ಪಾದಟಿಪ್ಪಣಿ
c ಆದಾಮನ ಪಾಪವನ್ನು ಸರಿದೂಗಿಸಲು ಯೇಸು ಸಾಯಬೇಕಾದದ್ದು, ಪರಿಪೂರ್ಣ ಕೂಸಾಗಿ ಅಲ್ಲ, ಬದಲಾಗಿ ಒಬ್ಬ ಪರಿಪೂರ್ಣ ಪುರುಷನಾಗಿ. ಆದಾಮನ ಪಾಪವು ಬುದ್ಧಿಪೂರ್ವಕವಾಗಿತ್ತು, ಅಂದರೆ ಕ್ರಿಯೆಯ ಗಂಭೀರತೆ ಮತ್ತು ಫಲಿತಾಂಶಗಳನ್ನು ಪೂರ್ಣ ತಿಳಿದೇ ಮಾಡಿದ್ದಾಗಿತ್ತೆಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ “ಕಡೇ ಆದಾಮ”ನಾಗಿ ಆ ಪಾಪವನ್ನು ಮುಚ್ಚಲು, ಯೆಹೋವನಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಪ್ರೌಢ ಹಾಗೂ ತಿಳಿವಳಿಕೆಭರಿತ ಆಯ್ಕೆಯನ್ನು ಯೇಸು ಮಾಡಬೇಕಾಗಿತ್ತು. (1 ಕೊರಿಂಥ 15:45, 47) ಹೀಗೆ ಯೇಸುವಿನ ಇಡೀ ನಂಬಿಗಸ್ತ ಜೀವನಕ್ರಮವು ಅವನ ಯಜ್ಞಾರ್ಪಿತ ಮರಣದ ಸಮೇತ “ಒಂದೇ ಸತ್ಕಾರ್ಯ”ವಾಗಿ ಕಾರ್ಯನಡಿಸಿತು.—ರೋಮಾಪುರ 5:18, 19.