ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಫೆಬ್ರವರಿ 3-9
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 12-14
“ನಿಮಗೆ ಪ್ರಯೋಜನ ತರುವ ಒಂದು ಒಡಂಬಡಿಕೆ”
(ಆದಿಕಾಂಡ 12:1, 2) ಯೆಹೋವನು ಅಬ್ರಾಮನಿಗೆ—ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. 2 ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು.
it-1-E ಪುಟ 522 ಪ್ಯಾರ 4
ಒಡಂಬಡಿಕೆ
ಅಬ್ರಹಾಮನೊಂದಿಗೆ ಒಡಂಬಡಿಕೆ. ಅಬ್ರಹಾಮ ಕಾನಾನ್ ಊರಿಗೆ ಹೋಗಲು ಯೂಫ್ರೇಟೀಸ್ ನದಿಯನ್ನು ದಾಟಿದಾಗ ಅಬ್ರಹಾಮನ ಒಡಂಬಡಿಕೆ ಜಾರಿಗೆ ಬಂತು. ಇದು ಜಾರಿಗೆ ಬಂದು 430 ವರ್ಷಗಳ ನಂತರ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ದೇವರು ಮಾಡಿಕೊಂಡನು. (ಗಲಾ 3:17) ಈ ಧರ್ಮಶಾಸ್ತ್ರದ ಒಡಂಬಡಿಕೆ ಯಾವಾಗ ಜಾರಿಗೆ ಬಂತು ಅಂತ ಗೊತ್ತಾದರೆ ಅಬ್ರಹಾಮನ ಒಡಂಬಡಿಕೆ ಯಾವ ದಿನ ಜಾರಿಗೆ ಬಂತು ಅಂತ ತಿಳುಕೊಳ್ಳಲು ಸಹಾಯ ಆಗುತ್ತೆ. ಅಬ್ರಹಾಮನು ಮೆಸಪಟೇಮ್ಯದ ಕಲ್ದೀಯರ ಊರ್ ಪಟ್ಟಣದಲ್ಲಿ ಇದ್ದಾಗ ತಾನು ತೋರಿಸುವ ದೇಶಕ್ಕೆ ಹೋಗು ಎಂದು ಯೆಹೋವನು ಹೇಳಿದ್ದನು. (ಅಕಾ 7:2, 3; ಆದಿ 11:31; 12:1-3) ಹಾಗೆ ಹೊರಟು ಬಂದ ಅಬ್ರಹಾಮನ ಸಂತತಿ ಬೆಳೆದು ಇಸ್ರಾಯೇಲ್ ಜನಾಂಗವಾಯಿತು. ಈ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಒಟ್ಟು 430 ವರ್ಷಗಳ ಕಾಲ ವಾಸವಾಗಿದ್ದರು. ಈಜಿಪ್ಟಿನಿಂದ ಇಸ್ರಾಯೇಲ್ಯರು ಬಿಡುಗಡೆಯಾದದ್ದು ಇಸವಿ ಕ್ರಿ.ಪೂ 1513, ನೈಸಾನ್ ತಿಂಗಳ 14 ನೇ ದಿನದ ಪಸ್ಕ ಹಬ್ಬದಂದು. (ವಿಮೋ 12: 2, 6, 7, 40, 41) ಧರ್ಮಶಾಸ್ತ್ರದ ಒಡಂಬಡಿಕೆ ಸಹ ಅದೇ ಸಮಯದಲ್ಲಿ (ಕಿ.ಪೂ.1513) ಜಾರಿಗೆ ಬಂತು. ಈ ಇಸವಿಯಿಂದ 430 ವರ್ಷ ಹಿಂದಕ್ಕೆ ಹೋದ್ರೆ ಅಬ್ರಹಾಮ ಯೂಫ್ರೇಟೀಸ್ ನದಿಯನ್ನು ದಾಟಿದ ದಿನಾಂಕ ಸಿಗುತ್ತೆ. ಅದು ಕ್ರಿ.ಪೂ 1943 ನೈಸಾನ್14 ರಂದು. ಆ ದಿನಾನೇ ಅಬ್ರಹಾಮನ ಒಡಂಬಡಿಕೆ ಜಾರಿಗೆ ಬಂತು ಎಂದು ಹೇಳಬಹುದು. ಅಬ್ರಹಾಮ ಕಾನಾನಿಗೆ ಪ್ರಯಾಣಿಸುತ್ತಾ ಶೆಕೆಮ್ ಊರಿಗೆ ಬಂದಾಗ ಯೆಹೋವನು ಮತ್ತೆ ಕಾಣಿಸಿಕೊಂಡು, ‘ನಾನು ಈ ದೇಶವನ್ನು ನಿನ್ನ ಸಂತತಿಗೆ ಕೊಡುವೆನು’ ಅಂತ ತನ್ನ ಒಡಂಬಡಿಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಟ್ಟನು. (ಆದಿ 12:4-7) ಹೀಗೆ ಈ ಒಡಂಬಡಿಕೆಗೂ, ಏದೆನ್ ತೋಟದಲ್ಲಿ ಮಾಡಿದ ಒಡಂಬಡಿಕೆಗೂ ಸಂಬಂಧ ಇದೆ ಅಂತ ಸೂಚಿಸಿದನು. ಇದು ಏದೆನ್ ತೋಟದಲ್ಲಿ ಮಾಡಿದ ಒಡಂಬಡಿಕೆಯಲ್ಲಿ ತಿಳಿಸಿದ “ಸಂತತಿ” ಮಾನವ ವಂಶಾವಳಿಯಲ್ಲಿ ಬರುತ್ತೆ ಅಂತ ತೋರಿಸಿಕೊಟ್ಟಿತು. ಆದಿಕಾಂಡ 13:14-17; 15:18; 17:2-8, 19; 22:15-18 ವಚನಗಳಲ್ಲಿ ಯೆಹೋವನು ಈ ಒಡಂಬಡಿಕೆಯ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಕೊಟ್ಟನು.
(ಆದಿಕಾಂಡ 12:3) ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.
21 ಪುಟ 13 ಪ್ಯಾರ 2ರಿಂದ ಪುಟ 14 ಪ್ಯಾರ 2
ಕಾವಲಿನಬುರುಜು89-E 7/1 ಪುಟ 3 ಪ್ಯಾರ 4
ಅಬ್ರಹಾಮನ ಬಗ್ಗೆ ತಿಳುಕೊಳ್ಳೋದು ಯಾಕೆ ಮುಖ್ಯ
ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ಆಶ್ಚರ್ಯಕರವಾಗಿತ್ತು. ಈ ವಾಗ್ದಾನನಾ ಅಬ್ರಹಾಮ ಎರಡು ಬಾರಿ ಕೇಳಿಸಿಕೊಂಡ. (ಆದಿಕಾಂಡ 18:18; 22:18) ದೇವರು ತನ್ನ ವಾಗ್ದಾನವನ್ನು ನೆರವೇರಿಸಲು ಸತ್ತವರನ್ನೂ ಎಬ್ಬಿಸುತ್ತಾನೆ. ಸಮಾಧಿಗಳಿಂದ ಎದ್ದು ಬರುವ ಜನರಿಗೆ ಇದೊಂದು ಆಶೀರ್ವಾದವೇ ಸರಿ, ಯಾಕೆಂದರೆ ದೇವರು ಉದ್ದೇಶಿಸಿದಂತೆ ಪರದೈಸ ಭೂಮಿಯಲ್ಲಿ ಅವರು ಜೀವಿಸುತ್ತಾರೆ. ನಂತರ ನಿತ್ಯಜೀವದ ಆಶೀರ್ವಾದ ಪಡೆಯಲು ಏನು ಮಾಡಬೇಕು ಅಂತ ಅವರಿಗೆ ಕಲಿಸಲಾಗುತ್ತೆ.—ಆದಿಕಾಂಡ 2:8, 9, 15-17; 3:17-23.
(ಆದಿಕಾಂಡ 13:14-17) ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ—ನೀನಿರುವ ಸ್ಥಳದಿಂದ ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು. 15 ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. 16 ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಲಾದೀತು. 17 ನೀನೆದ್ದು ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು ಎಂದು ಹೇಳಿದನು.
it-2-E ಪುಟ 213 ಪ್ಯಾರ 3
ನಿಯಮ
ಹಿಂದಿನ ಕಾಲದಲ್ಲಿ ಜಾಗ ಮಾರುವಾಗ ಅದರ ಉದ್ದಳತೆ ಮತ್ತು ಬೌಂಡ್ರಿಯನ್ನು ಖರೀದಿಸುವ ವ್ಯಕ್ತಿಗೆ ತೋರಿಸುತ್ತಿದ್ದರು ಅಂತ ಕೆಲವು ವಿದ್ವಾಂಸರು ಇತಿಹಾಸದ ದಾಖಲೆಗಳನ್ನು ಪರಿಶೋಧಿಸಿ ತಿಳುಕೊಂಡಿದ್ದಾರೆ. ಕೊಂಡುಕೊಳ್ಳುವವರು “ನೋಡಾಯ್ತು” ಅಂತ ಹೇಳೋದು ಆ ಜಾಗ ಒಪ್ಪಿಗೆ ಇದೆ ಅನ್ನೋದನ್ನ ಸೂಚಿಸುತ್ತಿತ್ತು. ಕಾನಾನ್ ದೇಶದ ಭೂಮಿಯನ್ನು ಯೆಹೋವನು ಅಬ್ರಹಾಮನಿಗೆ ಕೊಡುತ್ತೇನೆಂದು ಮಾತುಕೊಟ್ಟಾಗ, ನಾಲ್ಕೂ ದಿಕ್ಕಿನ ಕಡೆ ನೋಡಲು ಹೇಳಿದನು. ಅದಕ್ಕೆ ಅಬ್ರಹಾಮ “ನೋಡಾಯ್ತು” ಅಂತ ಹೇಳಲಿಲ್ಲ. ಯಾಕಂದ್ರೆ ದೇವರು ವಾಗ್ದಾತ್ತ ದೇಶವನ್ನು ಮುಂದೆ ಬರುವ ಸಂತತಿಗೆ ಕೊಡುತ್ತೇನೆಂದು ಮಾತುಕೊಟ್ಟಿದ್ದನು. (ಆದಿ 13:14, 15) ಯೆಹೋವ ದೇವರು ಇಸ್ರಾಯೇಲ್ಯರ ಪ್ರತಿನಿಧಿಯಾಗಿದ್ದ ಮೋಶೆಗೆ ವಾಗ್ದಾತ್ತ ದೇಶವನ್ನು ‘ನೋಡು’ ಅಂತ ಹೇಳಿದನು. ಆ ದೇಶವನ್ನು ಮೋಶೆ ನೋಡೋದೇ ಯೆಹೋಶುವನ ನಾಯಕತ್ವದ ಕೆಳಗೆ ಬರೋ ಇಸ್ರಾಯೇಲ್ಯರಿಗೆ ದೇಶವನ್ನು ಪರಿಶೀಲಿಸಿ ವರ್ಗಾಯಿಸುವುದನ್ನು ಸೂಚಿಸಿತ್ತು. (ಧರ್ಮೋ. 3:27, 28; 34:4; ಮತ್ತಾಯ 4:8 ರಲ್ಲಿ ಸೈತಾನನು ಯೇಸುವಿಗೆ ದೇಶಗಳನ್ನು ತೋರಿಸಿದರ ಬಗ್ಗೆ ಪರಿಗಣಿಸಿ). ಕೊಂಡುಕೊಳ್ಳುವವರು ಒಪ್ಪಿಗೆ ಸೂಚಿಸುವ ಇನ್ನೊಂದು ವಿಧ, ಜಾಗ ಕೊಂಡುಕೊಳ್ಳೋ ಉದ್ದೇಶದಿಂದ ಆ ಜಾಗದ ಎಲ್ಲಾ ಕಡೆ ತಿರುಗಾಡಿ ಪರಿಶೀಲಿಸೋದು ಅಥವಾ ಆ ಜಾಗನಾ ಪ್ರವೇಶಿಸೋದೇ ಆಗಿತ್ತು. (ಆದಿ 13:17; 28:13) ಇಂಥ ವ್ಯವಹಾರ ಮಾಡುವಾಗ ಆ ಜಾಗದಲ್ಲಿದ್ದ ಮರಗಳ ಲೆಕ್ಕಗಳನ್ನು ಸಹ ದಾಖಲಿಸುತ್ತಿದ್ದರು ಅಂತ ಪುರಾತನ ದಾಖಲೆಗಳು ತೋರಿಸುತ್ತವೆ.—ಆದಿ 23:17, 18 ಹೋಲಿಸಿ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 13:8, 9) ಹೀಗಿರಲು ಅಬ್ರಾಮನು ಲೋಟನಿಗೆ—ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ. 9 ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು ಎಂದು ಹೇಳಿದನು.
ಕಾವಲಿನಬುರುಜು16.05 ಪುಟ 5 ಪ್ಯಾರ 12
ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ
12 ಭಿನ್ನಾಭಿಪ್ರಾಯಗಳು ಇರುವಾಗ ದೇವರ ಸೇವಕರು ಹೇಗೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಬೈಬಲ್ ತೋರಿಸುತ್ತದೆ. ಅಬ್ರಹಾಮನ ಉದಾಹರಣೆ ಗಮನಿಸಿ. ಅವನ ಮತ್ತು ಅವನ ಸಹೋದರನ ಮಗ ಲೋಟನ ಬಳಿ ಅನೇಕ ದನಕುರಿಗಳಿದ್ದವು. ತಮ್ಮ ದನಕುರಿಗಳಿಗೆ ಮೇಯಲು ಸಾಕಷ್ಟು ಸ್ಥಳವಿಲ್ಲವೆಂದು ಕಂಡಾಗ ಅವರ ದನಗಾಹಿಗಳಲ್ಲಿ ಜಗಳವಾಯಿತು. ಅಬ್ರಹಾಮನು ಶಾಂತಿಯಿಂದ ಇರಲು ಬಯಸಿದ್ದರಿಂದ ಲೋಟನು ತನಗೆ ಬೇಕಾದ ಉತ್ತಮ ಪ್ರದೇಶವನ್ನು ಆದುಕೊಳ್ಳುವಂತೆ ಬಿಟ್ಟುಕೊಟ್ಟನು. (ಆದಿ. 13:1, 2, 5-9) ಇದು ನಮಗೆ ಒಳ್ಳೇ ಮಾದರಿ. ಅಬ್ರಹಾಮ ಉದಾರಭಾವ ತೋರಿಸಿದ್ದರಿಂದ ಅವನಿಗೆ ಖಾಯಂ ನಷ್ಟ ಆಯಿತಾ? ಇಲ್ಲ. ಇದಾದ ನಂತರ ಕೂಡಲೇ ಯೆಹೋವನು ಅಬ್ರಹಾಮನಿಗೆ ಅವನಿಗಾದ ನಷ್ಟಕ್ಕಿಂತಲೂ ಹೆಚ್ಚನ್ನು ಕೊಟ್ಟು ಆಶೀರ್ವದಿಸುವೆನೆಂದು ಮಾತುಕೊಟ್ಟನು. (ಆದಿ. 13:14-17) ಇದರಿಂದ ಏನು ಕಲಿಯುತ್ತೇವೆ? ನಮಗೆ ಕಷ್ಟನಷ್ಟವಾದರೂ ಭಿನ್ನಾಭಿಪ್ರಾಯಗಳನ್ನು ಪ್ರೀತಿಯಿಂದ ಬಗೆಹರಿಸುವಲ್ಲಿ ಯೆಹೋವನು ನಮ್ಮನ್ನು ಆಶೀರ್ವದಿಸುವನು.
(ಆದಿಕಾಂಡ 14:18-20) ಸಾಲೇಮಿನ ಅರಸನಾದ ಮೆಲ್ಕಿಚೆದೇಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದು ಅಬ್ರಾಮನನ್ನು ಆಶೀರ್ವದಿಸಿ—19 ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ;
20 ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು.
(ಇಬ್ರಿಯ 7:4-10) ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಕುಟುಂಬದ ತಲೆಯಾದ ಅಬ್ರಹಾಮನು ತನ್ನ ಮುಖ್ಯ ಸೂರೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು. 5 ಲೇವಿಯ ಪುತ್ರರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಧರ್ಮಶಾಸ್ತ್ರಕ್ಕನುಸಾರ ಜನರಿಂದ ಅಂದರೆ ಅಬ್ರಹಾಮನಿಗೆ ಹುಟ್ಟಿದವರಾದ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ಸಂಗ್ರಹಿಸುವಂತೆ ಆಜ್ಞೆಯನ್ನು ಹೊಂದಿದ್ದಾರೆ ಎಂಬುದು ನಿಜ. 6 ಆದರೆ ಅವರ ವಂಶಾವಳಿಗೆ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನನ್ನು ಆಶೀರ್ವದಿಸಿದನು. 7 ಕಡಮೆಯವನು ಶ್ರೇಷ್ಠನಾದವನಿಂದ ಆಶೀರ್ವದಿಸಲ್ಪಡುತ್ತಾನೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. 8 ಆ ಒಂದು ನಿದರ್ಶನದಲ್ಲಿ, ದಶಮಭಾಗಗಳನ್ನು ಪಡೆಯುವವರು ಸಾಯುತ್ತಿರುವ ಮನುಷ್ಯರು, ಆದರೆ ಇನ್ನೊಂದು ನಿದರ್ಶನದಲ್ಲಿ ಜೀವಿಸುತ್ತಾನೆ ಎಂದು ಯಾರ ಕುರಿತು ಸಾಕ್ಷಿಹೇಳಲಾಗಿದೆಯೋ ಅವನು ಅದನ್ನು ತೆಗೆದುಕೊಳ್ಳುತ್ತಾನೆ. 9 ಅಬ್ರಹಾಮನ ಮೂಲಕ ದಶಮಭಾಗಗಳನ್ನು ಪಡೆಯುವ ಲೇವಿಯೂ ದಶಮಭಾಗಗಳನ್ನು ಸಲ್ಲಿಸಿದ್ದಾನೆಂಬ ಅಭಿವ್ಯಕ್ತಿಯನ್ನು ನಾನು ಉಪಯೋಗಿಸಬಹುದು, 10 ಏಕೆಂದರೆ ಮೆಲ್ಕಿಜೆದೇಕನು ಲೇವಿಯ ಪೂರ್ವಜನನ್ನು ಸಂಧಿಸಿದಾಗ ಲೇವಿಯು ಇನ್ನೂ ಅವನ ಟೊಂಕದೊಳಗಿದ್ದನು.”
it-2-E ಪುಟ 683 ಪ್ಯಾರ 1
ಯಾಜಕ
ಸಾಲೇಮಿನ ಅರಸನಾದ ಮೆಲ್ಕಿಚೆದೇಕ ಒಬ್ಬ ಅಸಾಧಾರಣ ಯಾಜಕನಾಗಿದ್ದ (ಕೊಹೆನ್). ಬೈಬಲಿನಲ್ಲಿ ಅವನ ಹುಟ್ಟು, ಸಾವು ಅಥವಾ ಅವನ ಪೂರ್ವಜರ ಬಗ್ಗೆ ಯಾವ ಮಾಹಿತಿನೂ ಇಲ್ಲ. ಅವನು ಯಾಜಕತ್ವವನ್ನು ವಂಶಪರಂಪರೆಯಾಗಿ ಪಡೆಯಲಿಲ್ಲ, ಅವನ ಪೂರ್ವಜರಿಗಾಗಲಿ ಮಕ್ಕಳಿಗಾಗಲಿ ಯಾರಿಗೂ ಆ ಸ್ಥಾನ ಸಿಗಲಿಲ್ಲ. ಅವನು ರಾಜನೂ ಯಾಜಕನೂ ಆಗಿದ್ದನು. ಲೇವಿಯರ ಯಾಜಕತ್ವಕ್ಕಿಂತ ಉತ್ತಮ ಯಾಜಕತ್ವ ಇದಾಗಿತ್ತು. ಯಾಕಂದ್ರೆ ಲೇವಿಯ ಪೂರ್ವಜನಾದ ಅಬ್ರಹಾಮನೇ ಮೆಲ್ಕಿಚೆದೇಕನಿಗೆ ದಶಮಾಂಶವನ್ನು ಕೊಟ್ಟನು ಮತ್ತು ಮೆಲ್ಕಿಚೆದೇಕನು ಅಬ್ರಹಾಮನನ್ನು ಆಶೀರ್ವದಿಸಿದನು. (ಆದಿ 14:18-20; ಇಬ್ರಿ 7:4-10) ಹೀಗೆ ಮೆಲ್ಕಿಜೆದೇಕನು ಯೇಸು ಕ್ರಿಸ್ತನನ್ನು ಮುನ್ಸೂಚಿಸಿದ. ಯೇಸು ‘ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿದ್ದನು.’—ಇಬ್ರಿ 7:17.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು12-E 1/1 ಪುಟ 8
ಧೈರ್ಯ ತೋರಿಸಿದ ಮನುಷ್ಯ ಅಬ್ರಹಾಮ
ನಂಬಿಕೆ ತೋರಿಸುವುದರಲ್ಲಿ ಉತ್ತಮ ಮಾದರಿಯಾದ ವ್ಯಕ್ತಿಯನ್ನು ಸಾರಾ ಮದುವೆಯಾಗಿದ್ದಳು. ಸ್ತ್ರೀಯರು ಇವಳ ಮಾದರಿಯನ್ನು ಅನುಕರಿಸೋದು ಒಳ್ಳೇದೆಂದು ಬೈಬಲ್ ಮೂರು ಬಾರಿ ಹೇಳಿದೆ. (ಯೆಶಾಯ 51:1, 2; ಇಬ್ರಿಯ 11:11; 1 ಪೇತ್ರ 3:3-6) ಬೈಬಲ್ ಸಾರಳ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿಸದಿದ್ದರೂ, ಅವಳ ಬಗ್ಗೆ ನಾವು ಕಲೀಬಹುದು.
ಉದಾಹರಣೆಗೆ ದೇವರು ಅಬ್ರಹಾಮನಿಗೆ, ಅವನ ದೇಶವನ್ನೂ ಬಂಧುಬಳಗವನ್ನೂ ಬಿಟ್ಟು ತಾನು ತೋರಿಸುವ ದೇಶಕ್ಕೆ ಹೊರಟು ಹೋಗು ಎಂದು ಹೇಳಿದಾಗ ಸಾರಾ ಏನು ಮಾಡಿದಳು? ಊರನ್ನು ಬಿಟ್ಟು ಯಾಕೆ, ಎಲ್ಲಿಗೆ ಹೋಗ್ತಿದ್ದೇವೆ ಎಂದು ಯೋಚಿಸಿದಳಾ? ಎಲ್ಲಿ ಇರೋದು ಏನು ತಿನ್ನೋದು ಅಂತ ಚಿಂತಿಸಿದಳಾ? ನೆಂಟರನ್ನ, ಗೆಳತಿಯರನ್ನ ಬಿಟ್ಟು ಹೋಗ್ತಾ ಇದ್ದೀನಿ ಅಂತ ದುಃಖಪಟ್ಟಳಾ? ಇಂಥ ಯೋಚನೆಗಳು ಅವಳ ಮನಸ್ಸಿಗೆ ಬಂದ್ರೂ ಯೆಹೋವನ ಮಾತು ಕೇಳಿದ್ರೆ ಖಂಡಿತ ಆಶೀರ್ವಾದ ಸಿಗುತ್ತೆ ಅಂತ ನಂಬಿದಳು.—ಅಪೊಸ್ತಲರ ಕಾರ್ಯಗಳು 7:2, 3.
ಸಾರಾ ದೇವರ ನಂಬಿಗಸ್ತ ಸೇವಕಳು ಮಾತ್ರ ಅಲ್ಲ ಒಳ್ಳೇ ಹೆಂಡತಿ ಕೂಡ ಆಗಿದ್ದಳು. ಕುಟುಂಬದ ವ್ಯವಹಾರಗಳಲ್ಲಿ ಅಬ್ರಹಾಮನೊಂದಿಗೆ ಪೈಪೋಟಿ ಮಾಡುವ ಬದಲು ಅವನು ಕುಟುಂಬ ನಡೆಸುವಾಗ ಅವನಿಗೆ ಬೇಕಾದ ಪ್ರೀತಿಯ ಬೆಂಬಲ, ಗೌರವ ಕೊಟ್ಟಳು. ಹೀಗೆ ಮಾಡುವ ಮೂಲಕ ಸಾರ ತನ್ನನ್ನು ಒಳ್ಳೇ ಗುಣಗಳಿಂದ ಅಲಂಕರಿಸಿಕೊಂಡಳು.—1 ಪೇತ್ರ 3:1-6.
ಇಂಥ ಗುಣಗಳಿಂದ ಇಂದಿನ ಹೆಂಡತಿಯರಿಗೆ ಪ್ರಯೋಜನ ಆಗಿದೆಯಾ? “ಸಾರಳಂತೆ ನಾನೂ ಕೂಡ ನನ್ನ ಗಂಡನ ಜೊತೆ ಭಯಪಡದೆ ಮಾತಾಡಬೇಕು ಅಂತ ಕಲಿತೆ. ಇದರ ಜೊತೆ ಕೊನೆಯ ನಿರ್ಧಾರ ಮಾಡುವ ಜವಾಬ್ದಾರಿ ಗಂಡನಿಗೆ ಮಾತ್ರ ಇದೆ ಅಂತಾನೂ ಕಲಿತೆ. ಇದರ ನಂತರ ಏನೇ ಆಗಲಿ ಗಂಡನ ನಿರ್ಧಾರದಂತೆ ಮಾಡುವುದು ನನ್ನ ಕೆಲಸ” ಅಂತ 30 ವರ್ಷದಿಂದ ವೈವಾಹಿಕ ಜೀವನ ಆನಂದಿಸುತ್ತಿರುವ ಜಿಲ್ ಹೇಳುತ್ತಾಳೆ.
ಸಾರಳಿಂದ ನಾವು ಕಲಿಯುವ ಮನಮುಟ್ಟುವ ಪಾಠ ಯಾವುದೆಂದರೆ, ಅವಳು ಸುಂದರವಾಗಿ ಇದ್ದರೂ ಅವಳಲ್ಲಿ ಹೆಮ್ಮೆ ಇರಲಿಲ್ಲ. (ಆದಿಕಾಂಡ 12:10-13) ಬದಲಾಗಿ ಜೀವನದ ಕಷ್ಟ ಸುಖದಲ್ಲಿ ಅಬ್ರಹಾಮನಿಗೆ ದೀನತೆಯಿಂದ ವಿಧೇಯಳಾದಳು. ಅಬ್ರಹಾಮ ಮತ್ತು ಸಾರಾ ನಂಬಿಗಸ್ತ, ದೀನ, ಪ್ರೀತಿಯ ದಂಪತಿಯಾಗಿದ್ದರು ಮತ್ತು ಪರಸ್ಪರ ಸಂತೋಷ ಪಡಕೊಂಡರು ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ.
ಫೆಬ್ರವರಿ 10-16
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 15-17
“ಅಬ್ರಾಮ ಮತ್ತು ಸಾರಯಳ ಹೆಸರನ್ನು ಯೆಹೋವನು ಯಾಕೆ ಬದಲಿಸಿದನು?”
(ಆದಿಕಾಂಡ 17:1) ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಯೆಹೋವನು ಅವನಿಗೆ ದರ್ಶನಕೊಟ್ಟು—ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು.
it-1-E ಪುಟ 817
ದೋಷ, ದೋಷವನ್ನು ಹುಡುಕೋದು
ಹುಟ್ಟಿನಿಂದ ನಾವು ಪಾಪ ದೋಷವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ಹಾಗಾಗಿ ಮನುಷ್ಯನು ಮಾಡುವುದು, ಯೋಚಿಸುವುದು ಎಲ್ಲವೂ ದೋಷವುಳ್ಳದ್ದು. (ರೋಮ 5:12; ಕೀರ್ತ 51:5) ಆದರೆ ಯೆಹೋವನು ದೋಷವಿಲ್ಲದವನು. ಹಾಗಿದ್ದರೂ ‘ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಂಡು’ ಕರುಣೆ ತೋರಿಸುತ್ತಾನೆ. (ಕೀರ್ತ 103:13, 14) ನೋಹ “ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು” ಅಂತ ಯೆಹೋವನು ಹೇಳುತ್ತಾನೆ. (ಆದಿ 6:9) ‘ನನಗೆ ವಿಧೇಯನಾಗಿ ನಡಕೊಂಡು ದೋಷವಿಲ್ಲದವನಾಗಿರು’ ಅಂತ ದೇವರು ಅಬ್ರಹಾಮನಿಗೆ ಆಜ್ಞೆಕೊಟ್ಟನು. (ಆದಿ 17:1) ನೋಹ ಮತ್ತು ಅಬ್ರಹಾಮ ಇಬ್ಬರೂ ಅಪರಿಪೂರ್ಣರಾಗಿದ್ದರು. ಆದರೂ ಯೆಹೋವನು ಅವರನ್ನು ದೋಷವಿಲ್ಲದವರು ಅಂತ ಪರಿಗಣಿಸಿದನು. ಯಾಕಂದ್ರೆ ಯೆಹೋವನು ‘ಹೃದಯಗಳನ್ನು ನೋಡಿ’ ನಿರ್ಧರಿಸುತ್ತಾನೆ. (1ಸಮು 16:7; 2ಅರ 20:3 ನ್ನು ಹೋಲಿಸಿ; 2ಪೂರ್ವ 16:9) ಇಸ್ರಾಯೇಲ್ಯರಿಗು ಸಹ ಯೆಹೋವನು, ‘ನೀವು ನಿಮ್ಮ ದೇವರಾದ ಯೆಹೋವನ ಸೇವೆಯ ವಿಷಯದಲ್ಲಿ ನಿರ್ದೋಷಿಗಳಾಗಿರಬೇಕು’ ಅಂತ ಆಜ್ಞಾಪಿಸಿದನು. (ಧರ್ಮೋ 18:13; 2ಸಮು 22:24) ಅಷ್ಟೇ ಅಲ್ಲ, ಯೆಹೋವನು ನಿರ್ದೋಷಿಯಾದ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೂಡ ಕೊಟ್ಟನು. (ಇಬ್ರಿ 7:26) ಇದರಲ್ಲಿ ನಂಬಿಕೆಯಿಟ್ಟಿರುವ ಮನುಷ್ಯನನ್ನು ಯೆಹೋವನು “ನೀತಿವಂತನು” ಅಂತ ನಿರ್ಣಯಿಸುತ್ತಾನೆ. ಹೀಗೆ ನಿರ್ಣಯಿಸುವಾಗ ದೇವರು ತಾನೊಬ್ಬ ದೋಷವಿಲ್ಲದ, ನೀತಿವಂತ ನ್ಯಾಯಾಧಿಪತಿ ಅಂತ ತೋರಿಸಿಕೊಡುತ್ತಾನೆ.—ರೋಮ 3:25, 26.
(ಆದಿಕಾಂಡ 17:3-5) ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತಾಡಿ—ನಾನಂತೂ ನಿನಗೆ ವಾಗ್ದಾನಮಾಡುತ್ತೇನೆ; 4 ಏನಂದರೆ ನೀನು ಅನೇಕಜನಾಂಗಗಳಿಗೆ ಮೂಲಪುರುಷನಾಗುವಿ. 5 ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವದಿಲ್ಲ. ನಿನ್ನನ್ನು ಅನೇಕಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವದರಿಂದ ನಿನಗೆ ಅಬ್ರಹಾಮನೆಂದು ಹೆಸರಿರುವದು.
it-1-E ಪುಟ 31 ಪ್ಯಾರ 1
ಅಬ್ರಹಾಮ
ಅಬ್ರಹಾಮ ಕಾನಾನ್ ದೇಶಕ್ಕೆ ಬಂದು ಹತ್ತು ವರ್ಷಗಳಾದರೂ ಸಾರಾಳಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳು ತನ್ನ ದಾಸಿಯಾಗಿದ್ದ ಐಗುಪ್ತದ ಹಾಗರಳನ್ನು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು. ಕ್ರಿ.ಪೂ 1932 ರಲ್ಲಿ ಅಬ್ರಹಾಮನಿಗೆ 86 ವರ್ಷ ಆಗಿದ್ದಾಗ ಇಷ್ಮಾಯೇಲ ಹುಟ್ಟಿದ. (ಆದಿ 16:3, 15, 16) ಕ್ರಿ.ಪೂ 1919 ರಲ್ಲಿ ಅಬ್ರಹಾಮನಿಗೆ 99 ವರ್ಷ ಆದಾಗ ಯೆಹೋವನು ತನ್ನ ಮತ್ತು ಅಬ್ರಹಾಮನ ನಡುವೆ ಆದ ಒಡಂಬಡಿಕೆಯ ಗುರುತಾಗಿ “ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು” ಅಂತ ಆಜ್ಞಾಪಿಸಿದನು. ಇದರ ಜೊತೆ, “ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವದಿಲ್ಲ. ನಿನ್ನನ್ನು ಅನೇಕಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವದರಿಂದ ನಿನಗೆ ಅಬ್ರಹಾಮನೆಂದು ಹೆಸರಿರುವದು” ಎಂದು ಸಹ ಹೇಳಿದನು. (ಆದಿ 17:5, 9-27; ರೋಮ 4:11) ಇದಾಗಿ ಸ್ವಲ್ಪ ಸಮಯದ ನಂತರ, ಯೆಹೋವನ ಹೆಸರಿನಲ್ಲಿ ಬಂದ ಮೂರು ದೇವ ದೂತರಿಗೆ ಅಬ್ರಹಾಮ ಅತಿಥಿ ಸತ್ಕಾರ ಮಾಡಿದನು. ಆ ದೇವದೂತರು ಅವನಿಗೆ “ಬರುವ ವರುಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು” ಎಂದು ಹೇಳಿದರು.—ಆದಿ 18:1-15.
(ಆದಿಕಾಂಡ 17:15, 16) ಇದಲ್ಲದೆ ದೇವರು ಅಬ್ರಹಾಮನಿಗೆ—ನೀನು ಇನ್ನು ಮುಂದೆ ನಿನ್ನ ಪತ್ನಿಯನ್ನು ಸಾರಯಳೆಂದು ಕರೆಯದೆ ಸಾರಾ ಎಂದು ಕರೆಯಬೇಕು. 16 ನಾನು ಆಕೆಯನ್ನು ಆಶೀರ್ವದಿಸಿ ಆಕೆಯಲ್ಲಿ ನಿನಗೆ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು.
ಕಾವಲಿನಬುರುಜು09-E 2/1 ಪುಟ 13
ಹೆಸರಿನ ಪ್ರಾಮುಖ್ಯತೆ
ಪ್ರವಾದನೆಯ ನೆರವೇರಿಕೆಗೋಸ್ಕರ ದೇವರು ಕೆಲವು ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಿದನು. ಉದಾಹರಣೆಗೆ, ದೇವರು ಅಬ್ರಾಮ (“ಅತ್ಯುನ್ನತ ತಂದೆ”) ಹೆಸರನ್ನು ಅಬ್ರಹಾಮ (“ಅನೇಕ ಜನಾಂಗಗಳಿಗೆ ಮೂಲಪುರುಷ”) ಎಂದು ಬದಲಾಯಿಸಿದನು. ಹೆಸರಿಗೆ ತಕ್ಕಂತೆ ಅಬ್ರಹಾಮ ಅನೇಕ ಜನಾಂಗಗಳಿಗೆ ಮೂಲಪಿತನಾದನು. (ಆದಿಕಾಂಡ 17:5, 6) ಸಾರಯ ಅಂದರೆ “ವಿವಾದಾಸ್ಪದ”. ಈ ಹೆಸರನ್ನು ಯೆಹೋವನು “ಸಾರಾ” ಅಂದರೆ “ರಾಜಕುಮಾರಿ” ಅಂತ ಬದಲಾಯಿಸಿದನು. ಆಕೆ ಅನೇಕ ಅರಸರಿಗೆ ಪೂರ್ವಜೆಯಾಗಲಿದ್ದಳು ಅನ್ನೋದನ್ನು ಇದು ಸೂಚಿಸಿತು. ಈ ಹೆಸರು ಪಡೆದಾಗ ಅವಳಿಗೆ ತುಂಬಾ ಸಂತೋಷವಾಯಿತು.—ಆದಿಕಾಂಡ 17:15, 16.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 15:13, 14) ಆಗ ಯೆಹೋವನು ಅವನಿಗೆ—ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ—ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು. 14 ಅವರಿಂದ ಬಿಟ್ಟೀ ಕೆಲಸ ಮಾಡಿಸಿಕೊಂಡ ಜನಾಂಗವನ್ನು ನಾನು ಶಿಕ್ಷಿಸಿದನಂತರ ಅವರು ಬಹಳ ಆಸ್ತಿವಂತರಾಗಿ ಆ ದೇಶದಿಂದ ಬಿಡುಗಡೆಯಾಗಿ ಬರುವರು.
it-1-E ಪುಟ 460-461
ಕಾಲಗಣನೆ
ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ—ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು” ಅಂತ ಹೇಳಿದನು. (ಆದಿ 15:13; ಅಕಾ 7:6, 7 ಸಹ ನೋಡಿ) ಈ ಮಾತುಗಳನ್ನು ಹೇಳಿದಾಗ ವಾಗ್ದತ್ತ ‘ಸಂತತಿಯಾದ’ ಇಸಾಕ ಇನ್ನೂ ಹುಟ್ಟಿರಲಿಲ್ಲ. ಕ್ರಿ.ಪೂ 1932 ರಲ್ಲಿ ಅಬ್ರಹಾಮನಿಗೆ ಈಜಿಪ್ಟಿನ ದಾಸಿಯಾದ ಹಾಗರಳ ಮೂಲಕ ಇಷ್ಮಾಯೇಲ ಹುಟ್ಟಿದನು. ಇಸಾಕ ಹುಟ್ಟಿದ್ದು ಕ್ರಿ.ಪೂ 1918 ರಲ್ಲಿ. (ಆದಿ 16:16; 21:5) ಇಸ್ರಾಯೇಲ್ ಜನಾಂಗದ ಬಾಧೆ, ಅವರು ಈಜಿಪ್ಟಿನಿಂದ ಬಿಡುಗಡೆಯಾದಾಗ ಅಂದರೆ ಕ್ರಿ.ಪೂ 1513 ರಲ್ಲಿ ಕೊನೆಗೊಂಡಿತು. ಈ ವರ್ಷದಿಂದ 400 ವರ್ಷಗಳು ಹಿಂದೆ ಬರುವುದಾದರೆ ಕ್ರಿ.ಪೂ 1913 ಕ್ಕೆ ಬರುತ್ತೆ. (ಆದಿ 15:14) ಆ ಸಮಯದಲ್ಲಿ ಇಸಾಕನಿಗೆ 5 ವರ್ಷ, ತಾಯಿಯ ಹಾಲು ಕುಡಿಯುವುದನ್ನು ಆಗತಾನೇ ನಿಲ್ಲಿಸಿದ್ದನು. ಅವನು ಇದ್ದದ್ದು ಅನ್ಯ ದೇಶದಲ್ಲಿ. 19 ವರ್ಷದವನಾಗಿದ್ದ ಇಷ್ಮಾಯೇಲ ಇಸಾಕನನ್ನು ಗೇಲಿ ಮಾಡುವಾಗ ಮುಂತಿಳಿಸಿದ ಬಾಧೆಗಳು ಆರಂಭವಾದವು. (ಆದಿ 21:8, 9) ನಮ್ಮೀ ದಿನಗಳಲ್ಲಿ ಇಷ್ಮಾಯೇಲನು ಈ ರೀತಿ ಗೇಲಿ ಮಾಡುವುದು ಚಿಕ್ಕ ವಿಷಯವಾಗಿದ್ದರೂ ಅಬ್ರಹಾಮನ ಕಾಲದಲ್ಲಿ ಇದೊಂದು ಗಂಭೀರ ವಿಷಯವಾಗಿತ್ತು. ಇಲ್ಲವಾದರೆ ಸಾರಳು ಆ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕಲು ಹೇಳುತ್ತಿರಲಿಲ್ಲ. ಯೆಹೋವನೂ ಇದನ್ನು ಅನುಮತಿಸುತ್ತಿರಲಿಲ್ಲ. (ಆದಿ 21:10-13) ದೇವರ ವಾಕ್ಯದಲ್ಲಿ ಈ ವೃತ್ತಾಂತದ ಬಗ್ಗೆ ಸವಿವರವಾಗಿ ತಿಳಿಸಿರೋದ್ರಿಂದ ಪ್ರವಾದಿಸಿದ 400 ವರ್ಷಗಳ ಸಂಕಟದ ಸಮಯದ ಪ್ರಾರಂಭ ಕ್ರಿ.ಪೂ 1913 ರಲ್ಲಿ ಆಗಿ, ಇಸ್ರಾಯೇಲ್ಯರ ಬಿಡುಗಡೆಯ ಸಮಯದಲ್ಲಿ ಅಂದರೆ ಕ್ರಿ.ಪೂ 1513 ರಲ್ಲಿ ಕೊನೆಯಾಯಿತು ಅಂತ ಗೊತ್ತಾಗುತ್ತೆ.—ಗಲಾ 4:29.
(ಆದಿಕಾಂಡ 15:16) ನಿನ್ನ ಸಂತತಿಯವರು ನಾಲ್ಕನೆಯ ತಲಾಂತರದಲ್ಲಿ ಇಲ್ಲಿಗೆ ತಿರಿಗಿ ಬರುವರು; ಅಮೋರಿಯರ ಅಪರಾಧವು ಇನ್ನೂ ಪೂರ್ಣ ಸ್ಥಿತಿಗೆ ಬರಲಿಲ್ಲ ಎಂದು ಹೇಳಿದನು.
it-1-E ಪುಟ 778 ಪ್ಯಾರ 4
ಇಸ್ರಾಯೇಲ್ಯರ ಬಿಡುಗಡೆ
“ನಾಲ್ಕನೆಯ ತಲಾಂತರದಲ್ಲಿ.” ಯೆಹೋವನು ಅಬ್ರಹಾಮನಿಗೆ “ನಿನ್ನ ಸಂತತಿಯವರು ನಾಲ್ಕನೆಯ ತಲಾಂತರದಲ್ಲಿ” ಕಾನಾನಿಗೆ ತಿರಿಗಿ ಬರುವರು ಅಂತ ಹೇಳಿದನು. (ಆದಿ 15:16) ಅಬ್ರಹಾಮನ ಒಡಂಬಡಿಕೆಯ ಪ್ರಾರಂಭದಿಂದ ಇಸ್ರಾಯೇಲ್ಯರ ಬಿಡುಗಡೆಯ ಸಮಯದ ವರೆಗೆ ಅಂದ್ರೆ ಈ 430 ವರ್ಷಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಸಂತತಿಗಳು ಇದ್ದವು. ದಾಖಲೆಗಳ ಪ್ರಕಾರ ಕೆಲವರು ಆ ಕಾಲದಲ್ಲಿ ಹೆಚ್ಚು ವರ್ಷ ಬದುಕಿದರು. ಹಾಗಾದರೆ ಇಸ್ರಾಯೇಲ್ಯರು ಕಾನಾನಿಗೆ ನಾಲ್ಕನೆಯ ತಲೆಮಾರಿನಲ್ಲಿ ಹಿಂದಿರುಗಿದ್ದು ಹೇಗೆ? ಇಸ್ರಾಯೇಲ್ಯರು ಈಜಿಪ್ಟ್ನಲ್ಲಿ ನಿಜವಾಗಿ ಇದ್ದದ್ದು ಕೇವಲ 215 ವರ್ಷ ಮಾತ್ರ. ಇಸ್ರಾಯೇಲ್ ಜನಾಂಗ ಈಜಿಪ್ಟ್ ದೇಶಕ್ಕೆ ಪ್ರವೇಶಿಸಿದ ಸಮಯದಿಂದ ಕಾನಾನಿಗೆ ಬರುವವರೆಗೂ ಅದರಲ್ಲಿ ಒಟ್ಟು 4 ಸಂತತಿಗಳು (ತಲೆಮಾರುಗಳು) ಇದ್ದವು. ಇದಕ್ಕೆ ಲೇವಿ ಕುಲ ಒಂದು ಒಳ್ಳೆಯ ಉದಾಹರಣೆ. ಅದರ ನಾಲ್ಕು ತಲೆಮಾರುಗಳು: (1) ಲೇವಿ (2) ಕೆಹಾತ್ (3) ಅಮ್ರಾಮ್ ಮತ್ತು (4) ಮೋಶೆ.—ವಿಮೋ 6:16, 18, 20.
ಫೆಬ್ರವರಿ 17-23
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 18-19
“‘ಸರ್ವಲೋಕಕ್ಕೆ ನ್ಯಾಯತೀರಿಸುವವನು’ ಸೊದೋಮ್ ಮತ್ತು ಗೊಮೋರವನ್ನು ನಾಶಮಾಡುತ್ತಾನೆ”
(ಆದಿಕಾಂಡ 18:23-25) ಆಗ ಅಬ್ರಹಾಮನು ಹತ್ತಿರಕ್ಕೆ ಬಂದು—ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? 24 ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? 25 ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ.
ಕಾವಲಿನಬುರುಜು17.04 ಪುಟ 18 ಪ್ಯಾರ 1
‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ
“ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂಬ ಪ್ರಶ್ನೆಯನ್ನು ಅಬ್ರಹಾಮ ಕೇಳಿದನು. (ಆದಿ. 18:25) ಅವನ ಮನಸ್ಸಿನಲ್ಲಿ ಸಂಶಯ ಇದ್ದದರಿಂದ ಹೀಗೆ ಕೇಳಲಿಲ್ಲ. ಸೊದೋಮ್ ಗೊಮೋರ ಪಟ್ಟಣಗಳ ಮೇಲೆ ಯೆಹೋವನು ಹೊರಡಿಸುವ ತೀರ್ಪು ಸರಿಯಾಗಿರುತ್ತದೆ ಅನ್ನುವ ದೃಢಭರವಸೆ ಅಬ್ರಹಾಮನಿಗಿತ್ತೆಂದು ಅವನ ಮಾತಿನಿಂದ ಗೊತ್ತಾಗುತ್ತದೆ. ಯೆಹೋವನು ‘ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದಿಲ್ಲ’ ಎಂದು ಅಬ್ರಹಾಮನಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯದಲ್ಲಿ ಅವನಿಗೆ ಯಾವ ಸಂಶಯವೂ ಇರಲಿಲ್ಲ. ಯೆಹೋವನು ಇಸ್ರಾಯೇಲ್ಯರಿಗೆ ತನ್ನ ಬಗ್ಗೆಯೇ ಹೇಳಿದ್ದು: “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋ. 31:19; 32:4.
(ಆದಿಕಾಂಡ 18:32) ಅಬ್ರಹಾಮನು—ಸ್ವಾಮೀ, ನಿನಗೆ ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು ಎನ್ನಲು ಆತನು—ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶಮಾಡುವದಿಲ್ಲ ಅಂದನು.
ಕಾವಲಿನಬುರುಜು18.08 ಪುಟ 30 ಪ್ಯಾರ 4
ತಾಳ್ಮೆ—ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು
ತಾಳ್ಮೆ ತೋರಿಸುವುದರಲ್ಲಿ ಯೆಹೋವನಿಗಿಂತ ಉತ್ತಮ ಮಾದರಿ ಬೇರೆ ಯಾರೂ ಇಲ್ಲ. (2 ಪೇತ್ರ 3:15) ಆತನು ಎಷ್ಟು ತಾಳ್ಮೆ ತೋರಿಸಿದ್ದಾನೆ ಎಂದು ನಾವು ಬೈಬಲಲ್ಲಿ ಆಗಾಗ ಓದುತ್ತೇವೆ. (ನೆಹೆ. 9:30; ಯೆಶಾ. 30:18) ಒಂದು ಸಂದರ್ಭದಲ್ಲಿ ಯೆಹೋವನು ಅಬ್ರಹಾಮನ ಜೊತೆ ಎಷ್ಟು ತಾಳ್ಮೆಯಿಂದ ನಡಕೊಂಡನು ಎಂದು ನಿಮಗೆ ನೆನಪಿದೆಯಾ? ತಾನು ಸೋದೋಮನ್ನು ನಾಶಮಾಡುತ್ತೇನೆ ಎಂದು ಹೇಳಿದಾಗ ಅಬ್ರಹಾಮ ಒಂದರ ನಂತರ ಒಂದು ಪ್ರಶ್ನೆ ಕೇಳಿದನು. ಅವನು ಮಾತಾಡುವಾಗ ಯೆಹೋವನು ಮಧ್ಯೆ ಮಾತಾಡಲಿಲ್ಲ. ಅವನು ಒಂದೊಂದು ಪ್ರಶ್ನೆಯನ್ನು ಕೇಳಿದಾಗಲೂ ತನ್ನ ಚಿಂತೆಯನ್ನು ಹೇಳಿಕೊಂಡಾಗಲೂ ತಾಳ್ಮೆಯಿಂದ ಕೇಳಿಸಿಕೊಂಡನು. ಆಮೇಲೆ ಯೆಹೋವನು ಅಬ್ರಹಾಮನ ಚಿಂತೆಯನ್ನೆಲ್ಲ ಕೇಳಿಸಿಕೊಂಡಿದ್ದೇನೆ ಎಂದು ತೋರಿಸಿದನು ಮತ್ತು ಸೋದೋಮಲ್ಲಿ 10 ಜನ ಒಳ್ಳೆಯವರು ಸಿಕ್ಕಿದರೂ ಆ ಪಟ್ಟಣವನ್ನು ನಾಶಮಾಡಲ್ಲ ಎಂಬ ಭರವಸೆ ಕೊಟ್ಟನು. (ಆದಿ. 18:22-33) ಯೆಹೋವನು ಯಾವಾಗಲೂ ಬೇರೆಯವರು ಮಾತಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾನೆ ಮತ್ತು ಎಂದೂ ಅತಿಯಾಗಿ ಪ್ರತಿಕ್ರಿಯಿಸಲ್ಲ.
(ಆದಿಕಾಂಡ 19:24, 25) ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ 25 ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ ಆ ಪಟ್ಟಣಗಳನ್ನೂ ಸುತ್ತಲಿರುವ ಸೀಮೆಯೆಲ್ಲವನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂಮಿಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳುಮಾಡಿದನು.
ಕಾವಲಿನಬುರುಜು10 11/15 ಪುಟ 26 ಪ್ಯಾರ 12
ಯೆಹೋವನು ನಮ್ಮ ಪರಮಾಧಿಕಾರಿ ಕರ್ತ!
12 ಯೆಹೋವನು ಬೇಗನೆ ತನ್ನ ಪರಮಾಧಿಕಾರವನ್ನು ಖಂಡಿತ ಸಮರ್ಥಿಸುವನೆಂಬ ನಿಶ್ಚಯತೆ ನಮಗಿರಬಲ್ಲದು. ಆತನು ದುಷ್ಟತನವನ್ನು ನಿರಂತರವಾಗಿ ಸಹಿಸಿಕೊಳ್ಳನು. ಮತ್ತು ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆಂದು ನಮಗೆ ಗೊತ್ತಿದೆ. ಜಲಪ್ರಳಯದ ಸಮಯದಲ್ಲಿ ಯೆಹೋವನು ದುಷ್ಟರ ವಿರುದ್ಧವಾಗಿ ಕ್ರಮಕೈಗೊಂಡನು. ಸೊದೋಮ್ ಗೊಮೋರವನ್ನು ದುಷ್ಟತನಕ್ಕಾಗಿ ನಾಶಮಾಡಿದನು. ದೇವರನ್ನು ವಿರೋಧಿಸಿದ ಫರೋಹನನ್ನೂ ಅವನ ಸೈನ್ಯವನ್ನೂ ನಿರ್ನಾಮ ಮಾಡಿದನು. ಸೀಸೆರ ಮತ್ತು ಅವನ ಸೈನ್ಯ, ಸನ್ಹೇರೀಬ ಮತ್ತು ಅವನ ಅಶ್ಶೂರ್ಯ ಸೇನೆ ಮಹೋನ್ನತನನ್ನು ಎದುರಿಸಲಾರದೆ ಸೋತುಹೋದವು. (ಆದಿ. 7:1, 23; 19:24, 25; ವಿಮೋ. 14:30, 31; ನ್ಯಾಯ. 4:15, 16; 2 ಅರ. 19:35, 36) ಆದ್ದರಿಂದ ತನ್ನ ನಾಮಕ್ಕೆ ಅಗೌರವ ತೋರಿಸುವವರನ್ನು, ತನ್ನ ಸಾಕ್ಷಿಗಳನ್ನು ದುರುಪಚರಿಸುವವರನ್ನು ಯೆಹೋವನು ನಿರಂತರವೂ ಸಹಿಸಲಾರನು ಎಂಬ ಭರವಸೆ ನಮಗಿರಬಲ್ಲದು. ಅದಲ್ಲದೆ ಯೇಸುವಿನ ಸಾನ್ನಿಧ್ಯದ ಸೂಚನೆಗೆ ಹಾಗೂ ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ಪುರಾವೆಯನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ.—ಮತ್ತಾ. 24:3.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 18:1) ಅಬ್ರಹಾಮನು ಮಧ್ಯಾಹ್ನದಲ್ಲಿ ಮಮ್ರೇತೋಪಿನ ತನ್ನ ಗುಡಾರದ ಬಾಗಲಲ್ಲಿ ಕೂತಿರುವಾಗ ಯೆಹೋವನು ಅವನಿಗೆ ದರ್ಶನಕೊಟ್ಟನು.
(ಆದಿಕಾಂಡ 18:22) ಆ ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನ ಎದುರಾಗಿ ಇನ್ನೂ ನಿಂತನು.
ಕಾವಲಿನಬುರುಜು88-E 5/15 ಪುಟ 23 ಪ್ಯಾರ 4-5
ದೇವರನ್ನು ಯಾರಾದರು ನೋಡಿದ್ದಾರಾ?
ಈ ದೇವದೂತ ಯೆಹೋವ ದೇವರು ಏನು ಹೇಳಲು ಬಯಸಿದ್ರೋ ಅದನ್ನೇ ಅಬ್ರಹಾಮನಿಗೆ ಹೇಳಿದ ಮತ್ತು ಯೆಹೋವನನ್ನು ಪ್ರತಿನಿಧಿಸಲು ಸ್ವತಃ ಅವನೇ ಅಲ್ಲಿದ್ದ. ಹಾಗಾಗಿ ಬೈಬಲ್ “ಯೆಹೋವನು ಅವನಿಗೆ ದರ್ಶನಕೊಟ್ಟನು” ಅಂತ ಹೇಳುತ್ತೆ. (ಆದಿಕಾಂಡ 18:1) ದೇವರ ಪ್ರತಿನಿಧಿಯಾಗಿದ್ದ ದೇವದೂತನೊಂದಿಗೆ ಮಾತಾಡಿದಾಗ ಯೆಹೋವನೊಟ್ಟಿಗೇ ಮಾತಾಡುತ್ತಿದ್ದೇನೆ ಎಂಬಂತೆ ಅಬ್ರಹಾಮ ಮಾತಾಡಿದ ಅಂತ ಇದರಿಂದ ಗೊತ್ತಾಗುತ್ತೆ.
ದೇವರು ಉಪಯೋಗಿಸೋ ಈ ದೇವದೂತರನ್ನು ಫೋನ್ ಅಥವಾ ರೇಡಿಯೋಗೆ ಹೋಲಿಸಬಹುದು. ಅವು ಹೇಗೆ ಒಬ್ಬ ವ್ಯಕ್ತಿಯ ಮಾತನ್ನು ಇನ್ನೊಬ್ಬನಿಗೆ ನಿಖರವಾಗಿ ದಾಟಿಸಲು ಸಹಾಯಮಾಡುತ್ತವೋ ಹಾಗೇ ಈ ದೇವದೂತರು ಸಹ ದೇವರ ಮಾತನ್ನು ಮನುಷ್ಯರಿಗೆ ಅಷ್ಟು ನಿಖರವಾಗಿ ದಾಟಿಸುತ್ತಿದ್ದರು. ಹಾಗಾಗಿ ಅಬ್ರಹಾಮ, ಮೋಶೆ, ಮಾನೋಹ ಸ್ವತಃ ಯೆಹೋವನೊಟ್ಟಿಗೇ ಮಾತಾಡಿದಂತೆ ಯಾಕೆ ಹೇಳಿದರು ಅಂತ ಈಗ ನಮಗೆ ಗೊತ್ತಾಯಿತು. ಇವರೆಲ್ಲ ಆ ದೇವದೂತರನ್ನು, ಅವರು ತೋರುತ್ತಿದ್ದ ಯೆಹೋವನ ಮಹಿಮೆಯನ್ನು ನೋಡಬಹುದಿತ್ತೇ ಹೊರತು ಯೆಹೋವನನ್ನೇ ನೋಡಲು ಆಗುತ್ತಿರಲಿಲ್ಲ. ಇದರಿಂದ ಯೋಹಾನ ಹೇಳಿದ ಮಾತು ಸುಳ್ಳಲ್ಲ ಅಂತ ಗೊತ್ತಾಗುತ್ತೆ. ಅವನು ಹೇಳಿದ್ದು: “ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ.” (ಯೋಹಾನ 1:18) ಇವರೆಲ್ಲ ನೋಡಿದ್ದು ಯೆಹೋವನನ್ನು ಪ್ರತಿನಿಧಿಸುತ್ತಿದ್ದ ದೇವದೂತರನ್ನೇ ಹೊರತು ಸ್ವತಃ ದೇವರನ್ನಲ್ಲ.
(ಆದಿಕಾಂಡ 19:26) ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂದಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.
ಕಾವಲಿನಬುರುಜು19.06 ಪುಟ 20 ಪ್ಯಾರ 3
ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ
3 ಲೋಟನು ಸೋದೋಮಿನ ನೀತಿಗೆಟ್ಟ ಜನರ ಮಧ್ಯೆ ವಾಸಿಸುವ ತೀರ್ಮಾನ ಮಾಡಿದ್ದು ದೊಡ್ಡ ತಪ್ಪಾಗಿತ್ತು. (2 ಪೇತ್ರ 2:7, 8 ಓದಿ.) ಸೋದೋಮ್ ತುಂಬ ಸಮೃದ್ಧವಾದ ಸ್ಥಳವಾಗಿತ್ತು. ಆದರೆ ಅಲ್ಲಿ ಹೋಗಿ ಲೋಟನು ತುಂಬ ಕಷ್ಟಪಡಬೇಕಾಯಿತು. (ಆದಿ. 13:8-13; 14:12) ಅವನ ಹೆಂಡತಿಗೆ ಆ ಪಟ್ಟಣ ತುಂಬ ಇಷ್ಟ ಆಗಿರಬೇಕು ಅಥವಾ ಅಲ್ಲಿನ ಕೆಲವು ಜನರು ಅವಳಿಗೆ ತುಂಬ ಇಷ್ಟ ಆಗಿರಬೇಕು. ಹಾಗಾಗಿ ಅವಳು ಯೆಹೋವನ ಮಾತನ್ನು ಮುರಿದಳು. ಆ ಪಟ್ಟಣದ ಮೇಲೆ ದೇವರು ಆಕಾಶದಿಂದ ಬೆಂಕಿ ಗಂಧಕಗಳನ್ನು ಸುರಿಸಿದಾಗ ಅವಳು ಪ್ರಾಣ ಕಳಕೊಂಡಳು. ಲೋಟನ ಇಬ್ಬರು ಹೆಣ್ಣುಮಕ್ಕಳ ಬಗ್ಗೆ ನೋಡಿ. ಆ ಪಟ್ಟಣದ ಹುಡುಗರ ಜೊತೆ ಅವರ ನಿಶ್ಚಿತಾರ್ಥ ಆಗಿತ್ತು. ಆದರೆ ಆ ಪಟ್ಟಣ ನಾಶವಾದಾಗ ಆ ಹುಡುಗರೂ ಪ್ರಾಣ ಕಳಕೊಂಡರು. ಲೋಟ ತನ್ನ ಮನೆ, ಆಸ್ತಿಪಾಸ್ತಿ ಕಳಕೊಂಡನು. ತುಂಬ ದುಃಖದ ವಿಷಯ ಏನೆಂದರೆ ಅವನು ತನ್ನ ಹೆಂಡತಿಯನ್ನೂ ಕಳಕೊಂಡನು. (ಆದಿ. 19:12-14, 17, 26) ಇಂಥ ಒತ್ತಡದ ಸಮಯದಲ್ಲಿ ಲೋಟನ ಜೊತೆ ಯೆಹೋವನು ತಾಳ್ಮೆಯಿಂದ ನಡಕೊಂಡನಾ?
ಫೆಬ್ರವರಿ 24—ಮಾರ್ಚ್ 1
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 20-21
“ಯೆಹೋವನು ಮಾತುಕೊಟ್ಟಂತೆಯೇ ಮಾಡುತ್ತಾನೆ”
(ಆದಿಕಾಂಡ 21:1-3) ಯೆಹೋವನು ತಾನು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು. 2 ಹೇಗಂದರೆ ಸಾರಳು ಬಸುರಾಗಿ ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಮಗನನ್ನು ಹೆತ್ತಳು. 3 ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕನೆಂದು ಹೆಸರಿಟ್ಟು.
ಕಾವಲಿನಬುರುಜು17.5-E ಪುಟ 14-15
ದೇವರು ಅವಳನ್ನು “ರಾಜಕುಮಾರಿ” ಅಂತ ಕರೆದನು
ಸಾರಾ ನಕ್ಕಿದ್ರಿಂದ ಆಕೆಯಲ್ಲಿ ನಂಬಿಕೆಯ ಕೊರತೆಯಿತ್ತು ಅಂತ ಅರ್ಥನಾ? ಖಂಡಿತ ಇಲ್ಲ. “ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನಮಾಡಿದಾತನನ್ನು ನಂಬಿಗಸ್ತನೆಂದೆಣಿಸಿದ್ದರಿಂದ ಪ್ರಾಯಮೀರಿದವಳಾಗಿದ್ದರೂ ಗರ್ಭಧರಿಸುವ ಶಕ್ತಿಯನ್ನು ಹೊಂದಿದಳು” ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 11:11) ಸಾರಳಿಗೆ ಯೆಹೋವನ ಬಗ್ಗೆ ಗೊತ್ತಿತ್ತು. ದೇವರು ಯಾವ ಮಾತು ಕೊಟ್ಟರೂ ಅದನ್ನು ನೆರವೇರಿಸೇ ನೆರವೇರಿಸುವನು ಅಂತನೂ ಅವಳಿಗೆ ಗೊತ್ತಿತ್ತು. ಇಂಥ ನಂಬಿಕೆ ನಾವೂ ತೋರಿಸಬೇಕು ಅಂತ ಅನ್ಸುತ್ತೆ ಅಲ್ವಾ? ಯೆಹೋವ ದೇವರ ಬಗ್ಗೆ ತಿಳುಕೊಳ್ಳಲು ನಾವು ಪ್ರಯತ್ನ ಹಾಕಿದಾಗ ಸಾರಾ ದೇವರಲ್ಲಿ ನಂಬಿಕೆ ತೋರಿಸಿದರಲ್ಲಿ ಯಾವುದೇ ತಪ್ಪಿಲ್ಲ ಅಂತ ನಮಗೆ ಗೊತ್ತಾಗುತ್ತೆ. ಯೆಹೋವನು ನಿಜವಾಗಲೂ ನಂಬಿಗಸ್ತ ದೇವರು ಮತ್ತು ತಾನು ಕೊಟ್ಟ ಮಾತಿಗೆ ತಕ್ಕಂತೆ ಮಾಡುತ್ತಾನೆ. ಕೆಲವೊಮ್ಮೆ ತನ್ನ ಮಾತುಗಳನ್ನು ಹೇಗೆ ನೆರವೇರಿಸ್ತಾನೆ ಅಂದ್ರೆ ಅದನ್ನ ನೋಡಿದಾಗ ನಮಗೆ ತುಂಬ ಆಶ್ಚರ್ಯ ಆಗುತ್ತೆ, ಸಾರಳಂತೆ ನಗೂನೂ ಬರುತ್ತೆ.
“ಸಾರಳು ಹೇಳಿದಂತೆಯೇ ಮಾಡು”
ಸಾರಾಗೆ ಈಗ 90 ವರ್ಷ. ಅವಳು ತವಕದಿಂದ ಕಾಯುತ್ತಿದ್ದ ಆ ಕ್ಷಣಗಳು ಕಡೆಗೂ ಬಂದೇ ಬಿಡ್ತು. ಅವಳು ಒಂದು ಗಂಡು ಮಗುವನ್ನು ಹೆತ್ತಳು. ಅವಳ ಗಂಡನಾದ ಅಬ್ರಹಾಮನಿಗೆ ಈಗಾಗಲೇ 100 ವರ್ಷ ಆಗಿದೆ. ಅಬ್ರಹಾಮ ಆ ಮಗುವಿಗೆ ಇಸಾಕ ಅಂತ ದೇವರು ಹೇಳಿದಂತೆಯೇ ಹೆಸರಿಟ್ಟನು. ಇಸಾಕ ಅಂದರೆ “ಸಂತೋಷ”. ಸಾರಳ ಆ ನಗು ಮುಖವನ್ನು, ಅವಳ ಭಾವನೆಗಳನ್ನು ನಾವು ಊಹಿಸಿಕೊಳ್ಳಬಹುದು. ಅವಳು “ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ; ಕೇಳುವವರೆಲ್ಲರೂ ನನ್ನೊಡನೆ ನಗುವರು” ಅಂತ ಹೇಳಿದಳು. (ಆದಿಕಾಂಡ 21:6) ಕೊನೆ ಉಸಿರು ಇರುವವರೆಗೂ ಯೆಹೋವನು ಕೊಟ್ಟ ಈ ಅದ್ಭುತ ಉಡುಗೊರೆಯಿಂದ ಅವಳಿಗೆ ಖಂಡಿತ ಸಂತೋಷ ಆಗಿರುತ್ತೆ. ಆದರೆ, ಈಗ ಅವಳಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳೂ ಇತ್ತು.
ಇಸಾಕನಿಗೆ 5 ವರ್ಷ ಇದ್ದಾಗ, ಅವನು ತಾಯಿಯ ಹಾಲು ಕುಡಿಯುವುದು ಬಿಟ್ಟ ದಿನದಂದು ಒಂದು ದೊಡ್ಡ ಔತಣ ಏರ್ಪಡಿಸಿದ್ದರು. ಇಷ್ಮಾಯೇಲನ ತೊಂದರೆ ಕೊಡುವ ನಡವಳಿಕೆಯನ್ನು ಸಾರಾ ‘ನೋಡಿದಳು’ ಅಂತ ಬೈಬಲ್ ಹೇಳುತ್ತೆ. 19 ವರ್ಷದ ಹಾಗರಳ ಮಗನಾದ ಇಷ್ಮಾಯೇಲ ಪುಟ್ಟ ಬಾಲಕನಾದ ಇಸಾಕನನ್ನು ಯಾವಾಗಲೂ ಅಣಕಿಸುತ್ತಿದ್ದ. ಇದರ ಅರ್ಥ ಅವನು ಬರೀ ತಮಾಷೆಗಾಗಿ ಅಣಕಿಸುತ್ತಿದ್ದ ಅಂತಲ್ಲ. ಇದನ್ನು ಹೇಗೆ ಹೇಳಬಹುದು? ಹಲವಾರು ವರ್ಷಗಳ ನಂತರ ಅಪೊಸ್ತಲ ಪೌಲ ಇಷ್ಮಾಯೇಲನ ನಡವಳಿಕೆಯನ್ನು ಹಿಂಸಿಸುವ ಪ್ರವೃತ್ತಿ ಅಂತ ಹೇಳಿದ್ದಾನೆ. ಇಷ್ಮಾಯೇಲನ ಈ ನಡವಳಿಕೆಯಿಂದ ಮುಂದೆ ಇಸಾಕನಿಗೆ ತೊಂದರೆಯಾಗಬಹುದು ಅನ್ನೋದನ್ನ ಸಾರ ಗಮನಿಸಿದಳು. ಇಸಾಕ ಬರೀ ತನ್ನ ಮಗನಷ್ಟೇ ಅಲ್ಲ, ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಅವನಿಗೆ ದೊಡ್ಡ ಪಾತ್ರ ಇದೆ ಅಂತ ಸಾರಳಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿನೇ ಅವಳು ತುಂಬ ಧೈರ್ಯ ತಗೊಂಡು ಅಬ್ರಹಾಮನಿಗೆ ನೇರವಾಗಿ ಹೇಳಿದಳು. ಹಾಗರ ಮತ್ತು ಇಷ್ಮಾಯೇಲನನ್ನು ಕಳುಹಿಸಿಬಿಡುವಂತೆ ಕೇಳಿಕೊಂಡಳು.—ಆದಿಕಾಂಡ 21:8-10; ಗಲಾತ್ಯ 4:22, 23, 29.
ಇದಕ್ಕೆ ಅಬ್ರಹಾಮ ಹೇಗೆ ಪ್ರತಿಕ್ರಿಯಿಸಿದನು? “ಮಗನ ದೆಸೆಯಿಂದ ಈ ಮಾತು ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು” ಅಂತ ಬೈಬಲ್ ಹೇಳುತ್ತೆ. ಅಬ್ರಹಾಮನಿಗೆ ಇಷ್ಮಾಯೇಲನ ಮೇಲೆ ತುಂಬ ಪ್ರೀತಿ ಇತ್ತು. ಈ ವಿಷಯವನ್ನು ಪಿತೃ ವಾತ್ಸಲ್ಯದ ಭಾವನೆಯಲ್ಲಿ ನೋಡಿದ್ರಿಂದ ಅವನಿಗೆ ಏನೂ ತಪ್ಪನಿಸಲಿಲ್ಲ. ಆದರೆ, ಯೆಹೋವನು ಈ ವಿಷಯವನ್ನು ಸರಿಯಾಗಿ ನೋಡಿದನು. ಹಾಗಾಗಿ ಯೆಹೋವನು ಮಧ್ಯ ಬಂದು “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ಹೇಳಿದನು. ಯೆಹೋವನು, ಹಾಗರ ಮತ್ತು ಅವಳ ಮಗನಿಗೆ ಏನು ಸಿಗಬೇಕೋ ಅದು ಖಂಡಿತ ಸಿಗುತ್ತೆ ಅನ್ನೋ ಭರವಸೆ ಅಬ್ರಹಾಮನಲ್ಲಿ ಮೂಡಿಸಿದನು. ನಂಬಿಗಸ್ತನಾದ ಅಬ್ರಹಾಮ ಇದಕ್ಕೆ ಒಪ್ಪಿದನು.—ಆದಿಕಾಂಡ 21:11-14.
(ಆದಿಕಾಂಡ 21:5-7) ಇಸಾಕನು ಹುಟ್ಟಿದಾಗ ಅಬ್ರಹಾಮನು ನೂರು ವರುಷದವನಾಗಿದ್ದನು. 6 ಸಾರಳು—ದೇವರು ನನ್ನನ್ನು ನಗುವಂತೆ ಮಾಡಿದ್ದಾನೆ; ಕೇಳುವವರೆಲ್ಲರೂ ನನ್ನೊಡನೆ ನಗುವರು. 7 ಸಾರಳೂ ಮಕ್ಕಳಿಗೆ ಮೊಲೆ ಕುಡಿಸುವಳೆಂದು ಯಾರಾದರೂ ಅಬ್ರಹಾಮನಿಗೆ ಹೇಳುತ್ತಿದ್ದರೋ? ಆದರೂ ಅವನ ಮುಪ್ಪಿನಲ್ಲೇ ಅವನಿಗೆ ಮಗನನ್ನು ಹೆತ್ತಿದ್ದೇನಷ್ಟೆ ಎಂದು ಹೇಳಿಕೊಂಡಳು.
(ಆದಿಕಾಂಡ 21:10-12) ಅಬ್ರಹಾಮನಿಗೆ—ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯನಾಗಬಾರದು ಎಂದು ಹೇಳಿದಳು. 11 ಮಗನ ದೆಸೆಯಿಂದ ಈ ಮಾತು ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು. 12 ಆದರೆ ದೇವರು ಅವನಿಗೆ—ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು.
(ಆದಿಕಾಂಡ 21:14) ಮಾರಣೇ ದಿನ ಬೆಳಿಗ್ಗೆ ಅಬ್ರಹಾಮನು ಎದ್ದು ಹಾಗರಳಿಗೆ ಬುತ್ತಿಯನ್ನೂ ಒಂದು ತಿತ್ತಿ ತಣ್ಣೀರನ್ನೂ ಕೊಟ್ಟು ಅವಳ ಹೆಗಲಿನ ಮೇಲೆ ಇಟ್ಟು ಮಗುವನ್ನು ಒಪ್ಪಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
(ಆದಿಕಾಂಡ 20:12) ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ; ಆದರೆ ನನ್ನ ತಾಯಿಯ ಮಗಳಲ್ಲವಾದದರಿಂದ ನನಗೆ ಹೆಂಡತಿಯಾದಳು.
ಕಾವಲಿನಬುರುಜು17.3-E ಪುಟ 12, ಪಾದಟಿಪ್ಪಣಿ
“ನೀನು ಸುಂದರಿ ಎಂದು ನಾನು ಬಲ್ಲೆ”
ಸಾರಾ ಅಬ್ರಹಾಮನಿಗೆ ಮಲ ತಂಗಿಯಾಗಿದ್ದಳು. ಇವರಿಬ್ಬರಿಗೂ ತಂದೆ ತೆರಹ. ಆದರೆ ತಾಯಿಯರು ಮಾತ್ರ ಬೇರೆ ಬೇರೆ. (ಆದಿಕಾಂಡ 20:12) ಈಗ ಈ ರೀತಿಯ ಮದುವೆ ಮಾಡಿಕೊಳ್ಳುವುದು ಸರಿಯಲ್ಲ. ಆದರೆ ಅಬ್ರಹಾಮನ ಸಮಯದಲ್ಲಿ ಹೀಗೆ ಇರಲಿಲ್ಲ. ಆಗ ಮಾನವರು ಪರಿಪೂರ್ಣತೆಗೆ ತುಂಬ ಹತ್ರ ಇದ್ದರು. ಹಾಗಾಗಿ ಆಗಿನ ಜನರಿಗೆ ಒಳ್ಳೇ ಆರೋಗ್ಯ ಇತ್ತು. ಇದ್ರಿಂದ ಹತ್ತಿರದ ಸಂಬಂಧದಲ್ಲೇ ಮದುವೆ ಆದ್ರೂ ಅವರಿಗೆ ಹುಟ್ಟುವ ಮಕ್ಕಳಿಗೆ ಯಾವ ತೊಂದರೆ ಆಗ್ತಿರಲಿಲ್ಲ. ಆದರೆ 400 ವರ್ಷಗಳಾದ ಮೇಲೆ ಜನರ ಆಯಸ್ಸು ನಮ್ಮ ತರಾನೇ ಕಮ್ಮಿ ಆಯ್ತು. ಅದೇ ಸಮಯದಲ್ಲಿ ಬಂದ ಮೋಶೆಯ ಧರ್ಮಶಾಸ್ತ್ರ ಹತ್ತಿರದ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧ ತಪ್ಪೆಂದು ಹೇಳಿತು.—ಯಾಜಕಕಾಂಡ 18:6.
(ಆದಿಕಾಂಡ 21:33) ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲವೃಕ್ಷವನ್ನು ನೆಟ್ಟು ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
ಕಾವಲಿನಬುರುಜು89-E 7/1 ಪುಟ 20 ಪ್ಯಾರ 9
ದೇವರ ಸ್ನೇಹಿತರಾಗಲು ಬಯಸುವ ಎಲ್ಲರಿಗೂ ಅತ್ಯುತ್ತಮ ಮಾದರಿ—ಅಬ್ರಹಾಮ
9 ಅಬ್ರಾಮ ಇನ್ನೊಂದು ರೀತಿಯಲ್ಲಿ ತನ್ನ ನಂಬಿಕೆಯನ್ನು ತೋರಿಸಿದ. ಬೈಬಲ್ ಹೇಳುವಂತೆ “ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.” (ಆದಿಕಾಂಡ 12:17) ಇದರ ಅರ್ಥ ಪ್ರಾಣಿ ಯಜ್ಞಗಳನ್ನು ಅರ್ಪಿಸಿದನು. ಹೀಬ್ರೂ ಭಾಷೆಯಲ್ಲಿ “ಯಜ್ಞವೇದಿ” ಅಂದರೆ “ಯಜ್ಞಗಳನ್ನು ಅರ್ಪಿಸುವ ಜಾಗ”, ಇಲ್ಲಿ ಪ್ರಾಣಿಗಳನ್ನು ಅರ್ಪಿಸುತ್ತಿದ್ದರು. ಈ ಯಜ್ಞವೇದಿಗಳನ್ನು ಅಬ್ರಾಮ ಬರೀ ಒಂದೇ ಒಂದು ಜಾಗದಲ್ಲಿ ಕಟ್ಟಿಸಲಿಲ್ಲ ಬದಲಿಗೆ ಬೇರೆ ಬೇರೆ ಪ್ರದೇಶಗಳಲ್ಲೂ ಕಟ್ಟಿಸುತ್ತಾ ಬಂದ. ಇದರ ಜೊತೆ, ‘ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಲು’ ಸಹ ಶುರುಮಾಡಿದ. (ಆದಿಕಾಂಡ 12:8; 13:18; 21:33) ಹೀಬ್ರೂ ಭಾಷೆಯಲ್ಲಿ “ಹೆಸರನ್ನು ಹೇಳೋದು” ಅಂದರೆ “ಹೆಸರನ್ನು ಸಾರೋದು” ಅಂತನೂ ಅರ್ಥ. ಅಬ್ರಾಮ ಯೆಹೋವನ ಹೆಸರನ್ನ ಸಾರೋದನ್ನು ಬಹುಶಃ ಅವನ ಮನೆಯವರು, ಕಾನಾನ್ಯರು ನೋಡಿರಬಹುದು. (ಆದಿಕಾಂಡ 14:22-24) ಅಬ್ರಾಮನ ಹಾಗೆ ಇಂದು ಯಾರೆಲ್ಲಾ ಯೆಹೋವನ ಸ್ನೇಹಿತರಾಗಲು ಬಯಸುತ್ತಾರೋ ಅವರೆಲ್ಲ ನಂಬಿಕೆಯಿಂದ ಯೆಹೋವನ ಹೆಸರನ್ನು ಸಾರಲೇ ಬೇಕು. ಇದರಲ್ಲಿ ಸಾರ್ವಜನಿಕವಾಗಿ ಸಾರೋದು ಸಹ ಸೇರಿದೆ. ಹೀಗೆ ಮಾಡುವ ಮೂಲಕ “ನಾವು ದೇವರಿಗೆ ಯಾವಾಗಲೂ, ಆತನ ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು ಅರ್ಪಿಸೋಣ.”—ಇಬ್ರಿಯ 13:15; ರೋಮನ್ನರಿಗೆ 10:10.