ಒಂದನೇ ಅರಸು
7 ಸೊಲೊಮೋನ ಒಂದು ಅರಮನೆ ಕಟ್ಟಿಸ್ಕೊಂಡ.+ ಅದನ್ನ ಕಟ್ಟಿಮುಗಿಸೋಕೆ+ 13 ವರ್ಷ ಹಿಡಿತು.
2 ಆಮೇಲೆ ಅವನು “ಲೆಬನೋನಿನ ವನ”+ ಅನ್ನೋ ಹೆಸ್ರಿನ ಇನ್ನೊಂದು ಅರಮನೆ ಕಟ್ಟಿಸಿದ. ಅದು 100 ಮೊಳ* ಉದ್ದ, 50 ಮೊಳ ಅಗಲ, 30 ಮೊಳ ಎತ್ರ ಇತ್ತು. ದೇವದಾರು ಕಂಬಗಳನ್ನ ನಾಲ್ಕು ಸಾಲುಗಳಾಗಿ ನಿಲ್ಲಿಸಿ ಅವುಗಳ ಮೇಲೆ ದೇವದಾರು ಮರಗಳ ತೊಲೆಗಳನ್ನ+ ಇಟ್ಟು ಈ ಅರಮನೆ ಕಟ್ಟಿಸಿದ. 3 ಕಂಬಗಳ ಮೇಲೆ ಇಟ್ಟ ತೊಲೆಗಳ ಮೇಲೆ ದೇವದಾರು ಮರದ ಹಲಗೆಗಳನ್ನ ಹಾಕಿಸಿದ. ಒಂದು ಸಾಲಲ್ಲಿ 15ರಂತೆ ಒಟ್ಟು 45 ತೊಲೆಗಳು ಇದ್ವು. 4 ಅರಮನೆಗೆ ಚೌಕಟ್ಟುಗಳಿರೋ ಕಿಟಕಿಗಳನ್ನ ಮಾಡಿಸಿದ. ಆ ಕಿಟಕಿಗಳನ್ನ ಮೂರು ಸಾಲುಗಳಾಗಿ ಮೂರು ಅಂತಸ್ತಿನಲ್ಲಿ ಇಟ್ರು. ಪ್ರತಿಯೊಂದು ಕಿಟಕಿ ಮುಂದೆ ಇನ್ನೊಂದು ಕಿಟಕಿ ಇತ್ತು. 5 ಎಲ್ಲ ಬಾಗಿಲುಗಳು, ಅದ್ರ ಚೌಕಟ್ಟುಗಳು ಚೌಕಾಕಾರವಾಗಿ* ಇದ್ವು. ಮೂರು ಅಂತಸ್ತಿನಲ್ಲಿ ಎದುರುಬದುರಾಗಿ ಇಟ್ಟಿದ್ದ ಕಿಟಕಿಗಳ ಚೌಕಟ್ಟುಗಳೂ ಚೌಕಾಕಾರವಾಗೇ ಇದ್ವು.
6 ಅವನು ‘ಕಂಬಗಳ ಸಭಾಂಗಣ’ ಕಟ್ಟಿಸಿದ. ಅದು 50 ಮೊಳ ಉದ್ದ, 30 ಮೊಳ ಅಗಲ ಇತ್ತು. ಅದ್ರ ಮುಂದೆ ಒಂದು ಮಂಟಪ ಇತ್ತು. ಆ ಮಂಟಪಕ್ಕೆ ಕಂಬಗಳಿದ್ವು, ಚಾವಣಿ ಇತ್ತು.
7 ಅವನು ತೀರ್ಪು ಮಾಡೋದಕ್ಕೆ ‘ಸಿಂಹಾಸನ+ ಮಂದಿರ’* ಅಂದ್ರೆ ‘ತೀರ್ಪು+ ಮಂದಿರ’ ಕಟ್ಟಿಸಿದ. ಅದ್ರ ನೆಲದಿಂದ ಹಿಡಿದು ಚಾವಣಿಯ ತೊಲೆಗಳ ತನಕ ದೇವದಾರು ಮರದ ಹಲಗೆಗಳನ್ನ ಹೊದಿಸಿದ.
8 ಅವನು ಆ ಮಂದಿರದ ಹಿಂದಿನ ಅಂಗಳದಲ್ಲಿ+ ತನಗಾಗಿ ಒಂದು ಅರಮನೆ ಕಟ್ಟಿಸಿದ. ಈ ಅರಮನೆಯನ್ನ ಮಂದಿರದ ತರಾನೇ ಕಟ್ಟಿಸಿದ. ಅವನು ಮದುವೆಯಾಗಿದ್ದ ಫರೋಹನ ಮಗಳಿಗೋಸ್ಕರ ಇದೇ ತರದ ಇನ್ನೊಂದು ಅರಮನೆ ಕಟ್ಟಿಸಿದ.+
9 ಇದನ್ನೆಲ್ಲ ಬೆಲೆಬಾಳೋ ಕಲ್ಲಿಂದ ಕಟ್ಟಿದ್ರು.+ ಆ ಕಲ್ಲುಗಳನ್ನ ಅಳತೆ ಪ್ರಕಾರ ಕತ್ತರಿಸಿದ್ರು. ಎರಡೂ ಕಡೆಗಳಲ್ಲಿ ಕಲ್ಲುಗರಗಸದಿಂದ ಅವನ್ನ ಸಮತಟ್ಟು ಮಾಡಿದ್ರು. ಅಸ್ತಿವಾರದಿಂದ ಹಿಡಿದು ಗೋಡೆ ಮೇಲಿನ ಭಾಗದ ತನಕ ಹೊರಗಿನ ಮಹಾ ಅಂಗಳದ ತನಕ ಒಂದೇ ತರದ ಕಲ್ಲು ಬಳಸಿದ್ರು.+ 10 ಅಸ್ತಿವಾರವನ್ನ ತುಂಬ ಬೆಲೆಬಾಳೋ ದೊಡ್ಡದೊಡ್ಡ ಕಲ್ಲುಗಳಿಂದ ಹಾಕಿದ್ರು. ಕೆಲವು ಕಲ್ಲುಗಳು ಎಂಟು ಮೊಳ ಇದ್ರೆ ಇನ್ನು ಕೆಲವು ಕಲ್ಲುಗಳು ಹತ್ತು ಮೊಳ ಇದ್ವು. 11 ಅವುಗಳ ಮೇಲೆ ಅಳತೆ ಪ್ರಕಾರ ಕತ್ತರಿಸಿದ್ದ ತುಂಬ ಬೆಲೆಬಾಳೋ ಕಲ್ಲುಗಳನ್ನ ಹಾಕಿದ್ರು. ಜೊತೆಗೆ ದೇವದಾರು ಮರದ ಹಲಗೆಗಳನ್ನೂ ಹಾಕಿದ್ರು. 12 ಯೆಹೋವನ ಆಲಯದ ಒಳಗಿನ ಅಂಗಳ+ ಮತ್ತು ಮಂಟಪದ+ ಸುತ್ತ ಹಾಕಿದ ತರಾನೇ ಮಹಾ ಅಂಗಳದ ಸುತ್ತ ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನ ಮತ್ತು ದೇವದಾರು ಮರದ ತೊಲೆಗಳ ಒಂದು ಸಾಲನ್ನ ಒಂದ್ರ ಮೇಲೆ ಒಂದು ಇಟ್ಟು ಗೋಡೆ ಕಟ್ಟಿದ್ರು.
13 ರಾಜ ಸೊಲೊಮೋನ ಹೀರಾಮನಿಗೆ+ ಸಂದೇಶ ಕಳಿಸಿ ಅವನನ್ನ ತೂರ್ ಪಟ್ಟಣದಿಂದ ಕರೆಸಿದ. 14 ಹೀರಾಮನ ಅಮ್ಮ ನಫ್ತಾಲಿ ಕುಲದವಳು ಮತ್ತು ಅವಳು ವಿಧವೆ ಆಗಿದ್ದಳು. ಹೀರಾಮನ ಅಪ್ಪ ತೂರ್ ಪಟ್ಟಣದ ಒಬ್ಬ ಕಂಚುಗಾರನಾಗಿದ್ದ.+ ಹೀರಾಮ ಎಲ್ಲ ತರದ ತಾಮ್ರದ* ವಸ್ತುಗಳನ್ನ ಮಾಡೋದ್ರಲ್ಲಿ ನಿಪುಣನಾಗಿದ್ದ.+ ಆ ಕೆಲಸದಲ್ಲಿ ಅವನಿಗೆ ಅನುಭವನೂ ಇತ್ತು. ಹಾಗಾಗಿ ಅವನು ರಾಜ ಸೊಲೊಮೋನನ ಹತ್ರ ಬಂದು ಎಲ್ಲ ಕೆಲಸಗಳನ್ನ ಮಾಡ್ಕೊಟ್ಟ.
15 ಅವನು ಅಚ್ಚಲ್ಲಿ ತಾಮ್ರ ಹೊಯ್ದು ಎರಡು ಕಂಬ ಮಾಡಿದ.+ ಆ ಕಂಬಗಳು 18 ಮೊಳ ಎತ್ರ ಇದ್ವು. ಪ್ರತಿಯೊಂದು ಕಂಬದ* ಸುತ್ತಳತೆ 12 ಮೊಳ ಇತ್ತು.+ 16 ಆಮೇಲೆ ಅವನು ಅಚ್ಚಲ್ಲಿ ಹೊಯ್ದು ಮಾಡಿದ ಕಂಬಗಳಿಗೆ ಕಿರೀಟಗಳನ್ನ* ಮಾಡಿಸಿ ಕಂಬದ ಮೇಲಿಟ್ಟ. ಅದೆರಡೂ ಐದೈದು ಮೊಳ ಎತ್ರ ಇದ್ವು. 17 ಕಿರೀಟಗಳ ಹೊರಗಿನ ಭಾಗಕ್ಕೆ ಜಾಲರಿ ಆಕಾರದ ಕೆತ್ತನೆ ಮಾಡಿ ಸರಪಳಿಗಳಿಂದ ಅವನ್ನ ಅಲಂಕರಿಸಿದ.+ ಪ್ರತಿಯೊಂದು ಕಿರೀಟಕ್ಕೂ ಏಳೇಳು ಜಾಲರಿಗಳನ್ನ ಮಾಡಿದ. 18 ಆಮೇಲೆ ಅವನು ಜಾಲರಿ ಆಕಾರದ ಕೆತ್ತನೆ ಮೇಲೆ ಎರಡು ಸಾಲು ದಾಳಿಂಬೆಗಳನ್ನ ಮಾಡಿದ. ಅವು ಕಂಬಗಳ ಕಿರೀಟಗಳನ್ನ ಮುಚ್ಚಿದ್ವು. ಎರಡೂ ಕಿರೀಟದ ಮೇಲೆ ಅವನು ಈ ತರ ಕೆತ್ತನೆ ಮಾಡಿಸಿದ. 19 ಮಂಟಪದ ಹತ್ರ ಇದ್ದ ಕಂಬದ ಕಿರೀಟಗಳ ಮೇಲೆ ಲಿಲಿ ಹೂವನ್ನ ಕೆತ್ತಿಸಿದ. ಆ ಕೆತ್ತನೆ ನಾಲ್ಕು ಮೊಳ ಎತ್ರ ಇದ್ವು. 20 ಕಂಬದ ಮೇಲಿನ ಭಾಗ ವೃತ್ತಾಕಾರ ಆಗಿತ್ತು. ಅದ್ರ ಮೇಲೆ ಕಂಬದ ಕಿರೀಟ ಇಟ್ಟು ಜೋಡಿಸಿದ್ರು. ಪ್ರತಿಯೊಂದು ಕಿರೀಟದ ಸುತ್ತ ಸಾಲುಸಾಲಾಗಿ 200 ದಾಳಿಂಬೆ ಇಟ್ರು.+
21 ಆಲಯದ* ಮಂಟಪದ ಹತ್ರ ಅವನು ಕಂಬಗಳನ್ನ ನಿಲ್ಲಿಸಿದ.+ ಅವನು ಬಲಗಡೆಗೆ* ಒಂದು ಕಂಬ ನಿಲ್ಲಿಸಿ ಅದಕ್ಕೆ ಯಾಕೀನ್* ಅಂತ ಹೆಸ್ರಿಟ್ಟ. ಆಮೇಲೆ ಎಡಗಡೆಗೆ* ಇನ್ನೊಂದು ಕಂಬ ನಿಲ್ಲಿಸಿ ಅದಕ್ಕೆ ಬೋವಜ್* ಅಂತ ಹೆಸ್ರಿಟ್ಟ.+ 22 ಕಂಬದ ಕಿರೀಟ ಲಿಲಿ ಹೂವಿನ ಆಕಾರದಲ್ಲಿತ್ತು. ಹೀಗೆ ಕಂಬದ ಕೆಲಸ ಮುಗಿತು.
23 ಆಮೇಲೆ ಅವನು ಅಚ್ಚಲ್ಲಿ ತಾಮ್ರ ಹೊಯ್ದು ಪಾತ್ರೆ ಮಾಡಿದ. ಅದನ್ನ “ಸಮುದ್ರ”* ಅಂತ ಕರೀತಿದ್ರು.+ ಅದು ವೃತ್ತಾಕಾರದಲ್ಲಿತ್ತು. ಅದ್ರ ಅಂಚಿಂದ ಅಂಚಿಗೆ 10 ಮೊಳ ಅಗಲ, 5 ಮೊಳ ಎತ್ರ ಇತ್ತು. ಅದ್ರ ಸುತ್ತಳತೆ 30 ಮೊಳ ಇತ್ತು.*+ 24 ಪಾತ್ರೆಯ ಅಂಚಿನ ಕೆಳಭಾಗದಲ್ಲಿ ಎರಡು ಸಾಲು ದುಂಡಗಿನ ಆಕಾರದ ಅಲಂಕಾರ ಮಾಡಿದ್ರು.+ ಈ ಅಲಂಕಾರ ಆ ಪಾತ್ರೆ ಸುತ್ತ ಮಾಡಿದ್ರು. ಒಂದೊಂದು ಮೊಳಕ್ಕೆ ಹತ್ತತ್ತು ದುಂಡಗಿನ ಆಕಾರದ ಅಲಂಕಾರಗಳನ್ನ ಮಾಡಿದ್ರು. ಆ ಪಾತ್ರೆನ ಅಚ್ಚಲ್ಲಿ ಹೊಯ್ದಾಗಲೇ ಈ ದುಂಡಗಿನ ಆಕಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು. 25 ಆ ಪಾತ್ರೆನ ತಾಮ್ರದ 12 ಹೋರಿಗಳ+ ಮೇಲೆ ಇಟ್ಟಿದ್ರು. 3 ಹೋರಿ ಉತ್ತರಕ್ಕೆ, 3 ಹೋರಿ ಪಶ್ಚಿಮಕ್ಕೆ, 3 ಹೋರಿ ದಕ್ಷಿಣಕ್ಕೆ ಮತ್ತು 3 ಹೋರಿ ಪೂರ್ವಕ್ಕೆ ಮುಖ ಮಾಡಿದ್ವು. ಆ ಎಲ್ಲ ಹೋರಿಗಳ ಹಿಂಭಾಗ ಒಳಗಡೆಗೆ ಇತ್ತು. ಅವುಗಳ ಬೆನ್ನಿನ ಮೇಲೆ ಆ ತಾಮ್ರದ ಪಾತ್ರೆ ಇತ್ತು. 26 ಆ ಪಾತ್ರೆ ನಾಲ್ಕು ಬೆರಳಿನಷ್ಟು* ದಪ್ಪ ಇತ್ತು. ಅದ್ರ ಅಂಚು ಲೋಟದ ಅಂಚಿನ ತರ ಇತ್ತು. ನೋಡೋಕೆ ಅದು ಅರಳಿದ ಲಿಲಿ ಹೂವಿನ ತರ ಇತ್ತು. ಅದ್ರಲ್ಲಿ 2,000 ಬತ್* ಅಳತೆ ನೀರು ಹಿಡಿತಿತ್ತು.
27 ಆಮೇಲೆ ಅವನು 10 ತಾಮ್ರದ ಬಂಡಿಗಳನ್ನ*+ ಮಾಡಿದ. ಪ್ರತಿಯೊಂದು ಬಂಡಿ ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ ಮತ್ತು ಮೂರು ಮೊಳ ಎತ್ರ ಇತ್ತು. 28 ಆ ಬಂಡಿಗಳನ್ನ ಹೇಗೆ ಮಾಡಿದ್ರು ಅಂದ್ರೆ, ಅವುಗಳ ನಾಲ್ಕೂ ಬದಿಗಳಲ್ಲಿ ಹಲಗೆಗಳಿದ್ವು. ಆ ಹಲಗೆಗಳು ಅಡ್ಡ ಪಟ್ಟಿಗಳ ಮಧ್ಯ ಇದ್ವು. 29 ಆ ಹಲಗೆಗಳ ಮೇಲೆ ಸಿಂಹ,+ ಹೋರಿ ಮತ್ತು ಕೆರೂಬಿಯರ+ ರೂಪಗಳು ಇದ್ವು. ಅಡ್ಡಪಟ್ಟಿಗಳ ಮೇಲೂ ಅದೇ ತರದ ರೂಪಗಳು ಇದ್ವು. ಸಿಂಹ ಮತ್ತು ಹೋರಿ ಮೇಲೂ ಕೆಳಗೂ ತೂಗು ಹಾಕಿರೋ ಹೂವಿನ ಹಾರದ ತರ ಕಾಣೋ ಆಕಾರವನ್ನ ಮಾಡಿದ್ರು. 30 ಪ್ರತಿಯೊಂದು ಬಂಡಿಗೆ ನಾಲ್ಕು ತಾಮ್ರದ ಚಕ್ರಗಳಿತ್ತು. ಚಕ್ರಗಳು ತಿರುಗೋ ತರ ಅದ್ರ ಮಧ್ಯದಲ್ಲಿ ತಾಮ್ರದ ಕೋಲುಗಳು ಇದ್ವು. ಅವುಗಳಿಗೆ ಆಧಾರವಾಗಿ ಬಂಡಿಯ ನಾಲ್ಕು ಮೂಲೆಗಳಲ್ಲೂ ಪಟ್ಟಿಗಳಿದ್ವು. ಈ ಆಧಾರಗಳ ಮೇಲೆ ಬೋಗುಣಿ ಇತ್ತು. ಪ್ರತಿಯೊಂದು ಆಧಾರದ ಪಕ್ಕದಲ್ಲಿ ಹೂವಿನ ಹಾರದ ತರ ಆಕಾರಗಳಿದ್ವು. ಆಧಾರಗಳನ್ನ ಅಚ್ಚಲ್ಲಿ ಹೊಯ್ದಾಗಲೇ ಈ ಆಕಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು. 31 ಬೋಗುಣಿಯ ಬಾಯಿ ಬಂಡಿಯ ಮೇಲ್ಭಾಗದ ಒಳಗಿತ್ತು. ಬೋಗುಣಿಯ ತಳದಿಂದ ಬಾಯಿಗೆ ಒಂದು ಮೊಳ ಅಂತರ ಇತ್ತು. ಅದ್ರ ಬಾಯಿ ವೃತ್ತಾಕಾರವಾಗಿತ್ತು. ಅದ್ರ ಆಧಾರದಿಂದ ಅದ್ರ ಬಾಯಿಯ ತನಕ ಅಳೆದ್ರೆ ಒಂದೂವರೆ ಮೊಳ ಇತ್ತು. ಬೋಗುಣಿಯ ಮೇಲ್ಭಾಗದಲ್ಲಿ ಕೆತ್ತಿದ ಆಕಾರಗಳಿದ್ವು. ಅದ್ರ ಸುತ್ತ ಇದ್ದ ಹಲಗೆಗಳು ವೃತ್ತಾಕಾರವಾಗಿ ಅಲ್ಲ, ಬದ್ಲಿಗೆ ಚೌಕಾಕಾರವಾಗಿ ಇದ್ವು. 32 ಬಂಡಿಯ ಆ ಹಲಗೆಗಳ ಕೆಳಗೆ ನಾಲ್ಕು ಚಕ್ರಗಳಿದ್ವು. ಚಕ್ರಗಳ ಆಧಾರಗಳನ್ನ ಬಂಡಿಗೆ ಜೋಡಿಸಿದ್ರು. ಪ್ರತಿಯೊಂದು ಚಕ್ರ ಒಂದೂವರೆ ಮೊಳ ಎತ್ರ ಇತ್ತು. 33 ಚಕ್ರಗಳನ್ನ ರಥದ ಚಕ್ರಗಳ ತರ ಮಾಡಿದ್ರು. ಅವುಗಳ ಆಧಾರ, ಕಟ್ಟು, ಕಡ್ಡಿ ಮತ್ತು ನಡುಭಾಗಗಳನ್ನ ಎಲ್ಲವನ್ನೂ ಅಚ್ಚಲ್ಲಿ ಮಾಡಿದ್ರು. 34 ಪ್ರತಿಯೊಂದು ಬಂಡಿಯ ನಾಲ್ಕು ಮೂಲೆಗಳಲ್ಲೂ ನಾಲ್ಕು ಆಧಾರಗಳಿದ್ವು. ಬಂಡಿಯನ್ನ ಅಚ್ಚಲ್ಲಿ ಹೊಯ್ದಾಗಲೇ ಆ ಆಧಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು. 35 ಬಂಡಿಯ ಮೇಲಿನ ಭಾಗದಲ್ಲಿ ವೃತ್ತಾಕಾರದ ಒಂದು ಪಟ್ಟಿ ಇತ್ತು. ಅದು ಅರ್ಧ ಮೊಳ ಎತ್ರ ಇತ್ತು. ಬಂಡಿನ ಅಚ್ಚಲ್ಲಿ ಹೊಯ್ದಾಗಲೇ ಅದ್ರ ಸುತ್ತ ಇದ್ದ ಚೌಕಟ್ಟು ಪಟ್ಟಿಗಳನ್ನು ಮತ್ತು ಅದ್ರ ಬದಿಗಳಲ್ಲಿದ್ದ ಹಲಗೆಗಳನ್ನ ಅಚ್ಚಲ್ಲಿ ಹೊಯ್ದಿದ್ರು. 36 ಅದ್ರ ಸುತ್ತ ಇದ್ದ ಚೌಕಟ್ಟು ಪಟ್ಟಿಗಳ ಮತ್ತು ಅದ್ರ ಬದಿಗಳಲ್ಲಿದ್ದ ಹಲಗೆಗಳ ಮೇಲೆ ಎಲ್ಲೆಲ್ಲಿ ಜಾಗ ಇತ್ತೋ ಅಲ್ಲೆಲ್ಲ ಅವನು ಸಿಂಹ, ಖರ್ಜೂರದ ಮರ ಮತ್ತು ಕೆರೂಬಿಯರ ಆಕಾರ ಕೆತ್ತಿದ. ಸುತ್ತಲೂ ಹೂವಿನ ಹಾರದ ತರ ಕಾಣೋ ಆಕಾರಗಳನ್ನೂ ಕೆತ್ತಿದ.+ 37 ಇದೇ ತರ ಅವನು ಆ ಹತ್ತೂ ಬಂಡಿಗಳಲ್ಲೂ+ ಮಾಡಿದ. ಆ ಎಲ್ಲ ಬಂಡಿನ ಒಂದೇ ತರ ಅಚ್ಚಲ್ಲಿ ಹೊಯಿಸಿ ಮಾಡಿದ್ರು.+ ಎಲ್ಲದ್ರ ಅಳತೆ ಮತ್ತು ಆಕಾರ ಒಂದೇ ಆಗಿತ್ತು.
38 ಅವನು ತಾಮ್ರದ 10 ಬೋಗುಣಿ+ ಮಾಡಿಸಿದ. ಪ್ರತಿಯೊಂದು ಬೋಗುಣಿಯಲ್ಲಿ 40 ಬತ್ ನೀರು ತುಂಬಿಸಬಹುದಿತ್ತು. ಪ್ರತಿಯೊಂದು ಬೋಗುಣಿ ನಾಲ್ಕು ಮೊಳ ಇತ್ತು.* ಒಂದು ಬಂಡಿಗೆ ಒಂದು ಬೋಗುಣಿ ತರ 10 ಬಂಡಿಗೆ 10 ಬೋಗುಣಿ ಇತ್ತು. 39 ಆಮೇಲೆ ಅವನು ಆಲಯದ ಬಲಭಾಗಕ್ಕೆ ಐದು ಬಂಡಿಗಳನ್ನ ಮತ್ತು ಎಡಭಾಗಕ್ಕೆ ಐದು ಬಂಡಿಗಳನ್ನ ಇಟ್ಟ. “ಸಮುದ್ರ” ಅಂತ ಕರೀತಿದ್ದ ತಾಮ್ರದ ಪಾತ್ರೆಯನ್ನ ಅವನು ಆಲಯದ ಬಲಕ್ಕೆ ಅಂದ್ರೆ ದಕ್ಷಿಣ-ಪೂರ್ವಕ್ಕೆ* ಇಟ್ಟ.+
40 ಹೀರಾಮ+ ಬೇರೆ ಬೋಗುಣಿಗಳನ್ನ, ಸಲಿಕೆಗಳನ್ನ,+ ಬಟ್ಟಲುಗಳನ್ನೂ+ ಮಾಡಿದ.
ಹೀಗೆ ಹೀರಾಮ ಯೆಹೋವನ ಆಲಯಕ್ಕಾಗಿ ರಾಜ ಸೊಲೊಮೋನ ತನಗೆ ಹೇಳಿದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ.+ 41 ಎರಡು ಕಂಬ,+ ಎರಡು ಕಂಬದ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟ ಮತ್ತು ಆ ಎರಡು ಕಿರೀಟ ಅಲಂಕರಿಸೋಕೆ ಎರಡೆರಡು ಜಾಲರಿ+ ಆಕಾರದ ಕೆತ್ತನೆಗಳನ್ನ ಮಾಡಿದ. 42 ಎರಡು ಕಂಬಗಳ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟಗಳನ್ನ ಮುಚ್ಚೋಕೆ ಜಾಲರಿ ಆಕಾರದ ಕೆತ್ತನೆ ಮೇಲೆ ತಾಮ್ರದ 400 ದಾಳಿಂಬೆಗಳನ್ನ+ ಮಾಡಿದ. ಪ್ರತಿಯೊಂದು ಜಾಲರಿ ಆಕಾರದ ಮೇಲೆ ಎರಡು ಸಾಲು ದಾಳಿಂಬೆಗಳನ್ನ ಮಾಡಿದ. 43 ಹತ್ತು ಬೋಗುಣಿ+ ಮತ್ತು ಅವನ್ನ ತಗೊಂಡು ಹೋಗೋಕೆ ಹತ್ತು ಬಂಡಿಗಳನ್ನ+ ಮಾಡಿದ. 44 ‘ಸಮುದ್ರ’+ ಮತ್ತು ಅದ್ರ ಕೆಳಗಿನ 12 ಹೋರಿಗಳನ್ನ ಮಾಡಿದ. 45 ಹಂಡೆ, ಸಲಿಕೆ, ಬಟ್ಟಲು ಮತ್ತು ಎಲ್ಲ ಪಾತ್ರೆಗಳನ್ನ ಮಾಡಿದ. ಹೀರಾಮ ರಾಜ ಸೊಲೊಮೋನ ಹೇಳಿದ ತರಾನೇ ಯೆಹೋವನ ಆಲಯಕ್ಕಾಗಿ ಇವೆಲ್ಲವನ್ನ ಹೊಳೀತಿದ್ದ ತಾಮ್ರದಿಂದ ತಯಾರು ಮಾಡಿದ. 46 ರಾಜ ಇದನ್ನೆಲ್ಲ ಯೋರ್ದನ್ ಜಿಲ್ಲೆಗಳಾದ ಸುಕ್ಕೋತ್ ಮತ್ತು ಚಾರೆತಾನಿನ ಮಧ್ಯದಲ್ಲಿ ಇರೋ ಜೇಡಿಮಣ್ಣಿನ ಅಚ್ಚಿನಲ್ಲಿ ಹೊಯ್ಯಿಸಿ ಮಾಡಿಸಿದ.
47 ತುಂಬ ಪಾತ್ರೆಗಳು ಇದ್ದಿದ್ರಿಂದ ಸೊಲೊಮೋನ ಯಾವ ಪಾತ್ರೆ ತೂಕಾನೂ ನೋಡಲಿಲ್ಲ. ಹಾಗಾಗಿ ಅದನ್ನೆಲ್ಲ ಮಾಡೋಕೆ ಎಷ್ಟು ತಾಮ್ರ ಹಿಡಿತು ಅಂತ ಗೊತ್ತಾಗಲಿಲ್ಲ.+ 48 ಸೊಲೊಮೋನ ಯೆಹೋವನ ಆಲಯಕ್ಕಾಗಿ ಮಾಡಿಸಿದ ಪಾತ್ರೆಗಳು ಯಾವೆಂದ್ರೆ: ಚಿನ್ನದ ಯಜ್ಞವೇದಿ,+ ಅರ್ಪಣೆಯ ರೊಟ್ಟಿಗಳನ್ನ ಇಡೋಕೆ ಚಿನ್ನದ ಮೇಜು,+ 49 ಎಡಭಾಗಕ್ಕೂ ಬಲಭಾಗಕ್ಕೂ ಐದೈದರಂತೆ ಅತಿ ಪವಿತ್ರ ಸ್ಥಳದ ಮುಂದೆ ಇಡೋಕೆ ಶುದ್ಧ ಚಿನ್ನದಿಂದ ಮಾಡಿಸಿದ ದೀಪಸ್ತಂಭಗಳು+ ಮತ್ತು ಚಿನ್ನದಿಂದ ಮಾಡಿಸಿದ ಅರಳಿದ ಹೂಗಳು,+ ದೀಪಗಳು ಮತ್ತು ಚಿಮುಟಗಳು,*+ 50 ಶುದ್ಧ ಚಿನ್ನದಿಂದ ಮಾಡಿಸಿದ ಬೋಗುಣಿಗಳು, ದೀಪಶಾಮಕಗಳು,*+ ಬಟ್ಟಲುಗಳು, ಲೋಟಗಳು+ ಮತ್ತು ಕೆಂಡ ಹಾಕುವ ಪಾತ್ರೆಗಳು,+ ಅತಿ ಪವಿತ್ರ ಸ್ಥಳಕ್ಕಿದ್ದ ಬಾಗಿಲುಗಳಿಗೆ+ ಮತ್ತು ಆಲಯದ ಬಾಗಿಲುಗಳಿಗೆ+ ಚಿನ್ನದ ಆಧಾರಗಳು.
51 ಹೀಗೆ ರಾಜ ಸೊಲೊಮೋನ ಯೆಹೋವನ ಆಲಯಕ್ಕಾಗಿ ಮಾಡಬೇಕಾಗಿದ್ದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ. ಆಲಯಕ್ಕೆ ಅಂತಾನೇ ದಾವೀದ ಇಟ್ಟಿದ್ದ+ ಎಲ್ಲ ವಸ್ತುಗಳನ್ನ ಅಲ್ಲಿಗೆ ತಂದ. ಚಿನ್ನ, ಬೆಳ್ಳಿ ಮತ್ತು ಬೇರೆ ವಸ್ತುಗಳನ್ನ ತಂದು ಯೆಹೋವನ ಆಲಯದ ಖಜಾನೆಗಳನ್ನ ತುಂಬಿಸಿದ.+