ಕಂಪ್ಯೂಟರ್ ತಂತ್ರಜ್ಞಾನದ ಒಂದು ಸಮತೂಕದ ನೋಟವನ್ನು ಕಾಪಾಡಿಕೊಳ್ಳುವುದು
1 “ಸಮಯವು ಕಡಿಮೆಯಾಗಿರು”ವುದರಿಂದ, ಅಪೊಸ್ತಲ ಪೌಲನು ಪ್ರಥಮ ಶತಮಾನದ ಕ್ರೈಸ್ತರಿಗೆ ಅಪಕರ್ಷಿತರಾಗದಿರುವಂತೆ ಪ್ರಚೋದಿಸಿದನು. (1 ಕೊರಿಂ. 7:29, NW) ಈ ಹಳೆಯ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತರಿಸಿದಂತೆ, ‘ರಾಜ್ಯವನ್ನೂ ದೇವರ ನೀತಿಯನ್ನೂ ಮೊದಲಾಗಿ ಹುಡುಕು’ವುದು ಮತ್ತು ‘ಸಂದರ್ಭೋಚಿತ ಕಾಲವನ್ನು ಕೊಂಡುಕೊಳ್ಳು’ವುದು, ನಮಗೆ ಎಷ್ಟೊಂದು ಜರೂರಿಯದ್ದಾಗಿದೆ! ಸಮಯವು ಅಮೂಲ್ಯವಾಗಿದೆ.—ಮತ್ತಾ. 6:33; ಎಫೆ. 5:15, 16, NW.
2 ತಂತ್ರಜ್ಞಾನವು ಸಮಯದ ಮಹಾನ್ ಮಿತವ್ಯಯಿಯಾಗಿ ಸಂಬೋಧಿಸಲ್ಪಟ್ಟಿದೆ. ಉದಾಹರಣೆಗಾಗಿ, ಕಂಪ್ಯೂಟರ್ನ ಬಟನ್ ಅನ್ನು ಒತ್ತುವ ಮೂಲಕ, ಬೃಹತ್ ಪ್ರಮಾಣಗಳ ಸಮಾಚಾರಕ್ಕೆ ಪ್ರವೇಶಮಾರ್ಗವನ್ನು ಕಂಪ್ಯೂಟರ್ ಉಪಯೋಗಿಸುವ ವ್ಯಕ್ತಿಯೊಬ್ಬನು ಪಡೆದುಕೊಳ್ಳಬಲ್ಲನು. ಇತರ ಮಾಧ್ಯಮಗಳಿಂದ ಮಾಡಲಿಕ್ಕಾಗಿ ಅನೇಕ ತಾಸುಗಳು ಅಥವಾ ವಾರಗಳು ತಗಲಸಾಧ್ಯವಿರುವಂತಹ ಕೆಲಸವನ್ನು, ಅನೇಕವೇಳೆ ಕಂಪ್ಯೂಟರ್ಗಳು ಕೆಲವು ಸೆಕೆಂಡುಗಳೊಳಗೆ ಮಾಡಬಲ್ಲವು. ಸರಿಯಾಗಿ ಉಪಯೋಗಿಸಲ್ಪಡುವಾಗ, ಅವು ಸಹಾಯಕರವಾದ ಉಪಕರಣವಾಗಿವೆ.
3 ಅದು ನಿಜವಾಗಿ ಸಮಯವನ್ನು ಉಳಿಸುವುದೊ?: ಇನ್ನೊಂದು ಕಡೆಯಲ್ಲಿ, ಗಣನೀಯ ಪ್ರಮಾಣದ ಬೆಲೆಗಳಿಲ್ಲದೆ—ಹಣ ಮತ್ತು ಸಮಯದ ರೂಪದಲ್ಲಿ—ಅಂತಹ ತಂತ್ರಜ್ಞಾನವು ಉಪಯೋಗಿಸುವ ವ್ಯಕ್ತಿಗೆ ದೊರಕುವುದಿಲ್ಲ. ಕಂಪ್ಯೂಟರ್ ಕೆಲವು ಕೆಲಸಗಳನ್ನು ಮಾಡುವಂತೆ ಹೇಗೆ ಕಾರ್ಯನಡಿಸಬೇಕೆಂಬುದನ್ನು ಕಲಿಯಲು ಅನೇಕ ತಾಸುಗಳು ಹಿಡಿಯಬಹುದು. ಇದಲ್ಲದೆ, ಸ್ವತಃ ತಂತ್ರಜ್ಞಾನದಿಂದ ಕುತೂಹಲ ಕೆರಳಿಸಲ್ಪಡುವ ವ್ಯಕ್ತಿಯೊಬ್ಬನು, ಹೆಚ್ಚು ಉತ್ತಮವಾಗಿ ವ್ಯಯಿಸಸಾಧ್ಯವಿರುವಂತಹ ಸಮಯವನ್ನು ವ್ಯರ್ಥಮಾಡಬಹುದು. “ಜ್ಞಾನವಂತರಾದ ವ್ಯಕ್ತಿಗಳೋಪಾದಿ” ನಡೆಯಲಿಕ್ಕಾಗಿ “ನಿಮಗಾಗಿ ಸಂದರ್ಭೋಚಿತ ಕಾಲವನ್ನು ಕೊಂಡುಕೊಳ್ಳುವ” ಅಪೊಸ್ತಲ ಪೌಲನ ಬುದ್ಧಿವಾದದಲ್ಲಿ ಒಳಗೊಂಡಿರುವ ಮೂಲತತ್ವವನ್ನು ಮನಸ್ಸಿನಲ್ಲಿಟ್ಟವರಾಗಿದ್ದು, ನಾವು ಒಂದು ಸಮತೂಕವಾದ ನೋಟವನ್ನಿಡಬೇಕು.—1 ಕೊರಿಂಥ 7:31ನ್ನು ನೋಡಿರಿ.
4 ಸದುದ್ದೇಶಿಗಳಾದ ಅನೇಕ ವ್ಯಕ್ತಿಗಳು, ಸಭೆಯ ದಾಖಲೆಗಳನ್ನು ಇಡಲಿಕ್ಕಾಗಿ ಕಂಪ್ಯೂಟರ್ ಕಾರ್ಯಯೋಜನೆಗಳನ್ನು ವಿನ್ಯಾಸಿಸಿದ್ದಾರೆ. ನಿಶ್ಚಯವಾಗಿ, ವ್ಯಕ್ತಿಯೊಬ್ಬನು ತನ್ನ ಕಂಪ್ಯೂಟರನ್ನು ಹೇಗೆ ಉಪಯೋಗಿಸುತ್ತಾನೆ ಎಂಬುದು ಒಂದು ವೈಯಕ್ತಿಕ ನಿರ್ಧಾರವಾಗಿದೆ. ಹಾಗಿದ್ದರೂ, ಮಕ್ಕಳಿಗೆ ಅಥವಾ ಇತರ ಅನಧಿಕೃತ ವ್ಯಕ್ತಿಗಳು ಅದರ ಪ್ರವೇಶಮಾರ್ಗವನ್ನು ಪಡೆದುಕೊಳ್ಳುವುದರಿಂದ, ಯಾವುದಕ್ಕೆ ಫಾರ್ಮ್ಗಳು ಒದಗಿಸಲ್ಪಟ್ಟಿವೆಯೋ, ಆ ಸಭೆಯ ದಾಖಲೆಗಳನ್ನು ಕಂಪ್ಯೂಟರ್ಗಳಲ್ಲಿ ಇಡಬಾರದು. ಸಭೆಯ ಎಲ್ಲ ದಾಖಲೆ—ಅಕೌಂಟ್ಸಿನ ದಾಖಲೆಗಳು, ಕಾಂಗ್ರಿಗೇಶನ್ಸ್ ಪಬ್ಲಿಷರ್ ರೆಕಾರ್ಡ್ ಕಾರ್ಡುಗಳು, ಇನ್ನು ಮುಂತಾದವು—ಗಳನ್ನು, ಸೊಸೈಟಿಯಿಂದ ಒದಗಿಸಲ್ಪಡುವ ಫಾರ್ಮ್ಗಳಲ್ಲಿ ಇಡತಕ್ಕದ್ದು, ಮತ್ತು ಸಭೆಯ ಈ ಫಾರ್ಮ್ಗಳಲ್ಲಿರುವ ಮಾಹಿತಿಯನ್ನು ಒಂದು ಕಂಪ್ಯೂಟರ್ನಲ್ಲಿ ಸಂಗ್ರಹಿಸಿಡಬಾರದು. ಈ ರೀತಿಯಲ್ಲಿ, ಸಭೆಯ ಗೋಪ್ಯವಾದ ದಾಖಲೆಗಳು ಸಂರಕ್ಷಿಸಲ್ಪಡುವವು.
5 ಜವಾಬ್ದಾರಿ ಹೊತ್ತಿರುವ ಮೇಲ್ವಿಚಾರಕರು, ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಕಾರ್ಯಕ್ರಮಕ್ಕಾಗಿ ನೇಮಕಗಳನ್ನು ಮಾಡುವುದರಲ್ಲಿ ವಿವೇಚಿಸುವವರಾಗಿರತಕ್ಕದ್ದು. ನಿರ್ದಿಷ್ಟ ಭಾಗದಲ್ಲಿ ಆವರಿಸಲ್ಪಡಲಿರುವ ವಿಷಯವನ್ನು ಅವರು ಮನಸ್ಸಿನಲ್ಲಿಡಬೇಕಾದ ಅಗತ್ಯವಿದೆ. ಉದಾಹರಣೆಗಾಗಿ, ಶಾಲೆಯಲ್ಲಿ, ಯಾವುದಾದರೊಂದು ವಸ್ತುವಿಷಯವು ಯಾವನೇ ವಿದ್ಯಾರ್ಥಿಗೆ ನಿರ್ವಹಿಸಲಿಕ್ಕಾಗಿ ಸೂಕ್ತವಾಗಿಲ್ಲದಿರಬಹುದು. ನಿರೂಪಣೆಯ ಉದ್ದೇಶ, ಹಾಗೂ ವ್ಯಕ್ತಿಯ ಅರ್ಹತೆಗಳು ಮತ್ತು ವಿಷಯದ ಸ್ವರೂಪವು ಪರಿಗಣಿಸಲ್ಪಡಬೇಕು. ಇದನ್ನು ಕಂಪ್ಯೂಟರ್ ನಿರ್ಧರಿಸುವಂತೆ ಬಿಟ್ಟುಬಿಡಬಾರದು.
6 ಸಭಾ ಕೂಟಗಳಲ್ಲಿ ಪ್ರಸ್ತುತಪಡಿಸಲಿಕ್ಕಾಗಿ ಯಾರಿಗೆ ಒಂದು ಭಾಗವು ನೇಮಕ ಮಾಡಲ್ಪಟ್ಟಿದೆಯೋ ಆ ಸಹೋದರನು, ಬೇರೆ ಇನ್ನಾರಿಂದಲೊ ತಯಾರಿಸಲ್ಪಡುವ ವಿಷಯದ ಮೇಲೆ ಅವಲಂಬಿಸಬಾರದು. ಸಹೋದರನೊಬ್ಬನ ಬಳಿ ಒಂದು ಕಂಪ್ಯೂಟರ್ ಇದೆ ಮತ್ತು ಸಂಶೋಧನೆ ಮಾಡಲು ಹಾಗೂ ಒಂದು ಹೊರಮೇರೆಯನ್ನು ವೇಗವಾಗಿ ಮತ್ತು ನೀಟಾಗಿ ಟೈಪ್ ಮಾಡಲು ಅದನ್ನು ಉಪಯೋಗಿಸಬಲ್ಲನು ಎಂಬ ಕಾರಣ ಮಾತ್ರಕ್ಕಾಗಿ, ತಮ್ಮ ಸ್ವಂತ ನೇಮಕಗಳನ್ನು ತಯಾರಿಸುವುದಕ್ಕೆ ತಗಲುವ ಸಮಯ ಮತ್ತು ಪ್ರಯತ್ನವನ್ನು ಅವರಿಗೆ ಉಳಿಸುತ್ತಾ, ತಮಗಾಗಿ ತಮ್ಮ ಕೂಟದ ಐಟಮ್ಗಳನ್ನು ತಯಾರಿಸುವಂತೆ ಇತರರು ಆ ಸಹೋದರನನ್ನು ಕೇಳಬಾರದು. ಜವಾಬ್ದಾರಿ ಹೊತ್ತಿರುವ ಕ್ರೈಸ್ತರು, ಬೈಬಲ್ ಭಾಷಣಗಳನ್ನು ಅಥವಾ ಕೂಟದ ಭಾಗಗಳನ್ನು ತಯಾರಿಸಿ, ಸಭೆಯಲ್ಲಿರುವ ಇತರರಿಗೆ ಅಥವಾ ಬೇರೆ ಸಭೆಗಳಲ್ಲಿರುವವರಿಗೆ ಅದನ್ನು ದೊರಕಿಸಲು ಸ್ವಾತಂತ್ರ್ಯ ವಹಿಸುವುದಿಲ್ಲ. ಆದರೂ, ಕಂಪ್ಯೂಟರ್ ಮತ್ತು ಸೊಸೈಟಿಯ ಸಿಡಿ-ರಾಮ್ (CD-ROM)ನಲ್ಲಿರುವ ವಾಚ್ಟವರ್ ಪುಸ್ತಕ ಭಂಡಾರವು, ಲಭ್ಯವಿರುವ ಪರಿಮಿತ ಸಮಯದಲ್ಲಿ ಪರಿಣಾಮಕಾರಿಯಾದ ಸಂಶೋಧನೆಗೆ ನೆರವನ್ನೀಯುವ ಅಮೂಲ್ಯ ಉಪಕರಣಗಳಾಗಿರಬಹುದು.—ಎಚ್ಚರ! ಪತ್ರಿಕೆಯ, 1994, ಮೇ 8ರ ಸಂಚಿಕೆಯ, 27ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.
7 ಸಹೋದರರ ನಡುವೆ, ಕಂಪ್ಯೂಟರ್ ಕಾರ್ಯಯೋಜನೆಗಳು, ಲಿಸ್ಟ್ಗಳು, ಮತ್ತು ಸಂಬಂಧಿತ ದಾಖಲೆ ಸಂಗ್ರಹಣವನ್ನು ಪುನರುತ್ಪಾದಿಸುವುದು ಮತ್ತು ವಿತರಿಸುವುದು, ಮತ್ತು ಸೇವಾ ಕೂಟ ಹಾಗೂ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿರುವ ಭಾಗಗಳನ್ನು, ಇಲೆಕ್ಟ್ರಾನಿಕ್ ಅಥವಾ ಇತರ ಮಾಧ್ಯಮಗಳ ಮೂಲಕ ತಯಾರಿಸುವುದು ಮತ್ತು ವಿತರಿಸುವುದರ ವಿಷಯವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಸಹೋದರರು ಸ್ಥಳಿಕ ಪ್ರಯೋಜನಗಳನ್ನು ಮನಸ್ಸಿನಲ್ಲಿಟ್ಟವರಾಗಿದ್ದು, ತಮ್ಮ ಸ್ವಂತ ವಿಷಯವನ್ನು ತಯಾರಿಸುವುದು ಅವರಿಗೆ ಒಳಿತಾಗಿದೆ. (1 ತಿಮೊ. 4:13, 15) ಮತ್ತು ಯಾವುದೇ ಕಾರಣಕ್ಕಾಗಿ, ಹಣಕಾಸಿನ ಗಳಿಕೆಯನ್ನು ಮಾಡಲು ಸಭೆಯ ವ್ಯವಹಾರಗಳನ್ನು ಎಂದೂ ದುರುಪಯೋಗಿಸಿಕೊಳ್ಳಬಾರದು.
8 ಕಾವಲಿನಬುರುಜು ಅಭ್ಯಾಸ ಅಥವಾ ಸಭಾ ಪುಸ್ತಕ ಅಭ್ಯಾಸದಲ್ಲಿ ಉಪಯೋಗಿಸಲ್ಪಡುವ ಶಾಸ್ತ್ರವಚನಗಳ, ಕಂಪ್ಯೂಟರ್ ಪ್ರಿಂಟೌಟ್ಗಳ (ಮುದ್ರಿತ ಪ್ರತಿಗಳ) ವಿತರಣೆಯ ಕುರಿತಾಗಿ ಏನು? ಒಳ್ಳೇದು, ಬೈಬಲುಗಳಲ್ಲಿ ಮತ್ತು ಅಭ್ಯಾಸಿಸಲ್ಪಡುತ್ತಿರುವ ಪ್ರಕಾಶನಗಳಲ್ಲಿಯೇ ತಮ್ಮ ವೈಯಕ್ತಿಕ ಟಿಪ್ಪಣಿಗಳು ಮತ್ತು ಗುರುತುಗಳನ್ನು ಮಾಡುವುದು, ಪ್ರಚಾರಕರಿಗೆ ಇಷ್ಟಕರವಾಗಿರಬಹುದು. ಕೂಟದಲ್ಲಿ, ಪ್ರಕಾಶನಗಳಲ್ಲಿ ಉದಾಹರಿಸಲ್ಪಟ್ಟಿರುವ ಶಾಸ್ತ್ರ ವಚನಗಳ ಕಂಪ್ಯೂಟರ್ ಪ್ರಿಂಟೌಟ್ಗಳ ಉಪಯೋಗವು, ಶಾಸ್ತ್ರವಚನಗಳನ್ನು ಕಂಡುಹಿಡಿಯುವುದರಲ್ಲಿ ಸ್ವತಃ ಬೈಬಲಿನ ಉಪಯೋಗವನ್ನು ನಿರುತ್ತೇಜಿಸಸಾಧ್ಯವಿದೆ. ಆದರೂ ಒಂದು ಬೈಬಲ್ ಅಭ್ಯಾಸದ ಸಮಯದಲ್ಲಿ ಅಥವಾ ಸಭಾ ಕೂಟವೊಂದರಲ್ಲಿ ಶಾಸ್ತ್ರ ವಚನಗಳನ್ನು ತೆರೆದು ನೋಡುವುದು, ಪಡೆದುಕೊಳ್ಳಲ್ಪಡುವ ತರಬೇತಿಯ ಒಂದು ಭಾಗವಾಗಿದೆ; ಇದು ಕ್ಷೇತ್ರ ಶುಶ್ರೂಷೆಯಲ್ಲಿ ಬೈಬಲಿನ ಪರಿಣಾಮಕಾರಿಯಾದ ಉಪಯೋಗಕ್ಕಾಗಿ ನಮ್ಮನ್ನು ಸಜ್ಜುಗೊಳಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮತ್ತು ವಿಶೇಷವಾಗಿ ಹೆಚ್ಚು ದೀರ್ಘವಾದ ಉದ್ಧರಣಗಳಿರುವಾಗ—ವಿಶೇಷವಾಗಿ ಸಭಿಕರು ಬೈಬಲಿನಲ್ಲಿ ಅನುಸರಿಸುವಂತೆ ಪ್ರೋತ್ಸಾಹಿಸಲ್ಪಡುವಾಗ—ಬೈಬಲಿನಿಂದ ನೇರವಾಗಿ ಓದುವುದು ಹೆಚ್ಚು ಕಾರ್ಯಸಾಧಕವಾಗಿದೆ.
9 ಇತರ ಗಂಭೀರ ಅಪಾಯಗಳು: ಆಗಸ್ಟ್ 1, 1993ರ ಕಾವಲಿನಬುರುಜು ಸಂಚಿಕೆಯ, 17ನೆಯ ಪುಟವು, ಒಂದು ನೆಟ್ವರ್ಕಿಗೆ ಒಂದು ಕಂಪ್ಯೂಟರನ್ನು ಜೋಡಿಸುವುದು, ಗಂಭೀರವಾದ ಆತ್ಮಿಕ ಅಪಾಯಗಳಿಗೆ ಮಾರ್ಗವನ್ನು ತೆರೆಯಬಲ್ಲದು ಎಂಬುದಾಗಿ ಉಲ್ಲೇಖಿಸಿತು. ಒಂದು ನೆಟ್ವರ್ಕಿನ ಮೂಲಕ, ನೀತಿ ನಿಷ್ಠೆಗಳಿಲ್ಲದ ವ್ಯಕ್ತಿಯೊಬ್ಬನು ಒಂದು ವೈರಸ್—ಕಂಪ್ಯೂಟರ್ನ ಫೈಲುಗಳನ್ನು ಹಾಳುಮಾಡಲು ಮತ್ತು ನಾಶಪಡಿಸಲು ವಿನ್ಯಾಸಿಸಲ್ಪಟ್ಟಿರುವ ಒಂದು ಕಾರ್ಯಯೋಜನೆ—ಅನ್ನು ಕಳುಹಿಸಸಾಧ್ಯವಿರುವಂತೆಯೇ, ಇತರರನ್ನು ನೈತಿಕವಾಗಿ ಅಥವಾ ಬೇರೆ ರೀತಿಯಲ್ಲಿ ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿರುವ ಧರ್ಮಭ್ರಷ್ಟರು, ವೈದಿಕರು ಮತ್ತು ವ್ಯಕ್ತಿಗಳು, ತಮ್ಮ ವಿಷಭರಿತವಾದ ವಿಚಾರಗಳನ್ನು ಇಂತಹ ನೆಟ್ವರ್ಕ್ಗಳ ಮೂಲಕ ಸ್ವಚ್ಛಂದವಾಗಿ ಹರಡಿಸಬಲ್ಲರು. ಇವುಗಳನ್ನು ಉಪಯೋಗಿಸುವ ಕ್ರೈಸ್ತರನ್ನು ಇವು “ದುಸ್ಸಹವಾಸ”ಕ್ಕೆ ಒಡ್ಡಬಲ್ಲವು. (1 ಕೊರಿಂ. 15:33) ಕಂಪ್ಯೂಟರ್ ನೆಟ್ವರ್ಕ್ಗಳು, ಆತ್ಮಿಕ ವಿಚಾರಗಳ ಕುರಿತಾಗಿ ಊಹೆಕಟ್ಟುವುದಕ್ಕೆ ಮಾತ್ರವಲ್ಲ, ಕೆಟ್ಟ ಬುದ್ಧಿವಾದವನ್ನು ಕೊಡಲು, ಹರಟೆ ಮತ್ತು ಸುಳ್ಳು ಮಾಹಿತಿಯನ್ನು ಹಬ್ಬಿಸಲು, ನಕಾರಾತ್ಮಕ ವಿಚಾರಗಳನ್ನು ಬೇರೂರಿಸಲು, ಕೆಲವರ ನಂಬಿಕೆಯನ್ನು ಉರುಳಿಸುವ ಪ್ರಶ್ನೆಗಳು ಮತ್ತು ಸಂದೇಹಗಳನ್ನು ಎಬ್ಬಿಸಲು, ಮತ್ತು ಬೈಬಲಿನ ಖಾಸಗಿ ಅರ್ಥವಿವರಣೆಗಳನ್ನು ಪ್ರಸಾರ ಮಾಡಲು ಸಹ ಉಪಯೋಗಿಸಲ್ಪಡುತ್ತಿವೆ ಎಂಬ ವರದಿಗಳನ್ನು ಸೊಸೈಟಿಯು ಪಡೆದುಕೊಂಡಿದೆ. ಧರ್ಮಭ್ರಷ್ಟರ ಹಾಗೂ ವೈದಿಕರ ಸಾಹಿತ್ಯ ಮತ್ತು ಪತ್ರಿಕೆಗಳು ಅದನ್ನೇ ಮಾಡಲು ಪ್ರಯತ್ನಿಸುತ್ತವೆ. ಮೇಲ್ಮೈ ನೋಟದಲ್ಲಿ, ಕೆಲವು ಮಾಹಿತಿಯು ಆಸಕ್ತಿದಾಯಕವೂ ಬೋಧಪ್ರದವೂ ಆದದ್ದಾಗಿ ತೋರಬಹುದಾದರೂ ಅದು ವಿಷಭರಿತವಾದ ಮೂಲಾಂಶಗಳಿಂದ ಅಲಂಕರಿಸಲ್ಪಟ್ಟಿರಬಹುದು. ಸಮಯೋಚಿತವಾದ ಆತ್ಮಿಕ ಆಹಾರ ಮತ್ತು ಸ್ಪಷ್ಟೀಕರಣಗಳಿಗಾಗಿ, ಕ್ರೈಸ್ತರು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಕಡೆಗೆ ನೋಡುತ್ತಾರೆ. (ಜುಲೈ 1, 1994ರ ಕಾವಲಿನಬುರುಜು ಪತ್ರಿಕೆಯ 9-11ನೆಯ ಪುಟಗಳನ್ನು ನೋಡಿರಿ.) ಎಲ್ಲಾ ಭ್ರಷ್ಟ ಪ್ರಭಾವಗಳ ವಿರುದ್ಧವಾಗಿ ತನ್ನ ನಂಬಿಕೆಯನ್ನು ಕಾಪಾಡಿಕೊಳ್ಳುವ ಗಂಭೀರವಾದ ಜವಾಬ್ದಾರಿಯು ಒಬ್ಬ ಕ್ರೈಸ್ತನಿಗಿದೆ, ಮತ್ತು ಮೂಲಭೂತವಾಗಿ ತಾನು ಯಾರೊಂದಿಗೆ ಸಹವಾಸಿಸುತ್ತಿದ್ದೇನೆಂಬುದನ್ನು ಯಾವಾಗಲೂ ತಿಳಿದಿರಬೇಕು.—ಮತ್ತಾ. 24:45-47; 2 ಯೋಹಾ. 10, 11.
10 ಅದೇ ಕಾವಲಿನಬುರುಜು ಪತ್ರಿಕೆಯ ಲೇಖನವು, ಗ್ರಂಥಸ್ವಾಮ್ಯ ನಿಯಮಗಳನ್ನು ಗೌರವಿಸುವುದರ ಪ್ರಮುಖತೆಯನ್ನು ಒತ್ತಿಹೇಳಿತು. ಕಂಪ್ಯೂಟರ್ ಕಾರ್ಯಯೋಜನೆಗಳನ್ನು ಸಿದ್ಧಪಡಿಸಿ, ವಿಕ್ರಯಿಸುವ ಅಧಿಕಾಂಶ ಕಂಪೆನಿಗಳು ಇವುಗಳ ಗ್ರಂಥಸ್ವಾಮ್ಯವನ್ನು ಪಡೆದಿರುತ್ತವೆ, ಮತ್ತು ಕಾರ್ಯಯೋಜನೆಗಳನ್ನು ನ್ಯಾಯಬದ್ಧವಾಗಿ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ರೇಖಿಸುವ ಪರವಾನೆಯೊಂದನ್ನು ಅವು ಒದಗಿಸುತ್ತವೆ. ಸಾಮಾನ್ಯವಾಗಿ ಆ ಪರವಾನೆಯು ಹೇಳುವುದೇನಂದರೆ, ಈ ಕಾರ್ಯಯೋಜನೆಯ ಪ್ರತಿಗಳನ್ನು ಅದರ ಒಡೆಯನು ಇತರರಿಗೆ ಕೊಡಸಾಧ್ಯವಿಲ್ಲ; ವಾಸ್ತವವಾಗಿ, ಹಾಗೆ ಮಾಡುವುದನ್ನು ಅಂತಾರಾಷ್ಟ್ರೀಯ ಗ್ರಂಥಸ್ವಾಮ್ಯ ನಿಯಮವು ಕಾನೂನುಬಾಹಿರವಾಗಿ ಮಾಡುತ್ತದೆ. ನಿಯಮಗಳನ್ನು ಉಲ್ಲಂಘಿಸುವುದರ ಕುರಿತು, ಲೋಭಿಗಳಾದ ಅನೇಕ ಜನರಿಗೆ ಅಧರ್ಮಭೀತಿ ಇರುವುದಿಲ್ಲ. ಆದರೂ, ಕೈಸರನಿಗೆ ಸೇರುವುದನ್ನು ಕೈಸರನಿಗೆ ಕೊಡುತ್ತಾ, ನ್ಯಾಯಬದ್ಧವಾದ ವಿಚಾರಗಳಲ್ಲಿ ಕ್ರೈಸ್ತರು ನ್ಯಾಯನಿಷ್ಠರಾಗಿ ನಡೆಯುವವರಾಗಿರಬೇಕು.—ಮತ್ತಾ. 22:21; ರೋಮಾ. 13:1.
11 ತಂತ್ರಜ್ಞಾನದ ಬಳಸುವಿಕೆಯ ಯಾವುದೇ ಮೌಲ್ಯವನ್ನು, ಅದರ ಉಪಯೋಗದಲ್ಲಿ ಅಂತರ್ಗತವಾಗಿರುವ ಸಂಭಾವ್ಯ ಅಪಾಯಗಳ ವಿರುದ್ಧವಾಗಿ ತೂಗಿನೋಡಬೇಕು. ಟೆಲಿವಿಷನ್ ಅನ್ನು ಒಳ್ಳೆಯ ಪ್ರಯೋಜನಕ್ಕಾಗಿ ಉಪಯೋಗಿಸಸಾಧ್ಯವಿರುವಂತೆಯೇ, ಇಂದು ಮಾನವಕುಲದ ಮೇಲೆ ಅದು ಹಾಕಿರುವ ಅಹಿತಕರವಾದ ಪರಿಣಾಮವು, ಲೌಕಿಕ ಮೂಲಗಳು ಸಹ ಗಂಭೀರವಾದ ಚಿಂತೆಯನ್ನು ವ್ಯಕ್ತಪಡಿಸುವಂತೆ ಮಾಡಿದೆ. ಕಂಪ್ಯೂಟರ್ ನೆಟ್ವರ್ಕ್ಗಳು ಲೋಕವ್ಯಾಪಕವಾಗಿ ವ್ಯಾಪಿಸಿವೆ ಮತ್ತು ಅವು ಮನೆಯೊಳಗೆ ಅಥವಾ ಉದ್ಯೋಗ ಸ್ಥಳದಲ್ಲಿ ಅಪರಿಮಿತವಾದ ಅಮೂಲ್ಯ ಮಾಹಿತಿಯನ್ನು ತರಬಲ್ಲವು. ಅವು ವ್ಯಾಪಾರಗಳಿಗೆ ಮತ್ತು ಸಂಸ್ಥೆಗಳಿಗೆ ಹಾಗೂ ನಾವು ಜೀವಿಸುವ, ವೇಗವಾಗಿ ಪ್ರಗತಿಮಾಡುತ್ತಿರುವ ಸಮಾಜದಲ್ಲಿನ ವೈಯಕ್ತಿಕವಾದ ಅಥವಾ ವ್ಯಾಪಾರದ ಅಭಿರುಚಿಗಳೊಂದಿಗೆ ಸರಿಸಮನಾಗಿ ಮುಂದುವರಿಯುವ ಆವಶ್ಯಕತೆಯುಳ್ಳ ವ್ಯಕ್ತಿಗಳಿಗೆ, ಹೆಚ್ಚು ಅಗತ್ಯವಾಗಿರುವ ಸೇವಾಸಹಾಯಗಳನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ, ಕಂಪ್ಯೂಟರ್ ನೆಟ್ವರ್ಕ್ಗಳು, ಲಂಪಟ ಸಾಹಿತ್ಯ, ವಿಭಾಜಕ ದ್ವೇಷ ಪ್ರಚಾರ ಕಾರ್ಯಗಳು, ಮತ್ತು ತುಚ್ಛವಾದ ಹಾಗೂ ದುಷ್ಟ ಕೃತ್ಯಗಳನ್ನು ಹೇಗೆ ಮಾಡಬೇಕೆಂಬುದರ ವಿವರವಾದ ಮಾಹಿತಿಯಂತಹ ಸಮಸ್ಯೆಗಳಿಂದ ಕಾಡಿಸಲ್ಪಡುತ್ತವೆ.
12 ಆದುದರಿಂದ, ಕ್ರೈಸ್ತನೊಬ್ಬನು ಕಂಪ್ಯೂಟರ್ ತಂತ್ರಜ್ಞಾನದ ಒಂದು ಸಮತೂಕ ನೋಟವನ್ನು ಏಕೆ ಕಾಪಾಡಿಕೊಳ್ಳಬೇಕೆಂಬುದಕ್ಕೆ ಅನೇಕ ಪ್ರಮುಖ ಕಾರಣಗಳಿವೆ. ಸೊಸೈಟಿಯು ಕಂಪ್ಯೂಟರ್ ಡಿಸ್ಕೆಟ್ಗಳಲ್ಲಿ ದೊರೆಯುವಂತೆ ಮಾಡಿರುವ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್, ಇನ್ಸೈಟ್ ಸಂಪುಟಗಳು, ಮತ್ತು ಗೆಟ್ವರ್ಸ್ ಕಾರ್ಯಯೋಜನೆಯಲ್ಲಿ ಅನೇಕ ವ್ಯಕ್ತಿಗಳು ಆನಂದಿಸುತ್ತಿದ್ದಾರೆ. ಸೊಸೈಟಿಯು ಭಾರತದಲ್ಲಿ ಇನ್ನೂ ಅದನ್ನು ವಿತರಿಸದಿರುವುದಾದರೂ, ಇತರರು ಹೆಚ್ಚಿನ ಸಂಶೋಧನಾ ಸಾಮರ್ಥ್ಯಗಳನ್ನು ಸಂಘಟಿಸುವ, ಸಿಡಿ-ರಾಮ್ (CD-ROM)ನಲ್ಲಿರುವ ವಾಚ್ಟವರ್ ಪುಸ್ತಕ ಭಂಡಾರವನ್ನು, ಹೊರದೇಶದಿಂದ ವೈಯಕ್ತಿಕವಾಗಿ ಪಡೆದುಕೊಳ್ಳಲು ಶಕ್ತರಾಗಿದ್ದಾರೆ. ನಿರ್ದಿಷ್ಟ ತಂತ್ರಜ್ಞಾನದ ಮೌಲ್ಯವನ್ನು ಗ್ರಹಿಸುವಾಗ, ಉಪಯುಕ್ತಕರವಾದ ಉದ್ದೇಶಗಳಿಗಾಗಿ ಅಂತಹ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುವ ವ್ಯಕ್ತಿಯೊಬ್ಬನು, ನಕಾರಾತ್ಮಕವಾದ ಯಾವುದೇ ಅಂಶಗಳಿಂದ ತನ್ನನ್ನು ಮತ್ತು ಇತರರನ್ನು ಸಂರಕ್ಷಿಸಲು ಸಹ ಜಾಗರೂಕನಾಗಿರಬೇಕು. ತಂತ್ರಜ್ಞಾನದ ಹಾನಿರಹಿತ ಉಪಯೋಗವು ಸಹ, ನಮ್ಮ ಸಮರ್ಪಿತ ಸಮಯದಲ್ಲಿ ಅತಿಯಾದ ಪ್ರಮಾಣವನ್ನು ಬಳಸಿಕೊಳ್ಳದಂತೆ ಅಥವಾ ನಮ್ಮ ಪ್ರಧಾನ ಕಾರ್ಯ ಮತ್ತು ಗುರಿಗಳಿಂದ ನಮ್ಮನ್ನು ಅಪಕರ್ಷಿಸದಂತೆ, ನಾವು ಸಮತೂಕವನ್ನು ಅಭ್ಯಾಸಿಸುವ ಅಗತ್ಯವಿದೆ.—ಮತ್ತಾ. 6:22; 28:19, 20.