ಪಾದಟಿಪ್ಪಣಿ
b ಸ್ವತಃ ಯೆಹೋವನಿಗೆ ಈ ಹೇವರಿಕೆಯುಂಟಾಗುತ್ತದೆ. ಉದಾಹರಣೆಗಾಗಿ, ಎಫೆಸ 4:29ರಲ್ಲಿ ನಾವು “ಕೆಟ್ಟ ಮಾತ”ನ್ನು ಉಪಯೋಗಿಸಬಾರದೆಂದು ನಮಗೆ ಬುದ್ಧಿಹೇಳಲಾಗಿದೆ. “ಕೆಟ್ಟ” ಎಂಬುದರ ಗ್ರೀಕ್ ಪದವು, ಅಕ್ಷರಾರ್ಥವಾಗಿ ಕೆಟ್ಟುಹೋಗುತ್ತಿರುವ ಹಣ್ಣು, ಮೀನು ಅಥವಾ ಮಾಂಸಕ್ಕೆ ಸೂಚಿಸುತ್ತದೆ. ದೂಷಣೀಯ ಅಥವಾ ಹೊಲಸು ಮಾತುಗಳ ಕಡೆಗೆ ನಮಗೆ ಎಷ್ಟೊಂದು ಹೇವರಿಕೆ ಇರಬೇಕೆಂಬುದನ್ನು ಆ ಪದವು ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವರ್ಣಿಸುತ್ತದೆ. ತದ್ರೀತಿಯಲ್ಲಿ, ಧರ್ಮೋಪದೇಶಕಾಂಡ 29:17 ಮತ್ತು ಯೆಹೆಜ್ಕೇಲ 6:9ರಂಥ ವಚನಗಳಲ್ಲಿರುವ ‘ಬೊಂಬೆಗಳು’ ಎಂಬ ಪದವು ವಾಸ್ತವದಲ್ಲಿ ಹೀಬ್ರು ಭಾಷೆಯಲ್ಲಿ “ಹೊಲಸಿಗೆ ಸಮಾನವಾದ ವಿಗ್ರಹಗಳು” ಎಂದಾಗಿದೆ. ಹೊಲಸು ಅಥವಾ ಮಲವು ನಮ್ಮಲ್ಲಿ ಸ್ವಾಭಾವಿಕವಾದ ಹೇಸಿಕೆಯನ್ನುಂಟುಮಾಡುವಂತೆಯೇ, ವಿಗ್ರಹಾರಾಧನೆಯ ಯಾವುದೇ ರೂಪದ ಕುರಿತು ದೇವರಿಗಿರುವ ಹೇವರಿಕೆಯ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯಮಾಡುತ್ತದೆ.