ಬೈಬಲು—ಓದಬೇಕಾಗಿರುವ ಒಂದು ಗ್ರಂಥ
ಬೈಬಲಿನ ಕುರಿತು ಒಬ್ಬನು ಮಾತಾಡುತ್ತಿರುವಾಗ ಅತಿಶಯೋಕಿಗ್ತಳು ಮುಗಿದು ಹೋಗುವುದು ಸುಲಭವಾಗಿದೆ. ಇತಿಹಾಸದಲ್ಲೆಲ್ಲಾ ಇದು ಬಹುಮಟ್ಟಿಗೆ ಅತ್ಯಂತ ವ್ಯಾಪಕವಾಗಿ ವಿತರಣೆ ಮಾಡಲ್ಪಟ್ಟ ಪುಸ್ತಕವಾಗಿದೆ. ಅತ್ಯಂತ ಪ್ರಾಚೀನ, ಅಧಿಕ ಸಂಖ್ಯೆಯಲ್ಲಿ ಭಾಷಾಂತರಿಸಲ್ಪಟ್ಟ, ಅತ್ಯಧಿಕವಾಗಿ ಉದ್ಧರಿಸಲ್ಪಟ್ಟ, ಅತ್ಯಂತ ಪ್ರಭಾವಕಾರಿಯಾದ, ಮತ್ತು ಅತ್ಯಂತ ಗೌರವಾರ್ಹ ಪುಸ್ತಕವು ಬೈಬಲಾಗಿದೆ. ಬಹುಶಃ ಅತ್ಯಂತ ವಿವಾದಾತ್ಮಕವಾದ ಪುಸ್ತಕವೂ ಇದಾಗಿದೆ. ಮತ್ತು ಅಧಿಕಾಂಶ ನಿಷೇಧಗಳು, ದಹಿಸುವಿಕೆಗಳು, ಮತ್ತು ಹಿಂಸಾತ್ಮಕ ವಿರೋಧವನ್ನು ಪಾರಾಗಿರುವ ಪುಸ್ತಕವು ಇದಾಗಿದೆಯೆಂಬುದು ನಿಶ್ಚಯ. ಆದರೂ, ಅಸಂತೋಷಕರವಾಗಿಯೆ, ಬೈಬಲಿಗೆ ಇನ್ನು ಮೇಲೆ ಅನ್ವಯಿಸಸಾಧ್ಯವಿಲ್ಲದ ಒಂದು ಅತಿಶಯೋಕ್ತಿ ಇದೆ. ಲೋಕದಲ್ಲಿ ಅತ್ಯಂತ ವ್ಯಾಪಕವಾಗಿ ಓದಲಾಗುತ್ತಿರುವ ಪುಸ್ತಕವು ಅದಾಗಿರುವುದು ಅಸಂಭವನೀಯ.
ಜನರ ಮನೆಯಲ್ಲಿ ಎಲ್ಲಿಯೋ ಒಂದು ಬೈಬಲ್ ಇರಬಹುದಾದರೂ, ವಾಸ್ತವವಾಗಿ ಅದನ್ನು ಓದಲಿಕ್ಕಾಗಿ ಸಮಯವನ್ನು ವ್ಯಯಿಸಲು ತಾವು ತೀರ ಕಾರ್ಯಮಗ್ನರಾಗಿದ್ದೇವೆಂದು ಅನೇಕರು ಭಾವಿಸುತ್ತಾರೆ. ಹಿಂದೊಮ್ಮೆ ಓದುವಿಕೆಯು ಒಂದು ಜನಪ್ರಿಯ ಕಾಲಕ್ಷೇಪವಾಗಿತ್ತು. ಹಾಗಿದ್ದರೂ, ಈಗ, ಅಧಿಕಾಂಶ ಜನರು ಟೆಲಿವಿಷನ್ ವೀಕ್ಷಿಸುವುದರಲ್ಲಿ ಅಥವಾ ಬೇರೇನನ್ನಾದರೂ ಮಾಡುವುದರಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಆದರೆ ಸ್ವಲ್ಪ ಓದುವಿಕೆಯನ್ನು ಇನ್ನೂ ಮಾಡುವವರು ಸಾಮಾನ್ಯವಾಗಿ ಕಡಮೆ ಪ್ರಯತ್ನವನ್ನು ಅಗತ್ಯಪಡಿಸುವ ಅಥವಾ ಸುಲಭವಾದ ಏನನ್ನಾದರೂ ಓದಲು ಬಯಸುತ್ತಾರೆ. ಬೈಬಲನ್ನು ಓದಲು ಏಕಾಗ್ರತೆ ಬೇಕು, ಮತ್ತು ಅಧಿಕಾಂಶ ಜನರು ತಾವು ಓದುತ್ತಿರುವ ವಿಷಯದಲ್ಲಿ ಹಿಂದಿನಂತೆ ಗಾಢವಾಗಿ ಗಮನವನ್ನು ಕೇಂದ್ರೀಕರಿಸುವುದಿಲ್ಲ.
ಆದರೂ, ಕೇವಲ ನಮ್ಮ ಪುಸ್ತಕದ ಬೀರುಗಳಲ್ಲಿ ಸ್ಥಿರವಾಗಿ ಕುಳಿತುಕೊಳ್ಳಲಿಕ್ಕಾಗಿ ಬೈಬಲು ಉಳಿಯಲಿಲ್ಲ. ಅದನ್ನು ಯಾಕೆ ಓದಬೇಕು ಎಂಬುದಕ್ಕೆ ಸಕಾರಣಗಳಿವೆ. ಅದರ ಕುರಿತು ಕೆಲವು ಸಂಗತಿಗಳನ್ನು ಗಮನಿಸಿ.
ಅದು ಬಾಳಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ!
“ಬೈಬಲ್” ಎಂಬ ಶಬ್ದವು, ಬಿಬಿಯ್ಲಾ—“ಸಣ್ಣ ಪುಸ್ತಕಗಳು”—ಎಂಬರ್ಥ ಕೊಡುವ ಗ್ರೀಕ್ ಶಬ್ದದಿಂದ ಬಂದಿದೆ. ಬೈಬಲು ಅನೇಕ ಪುಸ್ತಕಗಳಿಂದ—ಕೆಲವು ತೀರ ಸಣ್ಣಪುಸ್ತಕಗಳಲ್ಲ—ಮಾಡಲ್ಪಟ್ಟಿದೆ ಎಂಬುದನ್ನು ಇದು ನಮಗೆ ಜ್ಞಾಪಿಸುತ್ತದೆ! ಒಂದು ಸಾವಿರದ ಆರುನೂರು ವರುಷಗಳ ಕಾಲಾವಧಿಯಲ್ಲಿ ಅವುಗಳು ಬರೆಯಲ್ಪಟ್ಟಿವೆ. ಮಾನವರು ಅದರ ಬರಹಗಾರರಾಗಿದ್ದಾಗ್ಯೂ, ಹೆಚ್ಚು ಉನ್ನತವಾದ ಮೂಲವೊಂದರಿಂದ ಅವರು ಪ್ರೇರಿಸಲ್ಪಟ್ಟಿದ್ದರು. ಬೈಬಲಿನ ಒಬ್ಬ ಬರಹಗಾರನು ಅಂದದ್ದು: “ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಶಾಸ್ತ್ರೀಯ ಪ್ರವಾದನೆಯ ಕುರಿತು ಯಾವುದು ಸತ್ಯವಾಗಿದೆಯೊ ಅದು ಬೈಬಲಿನ ಉಳಿದ ವಿಷಯದ ಕುರಿತು ಸಹ ಸತ್ಯವಾಗಿದೆ. ದೈವ ಪ್ರೇರಿತವಾದ ಈ “ಸಣ್ಣ ಪುಸ್ತಕಗಳು” ಯೆಹೋವ ದೇವರ ಮಹೋನ್ನತ ಆಲೋಚನೆಗಳಿಂದ ತುಂಬಿವೆ. (ಯೆಶಾಯ 55:9) ಬೈಬಲು ಇಷ್ಟು ದೀರ್ಘವಾಗಿ ಬಾಳಿರುವುದರಲ್ಲಿ ಆಶ್ಚರ್ಯವಿಲ್ಲ!
ದೇವರ ಸೇವಕರಿಗೆ, ಬೈಬಲ್ ಯಾವಾಗಲೂ ಅತ್ಯಂತ ಪ್ರಧಾನ ಪುಸ್ತಕವಾಗಿದೆ. ಬೈಬಲ್ ಬರಹಗಾರರಲ್ಲಿ ಸ್ವತಃ ಒಬ್ಬನಾದ, ಅಪೊಸ್ತಲ ಪೌಲನೊಂದಿಗೆ ಅವರು ಸಮ್ಮತಿಸುತ್ತಾರೆ. ಆತನಂದದ್ದು: “ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ ಮತ್ತು ಉಪದೇಶಕ್ಕೆ ಉಪಯುಕ್ತವಾಗಿದೆ.” (2 ತಿಮೊಥೆಯ 3:16, NW) ಅದಕ್ಕನುಸಾರವಾಗಿ, ಇಂದು ಬೈಬಲು ಯೆಹೋವನ ಸಾಕ್ಷಿಗಳ ನಂಬಿಕೆಗೆ ಆಧಾರವಾಗಿದೆ. ಅದು ಅವರ ತತ್ವಗಳನ್ನು ಖಚಿತಪಡಿಸುತ್ತದೆ ಮತ್ತು ಅವರ ನಡತೆಯನ್ನು ಆಳುತ್ತದೆ. ಪ್ರತಿಯೊಬ್ಬರೂ ದೇವರ ವಾಕ್ಯದ ಸ್ವಲ್ಪ ಭಾಗವನ್ನು ಪ್ರತಿದಿನ ಓದುವುದನ್ನು ಮತ್ತು ಅದರ ಒಳವಿಷಯಗಳ ಮೇಲೆ ಮೆಚ್ಚಿಗೆಯಿಂದ ಮನನ ಮಾಡುವುದನ್ನು ಅವರು ಮನಃಪೂರ್ತಿಯಾಗಿ ಶಿಫಾರಸ್ಸು ಮಾಡುತ್ತಾರೆ.—ಕೀರ್ತನೆ 1:1-3.
ಬೈಬಲ್ ಓದುವಿಕೆಯ ಅಭ್ಯಾಸ
ಗತಕಾಲಗಳಲ್ಲಿ ಶಾಸ್ತ್ರವಚನಗಳನ್ನು ಓದುವ ಅಭ್ಯಾಸವು ಪ್ರಯೋಜನಕಾರಿಯಾಗಿತ್ತು. ಧರ್ಮಶಾಸ್ತ್ರದ—ಈಗ ಬೈಬಲಿನ ಪ್ರಾಮುಖ್ಯವಾದ ಒಂದು ಭಾಗ—ತಮ್ಮ ಸ್ವಂತ ಕೈಬರಹದ ಪ್ರತಿಯನ್ನು ಮಾಡುವಂತೆ ಮತ್ತು ತಮಗಾಗಿ ದೇವರ ಚಿತ್ತದ ನಿರಂತರ ಮರುಜ್ಞಾಪನದೋಪಾದಿ ಅದನ್ನು ದಿನಾಲೂ ಓದುವಂತೆ ಇಸ್ರಾಯೇಲ್ಯ ಅರಸರು ಆಜ್ಞಾಪಿಸಲ್ಪಟ್ಟಿದ್ದರು. (ಧರ್ಮೋಪದೇಶಕಾಂಡ 17:18-20) ಇದನ್ನು ಮಾಡಲು ತಪ್ಪುವಿಕೆಯು ಅನೇಕ ಅರಸರಿಗೆ ಅವನತಿಯನ್ನುಂಟುಮಾಡಿತು.
ವೃದ್ಧನಾದ ಪ್ರವಾದಿ ದಾನಿಯೇಲನ ವಿಷಯದಲ್ಲಿ, ಶಾಸ್ತ್ರವಚನಗಳನ್ನು ಅಭ್ಯಸಿಸುವುದರ ಮಹತ್ವವು ಉದಾಹರಿಸಲ್ಪಡುತ್ತದೆ. ತನ್ನ ದಿನದಲ್ಲಿ ಅಸ್ತಿತ್ವದಲ್ಲಿದ್ದ ಬೈಬಲಿನ ಭಾಗಗಳನ್ನು ವೈಯಕ್ತಿಕವಾಗಿ ಅಭ್ಯಸಿಸಿದ್ದ ಕಾರಣದಿಂದಾಗಿ, ದಾನಿಯೇಲನು ಬಾಬೆಲಿನಲ್ಲಿ ದೇಶಭ್ರಷ್ಟನಾಗಿದ್ದಾಗ, ಯೆರೆಮೀಯನಿಂದ ದಾಖಲಿಸಲ್ಪಟ್ಟ, ನೆರವೇರಲಿಕ್ಕಿದ್ದ ಪ್ರಾಮುಖ್ಯವಾದ ಪ್ರವಾದನೆಯ ಕುರಿತು ‘ಶಾಸ್ತ್ರಗಳ ಮೂಲಕ ಅರಿತುಕೊಳ್ಳಲು’ ಶಕ್ತನಾಗಿದ್ದನು.—ದಾನಿಯೇಲ 9:2.
ಯೇಸುವಿನ ಜನನದ ಸಮಯದಲ್ಲಿ, ಕ್ರಿಸ್ತನು ಅಥವಾ ಮೆಸ್ಸೀಯನಾಗಿ ಬರುವಾತನೊಬ್ಬನನ್ನು ಕಾಣಲು “ನೀತಿವಂತನೂ ದೇವಭಕ್ತನೂ” ಆದ ಸಿಮೆಯೋನನು ಭರವಸೆಯಿಂದ ನಿರೀಕ್ಷಿಸುತ್ತಿದ್ದನು. ಕ್ರಿಸ್ತನನ್ನು ಕಾಣುವದಕ್ಕಿಂತ ಮುಂಚೆ ಆತನು ಸಾಯುವದಿಲ್ಲವೆಂದು ಸಿಮೆಯೋನನು ವಾಗ್ದಾನಿಸಲ್ಪಟ್ಟಿದ್ದನು. ಶಿಶುವಾಗಿದ್ದ ಯೇಸುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡಿರುವಾಗ, ಯೆಶಾಯನ ಪ್ರವಾದನೆಗೆ ಆತನ ಪ್ರಾಸಂಗಿಕ ಸೂಚನೆಯು ತೋರಿಸುವುದೇನಂದರೆ, ಸಿಮೆಯೋನನು ತನ್ನ ದಿನಗಳಲ್ಲಿ ಈ ಮೊದಲೇ ಬರೆಯಲ್ಪಟ್ಟಿದ್ದ ಬೈಬಲಿನ ಪುಸ್ತಕಗಳ ಲಕ್ಷ್ಯವಿಡುವ ಓದುಗಾರನಾಗಿದ್ದನು.—ಲೂಕ 2:25-32; ಯೆಶಾಯ 42:6.
ಸ್ನಾನಿಕನಾದ ಯೋಹಾನನು ಸಾರುತ್ತಿದ್ದಾಗ, ಮೆಸ್ಸೀಯನನ್ನು “ಜನರು . . . . ಎದುರುನೋಡುವವರಾಗಿದ್ದರು.” ಇದು ಏನನ್ನು ಸೂಚಿಸುತ್ತದೆ? ಯೆಹೂದ್ಯರಲ್ಲಿ ಅನೇಕರು ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿದ್ದ ಮೆಸ್ಸೀಯ ಸಂಬಂಧಿತ ಪ್ರವಾದನೆಗಳೊಂದಿಗೆ ಪರಿಚಿತರಾಗಿದ್ದರೆಂದು ಇದು ಸೂಚಿಸುತ್ತದೆ. (ಲೂಕ 3:15) ಅಂದಿನ ದಿನಗಳಲ್ಲಿ ಪುಸ್ತಕಗಳು ಸುಲಭವಾಗಿ ದೊರೆಯುತ್ತಿರಲ್ಲಿಲ್ಲವಾದುದರಿಂದ ಇದು ಸ್ವಾರಸ್ಯವುಳ್ಳದ್ದಾಗಿದೆ. ಬೈಬಲಿನ ಪುಸ್ತಕಗಳ ಪ್ರತಿಗಳನ್ನು ಶ್ರಮ ತೆಗೆದುಕೊಳ್ಳುವ ಮೂಲಕ ಕೈಯಿಂದ ಮಾಡಬೇಕಿತ್ತು, ಮತ್ತು ಅದಕ್ಕನುಗುಣವಾಗಿ ಅವುಗಳು ದುಬಾರಿಯಾಗಿದ್ದವು ಹಾಗು ಪಡೆದುಕೊಳ್ಳುವುದು ಕಷ್ಟವಾಗಿತ್ತು. ಜನರು ಅವುಗಳ ಒಳವಿಷಯಗಳೊಂದಿಗೆ ಹೇಗೆ ಪರಿಚಿತರಾದರು?
ಅನೇಕ ವಿದ್ಯಮಾನಗಳಲ್ಲಿ, ಸಾರ್ವಜನಿಕ ವಾಚನದಿಂದಲೇ. ಉದಾಹರಣೆಗೆ, ಕೆಲವು ನಿರ್ದಿಷ್ಟ ಸಮಯಗಳಲ್ಲಿ, ದೇವರಿಂದ ಕೊಡಲ್ಪಟ್ಟ ಇಡೀ ಧರ್ಮಶಾಸ್ತ್ರವನ್ನು ಕೂಡಿಬಂದ ಇಸ್ರಾಯೇಲ್ಯರ ಮುಂದೆ ಓದಬೇಕೆಂದು ಮೋಶೆಯು ಆಜ್ಞಾಪಿಸಿದನು. (ಧರ್ಮೋಪದೇಶಕಾಂಡ 31:10-13) ಸಾ.ಶ. ಪ್ರಥಮ ಶತಮಾನದಲ್ಲಿ, ಬೈಬಲ್ ಪುಸ್ತಕಗಳ ಸಾರ್ವಜನಿಕ ವಾಚನವು ವ್ಯಾಪಕವಾಗಿ ಹಬ್ಬಿತು. ಶಿಷ್ಯ ಯಾಕೋಬನು ಹೇಳಿಕೆಯನ್ನಿತ್ತದ್ದು: “ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ.”—ಅ. ಕೃತ್ಯಗಳು 15:21.
ಇಂದು, ಬೈಬಲಿನ ವೈಯಕ್ತಿಕ ಪ್ರತಿಯೊಂದನ್ನು ಪಡೆದುಕೊಳ್ಳುವುದು ಸುಲಭವಾದದ್ದಾಗಿದೆ. ಕಡಿಮೆಪಕ್ಷ ಈ “ಸಣ್ಣ ಪುಸ್ತಕಗಳ”ಲ್ಲಿ ಕೆಲವು, ಲೋಕದ ಜನಸಂಖ್ಯೆಯ 98 ಪ್ರತಿಶತದಷ್ಟು ಭಾಷೆಗಳಲ್ಲಿ ದೊರಕುತ್ತವೆ. ಹೀಗಿರುವುದರಿಂದ ಬೈಬಲು ಹೇಳಲಿಕ್ಕಿರುವ ವಿಷಯವನ್ನು ಕಂಡುಕೊಳ್ಳುವುದರಲ್ಲಿ ಅನೇಕರು ಆಸಕ್ತರಾಗಿಲವ್ಲೆಂಬುದು ಶೋಚನೀಯವಾಗಿದೆ. ಇದು ವೈಜ್ಞಾನಿಕ ಯುಗವಾಗಿರಬಹುದು, ಆದರೆ ದೇವರ ವಾಕ್ಯವಾದ ಬೈಬಲ್ ಇನ್ನೂ ಸರ್ವೋತ್ಕೃಷವ್ಟಾಗಿ “ಉಪದೇಶಕ್ಕೆ ಉಪಯುಕ್ತವಾಗಿದೆ.” ನೀತಿ ತತ್ವಗಳು, ಮಾನವ ಸಂಬಂಧಗಳು, ಮತ್ತು ಇನ್ನಿತರ ವಿಷಯಗಳ ಮೇಲೆ ತರ್ಕಬದ್ಧವಾದ ಸಲಹೆಯನ್ನು ಅದು ಕೊಡುತ್ತದೆ. ಅಲ್ಲದೆ, ಒಂದು ಶಾಂತಿಭರಿತ ಭವಿಷ್ಯಕ್ಕಾಗಿರುವ ಏಕೈಕ ಖಂಡಿತವಾದ ಭರವಸೆಯನ್ನು ಬೈಬಲು ನೀಡುತ್ತದೆ.
ಅದನ್ನು ಕ್ರಮವಾಗಿ ಓದಿರಿ
ಆದುದರಿಂದ ಬೈಬಲಿನ ಕ್ರಮವಾದ ವಾಚನವನ್ನು ಉತ್ತೇಜಿಸುವುದನ್ನು ತಮ್ಮ ಕೆಲಸದ ಒಂದು ಪ್ರಧಾನವಾದ ಭಾಗವಾಗಿ ಯೆಹೋವನ ಸಾಕ್ಷಿಗಳು ಮಾಡಿಕೊಂಡಿದ್ದಾರೆ. ನ್ಯೂ ಯಾರ್ಕ್ನ, ಬ್ರೂಕ್ಲಿನ್ನಲ್ಲಿ, ಅವರ ಲೋಕ ಮುಖ್ಯ ಕಾರ್ಯಾಲಯದ ಫ್ಯಾಕ್ಟರಿ ಕಟ್ಟಡದ ಮೇಲೆ ದಪ್ಪ ಅಕ್ಷರಗಳಲ್ಲಿ “ದೇವರ ವಾಕ್ಯವಾದ ಬೈಬಲನ್ನು ದಿನಾಲೂ ಓದಿರಿ” ಎಂಬ ಪ್ರೋತ್ಸಾಹನೆಯು ಕಾಣಿಸಿಕೊಳ್ಳುತ್ತದೆ. ಈ ಮಾತುಗಳನ್ನು ಲಕ್ಷಾಂತರ ದಾರಿಹೋಕರು ನೋಡಿದ್ದಾರೆ, ಮತ್ತು ಅನೇಕರು ಅವುಗಳನ್ನು ಲಕ್ಷಿಸಿದ್ದಾರೆಂದು ನಿರೀಕ್ಷಿಸಲಾಗುತ್ತದೆ.
ಲೋಕಾದ್ಯಂತವಾಗಿ ಯೆಹೋವನ ಸಾಕ್ಷಿಗಳ 73,000 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ, ಪ್ರತಿವಾರ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಅವಧಿಗಳನ್ನು ನಡೆಸಲಾಗುತ್ತದೆ. ಬೈಬಲಿನ ಆಯ್ದ ಭಾಗದ ಸಾರ್ವಜನಿಕ ವಾಚನವು ಈ ಸರಣಿಯ ಒಂದು ಭಾಗವಾಗಿದೆ. ಹಾಜರಿಯಲ್ಲಿರುವವರೆಲ್ಲರು ಸಹ ಬೈಬಲಿನ ಕೆಲವೊಂದು ಅಧ್ಯಾಯಗಳನ್ನು ತಮ್ಮ ಸ್ವಂತ ಮನೆಯ ಏಕಾಂತದಲ್ಲಿ ಓದುವ ನೇಮಕವು ಅವರಿಗಿದೆ. ಈ ಕಾಲತಖ್ತೆಯನ್ನು ರೂಢಿಯಲ್ಲಿಟ್ಟುಕೊಂಡಿರುವವರು ಕಟ್ಟಕಡೆಗೆ ಇಡೀ ಬೈಬಲನ್ನು ಓದುವರು.
ಈ ಶಾಲೆಯಲ್ಲಿ ಉಪಯೋಗಿಸಲ್ಪಡುವ ಪಠ್ಯಪುಸ್ತಕಗಳಲ್ಲಿ ಒಂದರೊಂದಿಗೆ ಈ ಏರ್ಪಾಡು ಹೊಂದಾಣಿಕೆಯಲ್ಲಿದೆ. ದೇವಪ್ರಭುತ್ವ ಶುಶ್ರೂಷಾ ಶಾಲೆಯ ಮಾರ್ಗದರ್ಶಕ ಪುಸ್ತಕ (ಗೈಡ್ಬುಕ್) ಹೇಳುವುದು: “ಸ್ವತಃ ಬೈಬಲನ್ನು ಓದಲಿಕ್ಕಾಗಿ ನಿಮ್ಮ ವೈಯಕ್ತಿಕ ಕಾಲತಖ್ತೆಯು ಸಮಯವನ್ನು ಒಳಗೊಂಡಿರಬೇಕು. ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೆ ಸರಿಯಾಗಿ ಓದುವುದರಲ್ಲಿ ಅಧಿಕ ಮಹತ್ವವಿದೆ. . . . ಹಾಗಿದ್ದರೂ, ಓದುವಿಕೆಯಲ್ಲಿ ಕೇವಲ ವಸ್ತುವಿಷಯವನ್ನು ಮಾತ್ರ ಆವರಿಸುವುದಲ್ಲ, ಆದರೆ ಅದನ್ನು ಜ್ಞಾಪಿಸಿಕೊಳ್ಳುವ ಉದ್ದೇಶದೊಂದಿಗೆ ಅದರ ಆದ್ಯಂತವಾದ ದೃಷ್ಟಿಕೋನವನ್ನು ಪಡೆಯುವುದೇ ನಿಮ್ಮ ಗುರಿಯಾಗಿರಬೇಕು. ಅದು ಹೇಳುವ ವಿಷಯದ ಮೇಲೆ ಧ್ಯಾನಿಸಲು ಸಮಯವನ್ನು ತೆಗೆದುಕೊಳ್ಳಿರಿ.”
ತದ್ರೀತಿಯಲ್ಲಿ ಯೆಹೋವನ ಸಾಕ್ಷಿಗಳಿಂದ ಉತ್ಪಾದಿಸಲ್ಪಡುವ ಇತರ ಪ್ರಕಾಶನಗಳು ಬೈಬಲಿನ ವಾಚನವನ್ನು ಪ್ರೋತ್ಸಾಹಿಸುತ್ತವೆ. ಉದಾಹರಣೆಗೆ, ಈ ಪತ್ರಿಕೆಯ ಸಂಗಾತಿ ಪತ್ರಿಕೆಯಾದ, ಎಚ್ಚರ! ದಲ್ಲಿ ಯುವ ಜನರಿಗೆ ಮುಂದಿನ ಉತ್ತೇಜನವು ಪ್ರಕಟವಾಯಿತು: “ನೀವು ಬೈಬಲನ್ನು ಸಂಪೂರ್ಣವಾಗಿ ಓದಿದ್ದೀರೊ? ಹೌದು, ಬೈಬಲು ದೊಡ್ಡದಾದ ಒಂದು ಪುಸ್ತಕವಾಗಿದೆ, ಆದರೆ ಅದರ ಓದುವಿಕೆಯನ್ನು ಸಣ್ಣ ಭಾಗಗಳನ್ನಾಗಿ ಯಾಕೆ ಬೇರ್ಪಡಿಸಬಾರದು? . . . ‘ಸಿದ್ಧ ಮನಸ್ಸಿನ’ ಬೆರೋಯದವರು ‘ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಜಾಗರೂಕತೆಯಿಂದ ಪರಿಶೀಲಿಸಿದರು.’ (ಅ. ಕೃತ್ಯಗಳು 17:11) ಒಂದು ದಿನಕ್ಕೆ ಕೇವಲ 15 ನಿಮಿಷಗಳಷ್ಟು ಓದುವ ಒಂದು ದಿನನಿತ್ಯದ ಕಾಲತಖ್ತೆಯನ್ನು ನೀವು ಅನುಸರಿಸುವುದಾದರೆ . . . ಒಂದು ವರ್ಷದೊಳಗೆ ಬೈಬಲಿನ ಓದುವಿಕೆಯನ್ನು ನೀವು ಮುಗಿಸುವಿರಿ.” ಹೌದು, ಪುರಾತನ ಕಾಲಗಳಲ್ಲಿ ದೇವರ ಸೇವಕರಿದ್ದಂತೆ, ಆಧುನಿಕ ದಿನದ ಕ್ರೈಸ್ತರು ಶಾಸ್ತ್ರವಚನಗಳೊಂದಿಗೆ ಸುಪರಿಚಿತರಾಗಿರಬೇಕೆಂಬುದು ಯೆಹೋವನ ಸಾಕ್ಷಿಗಳ ಅನಿಸಿಕೆಯಾಗಿದೆ.
ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಸಾಕ್ಷಿಗಳು ಸಾರ್ವಜನಿಕ ಬೈಬಲ್ ವಾಚನದ 20 ನೆಯ ಶತಮಾನದ ತರ್ಜುಮೆಯನ್ನು ಪ್ರವರ್ತಿಸಿದ್ದಾರೆ. ಅವರು ಅನೇಕ ಭಾಷೆಗಳಲ್ಲಿ ಇಡೀ ಬೈಬಲನ್ನು ಆವರಿಸುವ ಓದುವಿಕೆಗಳ ಕ್ಯಾಸೆಟ್ ರಿಕಾರ್ಡಿಂಗ್ಗಳನ್ನು ಮಾಡಿದ್ದಾರೆ. ಇದು ಅನೇಕರಿಗೆ ಬೈಬಲನ್ನು ಓದಲಿಕ್ಕಿರುವ ಕೆಲವು ಅಡೆತಡೆಗಳನ್ನು ಜಯಿಸುವುದರಲ್ಲಿ ಅತ್ಯುತ್ತಮವಾದ ಒಂದು ಸಹಾಯವಾಗಿ ಪರಿಣಮಿಸಿದೆ. ಕೆಲವರು ಮನೆಯಲ್ಲಿ ಕೆಲಸ ಮಾಡುವಾಗ, ತಮ್ಮ ಕಾರುಗಳನ್ನು ನಡೆಸುವಾಗ, ಅಥವಾ ಇನ್ನಿತರ ಅನೇಕ ಕೆಲಸಗಳನ್ನು ಮಾಡುವಾಗ ಈ ಧ್ವನಿಸಂಗ್ರಹಗಳನ್ನು ಆಲಿಸುತ್ತಾರೆ. ಬೈಬಲಿನ ಒಂದು ಭಾಗದ ಓದುವಿಕೆಗೆ ಕುಳಿತುಕೊಳ್ಳುವುದು ಮತ್ತು ನಿಶಬ್ದವಾಗಿ ಆಲಿಸುವುದು ಹಾಗು ನಿಮ್ಮ ಸ್ವಂತ ಪ್ರತಿಯಲ್ಲಿ ಅದನ್ನು ಹಿಂಬಾಲಿಸುವುದು ಒಂದು ಹರ್ಷಭರಿತವಾದ ಅನುಭವವಾಗಿದೆ.
ಈಗಾಗಲೇ ನೀವು ದಿನಾಲೂ ಬೈಬಲನ್ನು ಓದುತ್ತಿಲ್ಲವಾದರೆ, ಹಾಗೆ ಮಾಡುವುದನ್ನು ನಿಮ್ಮ ರೂಢಿಯಾಗಿ ಯಾಕೆ ಮಾಡಿಕೊಳ್ಳಬಾರದು? ಪ್ರತಿದಿನ ಇದು ದೀರ್ಘಾವಧಿಯನ್ನು ತೆಗೆದುಕೊಳ್ಳುವುದಿಲ್ಲ, ಆದರೆ ಪ್ರಯೋಜನಗಳು ಮಹತ್ತಾಗಿರುವುವು, ಏಕೆಂದರೆ ನೀವು ವಿವೇಚನೆಯಿಂದ ಕಾರ್ಯನಡಿಸಲು ಮತ್ತು ಆತ್ಮಿಕವಾಗಿ ಪ್ರತಿಫಲವನ್ನೀಯುವ ಒಂದು ಜೀವಿತವನ್ನು ಅನುಭವಿಸಲು ಶಾಸ್ತ್ರವಚನಗಳ ಅನ್ವಯಿಸುವಿಕೆಯು ನಿಮ್ಮನ್ನು ಶಕ್ತರನ್ನಾಗಿ ಮಾಡುವುದು. ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರ ಮುಖ್ಯಸ್ಥನಾದ ಯೆಹೋಶುವನಿಗೆ ಕೊಡಲ್ಪಟ್ಟ ಈ ಆಜ್ಞೆಯೊಂದಿಗೆ ನೀವು ಸಹ ಹೊಂದಾಣಿಕೆಯಲ್ಲಿ ಕ್ರಿಯೆಗೈಯುತ್ತಿರುವಿರಿ: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.”—ಯೆಹೋಶುವ 1:8.
ವಿಧೇಯ ಮಾನವಕುಲಕ್ಕಾಗಿರುವ ಯೆಹೋವನ ಪ್ರೀತಿಯ ಉದ್ದೇಶವನ್ನು ಬೈಬಲಿನ ಪುಟಗಳು ಪ್ರಕಟಪಡಿಸುತ್ತವೆ. ಆತನ ಪ್ರೇರಿತ ವಾಕ್ಯದ ನಿಷ್ಕೃಷ್ಟವಾದ ಜ್ಞಾನವು, ನಿಜ ಸಂತೋಷ ಮತ್ತು ಪ್ರಮೋದವನದಲ್ಲಿ ಅದ್ಭುತವಾದ ನೂತನ ಲೋಕವೊಂದರಲ್ಲಿ ಅನಂತ ಆಶೀರ್ವಾದಗಳಿರುವ ನಿತ್ಯಜೀವದ ಭರವಸೆಯನ್ನು ಫಲಿಸುತ್ತದೆ. (ಲೂಕ 23:43; 2 ಪೇತ್ರ 3:13) ಬೈಬಲನ್ನು ಓದುವ ಮತ್ತು ಅಭ್ಯಸಿಸುವ ಹಾಗೂ ಈ ಆಶ್ಚರ್ಯಕರ ಜೀವಿತವನ್ನು ಪಡೆಯುವ ನಿಮ್ಮ ಸದವಕಾಶವನ್ನು ನೀವು ಹಿಡಿದುಕೊಳ್ಳುವಂತಾಗಲಿ.