ಬಲಹೀನತೆ, ದುಷ್ಟತನ, ಮತ್ತು ಪಶ್ಚಾತ್ತಾಪವನ್ನು ನಿಷ್ಕರ್ಷಿಸುವದು
ಪಾಪವು—ಯೆಹೋವನ ನೀತಿಯ ಮಟ್ಟಗಳಿಗೆ ತಪ್ಪಿಬೀಳುವದು—ಕ್ರೈಸ್ತರು ದ್ವೇಷಿಸುವಂಥ ಒಂದು ವಿಷಯವಾಗಿದೆ. (ಇಬ್ರಿಯ 1:9) ಅಸಂತೋಷಕರವಾಗಿ, ನಾವೆಲ್ಲರೂ ಆಗಾಗ್ಗೆ ಪಾಪಮಾಡುತ್ತೇವೆ. ನಾವೆಲ್ಲರೂ ಅಂತರ್ಗತ ಬಲಹೀನತೆ ಮತ್ತು ಅಪರಿಪೂರ್ಣತೆಯೊಂದಿಗೆ ಹೋರಾಡುತ್ತೇವೆ. ಹೆಚ್ಚಿನ ವಿದ್ಯಮಾನಗಳಲ್ಲಾದರೋ, ನಾವು ನಮ್ಮ ಪಾಪಗಳನ್ನು ಯೆಹೋವನಿಗೆ ಅರಿಕೆ ಮಾಡಿದರೆ ಮತ್ತು ಅವನ್ನು ಪುನರಾವೃತ್ತಿಸದಂತೆ ಶ್ರದ್ದಾಪೂರ್ವಕವಾಗಿ ಪ್ರಯತ್ನಿಸುವದಾದರೆ, ನಾವು ಅವನನ್ನು ಒಂದು ಶುದ್ಧ ಮನಸ್ಸಾಕ್ಷಿಯೊಂದಿಗೆ ಸಮೀಪಿಸಬಲ್ಲೆವು. (ರೋಮಾಪುರ 7:21-24; 1 ಯೋಹಾನ 1:8, 9; 2:1, 2) ನಮ್ಮ ಬಲಹೀನತೆಗಳ ಹೊರತಾಗಿಯೂ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಆತನು ನಮ್ಮ ಪವಿತ್ರ ಸೇವೆಯನ್ನು ಸ್ವೀಕರಿಸುತ್ತಾನೆಂಬದಕ್ಕೆ ನಾವು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇವೆ.
ಶಾರೀರಿಕ ಬಲಹೀನತೆಯ ಕಾರಣ ಯಾರಾದರೂ ಗಂಭೀರ ಪಾಪದೊಳಗೆ ಬಿದ್ದರೆ, ಅವನಿಗೆ ಯಾಕೋಬ 5:14-16 ರಲ್ಲಿ ವಿವರಿಸಲ್ಪಟ್ಟ ಕ್ರಮಕ್ಕನುಸಾರವಾದ ಕುರಿಪಾಲನೆಯ ತುರ್ತಿನ ಅಗತ್ಯವಿದೆ: “ನಿಮ್ಮಲ್ಲಿ [ಆತ್ಮಿಕವಾಗಿ] ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ . . . ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು. ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ.”
ಆದುದರಿಂದ, ಸಮರ್ಪಿತ ಕ್ರೈಸ್ತನೊಬ್ಬನು ಘೋರ ಪಾಪವನ್ನು ನಡಿಸುವಾಗ ಯೆಹೋವನಿಗೆ ವೈಯಕ್ತಿಕ ನಿವೇದನೆಗಿಂತ ಹೆಚ್ಚಿನದ್ದೇನೋ ಅವಶ್ಯವಿದೆ. ಸಭೆಯ ಶುದ್ಧತೆ ಅಥವಾ ಶಾಂತಿಯು ಬೆದರಿಸಲ್ಪಡುವದರಿಂದ ಹಿರಿಯರು ನಿರ್ದಿಷ್ಟ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. (ಮತ್ತಾಯ 18:15-17; 1 ಕೊರಿಂಥ 5:9-11; 6:9, 10) ಹಿರಿಯರು ಇದನ್ನು ನಿಷ್ಕರ್ಷಿಸಬೇಕಾಗಬಹುದು: ವ್ಯಕ್ತಿಯು ಪಶ್ಚಾತ್ತಾಪಿಯಾಗಿದ್ದಾನೋ? ಪಾಪಕ್ಕೆ ಯಾವುದು ನಡಿಸಿತು? ಅದು ಬಲಹೀನತೆಯ ಒಂದು ಪ್ರತ್ಯೇಕ ಕ್ಷಣವಾಗಿತ್ತೋ? ಅದು ಪಾಪದ ಒಂದು ಆಚರಣೆಯಾಗಿತ್ತೋ? ಅಂಥ ನಿಷ್ಕರ್ಷೆಯು ಯಾವಾಗಲೂ ಸರಳ ಅಥವಾ ಸುಸ್ಪಷ್ಟವಾಗಿಗಿರಲಿಕ್ಕಿಲ್ಲ ಮತ್ತು ಗಮನಾರ್ಹವಾದ ವಿವೇಚನಾಶಕ್ತಿಯನ್ನು ಕೇಳಿಕೊಳ್ಳುತ್ತದೆ.
ಆದರೆ ತಪ್ಪುಗೈಯುವಿಕೆ ಮತ್ತು ದುಷ್ಟ ನಡತೆಯ ಒಂದು ಪಥವನ್ನು ಬೆನ್ನಟ್ಟುವ ಕಾರಣದಿಂದ ಈ ಪಾಪವು ನಡೆದಿರುವದಾದರೆ, ಆಗೇನು? ಹಾಗಿದ್ದಲ್ಲಿ, ಹಿರಿಯರ ಜವಬ್ದಾರಿಯು ಸ್ಪಷ್ಟವಾಗಿಗಿದೆ. ಕೊರಿಂಥದ ಸಭೆಯಲ್ಲಿ ಒಂದು ಗಂಭೀರ ವಿಷಯದ ನಿರ್ವಹಣೆಯನ್ನು ಮಾರ್ಗದರ್ಶಿಸುವಾಗ, ಅಪೊಸ್ತಲ ಪೌಲನು ಹೇಳಿದ್ದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (1 ಕೊರಿಂಥ 5:13) ಕ್ರೈಸ್ತ ಸಭೆಯಲ್ಲಿ ದುಷ್ಟ ಜನರಿಗೆ ಯಾವ ಸ್ಥಳವೂ ಇಲ್ಲ.
ಬಲಹೀನತೆ, ದುಷ್ಟತನ ಮತ್ತು ಪಶ್ಚಾತ್ತಾಪವನ್ನು ತೂಗಿ ನೋಡುವದು
ಒಬ್ಬನು ಪಶ್ಚಾತ್ತಾಪಿಯಾಗಿದ್ದಾನೆಂದು ಹಿರಿಯರು ಹೇಗೆ ತಿಳಿಯಬಲ್ಲರು?a ಇದು ಒಂದು ಸರಳ ಪ್ರಶ್ನೆಯಲ್ಲ. ಉದಾಹರಣೆಗಾಗಿ, ಅರಸನಾದ ದಾವೀದನ ಕುರಿತಾಗಿ ಯೋಚಿಸಿರಿ. ಅವನು ವ್ಯಭಿಚಾರವನ್ನು ಮತ್ತು ನಂತರ ಕಾರ್ಯತಃ ಕೊಲೆಯನ್ನು ನಡಿಸಿದನು. ಆದರೆ, ಯೆಹೋವನು ಅವನಿಗೆ ಜೀವಿಸುತ್ತಾ ಇರಲು ಅನುಮತಿಸಿದನು. (2 ಸಮುವೇಲ 11:2-24: 12:1-14) ಅನಂತರ ಅನನೀಯ ಮತ್ತು ಸಪ್ಫೈರಳ ಕುರಿತಾಗಿ ಯೋಚಿಸಿರಿ. ಅವರು ಅಸತ್ಯವಾಗಿ ಅಪೊಸ್ತಲರನ್ನು ವಂಚಿಸಲು ಪ್ರಯತ್ನಿಸಿದರು, ಅವರು ನಿಜವಾಗಿ ಇದದ್ದಕ್ಕಿಂತ ಹೆಚ್ಚು ಉದಾರಿಗಳಾಗಿದ್ದಾರೆಂದು ಕಪಟದಿಂದ ನಟಿಸಿದರು. ಗಂಭೀರ ವಿಷಯವೊ? ಹೌದು. ಕೊಲೆ ಮತ್ತು ವ್ಯಭಿಚಾರದಷ್ಟು ಕೆಟ್ಟದ್ದೋ? ಇಲ್ಲವೇ ಇಲ್ಲ! ಆದರೆ ಅನನೀಯ ಮತ್ತು ಸಪ್ಫೈರ ತಮ್ಮ ಜೀವಗಳೊಂದಿಗೆ ಬೆಲೆಯನ್ನು ತೆತ್ತರು.—ಅ. ಕೃತ್ಯಗಳು 5:1-11.
ಈ ಭಿನ್ನವಾದ ನ್ಯಾಯತೀರ್ಪುಗಳು ಯಾಕೆ? ಶಾರೀರಿಕ ಬಲಹೀನತೆಯ ಕಾರಣ ದಾವೀದನು ಗಂಭೀರ ಪಾಪದೊಳಗೆ ಬಿದ್ದನು. ಅವನು ಏನನ್ನು ಮಾಡಿದ್ದನೋ ಅದು ಅವನ ಎದುರು ಇಡಲ್ಪಟ್ಟಾಗ, ಅವನು ಪಶ್ಚಾತ್ತಾಪಪಟ್ಟನು, ಮತ್ತು ಅವನ ಮನೆತನದಲ್ಲಿ ಸಮಸ್ಯೆಗಳ ಸಂಬಂಧದಲ್ಲಿ ಅವನಿಗೆ ಕಠಿಣವಾಗಿ ಶಿಸ್ತುಗೊಳಿಸಲಾಯಿತಾದರೂ, ಯೆಹೋವನು ಅವನನ್ನು ಕ್ಷಮಿಸಿದನು. ಅನನೀಯ ಮತ್ತು ಸಪ್ಫೈರ ಪಾಪಗೈದರು ಯಾಕಂದರೆ ಅವರು ಕಪಟಾಚಾರದಿಂದ ಸುಳ್ಳು ಹೇಳಿ ಕ್ರೈಸ್ತ ಸಭೆಯನ್ನು ವಂಚಿಸಲು ಪ್ರಯತ್ನಿಸಿದರು ಮತ್ತು ಈ ರೀತಿಯಲ್ಲಿ ‘ಪವಿತ್ರಾತ್ಮವನ್ನು ಮತ್ತು ದೇವರನ್ನು ವಂಚಿಸಿದರು.’ ಅದು ಒಂದು ದುಷ್ಟ ಹೃದಯದ ರುಜುವಾತಾಗಿ ಪರಿಣಮಿಸಿತು. ಆದುದರಿಂದ ಅವರಿಗೆ ಹೆಚ್ಚು ಕಠಿಣವಾಗಿ ನ್ಯಾಯತೀರ್ಪುಮಾಡಲಾಯಿತು.
ಎರಡೂ ವಿದ್ಯಮಾನಗಳಲ್ಲಿ ಯೆಹೋವನು ನ್ಯಾಯತೀರ್ಪನ್ನು ಮಾಡಿದನು, ಮತ್ತು ಅವನ ನ್ಯಾಯತೀರ್ಪು ಸರಿಯಾಗಿತ್ತು ಯಾಕಂದರೆ ಆತನು ಹೃದಯಗಳನ್ನು ಪರೀಕ್ಷಿಸಬಲ್ಲನು. (ಜ್ಞಾನೋಕ್ತಿ 17:3) ಮಾನವ ಹಿರಿಯರು ಅದನ್ನು ಮಾಡಲಾರರು. ಹೀಗಿರುವದರಿಂದ ಒಂದು ಗಂಭೀರ ಪಾಪವು ದುಷ್ಟತನಕ್ಕಿಂತ ಹೆಚ್ಚಾಗಿ ಬಲಹೀನತೆಯ ರುಜುವಾತಾಗಿದೆ ಎಂದು ಹಿರಿಯರು ಹೇಗೆ ವಿವೇಚಿಸಬಲ್ಲರು?
ವಾಸ್ತವದಲ್ಲಿ, ಎಲ್ಲಾ ಪಾಪವು ಕೆಟ್ಟದ್ದಾಗಿದೆ, ಆದರೆ ಎಲ್ಲಾ ಪಾಪಿಗಳು ಕೆಟ್ಟವರಲ್ಲ. ಸದೃಶ ಪಾಪಗಳು ಒಬ್ಬ ವ್ಯಕ್ತಿಯಲ್ಲಿ ಬಲಹೀನತೆಯ ಮತ್ತು ಇನ್ನೊಬ್ಬನಲ್ಲಿ ದುಷ್ಟತನದ ಸಾಕ್ಷ್ಯವಾಗಿರಬಲ್ಲವು. ನಿಜವಾಗಿಯೂ, ಪಾಪಮಾಡುವದು, ಪಾಪಿಯ ಪಕ್ಷದಿಂದ ಬಲಹೀನತೆ ಮತ್ತು ದುಷ್ಟತನ ಎರಡರ ಒಂದು ಮಟ್ಟವನ್ನು ಒಳಗೂಡಿಸುತ್ತದೆ. ಪಾಪಿಯು ಏನನ್ನು ಮಾಡಿದ್ದಾನೋ ಅದನ್ನು ಅವನು ಹೇಗೆ ವೀಕ್ಷಿಸುತ್ತಾನೆ ಮತ್ತು ಅದರ ಕುರಿತಾಗಿ ಅವನು ಏನನ್ನು ಮಾಡಲು ಉದ್ದೇಶಿಸುತ್ತಾನೆ ಎಂಬದು ಒಂದು ನಿಷ್ಕರ್ಷಿಸುವ ಅಂಶವಾಗಿದೆ. ಅವನು ಒಂದು ಪಶ್ಚಾತ್ತಾಪಿ ಆತ್ಮವನ್ನು ತೋರಿಸುತ್ತಾನೋ? ಇದನ್ನು ಗ್ರಹಿಸಲು ಹಿರಿಯರಿಗೆ ವಿವೇಚನೆಯ ಅಗತ್ಯವಿದೆ. ಅವರು ಆ ವಿವೇಚನೆಯನ್ನು ಹೇಗೆ ಪಡೆಯಬಲ್ಲರು? ಅಪೊಸ್ತಲ ಪೌಲನು ತಿಮೊಥೆಯನಿಗೆ ವಚನವನ್ನಿತ್ತದ್ದು: “ನಾನು ಹೇಳುವದನ್ನು [ಸತತವಾಗಿ, NW] ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು [ವಿವೇಚನೆಯನ್ನು, NW] ದಯಪಾಲಿಸುವನು.” (2 ತಿಮೊಥೆಯ 2:7) ಹಿರಿಯರು ಪೌಲನ ಮತ್ತು ಇತರ ಬೈಬಲ್ ಬರಹಗಾರರ ಪ್ರೇರಿತ ವಾಕ್ಯಗಳನ್ನು ನಮ್ರವಾಗಿ ‘ಸತತವಾಗಿ ಯೋಚಿ’ ಸಿದರೆ, ಸಭೆಯಲ್ಲಿ ಪಾಪ ಮಾಡುವವರನ್ನು ಸರಿಯಾಗಿ ದೃಷ್ಟಿಸಲು ಅವರಿಗೆ ಆವಶ್ಯಕವಾದ ವಿವೇಚನೆಯು ಸಿಕ್ಕುವದು. ಆಗ, ಅವರ ನಿರ್ಣಯಗಳು, ಅವರ ಸ್ವಂತ ಆಲೋಚನೆಯನ್ನಲ್ಲ, ಯೆಹೋವನ ಆಲೋಚನೆಯನ್ನು ಪ್ರತಿಬಿಂಬಿಸುವವು.—ಜ್ಞಾನೋಕ್ತಿ 11:2; ಮತ್ತಾಯ 18:18.
ಇದನ್ನು ಹೇಗೆ ಮಾಡಲಾಗುತ್ತದೆ? ಬೈಬಲ್ ದುಷ್ಟ ಜನರನ್ನು ಹೇಗೆ ವರ್ಣಿಸುತ್ತದೆ ಮತ್ತು ವ್ಯವಹರಿಸಲಾಗುತ್ತಿರುವ ವ್ಯಕ್ತಿಗೆ ಆ ವರ್ಣನೆಯು ಅನ್ವಯಿಸುತ್ತದೋ ಎಂದು ನೋಡುವುದು ಒಂದು ವಿಧವಾಗಿದೆ.
ಹೊಣೆಗಾರಿಕೆಯನ್ನು ತಗೆದುಕೊಳ್ಳುವುದು ಮತ್ತು ಪಶ್ಚಾತ್ತಾಪಪಡುವದು
ದುಷ್ಟತನದ ಒಂದು ಮಾರ್ಗಕ್ರಮವನ್ನು ಆರಿಸಿದ ಮೊದಲ ಮಾನವರು ಆದಾಮ ಮತ್ತು ಹವ್ವರಾಗಿದ್ದರು. ಪರಿಪೂರ್ಣರೂ, ಯೆಹೋವನ ನಿಯಮದ ಕುರಿತಾದ ಪೂರ್ಣ ಜ್ಞಾವವಿದ್ದವರೂ ಆಗಿದ್ದಾಗ್ಯೂ, ಅವರು ದೈವಿಕ ಸಾರ್ವಭೌಮತ್ವದ ವಿರುದ್ಧ ದಂಗೆಯೆದ್ದರು. ಅವರು ಏನನ್ನು ಮಾಡಿದ್ದರೋ ಅದನ್ನು ಯೆಹೋವನು ಅವರ ಎದುರಿಟ್ಟಾಗ, ಅವರ ಪ್ರತಿವರ್ತನೆಗಳು ಗಮನಾರ್ಹವಾಗಿದ್ದವು—ಆದಾಮನು ಹವ್ವಳನ್ನು ದೂಷಿಸಿದನು, ಮತ್ತು ಹವ್ವಳು ಸರ್ಪವನ್ನು ದೂಷಿಸಿದಳು! (ಆದಿಕಾಂಡ 3:12, 13) ಇದನ್ನು ದಾವೀದನ ಆಳವಾದ ನಮ್ರತೆಯೊಂದಿಗೆ ಹೋಲಿಸಿರಿ. ಅವನ ಗುರುತರವಾದ ಪಾಪಗಳೊಂದಿಗೆ ಎದುರಿಸಲ್ಪಟ್ಟಾಗ, ಅವನು ಹೊಣೆಗಾರಿಕೆಯನ್ನು ಸ್ವೀಕರಿಸಿದನು ಮತ್ತು ಕ್ಷಮೆಗಾಗಿ ಬೇಡಿಕೊಳ್ಳುತ್ತಾ, ಹೀಗಂದನು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.”—2 ಸಮುವೇಲ 12:13; ಕೀರ್ತನೆ 51:4, 9, 10.
ವಿಶೇಷವಾಗಿ ಒಬ್ಬ ವಯಸ್ಕನ ಕಡೆಯಿಂದ, ಗಂಭೀರ ಪಾಪಗಳ ಕೇಸುಗಳನ್ನು ನಿರ್ವಹಿಸುವಾಗ ಈ ಎರಡು ಉದಾಹರಣೆಗಳನ್ನು ಪರಿಗಣಿಸುವದರಿಂದ ಹಿರಿಯರು ಒಳ್ಳೇದನ್ನು ಮಾಡುವರು. ಪಾಪಿಯು—ತನ್ನ ಪಾಪದ ಕುರಿತಾಗಿ ಮನಗಾಣಿಸಲ್ಪಟ್ಟಾಗ ದಾವೀದನಂತೆ—ಒಡನೆಯೇ ದೋಷವನ್ನು ಸ್ವೀಕರಿಸಿ ಪಶ್ಚಾತ್ತಾಪದಿಂದ ಸಹಾಯ ಮತ್ತು ಕ್ಷಮೆಗಾಗಿ ಯೆಹೋವನ ಕಡೆಗೆ ನೋಡುತ್ತಾನೋ ಅಥವಾ ಪ್ರಾಯಶಃ ಬೇರೆ ಯಾರನಾದರೂ ದೂಷಿಸುತ್ತಾ, ತಾನು ಏನನ್ನು ಮಾಡಿದ್ದಾನೋ ಅದನ್ನು ಕನಿಷ್ಠವೆಂದೆಣಿಸಲು ನೋಡುತ್ತಾನೋ? ನಿಜ, ಅವನ ಕೃತ್ಯಗಳಿಗೆ ಯಾವುದು ಮುನ್ನಡೆಸಿತು ಎಂಬದನ್ನು ಆ ವ್ಯಕ್ತಿ ವಿವರಿಸಲು ಬಯಸಬಹುದು ಮತ್ತು ಅವನಿಗೆ ಸಹಾಯ ಮಾಡಲು ನಿರ್ಣಯಿಸುವಾಗ ಪರಿಗಣಿಸಲು ಹಿರಿಯರಿಗೆ ಅಗತ್ಯವಿರಬಹುದಾದ, ಹಿಂದಿನ ಅಥವಾ ಪ್ರಸ್ತುತದ ಸನ್ನಿವೇಶಗಳು ಇರಬಹುದು. (ಹೋಲಿಸಿರಿ ಹೋಶೇಯ 4:14.) ಆದರೆ ಪಾಪಮಾಡಿದವನು ತಾನು, ಮತ್ತು ಯೆಹೋವನ ಮುಂದೆ ತಾನು ಜವಾಬ್ದಾರನಾಗಿದ್ದೇನೆ ಎಂದು ಅವನು ಸ್ವೀಕರಿಸಬೇಕು. ನೆನಪಿಡಿರಿ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.
ಕೆಟ್ಟದ್ದನ್ನು ಆಚರಿಸುವದು
ಕೀರ್ತನೆಗಳ ಪುಸ್ತಕದಲ್ಲಿ ದುಷ್ಟ ಜನರ ಕುರಿತಾಗಿ ಅನೇಕ ಉಲ್ಲೇಖಗಳಿವೆ. ಒಬ್ಬ ವ್ಯಕ್ತಿಯು ಮೂಲಭೂತವಾಗಿ ದುಷ್ಟನು ಅಥವಾ ಬಲಹೀನನು ಎಂದು ವಿವೇಚಿಸಲು ಇಂಥ ಶಾಸ್ತ್ರವಚನಗಳು ಹಿರಿಯರಿಗೆ ಇನ್ನೂ ಹೆಚ್ಚಾಗಿ ಸಹಾಯ ಮಾಡಬಲ್ಲವು. ಉದಾಹರಣೆಗಾಗಿ, ಅರಸ ದಾವೀದನ ಪೇರಿತ ಪ್ರಾರ್ಥನೆಯನ್ನು ಪರಿಗಣಿಸಿರಿ: “ನೀನು ದುಷ್ಟರೊಡನೆಯೂ ಪಾತಕಿಗಳ ಸಂಗಡಲೂ ನನ್ನನ್ನೂ ಎಳೆದುಕೊಂಡು ಹೋಗಬೇಡ. ಅವರು ಹೊರಗೆ ಒಳ್ಳೇದಾಗಲಿ ಎಂದು ಹೇಳಿದರೂ ಒಳಗೆ ಕೇಡಾಗಲಿ ಎಂದು ಯೋಚಿಸುವರು.” (ಕೀರ್ತನೆ 28:3) ದುಷ್ಟ ಜನರನ್ನು “ಪಾತಕಿಗಳ” ಜೊತೆಗೆ ಹೋಲಿಸಿ ಪ್ರಸ್ತಾಪಿಸಲಾಗಿದೆ ಎಂಬದನ್ನು ಗಮನಿಸಿರಿ. ಶಾರೀರಿಕ ಬಲಹೀನತೆಯಿಂದಾಗಿ ಪಾಪಮಾಡಿದ ವ್ಯಕ್ತಿಯು, ಬುದ್ಧಿಗೆ ಬಂದ ಕೂಡಲೇ ಅದನ್ನು ನಿಲ್ಲಿಸುವದು ಸಂಭಾವ್ಯ. ಆದರೂ, ಒಬ್ಬನು ಏನು ಕೆಟ್ಟದ್ದಾಗಿದೆಯೋ ಅದನ್ನು ಆತನ ಜೀವಿತದ ಒಂದು ಭಾಗವಾಗುವಷ್ಟರ ಮಟ್ಟಿಗೆ ‘ಆಚರಿಸು’ವುದಾದರೆ, ಇದು ಒಂದು ದುಷ್ಟ ಹೃದಯದ ರುಜುವಾತಾಗಿರಬಲ್ಲದು.
ಆ ವಚನದಲ್ಲಿ ದಾವೀದನು ದುಷ್ಟತನದ ಇನ್ನೊಂದು ವೈಶಿಷ್ಟ್ಯವನ್ನು ತಿಳಿಸಿದನು. ಅನನೀಯ ಮತ್ತು ಸಪ್ಫೈರಳಂತೆ, ದುಷ್ಟ ವ್ಯಕ್ತಿಯು ತನ್ನ ಬಾಯಿಯಲ್ಲಿ ಒಳ್ಳೇ ವಿಷಯಗಳನ್ನು ಮಾತಾಡುತ್ತಾನೆ ಆದರೆ ಅವನ ಹೃದಯದಲ್ಲಿ ಕೆಟ್ಟ ವಿಷಯಗಳಿವೆ. ‘ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುವ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದ್ದ’ ಯೇಸುವಿನ ದಿನದ ಫರಿಸಾಯರಂತೆ ಅವನೊಬ್ಬ ಕಪಟಿಯಾಗಿರಬಹುದು. (ಮತ್ತಾಯ 23:28; ಲೂಕ 11:39) ಯೆಹೋವನು ಕಪಟತನವನ್ನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 6:16-19) ನ್ಯಾಯವಿಧಾಯಕ ಕಮಿಟಿಯೊಂದಿಗೆ ಮಾತಾಡುವಾಗಲೂ ತನ್ನ ಗಂಭೀರ ಪಾಪಗಳನ್ನು ಒಬ್ಬನು ಕಪಟದಿಂದ ನಿರಾಕರಿಸಲು ಪ್ರಯತ್ನಿಸಿದರೆ, ಅಥವಾ ಪೂರ್ಣವಾಗಿ ತಪ್ಪೊಪ್ಪಿಕೊಳ್ಳಲು ನಿರಾಕರಿಸುತ್ತಾ, ಇತರರಿಗೆ ಏನು ಈಗಾಗಲೇ ತಿಳಿದಿದೆಯೋ ಕೇವಲ ಅದನ್ನು ಇಷ್ಟವಿಲ್ಲದೆ ಒಪ್ಪಿಕೊಳ್ಳುತ್ತಾನಾದರೆ, ಇದು ದುಷ್ಟ ಹೃದಯವೊಂದರ ರುಜುವಾತಾಗಿರಬಲ್ಲದು.
ಯೆಹೋವನೆಡೆಗೆ ಅಹಂಕಾರದ ಉಪೇಕ್ಷೆ
ಒಬ್ಬ ದುಷ್ಟ ವ್ಯಕ್ತಿಯನ್ನು ವಿಶಿಷ್ಟೀಕರಿಸುವ ಇತರ ಸಂಗತಿಗಳನ್ನು ಕೀರ್ತನೆ 10 ರಲ್ಲಿ ವಿವರಿಸಲಾಗಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ದುಷ್ಟರು ಗರ್ವಿಷ್ಠರಾಗಿ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ; . . . ಅವನು ಯೆಹೋವನನ್ನು ಉಪೇಕ್ಷಿಸಿದ್ದಾನೆ.” (ಕೀರ್ತನೆ 10:2, 3, NW) ಅಹಂಕಾರಿಯಾದ ಮತ್ತು ಯೆಹೋವನನ್ನು ಉಪೇಕ್ಷಿಸುವ ಒಬ್ಬ ಸಮರ್ಪಿತ ಕ್ರೈಸ್ತನನ್ನು ನಾವು ಹೇಗೆ ವೀಕ್ಷಿಸಬೇಕು? ನಿಶ್ಚಯವಾಗಿಯೂ, ಇವು ದುಷ್ಟ ಮನೋಭಾವಗಳಾಗಿವೆ. ಬಲಹೀನತೆಯಿಂದಾಗಿ ಪಾಪಗೈಯುವ ವ್ಯಕ್ತಿಯೊಬ್ಬನು, ಆತನ ಪಾಪವನ್ನು ಗ್ರಹಿಸುವಾಗ ಅಥವಾ ಅದು ಅವನ ಗಮನಕ್ಕೆ ತರಲ್ಪಟ್ಟಾಗ, ಪಶ್ಚಾತ್ತಾಪ ಪಡುವನು ಮತ್ತು ತನ್ನ ಕಾರ್ಯದ ಕ್ರಮವನ್ನು ಬದಲಾಯಿಸಲು ಕಠಿನವಾಗಿ ಶ್ರಮಿಸುವನು. (2 ಕೊರಿಂಥ 7:10, 11) ವ್ಯತಿರಿಕ್ತವಾಗಿ, ಮೂಲಭೂತವಾಗಿ ಯೆಹೋವನಿಗಾಗಿ ಅನಾದರದಿಂದಾಗಿ ಒಬ್ಬ ಮನುಷ್ಯನು ಪಾಪಮಾಡಿದರೆ, ಅವನ ಪಾಪಮಯ ಕ್ರಮಕ್ಕೆ ಪುನಃ ಪುನಃ ಹಿಂದಿರುಗಲು ಅವನನ್ನು ಏನು ತಡೆಗಟ್ಟುವುದು? ಸೌಮ್ಯ ಆತ್ಮದಿಂದ ಸಲಹೆ ಕೊಡಲ್ಪಟ್ಟಾಗ್ಯೂ ಅವನು ಅಹಂಕಾರಿಯಾಗಿರುವದಾದರೆ, ಯಥಾರ್ಥವಾಗಿ ಮತ್ತು ನಿಜವಾಗಿ ಪಶ್ಚಾತ್ತಾಪಪಡಲು ಅಗತ್ಯವಿರುವ ನಮ್ರತೆಯನ್ನು ಅವನು ಹೇಗೆ ಪಡೆಯಸಾಧ್ಯವಿದೆ?
ಅದೇ ಕೀರ್ತನೆಯಲ್ಲಿ ಸ್ವಲ್ಪ ಮುಂದೆ ದಾವೀದನ ಮಾತುಗಳನ್ನು ಈಗ ಪರಿಗಣಿಸಿರಿ: “ದುಷ್ಟನು ನಿನ್ನನ್ನು ಯಾಕೆ ಅಲಕ್ಷ್ಯಮಾಡಬೇಕು? ದೇವರು ವಿಚಾರಿಸುವದೇ ಇಲ್ಲವೆಂದು ಹೇಳಿಕೊಳ್ಳುವದೇಕೆ?” (ಕೀರ್ತನೆ 10:13) ಕ್ರೈಸ್ತ ಸಭೆಯ ಪರಿಸರದಲ್ಲಿ ದುಷ್ಟ ಮನುಷ್ಯನಿಗೆ ಸರಿ ಮತ್ತು ತಪ್ಪಿನ ನಡುವಿನ ವ್ಯತ್ಯಾಸವು ತಿಳಿದಿದೆ, ಆದರೆ ಅವನು ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳಬಹುದೆಂದು ನೆನಸುವಾಗ ಅವನು ತಪ್ಪನ್ನು ಮಾಡಲು ಹಿಂಜರಿಯುವದಿಲ್ಲ. ಬಯಲು ಮಾಡುವಿಕೆಯ ಭಯವು ಇಲ್ಲದಷ್ಟು ಸಮಯ ಅವನು ತನ್ನ ಪಾಪಮಯ ಪ್ರವೃತ್ತಿಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಡುತ್ತಾನೆ. ದಾವೀದನಂತಿರದೆ, ಅವನ ಪಾಪಗಳು ಬೆಳಕಿಗೆ ಬಂದರೂ, ಅವನು ಶಿಸ್ತನ್ನು ಹೋಗಲಾಡಿಸಲು ಹಂಚಿಕೆ ಹೂಡುವನು. ಅಂಥ ಒಬ್ಬ ಮನುಷ್ಯನು ಯೆಹೋವನ ಕುರಿತಾಗಿ ಅತಿಯಾಗಿ ಅನಾದರಿಸುವವನಾಗಿದ್ದಾನೆ. “ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ. . . . ಎಂಥ ದುಷ್ಕೃತ್ಯಕ್ಕೂ ಹೇಸುವದಿಲ್ಲ.”—ಕೀರ್ತನೆ 36:1, 4.
ಇತರರನ್ನು ಹಾನಿಗೊಳಿಸುವದು
ಒಂದು ಪಾಪದಿಂದ ಸಾಮಾನ್ಯವಾಗಿ ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಬಾಧಿಸಲ್ಪಡುತ್ತಾರೆ. ಉದಾಹರಣೆಗಾಗಿ, ಒಬ್ಬ ವ್ಯಭಿಚಾರಿಯು ದೇವರ ವಿರುದ್ಧ ಪಾಪಮಾಡುತ್ತಾನೆ; ಅವನು ತನ್ನ ಪತ್ನಿ ಮತ್ತು ಮಕ್ಕಳನ್ನು ಮೋಸಗೊಳಿಸುತ್ತಾನೆ; ಪಾಪದಲ್ಲಿ ಸಹಭಾಗಿಯಾಗಿರುವವಳು ವಿವಾಹಿತಳಾಗಿರುವಲ್ಲಿ, ಅವನು ಅವಳ ಕುಟುಂಬವನ್ನು ಮೋಸಗೊಳಿಸುತ್ತಾನೆ; ಮತ್ತು ಸಭೆಯ ಒಳ್ಳೆಯ ಹೆಸರನ್ನು ಕಲುಷಿತಗೊಳಿಸುತ್ತಾನೆ. ಅವನು ಅದೆಲ್ಲವನ್ನು ಹೇಗೆ ವೀಕ್ಷಿಸುತ್ತಾನೆ? ಯಥಾರ್ಥ ಪಶ್ಚಾತ್ತಾಪದೊಂದಿಗೆ ಆತನು ಹೃತ್ಪೂರ್ವಕ ದುಃಖವನ್ನು ತೋರಿಸುತ್ತಾನೋ? “ಕೆಡುಕರೆಲ್ಲರು ಉಬ್ಬಿಕೊಂಡು ಅಹಂಕಾರವನ್ನು ಕಕ್ಕುತ್ತಾರೆ. ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; ನಿನ್ನ ಸ್ವಾಸ್ತ್ಯವನ್ನು ಕುಗ್ಗಿಸಿಬಿಡುತ್ತಾರೆ; ವಿಧವೆಯರನ್ನೂ ಪರದೇಶಿಯನ್ನೂ ಕೊಲ್ಲುತ್ತಾರೆ; ಅನಾಥರನ್ನು ಹತಮಾಡುತ್ತಾರೆ, ಯಾಹು ನೋಡುವದೇ ಇಲ್ಲ; ಯಾಕೋಬ್ಯರ ದೇವರು ಲಕ್ಷಿಸುವದೇ ಇಲ್ಲ ಅನ್ನುತ್ತಾರೆ” ಎಂಬ ಕೀರ್ತನೆ 94 ರಲ್ಲಿ ವರ್ಣಿಸಲಾದ ಆತ್ಮವನ್ನು ಆತನು ವ್ಯಕ್ತಪಡಿಸುತ್ತಾನೋ?—ಕೀರ್ತನೆ 94:4-7.
ಸಭೆಯಲ್ಲಿ ನಿರ್ವಹಿಸಲ್ಪಡುವ ಪಾಪಗಳು ಹತ್ಯೆ ಮತ್ತು ಕೊಲ್ಲುವಿಕೆಯನ್ನು ಒಳಗೂಡದಿರುವುದು ಸಂಭವನೀಯ. ಆದರೂ ಇಲ್ಲಿ ತೋರಿಸಲಾದ ಆತ್ಮವು—ವೈಯಕ್ತಿಕ ಲಾಭಕ್ಕಾಗಿ ಇತರರನ್ನು ಮೋಸಗೊಳಿಸಲು ಸಿದ್ಧವಾಗಿರುವ ಆತ್ಮ—ಹಿರಿಯರು ತಪ್ಪುಗೈಯುವಿಕೆಯನ್ನು ಶೋಧಿಸುತ್ತಿದ್ದಂತೆಯೇ ಸ್ಪಷ್ಟವಾಗಿಗಿ ಗೋಚರಿಸಬಹುದು. ಇದೂ ದುರಹಂಕಾರ, ಒಬ್ಬ ದುಷ್ಟ ಮನುಷ್ಯನ ಗುರುತಾಗಿದೆ. (ಜ್ಞಾನೋಕ್ತಿ 21:4) ತನ್ನ ಸಹೋದರನಿಗಾಗಿ ತನ್ನನ್ನೇ ಬಲಿಕೊಡಲು ಸಿದ್ಧನಾಗಿರುವ ಒಬ್ಬ ನಿಜ ಕ್ರೈಸ್ತನ ಆತ್ಮಕ್ಕೆ ಅದು ಸಂಪೂರ್ಣವಾಗಿ ವಿರುದ್ಧವಾಗಿದೆ.—ಯೋಹಾನ 15:12, 13.
ದೈವಿಕ ಸೂತ್ರಗಳನ್ನು ಅನ್ವಯಿಸುವದು
ಈ ಕೆಲವು ನಿರ್ದೇಶಗಳು ನಿಯಮಗಳನ್ನು ಸ್ಥಾಪಿಸಲು ಉದ್ದೇಶಿಸಲ್ಪಟ್ಟಿಲ್ಲ. ಹಾಗಿದ್ದರೂ, ಯೆಹೋವನು ನಿಜವಾಗಿ ದುಷ್ಟವೆಂದು ವೀಕ್ಷಿಸುವ ಕೆಲವು ವಿಷಯಗಳ ಒಂದು ಕಲ್ಪನೆಯನ್ನು ಅವು ಕೊಡುತ್ತವೆ. ಮಾಡಿದಂತಹ ತಪ್ಪಿಗಾಗಿ ಹೊಣೆಗಾರಿಕೆಯನ್ನು ಸ್ವೀಕರಿಸಲು ನಿರಾಕರಣೆಯು ಇದೆಯೋ? ಪಾಪ ಮಾಡಿದವನು ಈ ಮುಂಚೆ ಇದೇ ವಿಷಯದ ಮೇಲೆ ಸಲಹೆಯನ್ನು ಭಂಡತನದಿಂದ ಅಲಕ್ಷಿಸಿದ್ದಾನೋ? ಗಂಭೀರ ತಪ್ಪುಗೈಯುವಿಕೆಯ ಭದ್ರವಾಗಿ ನೆಲೆಸಿರುವ ಒಂದು ಆಚರಣೆಯಿದೆಯೋ? ತಪ್ಪುಗೈದವನು ಯೆಹೋವನ ನಿಯಮಕ್ಕಾಗಿ ಎದ್ದುಕಾಣುವ ಉಪೇಕ್ಷೆಯನ್ನು ತೋರಿಸುತ್ತಾನೋ? ತಪ್ಪನ್ನು ಮುಚ್ಚಿಸಲು—ಪ್ರಾಯಶಃ ಅದೇ ಸಮಯದಲ್ಲಿ ಇತರರನ್ನು ಭ್ರಷ್ಟಗೊಳಿಸಲು—ಆತನು ಚೆನ್ನಾಗಿ ಯೋಜಿಸಿದ ಪ್ರಯತ್ನಗಳನ್ನು ಮಾಡಿದ್ದಾನೋ? (ಯೂದ 4) ತಪ್ಪು ಬೆಳಕಿಗೆ ಬಂದಂತೆ ಅಂಥ ಪ್ರಯತ್ನಗಳು ಇನ್ನೂ ತೀವ್ರಗೊಳ್ಳುತ್ತವೋ? ಇತರರಿಗೆ ಮತ್ತು ಯೆಹೋವನ ನಾಮಕ್ಕೆ ಅವನು ಮಾಡಿದಂತಹ ಹಾನಿಗಾಗಿ ಅವನು ಪೂರ್ಣ ಉಪೇಕ್ಷೆಯನ್ನು ತೋರಿಸುತ್ತಾನೋ? ಅವನ ಮನೋಭಾವದ ಕುರಿತಾಗಿ ಏನು? ದಯೆಯಿಂದ ಶಾಸ್ತ್ರೀಯ ಸಲಹೆಯು ಕೊಡಲ್ಪಟ್ಟ ನಂತರ, ಅವನು ಅಹಂಕಾರಿ ಅಥವಾ ಗರ್ವಿಷ್ಠನಾಗಿದ್ದಾನೋ? ತಪ್ಪನ್ನು ಪುನರಾವೃತ್ತಿಸುವದನ್ನು ಹೋಗಲಾಡಿಸಲು ಒಂದು ಹೃತ್ಪೂರ್ವಕ ಆಶೆಯ ಕೊರತೆ ಅವನಲ್ಲಿದೆಯೋ? ಪಶ್ಚಾತ್ತಾಪದ ಕೊರತೆಯನ್ನು ಬಲವಾಗಿ ಸೂಚಿಸುವ ಅಂಥ ವಿಷಯಗಳನ್ನು ಹಿರಿಯರು ಗ್ರಹಿಸುವದಾದರೆ, ಮಾಡಲ್ಪಟ್ಟ ಪಾಪಗಳು ಕೇವಲ ಶರೀರದ ಬಲಹೀನತೆಗಿಂತ ದುಷ್ಟತನದ ರುಜುವಾತನ್ನು ಕೊಡುತ್ತವೆ ಎಂಬ ಸಮಾಪ್ತಿಗೆ ಬರಬಹುದು.
ದುಷ್ಟ ಪ್ರವೃತ್ತಿಗಳಿರುವಂತೆ ತೋರುವ ಒಬ್ಬ ಮನುಷ್ಯನೊಂದಿಗೆ ವ್ಯವಹರಿಸುವಾಗಲೂ, ನೀತಿಯನ್ನು ಬೆನ್ನಟಲ್ಟು ಪ್ರಚೋದಿಸುವದನ್ನು ಹಿರಿಯರು ನಿಲ್ಲಿಸುವದಿಲ್ಲ. (ಇಬ್ರಿಯ 3:12) ದುಷ್ಟ ವ್ಯಕ್ತಿಗಳು ಪಶ್ಚಾತ್ತಾಪಪಟ್ಟು ಬದಲಾಗಬಹುದು. ಹಾಗಿರದಿದ್ದಲ್ಲಿ, ಯೆಹೋವನು ಇಸ್ರಾಯೇಲ್ಯರನ್ನು “ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು” ಎಂದು ಯಾಕೆ ಪ್ರೇರೇಪಿಸಿದನು? (ಯೆಶಾಯ 55:7) ಪ್ರಾಯಶಃ, ನ್ಯಾಯವಿಧಾಯಕ ವಿಚಾರಣೆಯೊಂದರ ಸಮಯದಲ್ಲಿ ಪಶ್ಚಾತ್ತಾಪದ ವರ್ತನೆ ಮತ್ತು ಮನೋಭಾವದಲ್ಲಿ ಪ್ರತಿಬಿಂಬಿಸಿದಂತೆ ಅವನ ಹೃದಯದ ಸ್ಥಿತಿಯಲ್ಲಿ ಒಂದು ಗುರುತರವಾದ ಬದಲಾವಣೆಯನ್ನು ಹಿರಿಯರು ಗ್ರಹಿಸುವರು.
ಒಬ್ಬ ವ್ಯಕ್ತಿಯನ್ನು ಬಹಿಷ್ಕರಿಸುವ ಸಮಯದಲ್ಲೂ, ಹಿರಿಯರು ಕುರಿಪಾಲಕರೋಪಾದಿ ಅವನು ಪಶ್ಚಾತ್ತಾಪ ಪಡಲು ಮತ್ತು ಯೆಹೋವನ ಮೆಚ್ಚಿಕೆಯೊಳಗೆ ಪುನಃ ಬರಲು ಪ್ರಯತ್ನಿಸುವಂತೆ ಅವನನ್ನು ಪ್ರೇರೇಪಿಸುವರು. ಕೊರಿಂಥದ “ದುಷ್ಟನನ್ನು” ನೆನಪಿಸಿರಿ. ಸ್ಫುಟವಾಗಿ ಅವನು ತನ್ನ ಮಾರ್ಗವನ್ನು ಬದಲಾಯಿಸಿದನು, ಮತ್ತು ಪೌಲನು ನಂತರ ಅವನ ಪುನಃಸ್ಥಾಪನೆಗಾಗಿ ಶಿಫಾರಸ್ಸು ಮಾಡಿದನು. (2 ಕೊರಿಂಥ 2:7, 8) ಅರಸ ಮನಸ್ಸೆಯನ್ನು ಸಹ ಪರಿಗಣಿಸಿರಿ. ಆವನು ಖಂಡಿತವಾಗಿಯೂ ತುಂಬಾ ದುಷ್ಟನಾಗಿದ್ದನು, ಆದರೆ ಕೊನೆಗೆ ಅವನು ಪಶ್ಚಾತ್ತಾಪಪಟ್ಟಾಗ ಯೆಹೋವನು ಆತನ ಪಶ್ಚಾತ್ತಾಪವನ್ನು ಸ್ವೀಕರಿಸಿದನು.—2 ಅರಸುಗಳು 21:10-16; 2 ಪೂರ್ವಕಾಲವೃತ್ತಾಂತ 33:9, 13, 19.
ನಿಜ, ಕ್ಷಮಿಸಲಾರದ ಪಾಪವೊಂದಿದೆ—ಪವಿತ್ರಾತ್ಮದ ವಿರುದ್ಧವಾದ ಪಾಪ. (ಇಬ್ರಿಯ 10:26, 27) ಆ ಪಾಪವನ್ನು ಯಾರು ನಡಿಸಿದ್ದಾನೆಂದು ಯೆಹೋವನೊಬ್ಬನೇ ನಿಷ್ಕರ್ಷಿಸುತ್ತಾನೆ. ಮಾನವರಿಗೆ ಹಾಗೆ ಮಾಡುವ ಯಾವುದೇ ಅಧಿಕಾರವಿಲ್ಲ. ಸಭೆಯನ್ನು ಶುದ್ಧವಾಗಿಡುವದು ಮತ್ತು ಪಶ್ಚಾತ್ತಾಪಪಟ್ಟ ಪಾಪಿಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುವದು ಹಿರಿಯರ ಜವಾಬ್ದಾರಿಯಾಗಿದೆ. ಅವರ ನಿರ್ಣಯಗಳು ಯೆಹೋವನ ವಿವೇಕವನ್ನು ಪ್ರತಿಬಿಂಬಿಸಲು ಬಿಟ್ಟು, ಅವರು ಅದನ್ನು ವಿವೇಚನೆ ಮತ್ತು ನಮ್ರತೆಯಿಂದ ಮಾಡಿದರೆ, ಆಗ ಯೆಹೋವನು ಅವರ ಕುರಿಪಾಲನೆಯ ಈ ಅಂಶವನ್ನು ಆಶೀರ್ವದಿಸುವನು.
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, ಸಪ್ಟಂಬರ 1, 1981ರ ದ ವಾಚ್ಟವರ್ ಪುಟಗಳು 24-6 ನ್ನು; ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 772-4 ನ್ನು ನೋಡಿರಿ.
[ಪುಟ 29 ರಲ್ಲಿರುವ ಚಿತ್ರ]
ಅನನೀಯ ಮತ್ತು ಸಪ್ಫೈರಳು ಹೃದಯದ ದುಷ್ಟತನವನ್ನು ತೋರಿಸುತ್ತಾ, ಕಪಟಾಚಾರದಿಂದ ಪವಿತ್ರಾತ್ಮವನ್ನು ವಂಚಿಸಿದರು