ಪ್ರಶ್ನಾ ಪೆಟ್ಟಿಗೆ
◼ ಈಗ ನಾವು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಪಡೆದಿರುವುದರಿಂದ, ಒಂದು ಬೈಬಲ್ ಅಭ್ಯಾಸವು ಎಷ್ಟು ದೀರ್ಘಕಾಲ ನಡೆಸಲ್ಪಡಬೇಕು?
ಗತ ಸಮಯಗಳಲ್ಲಿ, ಆಸಕ್ತರಾಗಿರುವ ಹೊಸಬರೊಂದಿಗೆ ಎರಡು ಪುಸ್ತಕಗಳು ಅಭ್ಯಸಿಸಲ್ಪಡುವ ತನಕ, ಒಂದು ಮನೆ ಬೈಬಲ್ ಅಭ್ಯಾಸದ ಮುಂದುವರಿಯವಿಕೆಯು ಶಿಫಾರಸ್ಸು ಮಾಡಲ್ಪಟ್ಟಿತ್ತು. ಈಗ ನಾವು ಜ್ಞಾನ ಎಂಬ ಪುಸ್ತಕವನ್ನು ಪಡೆದಿರುವುದರಿಂದ, ಕಾವಲಿನಬುರುಜು ಪತ್ರಿಕೆಯ ಜನವರಿ 15, 1996ರ ಸಂಚಿಕೆಯಲ್ಲಿ, 13 ಮತ್ತು 14ನೇ ಪುಟಗಳಲ್ಲಿ ರೇಖಿಸಲ್ಪಟ್ಟಿರುವಂತೆ, ಈ ಕಾರ್ಯವಿಧಾನದಲ್ಲಿ ಒಂದು ಸರಿಹೊಂದಿಸುವಿಕೆಯನ್ನು ಮಾಡುವುದು ಯೋಗ್ಯವಾದದ್ದಾಗಿದೆಯೆಂದು ತೋರುತ್ತದೆ.
ಜ್ಞಾನ ಪುಸ್ತಕವು, “ನಿತ್ಯಜೀವಕ್ಕಾಗಿ ಯುಕ್ತವಾದ ಮನಃಪ್ರವೃತ್ತಿ”ಯಿರುವವರು ಯೆಹೋವನಿಗೆ ಸಮರ್ಪಣೆಮಾಡಿ, ದೀಕ್ಷಾಸ್ನಾನ ಪಡೆಯಲಿಕ್ಕೆ, ತಾವು ತಿಳಿದುಕೊಳ್ಳಬೇಕಾಗಿರುವ ವಿಷಯವನ್ನು ಕಲಿಯಲಿಕ್ಕೆ ಸಹಾಯಮಾಡಲು ವಿನ್ಯಾಸಿಸಲ್ಪಟ್ಟಿದೆ. (ಅ. ಕೃ. 13:48) ಆದುದರಿಂದ, ಈ ಹೊಸ ಪ್ರಕಾಶನವನ್ನು ಪೂರ್ಣಗೊಳಿಸಿದ ಅನಂತರ, ಅದೇ ವಿದ್ಯಾರ್ಥಿಯೊಂದಿಗೆ ಎರಡನೆಯ ಪುಸ್ತಕವನ್ನು ಅಭ್ಯಸಿಸುವ ಅಗತ್ಯವಿರುವುದಿಲ್ಲ. ನಿಮ್ಮ ಬೈಬಲ್ ವಿದ್ಯಾರ್ಥಿಗಳು ಸತ್ಯವನ್ನು ಸ್ವೀಕರಿಸಲು ತೊಡಗಿದಂತೆ, ಯೆಹೋವನ ಸಾಕ್ಷಿಗಳ ಕೂಟಗಳನ್ನು ಹಾಜರಾಗುವ ಮೂಲಕ ಹಾಗೂ ಬೈಬಲನ್ನು ಮತ್ತು ವಿವಿಧ ಕ್ರೈಸ್ತ ಪ್ರಕಾಶನಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಪೂರ್ಣಗೊಳಿಸುವಂತೆ ನೀವು ಅವರನ್ನು ಪ್ರಗತಿಪರವಾಗಿ ಪ್ರೋತ್ಸಾಹಿಸಬಲ್ಲಿರಿ.
ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಎಂಬ ಪುಸ್ತಕದ 175ರಿಂದ 218ನೆಯ ಪುಟಗಳಲ್ಲಿರುವ ಪ್ರಶ್ನೆಗಳೊಂದಿಗೆ ನೀವು ಸಂಪೂರ್ಣವಾಗಿ ಪರಿಚಿತರಾಗಿರುವಲ್ಲಿ, ಇದು ಸಹಾಯಕಾರಿಯಾಗಿರಬಹುದು. ಬೈಬಲ್ ವಿದ್ಯಾರ್ಥಿಯೊಂದಿಗೆ ನೀವು ಈ ಪ್ರಶ್ನೆಗಳ ಉಲ್ಲೇಖವನ್ನು ಅಥವಾ ಅವುಗಳ ಪುನರ್ವಿಮರ್ಶೆಯನ್ನು ಮಾಡಬಾರದಾದರೂ, ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ಹಿರಿಯರು ಪ್ರಶ್ನೆಗಳನ್ನು ಪುನರ್ವಿಮರ್ಶಿಸುವಾಗ, ವಿದ್ಯಾರ್ಥಿಗೆ ಮೂಲಭೂತ ಬೈಬಲ್ ಸತ್ಯಗಳ ಯೋಗ್ಯವಾದೊಂದು ತಿಳಿವಳಿಕೆಯನ್ನು ವ್ಯಕ್ತಪಡಿಸಲು ಶಕ್ಯಗೊಳಿಸುವ, ಜ್ಞಾನ ಪುಸ್ತಕದಲ್ಲಿನ ಅಂಶಗಳನ್ನು ಒತ್ತಿಹೇಳುವುದು ಒಳ್ಳೆಯದಾಗಿರಬಹುದು.
ಬೈಬಲ್ ಬೋಧನೆಗಳನ್ನು ಬೆಂಬಲಿಸಲು, ಇಲ್ಲವೇ ಸುಳ್ಳು ಸಿದ್ಧಾಂತಗಳನ್ನು ಅಪ್ರಮಾಣೀಕರಿಸಲು, ಹೊರಗಿನ ವಿಷಯವನ್ನು ಅಥವಾ ಹೆಚ್ಚಿನ ವಿವಾದಗಳನ್ನು ಒಳತರುತ್ತಾ, ಜ್ಞಾನ ಪುಸ್ತಕದಲ್ಲಿನ ಮಾಹಿತಿಯನ್ನು ಅನುಬಂಧಿಸುವ ಅಗತ್ಯವಿಲ್ಲ. ಇದು ಅಭ್ಯಾಸವನ್ನು ಒಂದು ದೀರ್ಘ ಕಾಲದ ವರೆಗೆ ವಿಸ್ತರಿಸಲು ಮಾತ್ರ ಕಾರ್ಯನಡಿಸುವುದು. ಬದಲಿಗೆ, ಈ ಪುಸ್ತಕವನ್ನು ಅತಿ ಶೀಘ್ರವಾಗಿ ಆವರಿಸಸಾಧ್ಯವಿದೆ, ಪ್ರಾಯಶಃ ಸುಮಾರು ಆರು ತಿಂಗಳುಗಳಲ್ಲಿ ಎಂದು ಆಶಿಸಲಾಗುತ್ತದೆ. ನಾವು ಅದನ್ನು ಸ್ಫುಟವಾಗಿಯೂ ಸಂಕ್ಷೇಪವಾಗಿಯೂ ನೀಡಸಾಧ್ಯವಿರುವಂತೆ, ನಾವು ಮುಂಚೆಯೇ ವಿಷಯವನ್ನು ಸಂಪೂರ್ಣವಾಗಿ ಅಭ್ಯಸಿಸುವುದಕ್ಕಾಗಿರುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಯು ಮುಂಚೆಯೇ ಅಭ್ಯಸಿಸುವಂತೆ, ಉದ್ಧೃತ ಶಾಸ್ತ್ರವಚನಗಳನ್ನು ತೆರೆದುನೋಡುವಂತೆ, ಮತ್ತು ಪ್ರತಿಯೊಂದು ಅಧ್ಯಾಯದಲ್ಲಿ ಪುಸ್ತಕವು ಏನನ್ನು ಕಲಿಸುತ್ತಿದೆ ಎಂಬುದನ್ನು ಸ್ಫುಟವಾಗಿ ವಿವೇಚಿಸಲು ಪ್ರಯತ್ನಿಸುವಂತೆ ಪ್ರೋತ್ಸಾಹಿಸಲ್ಪಡಬೇಕು.
ಅಲ್ಪಾವಧಿಯ ಒಂದು ಸಮಯದಲ್ಲಿ ಅತ್ಯಧಿಕ ಸಂಖ್ಯೆಯ ಪರಿಣಾಮಕಾರಿಯಾದ ಬೈಬಲ್ ಅಭ್ಯಾಸಗಳನ್ನು ನಡೆಸಲು ಯೆಹೋವನ ಸಾಕ್ಷಿಗಳಿಗಾಗಿರುವ ಅಗತ್ಯವನ್ನು ಕಾವಲಿನಬುರುಜು ಪತ್ರಿಕೆಯು ಒತ್ತಿಹೇಳಿದೆ. (ಯೆಶಾಯ 60:22ನ್ನು ನೋಡಿರಿ.) ಜ್ಞಾನ ಪುಸ್ತಕದ ಪರಿಣಾಮಕಾರಿ ಉಪಯೋಗವು, ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಅದರೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಹೊಸ ವ್ಯಕ್ತಿಗಳಿಗೆ ಸಹಾಯಮಾಡಬಲ್ಲದು.—ಯೋಹಾ. 17:3.