ಸಹಸ್ರ ವರ್ಷದೊಳಗೆ ಪಾರಾಗಲಿಕ್ಕಾಗಿ ವ್ಯವಸ್ಥಾಪಿತರಾಗಿರುವುದು
“ಆಗ ಒಂದೇ ಹಿಂಡು ಆಗುವುದು, ಒಬ್ಬನೇ ಕುರುಬನಿರುವನು.”—ಯೋಹಾನ 10:16.
1. ಸದಾ ಜೀವಿಸುವ ದೇವರಿಗೆ ಸಹಸ್ರ ವರ್ಷಗಳು ಯಾವುದರಂತಿವೆ?
ಯೆಹೋವನೇ ಮಾನವರಿಗಾಗಿ ಸಮಯವನ್ನು ಸೃಷ್ಟಿಮಾಡಿದಾತನು. ಅಮರ್ತ್ಯ ದೇವರೂ ಅನಂತಕಾಲದಿಂದ ಅನಂತಕಾಲದ ತನಕ ಇರುವಾತನೂ ಅದಾತನಿಗೆ ಒಂದು ಸಹಸ್ರ ವರ್ಷಗಳು ಥಟ್ಟನೇ ಗತಿಸಿಹೋಗುವ ದಿನದಂತೆ ಅಥವಾ ನಮ್ಮ ರಾತ್ರಿಗಳಲ್ಲಿ ಒಂದರ ಪಹರೆಯ ಅವಧಿಯಂತಿದೆ.—ಕೀರ್ತನೆ 90:4; 2 ಪೇತ್ರ 3:8.
2. ಯೆಹೋವನು ಸರ್ವ ಮಾನವ ಸಂತತಿಯನ್ನು ಆಶೀರ್ವದಿಸಲಿಕ್ಕಾಗಿ ಯಾವ ಸಮಾಧಿಯನ್ನು ಬದಿಗಿಟ್ಟಿದ್ದಾನೆ?
2 ದೇವರು ಭೂಮಿಯ ಸಕಲ ಜನಾಂಗಗಳನ್ನು ಆಶೀರ್ವದಿಸಲಿಕ್ಕಾಗಿ ಒಂದು ಸಹಸ್ರ ವರ್ಷಗಳ ಸಾಂಕೇತಿಕ ದಿನವನ್ನು ಗೊತ್ತುಮಾಡಿದ್ದಾನೆ. (ಆದಿಕಾಂಡ 12:3; 22:17,18; ಅಪೋಸ್ತಲರ ಕೃತ್ಯ 17:31) ಇದರಲ್ಲಿ ಈ ತನಕ ಸತ್ತಿರುವವರೂ ಇನ್ನೂ ಬದುಕಿರುವವರೂ ಇದ್ದಾರೆ. ದೇವರು ಇದನ್ನು ಹೇಗೆ ಮಾಡುವನು? ಆತನ ಸಾಂಕೇತಿಕ ಸ್ತ್ರೀಯ “ಸಂತಾನ”ವಾದ ಯೇಸು ಕ್ರಿಸ್ತನ ಮೂಲಕವಾಗಿರುವ ಆತನ ರಾಜ್ಯದ ಮುಖೇನವೇ.—ಆದಿಕಾಂಡ 3:15.
3 (ಎ) ದೇವರ ಸ್ತ್ರೀಯ ಸಂತಾನವಾದವನ ಹಿಮ್ಮಡಿಗೆ ಹೇಗೆ ಜಜ್ಜು ಗಾಯವಾಯಿತು, ಆದರೆ ಆ ಗಾಯ ಹೇಗೆ ವಾಸಿಯಾಯಿತು? (ಬಿ) ಯೇಸು ಕ್ರಿಸ್ತನ ಸಹಸ್ರವರ್ಷದಾಳಿಕೆಯ ಅಂತ್ಯದಲ್ಲಿ ಅವನು ಸಾಂಕೇತಿಕ ಸರ್ಪಕ್ಕೆ ಏನು ಮಾಡುವನು?
3 ದೇವರ ಸ್ತ್ರೀ ಅಥವಾ (ಸ್ವರ್ಗೀಯ ಸಂಸ್ಥೆ) ಯ ಸಂತಾನವಾದವನ ಹಿಮ್ಮಡಿಗೆ, ನಮ್ಮ ಸಾಮಾನ್ಯ ಶಕದ 33ನೇ ವರ್ಷದಲ್ಲಿ ಹುತಾತ್ಮನಾಗಿ ಸತ್ತಾಗ ಮತ್ತು ಮೂರು ದಿವಸಾಂಶಗಳಲ್ಲಿ ಮೃತನಾಗಿಯೇ ಇದ್ದಾಗ ಜಜ್ಜು ಗಾಯವಾಯಿತು. ಅದರೆ ಮೂರನೆಯ ದಿನದಲ್ಲಿ ಮಹಾ ಜೀವಂತನಾದ ಸರ್ವಶಕ್ತ ದೇವರು ತನ್ನ ಕರ್ತವ್ಯನಿಷ್ಟ ಕುಮಾರನನ್ನು ಆತ್ಮಲೋಕದ ಅಮರ ಜೀವನಕ್ಕೆ ಪುನರುತ್ಥಾನಗೊಳಿಸಿ ಆ ಗಾಯವನ್ನು ವಾಸಿಮಾಡಿದನು. (1 ಪೇತ್ರ 3:18) ಯೇಸು ಇನ್ನು ಮುಂದೆ ಎಂದಿಗೂ ಸಾಯದಿರುವದರಿಂದ ಆತನು ಮಾನವ ಕುಲದ ಮೇಲೆ ಸಹಸ್ರ ವರ್ಷ ಆಳಲು ಮತ್ತು ಸಾಂಕೇತಿಕ ಸರ್ಪನ ತಲೆಯನ್ನು ಜಜ್ಜಿ ಸಹಸ್ರ ವರ್ಷದಾಳಿಕೆಯ ಬಳಿಕ ಅವನನ್ನು ಇಲ್ಲದಂತೆ ಮಾಡಲು ಸಮರ್ಥನಾಗಿದ್ದಾನೆ. ನಂಬಿಗಸ್ತ ಪುನಃಸ್ಥಾಪಿತ ಮಾನವ ಕುಲಕ್ಕೆ ಅದೆಂಥಾ ಆಶೀರ್ವಾದ!
4 ದೇವರು ತನ್ನ ಜನರೊಂದಿಗೆ ಯಾವ ರೀತಿಯ ಕಾರ್ಯಕ್ರಮವನ್ನು ಮುಂದುವರಿಸುತ್ತಿದ್ದಾನೆ?
4 1914 ರಲ್ಲಿ ಅನ್ಯ ಜನಾಂಗಗಳ ಕಾಲದ ಅಂತ್ಯದಿಂದ ಆರಂಭವಾಗಿರುವ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಸಮಯದಲ್ಲಿ ಭೂವ್ಯಾಪಕವಾಗಿ ಯೆಹೋವನ ಜನರ ಮಧ್ಯೆ ಹೆಚ್ಚು ವ್ಯವಸ್ಥಾಪನೆ ತೋರಿಬಂದಿದೆ. (ಮತ್ತಾಯ 24:3; ಲೂಕ 21:24) ಸಹಸ್ರ ವರ್ಷಗಳ ಮೊದಲಿನ ಈ ವ್ಯವಸ್ಥಾಪನಾ ಕಾರ್ಯಕ್ರಮವು ಮಹಾ ವ್ಯವಸ್ಥಾಪಕನಾದ ಯೆಹೋವ ದೇವರ ಉದ್ದೇಶಕ್ಕನುಸಾರ ಮತ್ತು ಆತನ ನಿರ್ದೇಶನದಲ್ಲಿ ನಡೆಯುತ್ತದೆ. ಆತನ ಸ್ತ್ರೀ ಅಂದರೆ ಆತನ ಪತ್ನಿ ಸದೃಶವಾದ ಸ್ವರ್ಗೀಯ ಸಂಘಟನೆಯ ಮೂಲಕ, ಯೇಸು ಕ್ರಿಸ್ತನ ಮೂಲಕವಾಗಿರುವ ಆತನ ವಾಗ್ದಾನಿತ ರಾಜ್ಯ, ಬೈಬಲ್ ಪ್ರವಾದನಾ ನೆರವೇರಿಕೆಗಳು ರುಜುಪಡಿಸುವಂತೆ, 1914 ರಲ್ಲಿ ಜನ್ಮ ತಾಳಿತು.
5. ಪ್ರಕಟನೆ 12:5 ರಲ್ಲಿ ಯಾವುದರ ಜನನವನ್ನು ಮುಂತಿಳಿಸಲಾಗಿತ್ತು, ಮತ್ತು ವಾಚ್ಟವರ್ ಪತ್ರಿಕೆಯಲ್ಲಿ ಇದನ್ನು ಮೊದಲು ಯಾವಾಗ ವಿವರಿಸಲಾಗಿತ್ತು?
5 ಹೀಗೆ ಪ್ರಕಟನೆ 12:5 ರ ಮಾತುಗಳು ಘನತೆಯಿಂದ ನೆರವೇರಿದವು: “ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು; ಆ ಕೂಸು ಫಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.” ದೇವರ ಸ್ತ್ರೀಯಿಂದ ಹೊಸದಾಗಿ ಹುಟ್ಟಿದ ಕೂಸಿನಿಂದ ಚಿತ್ರಿತವಾದ ಕ್ರಿಸ್ತನ ಮೂಲಕವಾಗಿರುವ ಯೆಹೋವರ ರಾಜ್ಯದ ಜನನವು ಪ್ರಥಮವಾಗಿ ಮಾರ್ಚ್ 1, 1925 ರ ವಾಚ್ಟವರ್ ಪತ್ರಿಕೆಯಲ್ಲಿ ವಿವರಿಸಲ್ಪಟ್ಟಿತು. ಸ್ವರ್ಗದಲ್ಲಿ 1914 ರಲ್ಲಿ ನಡೆದ ಈ ಮೆಸ್ಸೀಯನ ರಾಜ್ಯದ ಜನನ, 1919 ರಲ್ಲಿ ಭೂಮಿಯಲ್ಲಿ ನಡೆದ ಚೀಯೋನಿನ ‘ಮಕ್ಕಳ” “ರಾಷ್ಟ್ರ”ಕ್ಕಿಂತ ಭಿನ್ನವಾಗಿದೆ.—ಯೆಶಾಯ 66:7,8.
6. (ಎ) ರಾಜ್ಯದ ಜನನವು ಯೇಸು ಮುಂತಿಳಿಸಿದ್ದ ಯಾವ ಕೆಲಸವನ್ನು ಅಪೇಕ್ಷಿಸಿತು? (ಬಿ) ಈ ಕೆಲಸ ಮಾಡುವಿಕೆ ಯೆಹೋವನ ಜನರಿಂದ ಯಾವುದನ್ನು ಅಪೇಕ್ಷಿಸಿತು, ಮತ್ತು ಅವರೀಗ ಯಾವ ವಿಧದಲ್ಲಿ ನಿಂತಿರುತ್ತಾರೆ?
6 ಯಾವುದರ ಮೂಲಕ ಯೆಹೋವನು ತನಗೆ ಸಕಲ ವಿಶ್ವದ ಮೇಲಿರುವ ನ್ಯಾಯವಾದ ಪರಮಾಧಿಕಾರವನ್ನು ನಿರ್ದೋಷೀಕರಿಸುವನೋ ಅದನ್ನು ಆ ರಾಜ್ಯದ ಜನನ ಭೂಮಿಯಲ್ಲಿಲ್ಲಾ ಪ್ರಕಟಿಸಲ್ಪಡಲು ಅರ್ಹವಾಗಿತ್ತು! ಮತ್ತು ಯೇಸುವಿನ ಅದೃಶ್ಯ “ಸಾನಿಧ್ಯ”ದ ರುಜುವಾತುಗಳ ಕುರಿತ ಈ ಮಾತುಗಳ ನೆರವೇರಿಕೆಗೆ ಇದು ಯೋಗ್ಯ ಸಮಯವಾಗಿತ್ತು: “ಪರಲೋಕ ರಾಜ್ಯದ ಈ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು.” (ಮತ್ತಾಯ 24:3, 14) ಅಂತ ರಾಷ್ಟ್ರೀಯ ಮತ್ತು ಭೂವ್ಯಾಪಕ ಮಟ್ಟದಲ್ಲಿ ಐಕ್ಯವೂ ಹೊಂದಿಕೆಯಾಗಿದ್ದೂ ಆದ ಸಾರುವಿಕೆ, ಯೆಹೋವನ ವಿಶ್ವ ಸಂಸ್ಥೆಯ ದೃಶ್ಯಭಾಗದ ಸಂಘಟನೆಯನ್ನು ಕೇಳಿಕೊಳ್ಳುತ್ತದೆಂಬದು ನಿಶ್ಚಯ. ಮತ್ತು ಆಗಿನ ಅಧ್ಯಕ್ಷ ಜೆ. ಎಫ್. ರಥರ್ಫರ್ಡರಿಂದ ಪ್ರತಿನಿಧೀಕರಿಸಲ್ಪಟ್ಟ ವಾಚ್ಟವರ್ ಬೈಬಲ್ ಎಂಡ್ ಟ್ರ್ಯಾಕ್ಟ್ ಸೊಸೈಟಿ ಇದಕ್ಕೆ ಒಪ್ಪಿಗೆ ನೀಡಿತು. ಹೀಗೆ ಯುದ್ಧಾನಂತರದ ವರ್ಷವಾದ 1919 ರಿಂದ ಹಿಡಿದು, ಮಹಾ ವ್ಯವಸ್ಥಾಪಕನಾದ ಯೆಹೋವ ದೇವರ ಮಾರ್ಗದರ್ಶನ ಮತ್ತು ಆಶೀರ್ವಾದಕ್ಕಾಗಿ ಬೇಡುತ್ತಾ ಸೊಸೈಟಿಯ ಕರ್ತವ್ಯನಿಷ್ಟ ಬೆಂಬಲಿಗರನ್ನು ಪುನಃಸ್ಥಾಪಿತ ರಾಷ್ಟ್ರವಾಗಿ ಸಂಘಟಿಸುವ ಕೆಲಸ ಮುಂದುವರಿಯಿತು. 2ನೇ ಲೋಕಯುದ್ಧದ ಎದುರಲ್ಲಿ, ಪ್ಯಾಸಿಸ್ಟ್ ಹಿಟ್ಲರನ ನಾಝೀ ಚಳುವಳಿ ಮತ್ತು ಕ್ಯಾಥ್ಲಿಕ್ ಆ್ಯಕ್ಷನ್ ಪಂಗಡಗಳು ತೀರಾ ವಿರೋಧಿಸದರೂ ಯೆಹೋವನ ಸಾಕ್ಷಿಗಳು ಭೂವ್ಯಾಪಕವಾಗಿ ಶತ್ರುಲೋಕಕ್ಕೆ ಐಕ್ಯವಾಗಿ ಎದೆಗೊಟ್ಟು ನಿಂತರು.
7. (ಎ) ಪರಸ್ಪರವಾಗಿ ಯಾವ ಸಂಬಂಧದಲ್ಲಿರುವುದರಿಂದ ಮಾತ್ರ ಯೆಹೋವನ ಜನರಿಗೆ ಮಹಾ ಸಂಕಟದಲ್ಲಿ ಪಾರಾಗುವ ನಿರೀಕ್ಷೆ ಇರಬಹುದು? (ಬಿ) ಜಲಪ್ರಲಯ ಪಾರಕರು ಭೂವ್ಯಾಪಕ ಪ್ರಲಯವನ್ನು ಹೇಗೆ ಪಾರಾದರು, ಮತ್ತು ಅವರು ಯಾರನ್ನು ಮುನ್ಸೂಚಿಸಿದರು?
7 ಅಭಿಷಿಕ್ತ ಉಳಿಕೆಯವರ ಮತ್ತು “ಮಹಾ ಸಮೂಹ”ದವರ ಪರಮ ವ್ಯವಸ್ಥಾಪಕನ ರಕ್ಷಣೆಯಲ್ಲಿರುವ ಈ ಐಕ್ಯ ಸಂಘಟನೆಗೆ ಮಾತ್ರ ಪಿಶಾಚನಾದ ಸೈತಾನನು ಆಳುವ ಈ ನಾಶಕ್ಕೊಳಗಾಗಿರುವ ಲೋಕ ವ್ಯವಸ್ಥೆಯ ಮೇಲೆ ಬರಲಿರುವ ಅಂತ್ಯದಿಂದ ಪಾರಾಗುವ ಶಾಸ್ತ್ರೀಯ ನಿರೀಕ್ಷೆ ಇದೆ. (ಪ್ರಕಟನೆ 7:9-17; 2 ಕೊರಿಂಥ 4:4) ಮಾನವ ಇತಿಹಾಸದ ಮೇಲೆ ಬರುವ ಅತ್ಯಂತ ಭಯಂಕರ “ಸಂಕಟ”ದಲ್ಲಿ ಬದುಕಿ ಉಳಿಯುವರೆಂದು ಯೇಸು ಕ್ರಿಸ್ತನು ಹೇಳಿದ “ನರಪ್ರಾಣಿ”ಗಳಲ್ಲಿ ಇವರು ಸೇರಿರುವರು. ನೋಹನ ದಿನಗಳಲ್ಲಿದ್ದಂತೆಯೇ ತಾನು ಪ್ರಕಟವಾಗುವ ದಿನಗಳಲ್ಲಿಯೂ ಇರುವದೆಂದು ಯೇಸು ಹೇಳಿದನು. ಸಂಘಟಿತ ಪ್ರಯತ್ನದಿಂದ ಕಟ್ಟಲು ಅನೇಕ ವರ್ಷಗಳು ಹಿಡಿದ ಆ ತೇಲು ಪೆಟ್ಟಿಗೆಯಲ್ಲಿ ಕೇವಲ ಎಂಟು ಮಾನವ ಅತ್ಮಗಳು ಮಾತ್ರ ಬಂದಿದ್ದ ಆ ಮಹಾಪೂರದಲ್ಲಿ ಪಾರಾದರು. ಅವರು ಒಂದು ಐಕ್ಯ ಕುಟುಂಬವಾಗಿ ಪಾರಾದರು. (ಮತ್ತಾಯ 24:22, 37-39; ಲೂಕ 17:26-30) ನೋಹನ ಪತ್ನಿ ಕ್ರಿಸ್ತನ ವಧುವಿಗೂ ಅವನ ಪುತ್ರರು ಮತ್ತು ಸೊಸೆಯರು ಕ್ರಮೇಣ ಎಷ್ಟು ದೊಡ್ಡ ಸಂಖ್ಯೆಯಾಗುತ್ತಾರೆಂದು ನಮಗೆ ಈಗ ತಿಳಿದಿರುವ, ಆದರೂ ಮಹಾ ಸಮೂಹವಾಗಿ ಈಗ ಬೆಳೆದಿರುವ “ಬೇರೆ ಕುರಿ” ಗಳಿಗೂ ಅನುರೂಪವಾಗಿದ್ದಾರೆ. (ಯೋಹಾನ 10:16) ಮಹಾ ನೋಹನಾದ ಯೇಸು ಕ್ರಿಸ್ತನ ಸಹಸ್ರ ವರ್ಷದೊಳಗೆ ಪಾರಾಗಬೇಕಾದರೆ ಅವರು, ಯಾರ ನಿಮಿತ್ತವಾಗಿ “ಮಹಾ ಸಂಕಟ” ದಿನಗಳು ಕಡಿಮೆ ಮಾಡಲ್ಪಟ್ಟಿವೆಯೋ ಆ “ಆದುಕೊಂಡವರಾದ” ಅಭಿಷಿಕ್ತ ಉಳಿಕೆಯವರೊಂದಿಗೆ ಸಂಘಟಿತರಾಗಿ ಉಳಿಯಬೇಕಾಗಿದೆ.—ಮತ್ತಾಯ 24:21,22.
ಸಹಸ್ರ ವರ್ಷದೊಳಕ್ಕೆ ಪಾರಾಗುವಿ
8. ತನ್ನ ಸಾನಿಧ್ಯದ ಕುರಿತ ಪ್ರವಾದನೆಯ ಅಂತ್ಯದಲ್ಲಿ ಯೇಸು ಯಾವ ದೃಷ್ಟಾಂತ ಕೊಟ್ಟನು, ಮತ್ತು ಅದರ ತಿಳುವಳಿಕೆಗೆ 1935 ರ ಜೂನ್ 1 ನೇ ತಾರೀಕು ಗಮನಾರ್ಹ ಹೇಗೆ?
8 ಮತ್ತಾಯನ ಸುವಾರ್ತೆಗನುಸಾರ ಯೇಸು ತನ್ನ ಸಾನಿಧ್ಯದ ಸೂಚನೆಯ ಕುರಿತ ಪ್ರಾವಾದನೆಯನ್ನು ಒಂದು ದೃಷ್ಟಾಂತ ಕೊಟ್ಟು ಮುಗಿಸಿದನು. ಸಾಮಾನ್ಯವಾಗಿ ಕುರಿ ಮತ್ತು ಆಡುಗಳ ದೃಷ್ಟಾಂತವೆಂದೆಣಿಸಲ್ಪಡುವ ಇದು, ಅನ್ಯ ದೇಶದವರ ಸಮಯಗಳು 1914 ರಲ್ಲಿ ಅಂತ್ಯವಾದಾಗ ಪ್ರಾರಂಭವಾದ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಈ ಸಮಯದಲ್ಲಿ ಅನ್ವಯಿಸುತ್ತದೆ. (ಮತ್ತಾಯ 25:31-46) 1935ನೇ ಜೂನ್ 1ನೇ ಶನಿವಾರ, ಈ ದೃಷ್ಟಾಂತದಲ್ಲಿರುವ ಕುರಿಗಳು ಮಹಾ ಸಮೂಹದ ಸದಸ್ಯರು ಎಂಬ ತಿಳುವಳಿಕೆಗೆ ಗಮನಾರ್ಹವಾದ ತಾರೀಕಾಗಿದೆ. ಆ ದಿವಸ, ವಾಷಿಂಗ್ಟನ್ ಡಿ.ಸಿ. ಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಒಂದು ಸಮ್ಮೇಳನದಲ್ಲಿ 840 ವ್ಯಕ್ತಿಗಳು ಯೇಸು ಕ್ರಿಸ್ತನ ಮೂಲಕ ಯೆಹೋವನಿಗೆ ತಾವು ಮಾಡಿದ ಸಮರ್ಪಣೆಯ ಗುರುತಾಗಿ ದೀಕ್ಷಾಸ್ನಾನ ಹೊಂದಿದರು. ಇದರಲ್ಲಿ ಅಧಿಕಾಂಶ ಜನರು ಜೆ. ಎಫ್. ರಥರ್ಫರ್ಡರವರು ಕೊಟ್ಟ ಒಂದು ಭಾಷಣಕ್ಕೆ ಥಟ್ಟನೆ ಪ್ರತಿವರ್ತನೆ ತೋರಿಸಿ ಈ ಹೆಜ್ಯೆ ತಕ್ಕೊಂಡರು. ಉತ್ತಮ ಕುರುಬನ ಬೇರೆ ಕುರಿಗಳ ಮಹಾ ಸಮೂಹದ ಭಾಗವಾಗಿ, ಧಾವಿಸಿ ಬರುತ್ತಿರುವ ಮಹಾ ಸಂಕಟದಲ್ಲಿ ಪಾರಾಗುವ ಸುಯೋಗ ಪಡೆದು ಈ ವ್ಯವಸ್ಥೆ ಅಂತ್ಯವಾದಾಗಲೂ ಜೀವಿಸುತ್ತಿದ್ದು ಕುರುಬ ರಾಜನಾದ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಗೆ ಪ್ರವೇಶಿಸುವುದು ಅವರ ಬಯಕೆಯಾಗಿತ್ತು. ಕ್ರಮೇಣ ಅವರು ಪ್ರಮೋದವನವಾದ ಭೂಮಿಯಲ್ಲಿ ಅನಂತ ಜೀವನವನ್ನು ಪಡೆಯುವರು.—ಮತ್ತಾಯ 25:46; ಲೂಕ 23:43.
9. ಕುರಿಗಳು “ಅವರಿಗಾಗಿ. . . . ಸಿದ್ಧಮಾಡಿದ ರಾಜ್ಯ” ಕ್ಕೆ ಏಕೆ ಆಮಂತ್ರಿಸಲ್ಪಡುತ್ತಾರೆ, ಮತ್ತು ರಾಜನ ಸಹೋದರರಿಗೆ ಒಳ್ಳೇದನ್ನು ಮಾಡಲು ಅವರು ಅತ್ಯುತ್ತಮ ಸ್ಥಾನದಲ್ಲಿರುವುದು ಹೇಗೆ?
9 ಈ ಕುರಿ ಸದೃಶರು “ಲೋಕಾಧಿಯಿಂದ. . . . ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ” ತೆಗೆದುಕೊಳ್ಳುವಂತೆ ಆಮಂತ್ರಿಸಲ್ಪಡುವುದೇಕೆ? ಅವರು ತನ್ನ “ಸಹೋದರರಿಗೆ” ಮತ್ತು ಹೀಗೆ, ತನಗೆ ಒಳ್ಳೆಯದನ್ನು ಮಾಡಿದರೆಂದು ಅರಸನು ಹೇಳುತ್ತಾನೆ. “ಸಹೋದರರು” ಎಂದು ಹೇಳುವಾಗ, ಈ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಭೂಮಿಯ ಮೇಲೆ ಇನ್ನೂ ಇರುವ ತನ್ನ ಆತ್ಮಿಕ ಸಹೋದರರಲ್ಲಿ ಉಳಿಕೆಯವರೆಂಬ ಅರ್ಥದಲ್ಲಿ ರಾಜನು ಹೇಳುತ್ತಾನೆ. ಕುರುಬ ರಾಜನಾದ ಯೇಸು ಕ್ರಿಸ್ತನ ಸಹೋದರರೊಂದಿಗೆ ಒಂದೇ ಹಿಂಡಾದ ಕುರಿ ಸದೃಶರು ಉಳಿಕೆಯವರೊಂದಿಗೆ ಸಾಧ್ಯವಾದಷ್ಟು ಆಪ್ತ ಸಹವಾಸ ಮಾಡಿ. ಹೀಗೆ ಅವರಿಗೆ ಒಳ್ಳೇದನ್ನು ಮಾಡಲು ಅತ್ಯುತ್ತಮ ಸ್ಥಿತಿಯಲ್ಲಿರುವರು. ಅಂತ್ಯ ಬರುವ ಮೊದಲು ಸ್ಥಾಪಿತ ರಾಜ್ಯವನ್ನು ಲೋಕವ್ಯಾಪಕವಾಗಿ ಸಾರುವಂತೆ ಅವರು ಕ್ರಿಸ್ತನ ಸಹೋದರರಿಗೆ ಪ್ರಾಪಂಚಿಕ ವಿಧಾನಗಳಲ್ಲಿಯೂ ಸಹಾಯ ಮಾಡುವರು. ಈ ಪರವಾಗಿ, ಉಳಿಕೆಯವರೊಂದಿಗೆ ಒಬ್ಬನೇ ಕುರುಬನ ಒಂದೇ ಹಿಂಡಾಗಿ ಸುಸಂಘಟಿತರಾಗಿರುವ ಸುಯೋಗವನ್ನು ಕುರಿಗಳು ನಿಕ್ಷೇಪದೋಪಾದಿ ನೋಡುವರು.
10. “ಲೋಕಾದಿಯಿಂದ. . . . [ಅವರಿಗಾಗಿ] ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ” ಪಡೆಯುವದು ಕುರಿಗಳಿಗೆ ಯಾವ ಅರ್ಥದಲ್ಲಿದೆ?
10 “ಸಿದ್ಧಮಾಡಿದ ರಾಜ್ಯವನ್ನು” ಪಡೆಯುವದೆಂದರೆ, ಈ ಕುರಿಗಳು ಯೇಸು ಕ್ರಿಸ್ತನೊಂದಿಗೂ ಅವನ ಸಹೋದರರೊಂದಿಗೂ ಸ್ವರ್ಗದಿಂದ ಒಂದು ಸಾವಿರ ವರ್ಷ ಆಳುವರೆಂದು ಅರ್ಥವಲ್ಲ. ಬದಲಾಗಿ, ಸಾವಿರ ವರುಷಗಳ ಆರಂಭದಿಂದಲೇ ಆ ಕುರಿಗಳು ರಾಜ್ಯದ ಭೂಕ್ಷೇತ್ರವನ್ನು ಭಾಧ್ಯತೆಯಾಗಿ ಪಡೆಯುವರು. ಅವರು ಆದಾಮ ಹವ್ವರ ವಂಶಜರಾಗಿರುವುದರಿಂದ, ದೇವರ ರಾಜ್ಯ ಕ್ರಿಸ್ತನ ಮೂಲಕ ವಶಪಡಿಸಿಕೊಳ್ಳುವ ಈ ಭೂಕ್ಷೇತ್ರವು ವಿಮೋಚನಾರ್ಹರಾದ ಮಾನವಕುಲಕ್ಕಾಗಿ “ಲೋಕಾಧಿಯಿಂದ” ಸಿದ್ಧವಾಗಿದೆ. ಇದಲ್ಲದೆ ಕುರಿಗಳು ತಮ್ಮ “ನಿತ್ಯನಾದ ತಂದೆ” ಯಾಗುವ ರಾಜನ ಭೂಮಕ್ಕಳಾಗುವದರಿಂದ ಅವರು ದೇವರ ರಾಜ್ಯದ ಕೆಳಗೆ ಭೂಲೋಕ ಅಥವಾ ಕ್ಷೇತ್ರವನ್ನು ಹೊಂದುತ್ತಾರೆ.—ಯೆಶಾಯ 9:6, 7.
11. ತಾವು ರಾಜ್ಯದ ವಕ್ಷ ವಹಿಸುವವರೆಂದು ಕುರಿ ಸದೃಶರು ಹೇಗೆ ತೋರಿಸುತ್ತಾರೆ, ಮತ್ತು ಈ ಕಾರಣದಿಂದ ಯಾವ ಆಶೀರ್ವಾದ ಅವರದ್ದಾಗುತ್ತದೆ?
11 ಸಾಂಕೇತಿಕ ಆಡುಗಳಿಗೆ ವ್ಯತಿರಿಕ್ತವಾಗಿ ಈ ಕುರಿ ಸದೃಶರು ತಾವು ರಾಜ್ಯದ ಪರವಾಗಿ ನಿಲ್ಲುವವರೆಂದು ಸುಸ್ಪಷ್ಟವಾಗಿ ತೋರಿಸಿ ಕೊಡುತ್ತಾರೆ. ಹೇಗೆ? ಕೇವಲ ಮಾತುಗಳಿಂದಲ್ಲ, ಕೃತ್ಯಗಳಿಂದ. ಸ್ವರ್ಗದಲ್ಲಿರುವ ರಾಜನು ಅದೃಶ್ಯನಾಗಿರುವ ಕಾರಣ ರಾಜ್ಯದ ಬೆಂಬಲಾರ್ಥವಾಗಿ ಅವರು ಅವನಿಗೆ ನೇರವಾಗಿ ಒಳ್ಳೇದನ್ನು ಮಾಡಲಾರರು. ಆದುದರಿಂದ ಇನ್ನೂ ಭೂಮಿಯಲ್ಲಿರುವ ಅವನ ಆತ್ಮಿಕ ಸಹೋದರರಿಗೆ ಅವರು ಒಳ್ಳಿತನವನ್ನು ಮಾಡುತ್ತಾರೆ. ಇದಕ್ಕೆ ಆಡುಗಳಿಂದ ಅವರಿಗೆ ದ್ವೇಷ, ಹಿಂಸೆ ಮತ್ತು ವಿರೋಧ ಬಂದರೂ ಹೀಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ರಾಜನು ಕುರಿಗಳನ್ನು ಅವರು ‘ತಂದೆಯ ಆಶೀರ್ವಾದವನ್ನು ಹೊಂದಿದವರು’ ಎಂದು ಕರೆಯುತ್ತಾನೆ.
12. ಪಾರಾಗುವ ಕುರಿಗಳಿಗೆ ಯಾರನ್ನು ಸ್ವಾಗತಿಸುವ ಸುಯೋಗವಿರುವುದು, ಮತ್ತು ಈ ಸಂಬಂಧದಲ್ಲಿ ಉಳಿಕೆಯವರ ಸದಸ್ಯರು ಏನು ನೆನಸಿದ್ದುಂಟು?
12 ಅರಸನ ಕುರಿಸದೃಶ ಉಪಕಾರಿಗಳ ಮಹಾ ಸಮೂಹವು ಸಹಸ್ರ ವರ್ಷಗಳೊಳಗೆ ಪಾರಾಗುವ ಆನಂದದಾಯಕ ಸುಯೋಗದಿಂದ ಆಶೀರ್ವದಿಸಲ್ಪಡುವುದು. ತಕ್ಕ ಸಮಯ ಬಂದಾಗ ಸ್ಮರಣೆಯ ಸಮಾಧಿಗಳಲ್ಲಿರುವ ಮಾನವ ಮೃತರನ್ನು ಸ್ವಾಗತಿಸುವುದರಲ್ಲಿ ಇವರು ಪಾಲಿಗರಾಗುವರು. (ಯೋಹಾನ 5:28,29; 11:23-25) “ಶ್ರೇಷ್ಟ ಪುನರುತ್ಥಾನ”ವನ್ನು ಅಂದರೆ ಒಂದುವೇಳೆ ಹೆಚ್ಚು ಮುಂಚಿತವಾದ ಪುನರುತ್ಥಾನವನ್ನು ಪಡೆಯುವ ಸಲುವಾಗಿ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ಬಾಧೆಪಟ್ಟು ತುಂಬಾ ಸಹಿಷ್ಣುತೆ ತೋರಿಸಿದ ನಂಬಿಗಸ್ತ ಮೂಲ ಪಿತೃಗಳೂ ಪ್ರವಾದಿಗಳೂ ಇದರಲ್ಲಿರುವರು. (ಇಬ್ರಿಯ 11:35) ಇಂತಹ ಪುನರುತ್ಥಾನ ಹೊಂದುವ, ಇಬ್ರಿಯ 11ನೇ ಅಧ್ಯಾಯದಲ್ಲಿ ಅಂಶಿಕವಾಗಿ ಹೆಸರಿಸಿರುವ ಸ್ತ್ರೀ ಪುರುಷರಲ್ಲಿ ಸ್ನಾನಿಕನಾದ ಯೋಹಾನನು ಸೇರಿರುವನು. (ಮತ್ತಾಯ 11:11) ಅಭಿಷಿಕ್ತ ಉಳಿಕೆಯವರಲ್ಲಿ ಕೆಲವರು ತಾವು ಪಾರಾಗಿ ಆ ಬಳಿಕವೂ ಬದುಕುತ್ತಾ ಸಾ.ಶ. 33 ರ ಪಂಚಾಶತ್ತಮಕ್ಕೆ ಮುಂಚಿತವಾಗಿ ನಂಬಿಗಸ್ತರಾಗಿ ಸತ್ತು ಪುನರುತ್ಥಾನವಾಗುವವರನ್ನು ಸ್ವಾಗತಿಸುವೆವೆಂದು ನೆನಸಿದ್ದುಂಟು. ಹಾಗಾದರೆ ಅಭಿಷಿಕ್ತರಿಗೆ ಇಂತಹ ಸಂಯೋಗ ಸಿಕ್ಕೀತೇ?
13. ಭೂಮಿಯ ಮೇಲೆ ಪುನರುತ್ಥಾನವಾಗುವವರನ್ನು ಸ್ವಾಗತಿಸಿ ಅವರ ಜಾಗ್ರತೆ ವಹಿಸಲಿಕ್ಕಾಗಿ ಉಳಿಕೆಯವರು ಹಾಜರಿರಬೇಕೆಂಬ ಅವಶ್ಯ ಏಕಿಲ್ಲ?
13 ಇದರ ಅವಶ್ಯವಿಲ್ಲ. ಏಕೆಂದರೆ ಈ ಪರಿಸ್ಥಿತಿಯ ಜಾಗ್ರತೆ ವಹಿಸುತ್ತಾ, “ನೂತನ ಆಕಾಶಮಂಡಲ”ದ ಕೆಳಗಿರುವ “ನೂತನ ಭೂಮಂಡಲ”ವನ್ನು ಪುನರುತ್ಥಾನವಾಗುವವರಿಗೆ ಪರಿಚಯಿಸಲು ಸಂಕಟ ಪಾರಾಗುವ ಮಹಾ ಸಮೂಹದವರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿರುವರು. (2 ಪೇತ್ರ 3:13) ಈಗಲೂ ಮಹಾ ಸಮೂಹದವರನ್ನು ಇದಕ್ಕಾಗಿ ಸಂಘಟಿಸಲಾಗುತ್ತದೆ. ಇಂದು, ಭೂಮಿಯಲ್ಲಿರುವ ಯೇಸುವಿನ ಆತ್ಮಿಕ ಸಹೋದರರ ಸಂಖ್ಯೆ 9000 ಕ್ಕೂ ಕಡಿಮೆ ಎಂದು ವರದಿಯಾಗುವಾಗ ಅವರಲ್ಲಿ ಪಾರಕರು, ಸಾಮಾನ್ಯ ಪುನರುತ್ಥಾನಕ್ಕೆ ನಡಿಸುವ ಸಿದ್ಧತೆಯ ಕೆಲಸವೆಲ್ಲಾದರ ಜಾಗ್ರತೆ ವಹಿಸಲು ತೀರಾ ಕೊಂಚ ಮಂದಿಯಾಗಿರುವರು ಎಂಬುದು ನಿಶ್ಚಯ. (ಯೆಹೆಜ್ಕೇಲ 39:8-16) ಹಾಗಾದರೆ ಇಲ್ಲಿ ಈಗ ಲಕ್ಷಗಟ್ಟಲೆ ಸಂಖ್ಯೆಯಲ್ಲಿರುವ ಮಹಾ ಸಮೂಹದವರು ಅತ್ಯುತ್ಕೃಷ್ಟ ಸೇವೆ ಸಲ್ಲಿಸುವರು. ಮತ್ತು ಇಂತಹ ಸುಯೋಗ ಅವರಿಗೆ ಕಾದಿರಿಸಲ್ಪಟ್ಟಿದೆ ಎಂಬದರಲ್ಲಿ ಸಂದೇಹವಿಲ್ಲ.
14. (ಎ)ಮಹಾ ಸಮೂಹದವರಲ್ಲಿ ಅನೇಕರು ಯಾವುದಕ್ಕಾಗಿ ತರಬೇತು ಹೊಂದುತ್ತಿದ್ದಾರೆ, ಮತ್ತು ಅವರೀಗ ದೊಡ್ಡ ಸಂಖ್ಯೆಯಲ್ಲಿ ಏಕೆ ಜವಾಬ್ದಾರಿ ವಹಿಸತಕ್ಕದ್ದು? (ಬಿ) ಶೀಘ್ರವಾಗಿ ಯಾವ ಘಟನೆಗಳು ನಡೆಯತಕ್ಕದ್ದು ಮತ್ತು ಬೇರೆ ಕುರಿಗಳಿಗೆ ಯಾವ ಕೆಲಸ ಕಾದಿದೆ?
14 ಮಹಾ ಸಮೂಹದಲ್ಲಿ ಅನೇಕರು ಆಗಲೇ ಸಭಾ ಜವಾಬ್ದಾರಿಕೆಗಳಲ್ಲಿ ಮತ್ತು ದೇವರ ಸಂಸ್ಥೆ ಭೂಮಾದ್ಯಂತ ನಡೆಸುತ್ತಿರುವ ಕಟ್ಟಡದ ಕಾರ್ಯಕ್ರಮಗಳ ಮೂಲಕ ತರಬೇತು ಹೊಂದುತ್ತಿದ್ದಾರೆ. ಮತ್ತು ಮಹಾ ಸಮೂಹದವರಲ್ಲಿ ಇನ್ನೂ ಹೆಚ್ಚಿನ ಆತ್ಮಿಕ ಪಕ್ವತೆಯ ಪುರುಷರು ಯೆಹೋವನು ಭೂಮಿಯ ಮೇಲೆ ಕಾರ್ಯ ನಡಿಸುತ್ತಿರುವಂತೆ ನೋಡುವ ಸಂಘಟನೆಯಲ್ಲಿ ಹೆಚ್ಚು ಜವಾಬ್ದಾರಿಗೆ ನೇಮಿಸಲ್ಪಡುವುದನ್ನು ನೋಡುವುದು ಪ್ರೋತ್ಸಾಹಜನಕ. ಅಭಿಷಿಕ್ತರಲ್ಲಿ ಉಳಿದಿರುವವರು ಹೆಚ್ಚು ವೃದ್ಧರಾಗುತ್ತಿರುವುದರಿಂದ ಜವಾಬ್ದಾರಿ ಹೊರಲು ಕಡಿಮೆ ಸಮರ್ಥರಾಗಿರುತ್ತಾರೆ. ರಾಜನ ಈ ಸಹೋದರರು ಬೇರೆ ಕುರಿವರ್ಗದ ಆತ್ಮಿಕ ಯೋಗ್ಯತೆಗಳುಳ್ಳ ಹಿರಿಯರೂ ಶುಶ್ರೂಷಾ ಸೇವಕರೂ ಕೊಡುವ ಪ್ರೀತಿಪೂರ್ವಕವಾಗಿ ಸಂಘಟನಾ ಸಹಾಯವನ್ನು ಸ್ವಾಗತಿಸುತ್ತಾರೆ. ಅತಿ ಶೀಘ್ರವೇ, ಮಹಾ ಬಾಬೆಲನ್ನು ಭೂರಂಗದಿಂದ ತೆಗೆದುಬಿಡಲಾಗುವುದು. ಬಳಿಕ ಪ್ರಕಟನೆ 19:1-8ಸೂಚಿಸುವಂತೆ ಪೂರ್ತಿ 144,000 ಮಂದಿಯಿರುವ ಮದಲಗಿತ್ತಿಯೊಂದಿಗೆ ಕುರಿಮರಿಯ ವಿವಾಹವು ಸ್ವರ್ಗದಲ್ಲಿ ಪರಿಪೂರ್ಣಗೊಳ್ಳುವುದು. ಮತ್ತು ನೂತನ ಆಕಾಶದ ಕೆಳಗೆ ನೂತನ ಭೂಮಿಯಂತೆ ವರ್ತಿಸುವ ಬೇರೆ ಕುರಿಗಳು ಅರಸನ ಪ್ರತಿನಿಧಿಗಳಾಗಿ ಇಡೀ ಭೂಮಿ ಯೆಹೋವನ ಸ್ತುತಿಗಾಗಿ ಜನನಿವಾಸವಾಗುವ ತನಕ ಜೀರ್ಣೋದ್ಧಾರದ ಮಹಾ ಕೆಲಸವನ್ನು ಮುಂದುವರಿಸುವರು.—ಯೆಶಾಯ 65:17; ಇದಕ್ಕೆ ಯೆಶಾಯ 61:4-6 ಹೋಲಿಸಿ.
15. ಸಹಸ್ರ ವರ್ಷದಾಳಿಕೆಯಲ್ಲಿಮಹಾ ಸಮೂಹದವರು ಯಾವ ಪ್ರತೀಕ್ಷೆಯನ್ನು ಎದುರುನೋಡುತ್ತಾರೆ?
15 ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ, ಪ್ರಾಯಶ್ಚಿತ್ತ ಕೊಡಲ್ಪಟ್ಟ ಮಾನವ ಕುಲವು ಎಬ್ಬಿಸಲ್ಪಡುವಾಗ ಪಾರಾಗಿರುವ ಮಹಾ ಸಮೂಹವು ದೊಡ್ಡ ಮತ್ತು ಅತ್ಯಂತ ಘನತೆಯ ಸುಯೋಗಗಳನ್ನು ಅನುಭವಿಸುವುದು. ಅವರು ಆಗ ಅರಸನ ಪುತ್ರ ಪುತ್ರಿಯರಾಗುವರು. ಅವರ ಮಧ್ಯೆ ಇರುವ ಇಂಥ ಪುತ್ರರಿಗೆ ರಾಜ ದಾವೀದನ ಪುತ್ರರು ಹೇಗೆ ವಿವಿಧ ಜವಾಬ್ದಾರಿಕೆಗಳಿದ್ದ ರಾಜಕುಮಾರರಾಗಿದ್ದರೋ ಹಾಗೆಯೋ ರಾಜಕುಮಾರರ ಸ್ಥಾನ ದೊರೆಯುವ ಸಾಧ್ಯತೆಯಿರುವುದು.a ಇದು, ಯೆಹೋವನ ಅಭಿಷಿಕ್ತ “ಅರಸ”ನನ್ನುದ್ದೇಶಿಸಿ ರಚಿಸಲಾಗಿದೆಯೋ ಆ 45ನೇ ಕೀರ್ತನೆಯ ಜ್ಞಾಪಕವನ್ನು ನಮಗೆ ಹುಟ್ಟಿಸುತ್ತದೆ.
16. ಕೀರ್ತನೆ 45 ನಿಜವಾಗಿಯೂ ಯಾರಿಗೆ ಸಂಭೋದಿಸಲ್ಪಟ್ಟಿದೆ, ಮತ್ತು ಇದನ್ನು ಹೇಗೆ ರುಜುಪಡಿಸ ಸಾಧ್ಯವಿದೆ?
16 ಕೀರ್ತನೆ 45 ನಿಜವಾಗಿಯೂ ಯಾವ ಅರಸನನ್ನು ಸಂಬೋಧಿಸುತ್ತದೆ? ಯೇಸು ಕ್ರಿಸ್ತನನ್ನೇ! ಇಬ್ರಿಯ 1:9, ಕೀರ್ತನೆ 45:7 ನ್ನು ಉಲ್ಲೀಖಿಸುತ್ತಾ ಹಾಗೆ ಅನ್ವಯ ಮಾಡುತ್ತದೆ. ಅಲ್ಲಿ ನಾವು ಓದುವುದು: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.” ಹೀಗೆ, ಕೀರ್ತನೆ 45:16 ನಿಜವಾಗಿಯೂ ಯೇಸು ಕ್ರಿಸ್ತನಿಗೆ, “ವಂಶಪಾರಂಪರ್ಯವಾಗಿ ಬಂದ ಸ್ಥಾನದಲ್ಲಿರುವುದಕ್ಕೆ ನಿನಗೆ ಮಕ್ಕಳು [ಪುತ್ರರು] ಹುಟ್ಟುವರು, ಅವರನ್ನು ದೇಶದಲ್ಲಿಲ್ಲಾ [ಭೂಮಿಯಲ್ಲಿಲ್ಲಾ] ಅಧಿಕಾರಿ [ರಾಜಕುಮಾರ]ಗಳನ್ನಾಗಿ ನೇಮಿಸುವಿ.
17. ರಾಜ ಯೇಸು ಕ್ರಿಸ್ತನು ಪ್ರತ್ಯೇಕವಾಗಿ ಯಾವುದರಲ್ಲಿ ಮತ್ತು ಯಾರಲ್ಲಿ ಅಸಕ್ತಿ ಉಳ್ಳವನಾಗಿದ್ದನೆ?
17 ನ್ಯಾಯವಾಗಿಯೇ, ಯೇಸು ತನ್ನ ಐಹಿಕ ಗತ ಇತಿಹಾಸಕ್ಕಿಂತ ರಾಜನಾಗಿ ಆಳುವ ತನ್ನ ಭವಿಷ್ಯತ್ತಿನಲ್ಲಿ ಹೆಚ್ಚು ಆಸಕ್ತಿ ಉಳ್ಳವನಾಗಿದ್ದಾನೆ. ಅವನು ತನ್ನ ಹಿಂದಿನ ವಿಷಯಗಳನ್ನು, ವಿಶೇಷವಾಗಿ, ಅಬ್ರಹಾಮನ ಸಂತಾನದ ಮೂಲಕ ಸರ್ವ ಕುಟುಂಬಗಳನ್ನು ಆಶೀರ್ವದಿಸುವ ಯೆಹೋವನ ವಾಗ್ದಾನದಲ್ಲಿ ಸೇರಿರುವ ಮಾನವ ಪಿತೃಗಳನ್ನು ಮರೆಯುವದಿಲ್ಲವೆಂಬದು ನಿಜ. ಆದರೆ ಈಗ ಅವನ ಮುಖ್ಯ ಆಸಕ್ತಿ ರಾಜಪ್ರತಿಷ್ಟಾಪಕನಾದ ಯೆಹೋವ ದೇವರು ಉದ್ದೇಶಿಸಿರುವ ಸಮೀಪ ಭವಿಷ್ಯದ ಮೇಲಿದೆ. ಹೀಗೆ ಯೆಸುವಿನ ಐಹಿಕ ಮಕ್ಕಳು, ವಿಶೇಷವಾಗಿ ಅವರಲ್ಲಿ ತನ್ನ ಕೆಳಗೆ ಪ್ರಭುಗಳ ಸ್ಥಾನದಲ್ಲಿ ಸೇವೆಮಾಡಲು ಅರ್ಹತೆಯುಳ್ಳ ಪುತ್ರರು ಅವನ ಐಹಿಕ ಪಿತೃಗಳಿಗಿಂತ ಹೆಚ್ಚು ಆಸಕ್ತಿಗೆ ಗುರಿಯಾಗುವರು.
18. ಕೀರ್ತನೆ 45:16 ರ ಕೆಲವು ಭಾಷಾಂತರಗಳು ತನ್ನ ಐಹಿಕ ಪಿತೃಗಳಿಗಿಂತ ಯೇಸುವಿಗೆ ತನ್ನ ಪ್ರಭುಪುತ್ರರಲ್ಲಿ ಹೆಚ್ಚು ಆಸಕ್ತಿ ಇದೆಂದು ಹೇಗೆ ಒತ್ತಿಹೇಳುತ್ತವೆ?
18 ತನ್ನ ಪಿತೃಗಳಿಗಿಂತ ಹೆಚ್ಚಾಗಿ ತನ್ನ ಪ್ರಭು ಪುತ್ರರಲ್ಲಿ ಯೇಸುವಿಗಿರುವ ಆಸಕ್ತಿಯನ್ನು ವಿವಿಧ ಭಾಷಾಂತರಗಳು ಒತ್ತಿಹೇಳುತ್ತವೆ. ಅವುಗಳಲ್ಲಿ ಕೆಲವು ಕೀರ್ತನೆ 45:16ನ್ನು ಹೀಗೆ ಭಾಷಾಂತರಿಸುತ್ತದೆ: “ನಿನ್ನ ಪುತ್ರರು ನಿನ್ನ ತಂದೆಗಳ ಸ್ಥಾನಕ್ಕೆ ಬಂದು ದೇಶದಲ್ಲಿಲ್ಲಾ ಪ್ರಭುಗಳಾಗುವ ಹುದ್ದೆಗೆ ಏರುವರು.” (ಮೋಫೆಟ್) “ನಿನ್ನ ತಂದೆಗಳ ಸ್ಥಾನ ನಿನ್ನ ಪುತ್ರರದ್ದಾಗುತ್ತದೆ. ಅವರನ್ನು ನೀನು ದೇಶದಲ್ಲಿಲ್ಲಾ ಪ್ರಭುಗಳನ್ನಾಗಿ ಮಾಡುವಿ.” (17ನೇ ವಚನ, ದ ನ್ಯೂ ಅಮೇರಿಕನ್ ಬೈಬಲ್) “ನಿನ್ನ ತಂದೆಗಳ ಸ್ಥಾನದಲ್ಲಿ ಮಕ್ಕಳು ನಿನಗೆ ಹುಟ್ಟುವರು. ಅವರನ್ನು ನೀನು ಭೂಮಿಯಲ್ಲಿಲ್ಲಾ ಪ್ರಭುಗಳನ್ನಾಗಿ ಮಾಡುವು.”—ಸ್ಯಾಮುವೆಲ್ ಬ್ಯಾಗ್ಸ್ಟರ್ ಎಂಡ್ ಸನ್ಸ್ ಪ್ರಕಟಿಸಿದ ಸೆಪ್ಟುವಜಿಂಟ್ ವರ್ಶನ್.
19. ಮಹಾ ಸಮೂಹದಲ್ಲಿ ಕೆಲವು ಪುರುಷರಿಗೆ ಈಗ ಯಾವ ಸಭಾ ಜವಾಬ್ದಾರಿಕೆ ಇದೆ, ಮತ್ತು ಅವರನ್ನು ರಾಜ ಯೇಸು ಕ್ರಿಸ್ತನು ತನ್ನ ಸಹಸ್ರ ವರ್ಷದಾಳಿಕೆಯಲ್ಲಿ ಯಾವ ಸ್ಥಾನಕ್ಕೆ ನೇಮಿಸಬಹುದು?
19 ನಮಗೆ ಮಹಾ ಸಂತೋಷವನ್ನು ಮಾಡುವ ವಿಷಯವೇನೆಂದರೆ ಈ ಭಾವೀ ಪ್ರಭುಗಳು ನಮ್ಮ ಮಧ್ಯದಲ್ಲೀ ಇರುವದೇ. ಇವರು ಉತ್ತಮ ಕುರುಬನಾದ ಯೇಸು ಕ್ರಿಸ್ತನ ಸ್ವರಕ್ಕೆ ಕಿವಿಗೊಡುವ ಬೇರೆ ಕುರಿಗಳಲ್ಲೀ ಇದ್ದಾರೆ. ಇವರು ಆ ಸ್ವರಕ್ಕೆ ವಿಶೇಷವಾಗಿ 1935 ರಿಂದ ಕಿವಿಗೊಡುತ್ತಿದ್ದಾರೆ. ಆಗ ವಾಷಿಂಗ್ಟನ್ ಡಿ.ಸಿ. ಸಮ್ಮೇಲನವೊಂದರಲ್ಲಿ ಪ್ರಕಟನೆ 7:9-17 ರ ಅರ್ಥ ವಿವರಿಸಲಾಯಿತು. ಇಂದು ಆ ಬೇರೆ ಕುರಿಗಳ ಮಹಾ ಸಮೂಹದಲ್ಲಿ ಸಾವಿರಾರು ಜನರು ಲೋಕವ್ಯಾಪಕವಾಗಿ 212 ದೇಶಗಳಲ್ಲಿ ಯೆಹೋವನ ಸಾಕ್ಷಿಗಳ 60 ಸಾವಿರಕ್ಕೂ ಹೆಚ್ಚು ಸಭೆಗಳಲ್ಲಿ ಹಿರಿಯರು ಅಥವಾ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿದ್ದಾರೆ. ಇನ್ನೂ ಭೂಮಿಯಲ್ಲಿರುವ ಯೇಸುವಿನ ಆತ್ಮಿಕ ಸಹೋದರರಲ್ಲಿ ಉಳಿಕೆಯವರೊಂದಿಗೆ ಸಂಘಟನೆಯಾಗಿರುವ ಮೂಲಕ ಈ ಪುರುಷರು, ರಾಜ ಯೇಸು ಕ್ರಿಸ್ತನು ವಾಗ್ದಾನಿಸಿದ ನೂತನ ಭೂಮಿಯ ಮೇಲೆ ಒಂದು ಸಹಸ್ರ ವರ್ಷಕಾಲ ಆಳುವಾಗ ಅವನ ಪೂರ್ತಿ ಸ್ವೀಕಾರಾರ್ಹವಾದ ಐಹಿಕ ಪುತ್ರರಾಗುವ ಸ್ಥಾನದಲ್ಲಿದ್ದಾರೆ. (2 ಪೇತ್ರ 3:13) ಈ ಸ್ಥಿತಿಗತಿಯಲ್ಲಿ, ನೂತನ ಭೂಮಿಯಲ್ಲಿ ಪ್ರಭುಗಳಾಗಿ ಸೇವೆಮಾಡಲು ಅವರನ್ನು ನೇಮಿಸಲಾಗಬಹುದು.
20. (ಎ) ಭೂಮಿಯ ಮೇಲೆ ತನ್ನಿಂದ ನೇಮಕ ಹೊಂದಿದವರ ಕಡೆಗೆ ರಾಜನಿಗೆ ಯಾವ ಮನೋಭಾವವಿರುವುದು? (ಬಿ) ಮಹಾ ಸಮೂಹದವರು ಯಾರನ್ನು ಹಿಂದೆ ಸ್ವಾಗತಿಸುವರು, ಮತ್ತು ಹಾಗೆ ಹಿಂದಿರುಗುವವರ ಮುಂದೆ ಯಾವ ಸುಸಂಬರ್ಭವಿರುವುದು?
20 ಅರಸನಾದ ಯೇಸು ಕ್ರಿಸ್ತನು ಯೆಹೋವನ ಇಂದಿನ ದಿನಗಳ ಸಭೆಗಳಲ್ಲಿರುವ ನಂಬಿಗಸ್ತ ಬೇಗೆ ಕುರಿಗಳ ಮೇಲ್ವಿಚಾರಕತ್ವವನ್ನು ಒಪ್ಪುವಂತೆಯೇ ಹೊಸತಾಗಿ ನೇಮಿಸಲ್ಪಡುವ ಪ್ರಭುಗಳನ್ನೂ ಒಪ್ಪಲು ಸಂತೋಷಿಸುವನು. ಬೇರೆ ಕುರಿಗಳ ಮಹಾ ಸಮೂಹದ ಎಲ್ಲಾ ಸದಸ್ಯರಿಗೆ ಅಂದರೆ ಸ್ತ್ರೀಯರಿಗೂ ಪುರುಷರಿಗೂ ಯೇಸುವಿನ ಸ್ವರವನ್ನು ಕೇಳಿ ಭೂವ್ಯಾಪಕ ಪ್ರಮೋದವನವಾಗಿ ರೂಪಾಂತರಗೊಳ್ಳುವ ಶುಚಿಗೊಳಿಸಲ್ಪಟ್ಟ ಭೂಮಿಯಲ್ಲಿ ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವ ಪಡೆಯುವ ಸುಸಂದರ್ಭವುಳ್ಳ ಮಾನವ ಮೃತರೆಲ್ಲವನ್ನು ಹಿಂದೆ ಸ್ವಾಗತಿಸುವ ರೋಮಾಂಚಕ ಸುಯೋಗವಿರುವುದು. (ಯೋಹಾನ 5:28, 29) ಪುನರುತ್ಥಾನ ಹೊಂದುವ ಈ ಮಹಾ ಅನುಗ್ರಹ ಪಾತ್ರರಲ್ಲಿ “ಶ್ರೇಷ್ಟ ಪುನರುತ್ಥಾನ” ವನ್ನು ಪಡೆಯುವ ಸಲುವಾಗಿ, ಮರಣದ ಎದುರಲ್ಲೂ ಯೆಹೋವ ದೇವರಿಗೆ ಸಂಪೂರ್ಣ ಭಕ್ತಿಯನ್ನು ತೋರಿಸಲು ಇಷ್ಟಪಟ್ಟ ಪುರುಷರಾದ ಯೇಸು ಕ್ರಿಸ್ತನ ವಿಮೋಚಿತ ಪಿತೃಗಳೂ ಸೇರಿರುವರು. (ಇಬ್ರಿಯ 11:35) ಆದರೆ ತಮ್ಮ ವಿಮೋಚಕ ರಾಜನಾದ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಪರಿಪೂರ್ಣ ಮಾನವ ಜೀವನಕ್ಕೆ ಏರಿಸಲ್ಪಡುವದು ಕೇವಲ ಆರಂಭ. ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ ಪರಿಪೂರ್ಣ ಮಾನವಕುಲದ ಮೇಲೆ ಬರುವ ಅಂತಿಮ ಪರೀಕ್ಷೆಯಲ್ಲಿ ಯೆಹೋವ ದೇವರಿಗೆ ಅಧೀನರಾಗಿ ಮುರಿಯಲಾಗದ ರೀತಿಯಲ್ಲಿ ಸಂಘಟಿತರಾಗುವುದರಿಂದ ಯೆಹೋವನ ವಿಶ್ವ ಸಂಘಟನೆಯ ಐಹಿಕ ಭಾಗವಾಗಿ ಪ್ರಮೋದವನದಲ್ಲಿ ಅನಂತ ಜೀವನಕ್ಕೆ ತಾವು ನ್ಯಾಯವಾಗಿಯೂ ಅರ್ಹರೆಂದು ಅವರು ತೋರಿಸಿಕೊಡುವರು.—ಮತ್ತಾಯ 25:31-46, ಪ್ರಕಟನೆ 20:1-21:1. (w89 9/1
[ಅಧ್ಯಯನ ಪ್ರಶ್ನೆಗಳು]
a ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್ ಪಾದಟಿಪ್ಪಣಿಯಲ್ಲಿ 2 ಸಮುವೇಲ 8:18 ಹೋಲಿಸಿ.
ನೀವು ಹೇಗೆ ಉತ್ತರ ಕೊಡುವಿರಿ?
◻ ಸರ್ವ ಮಾನವ ಕುಲವನ್ನು ಆಶೀರ್ವದಿಸಲಿಕ್ಕಾಗಿ ಯೆಹೋವನು ಯಾವ ಸಮಯಾವಧಿಯನ್ನು ಬದಿಗಿಟ್ಟಿದ್ದಾನೆ?
◻ ಪರಸ್ಪರವಾಗಿ ಯಾವ ಸಂಬಂಧದಲ್ಲಿರುವುದರಿಂದ ಮಾತ್ರ ನಾವು ಮಹಾ ಸಂಕಟವನ್ನು ಪಾರಾಗಬಲ್ಲಿವು?
◻ ಲೋಕಾಧಿಯಿಂದ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುವುದು ಕುರಿಗಳಿಗೆ ಯಾವ ಅರ್ಥದಲ್ಲಿರುವುದು?
◻ ಸಹಸ್ರ ವರ್ಷದಾಳಿಕೆಯಲ್ಲಿ ಮಹಾ ಸಮೂಹದವರು ಯಾವ ಸುಯೋಗಗಳಲ್ಲಿ ಪಾಲಿಗರಾಗಬಹುದು?