಮಾಡುವುದು ದೇವರಂತೆ ಇರುವುದಾಗಿದೆ. ಯಾಕಂದರೆ, ಜ್ಞಾಪಕದಲ್ಲಿಡಿ, “ದೇವರು ಪ್ರೀತಿಸ್ವರೂಪಿಯಾಗಿದ್ದಾನೆ.”
ನಿಮಗೆ ಜ್ಞಾಪಕವಿದೆಯೆ?
▫ ಯೇಸು ಕ್ರಿಸ್ತ ಮತ್ತು ಪೌಲರು ಪ್ರೀತಿಯ ಸರ್ವೋತ್ಕೃಷ್ಟತೆಯನ್ನು ಹೇಗೆ ತೋರಿಸಿದ್ದಾರೆ?
▫ ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ ಯಾವ ಅರ್ಥದಲ್ಲಿ?
▫ ಪ್ರೀತಿಯು ‘ಎಲ್ಲವನ್ನೂ ಸಹಿಸಿಕೊಳ್ಳುತ್ತದೆ’ ಹೇಗೆ?
▫ ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲವೆಂದು ಯಾಕೆ ಹೇಳ ಸಾಧ್ಯವಿದೆ?
▫ ಯಾವ ಎರಡು ವಿಧಗಳಲ್ಲಿ ಪ್ರೀತಿಯು ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ?
[ಪುಟ 21 ರಲ್ಲಿರುವ ಚೌಕ]
ಪ್ರೀತಿ (ಅಗಾಪೆ)
ಅದೇನಾಗಿಲ್ಲ ಅದೇನಾಗಿದೆ
1. ಅದು ಹೊಟ್ಟೆಕಿಚ್ಚುಪಡುವದಿಲ್ಲ 1. ತಾಳ್ಮೆ
2. ಹೊಗಳಿಕೊಳ್ಳುವದಿಲ್ಲ 2. ದಯೆ
3. ಉಬ್ಬಿಕೊಳ್ಳುವದಿಲ್ಲ 3. ಸತ್ಯಕ್ಕೆ ಜಯವಾಗುವಲ್ಲಿ
ಸಂತೋಷಪಡುತ್ತದೆ
4. ಮರ್ಯಾದೆಗೆಟ್ಟು ನಡೆಯುವದಿಲ್ಲ 4. ಎಲ್ಲವನ್ನೂ
ಅಡಗಿಸಿಕೊಳ್ಳುತ್ತದೆ
5. ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ 5. ಎಲ್ಲವನ್ನೂ ನಂಬುತ್ತದೆ
6. ಸಿಟ್ಟುಗೊಳ್ಳುವದಿಲ್ಲ 6. ಎಲ್ಲವನ್ನೂ ನಿರೀಕ್ಷಿಸುತ್ತದೆ
7. ಅಪಕಾರವನ್ನು ಮನಸ್ಸಿನಲ್ಲಿ 7. ಎಲ್ಲವನ್ನೂ
ಇಟ್ಟುಕೊಳ್ಳುವದಿಲ್ಲ ಸಹಿಸಿಕೊಳ್ಳುತ್ತದೆ
8. ಅನ್ಯಾಯವನ್ನು ನೋಡಿ ಸಂತೋಷಪಡುವದಿಲ್ಲ
9. ಎಂದಿಗೂ ಬಿದ್ದು ಹೋಗುವದಿಲ್ಲ
[ಪುಟ 18 ರಲ್ಲಿರುವ ಚಿತ್ರಗಳು]
ನೆಬೂಕದ್ನೆಚ್ಚರನು ಬಡಾಯಿ ಕೊಚ್ಚಿಕೊಂಡದರ್ದಿಂದ ಯೆಹೋವನು ಅವನನ್ನು ದೀನಾವಸೆಗ್ಥೆ ತಂದನು