ಒಂದು ವಿಷಯ ಮಾತಾಡಿ! ಎರಡೂ ಪತ್ರಿಕೆ ಕೊಡಿ!
ನಮ್ಮ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಅನೇಕ ವಿಷಯಗಳು ತುಂಬಿರುತ್ತೆ. ಪ್ರತಿಯೊಂದು ಮನೆಯಲ್ಲೂ ಅವೆಲ್ಲ ವಿಷಯಗಳ ಬಗ್ಗೆ ಮಾತಾಡುವ ಬದಲು ಒಂದೇ ಒಂದು ವಿಷಯದ ಬಗ್ಗೆ ಮಾತಾಡಿ. ನಾವು ಗಮನಿಸುವವರಾದರೆ ಮತ್ತು ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಲ್ಲಿ ಯಾವ್ಯಾವ ವಿಷಯಗಳಿವೆ ಅಂತ ತಿಳಿದುಕೊಂಡರೆ ಮನೆಯವರಿಗೆ ಆಸಕ್ತಿಕರವಾಗಿರುವ ವಿಷಯವನ್ನು ಆರಿಸಿ ಮಾತಾಡಲು ಸುಲಭವಾಗುತ್ತೆ. ಉದಾ: ಮನೆಯಲ್ಲಿ ಮಕ್ಕಳ ಆಟಿಕೆ ಕಂಡುಬಂದರೆ ಕುಟುಂಬದ ಬಗ್ಗೆ ಇರುವ ಲೇಖನವನ್ನು ಆರಿಸಿ ಮಾತಾಡಬಹುದು. ಪುರುಷರು ಇರುವುದಾದರೆ ಅವರಿಗೆ ಇಷ್ಟವಾಗುವ ವಿಷಯದ ಬಗ್ಗೆ ಉದಾ: ಒಳ್ಳೇ ಸರಕಾರ ಇತ್ಯಾದಿ ವಿಷಯಗಳ ಬಗ್ಗೆ ಮಾತಾಡಬಹುದು. ನಾವು ಒಂದು ವಿಷಯದ ಬಗ್ಗೆ ಮಾತ್ರ ಮಾತಾಡಿರುವುದಾದರೂ ಮನೆಯವರಿಗೆ ಆಸಕ್ತಿಯಿದ್ದರೆ ಕಾವಲಿನಬುರುಜು ಮತ್ತು ಎಚ್ಚರ! ಎರಡೂ ಪತ್ರಿಕೆಗಳನ್ನು ಕೊಡಬಹುದು.