ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ
ಮಕ್ಕಳ ಮೇಲೆ ಡೈವೋರ್ಸ್ ಹೇಗೆ ಪರಿಣಾಮ ಬೀರುತ್ತೆ?
ಏನು ಮಾಡಿದ್ರೂ ಹೊಂದ್ಕೊಂಡು ಹೋಗಕ್ಕೆ ಕಷ್ಟ ಆಗೋ ಕೆಲವು ದಂಪತಿಗಳು ಹೀಗೆ ಹೇಳ್ತಾರೆ: “ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡೋದಾದ್ರೆ, ನಾವಿಬ್ಬರು ಡೈವೋರ್ಸ್ ತಗೊಳ್ಳೋದೇ ಒಳ್ಳೇದು. ಯಾಕಂದ್ರೆ ನಮ್ ಮಕ್ಕಳು ಯಾವಾಗಲೂ ಜಗಳ ಆಡೋ ಹೆತ್ತವರ ಮಧ್ಯೆ ಇರೋದಕ್ಕಿಂತ ನಾವು ಡೈವೋರ್ಸ್ ತಗೊಳ್ಳೋದೇ ಒಳ್ಳೇದಲ್ವಾ.” ಆದ್ರೆ ನಿಜ ಏನು?
ಮಕ್ಕಳ ಮೇಲೆ ಡೈವೋರ್ಸ್ ಹೇಗೆ ಪರಿಣಾಮ ಬೀರುತ್ತೆ?
ಡೈವೋರ್ಸ್ನಿಂದ ಮಕ್ಕಳ ಮೇಲೆ ತುಂಬ ಪರಿಣಾಮ ಬೀರುತ್ತೆ ಅಂತ ಸಂಶೋಧನೆ ಹೇಳುತ್ತೆ. ಡೈವೋರ್ಸ್ ಆಗಿರೋ ಹೆತ್ತವರ ಮಕ್ಕಳಿಗೆ:
ಕೋಪ, ಚಿಂತೆ, ಖಿನ್ನತೆ ಇರುತ್ತೆ
ತಮಗೂ ಮತ್ತು ಬೇರೆಯವರಿಗೂ ಹಾನಿ ಮಾಡೋ ರೀತಿಯಲ್ಲಿ ನಡ್ಕೊಳ್ತಾರೆ
ಕ್ಲಾಸ್ಲ್ಲಿ ಗಮನ ಕೊಡಲ್ಲ ಅಥವಾ ಸ್ಕೂಲೆಗೆ ಹೋಗದನ್ನ ಬಿಟ್ಟುಬಿಡ್ತಾರೆ
ಆಗಾಗ ಹುಷಾರ್ ಇರಲ್ಲ
ಇದ್ರ ಜೊತೆ, ಅಪ್ಪ-ಅಮ್ಮ ಡೈವೋರ್ಸ್ ಆಗೋಕ್ಕೆ ತಾವೇ ಕಾರಣ ಅಂತ ಅಂದ್ಕೊಳ್ತಾರೆ. ತಮ್ಮಿಂದಾನೇ ಹೀಗಾಯ್ತು. ಹೀಗೆ ಆಗದೇ ಇರೋಕೆ ತಾವು ಏನಾದ್ರೂ ಮಾಡಬಹುದಿತ್ತು ಅಂತ ಚಿಂತಿಸ್ತಾರೆ.
ದೊಡ್ಡವರಾದ ಮೇಲೂ ಇದ್ರ ಪರಿಣಾಮ ಮಕ್ಕಳ ಮೇಲೆ ಇರುತ್ತೆ. ತಾವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸುತ್ತೆ. ಅವ್ರಿಗೆ ಬೇರೆಯವ್ರ ಮೇಲೆ ನಂಬಿಕೆ ಇರಲ್ಲ. ಮುಂದೊಂದು ದಿನ ಅವ್ರಿಗೆ ಮದುವೆ ಆಗಿ ಅವ್ರ ಜೀವನದಲ್ಲಿ ಸಮಸ್ಯೆ ಬಂದ್ರೆ ಡೈವೋರ್ಸ್ ತಗೊಳ್ಳೋ ಸಾಧ್ಯತೆ ಹೆಚ್ಚು.
ಸಾರಾಂಶ: ಮಕ್ಕಳು ಚೆನ್ನಾಗಿ ಇರಬೇಕು ಅಂದ್ರೆ ಡೈವೋರ್ಸ್ ತಗೊಳ್ಳದೇ ಒಳ್ಳೇದು ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ನಿಜ ಅಲ್ಲ ಅಂತ ಸಂಶೋಧನೆ ತೋರಿಸುತ್ತೆ. “ಡೈವೋರ್ಸ್ ಮಕ್ಕಳ ಜೀವನವನ್ನ ಹಾಳು ಮಾಡಿಬಿಡುತ್ತೆ” ಅಂತ ಚೈಲ್ಡ್ ಕೇರ್ ಎಕ್ಸ್ಪರ್ಟ್ ಪೆನೆಲೋಪ್ ಲಿಚ್ ಹೇಳ್ತಾರೆ.a
ಬೈಬಲ್ ತತ್ವ: “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:4.
ನಾನು ಡೈವೋರ್ಸ್ ತಗೊಂಡ್ರೆ ನನ್ನ ಮಗು ಖುಷಿಯಾಗಿ ಇರುತ್ತಾ?
ಕೆಲವರು ‘ಹೌದು’ ಖುಷಿಯಾಗಿ ಇರ್ತಾರೆ ಅಂತ ಹೇಳ್ತಾರೆ. ಆದ್ರೆ ಹೆತ್ತವರ ಯೋಚನೆನೇ ಬೇರೆ ಮಕ್ಕಳ ಯೋಚನೆನೇ ಬೇರೆ ಅನ್ನೋದನ್ನ ಮರಿಬಾರ್ದು. ಡೈವೋರ್ಸ್ ಬಗ್ಗೆ ಯೋಚನೆ ಮಾಡೋ ವ್ಯಕ್ತಿ ತನ್ನ ಜೀವನ ಬದಲಾಗಬೇಕು ಅಂತ ನೆನಸ್ತಾನೆ ಹೊರತು ಬೇರೆಯವರ ಬಗ್ಗೆ ಯೋಚನೆ ಮಾಡಲ್ಲ. ಆದ್ರೆ ಅಪ್ಪ-ಅಮ್ಮ ಡೈವೋರ್ಸ್ ತಗೊಳ್ಳೋದು ಮಕ್ಕಳಿಗೆ ಇಷ್ಟ ಇರಲ್ಲ. ಅವ್ರಿಬ್ರು ಒಟ್ಟಿಗೆ ಇರಬೇಕು ಅನ್ನೋದೇ ಮಕ್ಕಳ ಆಸೆ.
ದ ಅನ್ಎಕ್ಸ್ಪೆಕ್ಟೆಡ್ ಲೆಗಸಿ ಆಫ್ ಡೈವೋರ್ಸ್ ಅನ್ನೋ ಪುಸ್ತಕವನ್ನ ಬರೆದಿರೋರು ಡೈವೋರ್ಸ್ ತಗೊಂಡ ಹೆತ್ತವರ ಮಕ್ಕಳನ್ನ ಇಂಟರ್ವ್ಯೂ ಮಾಡಿದಾಗ ಈ ವಿಷ್ಯ ಗೊತ್ತಾಯ್ತು: “ಮಕ್ಕಳು ತಾವು ಖುಷಿಯಾಗಿ ಇದ್ದೀವಿ ಅಂತ ಹೇಳಲ್ಲ. ಬದಲಿಗೆ ಅಪ್ಪ-ಅಮ್ಮ ಡೈವೋರ್ಸ್ ಆದ ದಿನನೇ ತಮ್ಮ ಜೀವನ ಮುಗಿದುಹೋಯ್ತು. ಯಾಕಂದ್ರೆ, ಈ ಲೋಕದಲ್ಲಿ ತಮಗೂ ಸುರಕ್ಷತೆ ಇಲ್ಲ, ತಮಗೆ ತುಂಬ ಹತ್ರ ಇರೋ ಇಬ್ಬರಿಗೂ ಸುರಕ್ಷತೆ ಇಲ್ಲ ಅಂತಾರೆ.”
ಸಾರಾಂಶ: ಅಪ್ಪ-ಅಮ್ಮ ಡೈವೋರ್ಸ್ ಆದ್ಮೇಲೆ ಮಕ್ಕಳು ಖುಷಿಯಾಗಿ ಇರ್ತಾರೆ ಅನ್ನೋದು ನಿಜ ಅಲ್ಲ.
ಬೈಬಲ್ ತತ್ವ: “ಕುಗ್ಗಿದ ಮನದಿಂದ ಒಣಮೈ.”—ಜ್ಞಾನೋಕ್ತಿ 17:22.
ಡೈವೋರ್ಸ್ ಆದ್ಮೇಲೆ ಮಕ್ಕಳ ಜವಾಬ್ದಾರಿ ಇಬ್ಬರ ತಲೆಮೇಲೆ ಬಂದ್ರೆ ಯಾವೆಲ್ಲ ಸಮಸ್ಯೆ ಏಳುತ್ತೆ?
ಡೈವೋರ್ಸ್ ಆದ ಅಪ್ಪ-ಅಮ್ಮ ಮಕ್ಕಳನ್ನ ಬೆಳೆಸೋ ಜವಾಬ್ದಾರಿಯನ್ನ ಹಂಚ್ಕೊಳ್ಳೋಕೆ ಪ್ರಯತ್ನ ಪಟ್ಟು ಅವ್ರಿಬ್ಬರು ಇನ್ನು ಜೊತೆಗೆ ಇದ್ದಾರೆ ಅಂತ ತೋರಿಸ್ಕೊಡ್ತಾರೆ. ಆದ್ರೆ ಹೀಗೆ ಮಾಡೋದು ತುಂಬ ಕಷ್ಟ. ಡೈವೋರ್ಸ್ ಆದ ಅಪ್ಪ-ಅಮ್ಮನ ಬಗ್ಗೆ ಸಂಶೋಧನೆ ಏನ್ ಹೇಳುತ್ತೆ ಅಂದ್ರೆ:
ಅಪ್ಪ-ಅಮ್ಮ ಮಕ್ಕಳ ಜೊತೆ ತುಂಬ ಕಡಿಮೆ ಸಮಯ ಕಳಿತಾರೆ
ಒಂದು ವಿಷ್ಯದ ಬಗ್ಗೆ ಅಪ್ಪ ಒಂದು ಹೇಳಿ ಕೊಟ್ರೆ ಅಮ್ಮ ಇನ್ನೊಂದು ಹೇಳಿ ಕೊಡ್ತಾರೆ
ಅಪ್ಪ-ಅಮ್ಮಂಗೆ ತುಂಬ ಸುಸ್ತಾಗೋದ್ರಿಂದ ಅಥವಾ ಅವ್ರಿಗೆ ತಪ್ಪು ಮಾಡಿದ್ದೀವಿ ಅನ್ನೋ ಭಾವನೆ ಇರೋದ್ರಿಂದ ಮಕ್ಕಳಿಗೆ ಇಷ್ಟಬಂದಿದ್ದನ್ನ ಮಾಡೋಕೆ ಬಿಟ್ಟುಬಿಡ್ತಾರೆ
ಅಪ್ಪ-ಅಮ್ಮನ ಮಾತು ಕೇಳೋ ಅವಶ್ಯಕತೆ ತಮಗಿಲ್ಲ ಅಂತ ಮಕ್ಕಳು ನೆನಸ್ತಾರೆ. ಅವ್ರಿಬ್ಬರು ಒಟ್ಟಿಗೆ ಇರ್ತಿವಿ ಅಂತ ಒಬ್ಬರಿಗೊಬ್ಬರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ, ಸರಿಯಾಗಿ ನಡ್ಕೊಳ್ಳಲಿಲ್ಲ, ‘ಇನ್ನು ಅವರ ಮಾತನ್ನ ಯಾಕೆ ಕೇಳಬೇಕು?’ ಅಂತ ಮಕ್ಕಳು ಹೇಳ್ತಾರೆ.
ಸಾರಾಂಶ: ಡೈವೋರ್ಸ್ ತಗೊಂಡ ಹೆತ್ತವರಿಗೆ ಮಕ್ಕಳನ್ನ ನೋಡ್ಕೊಳ್ಳೋದು ಕಷ್ಟ. ಮಕ್ಕಳಿಗೆ ಇನ್ನೂ ಕಷ್ಟ.
ಬೈಬಲ್ ತತ್ವ: “ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.”—ಕೊಲೊಸ್ಸೆ 3:21.
ಡೈವೋರ್ಸ್ ಅಲ್ಲದೇ ಬೇರೆ ದಾರಿ ಇದ್ಯಾ?
ಡೈವೋರ್ಸ್ ಆದ್ಮೇಲೆ ಜೀವನ ಮಾಡೋದು ತುಂಬ ಕಷ್ಟ. ಮದುವೆ ಉಳಿಸ್ಕೊಳ್ಳೋಕೆ ಬರೋ ಕಷ್ಟನ ಸ್ವಲ್ಪ ತಾಳಿಕೊಂಡರೆ ಎಲ್ಲಾ ಚೆನ್ನಾಗಿ ಇರುತ್ತೆ. ದ ಕೇಸ್ ಫಾರ್ ಮ್ಯಾರೇಜ್ ಅನ್ನೋ ಪುಸ್ತಕ “ಮದುವೆ ಜೀವನದಲ್ಲಿ ಒಂದು ಸಲ ಸಮಸ್ಯೆ ಆಗಬಹುದು, ಆದ್ರೆ ಪ್ರತಿದಿನ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಸಂತೋಷದ ವಿಷ್ಯ ಏನಂದ್ರೆ, ಮದುವೆ ಜೀವನದಲ್ಲಿ ಖುಷಿ ಇಲ್ಲದ ದಂಪತಿಗಳು ಸಮಯ ಹೋಗ್ತಾ-ಹೋಗ್ತಾ ಖುಷಿ-ಖುಷಿಯಾಗಿ ಇರ್ತಾರೆ” ಅಂತ ಹೇಳುತ್ತೆ. ಇದನ್ನೆಲ್ಲ ನೋಡುವಾಗ, ಹೆತ್ತವರು ಒಟ್ಟಿಗೆ ಇದ್ರೆ ಮಕ್ಕಳು ಚೆನ್ನಾಗಿ ಇರ್ತಾರೆ ಅಂತ ಗೊತ್ತಾಗುತ್ತೆ.
ಪ್ರತಿಯೊಂದು ಸಮಸ್ಯೆಗೂ ಡೈವೋರ್ಸ್ ಒಂದೇ ಪರಿಹಾರ ಅಲ್ಲ. ಬೈಬಲ್ ಹೇಳೋ ಪ್ರಕಾರ ಡೈವೋರ್ಸ್ ತಗೊಳ್ಳೋಕೆ ಒಂದೇ ಒಂದು ಕಾರಣ ಏನಂದ್ರೆ, ಲೈಂಗಿಕ ಅನೈತಿಕತೆ. (ಮತ್ತಾಯ 19:9) ಬೈಬಲ್ “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು” ಅಂತನೂ ಹೇಳುತ್ತೆ. (ಜ್ಞಾನೋಕ್ತಿ 14:15) ಮದುವೆ ಜೀವನದಲ್ಲಿ ಸಮಸ್ಯೆಗಳು ಇರೋದ್ರಿಂದ ಡೈವೋರ್ಸ್ ತಗೊಳ್ಳೋಕೆ ಯೋಚನೆ ಮಾಡೋ ಗಂಡ-ಹೆಂಡತಿ ಆ ನಿರ್ಣಯದ ಪರಿಣಾಮ ಏನಾಗುತ್ತೆ ಅಂತ ಚೆನ್ನಾಗಿ ಯೋಚನೆ ಮಾಡಬೇಕು. ಇದು ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತೆ ಅಂತನೂ ತಿಳ್ಕೊಳ್ಳಬೇಕು.
ಆದ್ರೆ ಅದ್ರ ಅರ್ಥ ಸುಮ್ಮನೆ ಏನೋ ಅಡ್ಜಸ್ಟ್ ಮಾಡ್ಕೊಂಡು ಹೋಗೋದು ಅಲ್ಲ. ಬದಲಿಗೆ ನಾವು ಕೆಲವೊಂದು ವಿಷ್ಯಗಳನ್ನ ಮಾಡಬೇಕು. ಮದುವೆ ಜೀವನದಲ್ಲಿ ಖುಷಿಯಾಗಿ ಇರಬೇಕಂದ್ರೆ ಯಾವೆಲ್ಲ ಗುಣಗಳನ್ನ ಬೆಳೆಸ್ಕೊಬೇಕು ಅಂತ ಬೈಬಲ್ ಸಲಹೆ ಕೊಡುತ್ತೆ. ಈ ಒಳ್ಳೇ ಸಲಹೆಗಳನ್ನ ಗಂಡ-ಹೆಂಡತಿ ಪಾಲಿಸೋವಾಗ ಕಷ್ಟಗಳು ಬಂದ್ರು ತಾಳ್ಕೊಳ್ಳೋಕೆ ನಿಜವಾಗ್ಲೂ ಆಗುತ್ತೆ. ಯಾಕಂದ್ರೆ ಬೈಬಲನ್ನ ಬರೆಸಿರೋ ಯೆಹೋವನೇ ಮದುವೆ ಏರ್ಪಾಡನ್ನ ಮಾಡಿರೋದು.—ಮತ್ತಾಯ 19:4-6.
ಬೈಬಲ್ ತತ್ವ: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸ್ತೀನಿ.’—ಯೆಶಾಯ 48:17.
a ಯುವರ್ ಗ್ರೋಯಿಂಗ್ ಚೈಲ್ಡ್—ಫ್ರಮ್ ಬೇಬಿಹುಡ್ ಥ್ರೂ ಅಡೋಲಸೆನ್ಸ್ ಅನ್ನೋ ಪುಸ್ತಕದಿಂದ.