ದೇವರ ಒಳ್ಳೇತನದ ವಿಸ್ಮಯಕರ ವ್ಯಾಪ್ತಿ
ದೇವರು ಒಳ್ಳೆಯವನು! ಅದೆಷ್ಟು ಬಾರಿ ನೀವು ಆ ಹೇಳಿಕೆಯನ್ನು ಕೇಳಿರುವಿರಿ ಅಥವಾ ಸಥ್ವಾ ಉಪಯೋಗಿಸಿರುವಿರಿ ಸಹಾ? ಆದರೆ ನಿಮ್ಮ ಪರವಾಗಿ ದೇವರ ಒಳ್ಳೇತನದ ಪೂರ್ಣ ವ್ಯಾಪ್ತಿಯನ್ನು ನೀವೆಂದಾದರೂ ಯೋಚಿಸಿರುವಿರೋ? ಅಂಥ ಮನನವು ನಾವೆಂಥಹ ದೇವರನ್ನು ಆರಾಧಿಸುತ್ತೇವೆಂಬ ನಮ್ಮ ಗಣ್ಯತೆಯನ್ನು ಇನ್ನೂ ಆಳಗೊಳಿಸುತ್ತದೆ.
ಆದರೆ ಮೊದಲಾಗಿ, ಆ ಒಳ್ಳೇತನವೆಂದರೇನೆಂದು ನಾವು ತಿಳಿಯುವ ಅಗತ್ಯವಿದೆ. ಒಳ್ಳೇತನವೆಂದರೆ ಕೆಟ್ಟತನಕ್ಕೆ ವಿರುದ್ಧವಾಗಿರುವ ಒಂದು ಗುಣವಾಗಿದೆ, ನಿಶ್ಚಯ. ಆದರೆ, ಒಳ್ಳೇತನವು ಅದಕ್ಕಿಂತಲೂ ಹೆಚ್ಚಿನದ್ದು. ಅದು ಕ್ರಿಯಾಶೀಲ ಗುಣವು. ಒಳ್ಳೇ ವ್ಯಕ್ತಿಯು ಮಾಡುವ ಒಳ್ಳಿತು ಅದಾಗಿದೆ. ಮತ್ತು ದೇವರು ತನ್ನ ಒಳ್ಳೇತನದಲ್ಲಿ ನಮಗೆ ಮಾಡುವ ಎಷ್ಟೋ ಒಳ್ಳಿತು ನಮ್ಮ ಹೃದಯಗಳನ್ನು ಆತನ ಕಡೆಗೆ ಬೆಚ್ಚಗೆಗೊಳಿಸುತ್ತದೆ.
ದೇವರ ಒಳ್ಳೇತನದ ವಿಸ್ತಾರ್ಯವು, ಸೀನಾಯಿ ಅರಣ್ಯದಲ್ಲಿ ದೇವರು ಮೋಶೆಗಂದ ಮಾತುಗಳಿಂದ ವ್ಯಕ್ತವಾಗುತ್ತದೆ. ಅಲ್ಲಿ ಅವನು ತನ್ನ ನಂಬಿಗಸ್ತ ಸೇವಕನಿಗೆ ವಾಗ್ದಾನಿಸಿದ್ದು: “ನನ್ನ ಸರ್ವೋತ್ತಮತ್ವವನ್ನು (ಒಳ್ಳೇತನ NW) ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು.” ಆ ವಾಗ್ದಾನವನ್ನು ನೆರವೇರಿಸುತ್ತಾ ಮತ್ತು ತನ್ನ ಸ್ವಂತ ನಾಮವನ್ನು ಉಪಯೋಗಿಸುತ್ತಾ, ದೇವರು ಮತ್ತೂ ಹೇಳಿದ್ದು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತಿಯೂ ಸತ್ಯವೂ ಉಳ್ಳವನು. ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು. ದೋಷಾಪರಾಧಪಾಪಗಳನ್ನು ಕ್ಷಮಿಸುವವನೂ ಆದರೂ ಅಪರಾಧಗಳನ್ನು ಶಿಕ್ಷಿಸದೆ ಬಿಡದವನು.”—ವಿಮೋಚನಕಾಂಡ 33:19; 34:6, 7.
ಹೀಗೆ ದೇವರ ಒಳ್ಳೇತನದಲ್ಲಿ ಕನಿಕರ, ಹಾಗೂ ದಯೆ, ದೀರ್ಘಶಾಂತಿ ಮತ್ತು ಸತ್ಯವು ಕೂಡಿರುತ್ತದೆ. ಅದಲ್ಲದೆ, “ದೀರ್ಘಶಾಂತನೂ” ಮಂದಕ್ರೋಧಿಯೂ ಆಗಿರುವುದರಿಂದ ಆತನ ಒಳ್ಳೇತನ ಇನ್ನಷ್ಟು ಪ್ರಕಟವಾಗುತ್ತದೆ. ಅಪರಾಧವನ್ನು ಎಂದೂ ಶಿಕ್ಷಿಸದೆ, ತೀರಾ ಹೆಚ್ಚು ಸಡಿಲು ಬಿಡುವ ಹೆತ್ತವನಂತೆ ಅವನಿದ್ದಾನೆ ಎಂದಿದರ ಅರ್ಥವಲ್ಲ. ಪಶ್ಚಾತ್ತಾಪ ಪಡದ ಪಾಪಿಗಳ “ಅಪರಾಧವನ್ನು ಆತನು ಶಿಕ್ಷಿಸದೆ” ಬಿಡುವವನಲ್ಲ. ಒಳ್ಳೆಯವನಾದ ದೇವರು ಕೆಟ್ಟತನಕ್ಕೆ ಶಿಕ್ಷೆಕೊಡದೆ ಬಿಡುವಾತನಾಗಿರ ಸಾಧ್ಯವಿಲ್ಲ.
ದೇವರ ಒಳ್ಳೇತನದ ಅಪಾರತೆ
ದೇವರು ತನ್ನ ಒಳ್ಳೇತನವನ್ನು ತೋರಿಸಿರುವ ಹಲವಾರು ವಿಧಾನಗಳನ್ನು ನಾವೀಗ ಸ್ವಲ್ಪ ಚರ್ಚಿಸೋಣ. ಮೊದಲಾಗಿ ಭೂಮಿಯನ್ನು ನಿರ್ಮಿಸಿದಾಗ, ಆರಂಭದಿಂದಲೇ, ಅವನು ಮಾನವರಿಗೆ ಒಳ್ಳಿತನ್ನು ಮಾಡಿದ್ದಾನೆ. ಮಾನವ ಜೀವಿತಕ್ಕಾಗಿ ಬೇಕಾಗುವ ಕೇವಲ ಅತ್ಯಾವಶ್ಯಕಗಳನ್ನು ಮಾತ್ರವೇ ಅವನು ಒದಗಿಸಲಿಲ್ಲ. ನಮ್ಮೀ ಭೂಗ್ರಹದಲ್ಲಿ ಜೀವಿಸುವುದನ್ನು ನಿಜವಾಗಿಯೂ ಆನಂದಕರವನ್ನಾಗಿ ಮಾಡಲು ಆತನು ಸಮೃದ್ಧವಾಗಿ ಒದಗಿಸಿಕೊಟ್ಟನು. ಆಹಾರ ಪಾನೀಯಗಳನ್ನು ಬಗೆಬಗೆಯಲ್ಲಿ ಒದಗಿಸಿದನು. ಚಿತ್ತಾಕರ್ಷಕವಾದ ವಿವಿಧ ಪ್ರಾಣಿ, ಪಕ್ಷಿಗಳನ್ನು ಉಂಟುಮಾಡಿದನು, ನಮ್ಮ ಪರಿಸರಕ್ಕೆ ಬಣ್ಣವನ್ನೂ ಸೌಂದರ್ಯವನ್ನೂ ಕೂಡಿಸಲು ಸುಂದರವಾದ ಹೂಗಳನ್ನು ನಿರ್ಮಿಸಿದನು. ಅದಲ್ಲದೆ ನೋಟಕ್ಕೆ ರಮ್ಯವಾಗಿರುವ ಅನೇಕಾನೇಕ ವಿವಿಧ ದೃಶ್ಯಗಳನ್ನು ಅವನು ಉಂಟುಮಾಡಿದನು. ಶೋಭಾಯಮಾನ ಸೂರ್ಯಾಸ್ತವನ್ನು ಅಥವಾ ಭವ್ಯವಾದ ಮೋಡರಚನೆಯನ್ನು ನಾವು ಪ್ರತಿಸಲ ವೀಕ್ಷಿಸುವಾಗ, ದೇವರ ಒಳ್ಳೇತನದ ರುಜುವಾತನ್ನೇ ಕಾಣುತ್ತೇವಲ್ಲಾ !
ದೇವರು ಮನುಷ್ಯನನ್ನೂ ಸ್ತ್ರೀಯನ್ನೂ ನಿರ್ಮಿಸಿದಾಗ ಪುನಃ, ಆತನ ಒಳ್ಳೇತನವು ವ್ಯಕ್ತವಾಯಿತು. ಆತನು ಆದಾಮ ಮತ್ತು ಹವ್ವರಿಗೆ ಒಂದು ಪರಿಪೂರ್ಣವಾದ, ಸ್ವಸ್ಥ ಶರೀರವನ್ನು ಕೊಟ್ಟು ಅವರನ್ನು ಏದೇನ್ ತೋಟದಲ್ಲಿ ಇರಿಸಿದನು. ಅನಂತರ ಆತನು ಅವರಿಗೊಂದು ಉತ್ತೇಜಕವೂ ಪಂಥಾಹ್ವಾನಕರವೂ ಆದ ನೇಮಕವನ್ನು ಕೊಟ್ಟನು: “ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” ಹೀಗೆ ಆತನು, ಪ್ರಮೋದವನೀಯ ಭೂಮಿಯಲ್ಲಿ ಅವರು ತಮ್ಮ ಸಂತತಿಯೊಂದಿಗೆ ಸದಾಕಾಲದ ಜೀವನವನ್ನು ಆನಂದಿಸುವ ಪ್ರತೀಕ್ಷೆಯನ್ನು ಕೊಟ್ಟನು. (ಆದಿಕಾಂಡ 1:26-28; 2:7-9) ಎಂತಹ ಆಶ್ಚರ್ಯಕರ ಮದುವೇ ಇನಾಮು ಆ ಮೊದಲನೇ ಮಾನವ ದಂಪತಿಗಳಿಗೆ ದೊರೆಯಿತು !
ಆದಾಮ ಮತ್ತು ಹವ್ವರು ದಂಗೆಯೆದ್ದಾಗಲೂ, ದೇವರು ಅವರನ್ನು ಪೂರ್ಣವಾಗಿ ತ್ಯಜಿಸಿಬಿಡಲಿಲ್ಲ. ಆ ಬಿಂದುವಲ್ಲಿಯೇ ದೇವರು ಅವರನ್ನು ತಕ್ಷಣ ಮರಣದಿಂದ ಶಿಕ್ಷಿಸುತ್ತಿದ್ದರೆ, ಅತನು ನ್ಯಾಯವಾದದ್ದನ್ನೇ ಮಾಡುತ್ತಿದ್ದನು. ಆದರೂ, ಈಗ ಪಾಪಿಗಳಾಗಿದ್ದ ಮಾನವ ಜತೆಗೆ ಅವನು ಒಳ್ಳೇದನ್ನೇ ಮಾಡಿದನು. ಅವರು ಸ್ವಲ್ಪಕಾಲ ಬದುಕುತ್ತಾ, ಮಕ್ಕಳನ್ನು ಹಡೆಯುವಂತೆ ಆತನು ಅನುಮತಿಕೊಟ್ಟನು.—ಆದಿಕಾಂಡ 5:1-5.
ಅದಲ್ಲದೆ, ಪತಿತ ಮಾನವ ಕುಲದ ಕಡೆಗೆ ದೇವರ ಒಳ್ಳೇತನವು ಅಂದಿನಿಂದ ಮುಂದುವರಿಯುತ್ತಲೇ ಇದೆ. ರಾಜ ದಾವೀದನು ಹೇಳಿದಂತೆ, “ಯೆಹೋವನು ಸರ್ವೂಪಕಾರಿಯೂ (ಒಳ್ಳೆಯವನೂ) ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವವನೂ ಆಗಿದ್ದಾನೆ.” (ಕೀರ್ತನೆ 145:9) ಅವನ ಆಸ್ತಿಯಾದ ಭೂಮಿಯ ಮೇಲೆ ಮಾನವ ಜೀವಿತವು ಮುಂದುವರಿಯಲಿಕ್ಕಾಗಿ, ಅವನು ವಿಫುಲವಾಗಿ ಒದಗಿಸುತ್ತಾನೆ. ತನ್ನ ದಿನಗಳ ಯೆಹೂದ್ಯರಿಗೆ ಯೇಸು ಅಂದದ್ದು: “ಪರಲೋಕದಲ್ಲಿರುವ ನಿಮ್ಮ ತಂದೆ . . . ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.” (ಮತ್ತಾಯ 5:45) ಯಾವುದೇ ಹಸಿವು ಯಾ ಕುಂದು ಕೊರತೆಯು ಇರುವುದು ದೇವರು ಮಾನವರಿಗೆ ಅದನ್ನೊದಗಿಸಲು ತಪ್ಪಿದರ್ದಿಂದಲ್ಲ. ಮಾನವರ ಭ್ರಷ್ಟಾಚಾರ, ಕ್ರೌರ್ಯ ಮತ್ತು ಅಸಾಮರ್ಥ್ಯತೆಗಳ ಕಾರಣದಿಂದಲೇ ಅದು ಇದೆ.
ಭೂಮಿಯ ಖನಿಜ ಸಂಪತ್ತನ್ನು ಸಹಾ ಮಾನವ ಕುಲವು ಸ್ವಪ್ರಯೇಜನಕ್ಕಾಗಿ ಉಪಯೋಗಿಸುವಂತೆ ದೇವರು ಅನುಮತಿ ಕೊಟ್ಟನು, ಮತ್ತು ನಕ್ಷತ್ರ ಗಗನದ ಹಾಗೂ ವಸ್ತುಗಳ ಭೌತಿಕ ರಚನೆಯ ತಿಳುವಳಿಕೆಯನ್ನು ಕೆಲವು ಪ್ರಮಾಣದಲ್ಲಿ ಆತನು ಅವರಿಂದ ಮರೆಮಾಡಿಲ್ಲ. ದೇವರಿಲ್ಲವೆಂದು ಅನೇಕರು ಗರ್ವದಿಂದ ನುಡಿದರೂ, ಮತ್ತು ಇತರರು ಸ್ವಾರ್ಥದಿಂದ ಜತೆಮಾನವರನ್ನು ದಬ್ಬಿಹಾಕುವ ಮಟ್ಟಿಗೂ ಆತನ ಒಳ್ಳೇತನವನ್ನು ದುರುಪಯೋಗ ಮಾಡಿದರೂ, ನಿಜವಾಗಿಯೂ ಯೆಹೋವನು ಮಾನವರಿಗೆ ಒಳ್ಳೇದನ್ನೇ ಮಾಡಿದ್ದಾನೆ.—ಕೀರ್ತನೆ 14:1.
ನಂಬುವವರಿಗೆ ದೇವರ ಒಳ್ಳೇತನ
ಸಾಮಾನ್ಯ ಮಾನವ ಜನತೆಗೆ ದೇವರು ಒಳ್ಳಿತನ್ನು ಮಾಡಿರುವುದಾದರೂ, ತನ್ನನ್ನು ನಂಬುವವರೊಂದಿಗೆ ಆತನ ವ್ಯವಹಾರವಾದರೋ ನಿಜವಾಗಿಯೂ ಹೃದಯವನ್ನು ಪ್ರೇರೇಪಿಸುತ್ತದೆ. ಮೊದಲನೇದಾಗಿ, ಆದಾಮ ಮತ್ತು ಹವ್ವರು ದಂಗೆಯೆದ್ದ ಮೊದಲಲ್ಲೀ, ಅವರ ಪಾಪದ ಕೆಟ್ಟ ಪರಿಣಾಮಗಳನ್ನು ಕಟ್ಟಕಡೆಗೆ ಪರಿಹರಿಸುವ ಒಬ್ಬ “ಸಂತಾನ”ದ ಆಗಮನದ ಕುರಿತಾಗಿ ದೇವರು ಪ್ರವಾದಿಸಿದನು. (ಆದಿಕಾಂಡ 3:15) ಕಾಲವು ದಾಟಿದಷ್ಟಕ್ಕೆ, ಆದಾಮನ ಸಂತತಿಯವರಲ್ಲಿ ಹೆಚ್ಚಿನವರು ತಮ್ಮ ಅಸಂಪೂರ್ಣತೆಯ ಮಧ್ಯೆಯೂ ದೇವರನ್ನು ನಂಬಿಗಸ್ತಿಕೆಯಿಂದ ಆರಾಧಿಸಿದರು. ಮತ್ತು ಆ ಆರಂಭದ ಪ್ರವಾದನೆಯು ಅವರಿಗೆ ಒಂದು ಒಳ್ಳೇ ಭವಿಷ್ಯತ್ತಿನ ನಿರೀಕ್ಷೆಯನ್ನು ಕೊಟ್ಟಿತು. ಆ ನಂಬಿಗಸ್ತ ಆರಾಧಕರಲ್ಲಿ ಒಬ್ಬನಾದ ಅಬ್ರಹಾಮನು “ಯೆಹೋವನ ಸ್ನೇಹಿತ”ನೆಂದೂ ಕರೆಯಲ್ಪಟ್ಟನು.—ಯಾಕೋಬ 2:23.
ಅಬ್ರಹಾಮನ ಸಂತತಿಯವರು ಬಹು ಜನಾಂಗವಾಗಿ ಹೆಚ್ಚುವರೆಂದೂ ಮತ್ತು ಅವನ ಸಂತತಿಯವರಲ್ಲಿ ಮುಖ್ಯ ವಂಶವು ಕಾನಾನ್ ದೇಶವನ್ನು ವಶ ಪಡಿಸಿ ಕೊಳ್ಳುವದೆಂದೂ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದನು. ಇದರ ನೆರವೇರಿಕೆಯಲ್ಲಿಯೇ, ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್ಯರು ಅನಂತರ ಒಂದು ಜನಾಂಗವಾಗಿ ವ್ಯವಸ್ಥಾಪಿಸಲ್ಪಟ್ಟರು. (ಆದಿಕಾಂಡ 17:3-8; ವಿಮೋಚನಕಾಂಡ 19:6) ಪುನಃ, ದೇವರು ಈ ಜನಾಂಗಕ್ಕೆ ಒಳ್ಳೇತನ ತೋರಿಸಿದನು, ಅವರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದನು, ಅರಣ್ಯ ಪ್ರವಾಸದಲ್ಲಿ ಅವರನ್ನು ರಕ್ಷಿಸಿದನು, ಒಂದು ನೇಮ ವಿಧಿಯನ್ನೂ ಯಾಜಕತ್ವವನ್ನೂ ಅವರಿಗೆ ಕೊಟ್ಟನು, ಮತ್ತು ಕೊನೆಗೆ, ಫಲವತ್ತಾದ ಕಾನಾನ್ ದೇಶವನ್ನು ಸ್ವಾಸ್ಥ್ಯವಾಗಿ ನೀಡಿದನು.
ಕಟ್ಟಕಡೆಗೆ, ಇಸ್ರಾಯೇಲು ಒಂದು ರಾಜ್ಯವಾಯಿತು ಮತ್ತು ಯೆಹೋವನು ತನ್ನ ಆರಾಧನೆಯ ಜಾಗತಿಕ ಕೇಂದ್ರವಾಗಿ ಯೆರೂಸಲೇಮಿನಲ್ಲಿ ಒಂದು ದೇವಾಲಯವನ್ನು ಕಟ್ಟುವಂತೆ ಅದರ ಮೂರನೆಯ ಮಾನವ ರಾಜ ಸೊಲೊಮೋನನಿಗೆ ಆಜ್ಞಾಪಿಸಿದನು. ಆ ದೇವಾಲಯವು ಕಟ್ಟಿ ಮುಗಿದಾಗ ಅಲ್ಲಿ, ಒಂದು ಪ್ರತಿಷ್ಠೆಯ ಸಮಾರಂಭವೂ ಹರ್ಷೋಲ್ಲಾಸದ ಹಬ್ಬವೂ ನಡೆಯಿತು. ತರುವಾಯ ಇಸ್ರಾಯೇಲ್ಯರು, “ಅರಸನನ್ನು ವಂದಿಸಿ ಯೆಹೋವನು ಮಾಡಿದ ಸರ್ವೋಪಕಾರಗಳನ್ನು (ಒಳ್ಳಿತುಗಳನ್ನು) ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.” (1 ಅರಸು 8:66) ಯೆಹೋವನ ಒಳ್ಳೇತನಕ್ಕಾಗಿ ಇಸ್ರಾಯೇಲ್ಯರ ಹೃದಯಗಳು ತುಂಬಿತುಳುಕಿದ ಬೇರೆ ಅನೇಕ ಸಂದರ್ಭಗಳೂ ಅಲ್ಲಿದ್ದವು.
ಆದರೂ, ಅವರು ಒಬ್ಬನೇ ಸತ್ಯದೇವರ ಆರಾಧಕರಾಗಿರುವ ತಮ್ಮ ಸುಯೋಗವನ್ನು ಯಾವಾಗಲೂ ಗಣ್ಯಮಾಡದೇ ಹೋದದ್ದು ಅಸಂತೋಷಕರ. ಕಟ್ಟಕಡೆಗೆ, ಇಸ್ರಾಯೇಲ್ಯರ ಇಡೀ ಜನಾಂಗವೇ ಅಪನಂಬಿಗಸ್ತಿಕೆ ತೋರಿಸಿತು ಮತ್ತು ಸಾ. ಶ. ಪೂ. 607 ರಲ್ಲಿ ಯೆಹೋವನು ಅವರನ್ನು ಬಾಬೇಲಿಗೆ ಕೈದಿಗಳಾಗಿ ಒಯ್ಯಲ್ಪಡುವಂತೆ ಬಿಟ್ಟುಕೊಟ್ಟನು. ದೇವರು ಮೋಶೆಗೆ ಹೇಳಿದ ಪ್ರಕಾರ, “ಆತನು ಅಪರಾಧಗಳನ್ನು ಶಿಕ್ಷಿಸದೆ ಬಿಡದವನು” ಆಗಿರುವುದು, ಆತನ ಒಳ್ಳೇತನದ ಕಾರಣದಿಂದಲೇ.—ವಿಮೋಚನಕಾಂಡ 34:7.
ಆದರೂ, ಸುಮಾರು 70 ವರ್ಷಗಳ ತರುವಾಯ, ದೇವರು ದಯೆಯಿಂದ ಒಂದು ನಂಬಿಗಸ್ತ ಇಸ್ರಾಯೇಲ್ಯ ಉಳಿಕೆಯವರನ್ನು ಅವರ ಸ್ವದೇಶಕ್ಕೆ ಮರಳಿ ಕರತಂದನು. ಹಾಗೆ ಮಾಡುವಂತೆ ಅವನನ್ನು ಪ್ರಚೋದಿಸಿದ್ದು ಯಾವುದು? ಅವನ ಒಳ್ಳೇತನವೇ. ಇಸ್ರಾಯೇಲ್ಯರು ಬಾಬೇಲಿಂದ ಹಿಂತಿರುಗಿ ಬಂದದರ ಕುರಿತು ಯೆರೆಮೀಯನು ಪ್ರವಾದನಾರೂಪವಾಗಿ ಬರೆದದ್ದು: “ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು. ಯೆಹೋವನು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು (ಒಳ್ಳಿತುಗಳನ್ನು) ಅನುಭವಿಸಲು ಬರುವರು.” ಪ್ರವಾದಿಯು ಮತ್ತೂ ಅಂದದ್ದು: “ನಾನು ಅನುಗ್ರಹಿಸುವ ಮೇಲುಗಳನ್ನು ನನ್ನ ಜನರು ಸಮೃದ್ಧಿಯಾಗಿ ಅನುಭವಿಸುವರು. ಇದು ಯೆಹೋವನ ನುಡಿ.”—ಯೆರೆಮೀಯ 31:12, 14.
ಕಟ್ಟಕಡೆಗೆ, ಯೇಸು ಭೂಮಿಗೆ ಬಂದನು ಮತ್ತು ಹಿಂದೆ ಏದೇನಿನಲ್ಲಿ ನುಡಿಯಲ್ಪಟ್ಟ ಆ ಪ್ರವಾದನೆಯಲ್ಲಿ ಮುಂತಿಳಿಸಿದ “ಸಂತಾನ”ವಾಗಿ ರುಜುವಾದನು. (ಆದಿಕಾಂಡ 3:15) ಬೈಬಲು ಅನ್ನುವದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸುವಿನ ಮರಣವು ಮಾನವರನ್ನು ಅವರ ಪಾಪಗಳಿಂದ ಬಿಡಿಸುವ ಮತ್ತು ಅವರನ್ನು ಪರಿಪೂರ್ಣತೆಗೆ ಪುನಃಸ್ಥಾಪಿಸುವ ಈಡನ್ನು ಒದಗಿಸಿತು. ಹೀಗೆ, ಆದಾಮನ ಪಾಪದ ಕೆಟ್ಟ ಪರಿಣಾಮಗಳು ಕೊನೆಯದಾಗಿ ನೀಗಿಸಲ್ಪಡುವವು. ಪೌಲನು ರೋಮಾಪುರದವರಿಗೆ ಬರೆದ ಪ್ರಕಾರ, “ಒಬ್ಬನ ಅವಿಧೇಯತ್ವದಿಂದ ಎಲ್ಲರು ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.” (ರೋಮಾಪುರದವರಿಗೆ 5:19) ಸುಹೃದಯದ ಜನರಿಗೆ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯು ಈಗ ದೊರಕುವಂತೆ ಮಾಡಿದ ದೇವರ ಈ ಒಳ್ಳೇತನಕ್ಕಾಗಿ ಕೃತಜ್ಞತೆಯಿರಲಿ. ಅವರು ಅಬ್ರಹಾಮನಂತೆ, ದೇವರ ಸ್ನೇಹಿತರೂ ಆಗಬಲ್ಲರು.
ಆತನನ್ನು ಆರಾಧಿಸುವವರಿಗೆ ದೇವರು ಇಂದು ಸಹಾ ಒಳ್ಳೇತನವನ್ನು ತೋರಿಸುತ್ತಾ ಇದ್ದಾನೆ. ಅವರ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯಕ್ಕಾಗಿ ಆತನು ಬೈಬಲಿನ ಮೂಲಕ ಸೂಚನೆಯನ್ನು ಕೊಡುತ್ತಾನೆ. (ಕೀರ್ತನೆ 119:105) ಆತನ ನೀತಿಯ ಮಟ್ಟಗಳಿಗೆ ಹೊಂದಿಕೆಯಾಗಿ ನಡೆಯುವಂತೆ ಸಹಾಯಕ್ಕಾಗಿ ತನ್ನಾತ್ಮದ ಉಚಿತಾರ್ಥ ವರವನ್ನು ನೀಡುತ್ತಾನೆ. ಮತ್ತು ಈ ಹಳೇ ಲೋಕವು ದಾಟಿಹೋದ ಮೇಲೆ ಒಳಬರಲಿರುವ ನೀತಿಯ ಹೊಸಲೋಕಕ್ಕಾಗಿ ನಿಜ ಕ್ರೈಸ್ತರು ಮುನ್ನೋಡುವಂತೆ, ಆತನು ತನ್ನ ಉದ್ದೇಶಗಳನ್ನೂ ಅವರಿಗೆ ಪ್ರಕಟಪಡಿಸುತ್ತಾನೆ. (ಜ್ಞಾನೋಕ್ತಿ 4:18; 2 ಪೇತ್ರ 3:13) ಕ್ರೈಸ್ತರು ಆ ವಿಷಯಗಳ ಕುರಿತು ಭರವಸದಿಂದಿದ್ದಾರೆ ಯಾಕಂದರೆ ದೇವರು, ತನ್ನ ಒಳ್ಳೇತನದಲ್ಲಿ ಅವನ್ನು ತನ್ನ ಸತ್ಯ ವಾಕ್ಯದಲ್ಲಿ ಪ್ರಕಟ ಮಾಡಿದ್ದಾನೆ.—2 ತಿಮೊಥಿ 3:16.
ಹೌದು, ದೇವರ ಒಳ್ಳೇತನದ ಕುರಿತಾದ ಚರ್ಚೆಯು ನಿಶ್ಚಯವಾಗಿಯೂ ನಮ್ಮ ಹೃದಯಗಳನ್ನು ಅವನ ಕಡೆಗೆ ಸೆಳೆಯುತ್ತದೆ. ಆದರೆ ಅದು ಒಂದು ಪ್ರಶ್ನೆಯನ್ನೂ ಎಬ್ಬಿಸುತ್ತದೆ:
ದೇವರ ಒಳ್ಳೇತನದಿಂದ ನೀವೆಷ್ಟು ಪ್ರಯೋಜನ ಹೊಂದುವಿರಿ?
ವಾಸ್ತವದಲ್ಲಿ ನೀವು ಯಾರೇ ಆಗಿರಲಿ, ದೇವರ ಒಳ್ಳೇತನದಿಂದ ನೀವು ಈ ಮೊದಲೇ ಪ್ರಯೋಜನ ಹೊಂದಿದ್ದೀರಿ. ನೀವು ಉಸಿರಾಡುತ್ತೀರಿ, ತಿನ್ನುತ್ತೀರಿ, ಕುಡಿಯುತ್ತೀರಿ, ಜೀವಿತವನ್ನು ಆನಂದಿಸುತ್ತೀರಿ—ಇವೆಲ್ಲವೂ ಆತನಿಂದ ಬಂದ ದಾನಗಳೇ. ಆದರೆ ಸಾಧ್ಯವಾದಷ್ಟು ಪೂರ್ಣವಾಗಿ ನೀವದರಿಂದ ಪ್ರಯೋಜನ ಹೊಂದುತ್ತೀರೋ? ಆದಾಮ ಮತ್ತು ಹವ್ವರು ಪಾಪ ಮಾಡಿದ ನಂತರ ಅವರ ಕಡೆಗಿನ ದೇವರ ಒಳ್ಳೇತನವು ಸೀಮಿತಗೊಂಡಿತು ಎಂದು ನೆನಪಿರಲಿ. ತದ್ರೀತಿ ನಾವಾತನ ದಯೋಪಕಾರಗಳಿಗೆ ಯೋಗ್ಯ ರೀತಿಯಲ್ಲಿ ಪ್ರತಿವರ್ತನೆ ತೋರಿಸದೆ ಹೋದಲ್ಲಿ, ಆತನು ನಮ್ಮ ಕಡೆಗಿನ ತನ್ನ ಔದಾರ್ಯವನ್ನು ಸೀಮಿತಗೊಳಿಸುವನು. ನಾವು ಹೇಗೆ ಪ್ರತಿಕ್ರಿಯೆ ತೋರಿಸಬಹುದು?
ಕೀರ್ತನೆಗಾರನು ಪ್ರಾರ್ಥಿಸಿದ್ದು: “ಉತ್ಕೃಷ್ಟವಾದ ಜ್ಞಾನ ವಿವೇಕಗಳನ್ನು ನನಗೆ ಹೇಳಿಕೊಡು; ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.” (ಕೀರ್ತನೆ 119:66) ಇದು, ನಮ್ಮ ಪ್ರಾರ್ಥನೆಯೂ ಆಗಿರತಕ್ಕದ್ದು. ದೇವರು ಒಳ್ಳೆಯವನಾಗಿರಲಾಗಿ ನಾವು ಸಹಾ ಒಳ್ಳೆಯವರಾಗಿರಲು ಕಲಿಯುವ ಅಗತ್ಯವಿದೆ. ಪೌಲನು ಪ್ರೇರಿಸಿದ್ದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.”—ಎಫೆಸದವರಿಗೆ 5:1.
ನಾವಿದನ್ನು ಮಾಡುವುದು ಮೊದಲಾಗಿ ಒಳ್ಳೇತನವೆಂದರೇನೆಂದು ಕಲಿಯಲು ಬೈಬಲನ್ನು ಅಧ್ಯಯನ ಮಾಡುವ ಮೂಲಕವೇ. ಮತ್ತು ಆ ಗುಣವನ್ನು ಬೆಳೆಸಿಕೊಳ್ಳಲು ನಾವು ದೇವರ ಸಹಾಯಕ್ಕಾಗಿ ಬೇಡಿಕೊಳ್ಳೋಣ. ಉಪಕಾರ (ಒಳ್ಳೇತನ)ವು ದೇವರಾತ್ಮನ ಫಲಗಳಾದ, “ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, . . . ನಂಬಿಕೆ, ಸಾಧುತ್ವ, ಶಮೆದಮೆ” ಇವುಗಳಲ್ಲಿ ಸೇರಿರುತ್ತದೆ. (ಗಲಾತ್ಯದವರಿಗೆ 5:22, 23) ನಾವು ಈ ಎಲ್ಲಾ ಗುಣಗಳನ್ನು ದೇವರಾತ್ಮದಲ್ಲಿ ಆತುಕೊಳ್ಳುವ ಮೂಲಕ, ದೇವ ಪ್ರೇರಿತವಾದ ಬೈಬಲನ್ನು ಅಧ್ಯಯನ ಮಾಡುವ ಮೂಲಕ, ಆತನ ಸಹಾಯಕ್ಕಾಗಿ ಬೇಡುವ ಮೂಲಕ ಮತ್ತು ಐಕ್ಯಮತ್ಯದ ಕ್ರೈಸ್ತ ರೊಂದಿಗೆ ಸಹವಸಿಸುವ ಮೂಲಕ ಬೆಳೆಸಿಕೊಳ್ಳ ಸಾಧ್ಯವಿದೆ.—ಕೀರ್ತನೆ 1:1-3; 1 ಥೆಸಲೊನೀಕದವರಿಗೆ 5:17; ಇಬ್ರಿಯರಿಗೆ 10:24, 25.
ಬೈಬಲು ಹೀಗೂ ಹೇಳಿದೆ: “ಜನರು ನಿನ್ನ ಮಹೋಪಕಾರ (ಒಳ್ಳೇತನ)ವನ್ನು ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು; ನಿನ್ನ ನೀತಿಯನ್ನು ಹೊಗಳುವರು.” (ಕೀರ್ತನೆ 145:7) ಹೌದು, ತನ್ನ ಒಳ್ಳೇತನದ ಕುರಿತು ಬೇರೆಯವರಿಗೆ ತಿಳಿಸುವಂತೆ ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ. ನಾವು ನಮ್ಮ ಸ್ವರ್ಗೀಯ ತಂದೆಯ ಕುರಿತಾಗಿ ನಿರರ್ಗಳವಾಗಿ ಮಾತಾಡಬೇಕು.
ಕೊನೆಯದಾಗಿ, ದೇವರ ಒಳ್ಳೇತನವನ್ನು ನಾವು ದುರುಪಯೋಗ ಮಾಡಬಾರದು. ಯೆಹೋವನು ಪಾಪಿಗಳನ್ನು ಕ್ಷಮಿಸುತ್ತಾನೆ, ನಿಜ. ರಾಜ ದಾವೀದನು ಪ್ರಾರ್ಥಿಸಿದಾಗ ಒಂದು ಅನುಗ್ರಹದ ಉತ್ತರವು ದೊರಕುವದೆಂಬ ಭರವಸವು ಅವನಿಗಿತ್ತು: “ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನೂ ಮನಸ್ಸಿನಲ್ಲಿಡದೆ ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಸು.” (ಕೀರ್ತನೆ 25:7) ದೇವರು ಕ್ಷಮಿಸುತ್ತಾನೆಂಬ ಭರವಸದ ಅಪೇಕ್ಷೆಯಿರಲಾಗಿ, ನಾವು ಪಾಪಮಾಡುತ್ತಾ ಮುಂದರಿಯಬಹುದೆಂದು ಇದರ ಅರ್ಥವೋ? ಇಲ್ಲವೇ ಇಲ್ಲ. ದೇವರ ಒಳ್ಳೇತನವು, ಪಶ್ಚಾತ್ತಾಪಪಡದ ಪಾಪಿಗಳ “ಅಪರಾಧಗಳನ್ನು ಶಿಕ್ಷಿಸದೆ ಬಿಡದಿರುವ” ಅರ್ಥದಲ್ಲಿದೆ ಎಂಬದನ್ನು ನೆನಪಿನಲ್ಲಿಡಿರಿ.
ದೇವರ ಒಳ್ಳೇತನವನ್ನು ಆನಂದಿಸುವುದು
ಒಮ್ಮೆ ನಾವು ದೇವರ ಒಳ್ಳೇತನವನ್ನು ಪೂರ್ಣವಾಗಿ ಆನಂದಿಸಿದೆವೆಂದ ಮೇಲೆ ನಮ್ಮ ಹೃದಯವು ಆತನ ಕಡೆಗೆ ಅದೆಷ್ಟು ಬೆಚ್ಚಗಾಗುವುದು! ಅಪೊಸ್ತಲ ಪೌಲನ ಉತ್ತಮ ಸೂಚನೆಯನ್ನು ಅನುಸರಿಸಲು ನಾವು ಉತ್ತೇಜಿಸಲ್ಪಡುತ್ತೇವೆ: “ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರ (ಒಳ್ಳೇತನ, NW) ದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.”—ಎಫೆಸದವರಿಗೆ 5:8, 9.
ದಿನಂಪ್ರತಿ, ನಾವು ದೇವರು ನಮ್ಮೆಡೆಗೆ ತೋರಿಸುವ ಪ್ರೀತಿಯುಳ್ಳ ಗಮನದ ಅರುಹುಳ್ಳವರಾಗಿದ್ದೇವೆ. ಅತ್ಯಂತ ಕಷ್ಟದ ಪರಿಸ್ಥಿತಿಗಳ ಕೆಳಗೂ ಆತನು ತನ್ನನ್ನು ಪ್ರೀತಿಸುವವರನ್ನು ತ್ಯಜಿಸಿಬಿಡಲಾರನೆಂದು ನಮಗೆ ಗೊತ್ತದೆ. ಹೌದು, ನಾವು ಕೀರ್ತನೆಗಾರನ ಮಹತ್ತಮವಾದ ಮನೋಶಾಂತಿಯನ್ನು ಅನುಭವಿಸುವೆವು: “ನಿಶ್ಚಯವಾಗಿ ನನ್ನ ಜೀವಮಾನದಲೆಲ್ಲಾ ಕೃಪೆಯೂ ಶುಭವೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.”—ಕೀರ್ತನೆ 23:6. (w89 12/1)