ಮನುಷ್ಯನು ಪ್ರಮೋದವನದಲ್ಲಿ ಜೀವವನ್ನಾನಂದಿಸುವಂತೆ ದೇವರು ಉದ್ದೇಶಿಸುತ್ತಾನೆ
“ಯೆಹೋವ ದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಎದೇನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿಟ್ಟನು.”—ಆದಿಕಾಂಡ 2:15.
1. ವಿಧೇಯ ಮಾನವರ ಕುರಿತು ನಿರ್ಮಾಣಿಕನ ಮೂಲ ಉದ್ದೇಶವು ಏನಾಗಿತ್ತು?
ಅದು ನಿರ್ಮಾಣಿಕನ ಮೂಲ ಉದ್ದೇಶವಾಗಿತ್ತು, ಮತ್ತು ಅದಿನ್ನೂ ಆತನ ಉದ್ದೇಶವಾಗಿರುತ್ತದೆ. ಎನಂದರೆ ವಿಧೇಯ ಮಾನವರು ಎಂದೂ ವೃದ್ದರಾಗದ, ಸದಾ ತಾರುಣ್ಯದ ಕಳೆಯಿಂದ ತುಳುಕುವ, ಯಾವ ಬೇಸರವೂ ಇಲ್ಲದ, ಸದಾ ಅರ್ಹವಾದ ಉದ್ದೇಶವನ್ನು ಪೂರ್ಯೆಸುವ ಒಂದು ಜೀವಿತವನ್ನು ನಿಜವೂ ನಿಸ್ವಾರ್ಥವೂ ಪೂರ್ಣವೂ ಅದ ಪ್ರೀತಿ ಮತ್ತು ಪ್ರೀತಿಸಲ್ಪಡುವಿಕೆಯುಳ್ಳ ಒಂದು ಜೀವಿತವನ್ನು—ಒಂದು ಪ್ರಮೋದವನದಲ್ಲಿ ಆನಂದಿಸುವದೇ!—ಆದಿಕಾಂಡ 2:8; ಲೂಕ 23:42,43 ಹೋಲಿಸಿ.
2. (ಎ) ಮೊದಲ ಮನುಷ್ಯನು ಪ್ರಜ್ನೆಪಡೆದಾಗ ಏನು ಸಂಭವಿಸಿದ್ದಿರಬೇಕು? (ಬಿ) ಮೊದಲ ಮನುಷ್ಯನು ನಿರ್ಮಿಸಲ್ಪಟ್ಟದ್ದು ಯಾವಾಗ, ಎಲ್ಲಿ, ಮತ್ತು ವರ್ಷದ ಯಾವ ಸಮಯದಲ್ಲಿ?
2 ಇದನ್ನು ಮನಗಾಣಲಿಕ್ಕಾಗಿ, ಆದಾಮನು ನಿರ್ಮಿತನಾದ ಹೊಸತಿನಲ್ಲಿ ಪ್ರಜ್ನೆಯನ್ನು ಪಡೆದಾಗ, ಅವನು ತನ್ನ ದೇಹವನ್ನು ಹಾಗೂ ತನ್ನ ಸುತ್ತಮುತ್ತಲು ಕಂಡ, ಕೇಳಿದ, ಮತ್ತು ಸ್ಪರ್ಶಿಸಿದ್ದೆಲ್ಲವನ್ನು ಪರೀಕ್ಷಿಸಿದಾಗ ಹಾಗೂ ತಾನು ಜೀವಂತನೆಂಬದನ್ನು ಅಚ್ಚರಿಯಿಂದ ಮನಗಂಡ ಸಮಯದ ಕಡೆಗೆ ಹಿನ್ನೋಡಿರಿ! ಇದು ನಡೆದದ್ದು ಪವಿತ್ರ ಬೈಬಲ್ ಕಾಲಗಣನೆಗನುಸಾರ 6000 ವರ್ಷ ಪೂರ್ವದಲ್ಲಿ ಅಂದರೆ ನಮ್ಮ ಸಾಮಾನ್ಯ ಶಕಕ್ಕೆ ಮುಂಚಿನ 4026 ನೇ ವರ್ಷದಲ್ಲಿ. ಅದು ಸಂಭವಿಸಿದ್ದು ಇಂದು ತುರ್ಕಿ ದೇಶವೆಂದು ಕರೆಯಲ್ಪಡುವ ಪ್ರದೇಶದಲ್ಲಿ ಯಾ ಇಂದು ಆಸ್ಯವೆಂದು ಯಾವುದು ಕರೆಯಲ್ಪಡುತ್ತದೋ ಅದರ ನೈರುತ್ಯ ಭಾಗದಲ್ಲಿ; ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳ ನೆರೆಹೊರೆಯಲ್ಲಿ; ಹೀಗೆ ನಮ್ಮ ಭೂಗೋಲದ ಉತ್ತರಾರ್ಧ ಭಾಗದಲ್ಲಿ. ಅದು ನಡೆದ ಸಮಯವು ಒಕ್ಟೋಬರ 1 ರ ಸುಮಾರಿಗೆ ಯಾಕಂದರೆ ಮಾನವಕುಲದ ಹೆಚ್ಚಿನ ಪುರಾತನ ಕ್ಯಾಲೆಂಡರ್ಗಳು ಆ ತಾರೀಕಿನ ಹತ್ತರದಲ್ಲಿ ಸಮಯವನ್ನು ಲೆಕ್ಕಿಸುತ್ತವೆ.
3. (ಎ) ಯಾವ ಸ್ಥಿತಿಯಲ್ಲಿ ಮೊದಲ ಮನುಷ್ಯನು ಜೀವಿತನಾದನು? (ಬಿ) ಮೊದಲ ಮನುಷ್ಯನ ಹೆಸರೇನು ಮತ್ತು ಅದರ ಅರ್ಥವೇನು?
3 ಮೊದಲನೆ ಮನುಷ್ಯನು ಜೀವ ಪಡೆದಾಗ ಪೂರ್ಣ ಬೆಳೆದಿದ್ದನು, ಪೂರ್ಣ ರೂಪ ಪಡೆದಿದ್ದನು, ಪರಿಪೂರ್ಣ ಆರೋಗ್ಯ ಮತ್ತು ಪೂರ್ಣ ನೈತಿಕತೆ ಇದ್ದವನು. ಬೈಬಲ್ ದಾಖಲೆಯಲ್ಲಿ ಅವನಿಗೆ ಪದೇಪದೇ ಕೊಡಲ್ಪಟ್ಟ ಹೆಸರು ಅವನ್ಯಾವ ಘಟಕದಿಂದ ರಚಿಸಲ್ಪಟ್ಟನೋ ಅದರ ಕಡೆಗೆ ನಮ್ಮ ಗಮನವನ್ನು ಎಳೆಯುತ್ತದೆ. ಅವನ ಹೆಸರು ಆದಾಮ್.a ಅವನು ಎತರಿಂದ ರೂಪಿಸಲ್ಪಟ್ಟನೋ ಆ ಭೂಮಿ ಯಾ ಮಣ್ಣು ಆದಾಮಾ ಎಂದು ಕರೆಯಲ್ಪಟ್ಟಿದೆ. ಹೀಗೆ “ಮಣ್ಣಿನ ಮನುಷ್ಯ” ಎಂಬರ್ಥವನ್ನು ಅವನ ಹೆಸರಿಗೆ ಕೊಡಲೂ ಬಹುದು. ಇದು ಮೊದಲನೆ ಮನುಷ್ಯ ಆದಾಮನ ವೈಯಕ್ತಿಕ ಹೆಸರಾಗಿ ಪರಿಣಮಿಸಿತು. ತಾನು ಜೀವಂತನಾದಾಗ, ಪ್ರಜ್ನೆಪಡೆದಾಗ, ಬುದ್ಧಿಯುಳ್ಳ ವ್ಯಕ್ತಿಯಾದಾಗ ಆದಾಮನಿಗೆ ಅದೆಂತಹ ಅನಿಸಿಕೆಯಾಗಿರಬೇಕು!
4. ಮೊದಲ ಮನುಷ್ಯನು ಜೀವಪಡೆದಾಗ ಯಾವ ಅಪೂರ್ವ ಎಚ್ಚರಿಕೆಯು ಅವನಿಗಾಗಲಿಲ್ಲ, ಹೀಗೆ ಅವನು ಯಾರ ಮಗನಲ್ಲ?
4 ಈ ಮೊದಲನೆ ಮನುಷ್ಯ ಆದಾಮನು ಸಜೀವಿಯಾದಾಗ, ಬುದ್ದಿಯುಕ್ತ ಪ್ರಜ್ನೆ ಪಡೆದು ಕಣ್ಣು ತೆರೆದಾಗ, ಒಂದು ಹೆಣ್ಣು ಕೋತಿಯಂತಹ ಜೀವಿಯ ಉದ್ದವಾದ ಬಲಿಷ್ಟ ಬಾಹುಗಳಿಂದಾವರಿತನಾಗಿ, ರೋಮ ತುಂಬಿದೆದೆಯ ಮೇಲೆ ಮಲಗಿದವನಾಗಿ, ತನ್ನನ್ನು ಕಂಡುಕೊಳ್ಳಲ್ಲಿಲ; ಅವಳನ್ನಪ್ಪಿ ಹಿಡಿದು, ಅವಳ ಕಣ್ಣನ್ನೇ ನೋಡುತ್ತಾ, ಮಮತೆಯಿಂದ ಅಮ್ಮಾ ಎಂದು ಕರೆಯಲೂ ಇಲ್ಲ. ಮೊದಲ ಮನುಷ್ಯ ಆದಾಮನಿಗೆ ಜೀವ ಪಡೆದಾಗ ಅಂತಹ ಯಾವುದೇ ಸೋಜಿಗದ ಅರಿವಾಗಿರಲ್ಲಿಲ. ಒಂದು ಕಪಿಯೊಂದಿಗೆ ಯಾವ ರಕ್ತಸಂಬಂಧದ ಅನಿಸಿಕೆಯೂ ಅವನಿಗಿರಲ್ಲಿಲ, ಅನಂತರ ಅಂತಹದೊಂದನ್ನು ಮೊದಲಾಗಿ ಕಂಡಾಗಲೂ ಆಗಿರಲ್ಲಿಲ. ಕಪಿಯೊಂದರ ಅಥವಾ ಅಂತಹ ಜೀವಿಯೊಂದರ ವಂಶಜನು ತಾನು, ದೂರ ಸಂಬಂಧಿ ಮಗನು, ಎಂದು ಸೂಚಿಸುವ ಯಾವುದೇ ವಿಷಯವು ಅವನ ನಿರ್ಮಾಣದ ದಿನದಲ್ಲಾಗಲಿಲ್ಲ. ಆದರೂ ತಾನು ಉಂಟಾದದ್ದು ಹೇಗೆಂಬ ವಿಷಯದಲ್ಲಿ ಆದಾಮನು ಮರ್ಮಿತನಾಗಿ ಉಳಿಯಬೇಕಿತ್ತೋ? ಇಲ್ಲ.
5. ಉದ್ಯಾನದಂತಹ ತೋಟ ಮತ್ತು ತನ್ನ ಕುರಿತು ಆದಾಮನಿಗೆ ನಿಶ್ಚಯವಾಗಿ ಏನು ತಿಳಿದಿತ್ತು?
5 ತನ್ನ ಸುತ್ತಮುತ್ತಲು ಕಂಡ ಆ ಸುಂದರವಾದ ವಸ್ತುಗಳೆಲ್ಲಾ ಹೇಗೆ ಬಂದವು ಎಂಬ ವಿಷಯದಲ್ಲಿ ಅವನು ಮರ್ಮಿತನಿದ್ದಿರಬಹುದು ನಿಜ. ಅವನು ತನ್ನನ್ನು ಒಂದು ಉದ್ಯಾನದಂತಹ ತೋಟದಲ್ಲಿ, ತಾನು ರಚಿಸದೇ ಇದ್ದ, ಮಾಡದೇ ಇದ್ದ, ಮತ್ತು ಎರ್ಪಡಿಸದೇ ಇದ್ದ ಒಂದು ಪ್ರಮೋದವನದಲ್ಲಿ ಕಂಡುಕೊಂಡನು. ಇದು ಉಂಟಾದದ್ದು ಹೇಗೆ? ಪರಿಪೂರ್ಣ ಬುದ್ಧಿಯುಳ್ಳ, ವಿವೇಚನೆಯುಳ್ಳ ನರನೋಪಾದಿ ಅವನದನ್ನು ತಿಳಿಯ ಬಯಸಿರಬೇಕು. ಆರಂಭದ ಯಾವ ಅನುಭವವೂ ಅವನಿಗಿರಲಿಲ್ಲ. ತಾನು ಸ್ವನಿರ್ಮಿತ, ಸ್ವವಿಕಾಸಿತ ಮನುಷ್ಯನಲ್ಲವೆಂದು ಅವನಿಗೆ ಗೊತ್ತಿತ್ತು. ತನ್ನ ಸ್ವಂತ ಪ್ರಯತ್ನಗಳಿಂದ ಅವನೀ ಸ್ಥಿತಿಗೆ ಏರಿರಲಿಲ್ಲ.—ಕೀರ್ತನೆ 100:3; 139:14.
6. ಒಂದು ಪರಿಪೂರ್ಣ ಭೂಮನೆಯಲ್ಲಿ ಜೀವಿತನಾಗಿ ಬಂದಾಗ ಆದಾಮನು ಹೇಗೆ ಪ್ರತಿಕ್ರಿಯೆ ತೋರಿಸಿರಬಹುದು?
6 ಮೊದಲ ಮನುಷ್ಯ ಆದಾಮನು ಆರಂಭದಲ್ಲಿ ಒಂದು ಪರಿಪೂರ್ಣ ಭೂಮನೆಯಲ್ಲಿ ಸಂತಸದ ಜೀವನದ ಮೊದಲ ಅನುಭವದಿಂದ ಎಷ್ಟು ಪೂಕಿತನಾಗಿದ್ದಿರಬಹುದೆಂದರೆ ತಾನೆಲ್ಲಿಂದ ಬಂದೆನು, ಏಕೆ ಬಂದೆನು ಎಂದು ಯೋಚಿಸಿರಲಿಕ್ಕೂ ಇಲ್ಲ, ಆನಂದದ ಕೇಕೆಗಳನ್ನು ಅವನು ಹಾಕದಿರ ಸಾಧ್ಯವಿಲ್ಲ. ತನ್ನ ಬಾಯೊಳಗಿಂದ ಶಬ್ದಗಳು ಹೊರಡುವದು ಅವನಿಗೆ ಕೇಳಿಸಿತ್ತು. ತಾನು ಮನುಷ್ಯ ಭಾಷೆಯಲ್ಲಿ ಮಾತಾಡುವದನ್ನು, ತಾನು ಕಂಡ ಮತ್ತು ಕೇಳಿದ ಸುಂದರ ವಸ್ತುಗಳ ಕುರಿತು ವಿಮರ್ಶಿಸುವದನ್ನು ಕಂಡನು. ಈ ಪ್ರಮೋದವನದಲ್ಲಿ ಜೀವಿತನಾಗಿರುವದು ಅದೆಷ್ಟು ಹಿತಕರವು! ಹೀಗೆ ಎಲ್ಲಾ ದೃಶ್ಯಗಳಿಂದ, ಧ್ವನಿಗಳಿಂದ, ಸುವಾಸನೆಗಳಿಂದ, ಮತ್ತು ವಸ್ತುಗಳ ಸ್ಪರ್ಶದಿಂದ ತನ್ನನ್ನು ಸಂತಸದಿಂದ ತುಂಬಿಸಿಕೊಂಡಾಗ, ಆಲೋಚಿಸಲು ಪ್ರೇರಣೆಯು ಅವನಿಗೆ ದೊರಕುವದು. ಒಂದುವೇಳೆ ಅವನ ಪರಿಸ್ಥಿತಿಯಲ್ಲಿ ನಾವಿದದ್ದಾದರೆ, ಇಡೀ ವಿಷಯವೇ ಒಂದು ಮರ್ಮವಾಗುತಿತ್ತು, ಮತ್ತು ಆ ಮರ್ಮವನ್ನು ನಾವಾಗಿಯೇ ಪರಿಹರಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.
ಮನುಷ್ಯನ ಅಸ್ತಿತ್ವದ ವಿಷಯದಲ್ಲಿ ಮರ್ಮವಿಲ್ಲ
7. ತನ್ನನ್ನು ಜೀವಂತನಾಗಿ ಮತ್ತು ಪ್ರಮೋದವನದಲ್ಲಿ ಕಂಡುಕೊಂಡ ಕುರಿತು ಆದಾಮನು ಬಹುಕಾಲ ಮರ್ಮಿತನಾಗಿರಲ್ಲಿಲ್ಲವೇಕೆ?
7 ಪ್ರಮೋದವನದಲ್ಲಿ ತನ್ನಂತೆ ದೃಶ್ಯರಾದ ಯಾರೂ ಇರದಿದ್ದ ಹಾಗೂ ಸಜೀವ ಮತ್ತು ಒಂಟಿಗನಾಗಿ ತನ್ನನ್ನು ಕಂಡುಕೊಂಡ ಪರಿಸ್ಥಿತಿಯ ಕುರಿತು ಮೊದಲ ಮನುಷ್ಯ ಆದಾಮನು ಬಹು ಕಾಲ ಮರ್ಮಿತನಾಗಿರಲಿಲ್ಲ. ಧ್ವನಿಯೊಂದು ಅವನಿಗೆ ಕೇಳಿಸಿತು, ಯಾರೋ ಮಾತಾಡುತಿದ್ದರು. ಮನುಷ್ಯನು ಅದನ್ನು ತಿಳುಕೊಂಡನು. ಆದರೆ ಭಾಷಕನೆಲ್ಲಿ? ಯಾರೂ ಮಾತಾಡುವದು ಮನುಷ್ಯನಿಗೆ ಕಾಣಲಿಲ್ಲ. ಅದೃಶ್ಯವಾದ, ಮರೆಯಾದ ರಂಗದಿಂದ ಆ ಧ್ವನಿ ಬಂತು, ಮತ್ತು ಅದು ಅವನನ್ನು ಉದ್ದೇಶಿಸಿ ನುಡಿಯುತ್ತಿತ್ತು. ಅದು ಮನುಷ್ಯನನ್ನು ಉಂಟುಮಾಡಿದಾತನ, ಅವನ ನಿರ್ಮಾಣಿಕನ ಧ್ವನಿಯಾಗಿತ್ತು! ಮತ್ತು ಅದೇ ಭಾಷೆಯಿಂದ ಮನುಷ್ಯನು ಆತನನ್ನು ಉತ್ತರಿಸ ಶಕ್ತನಿದ್ದನು. ಅವನು ತನ್ನನ್ನು ದೇವರೊಂದಿಗೆ, ನಿರ್ಮಾಣಿಕನೊಂದಿಗೆ ಮಾತಾಡುವವನಾಗಿ ಕಂಡನು. ಆ ದೈವಿಕ ಧ್ವನಿಯನ್ನು ಕೇಳಲಿಕ್ಕೆ ಮನುಷ್ಯನಿಗೆ ಯಾವ ಆಧುನಿಕ ರೇಡಿಯೋ ರಿಸೀವರ್ ಬೇಡವಿತ್ತು. ದೇವರು ಅವನೊಂದಿಗೆ ತನ್ನ ಸೃಷ್ಟಿಯೋಪಾದಿ ನೇರವಾಗಿ ಸಂಭಾಷಿಸಿದನು.
8, 9. (ಎ) ಯಾವ ಪ್ರಶ್ನೆಗಳಿಗೆ ಉತ್ತರಗಳು ಆದಾಮನಿಗೆ ಸಿಕ್ಕ ಸಾಧ್ಯವಿತ್ತು, ಮತ್ತು ಪಿತನ ಯಾವ ಪರಾಮರಿಕೆ ಮತ್ತು ಆಸಕ್ತಿಯು ಅವನಿಗೆ ತೋರಿಸಲ್ಪಟ್ಟಿತು? (ಬಿ) ತನ್ನ ಸ್ವರ್ಗೀಯ ತಂದೆಯಿಂದ ಆದಾಮನಿಗೆ ಯಾವ ಉತ್ತರವು ಸಿಕ್ಕಿತು?
8 ತಾನೀಗ ಒಂಟಿಗನಲ್ಲವೆಂದು ಮನುಷ್ಯನಿಗೆ ತಿಳಿಯಿತು, ಮತ್ತು ಅದು ಅವನಿಗೆ ಹಿತಕರವೆನಿಸಿರಬೇಕು. ಅವನ ಮನ ತುಂಬಾ ಪ್ರಶ್ನೆಗಳಿದ್ದವು. ತನ್ನೊಂದಿಗೆ ಮಾತಾಡುತ್ತಿದ್ದ ಆ ಅದೃಶ್ಯ ವ್ಯಕ್ತಿಯೊಂದಿಗೆ ಅವನದನ್ನು ಕೇಳಬಹುದಿತ್ತು. ತನ್ನನ್ನು ಮತ್ತು ಈ ಸುಖಕರವಾದ ಉದ್ಯಾನವನವನ್ನು ಮಾಡಿದವರಾರು? ತನ್ನನ್ನು ಅಲ್ಲಿಟ್ಟದ್ದೇಕೆ, ಮತ್ತು ತನ್ನ ಜೀವದೊಂದಿಗೆ ತಾನು ಮಾಡತಕ್ಕದೇನ್ದು? ಜೀವಿಸುವದರಲ್ಲಿ ಏನಾದರೂ ಉದ್ದಿಶ್ಯವಿದೆಯೇ? ಈ ಮೊದಲ ಮನುಷ್ಯ ಆದಾಮನಿಗೆ ತಂದೆಯ ಪರಾಮರಿಕೆ ಮತ್ತು ಆಸಕ್ತಿಯು ತೋರಿಸಲ್ಪಟ್ಟಿತ್ತು, ಹೇಗಂದರೆ ಅವನ ಪ್ರಶ್ನೆಗಳಿಗೆ ಅವನ ವಿಚಾರಕ ಮನವನ್ನು ತೃಪ್ತಿಗೊಳಿಸಿದ ಉತ್ತರವು ಕೊಡಲ್ಪಟ್ಟಿತು. ಆ ಮನುಷ್ಯನು ತಾನು ಮಾತನಾಡಲಾರಂಬಿಸುವದನ್ನು ಮತ್ತು ತನ್ನ ಮೊದಲ ಶಬ್ದಗಳನ್ನು ಹೇಳುವದನ್ನು ಕೇಳಿದಾಗ ಆತನ ನಿರ್ಮಾಣಿಕನಿಗೆ, ಜೀವದಾತನಿಗೆ, ಸ್ವರ್ಗೀಯ ತಂದೆಗೆ ಅದೆಷ್ಟು ಸಂತೋಷವಾಗಿರಬೇಕು! ಸಹಜವಾದ ಮೊದಲ ಪ್ರಶ್ನೆಯು “ನಾನು ಉಂಟಾದದ್ದು ಹೇಗೆ?” ಎಂದಾಗಿರುವದು. ಸ್ವರ್ಗೀಯ ತಂದೆಯು ಅದನ್ನುತ್ತರಿಸಲು ಸಂತೋಷಿಸಿದನು ಮತ್ತು ಹೀಗೆ ಆ ಮೊದಲ ಮನುಷ್ಯನು ತನ್ನಮಗನು ಎಂದು ಅಂಗೀಕರಿಸಿದನು. ಅವನು “ದೇವರ ಮಗ” ನಾಗಿದ್ದನು. (ಲೂಕ 3:38) ಆ ಮೊದಲನೆ ಮನುಷ್ಯ ಆದಾಮನ ತಂದೆಯು ತಾನೆಂದು ಯೆಹೋವನು ಗುರುತಿಸಿಕೊಟ್ಟನು. ತನ್ನ ಪ್ರಶ್ನೆಗೆ ಆದಾಮನು ಸ್ವರ್ಗೀಯ ತಂದೆಯಿಂದ ಪಡೆದ ಮತ್ತು ತನ್ನ ಸಂತತಿಗೆ ದಾಟಿಸಿದ ಆ ಉತ್ತರದ ಸಾರಾಂಶವು ಇಲ್ಲಿದೆ:
9 “ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು. ಇದಲ್ಲದೆ ಯೆಹೋವ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು. ಮತ್ತು ಯೆಹೋವ ದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯ ಮಾಡಿದನು. ಅದಲ್ಲದೆ ಆ ವನಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಮತ್ತು ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ವೃಕ್ಷವನ್ನು ಬೆಳೆಸಿದನು. ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು. ಅದು ಆಚೇ ಕಡೆಯಲ್ಲಿ ಒಡೆದು ನಾಲ್ಕು ಶಾಖೆಗಳಾಯಿತು.”—ಆದಿಕಾಂಡ 2:7-10.b
10, 11. (ಎ) ಯಾವ ನಿಜ ಸಂಗತಿಗಳನ್ನು ಆದಾಮನು ಸ್ಪಷ್ಟವಾಗಿ ಕಲಿತನು, ಆದರೆ ಬೇರೆ ಯಾವ ಪ್ರಶ್ನೆಗಳಿಗೆ ಅವನಿಗೆ ಉತ್ತರಬೇಕಿತ್ತು? (ಬಿ) ಯಾವ ಉತ್ತರಗಳನ್ನು ಸ್ವರ್ಗೀಯ ತಂದೆಯು ಆದಾಮನಿಗೆ ಕೊಟ್ಟನು?
10 ಆದಾಮನ ಕುಶಲ, ಪ್ರಸನ್ನ ಮನಸ್ಸು ಈ ತೃಪ್ತಿಕರ ಸಮಾಚಾರವನ್ನು ಆತುರದಿಂದ ಹೀರಿಕೊಂಡಿತು. ತನ್ನ ನಿರ್ಮಾಣಿಕನೂ ರಚಕನೂ ಎಲ್ಲಿಂದ ಮಾತಾಡಿದನೋ ಆ ಅದೃಶ್ಯ ಕ್ಷೇತ್ರದಿಂದ ತಾನು ಬಂದವನಲ್ಲವೆಂದು ಅವನಿಗೀಗ ತಿಳಿಯಿತು. ಬದಲಾಗಿ, ಅವನು ಎಲ್ಲಿ ಜೀವಿಸಿದ್ದನೋ ಆ ಭೂಮಿಯ ಮಣ್ಣಿನಿಂದ ರೂಪಿಸಲ್ಪಟ್ಟವನಾದ್ದರಿಂದ ಭೂಮಿಯವನಾಗಿದ್ದನು. ಅವನ ಜೀವದಾತ ಮತ್ತು ತಂದೆಯು ಯೆಹೋವ ದೇವರು. ಅವನೊಬ್ಬ “ಬದುಕುವ ಪ್ರಾಣಿ” ಆಗಿದ್ದನು. ಯೆಹೋವ ದೇವರಿಂದ ತನ್ನ ಜೀವವನ್ನು ಪಡೆದಿದ್ದನಾದ್ದರಿಂದ ಅವನು ಒಬ್ಬ “ದೇವರ ಮಗ” ನಾಗಿದ್ದನು. ಏದೆನ್ ತೋಟದಲ್ಲಿದ್ದ ಮರಗಳು ಊಟಕ್ಕೆ ಉತ್ತಮವಾದ ಫಲವನ್ನು ಕೊಟ್ಟವು, ಬದುಕುವ ಜೀವಿಯಾದ ಅವನು ಅದನ್ನು ತಿಂದು ಬದುಕ ಶಕ್ತನಾದನು. ಆದರೂ, ಅವನು ಬದುಕಿರಬೇಕೇಕೆ, ಭೂಮಿಯ ಮೇಲೆ ಈ ಏದೆನ್ ತೋಟದಲ್ಲಿ ಅವನನ್ನಿಟ್ಟದ್ದೇಕೆ? ಅವನು ಬುದ್ಧಿಶಕ್ತಿಯಲ್ಲಿ ಪೂರ್ಣ ಬೆಳೆದ ಪುರುಷನು, ದೈಹಿಕ ಸಾಮರ್ಥ್ಯಗಳಿದವ್ದನು, ಅವನಿಗೆ ಅದನ್ನು ತಿಳಿಯುವ ಅರ್ಹತೆ ಇತ್ತು. ಇಲ್ಲವಾದರೆ ಅವನು ತನ್ನ ಜೀವಿತದ ಉದ್ದಿಶ್ಯವನ್ನು ಪೂರೈಸುವದೂ ಮತ್ತು ಹೀಗೆ ದೈವಿಕ ಚಿತ್ತವನ್ನು ಮಾಡುವ ಮೂಲಕ ತನ್ನ ನಿರ್ಮಾಣಿಕನೂ ತಂದೆಯೂ ಆದಾತನನ್ನು ಮೆಚ್ಚಿಸುವದಾದರೂ ಹೇಗೆ? ಈ ಯೋಗ್ಯವಾದ ಪ್ರಶ್ನೆಗಳಿಗೆ ಉತ್ತರಗಳು ಕೆಳಗಿನ ಸಮಾಚಾರದಲ್ಲಿ ಕೊಡಲ್ಪಟ್ಟವು:
11 “ಯೆಹೋವ ದೇವರು ಆ ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು. ಇದಲ್ಲದೆ ಯೆಹೋವ ದೇವರು ಆ ಮನುಷ್ಯನಿಗೆ ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಚವಾಗಿ ತಿನ್ನಬಹುದು; ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ ಎಂದು ವಿಧಿಸಿದನು.”—ಆದಿಕಾಂಡ 2:15—17,
12. ಯಾವುದಕ್ಕಾಗಿ ಆದಾಮನು ತನ್ನ ನಿರ್ಮಾಣಿಕನಿಗೆ ಉಪಕಾರ ಹೇಳಿರಬೇಕು, ಮತ್ತು ಮನುಷ್ಯನು ಹೀಗೆ ದೇವರನ್ನು ಹೇಗೆ ಘನಪಡಿಸ ಸಾಧ್ಯವಿತ್ತು?
12 ಆ ಸುಂದರವಾದ ಏದೆನ್ ತೋಟದಲ್ಲಿ ಉಪಯುಕ್ತವಾಗಿ ಮಗ್ನನಿರುವಂತೆ ಏನನ್ನಾದರೂ ಮಾಡಲು ಕೊಟ್ಟದ್ದಕ್ಕಾಗಿ ಆದಾಮನು ತನ್ನ ನಿರ್ಮಾಣಿಕನಿಗೆ ಉಪಕಾರ ಹೇಳಿರಲೇ ಬೇಕು. ತನ್ನ ನಿರ್ಮಾಣಿಕನ ಚಿತ್ತವು ಅವನಿಗೀಗ ತಿಳಿಯಿತು ಮತ್ತು ಅವನು ಆತನಿಗಾಗಿ ಭೂಮಿಯಲ್ಲಿ ಏನಾದರೂ ಮಾಡ ಸಾಧ್ಯವಿತ್ತು, ಏದೆನ್ ತೋಟವನ್ನು ವ್ಯವಸಾಯ ಮಾಡುವ ಮತ್ತು ಅದನ್ನು ನೋಡಿಕೊಳ್ಳುವ ಒಂದು ಜವಾಬ್ದಾರಿಕೆಯು ಈಗ ಅವನ ಮೇಲಿತ್ತು, ಆದರೆ ಅದು ಒಂದು ಹಿತಕರವಾದ ಕೆಲಸವಾಗಲಿಕ್ಕಿತ್ತು. ಅದನ್ನು ಮಾಡುವ ಮೂಲಕ ಅವನು ಏದೆನ್ ತೋಟವನ್ನು ತನ್ನ ನಿರ್ಮಾಣಿಕನಾದ ಯೆಹೋವ ದೇವರಿಗೆ ಮಹಿಮೆ ಮತ್ತು ಸ್ತುತಿಯನ್ನು ತರುವಂತಹ ರೀತಿಯಲ್ಲಿ ತೋರುವಂತೆ ಮಾಡಸಾಧ್ಯವಿತ್ತು. ಕೆಲಸ ಮಾಡಿ ಹಸಿವಾದಾಗಲೆಲ್ಲಾ ಆದಾಮನು ತೋಟದ ಮರಗಳಿಂದ ಯಥೇಛವ್ಚಾಗಿ ತಿನ್ನಬಹುದಿತ್ತು. ಈ ರೀತಿಯಲ್ಲಿ ಅವನು ತನ್ನ ಶಕ್ತಿಯನ್ನು ನವೀಕರಿಸಿಕೊಂಡು ತನ್ನ ಸಂತೋಷದ ಜೀವಿತವನ್ನು ನಿರಂತರವಾಗಿ, ಅನಂತಕಾಲದ ತನಕ ಜೀವಿಸಬಹುದಿತ್ತು.—ಪ್ರಸಂಗಿ 3:10-13.
ನಿತ್ಯಜೀವದ ಪ್ರತೀಕ್ಷೆಯು
13. ಮೊದಲನೆ ಮನುಷ್ಯನಿಗೆ ಯಾವ ಪ್ರತೀಕ್ಷೆಯಿತ್ತು ಮತ್ತು ಅದೇಕೆ?
13 ಅನಂತಕಾಲದ ತನಕವೂ? ಆ ಪರಿಪೂರ್ಣ ಮನುಷ್ಯನಿಗೆ ಬಹುಮಟ್ಟಿಗೆ ಇದು ನಂಬಲಾಗದ ವಿಚಾರವಾಗಿದ್ದಿರಬೇಕು! ಆದರೆ ಯಾಕಾಗಬಾರದು? ಅತಿ ಕುಶಲತೆಯಿಂದ ರಚಿಸಿದ ಈ ಏದೆನ್ ತೋಟವನ್ನು ನಾಶಮಾಡುವ ಯಾವ ವಿಚಾರವಾಗಲಿ ಉದ್ದೇಶವಾಗಲಿ ಅವನ ನಿರ್ಮಾಣಿಕನಿಗಿರಲಿಲ್ಲ. ಅದು ಅಷ್ಟು ಒಳ್ಳೇದಾಗಿಯೂ ಆತನ ಕಲಾಕೌಶಲ್ಯದ ನಿರ್ಮಿತಿಯ ಸೂಚಕವೂ ಆಗಿರುವಾಗ ಆತನು ತನ್ನ ಸ್ವಂತ ಕೃತಿಯನ್ನು ಯಾಕೆ ನಾಶಗೊಳಿಸಬೇಕು? ನ್ಯಾಯಸಮ್ಮತವಾಗಿಯೇ ಅವನು ಹಾಗೆ ಮಾಡಲು ಉದ್ದೇಶಿಸಲಾರನು. (ಯೆಶಾಯ 45:18) ಮತ್ತು ಈ ಅಸದೃಶ ತೋಟವು ವ್ಯವಸಾಯಕ್ಕಾಗಿ ಇಟ್ಟಿರಲಾಗಿ ಪರಿಪೂರ್ಣ ಮನುಷ್ಯನಾದ ಆದಾಮನಂತಹ ವ್ಯವಸಾಯಗಾರನ ಮತ್ತು ಆರೈಕೆಗಾರನ ಅಗತ್ಯವು ಅಲ್ಲಿತ್ತು. ಮತ್ತು ಆ ಆರೈಕೆಗಾರನು “ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ” ನಿಶೇಧಿತ ಹಣ್ಣನ್ನು ಎಂದೂ ತಿನ್ನದಿದ್ದಲ್ಲಿ ಅವನು ಎಂದೂ ಸಾಯಲಾರನು. ಆ ಪರಿಪೂರ್ಣ ಮನುಷ್ಯನು ಸದಾಕಾಲ ಜೀವಿಸ ಸಾಧ್ಯವಿತ್ತು!
14. ಆದಾಮನಿಗೆ ಪ್ರಮೋದವನದಲ್ಲಿ ನಿತ್ಯಜೀವದ ಸಾಧ್ಯತೆ ಇತ್ತು ಹೇಗೆ?
14 ಪ್ರಮೋದವನವಾದ ಏದೆನ್ ತೋಟದಲ್ಲಿ ನಿತ್ಯಜೀವವು ಆದಾಮನ ಮುಂದೆ ಇಡಲ್ಪಟ್ಟಿತ್ತು! ಅವನು ತನ್ನ ನಿರ್ಮಾಣಿಕನಿಗೆ ಪರಿಪೂರ್ಣ ವಿಧೇಯತೆಯಿಂದ ಉಳಿದರೆ, ಮಾನವ ನಿರ್ಮಾಣಿಕನು ನಿಶೇಧಿಸಿದ ಹಣ್ಣನ್ನು ಎಂದೂ ತಿನ್ನದಿದ್ದರೆ, ಅವನದನ್ನು ನಿರಂತರಕ್ಕೂ ಆನಂದಿಸಬಹುದಿತ್ತು. ಪರಿಪೂರ್ಣ ಮನುಷ್ಯನು ವಿಧೇಯನಾಗಿ ಉಳಿಯುವಂತೆ ಮತ್ತು ಸದಾಕಾಲ ಜೀವಿಸುತ್ತಾ ಇರುವಂತೆ ದೇವರು ಅಪೇಕ್ಷಿಸಿದ್ದನು. “ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಸುವ ಮರದ” ಹಣ್ಣಿನ ನಿಶೇಧವು ಮರಣಕರವಾಗಿರಲಿಲ್ಲ. ಅದು ಕೇವಲ ಮನುಷ್ಯನು ತನ್ನ ತಂದೆಗೆ ಪರಿಪೂರ್ಣ ವಿಧೇಯನಾಗುವ ಒಂದು ಪರೀಕೆಯ್ಷಾಗಿತ್ತು. ತನ್ನ ನಿರ್ಮಾಣಿಕನಾದ ದೇವರಿಗೆ ಮನುಷ್ಯನು ತನ್ನ ಪ್ರೀತಿಯನ್ನು ರುಜುಪಡಿಸುವ ಸಂದರ್ಭವನ್ನು ಅದು ಕೊಟ್ಟಿತ್ತು.
15. ತನ್ನ ನಿರ್ಮಾಣಿಕನಿಂದ ಒಳ್ಳೇದನ್ನು ಹೊಂದಿದ ಆದಾಮನಿಗೆ ಒಂದು ಭವ್ಯಭವಿಷ್ಯತ್ತನ್ನು ಮುನ್ನೋಡ ಸಾಧ್ಯವಿತ್ತೇಕೆ?
15 ತಾನು ಬರೇ ಒಂದು ಅನುದೇಶ್ದಿತ ದುರ್ಘಟನೆಯಲ್ಲ, ಬದಲಾಗಿ ತನಗೊಬ್ಬ ಸ್ವರ್ಗೀಯ ಪಿತನಿದ್ದಾನೆ, ತನ್ನ ಜೀವಿತೋದ್ದೇಶದ ತಿಳುವಳಿಕೆಯನ್ನು ಪ್ರಮೋದವನದಲ್ಲಿ ನಿತ್ಯಜೀವದ ನೋಟದೊಂದಿಗೆ ಅವನು ಕೊಟ್ಟಿದ್ದಾನೆ ಎಂಬ ಹೃದಯ ಸಂತೃಪ್ತಿಯೊಂದಿಗೆ ಆ ಪರಿಪೂರ್ಣ ಮನುಷ್ಯನು ಭವ್ಯ ಭವಿಷ್ಯವನ್ನು ಮುನ್ನೋಡಿದನು. ತಿನ್ನಲು ಹಿತಕರವಾದ ಮರಗಳ ಹಣ್ಣನ್ನು ಅವನು ತಿಂದನು ಮತ್ತು “ಒಳ್ಳೇದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ” ದಿಂದ ದೂರವಿದ್ದನು. ಒಳ್ಳೇದರ ವಿಷಯವಾಗಿ ಅವನು ತನ್ನ ನಿರ್ಮಾಣಿಕನಿಂದಲೇ ತಿಳಿಯ ಬಯಸಿದನು. ಏದೆನ್ ತೋಟದ ವ್ಯವಸಾಯವು ಒಂದು ಒಳ್ಳೇ ಕೆಲಸವಾಗಿತ್ತು, ದ್ವಂಸಕಾರಕವಲ್ಲ, ಮತ್ತು ಆ ಪರಿಪೂರ್ಣ ಮನುಷ್ಯನು ಕೆಲಸ ಮಾಡಿದನು.
ವಿಷಯಗಳನ್ನು ವಿವರಿಸುವ ಆಗ್ರಹವಿರಲಿಲ್ಲ
16-18. ನಿಗೂಢವೆಂದನ್ನುವ ಯಾವ ಸಂಗತಿಗಳನ್ನು ಆದಾಮನು ಶೋಧಿಸುವ ಹಂಗಿನಲ್ಲಿರಲಿಲ್ಲ ಮತ್ತು ಏಕೆ?
16 ದಿನದ ಮಹಾ ಜ್ಯೋತಿಯು ಕಂತಿದಾಗ ಹೊತ್ತು ಇಳಿಯುತ್ತಾ ಬಂತು, ಅವನಿದನ್ನು ಗಗನದಲ್ಲಿ ಅದರ ಚಲನೆಯಿಂದ ತಿಳಿಯಶಕ್ತನಾದನು. ಕತ್ತಲು ಕವಿಯಿತು, ರಾತ್ರಿಯು ಬಂತು, ಮತ್ತು ಅವನಿಗೆ ಚಂದ್ರನು ಕಾಣತೊಡಗಿದನು. ಅದು ಅವನನ್ನು ಭಯಗೊಳಿಸಲಿಲ್ಲ, ರಾತ್ರಿಯಲ್ಲಿ ಬೆಳಕು ಕೊಡುವ ಚಿಕ್ಕ ಜ್ಯೋತಿಯು ಅದಾಗಿತ್ತು. (ಆದಿಕಾಂಡ 1:14-18) ಮಿಣುಕುಹುಳಗಳು ತೋಟದಲ್ಲೆಲ್ಲಾ ಹಾರಾಡುತ್ತಾ ತಮ್ಮ ತಣ್ಣನೆಯ ಬೆಳಕನ್ನು ಚಿಕ್ಕ ದೀಪಗಳಂತೆ ಮಿಣುಕಿಸುತ್ತಾ ಅಲ್ಲಿದ್ದಿರಬಹುದು.
17 ರಾತ್ರಿಯು ಬಂದಾಗ ಮತ್ತು ಅವನ ಸುತ್ತಲೂ ಕತ್ತಲು ಕವಿದಾಗ, ತನ್ನ ಸುತ್ತಲಿದ್ದ ಪಶುಗಳಂತೆ ಅವನೂ ಮಲಗುವ ಅಗತ್ಯವನ್ನು ಕಂಡನು, ನಿದ್ದೆಯಿಂದ ಎಚ್ಚತ್ತಾಗ ಅವನಿಗೆ ಹಸಿವಾಯಿತು, ಒಳ್ಳೇ ಹಸಿವಿನಿಂದ ಅವನು ಅನುಮತಿಯಿದ್ದ ಮರಗಳ ಹಣ್ಣನ್ನು ತಿಂದನು, ಪ್ರಾಯಶ: ಬೆಳಿಗ್ಗಿನ ಉಪಹಾರವೆಂದು ನಾವದನ್ನು ಕರೆಯಬಹುದು.
18 ರಾತ್ರಿಯ ನಿದ್ದೆಯಿಂದ ಹೊಸಬಲವನ್ನೂ ಚೈತನ್ಯವನ್ನೂ ಪಡೆದವನಾಗಿ ಅವನು ದಿನದ ಕೆಲಸದ ಕಡೆಗೆ ಈಗ ತೆರಳಿದನು. ತನ್ನ ಸುತ್ತಲಿದ್ದ ಹಸುರು ಸಸ್ಯಗಳನ್ನು ಅವನು ನೋಡಿದಾಗ, ಸಾವಿರಾರು ವರ್ಷಗಳ ಅನಂತರ ಜನರು ಯಾವುದನ್ನು ಫೋಟೋಸಿಂಥಿಸಿಸ್ ಎಂದು ಕರೆಯಲಿದ್ದರೋ ಅದರ ರಹಸ್ಯವನ್ನು ಹುಡುಕಿ ತೆಗೆಯುವ ಅನಿಸಿಕೆಯು ಅವನಿಗಾಗಲಿಲ್ಲ. ಸಸ್ಯಗಳ ಹಸುರು ಬಣ್ಣವು ಯಾ ಕ್ಲೂರೋಫಿಲ್ ಸೂರ್ಯ ಪ್ರಕಾಶದಿಂದ ಶಕ್ತಿಯನ್ನು ಹೀರಿಕೊಂಡು ಮನುಷ್ಯನಿಗೂ ಪಶುಗಳಿಗೂ ಆಹಾರ ವಸ್ತುಗಳನ್ನು ತಯಾರುಸುವ, ಮತ್ತು ಅದೇ ಸಮಯ ಮನುಷ್ಯ ಮತ್ತು ಪಶುಗಳು ಉಸಿರಾಡಿ ಬಿಡುವ ಅಂಗಾರಾಮ್ಲವನ್ನು ಒಳಕ್ಕೆ ತಕ್ಕೂಂಡು ಅವರಿಗೆ ಉಸಿರಾಡಲು ಆಮ್ಲಜನಕವನ್ನು ಬಿಟ್ಟುಕೂಡುವ ಜಟಿಲ ಪ್ರಕ್ರಿಯೆಯು ಇದಾಗಿದೆ. ಮನುಷ್ಯನು ಒಂದುವೇಳೆ ಇದನ್ನು ನಿಗೂಢವೆಂದು ಕರೆಯಬಹುದು. ಆದರೆ ಅದನ್ನು ಶೋಧಿಸುವ ಅಗತ್ಯವು ಆದಾಮನಿಗಿರಲಿಲ್ಲ. ಅದು ಮಾನವ ನಿರ್ಮಾಣಿಕನ ಅದ್ಬುತ. ಆತನಿಗೆ ಅದು ತಿಳಿದದೆ ಮತ್ತು ಆತನದನ್ನು ಭೂಜೀವಿಗಳ ಪ್ರಯೋಜನಕ್ಕಾಗಿ ಕಾರ್ಯನಡಿಸುವಂತೆ ಮಾಡಿದ್ದಾನೆ. ಆದಕಾರಣ, ನಿರ್ಮಾಣಿಕನಾದ ದೇವರು ಅವುಗಳನ್ನು ಬೆಳೆಯುವಂತೆ ಮಾಡಿದ್ದಾನೆ ಮತ್ತು ಎದೆನ್ ತೋಟದಲ್ಲಿ ಬೆಳೆಯುವ ಸಸ್ಯಜೀವಜಾತಿಗಳನ್ನು ಪರಾಮರಿಕೆ ಮಾಡುವದೇ ಮನುಷ್ಯನ ದೇವದತ್ತ ಕೆಲಸ ಎಂದು ತಿಳುಕೂಳ್ಳುವದು ಆ ಪರಿಪೂರ್ಣ ಮನುಷ್ಯನ ಬುದ್ಧಿಶಕ್ತಿಗೆ ಸಾಕಿತ್ತು.—ಆದಿಕಾಂಡ 1:12 ನೋಡಿ.
ಒಂಟಿಗನಾದರೂ ಸಂತಸದಲ್ಲಿ ಕೊರತೆಯಿಲ್ಲ
19. ತನ್ನಂತಹ ಬೇರೆಯಾರೂ ಭೂಮಿಯಲ್ಲಿರದಿದ್ದು ತಾನೊಬ್ಬನೇ ಇದ್ದೇನೆ ಎಂದು ಮನಗಂಡಾಗ್ಯೂ ಆದಾಮನು ಏನು ಮಾಡಲಿಲ್ಲ?
19 ತನ್ನ ಸ್ವರ್ಗೀಯ ತಂದೆಯ ಹಸ್ತದಿಂದ ಮನುಷ್ಯನ ಶಿಕ್ಷಣವು ಮುಗಿದಿರಲಿಲ್ಲ. ಸಹಾಯಕ್ಕಾಗಿ ಅಥವಾ ತನ್ನೊಂದಿಗೆ ಜತೆಗೂಡಲು ಯಾರೂ ಇಲ್ಲದಾಗ್ಯೂ ಮನುಷ್ಯನು ಏದೇನ್ ತೋಟದ ಆರೈಕೆ ಮಾಡಿದನು. ತನ್ನ ಜಾತಿಯಾದ ಮಾನವಜಾತಿಯ ವಿಷಯದಲ್ಲಾದರೋ ಅವನು ಒಂಟಿಗನು. ತನ್ನ ಭೂಸಂಗಾತಿಯಾಗಿರುವಂತೆ ತನ್ನಂತಹ ಬೇರೆ ಯಾರನ್ನಾದರೂ ಹುಡುಕಲು ಅವನು ಹೋಗಲಿಲ್ಲ. ತನಗೊಬ್ಬ ತಮ್ಮನನ್ನು ಯಾ ತಂಗಿಯನ್ನು ಕೊಡುವಂತೆ ತನ್ನ ಸ್ವರ್ಗೀಯ ತಂದೆಯಾದ ದೇವರನ್ನು ಅವನು ಕೇಳಲಿಲ್ಲ. ಮನುಷ್ಯನಾದ ಅವನ ಒಂಟಿಗತನವು ಅವನನ್ನು ಕೊನೆಗೆ ಉನ್ಮತ್ತನಾಗಿ ಮಾಡಲಿಲ್ಲ ಮತ್ತು ಜೀವಿಸುವ ಮತ್ತು ಶ್ರಮಿಸುವದರಿಂದ ಅವನ ಸಂತಸವನ್ನು ತೆಗೆಯಲಿಲ್ಲ. ಅವನಿಗೆ ದೇವರ ಸಂಗಡಿಗತನವಿತ್ತು.—ಕೀರ್ತನೆ 27:4ನ್ನು ಹೋಲಿಸಿ.
20. (ಎ) ಆದಾಮನ ಸಂತಸ ಮತ್ತು ಸಂತೋಷದ ಶಿಕರವು ಎನಾಗಿತ್ತು? (ಬಿ) ಈ ರೀತಿಯ ಜೀವನಕ್ರಮವನ್ನು ನಡಿಸುವದು ಆದಾಮನಿಗೆ ಕಷ್ಟಕರವಾಗಿರಲ್ಲಿಲ್ಲವೇಕೆ? (ಸಿ) ಮುಂದಿನ ಲೇಖನಗಳೇನನ್ನು ಚರ್ಚಿಸುತ್ತವೆ?
20 ತಾನೂ ತನ್ನ ಕೆಲಸವೂ ತನ್ನ ಸ್ವರ್ಗೀಯ ತಂದೆಯ ಪರೀಕ್ಷಣೆಯ ಕೆಳಗಿತ್ತೆಂದು ಆದಾಮನಿಗೆ ತಿಳಿದಿತ್ತು. ಮನುಷ್ಯನ ಸುತ್ತಲೂ ಇದ್ದ ಸುಂದರವಾದ ಎಲ್ಲಾ ಸೃಷ್ಟಿಕ್ರಿಯೆಗಳಿಂದ ಯಾರ ಆಶ್ಚರ್ಯ ಮಹತ್ತುಗಳು ವ್ಯಕ್ತವಾದವೋ ಆ ತನ್ನ ದೇವರೂ ನಿರ್ಮಾಣಿಕನೂ ಆದಾತನನ್ನು ಮೆಚ್ಚಿಸುವದೇ ಅವನ ಹರ್ಷದ ಶಿಕರವಾಗಿತ್ತು. (ಪ್ರಕಟಣೆ 15:3ನ್ನು ಹೋಲಿಸಿ.) ತನ್ನ ದೇವರೊಂದಿಗೆ ಸಂಭಾಷಿಸ ಶಕ್ತನಾಗಿದ್ದ ಆ ಪರಿಪೂರ್ಣ ಸಮತೂಕದ ಮನುಷ್ಯನಿಗೆ ಆ ತರದ ಜೀವಿತಕ್ರಮವನ್ನು ಮುಂದರಿಸುವದು ಯಾವ ಪ್ರಯಾಸವೂ ಬೇಸರವೂ ಇಲ್ಲದ ಕೆಲ್ಸವಾಗಿತ್ತು. ಮತ್ತು ದೇವರು ಆದಾಮನ ಮುಂದೆ ಆಸಕ್ತಿಯ ಕೆಲ್ಸವನ್ನು, ಆಕರ್ಶಕ ವೃತ್ತಿಯನ್ನು, ಅವನಿಗೆ ಮಹಾ ಸಂತೃಪ್ತಿಯನ್ನೂ ಸಂತಸವನ್ನೂ ತರುವ ಕಾರ್ಯವನ್ನಿಟ್ಟನು. ತನ್ನ ಪ್ರಿಯ ನಿರ್ಮಾಣಿಕನ ಹಸ್ತದಿಂದ ಆದಾಮನು ಆನಂದಿಸಿದ ಪಾರದೈಸಿಕ ಆಶೀರ್ವಾದಗಳು ಮತ್ತು ಪ್ರತೀಕ್ಷೆಗಳ ಕುರಿತು ಹೆಚ್ಚನ್ನು ಮುಂದಿನ ಲೇಖನವು ತಿಳಿಸುವದು. (w89 8/1)
[ಅಧ್ಯಯನ ಪ್ರಶ್ನೆಗಳು]
a ಪವಿತ್ರ ಬೈಬಲಿನಲ್ಲಿ ಸೃಷ್ಟಿ ವೃತ್ತಾಂತದ ಮೂಲಭಾಷೆಯಲ್ಲಿ ಈ ಪದವು ಇದೆ.—ಆದಿಕಾಂಡ 1:26, ನ್ಯೂ ವಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ.
b ನಮ್ಮ ಸಾಮಾನ್ಯ ಶಕಕ್ಕೆ ಮುಂಚಿನ 16ನೇ ಶತಮಾನದಲ್ಲಿ ಆದಿಕಾಂಡದ ಪುಸ್ತಕದಲ್ಲಿ ಸಮಾಚಾರವನ್ನು ದಾಖಲೆಮಾಡಿದ ಪ್ರವಾದಿ ಮೋಶೆಯು, ತನ್ನ ದಿನದಲ್ಲಿನ ಜ್ಞಾನಕ್ಕನುಸಾರ, ಈ ಏದೇನಿನಲ್ಲಿ ಹರಿಯುತ್ತಿದ್ದ ನದಿಯ ಕುರಿತು ಕೆಳಗಣ ಸಮಾಚಾರವನ್ನು ಕೂಡಿಸಿದ್ದಾನೆ:
“ಮೊದಲನೇದರ ಹೆಸರು ಪೀಶೋನ್; ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲಾ ಸುತ್ತುವದು. ಆ ದೇಶದ ಬಂಗಾರವು ಶ್ರೇಷ್ಟವಾದದ್ದು; ಅಲ್ಲಿ ಒದೋಲಖ ಧೂಪವೂ ಗೋಮೇಧಿಕ ರತ್ನವೂ ಸಿಕ್ಕುತ್ತವೆ. ಎರಡನೇ ನದಿಯ ಹೆಸರು ಗೀಹೋನ್; ಅದು ಕೂಶ್ ದೇಶವನನ್ನೆಲ್ಲಾ ಸುತ್ತುವದು. ಮೂರನೆಯ ನದಿಯ ಹೆಸರು ಹಿದ್ದೆಕೆಲ್; ಅದು ಅಶ್ಯೂರ್ ದೇಶದ ಮುಂದೆ ಹರಿಯುವದು. ನಾಲ್ಕನೆಯದು ಯೂಪ್ರಟೀಸ್ ನದಿ.”—ಆದಿಕಾಂಡ 2.11-14.
ನಿಮ್ಮ ಉತ್ತರವೇನು?
◻ ತನ್ನ ಅಸ್ತಿತ್ವದ ಬಗ್ಗೆ ಆದಾಮನು ಬಹುಕಾಲ ಮರ್ಮಿತನಿರಲ್ಲಿಲವೇಕೆ?
◻ ದೇವರು ಆದಾಮನಿಗೆ ಯಾವ ಕೆಲಸವನ್ನು ಕೊಟ್ಟನು? ಮತ್ತು ಅವನು ಹೇಗೆ ಪ್ರತಿಕ್ರಿಯಿಸಿರಬೇಕು?
◻ ಯಾವ ಪ್ರತೀಕ್ಷೆಯನ್ನು ಆ ಪರಿಪೂರ್ಣ ಮನುಷ್ಯನು ಆನಂದಿಸಿದನು ಮತ್ತು ಏಕೆ?
◻ ರಹಸ್ಯಗಳನ್ನು ಶೋಧಿಸುವದನ್ನು ಆದಾಮನು ತನ್ನ ತನ್ನ ಜೀವಿತಕಾರ್ಯವನ್ನಾಗಿ ಮಾಡಲ್ಲಿಲವೇಕೆ?
◻ ಆದಾಮನು ಒಂಟಿಗ ಮನುಷ್ಯನಾಗಿದ್ದದ್ದು ಅವನ ಜೀವಿತದಿಂದ ಸಂತಸವನ್ನು ಅಪಹರಿಸಲಿಲ್ಲವೇಕೆ?
[ಪುಟ 14 ರಲ್ಲಿರುವ ಚಿತ್ರ ಕೃಪೆ]
NASA photo