-
ದೇವರ ವಿಶ್ರಾಂತಿ ದಿನ ಅಂದರೇನು?ಕಾವಲಿನಬುರುಜು—2011 | ಜುಲೈ 15
-
-
1, 2. ಏಳನೆಯ ದಿನದ ಬಗ್ಗೆ ಆದಿಕಾಂಡ 2:3ರಿಂದ ನಾವೇನನ್ನು ಕಲಿಯುತ್ತೇವೆ? ಯಾವ ಪ್ರಶ್ನೆಗಳು ಏಳುತ್ತವೆ?
ದೇವರು ಆರು ಸಾಂಕೇತಿಕ ದಿನಗಳಲ್ಲಿ ಈ ಭೂಮಿಯನ್ನು ಜನನಿವಾಸಕ್ಕಾಗಿ ಅಣಿಗೊಳಿಸಿದನೆಂದು ನಾವು ಆದಿಕಾಂಡ ಪುಸ್ತಕದ ಮೊದಲನೇ ಅಧ್ಯಾಯದಲ್ಲಿ ಕಲಿಯುತ್ತೇವೆ. ಆ ಆರು ದಿನಗಳಲ್ಲಿ ಪ್ರತಿದಿನವೂ “ಸಾಯಂಕಾಲವೂ ಪ್ರಾತಃಕಾಲವೂ ಆಗಿ” ಕೊನೆಗೊಂಡಿತೆಂದು ಬೈಬಲ್ ಹೇಳುತ್ತದೆ. (ಆದಿ. 1:5, 8, 13, 19, 23, 31) ಆದರೆ ಏಳನೆಯ ದಿನದ ಬಗ್ಗೆ ಆದಿಕಾಂಡ 2:1-3ರಲ್ಲಿ ಹೀಗೇನೂ ಹೇಳಲಾಗಿಲ್ಲ.
2 ಇದು, ಏಳನೆಯ ದಿನ ಅಂದರೆ ದೇವರು ವಿಶ್ರಮಿಸಿಕೊಂಡ ‘ದಿನವು’ ಮೋಶೆ ಕ್ರಿ. ಪೂ. 1513ರಲ್ಲಿ ಆದಿಕಾಂಡ ಪುಸ್ತಕವನ್ನು ಬರೆದಾಗ ಕೊನೆಗೊಂಡಿರಲಿಲ್ಲ ಎಂಬದನ್ನು ಸ್ಪಷ್ಟಪಡಿಸುತ್ತದೆ. ದೇವರ ವಿಶ್ರಾಂತಿ ದಿನ ಇನ್ನೂ ಮುಂದುವರಿಯುತ್ತಿದೆಯೋ? ಹೌದಾದಲ್ಲಿ, ನಾವು ಅದರಲ್ಲಿ ಸೇರಸಾಧ್ಯವೋ? ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳುವುದು ಬಹಳ ಪ್ರಾಮುಖ್ಯ.
-
-
ದೇವರ ವಿಶ್ರಾಂತಿ ದಿನ ಅಂದರೇನು?ಕಾವಲಿನಬುರುಜು—2011 | ಜುಲೈ 15
-
-
5. ಏಳನೆಯ ದಿನದ ಉದ್ದೇಶವೇನು? ಆ ಉದ್ದೇಶ ಯಾವಾಗ ಸಂಪೂರ್ಣವಾಗಿ ನೆರವೇರುವುದು?
5 ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಮೊದಲು ಏಳನೆಯ ದಿನದ ಉದ್ದೇಶವನ್ನು ನೆನಪಿಗೆ ತಂದುಕೊಳ್ಳಬೇಕು. ಅದನ್ನು ಆದಿಕಾಂಡ 2:3 ಹೀಗೆ ವಿವರಿಸುತ್ತದೆ: “ದೇವರು . . . ಆ [ಏಳನೆಯ] ದಿನವನ್ನು ಪರಿಶುದ್ಧದಿನವಾಗಿರಲಿ ಎಂದು ಆಶೀರ್ವದಿಸಿದನು.” ಯೆಹೋವನು ಆ ದಿನವನ್ನು ಪರಿಶುದ್ಧದಿನವಾಗಿ ಮಾಡಿದ್ದು ಅಂದರೆ ಪವಿತ್ರೀಕರಿಸಿದ್ದು ಇಲ್ಲವೆ ಪ್ರತ್ಯೇಕವಾಗಿರಿಸಿದ್ದು ಭೂಮಿಗಾಗಿರುವ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ. ಆತನ ಉದ್ದೇಶ, ಭೂಮಿಯು ವಿಧೇಯ ಸ್ತ್ರೀಪುರುಷರಿಂದ ತುಂಬಿಕೊಳ್ಳಬೇಕು ಹಾಗೂ ಅವರು ಭೂಮಿಯನ್ನೂ ಅದರಲ್ಲಿರುವ ಸಕಲ ಜೀವಿಗಳನ್ನೂ ನೋಡಿಕೊಳ್ಳಬೇಕು ಎಂಬುದೇ. (ಆದಿ. 1:28) ಈ ಉದ್ದೇಶವನ್ನು ಪೂರೈಸಲಿಕ್ಕಾಗಿಯೇ ಯೆಹೋವ ದೇವರು ಮತ್ತು ‘ಸಬ್ಬತ್ತಿನ ಒಡೆಯನಾಗಿರುವ’ ಯೇಸು ಕ್ರಿಸ್ತನು “ಇಂದಿನ ವರೆಗೂ ಕೆಲಸಮಾಡುತ್ತಾ” ಇದ್ದಾರೆ. (ಮತ್ತಾ. 12:8) ಭೂಮಿಗಾಗಿರುವ ಆ ಉದ್ದೇಶವು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಕೊನೆಯಲ್ಲಿ ಸಂಪೂರ್ಣವಾಗಿ ನೆರವೇರುವ ತನಕ ದೇವರ ವಿಶ್ರಾಂತಿಯ ದಿನ ಮುಂದುವರಿಯುವುದು.
-