ಮಾನವ ಅವಿಧೇಯತೆಯಾದಾಗ್ಯೂ ಪ್ರಮೋದವನ ಪ್ರತೇಕ್ಷಗಳ ಸ್ಥಿರತೆ
1. ಕಾಲ ದಾಟಿದಷ್ಟಕ್ಕೆ ಮೊದಲ ಪುರುಷ ಮತ್ತು ಸ್ತ್ರೀ ತಮ್ಮನ್ನು ಎಲ್ಲಿ ಕಂಡುಕೊಂಡರು ಮತ್ತು ಯಾವ ಪರಿಸರದಲ್ಲಿ?
ಕಾಲ ದಾಟುತ್ತಾ ಹೋಯಿತು. ಆ ಪುರುಷ ಮತ್ತು ಸ್ತ್ರೀ ಈಗ ಮುಗ್ದ ನಗ್ನತೆಯಲ್ಲಿರಲಿಲ್ಲ. ಅವರು ಉಡುಪು ತೊಟ್ಟಿದ್ದರು—ಚರ್ಮದಿಂದ ಮಾಡಿದ್ದ ಉದ್ದ ಅಂಗಿಗಳನ್ನು ಹಾಕಿದ್ದರು. ಆ ಪರಿಪೂರ್ಣ ಏದೆನ್ ತೋಟದ ಸ್ವಲ್ಪ ಹೊರಗೆ ನಿಂತಿದ್ದ ಅವರು ತೋಟಕ್ಕೆ ಬೆನ್ನು ಹಾಕಿದ್ದರು. ಮುಂದಿರುವ ದೃಶ್ಯವನ್ನು ಈಗ ನೋಡುತ್ತಾರೆ. ಸಾಗುವಳಿಯಾಗದ ಭೂಮಿ ಮಾತ್ರ ಅವರಿಗೆ ಕಾಣಿಸುತ್ತದೆ. ಅದರ ಮೇಲೆ ದೇವರ ಆಶೀರ್ವಾದವಿರಲಿಲ್ಲವೆಂಬದು ತೀರಾ ವ್ಯಕ್ತ. ಮುಳ್ಳುಗಳೂ ಕಳೆಗಳೂ ಅವರ ಮುಂದೆ ಕಂಡುಬಂದವು. ವಶಮಾಡಿಕೊಳ್ಳುವಂತೆ ಅವರಿಗೆ ನೇಮಿತವಾದ ಭೂಮಿ ಇದೇ ಅಲ್ಲವೇ? ಹೌದು, ಆದರೆ ಏದೆನ್ ತೋಟವನ್ನು ಅಂತಹ ಸಾಗುವಳಿಯಾಗದ ಭೂಮಿಯ ಮೇಲೆಲ್ಲಾ ಹಬ್ಬಿಸುವದಕ್ಕಾಗಿ ಆ ಮೊದಲ ಪುರುಷ ಮತ್ತು ಸ್ತ್ರೀ ಈಗ ಅದರೊಳಗಿಲ್ಲ.
2. ಪ್ರಮೋದವನವನ್ನು ಪುನ: ಪ್ರವೇಶಿಸಲು ಆ ಪುರುಷ ಮತ್ತು ಸ್ತ್ರೀ ಏಕೆ ಪ್ರಯತ್ನಿಸಲಿಲ್ಲ?
2. ಅಂತಹ ಪ್ರತಿಹೋಲಿಕೆಗಳಿರುವಲ್ಲಿ ಅವರು ಹಿಂತಿರುಗಿ ಪ್ರಮೋದವನವನ್ನೇಕೆ ಪುನ: ಪ್ರವೇಶಿಸಬಾರದು? ಹಾಗೆ ಹೇಳುವದು ಸುಲಭ, ಆದರೆ ಅವರ ಹಿಂದೆ ಆ ತೋಟದ ದ್ವಾರದಲ್ಲಿ ಯಾರಿದ್ದಾರೆ ನೋಡಿರಿ. ಏದೆನ್ ತೋಟದೊಳಗೆ ಅವರು ಹಿಂದೆಂದೂ ನೋಡಿರದ ಕೆರೂಬ್ಯರು ಅಲ್ಲಿದ್ದಾರೆ. ಧಗಧಗನೇ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯೂ ಇದೆ. ಆವರನ್ನು ದಾಟಿ ಆ ಪುರುಷ ಮತ್ತು ಸ್ತ್ರೀ ಸಜೀವವಾಗಿ ಪಾರಾಗುವಂತಿಲ್ಲ!—ಆದಿಕಾಂಡ 3:24.
3. ಆ ಮೊದಲ ದಂಪತಿಗಳ ಪರಿಸ್ಥಿತಿಯನ್ನು ಅಷ್ಟು ಉಗ್ರವಾಗಿ ಬದಲಾಯಿಸಲು ಸಂಭವಿಸಿದ್ದೇನು?
3. ಸಂಭವಿಸಿದಾದ್ದರೂ ಎನು? ವಿಜ್ಞಾನವನ್ನು ಸಹಸ್ರ ವರ್ಷಗಳಷ್ಟು ಕಾಲ ದಂಗುಗೊಳಿಸುವಷ್ಟುಜಟಿಲವಾದ ರಹಸ್ಯವೇನೂ ಅದಲ್ಲ, ಸುಲಭವಾಗಿಯೇ ಅದು ವಿವರಿಸಲ್ಪಟ್ಟಿದೆ. ತಮ್ಮ ವಿವಾಹದ ದಿನ ಅವರ ಮುಂದಿಡಲ್ಪಟ್ಟಿದ್ದ ದೇವರ ಉದ್ದೇಶದ ಆಶ್ಚರ್ಯಕರ ಪ್ರತೀಕ್ಷೆಗಳನ್ನು ಆ ಮೊದಲ ಮನುಷ್ಯ ಮತ್ತು ಸ್ತ್ರೀ ಅನುಭವಿಸಲಿದ್ದರು. ಆದರೆ ಅದು ಅತ್ಯಂತ ಚಿಕ್ಕ ವಿಷಯಗಳಲ್ಲೂ ತಮ್ಮ ಸ್ವರ್ಗೀಯ ತಂದೆಗೆ ವಿಧೇಯರಾಗುವ ಶರ್ತದ ಮೇಲೆ. ಅವರ ಪರಿಪೂರ್ಣ ವಿಧೇಯತೆಯು ಒಂದು ಎಕೈಕ ಭಕ್ಷನಿರೊಧದಿಂದ ಪರೀಕ್ಷಿಸಲ್ಪಡಲಿತ್ತು: “ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ” ಹಣ್ಣನ್ನು ಅವರು ತಿನ್ನಲೇ ಬಾರದಿತ್ತು. (ಆದಿಕಾಂಡ 2:16, 17) ದೇವರ ಆಜ್ನೆಗೆ ವಿರುದ್ಧವಾಗಿ ಅವರು ಹಾಗೆ ಮಾಡಿದಾದ್ದರೆ ನಿಶ್ಚಯವಾಗಿಯೂ ಸಾಯಲಿದ್ದರು. ದೇವರ ಪ್ರವಾದಿ ಆದಾಮನು ಅದನ್ನೇ ಕಿರಿಯ ಮಾನವ ಜೀವಿಯಾದ ತನ್ನ ಪತ್ನಿಗೆ ಹೇಳಿದ್ದನು. ಆದರೆ ಆ ನಕಾಶ್ ಅಥವಾ ಸರ್ಪವು “ಒಳ್ಳೇದರ ಮತ್ತು ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ” ನಿಶೇದ್ಯ ಹಣ್ಣಿನ ಕುರಿತು ದೇವರು ಆದಾಮನಿಗೆ ಕೊಟ್ಟ ಎಚ್ಚರಿಕೆಯ ಸತ್ಯತೆಯನ್ನು ಅಲ್ಲಗಳೆದದ್ದು ಆಶ್ಚರ್ಯ. ದೇವರ ನಿಯಮವನ್ನು ಮುರಿದು ಆ ನಿಶೇದ್ಯ ಹಣ್ಣನ್ನು ತಿನ್ನುವ ಮೂಲಕ ತಾನು ದೇವರಂತೆ ಆಗುತ್ತೇನೆಂದೂ ಮತ್ತು ಒಳ್ಳೇದನ್ನು ಹಾಗೂ ಕೆಟ್ಟದ್ದನ್ನು ತಾನಾಗಿಯೇ ದೇವರಿಂದ ಸ್ವತಂತ್ರಳಾಗಿ ನಿರ್ಣಯಿಸಶಕ್ತಳೆಂದೂ ನಂಬುವಂತೆ ಸರ್ಪವು ಆ ಸ್ತ್ರೀಯನ್ನು ಮೋಸಗೊಳಿಸಿತು.—ಆದಿಕಾಂಡ 3:1-5.
ಪೌರಾಣಿಕ ವೃತ್ತಾಂತವಲ್ಲ
4, 5. ಸರ್ಪನು ಮೊದಲ ಸ್ತ್ರೀಯನ್ನು ವಂಚಿಸಿದ ವೃತ್ತಾಂತವು ಒಂದು ಸುಳ್ಳು ಸಂಗತಿಯಲ್ಲವೆಂದು ಅಪೋಸ್ತಲ ಪೌಲನು ತೋರಿಸುವದು ಹೇಗೆ?
4. ನಂಬಲಸಾಧ್ಯವೋ? ನಿಜಸಂಗತಿಗಳ ಮೇಲೆ ಆಧರಿಸಿರದ ದಂತ ಕಥೆಯಾಗಿ ಅದು ಕೇಳಿಸುತ್ತದೋ ಮತ್ತು ಹಾಗಿರಲಾಗಿ ಇಂದಿನ ಪ್ರಾಜ್ನ ಪ್ರೌಢ ಮನಕ್ಕೆ ಅಸ್ವೀಕಾರವೋ? ಇಲ್ಲ, ಇನ್ನೂ ವಿಸ್ತಾರವಾದ ಒದುಗರುಳ್ಳ ಒರ್ವ ಲೇಖಕನಿಗೆ, ನಂಬಲರ್ಹ ಬರಹಗಾರನಿಗೆ, ವಿಶಿಷ್ಟವಾಗಿ ಆಯ್ಕೆಯಾದ ಒಬ್ಬ ಅಪೋಸ್ತಲನಿಗೆ ಅದು ಹಾಗಿರಲಿಲ್ಲ, ತಾನೇನು ಬರೆದನೋ ಅದರ ಸತ್ಯಪರತೆಯನ್ನು ಅವನು ತಿಳಿದವನು. ಈ ಅಪೋಸ್ತಲ ಪೌಲನು ಲೌಕಿಕ ಜ್ಞಾನಿಗಳಿಂದ ತುಂಬಿದ್ದ ಶಹರವಾದ ಕೊರಿಂಥದ ಬಲಿತ ಕ್ರೈಸ್ತ ಸಭೆಗೆ ಬರೆದದ್ದು: “ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವೃತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.”—2 ಕೊರಿಂಥ 11:3
5. ಒಂದು ದಂತ ಯಾ ಕಟ್ಟುಕಥೆಗೆ ಪೌಲನೆಂದೂ ನಿರ್ದೇಶಿಸಿರಲಾರ. ವಿಧರ್ಮಿ ಗ್ರೀಕ್ ಪಂಥದ ದಂತ ಕಥೆಗಳ ಚಿರಪರಿಚಯವಿದ್ದ ಆ ಕೊರಿಂಥದವರಿಗೆ ಭೋದಿಸುವಾಗ ಅಂತಹದೊಂದು ಕಾಲ್ಪನಿಕ ವಿಷಯವನ್ನು ಅವನೆಂದೂ ಬಳಸಲಾರ. ತಾನು ಯಾವುದನ್ನು “ದೇವರವಾಕ್ಯ” ವೆಂದು ಘೋಷಿಸಿದನೋ ಆ ಪ್ರೇರಿತ ಹಿಬ್ರೂ ಶಾಸ್ತ್ರದಿಂದ ಉದ್ದರಿಸುತ್ತಾ, ಅಪೋಸ್ತಲ ಪೌಲನು ದೃಢವಾಗಿ ನಂಬಿದ್ದನು ಎನೆಂದರೆ “ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳು” ಎಂಬದಾಗಿ. (1 ಥೆಸಲೋನಿಕ 2.13) ಅದಲ್ಲದೆ, “ಸ್ವಸ್ಥಕರವಾದ ಬೋಧನಾ ಮಾತುಗಳನ್ನು” ಕಲಿಸುವ ಜವಾಬ್ದಾರಿಕೆಯನ್ನು ಹೊತ್ತ ಒಬ್ಬ ಕ್ರೈಸ್ತ ಮೇಲ್ವಿಚಾರಕನಿಗೆ ಬರೆಯುವಾಗ ಅಪೋಸ್ತಲ ಪೌಲನಂದದ್ದು: “ಇದಲ್ಲದೆ ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು.”—2 ತಿಮೋಥಿ 1:13; 1 ತಿಮೋಥಿ 2:13, 14.
6. (ಎ)ದೇವರ ವಿರುದ್ದ ಆದಾಮನು ಗೈದ ಪಾಪವು ಸ್ತ್ರೀಯದ್ದಕ್ಕಿಂತ ಬೇರೆಯಾಗಿದ್ದದ್ದು ಹೇಗೆ? (ಬಿ) ಸ್ತ್ರೀಯು ಆ ಸರ್ಪದ ಕುರಿತು ಒಂದು ಕಥೆಯನ್ನು ಹೆಣೆಯಲಿಲ್ಲವೆಂದು ನಮಗೆ ಖಾತ್ರಿ ಹೇಗೆ?
6. ಸ್ತ್ರೀಯು ಸರ್ಪದಿಂದ ವಂಚಿತಳಾದದ್ದು ಒಂದು ನಿಜಸಂಗತಿ, ಕಟ್ಟುಕಥೆಯಲ್ಲ. ಆ ನಿಶೇಧಿತ ಹಣ್ಣನ್ನು ತಿಂದ ಫಲಿತಾಂಶಗಳು ಹೇಗೆ ವಾಸ್ತವಿಕವೋ ಹಾಗೆ. ದೇವರ ವಿರುದ್ಧವಾಗಿ ಪಾಪಗೈದ ಆಕೆ ತನ್ನ ಗಂಡನೂ ಅದರಲ್ಲಿ ಭಾಗಿಯಾಗುವಂತೆ ಪ್ರೇರಿಸಿದಳು. ಆದರೆ ಅವನ ತಿನ್ನುವಿಕೆಯು ಅವನು ಪೂರಾ ವಂಚಿತನಾದರ್ದಿಂದಾಗಿ ಅಲ್ಲ. (ಆದಿಕಾಂಡ 3.6) ದಾಖಲೆಯು ವಿವರಿಸುತ್ತಾ ಅನ್ನುವದು: “ಆ ಮನುಷ್ಯನು—ನೀನು ನನ್ನ ಜೊತೆಯಲ್ಲಿರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು ಎಂದು ಹೇಳಿದನು”. ಆಗ ಯೆಹೋವನು ಸ್ತ್ರೀಗೆ “ಇದೇನು ನೀನು ಮಾಡಿದ್ದು” ಎಂದು ಕೇಳಲು “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಅಂದಳು. (ಆದಿಕಾಂಡ 3:12, 13) ಆ ನಾಕಾಶ್ ಅಥವಾ ಸರ್ಪದ ವಿಷಯವಾಗಿ ಸ್ತ್ರೀಯು ಒಂದು ಕಥೆಯನ್ನು ಹೆಣೆಯಲಿಲ್ಲ. ಮತ್ತು ಯೆಹೋವನು ಅವಳ ನಿರೂಪಣೆಯನ್ನು ಒಂದು ಕಟ್ಟುಕಥೆಯಾಗಿ ಯಾ ಮಿಥ್ಯೆಯಾಗಿ ತಕ್ಕೊಳ್ಳಲಿಲ್ಲ. ಆತನು ಸರ್ಪದೊಂದಿಗೆ ಸ್ತ್ರೀಯ ದೇವರೂ ನಿರ್ಮಾಣಿಕನೂ ಆದ ತನ್ನ ವಿರುದ್ದ ಪಾಪ ಮಾಡುವಂತೆ ವಂಚಿಸಿದ ಸಾಧನವಾಗಿ ವ್ಯವಹರಿಸಿದನು. ಒಂದು ಕೇವಲ ಪೌರಾಣಿಕ ಸರ್ಪದೊಂದಿಗೆ ವ್ಯವಹರಿಸುವದು ದೇವರ ಪ್ರತಿಷ್ಟೆಗೆ ಕುಂದಾಗಿರುವದು.
7. (ಎ)ಸರ್ಪದೊಂದಿಗೆ ದೇವರ ನ್ಯಾಯಬದ್ದ ವ್ಯವಹಾರವನ್ನು ಬೈಬಲ್ ವೃತ್ತಾಂತವು ವಿವರಿಸುವದು ಹೇಗೆ? (ಬಿ) ಮೊದಲ ಸ್ತ್ರೀಯನ್ನು ವಂಚಿಸಿದ ಆ ಸರ್ಪವು ನಮ್ಮನ್ನೂ ವಂಚಿಸ ಸಾಧ್ಯವಿದೆ ಹೇಗೆ? (ಪಾದಟಿಪ್ಪಣಿ ಹೇಳಿಕೆಗಳನ್ನು ಸೇರಿಸಿರಿ.)
7. ಏದೆನ್ ತೋಟದಲ್ಲಿ ಆ ಸರ್ಪನೊಂದಿಗೆ ದೇವರ ನ್ಯಾಯ ನಿರ್ಣಾಯಕ ವ್ಯವಹಾರವನ್ನು ವಿವರಿಸುತ್ತಾ ದಾಖಲೆಯು ಅನ್ನುವದು: “ಆಗ ಯೆಹೋವ ದೇವರು ಸರ್ಪಕ್ಕೆ-ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಮೃಗಗಳಲ್ಲಿಯೂ ಶಾಪಗ್ರಸ್ತನಾದಿ; ನೀನು ಹೊಟ್ಟೆಯಿಂದ ಹರಿದು ಜೀವಮಾನದ ದಿನಗಳೆಲ್ಲಾ ಮಣ್ಣೇ ತಿನ್ನುವಿ. ನಿನಗೂ ಈ ಸ್ತ್ರೀಗೂ ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:14, 15) ಯಾವುದೇ ಪ್ರಜ್ನ ನ್ಯಾಯಾಲಯವು ನಿಜಸಂಗತಿಗಳೊಂದಿಗೆ ವ್ಯವಹರಿಸಿ ಸತ್ಯ ಪುರಾವೆಯನ್ನು ಹುಡುಕುತ್ತದೇ ಹೊರತು ಕಟ್ಟುಕಥೆಗಳನ್ನಲ್ಲ. ಒಂದು ಕಾಲ್ಪನಿಕ ಸರ್ಪದ ಮೇಲೆ ತನ್ನ ನ್ಯಾಯಾಂಗ ಶಿಕ್ಷೆಯನ್ನು ವಿಧಿಸುವ ಮೂಲಕ ಯೆಹೋವ ದೇವರು ತನ್ನನ್ನು ಅವಿವೇಕಿಯಾಗಿ, ಮರುಳನಾಗಿ ಮಾಡಲಿಲ್ಲ ಬದಲಾಗಿ ವಾಸ್ತವವಾಗಿ ಅಸ್ತಿತ್ವದಲ್ಲಿದ್ದ ದೋಷಿ ಜೀವಿಯೊಂದಿಗೇ ವ್ಯವಹರಿಸಿದ್ದನು. ಒಂದುವೇಳೆ ಅದೇ ಸರ್ಪವು ತಾನೆಂದೂ ಅಸ್ತಿತ್ವದಲ್ಲಿರಲ್ಲಿಲ್ಲ, ತಾನೊಂದು ಬರೇ ಕಲ್ಪನೆ, ಭೂಮಿಯಲ್ಲಿ ಯಾವ ತಪ್ಪಿಗೂ ತಾನು ದೋಷಿಯಲ್ಲವೆಂದು ನಮ್ಮನ್ನು ವಂಚಿಸಿದಾದ್ದರೆ ಅದು ಹಾಸ್ಯಾಸ್ಪದವಲ್ಲ, ಶೋಚನೀಯವೇ ಸರಿ.a
8. ಸ್ತ್ರೀಯ ಮೇಲೆ ದೇವರು ಯಾವ ತೀರ್ಪನ್ನು ವಿಧಿಸಿದನು, ಮತ್ತು ಅವಳ ಹೆಣ್ಣುಮಕ್ಕಳುಹಾಗೂ ಮೊಮ್ಮಕ್ಕಳ ಮೇಲೆ ಯಾವ ಫಲಿತಾಂಶದೊಂದಿಗೆ?
8. ಸರ್ಪದೊಂದಿಗೆ ಒಳಗೂಡಿದ ಆ ಸ್ತ್ರೀಯ ಹೇಳಿಕೆಯನ್ನು ಸತ್ಯವಾಗಿ ಪರಿಗಣಿಸುತ್ತಾ ಆ ಮನುಷ್ಯನ ಪತ್ನಿಯ ಕುರಿತು ದಾಖಲೆಯು ಅನ್ನುವದು: “ಆ ಮೇಲೆ ಸ್ತ್ರೀಗೆ-ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ. ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು.” (ಆದಿಕಾಂಡ 3:16) “ಬಹು ಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯನ್ನು ತುಂಬಿಕೊಳ್ಳಿರಿ” ಎಂಬದಾಗಿ ದೇವರು ಅವಳ ಮದುವೆಯ ಸಮಯ ಕೊಟ್ಟ ಆಶೀರ್ವಾದದಲ್ಲಿ ಇಂತಹದ್ದೇನೂ ಸೇರಿರಲ್ಲಿಲ್ಲ. (ಆದಿಕಾಂಡ 1:28) ಆ ಪರಿಪೂರ್ಣ ಮಾನವ ದಂಪತಿಗಳಿಗೆ ಕೊಟ್ಟ ಆ ಆಶೀರ್ವದಿತ ನಿಯೋಗದಲ್ಲಿ ಆಕೆಗೆ ಹೆಚ್ಚು ಮಕ್ಕಳು ಜನಿಸಲಿದ್ದವು ಆದರೆ ಬಹು ಸಂಕಟವಾಗಲಿ, ಅತಿರೇಕ ಪ್ರಸವವೇದನೆಯಾಗಲಿ, ಪತಿಯ ದಬ್ಬಾಳಿಕೆಯಾಗಲಿ ಅಲ್ಲಿರಲಿಲ್ಲ. ಪಾಪಮಾಡಿದ ಆ ಸ್ತ್ರೀಯ ಮೇಲೆ ವಿಧಿಸಲ್ಪಟ್ಟ ಈ ತೀರ್ಪು ಅವಳ ಹೆಣ್ಣು ಮಕ್ಕಳ ಮತ್ತು ಮೊಮ್ಮಕ್ಕಳ ಮೇಲೆ ಸದಾ ಪರಿಣಾಮ ಬೀರಲಿಕ್ಕಿತ್ತು.
ಆದಾಮನ ವಿರುದ್ದ ಶಿಕ್ಷೆಯಿಂದ ದೇವರ ನಿಯಮದ ಮಹಿಮೆ
9, 10. (ಎ) ಯಾವ ಎಚ್ಚರಿಕೆಯನ್ನು ದೇವರು ಆದಾಮನಿಗೆ ದೇವರು ನೇರವಾಗಿ ಕೊಟ್ಟಿದ್ದನು, ಮತ್ತು ಅಂತಹ ಶಿಕ್ಷೆಯನ್ನು ದೇವರು ನಿರ್ವಹಿಸಿದಾದ್ದರೆ ಯಾವ ಫಲಿತಾಂಶಗಳಾಗಲಿದ್ದವು? (ಬಿ) ಆದಾಮನ ವಿರುದ್ದ ದೇವರು ಯಾವ ತೀರ್ಪನ್ನು ವಿಧಿಸಿದನು?
9. ತನ್ನೊಂದಿಗೆ ಪಾಪದಲ್ಲಿ ಭಾಗಿಯಾಗುವಂತೆ ಯಾರನ್ನು ಆಕೆ ಪ್ರೇರಿಸಿದಳೋ ಆ ಪುರುಷನೊಂದಿಗೆ ಯಾವ ಬದಲಾದ ಪರಿಸ್ಥಿತಿಗಳನ್ನು ಸ್ತ್ರೀಯು ಪಾಲಿಗಳಾಗಲಿದ್ದಳು? ಆ ಪುರುಷನಿಗೆ ದೇವರು ನೇರವಾಗಿ, “ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ” ಎಂದು ವಿಧಿಸಿದ್ದನು. (ಆದಿಕಾಂಡ 2:17) ನ್ಯಾಯವಂತನಾದ ದೇವರು, ಆದಾಮನು ಕೇವಲ ಹಣ್ಣಿನ ತುಂಡೊಂದನ್ನು ತಿಂದದಕ್ಕಾಗಿ ಅಂತಹ ಅಂತ್ಯಫಲದ ಶಿಕ್ಷೆಯನ್ನು ವಿಧಿಸ್ಯಾನೇ? ಅಂತಹ ಶಿಕ್ಷೆಯ ಅಂತಿಮ ಅರ್ಥವೇನೆಂದು ಯೋಚಿಸಿರಿ! ಆದಾಮ ಮತ್ತು ಹವ್ವರು ತಮ್ಮ ವಿವಾಹದ ದಿನದಲ್ಲಿ ಅನುಭವಿಸಿದ್ದ ಆ ಆತ್ಮಪ್ರೇರಕ ಪ್ರತೀಕ್ಷೆಯನ್ನು, ತಮ್ಮ ಸಂತತಿಯಿಂದ ಇಡೀ ಭೂಮಿಯನ್ನು ತುಂಬುವ ಪ್ರತೀಕ್ಷೆಯನ್ನು, ಪರಿಪೂರ್ಣ ಮಾನವ ಕುಲವು ಶಾಂತಿಯಿಂದಲೂ ನಿತ್ಯ ತಾರುಣ್ಯದಿಂದಲೂ ಭೂಪ್ರಮೋದವನದಲ್ಲಿ ತಮ್ಮ ದೇವರೂ ಸ್ವರ್ಗೀಯ ತಂದೆಯೂ ಆದಾತನೊಂದಿಗೆ ಶಾಂತಿಯ ಸುಸಂಬಂಧದೊಂದಿಗೆ ಜೀವಿಸುವ ಪ್ರತೀಕ್ಷೆಯನ್ನು ತಾನೇ ಅದು ನಾಶಗೊಳಿಸುವದು! ನಿಶ್ಚಯವಾಗಿ ದೇವರು ಮಾನವಕುಲಕ್ಕಾಗಿ ಮತ್ತು ಮನುಷ್ಯನ ಭೂಮನೆಗಾಗಿರುವ ತನ್ನ ಆಶ್ಚರ್ಯಕರ ಉದ್ದೇಶವನ್ನು ಸಕಲ ಮಾನವಕುಲದ ಮೊದಲ ಹೆತ್ತವರ ಮೇಲೆ ಮರಣಶಿಕ್ಷೆಯನ್ನು ಕಡ್ಡಾಯವಾಗಿ ವಿಧಿಸುವ ಮೂಲಕ ನಿಶ್ಚಯವಾಗಿಯೂ ಸೋಲಿಸಲಾರನು. ಆದರೆ ಬೈಬಲ್ ವೃತ್ತಾಂತದಲ್ಲಿ ಸರಳವಾಗಿ ದಾಖಲೆಯಾಗಿರುವ ದೈವಿಕ ಶಾಸನಕ್ಕೆ ಕಿವಿಗೊಡಿರಿ:
10. “ಮತ್ತು ಆದಾಮನಿಗೆ—ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದ ಕಾರಣ ನಿನ್ನ ನಿಮಿತ್ತ ಭೂಮಿಗೆ ಶಾಪಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ. ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೇ? ನೀನು ಮಣ್ಣೇ; ಪುನ: ಮಣ್ಣಿಗೆ ಸೇರತಕ್ಕವನಾಗಿದ್ದಿ.”—ಆದಿಕಾಂಡ 3:17-19.
11. ವಿಧೇಯತೆಯ ಸಂಬಂಧವಾದ ಯಾವ ನಿಜತ್ವಗಳು ಆದಾಮನ ವಿರುದ್ಧವಾದ ದೇವರ ತೀರ್ಪಿನ ಅರ್ಹತೆಯನ್ನು ಚಿತ್ರಿಸುತ್ತವೆ?
11. ಆ ನ್ಯಾಯದಂಡವು ಮನುಷ್ಯನ ಮೇಲೆ ಮರಣ ಶಿಕ್ಷೆಯನ್ನು ವಿಧಿಸಿತ್ತು. ಭೂಪ್ರಮೋದವನದಲ್ಲಿ ಶಾಂತಿ ಮತ್ತು ಪ್ರೀತಿಯಿಂದ ಸಹಜೀವನ ನಡಿಸುತ್ತಾ ಅದನ್ನು ಸದಾ ಸಾಗುವಳಿ ಮತ್ತು ಆರೈಕೆ ಮಾಡುತ್ತಾ ಇರುವ ಪರಿಪೂರ್ಣ ಸ್ತ್ರೀಪುರುಷರಿಲಂದ ತುಂಬಿಸುವ ದೇವರ ಉದ್ದೇಶಕ್ಕೆ ಬರುವ ಫಲಿತಾಂಶಗಳನ್ನು ಅದು ಲಕ್ಷಿಸಿರಲಿಲ್ಲ. ಆ ಮನುಷ್ಯನು “ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರದ” ನಿಶೇದ್ಯ ಹಣ್ಣನ್ನು ತಿನ್ನಬಾರದೆಂದು ದೇವರು ಹೇಳಿದ ಮಾತನ್ನು ಕೇಳದೆ ತನ್ನ ಹೆಂಡತಿಯ ಮಾತಿಗೆ ಕಿವಿಗೊಟ್ಟಿದ್ದನು. ಅವನು ತಾನೇ ತನ್ನ ನಿರ್ಮಾಣಿಕನೂ ದೇವರೂ ಆದಾತನ ಮಾತಿಗೆ ವಿಧೇಯನಾಗದಿದ್ದಲ್ಲಿ, ತನ್ನ ಮಕ್ಕಳು ಅದನ್ನು ಮಾಡುವಂತೆ ಹೊಂದಿಕೆಯಾಗಿ ಕಲಿಸಬಲ್ಲನೋ? ಯೆಹೋವದೇವರಿಗೆ ವಿಧೇಯರಾಗುವಂತೆ ಕಲಿಸುವದರಲ್ಲಿ ಅವನ ಸ್ವಂತ ಮಾದರಿಯು ಒಂದು ಹೇಳತಕ್ಕ ವಿಷಯವೋ?—1 ಸಮುವೇಲ 15:22 ಹೋಲಿಸಿ.
12, 13. (ಎ) ಆದಾಮನ ಪಾಪವು ಅವನ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುವದು? (ಬಿ) ಪ್ರಮೋದವನದಲ್ಲಿ ಮಾತ್ರವಲ್ಲ ಭೂಮಿಯ ಮೇಲೆ ಸಹಾ ಜೀವಿಸಲು ಆದಾಮನು ಅರ್ಹನಾಗಿರಲಿಲ್ಲವೇಕೆ?
12. ಆದಾಮನು ತಾನೇ ತನ್ನ ಮಾನವ ಪರಿಪೂರ್ಣತೆಯಲ್ಲಿ ಒಮ್ಮೆ ಮಾಡಶಕ್ತನಾದಂತೆ ಅವನ ಮಕ್ಕಳೂ ದೇವರ ನಿಯಮವನ್ನು ಪರಿಪೂರ್ಣವಾಗಿ ಪಾಲಿಸಶಕ್ತರಾಗುವರೋ? ಅನುವಂಶೀಯ ನಿಯಮದ ಕಾರ್ಯಗತಿ ಅವನು ತನ್ನ ಮಕ್ಕಳಿಗೆ ತನ್ನ ಬಲಹೀನತೆಯನ್ನು, ದೇವರ ಮಾತಿಗೆ ಕಿವಿಗೊಡದ ಪ್ರವೃತಿಯನ್ನು ದಾಟಿಸಲಾರದೇ? ನಿಜ ಇತಿಹಾಸವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತದೆ.—ರೋಮಾಪುರ 5:12.
13. ದೇವರಿಗೆ ಪರಿಪೂರ್ಣ ಪ್ರೀತಿಯನ್ನು ಪರಿಪೂರ್ಣ ವಿಧೇಯತೆಯಲ್ಲಿ ತೋರಿಸಲು ತಪ್ಪಿದ ಅಂತಹ ಒಬ್ಬ ಮನುಷ್ಯನು, ಪ್ರಮೋದವನದಲ್ಲಿ ಯಾ ಭೂಮಿಯ ಮೇಲೆ ಸಹಾ, ಸದಾ ಜೀವಿಸಲು ಅರ್ಹನೋ? ಅವನನ್ನು ಭೂಮಿಯಲ್ಲಿ ಸದಾ ಜೀವಿಸುವಂತೆ ಬಿಡುವದು ಸಹಾ ಸುರಕ್ಷಿತವೋ? ಅವನು ತನ್ನ ಪಾಪದಲ್ಲಿ ಭೂಮಿಯ ಮೇಲೆ ಸದಾ ಜೀವಿಸುವಂತೆ ಬಿಡುವದು ದೇವರ ನಿಯಮವನ್ನು ಮಹಿಮೆಪಡಿಸುವದೋ ಮತ್ತು ಆತನ ಶ್ರೇಷ್ಟ ನ್ಯಾಯವನ್ನು ತೋರಿಸುತ್ತದೋ? ಅಥವಾ ಅದು ದೇವರ ನಿಯಮಕ್ಕೆ ಅಗೌರವವನ್ನು ಕಲಿಸುತ್ತದೋ ಮತ್ತು ದೇವರ ವಾಕ್ಯವು ನಂಬಲರ್ಹವಲ್ಲವೆಂದು ಸೂಚಿಸುವದೋ?
ಎದೇನ್ ತೋಟದಿಂದ ಹೊರಗಟ್ಟಲ್ಪಟ್ಟದ್ದು
14. ಆದಾಮ ಮತ್ತು ಅವನ ಪತ್ನಿಯ ವಿರುದ್ದ ದೇವರು ಕ್ರಿಯೆ ತಕ್ಕೊಂಡದ್ದನ್ನು ಬೈಬಲ್ ದಾಖಲೆಯು ಹೇಗೆ ವಿವರಿಸುತ್ತದೆ?
14. ದೇವರು ಈ ವಿಷಯಗಳನ್ನು ಹೇಗೆ ನಿರ್ಣಯಿಸಿದನೆಂದು ಬೈಬಲ್ ದಾಖಲೆಯು ನಮಗೆ ತಿಳಿಸುತ್ತದೆ: “ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು. ಮತ್ತು ಯೆಹೋವ ದೇವರು—ಈ ಮನುಷ್ಯನು ಒಳ್ಳೇದರ ಕೆಟ್ಟದರ ಬೇಧವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ. ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ ಬದುಕುವವನಾಗಬಾರದು ಅಂದುಕೊಂಡು ಅವನು ಉತ್ವತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಡಿಸಿಬಿಟ್ಟನು. ಅದಲ್ಲದೆ ಜೀವನವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕಾಗಿ ಆತನು ಏದೆನ್ ವನದ ಪೂರ್ವ ದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧನೇ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.”—ಆದಿಕಾಂಡ 3.21-24.
15. (ಎ) ನಗ್ನರಾಗಿದರ್ದಿಂದ ಆದಾಮ ಮತ್ತು ಅವನ ಪತ್ನಿಯ ನಾಚಿಕೆಯ ಬಾವಕ್ಕೆ ದೇವರು ಪರಿಗಣನೆ ತೋರಿಸಿದ್ದು ಹೇಗೆ? (ಬಿ) ಮೊದಲ ದಂಪತಿಗಳು ಏದೆನ್ ತೋಟದಿಂದ ಹೊರಗಟ್ಟಲ್ಪಟ್ಟದ್ದು ಹೇಗೆ? (ಸಿ) ಏದೆನ್ ತೋಟದ ಹೊರಗೆ ಯಾವ ಬದಲಾದ ಪರಿಸ್ಥಿತಿಯು ಆದಾಮ ಮತ್ತು ಅವನ ಪತ್ನಿಗೆ ಎದುರಾಯಿತು?
15. ಪಾಪಿ ಆದಾಮ ಮತ್ತು ಹವ್ವರಿಗೆ ತಮ್ಮ ನಗ್ನತೆಯ ಕಾರಣ ಈಗುಂಟಾದ ಲಜ್ಜಿತ ಬಾವಕ್ಕಾಗಿಯೂ ದೈವಿಕ ನ್ಯಾಯಾಧೀಶನು ಪರಿಗಣನೆಯನ್ನು ತೋರಿಸಿದನು. ಅವರು ತಮಗಾಗಿ ಹೊಲಿದು ಉಟ್ಟುಕೊಂಡ ಅಂಜೂರದ ಎಲೆಗಳ ಬದಲಾಗಿ ಆತನು ಅವರಿಗೆ ಉದ್ದವಾದ ಚರ್ಮದ ಅಂಗಿಯನ್ನು ಮಾಡಿ ತೊಡಿಸಿದನು. (ಆದಿಕಾಂಡ 3:7) ಆ ಚರ್ಮದ ಅಂಗಿಯು ಬಹುಕಾಲ ಬಾಳುವದು ಮತ್ತು ಏದೆನ್ ತೋಟದ ಹೊರಗಿನ ಮುಳ್ಳುಕಳೆಗಳ ಮತ್ತು ಇತರ ಹಾನಿಕಾರಕ ವಿಷಯಗಳ ವಿರುದ್ದ ಭದ್ರತೆಯನ್ನು ಕೊಡುವದು. ಪಾಪ ಮಾಡಿದ ಮೇಲೆ ಅವರ ಮನಸ್ಸಾಕ್ಷಿ ಕೆಟ್ಟುಹೋದ ಕಾರಣ, ದೇವರ ದೃಷ್ಟಿಯಿಂದ ಮರೆಯಾಗಲು ಅವರು ಏದೆನ್ ತೋಟದ ಮರಗಳ ನಡುವೆ ಅಡಗಲು ಪ್ರಯತ್ನಿಸಿದರು. ದೇವರಿಂದ ಅವರು ಏದೆನ್ ತೋಟದಿಂದ ಹೊರಗಟ್ಟಲ್ಪಟ್ಟಾಗ ಒಂದು ರೀತಿಯ ದೈವಿಕ ಒತ್ತಡವನ್ನು ಅವರು ಅನುಭವಿಸಿದರು ಮತ್ತು ಬೇಗನೇ ಅದರಿಂದ ಸದಾಕಾಲಕ್ಕಾಗಿ ನಿಶೇಧಿತರಾಗಿ ಹೊರಗೆ ತಮ್ಮನ್ನು ಕಂಡುಕೊಂಡರು. ಇನ್ನುಮುಂದೆ ಆ ತೋಟವನ್ನು ವಿಸ್ತರಿಸಲಿಕ್ಕಾಗಲಿ ಅದರ ಪಾರದೈಸಿಕ ಪರಿಸ್ಥಿತಿಗಳನ್ನು ಭೂಮಿಯ ಕಟ್ಟಕಡೆಗೆ ಹಬ್ಬಿಸಲಿಕ್ಕಾಗಲಿ ಅವರು ಕಾರ್ಯನಡಿಸಲಾರರು. ಅವರು ಇನ್ನುಮುಂದೆ ಹೊಲದ ಬೆಳೆಯಿಂದ ಮಾಡಿದ ಆಹಾರವನ್ನು ತಿನ್ನುವರು, ಆದರೆ ಅದು ಅವರನ್ನು ಮಾನವ ಜೀವದಲ್ಲಿ ನಿತ್ಯಕ್ಕಾಗಿ ಪೋಷಿಸಲಾರದು. “ಜೀವವೃಕ್ಷ” ದಿಂದ ಅವರು ಛೇದಿತರಾದರು. ಕೆಲವು ಕಾಲದ ನಂತರ- ಎಷ್ಟು ಸಮಯದ ಮೇಲೆಯೋ- ಅವರು ಸಾಯಲೇ ಬೇಕು!
ಯೆಹೋವನ ಮೂಲ ಉದ್ದೇಶ ಸೋಲಲಾರದು
16. ಎನನ್ನು ಮಾಡಲು ದೇವರು ಉದ್ದೇಶಿಸಿರಲಿಲ್ಲ ಮತ್ತು ಎಕೆ?
16. ಮಣ್ಣಿನಿಂದ ಉತ್ಪತ್ತಿಯಾದ ಈ ಎರಡು ಜೀವಿಗಳು ತನ್ನ ವಿರುದ್ದ ಪಾಪ ಮಾಡಿದಕ್ಕಾಗಿ ದೇವರೀಗ ಭೂಮಿಯನ್ನೂ ಅದರೊಂದಿಗೆ ಸೂರ್ಯ, ಚಂದ್ರ, ನಕ್ಷಾತ್ರಾದಿಗಳನ್ನು ಹೀಗೆ ಇಡೀ ವಿಶ್ವವನ್ನೇ ನಾಶಮಾಡಿ ಬಿಡುವನೋ? ಆತನು ಹಾಗೆ ಮಾಡಿದ್ದರೆ, ತನ್ನ ಮಹಿಮೆಯ ಉದ್ದೇಶದಲ್ಲಿ ಸೋತನೆಂದು ಅರ್ಥವಾಗದೇ? ಮತ್ತು ಎಲ್ಲವೂ ಆ ನಕಾಶನು ಆರಂಭಿಸಿದ ಒಂದು ವಿಷಯದಿಂದಾಗಿ. ಅಲ್ಲದೆ, ಬರೇ ಒಂದು ಸರ್ಪವು ದೇವರ ಉದ್ದೇಶವನ್ನು ಉರುಳಿಸಿ ಬಿಟ್ಟಿತೇ? ಆದಾಮ ಮತ್ತು ಹವ್ವರನ್ನು ಅವರ ಮದುವೇ ದಿನದಲ್ಲಿ ದೇವರು ಆಶೀರ್ವದಿಸಿದಾಗ ಮತ್ತು ಅವರಿಗಾಗಿ ತನ್ನ ಚಿತ್ತವೇನೆಂದು ತಿಳಿಸಿದಾಗ ಅವರ ಮುಂದೆ ತನ್ನ ಉದ್ದೇಶವನ್ನಿಟ್ಟನು. ಅದೇನಂದರೆ ಪರಿಪೂರ್ಣ ಮಾನವ ಕುಲದಿಂದ ಇಡೀ ಭೂಮಿಯನ್ನು ತುಂಬಿಸುವದು; ಭೂಮಿಯನ್ನು ಏದೆನ್ ತೋಟದ ಹಾಗೆ ವಿಸ್ತರಿಸಿ ವಶಮಾಡಿಕೊಳ್ಳುವದು; ಕೆಳದರ್ಜೆಯ ನೆಲಜಲ ಜೀವಿಗಳೆಲ್ಲವುಗಳ ಮೇಲೆ ಶಾಂತಿಯಿಂದ ದೊರೆತನ ಮಾಡುವದೇ. ಸಾವಿರಾರು ವರ್ಷಗಳ ಕಾಲದಿಂದ ಆರು ಸೃಷ್ಟಿ ದಿನಗಳ ಕಾರ್ಯದ ಮೂಲಕ ಇದೇ ಉದ್ದೇಶದ ಭವ್ಯ ನೆರವೇರಿಕೆಗಾಗಿ ದೇವರು ಸಿದ್ದತೆಯಗಳನ್ನು ಮಾಡಿದ್ದನು. ಈ ಸ್ತುತ್ಯಾರ್ಹ ಉದ್ದಿಶ್ಯವೀಗ ಕೇವಲ ಒಂದು ಸರ್ಪದ ಮತ್ತು ಮೊದಲ ಮಾನವ ದಂಪತಿಗಳ ವಕ್ರತೆಯಿಂದಾಗಿ ನೆರವೇರದೆ ಹೋದೀತೇ? ನಿಶ್ಚಯವಾಗಿ ಇಲ್ಲ.—ಯೆಶಾಯ 46:9-11 ಹೋಲಿಸಿ.
17. ಎಳನೆಯ ದಿನದ ಕುರಿತು ದೇವರೇನು ಮಾಡಲು ಸಿರ್ಧರಿಸಿದ್ದನು ಮತ್ತು ಹೀಗೆ ಆ ದಿನವು ಹೇಗೆ ಕೊನೆಗೊಳ್ಳಲಿತ್ತು?
17. ಅದಿನ್ನೂ ಯೆಹೋವ ದೇವರ ಎಳನೆಯ ವಿಶ್ರಾಂತಿ ದಿನವಾಗಿತ್ತು. ಆತನು ಆ ದಿನವನ್ನು ಆಶೀರ್ವದಿಸಲು ಮತ್ತು ಪವಿತ್ರೀಕರಿಸಲು ನಿಶ್ಚೈಸಿದ್ದನು. ಯಾವುದೂ ಅದನ್ನು ಶಪಿತ ದಿನವಾಗಿ ಮಾಡುವಂತೆ ಆತನು ಬಿಡನು. ಮತ್ತು ವಿಶ್ರಾಂತಿ ದಿನಕ್ಕೆ ಶಾಪ ಹಾಕಲು ಯಾರಾದರೂ ಸಂಚು ಹಾಕಿದರೆ ಆತನು ಅದನ್ನು ಪ್ರತಿಭಟಿಸಿ ಆಶೀರ್ವಾದವಾಗಿ ಮಾರ್ಪಡಿಸುವವನು, ಆ ದಿನವನ್ನು ಆಶೀರ್ವದಿತವಾಗಿ ಕೊನೆಗೊಳಿಸುವನು. ದೇವರ ಚಿತ್ತವು ಪರಲೋಕದಲ್ಲಿ ಹೇಗೋ ಹಾಗೆ ಭೂಮಿಯಲ್ಲಿಯೂ ನೆರವೇರುವಾಗ ಇಡೀ ಭೂಮಿಯು ಸಂಪೂರ್ಣ ಮಾನವ ಕುಲದಿಂದ ಪವಿತ್ರಸ್ಥಾನವಾಗಿ ಮಾಡಲ್ಪಡುವದು.—ಮತ್ತಾಯ 6:10ನ್ನು ಹೋಲಿಸಿ.
18, 19. (ಎ) ಪಾಪಿಗಳಾದ ಮೊದಲ ಮಾನವ ಜತೆಯ ಭಾದಿತ ಸಂತತಿಯು ಎಕೆ ಹರ್ಷಿಸ ಸಾಧ್ಯವಿದೆ? (ಬಿ) ಕಾವಲಿನಬುರುಜು ನ ಮುಂದಿನ ಕಾಲಂಗಳು ಏನನ್ನು ಚರ್ಚಿಸಲಿವೆ?
18. ದೇವರು ಯಾವ ಆಶಾಭಂಗವನ್ನೂ ಹೊಂದಲಿಲ್ಲ. ತನ್ನ ಉದ್ದೇಶವನ್ನಾತನು ತ್ಯಜಿಸಲಿಲ್ಲ. ತನಗೆ ಸಲ್ಲತಕ್ಕ ಎಲ್ಲಾ ಪ್ರಶಸ್ತಿಯೊಂದಿಗೆ ಆತನು ಉದ್ದೇಶಿಸುವವನೂ, ಉದ್ದೇಶಿಸಿದ್ದೆಲ್ಲವನ್ನು ಪೂರೈಸುವವನೂ ಆದ ನಂಬಲರ್ಹ ವ್ಯಕ್ತಿಯಾಗಿ ತನ್ನನ್ನು ಸಮರ್ಥಿಸಿಕೊಳ್ಳ ನಿರ್ಧರಿಸಿದ್ದಾನೆ. (ಯೆಶಾಯ 45:18) ಪಾಪಿಗಳಾದ ಮೊದಲ ಮಾನವ ಜತೆಯ ಅಸಂಪೂರ್ಣ, ಬಾಧಿತ ಸಂತತಿಯು ಇದರಿಂದಾಗಿ ಹರ್ಷಗೊಂಡು ತಮಗೆ ನಿತ್ಯ ಪ್ರಯೋಜನಕಾರಿಯಾಗುವ ದೇವರ ಮೂಲ ಉದ್ದೇಶದ ನಂಬಿಗಸ್ತ ಪೂರೈಕೆಗಾಗಿ ಮುನ್ನೋಡ ಸಾಧ್ಯವಿದೆ. ಈವಾಗಲೇ ಆತನ ವಿಶ್ರಾಂತಿ ದಿನದ ಸಹಸ್ರಾರು ವರ್ಪಗಳು ದಾಟಿಹೋಗಿವೆ. ಆತನ ವಿಶೇಷ ಆಶೀರ್ವಾದವನ್ನು ಪಡೆಯಲಿರುವ ವಿಶ್ರಾಂತಿ ದಿನದ ಕೊನೆಯ ಭಾಗವು ಈಗ ಹತ್ತರಿಸಿರಬೇಕು. ಆತನು ವಿಶ್ರಾಂತಿ ದಿನದ “ಸಾಯಂಕಾಲ” ವು ದಾಟಿಹೋಗುತ್ತಾ ಇದೆ, ಮತ್ತು ಹಿಂದಿನ ಆ ಆರು ಸೃಷ್ಟಿ ದಿನಗಳಲ್ಲಿ ಹೇಗೋ ಹಾಗೆ “ಪ್ರಾತ:ಕಾಲವು” ಬರಲೇ ಬೇಕು. ಈ “ಪ್ರಾತ:ಕಾಲವು” ತನ್ನ ಪರಿಪೂರ್ಣತೆಯನ್ನು ಮುಟ್ಟುವಾಗ ಮತ್ತು ಬದಲಾಗದ ಉದ್ದೇಶದ ಮಹಿಮೆಯುಳ್ಳ ಪೂರೈಕೆಯನ್ನು ಪ್ರೇಕ್ಷಕರೆಲರ್ಲಿಗೆ ಪೂರ್ಣ ದೃಶ್ಯವಾಗಿ ಮಾಡುವಾಗ, ದಾಖಲೆಯಲ್ಲಿ ಹೀಗೆ ಬರೆಯ ಸಾಧ್ಯವಿದೆ: “ಹೀಗೆ ಸಾಯಂಕಾಲವೂ ಪ್ರಾತ:ಕಾಲವೂ ಆಗಿ ಎಳನೆಯ ದಿನವಾಯಿತು.” ಒಂದು ಅಚ್ಚರಿಯ ಪ್ರತೀಕ್ಷೆಯಿದು ನಿಶ್ಚಯ!
19. ಇದನ್ನೆಲ್ಲಾ ಯೋಚಿಸುವದು ರೋಮಾಂಚಕಾರಿಯೇ ಸರಿ! ಕಾವಲಿನಬುರುಜು ಇದರ ಮುಂದಣ ಕಾಲಂಗಳಲ್ಲಿ, ದೇವರ ನಿಯಮವನ್ನು ಪ್ರೀತಿಸುವ ವಿಧೇಯ ಮಾನವರೆಲ್ಲರನ್ನು ಮುಗ್ದಗೊಳಿಸುವ ಆ ಪ್ರಮೋದವನದ ಪ್ರತೀಕ್ಷೆಗಳ ಕುರಿತು ಇನ್ನು ಹೆಚ್ಚಿನ ವಿಷಯಗಳು ತಿಳಿಸಲ್ಪಡುವವು. (w89 8/1)
[ಅಧ್ಯಯನ ಪ್ರಶ್ನೆಗಳು]
a ಪ್ರಕಟನೆ 12:9 ರಲ್ಲಿ ಪಿಶಾಚನಾದ ಸೈತಾನನು “ಪುರಾತನ ಸರ್ಪ” ವಾಗಿ ಗುರುತಿಸಲ್ಪಟ್ಟಿದ್ದಾನೆ ಮತ್ತು ಯೋಹಾನ 8:44 ರಲ್ಲಿ ಯೇಸು ಕ್ರಿಸ್ತನು ಅವನನ್ನು “ಸುಳ್ಳಿನ ತಂದೆ” ಎಂದು ಕರೆದಿದ್ದಾನೆ.
ನೀವೇನನ್ನುವಿರಿ?
◻ ಮೊದಲ ಮಾನವ ದಂಪತಿಗಳು ತಮ್ಮ ಪ್ರಮೋದವನ ಬೀಡನ್ನು ಕಳಕೊಂಡದೇಕ್ದೆ?
◻ ಸರ್ಪದ ಮೂಲಕ ಹವ್ವಳು ವಂಚಿಸಲ್ಪಟ್ಟದ್ದು ಒಂದು ದಂತ ಕಥೆಯಲ್ಲವೆಂದು ನಮಗೆ ತಿಳಿದಿರುವದೇಕೆ?
◻ ಯಾವ ಶಿಕ್ಷೆಯನ್ನು ದೇವರು ಸ್ತ್ರೀಗೆ ವಿಧಿಸಿದನು?
◻ ಯಾವ ಶಿಕ್ಷೆಯನ್ನು ಆದಾಮನಿಗೆ ವಿಧಿಸಿದನು ಮತ್ತು ಇದು ದೇವರ ನಿಯಮವನ್ನು ಮಹಿಮೆಪಡಿಸುತ್ತದೇಕೆ?
◻ ಭೂಪ್ರಮೋದವನವನ್ನು ಪರಿಪೂರ್ಣ ಮಾನವರಿಂದ ತುಂಬಿಸುವ ತನ್ನ ಉದ್ದೇಶದ ಕುರಿತು ದೇವರು ಆಶಾಭಂಗ ಪಡಲಿಲ್ಲವೇಕೆ?