ವಾಗ್ದಾನ ದೇಶದಿಂದ ದೃಶ್ಯಗಳು
ಗಲಿಲಾಯದ ಸಮುದ್ರ ಸಂಚಾರಕ್ಕೆ ಬನ್ನಿರಿ!
ಬೈಬಲ್ ವಾಚಕರ ಮನಸ್ಸುಗಳಿಗೆ ಕೆಲವು ದೃಶ್ಯಗಳು ಗಲಿಲಾಯ ಸಮುದ್ರಕ್ಕಿಂತ ಹೆಚ್ಚು ಸುಲಭವಾಗಿ ಬರುತ್ತವೆ. ಆದರೂ ನೀವು ನಿಮ್ಮ ಕಣಳ್ಗನ್ನು ಮುಚ್ಚಿ, ಈ ತಿಳಿನೀರ ಸಮುದ್ರವನ್ನು ಕಲ್ಪಿಸಿಕೊಳ್ಳುತ್ತಾ, ಎಲ್ಲಿ ಯೊರ್ದನ್ ಹೊಳೆಯು ಒಳಸೇರುತ್ತದೆ ಮತ್ತು ನಿರ್ಗಮಿಸುತ್ತದೆ ಅಥವಾ ಕಪೆರ್ನೌಮ್ ಮತ್ತು ತಿಬೇರಿಯಗಳು ನೆಲೆಸಿರುವುದೆಲ್ಲಿ ಮುಂತಾದ ಮುಖ್ಯ ಸ್ಥಳಗಳನ್ನು ಕಂಡುಹಿಡಿಯ ಸಾಧ್ಯವಿದೆಯೋ?.
ಒಳಸೇರಿಕೆಯ ಫಲಕವನ್ನು ಹೋಲಿಸುತ್ತಾ, ವಿಮಾನದಿಂದ ತೆಗೆದ ಕೆಳಗಿನ ದೃಶ್ಯವನ್ನು ಅಧ್ಯಯನಿಸಲು ಸಮಯ ತೆಗೆದುಕೊಳ್ಳಿರಿ. ಸಂಖ್ಯೆ ಸೂಚಿತವಾದ ಎಷ್ಟು ಸ್ಥಳಗಳನ್ನು ನೀವು ಗುರುತಿಸಬಲ್ಲಿರಿ? ಅವುಗಳ ಕುರಿತು ಎಷ್ಟು ಹೆಚ್ಚನ್ನು ನೀವು ತಿಳಿಯುತ್ತೀರೋ ಅಷ್ಟು ಹೆಚ್ಚಾಗಿ ಬೈಬಲು ನಿಮಗೆ ಆಸಕ್ತಿಭರಿತವೂ ನೈಜವೂ ಆಗಿದ್ದು, ಅರ್ಥಭರಿತವಾಗಿರುವುದು. ಅದಕ್ಕಾಗಿಯೇ, ಒಂದು ಸಂಕ್ಷಿಪ್ತವಾದ, ಬೋಧಪ್ರದ ಸಂಚಾರಕ್ಕಾಗಿ ನಮ್ಮೊಂದಿಗೆ ಬನ್ನಿರಿ.
ವಿಮಾನದಿಂದ ತೆಗೆದ ಈ ದೃಶ್ಯವು ಈಶಾನ್ಯ ದಿಕ್ಕಿಗೆ ನೋಡುತ್ತಿದೆ. ನಾವು #1 ರಿಂದ ಪ್ರಾರಂಭಿಸೋಣ. ಸಮುದ್ರದ ಯಾವ ಭಾಗವು ಅದಾಗಿದೆ? ಹೌದು, ಎಲ್ಲಿ ಯೊರ್ದನ್ ನಿರ್ಗಮಿಸುತ್ತಾ, ಸಮಾರ್ಯ ಮತ್ತು ಗಿಲ್ಯಾದ್ನ ನಡುವೆ ಮುಂದೊತ್ತಿ ಇಳಿದು, ಮೃತ ಸಮುದ್ರದೊಳಗೆ ಬರಿದಾಗುವ ಆ ದಕ್ಷಿಣ ಕಿನಾರೆ ಅದಾಗಿದೆ. ಎಡಗಡೆಯಲ್ಲಿ ನಿಮಗೆ ಸಮುದ್ರದ ಈ ಮೂಲೆಯ ಸಮೀಪ ದೃಶ್ಯವು ತೋರುತ್ತದೆ, ಇದು 1993 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನಲ್ಲಿ ಸಹ ತೋರಿಸಲ್ಪಟ್ಟಿದೆ.
ಗಲಿಲಾಯ ಸಮುದ್ರವು ಭೂಮಧ್ಯ ಸಮುದ್ರದ ಸುಮಾರು 200 ಮೀಟರ್ ಕೆಳಗಡೆ ನೆಲ ಬಿರುಕಿನ ಕಮರಿಯಲ್ಲಿ ಆಳವಾಗಿ ನೆಲೆಸಿರುತ್ತದೆ. ವಿಮಾನದಿಂದ ತೆಗೆದ ದೃಶ್ಯವನ್ನು ನೀವು ಪರೀಕ್ಷಿಸುವಲ್ಲಿ, ಅದರ ಪೂರ್ವ ದಡದಿಂದ (#7ರ ಸುತ್ತುಮುತ್ತ) ಗುಡ್ಡಗಳು ಆರೋಹಿಸುವುದನ್ನು ಗಮನಿಸಿರಿ. ಹತ್ತಿರದ ಅಥವಾ ಪಶ್ಚಿಮ ದಡದಿಂದಲೂ ಗುಡ್ಡಗಳು ಮತ್ತು ಬೆಟ್ಟಗಳು ಮೇಲಕ್ಕೆ ಕಾಣಿಸಿಕೊಂಡು, ಈ ಸಮುದ್ರವು ತಗ್ಗು ಪ್ರದೇಶದಲ್ಲಿ ನೆಲೆಸಿದೆಯೆಂಬದನ್ನು ಒತ್ತಿಹೇಳುತ್ತದೆ, ಈ ಸಮುದ್ರವು ಸುಮಾರು 21 ಕಿಲೊಮೀಟರ್ ಉದ್ದವಿದ್ದು ಹೆಚ್ಚೆಂದರೆ 12 ಕಿಲೊಮೀಟರ್ ಅಗಲವಿದೆ. ದಡಗಳಲ್ಲಿ ಹಳ್ಳಿಗಳಿಗೆ ಮತ್ತು ತಿಬೇರಿಯ (#2) ದಂತಹ ಶಹರಗಳಿಗೂ ಸ್ಥಳವಿತ್ತು. ತಿಬೇರಿಯದಿಂದ ಬಂದ ಒಂದು ಗುಂಪು ದೋಣಿಯಲ್ಲಿ ಸಮುದ್ರವನ್ನು ದಾಟಿ ಎಲ್ಲಿ ಯೇಸು ಅದ್ಭುತಕರವಾಗಿ 5,000 ಜನರಿಗೆ ಉಣಿಸಿದನೋ ಅಲ್ಲಿಗೆ ಬಂದದ್ದನ್ನು ನೆನಪಿಸಿಕೊಳ್ಳಿರಿ.—ಯೋಹಾನ 6:1, 10, 17, 23.
ತಿಬೇರಿಯದ ಉತ್ತರ ತೀರದ ಉದ್ದಕ್ಕೂ ನೀವು ಚಲಿಸುತ್ತಿರುವಾಗ, ಗೆನೆಜರೇತಿನ (#3)a ಫಲವತ್ತಾದ ಪ್ರದೇಶವನ್ನು ನೀವು ದಾಟುತ್ತೀರಿ. ಈ ಕ್ಷೇತ್ರದಲ್ಲಿ ಯೇಸು ಪರ್ವತ ಪ್ರಸಂಗವನ್ನು ಕೊಟ್ಟನು, ಮತ್ತು ಸಮೀಪದ ದಡದ ಮೇಲೆ ಆತನು ಪೇತ್ರನನ್ನು ಮತ್ತು ಬೇರೆ ಮೂವರನ್ನು, ಇಲ್ಲಿ ಚಿತ್ರಿಸಿದಂತೆ, “ಮನುಷ್ಯರನ್ನು ಹಿಡಿಯುವ ಬೆಸ್ತ” ರಾಗುವುದಕ್ಕಾಗಿ ಕರೆದಿರ ಸಾಧ್ಯವಿದೆ. (ಮತ್ತಾಯ 4:18-22) ಮುಂದಕ್ಕೆ ಪಯಣಿಸುತ್ತಾ, ಯೇಸುವಿನ ಚಟುವಟಿಕೆಗಳಿಗೆ ಕೇಂದ್ರವಾಗಿದ್ದ ಮತ್ತು ಅವನ “ಸ್ವಂತ ಊರು” ಎಂಬದಾಗಿ ಸಹ ನಿರ್ದೇಶಿಸಲ್ಪಟ್ಟ ಕಪೆರ್ನೌಮ್ (#4)ಗೆ ನೀವು ಬರುತ್ತೀರಿ. (ಮತ್ತಾಯ 4:13-17; 9:1, 9-11; ಲೂಕ 4:16, 23, 31, 38-41) ಸಮುದ್ರದ ಸುತ್ತಲೂ ಪೂರ್ವಾಭಿಮುಖವಾಗಿ ಮುಂದರಿಯುತ್ತಾ, ಎಲ್ಲಿ ಮೇಲ್ಭಾಗದ ಯೊರ್ದನ್ (ಕೆಳಗೆ) ಸಮುದ್ರದೊಳಗೆ ಹರಿಯುತ್ತದೋ ಅದನ್ನು ಅಡ್ಡ ಹಾಯುತ್ತೀರಿ (#5). ಅನಂತರ ನೀವು ಬರುವುದು ಬೇತ್ಸಾಯಿದ (#6)ದ ಕ್ಷೇತ್ರಕ್ಕೆ.
ಗಲಿಲಾಯ ಸಮುದ್ರದ ಕುರಿತ ನಿಮ್ಮ ಜ್ಞಾನವು ಬೈಬಲ್ ವೃತ್ತಾಂತಗಳನ್ನು ಹಿಂಬಾಲಿಸಲು ಮತ್ತು ಕಲ್ಪಿಸಿಕೊಳ್ಳಲು ನಿಮಗೆ ಹೇಗೆ ಸಹಾಯ ಮಾಡಬಲ್ಲದೆಂದು ಚಿತ್ರಿಸಲು, ಈ ಕೆಲವೇ ಸ್ಥಳಗಳನ್ನು ಸಹ ನಾವು ಉಪಯೋಗಿಸಬಲ್ಲೆವು. ಬೇತ್ಸಾಯಿದದ ಕ್ಷೇತ್ರದಲ್ಲಿ ಯೇಸು 5,000 ಮಂದಿಗೆ ಉಣಿಸಿದ ಮತ್ತು ಗುಂಪು ಅವನನ್ನು ಅರಸನಾಗಿ ಮಾಡಲು ಪ್ರಯತ್ನಿಸಿದ ಮೇಲೆ, ಅವನು ಅಪೊಸ್ತಲರನ್ನು ದೋಣಿಯ ಮೂಲಕ ಕಪೆರ್ನೌಮಿಗೆ ಕಳುಹಿಸಿದನು. ಅವರ ಸಮುದ್ರಯಾನ ಸಮಯದಲ್ಲಿ, ಬೆಟ್ಟಗಳಾಚೆಯಿಂದ ಬಿರುಗಾಳಿ ಥಟ್ಟನೆ ಬೀಸುತ್ತಾ ತೆರೆಗಳನ್ನೆಬ್ಬಿಸಿ ಅಪೊಸ್ತಲರನ್ನು ಹೆದರಿಸಿಬಿಟ್ಟಿತು. ಆದರೆ ಯೇಸು ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದನು, ಬಿರುಗಾಳಿಯನ್ನು ಶಾಂತಗೊಳಿಸಿದನು, ಮತ್ತು ಅವರು ಗೆನೆಜರೇತಿನ ಬಳಿ ಸುರಕ್ಷಿತವಾಗಿ ದಡಸೇರುವಂತೆ ಶಕ್ಯಮಾಡಿದನು. (ಮತ್ತಾಯ 14:13-34) ತಿಬೇರಿಯದಿಂದ ಬಂದವರು ಪುನಃ ದಾಟಿ ಕಪೆರ್ನೌಮಿಗೆ ಹೋದರು.— ಯೋಹಾನ 6:15, 23, 24.
ಸಮುದ್ರದ ಪೂರ್ವ ಪಕ್ಕದ ಸುತ್ತಲೂ ಮುಂದುವರಿಯುತ್ತಾ, “ಗದರೇನರ [ಅಥವಾ, ಗರಸೇನರ] ಸೀಮೆ” ಎಂದು ನಿರ್ದೇಶಿಸ ಸಾಧ್ಯವಿರುವ ಸ್ಥಳವನ್ನು ನೀವು ದಾಟುತ್ತೀರಿ. ಇಲ್ಲಿ ಯೇಸು ಇಬ್ಬರು ಪುರುಷರೊಳಗಿಂದ ದೆವ್ವಗಳನ್ನು ಬಿಡಿಸಿದನೆಂದು ನೆನಪಿಸಿಕೊಳ್ಳಿರಿ. ಆ ದೆವ್ವಗಳು ಕ್ರೌರ್ಯರತಿ ತೃಪ್ತಿಗಾಗಿ ಹಂದಿಗಳ ಒಂದು ದೊಡ್ಡ ಹಿಂಡಿನೊಳಗೆ ಹೊಕ್ಕಿದವು, ಆಗ ಹಂದಿಗಳೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದವು. ತದನಂತರ ಆ ಪುರುಷರಲ್ಲೊಬ್ಬನು ಸಮೀಪದ ದೆಕಪೊಲಿಸಿನ ಗ್ರೀಕ್-ಭಾಷೆಯನ್ನಾಡುವ ಶಹರಗಳಲ್ಲಿ ಒಂದು ಸಾಕ್ಷಿಯನ್ನಿತ್ತನು. ಗಲಿಲಾಯ ಸಮುದ್ರವನ್ನು ದೋಣಿಯಿಂದ ದಾಟಿ ಯೇಸು ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದನು ಮತ್ತು ಹೊರಟುಹೋಗುತ್ತಿದ್ದನು.—ಮತ್ತಾಯ 8:28–9:1; ಮಾರ್ಕ 5:1-21.
ಸಮುದ್ರದ ಕೆಳಭಾಗದ ಕೊನೆಯೆಡೆಗೆ ನಿಮ್ಮ ಸಂಚಾರವನ್ನು ಕೊನೆಗೊಳಿಸುವಾಗ, ಎಲ್ಲಿ (ಯಾರ್ಮಕ್ ಎಂದು ಕರೆಯಲ್ಪಡುವ) ಒಂದು ದೊಡ್ಡ ಹೊಳೆಯು ಕೆಳಗೆ ಹರಿಯುತ್ತಾ ಕೆಳಭಾಗದ ಯೊರ್ದನ್ ಹೊಳೆಗೆ ಬಹಳಷ್ಟು ಜಲವನ್ನು ತರುತ್ತದೋ ಅದರ ಸಮೀಪ ಹಾದುಹೋಗುತ್ತೀರಿ.
ಪೇತ್ರ ಮತ್ತು ಇತರ ಅಪೊಸ್ತಲರು ಮೀನು ಹಿಡಿಯುತ್ತಿದ್ದಾಗ ಯೇಸುವಿನ ಪುನರುತ್ಥಾನದ ಅನಂತರದ ಕಾಣಿಸಿಕೊಳ್ಳುವಿಕೆಯೇ ಮುಂತಾದ ಗಲಿಲಾಯ ಸಮುದ್ರದ ಸುತ್ತಲು ನಡೆದ ಕೆಲವು ಘಟನೆಗಳ ಸ್ಥಳವನ್ನು ಬೈಬಲ್ ನಿರ್ದಿಷ್ಟವಾಗಿ ನಮೂದಿಸುವುದಿಲ್ಲ (ಕೆಳಗೆ). ಅದು ಕಪೆರ್ನೌಮಿನ ಸಮೀಪವಿತ್ತೆಂದು ನೀವು ನೆನಸುತ್ತೀರೋ? ಹೇಗಾದರೂ, ಈ ಪ್ರಾಮುಖ್ಯ ಸಮುದ್ರದ ಕುರಿತ ನಿಮ್ಮ ಜ್ಞಾನವು ನಿಮಗೆ ಆ ಸಂಭವನೀಯತೆಯನ್ನು ಕಲ್ಪಿಸಿಕೊಳ್ಳಲು ಸಹಾಯಮಾಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a “ಗೆನೆಜರೇತ್—‘ಆಶ್ಚರ್ಯಕರ ಮತ್ತು ಮನೋಹರ’” ಎಂಬ ಎಪ್ರಿಲ್ 1, 1992ರ ಕಾವಲಿನಬುರುಜು ಲೇಖನವನ್ನು ನೋಡಿರಿ.
[ಪುಟ 24 ರಲ್ಲಿರುವ ಚಿತ್ರಗಳು]
1
2
3
4
5
6
7
ಉ
ದ
ಪೂ
ಪ
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 24,25 ರಲ್ಲಿರುವ ಚಿತ್ರ ಕೃಪೆ]
Garo Nalbandian
[ಪುಟ 25 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.