ರಕ್ತದಿಂದ ಜೀವವನ್ನು ರಕ್ಷಿಸುವುದು—ಹೇಗೆ?
“ಜೀವವನ್ನು ಆದುಕೊಳ್ಳಿರಿ. . . [ದೇವರ] ಮಾತಿಗೆ ವಿಧೇಯರಾಗಿರಿ. . . . ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.”—ಧರ್ಮೋಪದೇಶಕಾಂಡ 30:19, 20.
1. ಜೀವಕ್ಕಾಗಿ ಗೌರವದಲ್ಲಿ ನಿಜ ಕ್ರೈಸ್ತರು ಹೇಗೆ ಅಸದೃಶ್ಯರಾಗಿದ್ದಾರೆ?
ಹೆಚ್ಚಿನ ಜನರು ತಾವು ಜೀವವನ್ನು ಗೌರವಿಸುತ್ತೇವೆಂದು ಹೇಳುತ್ತಾರೆ, ಮರಣದಂಡನೆ, ಗರ್ಭಪಾತ, ಅಥವಾ ಬೇಟೆಯ ಕುರಿತಾದ ತಮ್ಮ ವೀಕ್ಷಣೆಯಿಂದ ಅದಕ್ಕೆ ರುಜುವಾತು ಕೊಡುತ್ತಾರೆ. ಆದರೂ, ನಿಜ ಕ್ರೈಸ್ತರು ಜೀವಕ್ಕಾಗಿ ಗೌರವವನ್ನು ತೋರಿಸುವ ಒಂದು ವಿಶೇಷ ಮಾರ್ಗವು ಇದೆ. ಕೀರ್ತನೆ 36:9 ಹೇಳುವದು: “ನಿನ್ನ [ದೇವರ] ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” ಜೀವವು ದೇವರ ವರದಾನವಾಗಿರುವುದರಿಂದ, ಜೀವರಕ್ತದ ಬಗ್ಗೆ ಆತನ ನೋಟವನ್ನು ಕ್ರೈಸ್ತರು ಸ್ವೀಕರಿಸುತ್ತಾರೆ.
2, 3. ರಕ್ತದ ಸಂಬಂಧದಲ್ಲಿ ನಾವು ದೇವರನ್ನು ಏಕೆ ಪರಿಗಣನೆಗೆ ತರಬೇಕು? (ಅಪೊಸ್ತಲರ ಕೃತ್ಯಗಳು 17:25, 28)
2 ನಮ್ಮ ಜೀವವು ರಕ್ತದ ಮೇಲೆ ಆಧರಿಸಿದೆ, ಅದು ಆಮ್ಲಜನಕವನ್ನು ನಮ್ಮ ಇಡಿ ದೇಹಕ್ಕೆ ಒಯ್ಯುತ್ತದೆ, ಅಂಗಾರಾಮ್ಲವನ್ನು ಹೊರಗೆ ಹಾಕುತ್ತದೆ, ತಾಪಮಾನಗಳಿಗೆ ನಾವು ಹೊಂದಿಸಿಕೊಳ್ಳುವಂತೆ ಮಾಡುತ್ತದೆ, ರೋಗಗಳ ವಿರುದ್ಧವಾಗಿ ಹೋರಾಡುವಂತೆ ಸಹಾಯ ಮಾಡುತ್ತದೆ. ನಮಗೆ ಜೀವವನ್ನು ಒದಗಿಸಿದಾತನು ರಕ್ತವೆಂದು ಕರೆಯಲ್ಪಡುವ ಆಶ್ಚರ್ಯಕರವಾದ, ಜೀವ-ಪೋಷಕ ದ್ರವ ಅಂಗಾಂಶವನ್ನೂ ಒದಗಿಸಿಕೊಟ್ಟಿರುತ್ತಾನೆ. ಮಾನವ ಜೀವವನ್ನು ಕಾಪಾಡಿ ಉಳಿಸುವುದರಲ್ಲಿ ಆತನಿಗಿರುವ ಹಿತಾಸಕ್ತಿಯನ್ನು ಇದು ಪ್ರತಿನಿಧಿಸುತ್ತದೆ.—ಆದಿಕಾಂಡ 45:5; ಧರ್ಮೋಪದೇಶಕಾಂಡ 28:66; 30:15, 16.
3 ಕ್ರೈಸ್ತರು ಮತ್ತು ಸಾಮಾನ್ಯ ಜನತೆ ಇಬ್ಬರೂ ತಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ರಕ್ತವು ಅದರ ಸಹಜವಾದ ಕಾರ್ಯಗತಿಯ ಮೂಲಕ ಮಾತ್ರವೇ ನನ್ನ ಜೀವವನ್ನು ರಕ್ಷಿಸಬಲ್ಲದೊ ಅಥವಾ ಒಂದು ಹೆಚ್ಚು ಘನಭರಿತ ರೀತಿಯಲ್ಲಿ ರಕ್ತವು ಜೀವವನ್ನು ರಕ್ಷಿಸಬಹುದೊ?’ ಹೆಚ್ಚಿನ ಜನರು ಜೀವ ಮತ್ತು ರಕ್ತದ ಸಹಜ ಕಾರ್ಯಗತಿಯ ನಡುವಣ ಸಂಬಂಧವನ್ನು ಮನಗಾಣುತ್ತಾರಾದರೂ, ಕಾರ್ಯಥಃ ಅದರಲ್ಲಿ ಹೆಚ್ಚಿನದ್ದು ಒಳಗೂಡಿದೆ. ಕ್ರೈಸ್ತರ, ಮುಸಲ್ಮಾನರ ಮತ್ತು ಯೆಹೂದ್ಯರ ನೀತಿಶಾಸ್ತ್ರಗಳೆಲ್ಲವೂ ಜೀವ ಮತ್ತು ರಕ್ತದ ಕುರಿತು ತನ್ನಭಿಪ್ರಾಯವನ್ನು ತಿಳಿಸಿರುವ ಒಬ್ಬ ಜೀವದಾತನ ಮೇಲೆ ಗಮನವನ್ನು ಕೇಂದ್ರೀಕರಿಸಿವೆ. ಹೌದು, ನಮ್ಮ ನಿರ್ಮಾಣಿಕನಿಗೆ ರಕ್ತದ ಕುರಿತು ಹೆಚ್ಚನ್ನು ಹೇಳಲಿಕ್ಕಿದೆ.
ರಕ್ತದ ಕುರಿತು ಆತನ ನೋಟ
4. ಮಾನವ ಇತಿಹಾಸದ ಆರಂಭದಲ್ಲೇ ದೇವರು ರಕ್ತದ ಕುರಿತು ಏನಂದಿದ್ದನು?
4 ದೇವರ ವಾಕ್ಯವಾದ ಬೈಬಲಿನಲ್ಲಿ 400ಕ್ಕಿಂತಲೂ ಹೆಚ್ಚು ಸಲ ರಕ್ತವು ತಿಳಿಸಲ್ಪಟ್ಟಿದೆ. ಅದರಲ್ಲಿ ಅತ್ಯಾರಂಭದ್ದು ಯೆಹೋವನ ಈ ಆಜ್ಞೆಯು: “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳು ನಿಮಗೆ ಆಹಾರವಾಗಿರುವವು. . . . ಆದರೆ ಜೀವರಕ್ತವು ಇನ್ನೂ ಇರುವ ಮಾಂಸವನ್ನು ನೀವು ತಿನ್ನಬಾರದು.” ಆತನು ಮತ್ತೂ ಹೇಳಿದ್ದು: “ನಿಮ್ಮ ಜೀವರಕ್ತಕ್ಕಾಗಿ ನಾನು ನಿಶ್ಚಯವಾಗಿಯೂ ಲೆಕ್ಕವನ್ನು ಕೇಳುವೆನು.” (ಆದಿಕಾಂಡ 9:3-5, ನ್ಯೂ ಇಂಟರ್ನೇಶನಲ್ ವರ್ಷನ್) ಯೆಹೋವನು ಇದನ್ನು ಮಾನವ ಕುಲದ ಮೂಲಜನಕನಾದ ನೋಹನಿಗೆ ನುಡಿದಿದ್ದನು. ಆದಕಾರಣ, ರಕ್ತವು ಜೀವವನ್ನು ಪ್ರತಿನಿಧಿಸುತ್ತದೆ ಎಂಬ ನಿರ್ಮಾಣಿಕನ ನೋಟವನ್ನು ಮಾನವರೆಲ್ಲರೂ ತಿಳಿಯುವಂಥಾಯಿತು. ಆದ್ದರಿಂದ ದೇವರನ್ನು ಜೀವದಾತನೆಂದು ಅಂಗೀಕರಿಸುವ ಪ್ರತಿಯೊಬ್ಬನು ಹೀಗೆ ಜೀವರಕ್ತದ ಉಪಯೋಗದ ಕುರಿತು ಆತನ ದೃಢ ನಿಲುವನ್ನು ಅಂಗೀಕರಿಸಲೇ ಬೇಕು.
5. ಇಸ್ರಾಯೇಲ್ಯರು ರಕ್ತವನ್ನು ತಕ್ಕೊಳ್ಳದಿದ್ದ ಪ್ರಧಾನ ಕಾರಣವು ಯಾವುದು?
5 ದೇವರು ಪುನಃ ರಕ್ತದ ಕುರಿತು ತಿಳಿಸಿದ್ದು ಇಸ್ರಾಯೇಲ್ಯರಿಗೆ ನೇಮ ವಿಧಿಗಳನ್ನು ಕೊಟ್ಟಾಗ. ಯಾಜಕಕಾಂಡ 17:10, 11, ಜ್ಯೂವಿಷ್ ತನಾಕ ತರ್ಜುಮೆಗನುಸಾರ ಹೀಗೆ ಓದುತ್ತದೆ: “ಇಸ್ರಾಯೇಲ್ಯ ಮನೆತನದಲ್ಲಾಗಲಿ ಅವರ ನಡುವೆ ಇಳುಕೊಂಡಿರುವ ಅಪರಿಚಿತರಲ್ಲಾಗಲಿ ಯಾವನಾದರೂ ಯಾವುದೇ ರಕ್ತವನ್ನು ಸೇವಿಸಿದ್ದಲ್ಲಿ, ಆ ರಕ್ತ ಸೇವನೆ ಮಾಡಿದವನ ಮೇಲೆ ಉಗ್ರ ಕೋಪವನ್ನು ತೋರಿಸಿ ಅವನನ್ನು ಕುಲದಿಂದ ತೆಗೆದು ಹಾಕುವೆನು. ಯಾಕೆಂದರೆ ಮಾಂಸದ ಜೀವವು ರಕ್ತದಲ್ಲಿದೆ.” ಆ ನಿಯಮದಲ್ಲಿ ಆರೋಗ್ಯ ಹಿತವಿದಿರ್ದಬಹುದು, ಆದರೆ ಅದಕ್ಕಿಂತಲೂ ಹೆಚ್ಚು ಒಳಗೂಡಿತ್ತು. ರಕ್ತವನ್ನು ವಿಶೇಷತೆಯಿಂದ ಉಪಚರಿಸುವ ಮೂಲಕ ಇಸ್ರಾಯೇಲ್ಯರು ತಾವು ಜೀವಕ್ಕಾಗಿ ದೇವರನ್ನು ಅವಲಂಬಿಸಿದ್ದೇವೆಂದು ತೋರಿಸಿಕೊಡಲಿದ್ದರು. (ಧರ್ಮೋಪದೇಶಕಾಂಡ 30:19, 20) ಹೌದು, ರಕ್ತ ಸೇವಿಸುವುದನ್ನು ಅವರು ವರ್ಜಿಸಬೇಕಿದ್ದ ಪ್ರಧಾನ ಕಾರಣವು, ಅದು ಅನಾರೋಗ್ಯಕರ ಎಂಬದಕ್ಕಾಗಿ ಅಲ್ಲ, ರಕ್ತವು ದೇವರಿಗೆ ವಿಶೇಷ ಅರ್ಥವುಳ್ಳದ್ದಾಗಿದ್ದ ಕಾರಣದಿಂದಲೇ.
6. ರಕ್ತದ ಸಂಬಂಧದಲ್ಲಿ ದೇವರ ನೋಟವನ್ನು ಯೇಸು ಎತ್ತಿಹಿಡಿದಿದನ್ದೆಂದು ನಮಗೆ ನಿಶ್ಚಯತೆಯಿದೆಯೇಕೆ?
6 ಮಾನವ ಜೀವವನ್ನು ರಕ್ತದಿಂದ ರಕ್ಷಿಸುವ ವಿಷಯದಲ್ಲಿ ಕ್ರೈಸ್ತತ್ವವು ಎಲ್ಲಿ ನಿಲ್ಲುತ್ತದೆ? ರಕ್ತವನ್ನು ಉಪಯೋಗಿಸುವ ವಿಷಯದಲ್ಲಿ ತನ್ನ ತಂದೆಯು ಏನಂದಿದ್ದಾನೆಂಬದು ಯೇಸುವಿಗೆ ತಿಳಿದಿತ್ತು. ಯೇಸು “ಯಾವ ತಪ್ಪನ್ನೂ ಮಾಡಲಿಲ್ಲ, [ಮತ್ತು] ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.” ಅಂದರೆ ಅವನು ರಕ್ತದ ಕುರಿತಾದ ನಿಯಮವನ್ನು ಸಹಿತವಾಗಿ, ಧರ್ಮಶಾಸ್ತ್ರವನ್ನು ಪೂರ್ಣವಾಗಿ ಪಾಲಿಸಿದ್ದನು. (1 ಪೇತ್ರ 2:22, ನಾಕ್ಸ್) ಹೀಗೆ ಆತನು ತನ್ನ ಹಿಂಬಾಲಕರಿಗೆ ಒಂದು ಮಾದರಿಯನ್ನು ಇಟ್ಟನು, ಅದರಲ್ಲಿ ಜೀವ ಮತ್ತು ರಕ್ತಕ್ಕಾಗಿ ಗೌರವದ ಒಂದು ಮಾದರಿಯೂ ಸೇರಿತ್ತು.
7, 8. ರಕ್ತದ ಕುರಿತಾದ ದೇವರ ನಿಯಮವು ಕ್ರೈಸ್ತರಿಗೆ ಅನ್ವಯಿಸುತ್ತದೆಂಬದು ಹೇಗೆ ಸ್ಪಷ್ಟ ಮಾಡಲ್ಪಟ್ಟಿತು?
7 ಕ್ರೈಸ್ತರು ಇಸ್ರಾಯೇಲ್ಯರ ಎಲ್ಲಾ ನಿಯಮಗಳನ್ನು ಪಾಲಿಸಬೇಕೊ ಬಾರದೊ ಎಂಬ ವಿಷಯದಲ್ಲಿ ಕ್ರೈಸ್ತ ಆಡಳಿತ ಮಂಡಲಿಯ ಒಂದು ಕೂಟವು ನಿರ್ಣಯಿಸಿದಾಗ ಅನಂತರ ಏನು ಸಂಭವಿಸಿತ್ತೆಂದು ಇತಿಹಾಸವು ನಮಗೆ ತೋರಿಸುತ್ತದೆ. ದೈವಿಕ ಮಾರ್ಗದರ್ಶನೆಯ ಕೆಳಗೆ, ಕ್ರೈಸ್ತರು ಮೋಶೆಯ ನಿಯಮಶಾಸ್ತ್ರವನ್ನೆಲ್ಲಾ ಪಾಲಿಸುವ ಹಂಗಿನಲ್ಲಿಲ್ಲವೆಂದೂ, ಆದರೆ “ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ [ರಕ್ತಬಸಿಯದ ಮಾಂಸ] ಕೊಂದದ್ದನ್ನೂ ವಿಸರ್ಜಿಸುವದು” “ಅವಶ್ಯವೆಂದೂ” ಅವರು ಹೇಳಿದರು. (ಅಪೊಸ್ತಲರ ಕೃತ್ಯಗಳು 15:22-29) ಹೀಗೆ ರಕ್ತದ ವರ್ಜಿಸುವಿಕೆಯು ವಿಗ್ರಹಾರಾಧನೆ ಮತ್ತು ಘೋರ ಅನೈತಿಕತೆಯಷ್ಟೇ ನೈತಿಕ ಮಹತ್ವವುಳ್ಳದ್ದೆಂದು ಅವರು ಸ್ಪಷ್ಟಪಡಿಸಿದರು.a
8 ಆರಂಭದ ಕ್ರೈಸ್ತರು ಆ ದೈವಿಕ ನಿಷೇಧವನ್ನು ಎತ್ತಿಹಿಡಿದು ಪಾಲಿಸಿದರು. ಅದರ ಮೇಲೆ ಹೇಳಿಕೆ ಕೊಡುತ್ತಾ, ಬ್ರಿಟಿಷ್ ಪಂಡಿತ ಜೋಸೆಫ್ ಬೆನ್ಸನ್ ಅಂದದ್ದು: “ನೋಹನಿಗೆ ಮತ್ತು ಅವನ ಸಂತತಿಯವರೆಲ್ಲರಿಗೆ ಕೊಡಲ್ಪಟ್ಟ ಹಾಗೂ ಇಸ್ರಾಯೇಲ್ಯರಿಗೆ ಪುನರುಚ್ಛರಿಸಲ್ಪಟ್ಟ ರಕ್ತ-ಭೋಜನ ನಿಷೇಧವು . . . ಎಂದೂ ರದ್ದು ಮಾಡಲ್ಪಡಲಿಲ್ಲ, ಬದಲಾಗಿ, ಹೊಸ ಒಡಂಬಡಿಕೆಯ ಕೆಳಗೆ ಪುನಃ ದೃಢೀಕರಿಸಲ್ಪಟ್ಟಿತು, ಅಪೊಸ್ತಲರ ಕೃತ್ಯಗಳು XV; ಮತ್ತು ಆ ಮೂಲಕ ಅದೊಂದು ಸಾರ್ವಕಾಲಿಕ ಹಂಗಾಗಿ ಮಾಡಲ್ಪಟ್ಟಿತು.” ಆದರೂ, ಬೈಬಲ್ ರಕ್ತದ ಕುರಿತು ಏನನ್ನುತ್ತದೋ ಅದು, ನೋಹನ ದಿನಗಳಲ್ಲಾಗಲಿ ಅಪೊಸ್ತಲರ ಕಾಲದಲ್ಲಾಗಲಿ ಸ್ಪಷ್ಟವಾಗಿಗಿ ಪ್ರಯೋಗದಲ್ಲಿ ಇದ್ದಿರದ ಆಧುನಿಕ ವೈದ್ಯಕೀಯ ಬಳಕೆಗಳಾದ ರಕ್ತಪೂರಣಗಳೇ ಮುಂತಾದವುಗಳನ್ನು ನಿಷೇಧಿಸುತ್ತದೊ?
ರಕ್ತವು ಔಷಧದಲ್ಲಿ ಯಾ ಔಷಧವಾಗಿ
9. ಪುರಾತನ ಕಾಲದಲ್ಲಿ ರಕ್ತವು ಔಷಧವಾಗಿ, ಕ್ರೈಸ್ತರ ಯಾವ ನಿಲುವಿಗೆ ಪ್ರತಿ ವಿರುದ್ಧದಲ್ಲಿ ಹೇಗೆ ಉಪಯೋಗಿಸಲ್ಪಟ್ಟಿತ್ತು?
9 ರಕ್ತವನ್ನು ಔಷಧವಾಗಿ ಉಪಯೋಗಿಸುವುದು ಒಂದು ಆಧುನಿಕ ಪದ್ಧತಿ ಅಲ್ಲವೆ ಅಲ್ಲ. ರೈ ಟನ್ನಾಹಿಲ್ಲ್ ಬರೆದ ಫ್ಲೆಷ್ ಆ್ಯಂಡ್ ಬ್ಲಡ್ ಪುಸ್ತಕವು, ಸುಮಾರು 2000 ವರ್ಷಗಳಿಂದಲೂ, “ರಕ್ತವು ಕುಷ್ಠರೋಗಕ್ಕೆ ಪ್ರಧಾನ ಚಿಕಿತ್ಸೆಯಾಗಿ” ಐಗುಪ್ತ ಮತ್ತು ಇತರ ದೇಶಗಳಲ್ಲಿ ಎಣಿಸಲ್ಪಟ್ಟಿತ್ತು ಎಂದು ಹೇಳಿದೆ. ಮನುಷ್ಯ ರಕ್ತವನ್ನು ಸೇವಿಸುವ ಮೂಲಕ ಮೂರ್ಛೆರೋಗ ವಾಸಿಯಾಗ ಸಾಧ್ಯವಿದೆ ಎಂದು ರೋಮನರು ನಂಬಿದ್ದರು. ರಕ್ತದ ಈ “ವೈದ್ಯಕೀಯ” ಉಪಯೋಗದ ಕುರಿತು ಟೆರ್ಟುಲ್ಯಯನ್ ಬರೆದಿದ್ದಾನೆ: “ಮಲ್ಲರಂಗದ ಆಟ ಪ್ರದರ್ಶನಗಳಲ್ಲಿ ಆ ಲೋಲುಪ ದಾಹದ ಜನರು . . . ದುಷ್ಟ ಪಾತಕಿಗಳ ಬಿಸಿ ರಕ್ತವನ್ನು ತೆಗೆದು . . . ತಮ್ಮ ಮೂರ್ಛಾರೋಗ ಶಮನಕ್ಕಾಗಿ ಒಯ್ಯುತ್ತಿದ್ದದ್ದನ್ನು ಗಮನಿಸಿರಿ.” ಇದು ಕ್ರೈಸ್ತರು ಏನು ಮಾಡಿದ್ದರೊ ಅದಕ್ಕೆ ಪೂರ್ತ ಪ್ರತಿವಿರುದ್ಧ: “ಪ್ರಾಣಿಗಳ ರಕ್ತವನ್ನು ಸಹಾ ನಾವು ನಮ್ಮ ಊಟದಲ್ಲಿ ಸೇವಿಸುವುದಿಲ್ಲ. . . . ಕ್ರೈಸ್ತರ ವಿಶ್ವಾಸ-ಪರೀಕ್ಷೆಗಳಲ್ಲಿ ರಕ್ತದಿಂದ ತುಂಬಿದ ಮಾಂಸಭಕ್ಷ್ಯಗಳನ್ನು ನೀಡುತ್ತೀರಿ. ಅದು ಅವರಿಗೆ ನ್ಯಾಯಬಾಹಿರವೆಂದು ನಿಮಗೆ ಗೊತ್ತಿದೆ, ನಿಶ್ಚಯ.” ಅದಕ್ಕೆ ಪ್ರತಿಕ್ರಿಯೆಯನ್ನು ಗಮನಿಸಿರಿ: ಜೀವವನ್ನು ಪ್ರತಿನಿಧಿಸಿದ್ದ ರಕ್ತವನ್ನು ಸೇವಿಸುವ ಬದಲಾಗಿ ಆರಂಭದ ಕ್ರೈಸ್ತರು ಸಾಯುವುದಕ್ಕೂ ಸಿದ್ಧರಾಗಿದ್ದರು.—2 ಸಮುವೇಲ 23:15-17.
10, 11. ರಕ್ತದ ಕುರಿತಾದ ದೇವರ ಮಟ್ಟವು ರಕ್ತ ಪೂರಣ ತಕ್ಕೊಳ್ಳುವುದನ್ನು ನಿಷಿದ್ಧವಾಗಿ ಮಾಡುತ್ತದೆಂದು ಏಕೆ ಒಪ್ಪಬಹುದು?
10 ನಿಶ್ಚಯವಾಗಿ ಆ ಕಾಲದಲ್ಲಿ ರಕ್ತ ಪೂರಣಮ್ನ ಮಾಡುತ್ತಿರಲಿಲ್ಲ ಯಾಕೆಂದರೆ ಪೂರಣಗಳೊಂದಿಗೆ ಪ್ರಯೋಗಗಳು 16ನೇ ಶತಕದ ಸುಮಾರಿಗೆ ಆರಂಭಿಸಿದ್ದವು. ಆದರೂ 17ನೆಯ ಶತಮಾನದಲ್ಲಿ, ಯೂನಿವರ್ಸಿಟಿ ಆಫ್ ಕೂಪನ್ಹೆಗನ್ನಲ್ಲಿ ಅಂಗರಚನಾ ಶಾಸ್ತ್ರದ ಪ್ರೊಫೆಸರೊಬ್ಬರು ಆಕ್ಷೇಪಿಸಿದ್ದು: ‘ಅಂತರಿಕ ರೋಗದ ಚಿಕಿತ್ಸೆಗಾಗಿ ಮಾನವ ರಕ್ತದ ಉಪಯೋಗವನ್ನು ಮಾಡುವವರು ಅದನ್ನು ದುರುಪಯೋಗಿಸುತ್ತಾರೆ ಮತ್ತು ಘೋರ ಪಾಪವನ್ನು ಮಾಡುತ್ತಿದ್ದಾರೆ. ನರಭಕ್ಷಕರನ್ನು ನಾವು ಖಂಡಿಸುತ್ತೇವೆ. ಯಾರು ತಮ್ಮ ಗಂಟಲನ್ನು ಮಾನವ ರಕ್ತದಿಂದ ಮಲಿನಗೊಳಿಸುತ್ತಾರೊ ಅವರನ್ನು ನಾವೇಕೆ ಹೇಸಬಾರದು? ತದ್ರೀತಿ ಪರರ ರಕ್ತವನ್ನು, ಕೊಯ್ದ ರಕ್ತನಾಳದ ಮೂಲಕ, ಬಾಯಿಂದ ಅಥವಾ ಪೂರಣ ಉಪಕರಣಗಳ ಮೂಲಕ ತಕ್ಕೊಳ್ಳುವುದೂ ಹೇಸತಕ್ಕ ವಿಷಯ. ಈ ಕಾರ್ಯಗತಿಯ ಕರ್ತೃಗಳು ದೈವಿಕ ನಿಯಮದಿಂದ ಭಯಂಕರರಾಗಿ ನೋಡಲ್ಪಡುತ್ತಾರೆ.’
11 ಹೌದು, ಶತಮಾನಗಳ ಹಿಂದಕ್ಕೂ, ರಕ್ತವನ್ನು ರಕ್ತನಾಡಿಗಳೊಳಗೆ ತಕ್ಕೊಳ್ಳುವುದು ಮತ್ತು ಬಾಯಿಯ ಮೂಲಕ ಸೇವಿಸುವುದು ಈ ಎರಡನ್ನೂ ದೇವರ ನಿಯಮವು ನಿಷೇಧಿಸಿದ್ದು ಜನರಿಗೆ ತಿಳಿದಿತ್ತು. ಇದರ ಮನವರಿಕೆಯು, ಯೆಹೋವನ ಸಾಕ್ಷಿಗಳು ತಕ್ಕೊಳ್ಳುವ ಸ್ಥಾನವು ದೇವರ ನೋಟಕ್ಕೆ ಹೊಂದಿಕೆಯಾದ ಸ್ಥಾನವೆಂಬದಾಗಿ ಹೆಚ್ಚಿನ ಜನರು ತಿಳಿಯುವಂತೆ ಸಹಾಯವಾಗಬಹುದು. ಜೀವವನ್ನು ಅತ್ಯಮೂಲ್ಯವೆಂದು ಎಣಿಸಿ ವೈದ್ಯಕೀಯ ಉಪಚಾರವನ್ನು ಗಣ್ಯಮಾಡುತ್ತಿರುವಾಗಲೂ, ನಿಜ ಕ್ರೈಸ್ತರು ಜೀವವನ್ನು ದೇವರಿಂದ ಬಂದ ವರದಾನವಾಗಿ ಗೌರವಿಸುವುದರಿಂದ, ರಕ್ತವನ್ನು ತಕ್ಕೊಳ್ಳುವ ಮೂಲಕ ಜೀವವನ್ನು ಪೋಷಿಸಿಕೊಳ್ಳಲು ಅವರು ಪ್ರಯತ್ನಿಸುವುದಿಲ್ಲ.—1 ಸಮುವೇಲ 25:29.
ವೈದ್ಯಕೀಯವಾಗಿ ಜೀವರಕ್ಷಕವೆ?
12. ರಕ್ತ ಪೂರಣಗಳ ಕುರಿತು ವಿಚಾರವಂತ ಜನರು ನ್ಯಾಯಸಮ್ಮತವಾಗಿ ಏನನ್ನು ಆಲೋಚಿಸಬಹುದು?
12 ರಕ್ತವು ಜೀವವನ್ನು ರಕ್ಷಿಸುತ್ತದೆಂದು ವರ್ಷಗಳಿಂದ ತಜ್ಞರು ವಾದಿಸಿದ್ದಾರೆ. ತೀರಾ ಹೆಚ್ಚು ರಕ್ತ ನಷ್ಟಪಟ್ಟ ಒಬ್ಬನಿಗೆ ರಕ್ತಪೂರಣ ಕೊಟ್ಟ ಮೂಲಕ ಒಳ್ಳೇದಾಗಿದೆ ಎಂದು ಡಾಕ್ಟರರು ಹೇಳಬಹುದು. ಆದುದರಿಂದ, ‘ಕ್ರೈಸ್ತನ ನಿಲುವು ವೈದ್ಯಕೀಯವಾಗಿ ಎಷ್ಟು ವಿವೇಕದ್ದು ಅಥವಾ ಅವಿವೇಕದ್ದು?’ ಎಂದು ಕೆಲವು ಜನರು ಆಲೋಚಿಸಲೂ ಬಹುದು. ಯಾವುದೇ ಗಂಭೀರ ವೈದ್ಯಕೀಯ ಉಪಚಾರವನ್ನು ಶುರುಮಾಡುವ ಮುಂಚೆ, ಅದರಲ್ಲಿರುವ ಸಂಭಾವ್ಯ ಪ್ರಯೋಜನಗಳು ಮತ್ತು ಕೇಡು ಸಂಭವಿಸುವಿಕೆಗಳೆಷ್ಟು ಎಂಬದನ್ನು ಒಬ್ಬ ವಿಚಾರಪರ ವ್ಯಕ್ತಿಯು ನಿರ್ಣಯಿಸುವನು. ವಾಸ್ತವಾಂಶವೇನಂದರೆ ರಕ್ತಪೂರಣಗಳು ಅನೇಕ ಅಪಾಯಗಳಿಂದ ತುಂಬಿವೆ. ಅವು ಮಾರಕವಾಗಿರಲೂ ಬಲ್ಲವು.
13, 14. (ಎ) ಯಾವ ಕೆಲವು ವಿಧಾನಗಳಲ್ಲಿ ರಕ್ತ ಪೂರಣಗಳು ಅಪಾಯಕರವಾಗಿ ರುಜುವಾಗಿವೆ? (ಬಿ) ಪೋಪರಿಗಾದ ಅನುಭವವು ರಕ್ತದಿಂದ ಆಗಬಲ್ಲ ಆರೋಗ್ಯ ಹಾನಿಗಳನ್ನು ಹೇಗೆ ಚಿತ್ರಿಸುತ್ತದೆ?
13 ಇತ್ತೀಚೆಗೆ ಡಾಕ್ಟರುಗಳಾದ ಎಲ್. ಟಿ. ಗುಡ್ನೊ ಮತ್ತು ಜೆ. ಎಮ್ ಶಕ್ಕ್ ಗಮನಿಸಿದ್ದು: “ರಕ್ತ ಸಂಗ್ರಹವು ನಾವು ಮಾಡ ಶಕ್ತರಾದ ಮಟ್ಟಿಗೆ ಸುರಕ್ಷಿತವಾಗಿದ್ದಾಗ್ಯೂ ರಕ್ತಪೂರಣದಲ್ಲಿ ಯಾವಾಗಲೂ ಅಪಾಯ ಸಂಭವ ಇದೆಯೆಂದು ವೈದ್ಯಕೀಯ ಸಮಾಜಕ್ಕೆ ಬಹಳ ಹಿಂದಿನಿಂದಲೆ ತಿಳಿದದೆ. ಅಡಿಗಡಿಗೆ ಸಂಭವಿಸುವ ರಕ್ತಪೂರಣದ ತೊಡಕು ನಾನ್-ಎ, ನಾನ್-ಬಿ ಹೆಪಟೈಟಿಸ್ (NANBH); ಇತರ ಸಂಭಾವ್ಯ ತೊಡಕುಗಳು ಹೆಪಟೈಟಿಸ್-ಬಿ, ಎಲೊಯಿಇಮ್ಯುನೈಜೇಶನ್, ರಕ್ತಪೂರಣದ ವಿಮುಖಪರಿಣಾಮ, ಸೋಂಕುರಕ್ಷಾ ನಿರೋಧ ಮತ್ತು ಕಬ್ಬಿಣ ಧಾತುವಿನ ಮಿತಿಮೀರಿದ ಹೇರಿಕೆ.” ಆ ಗಂಭೀರ ಅಪಾಯಗಳಲ್ಲಿ ಕೇವಲ ಒಂದನ್ನು ‘ಮಿತವಾಗಿ’ ಲೆಕ್ಕಿಸುವದಾದರೂ, ವರದಿ ಕೂಡಿಸಿದ್ದು: “ಸುಮಾರು 40,000 ಮಂದಿ [ಅಮೆರಿಕ ಒಂದರಲ್ಲಿಯೆ] NANBH ನ್ನು ವಾರ್ಷಿಕವಾಗಿ ವಿಕಾಸಿಸುವರು ಮತ್ತು ಇವರಲ್ಲಿ 10 ಪ್ರತಿಶಕದಷ್ಟು ಜನರು ಯಕೃತ್ತಿನ ರೋಗ ⁄ ಅಥವಾ ಹಿಪಟೊಮ [ಯಕೃತ್ತಿನ ಕ್ಯಾನ್ಸರ್] ನ್ನು ಪಡೆಯುವರೆಂದು ನಿರೀಕ್ಷಿಸಲಾಗಿದೆ.”—ದಿ ಅಮೆರಿಕನ್ ಜರ್ನಲ್ ಆಫ್ ಸರ್ಜರಿ, ಜೂನ್ 1990.
14 ಪೂರಣವಾದ ರಕ್ತದಿಂದಾಗಿ ತಗಲುವ ರೋಗದ ಅಪಾಯವು ವಿಸ್ತಾರವಾಗಿ ತಿಳಿಸಲ್ಪಟ್ಟಾಗ, ಜನರು ರಕ್ತಪೂರಣಗಳ ಕುರಿತಾದ ತಮ್ಮ ನೋಟವನ್ನು ಬದಲಾಯಿಸುತ್ತಿದ್ದಾರೆ. ಉದಾಹರಣೆಗಾಗಿ, 1981ರಲ್ಲಿ ಪೋಪರು ಗುಂಡಿನೇಟಿಗೆ ಗುರಿಯಾದ ನಂತರ, ಒಂದು ಆಸ್ಪತ್ರೆಯಲ್ಲಿ ಅವರಿಗೆ ಔಷಧೋಪಚಾರ ಮಾಡಿ ಕಳುಹಿಸಲಾಯಿತು. ಅನಂತರ ಪುನಃ ಎರಡು ತಿಂಗಳುಗಳಿಗಾಗಿ ಅವರಿಗೆ ಆಸ್ಪತ್ರೆಗೆ ಹಿಂದೆ ಹೋಗಬೇಕಾಯಿತು, ಮತ್ತು ಅವರ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿತ್ತೆಂದರೆ ದೇಹದೌರ್ಬಲ್ಯ ಉಳ್ಳವರಾಗಿ ನಿವೃತ್ತಿಹೊಂದ ಬೇಕಾಗುವದೊ ಎಂದು ತೋರಿತು. ಏಕೆ? ಏಕೆಂದರೆ ಅವರಿಗೆ ಕೊಡಲ್ಪಟ್ಟ ರಕ್ತದಿಂದಾಗಿ ಅವರಿಗೆ ಸೈಟೊಮೆಗಲೊವೈರಸ್ ಎಂಬ ರೋಗಸೋಂಕು ತಗಲಿತ್ತು. ಕೆಲವರು ನೆನಸಬಹುದು, “ಪೋಪರಿಗೆ ಕೊಡಲ್ಪಟ್ಟ ರಕ್ತವು ಅಸುರಕ್ಷಿತ ಎಂದಾದರೆ ಜನಸಾಮಾನ್ಯರಾದ ನಮಗೆ ಕೊಡಲ್ಪಡುವ ಪೂರಣಗಳ ಕುರಿತೇನು?’
15, 16. ರೋಗ ಲಕ್ಷಣಗಳಿಗಾಗಿ ರಕ್ತವನ್ನು ಪರೀಕ್ಷೆ ಮಾಡಿದಾಗ್ಯೂ ರಕ್ತ ಪೂರಣಗಳು ಸುರಕ್ಷಿತವಲ್ಲವೇಕೆ?
15 ‘ಆದರೆ ರೋಗ ಲಕ್ಷಣಗಳಿಗಾಗಿ ರಕ್ತವನ್ನು ಪರೀಕ್ಷಿಸ ಸಾಧ್ಯವಿಲ್ಲವೇ?’ ಎಂದು ಯಾರಾದರೂ ಕೇಳಬಹುದು. ಒಳ್ಳೆದು, ಹೆಪಟೈಟಿಸ್-ಬಿ ಗಾಗಿ ರಕ್ತಪರೀಕ್ಷೆ ಮಾಡುವುದನ್ನು ದೃಷ್ಟಾಂತಕ್ಕಾಗಿ ತಕ್ಕೊಳ್ಳಿರಿ. ಪೇಷೆಂಟ್ ಕೇರ್ (ಫೆಬ್ರವರಿ 28, 1990) ತಿಳಿಸಿದ್ದು: “ಪೂರಣದ ನಂತರ ಸಂಭವಿಸುತ್ತಿದ್ದ ಹೆಪಟೈಟಿಸ್ (ಯಕೃತ್ತಿನ ರೋಗ) ರಕ್ತದ ಸಾರ್ವತ್ರಿಕ ಪರೀಕ್ಷೆಯನ್ನು ಹಿಂಬಾಲಿಸಿ ಕಡಿಮೆಯಾಗ ತೊಡಗಿತು ಆದರೆ ಪೂರಣ ನಂತರದ ಸುಮಾರು 5-10% ಹೆಪಟೈಟಿಸ್ ಕೇಸುಗಳು ಹೆಪಟೈಟಿಸ್-ಬಿ ಇಂದ ಇನ್ನೂ ಸಂಭವಿಸುತ್ತಿವೆ.”
16 ಇಂಥ ಪರೀಕ್ಷೆಗಳ ತಪ್ಪುಸಾಧ್ಯತೆಯು ಇನ್ನೊಂದು ರಕ್ತ-ಜನಿತ ಅಪಾಯವಾದ—ಏಯ್ಡ್ಸ್ನಿಂದ ಕಂಡು ಬರುತ್ತದೆ. ಏಯ್ಡ್ಸ್ ಸರ್ವವ್ಯಾಪಿ ವ್ಯಾಧಿಯು ರಕ್ತದಿಂದಾಗುವ ರೋಗ ಸೋಂಕಿನ ಅಪಾಯಕ್ಕೆ ಜನರನ್ನು ಸಂಪೂರ್ತಿಯಾಗಿ ಎಚ್ಚರಿಸಿದೆ. ರೋಗ ಸೋಂಕನ್ನು ಕಂಡು ಹಿಡಿಯಲು ಈಗ ರಕ್ತ ಪರೀಕ್ಷೆಗಳು ನಡಿಯುತ್ತಿವೆ ಗ್ರಾಹ್ಯ. ಆದರೂ ರಕ್ತವು ಎಲ್ಲಾ ಕಡೆಗಳಲ್ಲಿ ಪರೀಕ್ಷೆ ಮಾಡಲ್ಪಡುವುದಿಲ್ಲ, ಮತ್ತು ಜನರು ಏಯ್ಡ್ಸ್ ರೋಗವನ್ನು ಸದ್ಯದ ಪರೀಕೆಗ್ಷಳಿಂದ ಕಂಡುಹಿಡಿಯಲ್ಪಡದೇ ಹಲವಾರು ವರ್ಷಗಳಿಂದ ತಮ್ಮ ರಕ್ತದಲ್ಲಿ ಒಯ್ಯುತ್ತಿರಲೂಬಹುದು. ಹೀಗೆ ಪರೀಕ್ಷೆ ಮಾಡಿ, ಒಪ್ಪಿಗೆ ಪಡೆದ ರಕ್ತದಿಂದ ಸಹಾ ರೋಗಿಗಳಿಗೆ ಏಯ್ಡ್ಸ್ ತಗಲಬಲ್ಲದು—ತಗಲಿದೆ!
17. ಆ ಕೂಡಲೆ ತೋರಿಬರದಿರಬಹುದಾದ ಹಾನಿಯನ್ನು ರಕ್ತ ಪೂರಣಗಳು ಹೇಗೆ ಮಾಡಬಲ್ಲವು?
17 ಡಾಕ್ಟರುಗಳಾದ ಗುಡ್ನೊ ಮತ್ತು ಶಕ್, “ರೋಗರಕ್ಷೆ ನಿರೋಧ”ದ ಕುರಿತೂ ತಿಳಿಸಿದ್ದರು. ಹೌದು, ಪರಸ್ಪರ ಹೊಂದಿಕೆಗಾಗಿ ಅಡ್ಡ ಸಾಮ್ಯ ಮಾಡಲ್ಪಟ್ಟಿರುವ ರಕ್ತ ಸಹಾ ರೋಗಿಯ ರೋಗರಕ್ಷಾ ವ್ಯವಸ್ಥೆಗೆ ಹಾನಿ ಮಾಡಿ ಕ್ಯಾನ್ಸರ್ ಮತ್ತು ಮರಣಕ್ಕೆ ದಾರಿ ತೆರೆಯಬಲ್ಲದು ಎಂಬದಕ್ಕೆ ರುಜುವಾತುಗಳು ಹೆಚ್ಚುತ್ತಾ ಇವೆ. ಹೀಗೆ, “ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ರೋಗಿಗಳಲ್ಲಿ, ಯಾರು ಗೆಡ್ಡೆ (ಟ್ಯೂಮರ್) ತೆಗೆಯುವ ಶಸ್ತ್ರಕ್ರಿಯೆಯ ಸಮಯದಲ್ಲಿ ರಕ್ತಪೂರಣವನ್ನು ಪಡೆದಿದ್ದರೊ ಅವರಲ್ಲಿ ರೋಗರಕ್ಷಾ ವ್ಯವಸ್ಥೆಯ ಅನಂತರ ಗಮನಾರ್ಹವಾಗಿ ಕಡಿಮೆಗೊಂಡಿತೆಂದು” ಒಂದು ಕೆನೇಡಿಯನ್ ಅಧ್ಯಯನವು ತಿಳಿಸುತ್ತದೆ. (ದಿ ಮೆಡಿಕಲ್ ಪೋಸ್ಟ್, ಜುಲೈ 10, 1990) ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯದ ಡಾಕ್ಟರುಗಳು ವರದಿಸಿದ್ದು: “ಎಲ್ಲಾ ಧ್ವನಿಸಂಪುಟದ ಕ್ಯಾನ್ಸರ್ ರೋಗಗಳಲ್ಲಿ ರಕ್ತ ಪಡೆಯದವರು ಪುನಃ ರೋಗಿಗಳಾಗುವ ದರ 14% ಇರುವಾಗ ಅದನ್ನು ಪಡೆದವರು ಆಗುವ ದರ 65%. ಬಾಯಿಕುಳಿ, ಗಂಟಲು, ಮೂಗು ಯಾ ಸೈನಸಿನ ಕ್ಯಾನ್ಸರ್ನಲ್ಲಿ, ಪೂರಣವಾಗದವರು ಅದನ್ನು ಪುನಃ ಪಡೆಯುವ ಸಂಖ್ಯಾಪ್ರಮಾಣ 31% ಮತ್ತು ಪೂರಣವಾದವರು ರೋಗವನ್ನು ಪುನಃ ಪಡೆಯುವ ಸಂಖ್ಯಾಪ್ರಮಾಣ 71%.” (ಆ್ಯನಲ್ಸ್ ಆಫ್ ಒಟಾಲಜಿ, ರೈನಾಲಜಿ ಆ್ಯಂಡ್ ಲ್ಯಾರಿನಾಲಜಿ, ಮಾರ್ಚ್, 1989) ಶಸ್ತ್ರಕ್ರಿಯೆಯ ಸಮಯದಲ್ಲಿ ರಕ್ತ ಕೊಡಲ್ಪಟ್ಟವರು ರೋಗ ಸೋಂಕನ್ನು ಹೆಚ್ಚಾಗಿ ವಿಕಸಿಸಿಕೊಳ್ಳುವ ಸಂಭಾವ್ಯತೆ ಇದೆ ಎಂಬ ವಾಸ್ತವಾಂಶವನ್ನೂ ರೋಗರಕ್ಷಾ ನಿರೋಧವು ಒತ್ತಿಹೇಳುವಂತೆ ಕಾಣುತ್ತದೆ.
ರಕ್ತದ ಬದಲಿಗೆ ಅನ್ಯಮಾರ್ಗಗಳು ಏನಾದರೂ ಇವೆಯೇ?
18. (ಎ) ರಕ್ತ ಪೂರಣಗಳಲ್ಲಿ ಒಳಗೂಡಿರುವ ಅಪಾಯಗಳು ವೈದ್ಯರನ್ನು ಯಾವುದಕ್ಕೆ ತಿರುಗಿಸುತ್ತಾ ಇವೆ? (ಬಿ) ಅನ್ಯ ಮಾರ್ಗಗಳ ಔಷಧೋಪಾಚಾರ ಕುರಿತಾದ ಯಾವ ಮಾಹಿತಿಯನ್ನು ನಿಮ್ಮ ಡಾಕ್ಟರರೊಂದಿಗೆ ನೀವು ಪಾಲಿಗರಾಗಬಹುದು?
18 ‘ಪೂರಕಗಳು ಅಪಾಯಕಾರಕ, ಆದರೆ, ಅನ್ಯಮಾರ್ಗಗಳು ಏನಾದರೂ ಇವೆಯೇ?’ ಎಂದು ಕೆಲವರು ಕೇಳಬಹುದು. ನಮಗೆ ಖಂಡಿತವಾಗಿಯೂ ಉಚ್ಛ ಗುಣಮಟ್ಟದ ಔಷಧೋಪಚಾರವು ಬೇಕು, ಆದದರಿಂದ, ಗಂಭೀರ ಕಾಯಿಲೆಗಳ ಸಮಸ್ಯೆಗಳನ್ನು ನಿರ್ವಹಿಸಲು ನ್ಯಾಯಸಮ್ಮತ ಹಾಗೂ ಪರಿಣಾಮಕಾರಕ ಮಾರ್ಗಗಳು ಅಲ್ಲಿವೆಯೆ? ಸಂತೋಷಕರವಾಗಿ, ಹೌದು. ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸನ್ (ಜೂನ್ 7, 1990) ವರದಿ ಮಾಡಿದ್ದು: “ಪೂರಣಗಳ ಮೂಲಕ ರವಾನಿಸಲ್ಪಡುವ [ಏಯ್ಡ್ಸ್] ಮತ್ತು ಇತರ ಸೋಂಕು ರೋಗಗಳ ಅಪಾಯವನ್ನು ವೈದ್ಯರು ಅಧಿಕಾಧಿಕವಾಗಿ ಅರಿತವರಾಗಿ ಪೂರಣಗಳಲ್ಲಿರುವ ಅಪಾಯಗಳನ್ನು ಮತ್ತು ಪ್ರಯೋಜನಗಳನ್ನು ಪುನರಾಲೋಚಿಸುತ್ತಿದ್ದಾರೆ ಮತ್ತು ಅನ್ಯ ಮಾರ್ಗಗಳ ಔಷಧೋಪಚಾರದೆಡೆಗೆ ತಿರುಗುತ್ತಿದ್ದಾರೆ, ಪೂರಣಗಳನ್ನು ಪೂರ್ತಿಯಾಗಿ ವರ್ಜಿಸುವದೂ ಅದರಲ್ಲಿ ಸೇರಿದೆ.”b
19. ರಕ್ತವನ್ನು ನಿರಾಕರಿಸಿದಾಗ್ಯೂ ಯಶ್ವಸೀ ವೈದ್ಯಕೀಯ ಉಪಚಾರವನ್ನು ಮತ್ತೂ ನೀವು ಪಡೆಯಬಲ್ಲಿರೆಂದು ಭರವಸವಿಡಬಹುದೇಕೆ?
19 ಯೆಹೋವನ ಸಾಕ್ಷಿಗಳು ಧೀರ್ಘಕಾಲದಿಂದ ರಕ್ತ ಪೂರಣಗಳನ್ನು ನಿರಾಕರಿಸಿರುವುದು, ಅವು ಆರೋಗ್ಯಕ್ಕೆ ಅಪಾಯಕಾರಿ ಎಂಬ ಮುಖ್ಯ ಕಾರಣಕ್ಕಾಗಿ ಅಲ್ಲ, ರಕ್ತದ ಕುರಿತು ದೇವರು ಕೊಟ್ಟಿರುವ ನಿಯಮಕ್ಕೆ ವಿಧೇಯತೆಯಲ್ಲಿಯೇ. (ಅಪೊಸ್ತಲರ ಕೃತ್ಯಗಳು 15:28, 29) ಆದರೂ, ನುರಿತ ಡಾಕ್ಟರುಗಳು ರಕ್ತವಿಲ್ಲದೆನೆ, ಇದ್ದ ಅಪಾಯಗಳ ಸಹಿತವಾಗಿ, ಸಾಕ್ಷಿ ರೋಗಿಗಳನ್ನು ಯಶಸ್ವಿಯಾಗಿ ಉಪಚರಿಸಿದ್ದಾರೆ. ವೈದ್ಯಕೀಯ ಸಾಹಿತ್ಯದಲ್ಲಿ ವರದಿಯಾಗಿರುವ ಅನೇಕ ಉದಾಹರಣೆಗಳಲ್ಲಿ ಕೇವಲ ಒಂದಾಗಿ, ಆರ್ಕಿವ್ಸ್ ಆಫ್ ಸರ್ಜರಿ (ನವಂಬರ, 1990), ಯಾರ ಮನಸ್ಸಾಕ್ಷಿಗಳು ರಕ್ತ ರಹಿತವಾದ ಹೃದಯ ಸ್ಥಲಾಂತರವನ್ನು ಮಾಡುವಂತೆ ಅನುಮತಿಸಿದ್ದವೊ ಆ ಸಾಕ್ಷಿ ರೋಗಿಗಳ ಹೃದಯ ಸ್ಥಲಾಂತರವನ್ನು ಚರ್ಚಿಸಿತ್ತು. ಆ ವರದಿಯು ಹೇಳಿದ್ದು: “25 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳ ಹೃದಯ ಶಸ್ತ್ರಕ್ರಿಯೆಗಳನ್ನು ಮಾಡಿದ್ದ ಆನುಭವದ ಫಲಿತಾಂಶವಾಗಿ, ರಕ್ತ ಉತ್ಪಾದನೆಗಳ ಪೂರಣಮಾಡದೇ ಯಶಸ್ವಿಯಾದ ಹೃದಯ ಸ್ಥಲಾಂತರದ ಶಿಕರವನ್ನು ಮುಟ್ಟಲಾಗಿದೆ. . . . ಶಸ್ತ್ರಕ್ರಿಯೆಯ ನಂತರ ಮರಣಗಳು ಸಂಭವಿಸಿಲ್ಲ, ಈ ರೋಗಿಗಳು ಅಂಗಾಂಶ ಸಂಯೋಜನೆಯ ಹೆಚ್ಚು ಪ್ರಮಾಣದ ವಿಸರ್ಜನೆಗೂ ಹೆಚ್ಚು ಈಡಾಗಿರುವುದಿಲ್ಲವೆಂದು ಅನುಸರಿಸಿ-ಮಾಡಿದ ಅಧ್ಯಯನಗಳು ತೋರಿಸಿವೆ.”
ಅತ್ಯಂತ ಅಮೂಲ್ಯ ರಕ್ತ
20, 21. “ರಕ್ತವು ಕೆಟ್ಟ ಔಷಧ” ಎಂಬ ಮನೋಭಾವನೆಯನ್ನು ವಿಕಸಿಸದಂತೆ ಕ್ರೈಸ್ತರು ಎಚ್ಚರದಿಂದಿರಬೇಕು ಏಕೆ?
20 ಆದರೂ ಒಂದು ಆತ್ಮ-ಪರೀಕ್ಷಣೆಯ ಪ್ರಶ್ನೆಯನ್ನು ನಾವು ಪ್ರತಿಯೊಬ್ಬರೂ ಕೇಳಿಕೊಳ್ಳುವ ಅಗತ್ಯವಿದೆ. ‘ರಕ್ತ ಪೂರಣಗಳನ್ನು ಸ್ವೀಕರಿಸಲು ನಾನು ನಿರ್ಧರಿಸಿದ್ದೇನಾದರೆ, ಅದೇಕೆ? ಪ್ರಾಮಾಣಿಕವಾಗಿ ನನ್ನ ಪ್ರಧಾನ, ಮೂಲಭೂತ ಕಾರಣವು ಯಾವುದು?’
21 ಪೂರಣಗಳಿಗೆ ಸಂಬಂಧಿಸಿದ ಅನೇಕ ಅಪಾಯಗಳಿಗೆ ಒಬ್ಬನನ್ನು ಗುರಿಪಡಿಸದ ಪರಿಣಾಮಕಾರಕ ರಕ್ತಕ್ಕೆ-ಅನ್ಯಮಾರ್ಗಗಳು ಅಲ್ಲಿವೆ ಎಂಬದನ್ನು ನಾವು ತಿಳಿಸಿದ್ದೇವೆ. ಹೆಪಟೈಟಿಸ್ ಅಥವಾ ಏಯ್ಡ್ಸ್ ರೋಗದಂಥ ಅಪಾಯಗಳು ಧಾರ್ಮಿಕೇತರ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸಲು ಸಹಾ ಅನೇಕರನ್ನು ಪ್ರೇರೇಪಿಸಿದೆ. “ರಕ್ತವು ಕೆಟ್ಟ ಔಷಧ” ಎಂಬ ನಿಶಾನೆಯ ಕೆಳಗೆ ಬಹಳ ಮಟ್ಟಿಗೆ ಮುನ್ನಡೆಯುತ್ತಾರೊ ಎಂಬಂತೆ, ಕೆಲವರು ಆ ಕುರಿತು ಉದ್ರೇಕಗೊಂಡು ಮಾತಾಡುತ್ತಾರೆ. ಆ ಮುನ್ನಡೆಯೊಳಗೆ ಒಬ್ಬ ಕ್ರೈಸ್ತನು ಸೆಳೆಯಲ್ಪಡುವ ಶಕ್ಯತೆ ಇದೆ. ಆದರೆ ಅದು ದಾರಿಯ ನಿಲುಕೊನೆಯ ಕಡೆಗಿನ ಮುನ್ನಡೆಯಾಗಿದೆ. ಹೇಗೆ?
22. ಜೀವ ಮತ್ತು ಮರಣದ ಯಾವ ವಾಸ್ತವಿಕ ನೋಟವನ್ನು ನಾವಿಡಬೇಕು? (ಪ್ರಸಂಗಿ 7:2)
22 ಉತ್ಕೃಷ್ಟ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಉಪಚಾರದ ನಡುವೆಯೂ ಕೆಲವು ಸಾರಿ ಜನರು ಸಾಯುತ್ತಾರೆ ಎಂಬದನ್ನು ನಿಜ ಕ್ರೈಸ್ತರು ಮನಗಾಣುತ್ತಾರೆ. ರಕ್ತಪೂರಣ ಮಾಡಿದರೂ ಮಾಡದಿದ್ದರೂ ಜನರು ಸಾಯುತ್ತಾರೆ. ಹೀಗನ್ನುವುದು ಅದೃಷ್ಟವಾದವಲ್ಲ. ಇಂದು ಮರಣವು ಜೀವಿತದ ವಾಸ್ತವಾಂಶ. ರಕ್ತದ ಕುರಿತಾದ ದೇವರ ನಿಯಮವನ್ನು ಮೀರುವ ಜನರಿಗೆ ಹೆಚ್ಚಾಗಿ ಆ ಕೂಡಲೆ ಇಲ್ಲವೆ ಕ್ರಮೇಣ ರಕ್ತದಿಂದ ಹಾನಿ ಬರುತ್ತದೆ. ಕೆಲವರು ರಕ್ತ ಪೂರಣದಿಂದಾಗಿ ಸಾಯುತ್ತಾರೆ ಸಹಾ. ಆದರೂ ನಾವೆಲ್ಲರೂ ಮನಗಾಣಬೇಕು ಏನಂದರೆ, ಪೂರಣಗಳನ್ನು ಪಾರಾದವರು ನಿತ್ಯ ಜೀವವನ್ನು ಪಡೆದಿಲ್ಲ, ಹೀಗೆ ರಕ್ತವು ಅವರ ಜೀವವನ್ನು ಖಾಯಂ ಆಗಿ ರಕ್ಷಿಸಿರುವ ರುಜುವಾತಿಲ್ಲ. ಇನ್ನೊಂದು ಕಡೆ, ಧಾರ್ಮಿಕ ಮತ್ತು ⁄ ಅಥವಾ ವೈದ್ಯಕೀಯ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸುವ ಆದರೂ ಅನ್ಯಮಾರ್ಗದ ಔಷಧೋಪಚಾರವನ್ನು ಸ್ವೀಕರಿಸುವ ಹೆಚ್ಚಿನವರು ಸುಕ್ಷೇಮವಾಗಿ ಇರುತ್ತಾರೆ. ಹೀಗೆ ಅವರು ಅನೇಕ ವರ್ಷಗಳ ತನಕ ಜೀವಿಸಬಹುದು—ಆದರೆ ನಿರಂತರವಾಗಿ ಅಲ್ಲ.
23. ರಕ್ತದ ಕುರಿತಾದ ದೇವರ ನಿಯಮಗಳು ನಾವು ಪಾಪಿಗಳು ಮತ್ತು ವಿಮೋಚನೆಯ ಅಗತ್ಯವುಳ್ಳವರೆಂಬದಕ್ಕೆ ಸಂಬಂಧಿಸಿದೆ ಹೇಗೆ?
23 ಇಂದು ಜೀವಿಸಿರುವ ಮಾನವರೆಲ್ಲರೂ ಅಸಂಪೂರ್ಣರು ಮತ್ತು ಮರಣಾಧೀನರು ಎಂಬದು ಬೈಬಲ್ ರಕ್ತದ ಕುರಿತು ಏನನ್ನುತದ್ತೊ ಆ ಪ್ರಧಾನ ವಿಷಯದ ಕಡೆಗೆ ನಡಿಸುತ್ತದೆ. ರಕ್ತವನ್ನು ತಿನ್ನಬಾರದೆಂದು ದೇವರು ಮಾನವ ಕುಲಕ್ಕೆಲ್ಲಾ ಹೇಳಿದ್ದನು. (ಆದಿಕಾಂಡ 9:3-6) ನಿಯಮ ಶಾಸ್ತ್ರದಲ್ಲಿ ಆತನು ಕೊಟ್ಟ ನಿಯಮಗಳು ಮಾನವರೆಲ್ಲರು ಪಾಪಿಗಳು ಎಂಬ ವಾಸ್ತವಾಂಶವನ್ನು ತೋರಿಸಿವೆ. ಪಶು ಯಜ್ಞಗಳನ್ನು ಅರ್ಪಿಸುವ ಮೂಲಕ, ತಮ್ಮ ಪಾಪಗಳು ಪರಿಹರಿಸಲ್ಪಡುವ ಅಗತ್ಯವಿದೆ ಎಂದು ಅವರು ತೋರಿಸಬಲ್ಲರು ಎಂದು ದೇವರು ಇಸ್ರಾಯೇಲ್ಯರಿಗೆ ಹೇಳಿದ್ದನು. (ಯಾಜಕಕಾಂಡ 4:4-7, 13-18, 22-30) ಇಂದು ಆತನು ನಮ್ಮಿಂದ ಅದನ್ನು ಕೇಳಿಕೊಳ್ಳದಿದ್ದರೂ, ಇಂದು ಅದಕ್ಕೆ ಸೂಚಿತಾರ್ಥವಿದೆ. ನಂಬುವವರೆಲ್ಲರ ಪಾಪಗಳಿಗಾಗಿ ಪೂರ್ಣ ಪ್ರಾಯಶ್ಚಿತವ್ತನ್ನು ಕೊಡಶಕ್ತನಾದ ಒಂದು ಬಲಿಯಾದ—ವಿಮೋಚನಾ ಈಡನ್ನು ಒದಗಿಸಲು ದೇವರು ಯೋಜಿಸಿದನು. (ಮತ್ತಾಯ 20:28) ಇದಕ್ಕಾಗಿಯೇ ನಮಗೆ ರಕ್ತದ ಕುರಿತಾದ ದೇವರ ನೋಟವನ್ನು ಪಡೆಯುವ ಅಗತ್ಯವಿದೆ.
24. (ಎ) ರಕ್ತದ ಸಂಬಂಧದಲ್ಲಿ ಆರೋಗ್ಯ ಅಪಾಯವು ಕೆಂದ್ರಬಿಂದುವೆಂದು ನೋಡುವುದು ತಪ್ಪಾಗಿರುವದು ಏಕೆ? (ಬಿ) ರಕ್ತದ ಉಪಯೋಗದ ನಮ್ಮ ನೋಟವನ್ನು ಯಾವುದು ನಿಜವಾಗಿ ಪ್ರಭಾವಿಸಬೇಕು?
24 ರಕ್ತದಿಂದಾಗುವ ಆರೋಗ್ಯ ಹಾನಿಯ ಕುರಿತಾಗಿ ಪ್ರಧಾನವಾಗಿ ಗಮನವನ್ನು ಕೇಂದ್ರೀಕರಿಸುವುದು ತಪ್ಪಾಗಿದೆ, ಯಾಕೆಂದರೆ ದೇವರ ಮೂಲಬಿಂದುವು ಅದಾಗಿರಲಿಲ್ಲ. ಹಂದಿಗಳ ಮಾಂಸವನ್ನು ಮತ್ತು ಸತ್ತುಬಿದ್ದ ಪಶುಗಳ ಮಾಂಸವನ್ನು ತಿನ್ನದೆ ಇದ್ದಾಗ ಪಡೆದಿರಬಹುದಾದ ಪ್ರಯೋಜನದಂತೆ, ರಕ್ತವನ್ನು ಸೇವಿಸದ ಮೂಲಕ ಇಸ್ರಾಯೇಲ್ಯರು ಕೆಲವು ಆರೋಗ್ಯ ಸಂಬಂಧವಾದ ಪ್ರಯೋಜನಗಳನ್ನು ಪಡೆದಿರಬಹುದು. (ಧರ್ಮೋಪದೇಶಕಾಂಡ 12:15, 16; 14:7, 8, 11, 12) ಆದರೂ, ದೇವರು ನೋಹನಿಗೆ ಮಾಂಸ ತಿನ್ನುವ ಹಕ್ಕನ್ನು ಕೊಟ್ಟಾಗ, ಇಂಥ ಪ್ರಾಣಿಗಳ ಮಾಂಸವನ್ನು ತಿನ್ನಲು ನಿಷೇಧಿಸಿರಲಿಲ್ಲವೆಂಬದನ್ನು ನೆನಪಿಗೆ ತನ್ನಿರಿ. ಆದರೆ ಮನುಷ್ಯರು ರಕ್ತವನ್ನು ತಿನ್ನಬಾರದೆಂಬ ವಿಧಿಯನ್ನು ನೇಮಿಸಿದ್ದನು. ಸಂಭವನೀಯವಾದ ಆರೋಗ್ಯ ಅಪಾಯದ ಮೇಲೆ ದೇವರು ಪ್ರಾಮುಖ್ಯವಾಗಿ ಗಮನವನ್ನು ಕೇಂದ್ರೀಕರಿಸಲಿಲ್ಲ. ರಕ್ತದ ಕುರಿತು ಅವನು ಕೊಟ್ಟ ಆಜ್ಞೆಯ ಪ್ರಧಾನಬಿಂದು ಅದಲ್ಲ. ಆತನ ಆರಾಧಕರು ತಮ್ಮ ಜೀವವನ್ನು ರಕ್ತದಿಂದ ಪೋಷಿಸಲು ನಿರಾಕರಿಸಬೇಕಿತ್ತು, ಹಾಗೆ ಮಾಡುವುದು ಮುಖ್ಯವಾಗಿ ಅದು ಅನಾರೋಗ್ಯಕರವಾದ ಕಾರಣದಿಂದಲ್ಲ, ಅದು ಅಪವಿತ್ರವಾಗಿದ್ದ ಕಾರಣದಿಂದಲೇ. ಅವರು ರಕ್ತವನ್ನು ನಿರಾಕರಿಸಿದ್ದು ಅದು ಮಲಿನವಾಗಿದ್ದ ಕಾರಣದಿಂದಲ್ಲ, ಅದು ಅಮೂಲ್ಯವಾಗಿದ್ದ ಕಾರಣದಿಂದಲೇ. ಯಜ್ಞಾರ್ಪಿತ ರಕ್ತದಿಂದ ಮಾತ್ರವೇ ಅವರು ಕ್ಷಮೆಯನ್ನು ಪಡೆಯ ಸಾಧ್ಯವಿತ್ತು.
25. ರಕ್ತವು ಜೀವವನ್ನು ಹೇಗೆ ನಿತ್ಯವಾಗಿ ರಕ್ಷಿಸಬಲ್ಲದು?
25 ನಮ್ಮ ವಿಷಯದಲ್ಲೂ ಇದೇ ಸತ್ಯವಾಗಿದೆ. ಎಫೆಸ 1:7ರಲ್ಲಿ ಅಪೊಸ್ತಲ ಪೌಲನು ವಿವರಿಸಿದ್ದು: “ಈತನು [ಕ್ರಿಸ್ತನು] ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ.” ದೇವರು ಒಬ್ಬನ ಪಾಪವನ್ನು ಕ್ಷಮಿಸಿ ಅವನನ್ನು ನೀತಿವಂತನಾಗಿ ವೀಕ್ಷಿಸುವುದಾದರೆ, ಆ ವ್ಯಕ್ತಿಗೆ ಅನಂತ ಜೀವನದ ಪ್ರತೀಕ್ಷೆಯು ಇರುವುದು. ಹೀಗೆ ಯೇಸುವಿನ ವಿಮೋಚನಾ ರಕ್ತವು ಜೀವವನ್ನು ನಿತ್ಯವಾಗಿ, ವಾಸ್ತವದಲ್ಲಿ ಅನಂತ ಕಾಲದ ತನಕ ರಕ್ಷಿಸ ಶಕವ್ತಾಗಿದೆ. (w91 6/15)
[ಅಧ್ಯಯನ ಪ್ರಶ್ನೆಗಳು]
a ಆ ಆಜ್ಞೆಯ ಕೊನೆಯ ಮಾತು: “ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೇದಾಗುವದು. ನಿಮಗೆ ಶುಭ (ಒಳ್ಳೆ ಆರೋಗ್ಯ, NW) ವಾಗಲಿ.” (ಅಪೊಸ್ತಲರ ಕೃತ್ಯಗಳು 15:29) ಇಲ್ಲಿ ಕೋರಲ್ಪಟ್ಟ “ಒಳ್ಳೆ ಆರೋಗ್ಯ”ವು ‘ರಕ್ತವನ್ನೂ ಹಾದರವನ್ನೂ ವಿಸರ್ಜಿಸಿದರೆ ನಿಮ್ಮ ಆರೋಗ್ಯ ಒಳ್ಳೇದಾಗುವುದು’ ಎಂದು ಸೂಚಿಸುವ ಒಂದು ವಾಗ್ದಾನವಲ್ಲ. ಅದು ಕೇವಲ ಪತ್ರದ ಕೊನೆಯ ಮಾತು, ‘ಶುಭಮಸ್ತು’ನಂಥಾ ಹೇಳಿಕೆಯು.
b ರಕ್ತ ಪೂರಣಕ್ಕೆ ಬದಲಾಗಿ ಇರುವ ಅನೇಕ ಪರಿಣಾಮಕಾರಕ ಅನ್ಯ ಮಾರ್ಗಗಳು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ನ್ಯೂ ಯೋರ್ಕ್ನಿಂದ 1990ರಲ್ಲಿ ಪ್ರಕಾಶಿತವಾದ, ಹೌ ಕ್ಯಾನ್ ಬ್ಲಡ್ ಸೇವ್ ಯುವರ್ ಲೈಫ್? ಬ್ರೊಷರ್ನಲ್ಲಿ ಪರಾಮರ್ಶಿಸಲ್ಪಟ್ಟಿವೆ.
ನೀವು ವಿವರಿಸಬಲ್ಲಿರೋ?
▫ ಯೆಹೋವನ ಸಾಕ್ಷಿಗಳು ರಕ್ತ ಪೂರಣವನ್ನು ನಿರಾಕರಿಸುವುದೇಕೆಂಬದಕ್ಕೆ ಪ್ರಧಾನ ಕಾರಣವು ಯಾವುದು?
▫ ರಕ್ತದ ಕುರಿತಾದ ಬೈಬಲ್ ನಿಲುವು ವೈದ್ಯಕೀಯವಾಗಿ ಅಸಮಂಜಸವಲ್ಲವೆಂದು ಯಾವ ರುಜುವಾತು ದೃಢೀಕರಿಸುತ್ತದೆ?
▫ ರಕ್ತದ ಕುರಿತಾದ ಬೈಬಲ್ ನಿಯಮದ ಮೇಲೆ ವಿಮೋಚನೆಯು ಹೇಗೆ ಜೋಡಿಸಲ್ಪಟ್ಟಿದೆ?
▫ ರಕ್ತವು ಜೀವವನ್ನು ನಿತ್ಯವಾಗಿ ರಕ್ಷಿಸಬಲ್ಲ ಒಂದೇ ಮಾರ್ಗವು ಯಾವುದು?
[ಪುಟ 25 ರಲ್ಲಿರುವ ಚೌಕ]
ರಕ್ತ ಪೂರಣಗಳು ಮತ್ತು ರೋಗ ಸೋಂಕು
ರಕ್ತ ಪೂರಣಗಳು ಒಬ್ಬ ರೋಗಿಯನ್ನು ರೋಗ ಸೋಂಕಿಗೆ ಹೆಚ್ಚು ಈಡುಗೊಳಿಸುತ್ತದೊ ಇಲ್ಲವೊ ಎಂಬ ವಿಷಯದಲ್ಲಿ ಒಂದು ವಿಸ್ತಾರ ಪರಾಮರ್ಶೆಯ ನಂತರ, ಡಾ. ನೀಲ್ ಬ್ಲಂಬರ್ಗ್ ತೀರ್ಮಾನಿಸಿದ್ದು: “[ಈ ವಿಷಯವಾದ] 12ರಲ್ಲಿ 10 ವೈದ್ಯಕೀಯ ಅಧ್ಯಯನಗಳು, ರಕ್ತ ಪೂರಣವು ಗಮನಾರ್ಹವಾಗಿ ಮತ್ತು ಸ್ವತಂತ್ರವರ್ತಿಯಾಗಿ ಅಧಿಕ ಏಕಾಣು ರೋಗ ಸೋಂಕಿನ ಅಪಾಯದಲ್ಲಿ ಜತೆಗೂಡಿರುವುದು ಕಂಡುಬಂದಿದೆ . . . ಅದಲ್ಲದೆ, ಕೆಲವು ಅಧ್ಯಯನಗಳು ತೋರಿಸುವ ಮೇರೆಗೆ ರಕ್ತ ಪೂರಣದಿಂದ ರೋಗರಕ್ಷೆಯ ಮೇಲಾಗುವ ಪರಿಣಾಮಗಳು ಅಷ್ಟು ದೀರ್ಘಕಾಲದ್ದಾಗಿದ್ದರೆ, ಶಸ್ತ್ರಕ್ರಿಯೆಗೆ ಬಹು ಮೊದಲೆ ನೀಡಲ್ಪಡುವ ಪೂರಣವು ರೋಗಿಯ ಸೋಂಕು ನಿರೋಧ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. . . . ಈ ಮೂಲ ಸಂಗತಿಗಳನ್ನು ವಿಸ್ತರಿಸಿ, ದೃಢೀಕರಿಸಿದ್ದಲ್ಲಿ, ಶಸ್ತ್ರಕ್ರಿಯೆಯ ನಂತರದ ತೀವ್ರ ರೋಗ ಸೋಂಕುಗಳು ಅನುರೂಪ ಪೂರಣದೊಂದಿಗೆ ಜತೆಗೂಡಿರುವ ಏಕೈಕ ಮಹತ್ತಮ ತೊಡಕಾಗಿ ತೋರಿಬರುತ್ತದೆ.”—ಟ್ರಾನ್ಸ್ಫ್ಯೂಶನ್ ಮೆಡಿಸನ್ ರಿವ್ಯೂಸ್, ಅಕ್ಟೋಬರ 1990.
[ಪುಟ 25 ರಲ್ಲಿರುವ ಚಿತ್ರ]
This picture is not printed in magazine. ಉತ್ಪ್ರೇಕ್ಷಿಸಲ್ಪಟ್ಟ ಕೆಂಪು ರಕ್ತ ಕಣಗಳು. “ಪ್ರತಿಯೊಂದು ಮೈಕ್ರೋಲಿಟರ್ (0.00003 ಔನ್ಸ್) ರಕ್ತದಲ್ಲಿ 40 ಲಕ್ಷದಿಂದ 60 ಲಕ್ಷ ಕೆಂಪು ರಕ್ತ ಕಣಗಳಿವೆ.—“ದಿ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ”
[ಕೃಪೆ]
Kunkel-CNRI/PHOTOTAKE NYC