-
‘ದೇವರನ್ನು ಅನುಸರಿಸಿರಿ’ಕಾವಲಿನಬುರುಜು—2009 | ಜನವರಿ 1
-
-
“ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ” ಎಂದು ದೇವರ ವಾಕ್ಯವು ನಿಜ ಕ್ರೈಸ್ತರನ್ನು ಉತ್ತೇಜಿಸುತ್ತದೆ. (ಎಫೆಸ 5:1) ಈ ಮಾತುಗಳು ದೇವರಿಗೆ ತನ್ನ ಆರಾಧಕರ ಮೇಲಿರುವ ಭರವಸೆಯ ಗಮನಾರ್ಹ ಅಭಿವ್ಯಕ್ತಿಗಳಾಗಿವೆ! ಹೇಗೆ? ಯೆಹೋವ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ಉಂಟುಮಾಡಿದನು. (ಆದಿಕಾಂಡ 1:26, 27) ಹೀಗೆ ತನ್ನಲ್ಲಿರುವ ಗುಣಗಳನ್ನು ಮಾನವರು ಪ್ರತಿಬಿಂಬಿಸುವ ರೀತಿಯಲ್ಲಿ ದೇವರು ಅವರನ್ನು ಸೃಷ್ಟಿಸಿದನು.a ಆದುದರಿಂದ ‘ದೇವರನ್ನು ಅನುಸರಿಸುವವರಾಗಿರಿ’ ಎಂದು ಕ್ರೈಸ್ತರನ್ನು ಬೈಬಲ್ ಉತ್ತೇಜಿಸುವಾಗ, ಯೆಹೋವನು ತಾನೇ ಅವರಿಗೆ ಹೀಗನ್ನುವಂತಿದೆ: “ಮಗನೇ, ನಿನ್ನ ಮೇಲೆ ನನಗೆ ನಂಬಿಕೆಯಿದೆ. ನಿನ್ನಲ್ಲಿ ಕುಂದುಕೊರತೆಗಳಿವೆ ಎಂದೂ ಗೊತ್ತು. ಆದರೂ ನನ್ನಲ್ಲಿರುವಂಥ ಗುಣಗಳನ್ನು ನಿರ್ದಿಷ್ಟ ಮಟ್ಟಿಗೆ ಬೆಳೆಸಿಕೊಳ್ಳಲು ನಿನ್ನಿಂದ ಸಾಧ್ಯವೆಂದು ನಾನು ಬಲ್ಲೆ.”
-
-
‘ದೇವರನ್ನು ಅನುಸರಿಸಿರಿ’ಕಾವಲಿನಬುರುಜು—2009 | ಜನವರಿ 1
-
-
a ಮನುಷ್ಯರು ದೇವರ ಹೋಲಿಕೆಯ ಮೇರೆಗೆ ಸೃಷ್ಟಿಮಾಡಲ್ಪಟ್ಟದ್ದು ವ್ಯಕ್ತಿತ್ವ-ಸ್ವಭಾವಗಳ ಸಂಬಂಧದಲ್ಲಿ ಎಂಬದಾಗಿ ಕೊಲೊಸ್ಸೆ 3:9, 10 ಸೂಚಿಸುತ್ತದೆ. ದೇವರನ್ನು ಮೆಚ್ಚಿಸಬಯಸುವವರು “ನೂತನಸ್ವಭಾವವನ್ನು” ಧರಿಸಿಕೊಳ್ಳುವಂತೆ ಈ ವಚನದಲ್ಲಿ ಉತ್ತೇಜಿಸಲಾಗಿದೆ. ಆ ಸ್ವಭಾವವು “ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ” ಬರುತ್ತದೆ.
-