-
“ಹಾಡುತ್ತಾ ಯೆಹೋವನನ್ನ ಕೊಂಡಾಡಿದಳು!”ಅವರ ನಂಬಿಕೆಯನ್ನು ಅನುಕರಿಸಿ
-
-
ಇದೇ ಕಾತುರ, ಕುತೂಹಲ ಮಿರ್ಯಾಮಳಿಗೂ ಇತ್ತಾ? ಮೊದಮೊದಲು ಇತ್ತು. ಆಮೇಲೆ ಅಹಂಕಾರ ಅನ್ನೋ ಪರದೆ ಅವಳ ಕಣ್ಣನ್ನ ಮುಚ್ಚಿಬಿಡ್ತು. ಎಲ್ಲಿ ಚಿಪ್ಪೋರ ತನ್ನ ಸ್ಥಾನನ ಕಿತ್ತುಕೊಂಡು ದೇಶದಲ್ಲಿ ಪ್ರಸಿದ್ಧಿ ಆಗಿಬಿಡ್ತಾಳೋ ಅನ್ನೋ ಭಯ ಇವಳನ್ನ ಕಾಡೋಕೆ ಶುರು ಆಯ್ತು. ಆರೋನ ಮತ್ತು ಮಿರ್ಯಾಮ ಚಿಪ್ಪೋರಳ ಬಗ್ಗೆ ತಪ್ಪು ಹುಡುಕೋಕೆ ಶುರು ಮಾಡಿದ್ರು. ಈ ಮಾತುಗಳು ಉರಿಯೋ ಬೆಂಕಿಗೆ ತುಪ್ಪ ಹಾಕೋ ತರ ಅವರಲ್ಲಿ ಅವಳ ಮೇಲಿನ ಕಹಿ ಭಾವನೆನ ಜಾಸ್ತಿ ಮಾಡ್ತು. ಆರಂಭದಲ್ಲಿ ಚಿಪ್ಪೋರ ಬಗ್ಗೆ ‘ಅವಳು ಇಸ್ರಾಯೇಲ್ಯ ಸ್ತ್ರೀ ಅಲ್ಲ, ಕೂಷ್ ದೇಶದವಳು’a ಅಂತ ತಪ್ಪಾಗಿ ಮಾತಾಡೋಕೆ ಶುರು ಮಾಡಿದ್ರು. ಆಮೇಲೆ ಅವ್ರ ಈ ಮಾತು ಎಲ್ಲಿಗೆ ನಡೆಸ್ತು ಅಂದ್ರೆ ಕೊನೆಗೆ ಮೋಶೆನೇ ಸರಿಯಿಲ್ಲ ಅಂತ ಹೇಳೋಕೆ ಶುರು ಮಾಡಿದ್ರು. ಮಿರ್ಯಾಮ ಮತ್ತು ಆರೋನ “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ” ಅಂತ ಹೇಳೋಷ್ಟರ ಮಟ್ಟಿಗೆ ಹೋದ್ರು.—ಅರಣ್ಯಕಾಂಡ 12:1, 2.
-
-
“ಹಾಡುತ್ತಾ ಯೆಹೋವನನ್ನ ಕೊಂಡಾಡಿದಳು!”ಅವರ ನಂಬಿಕೆಯನ್ನು ಅನುಕರಿಸಿ
-
-
a ಚಿಪ್ಪೋರಳ ವಿಷ್ಯದಲ್ಲಿ “ಕೂಷ್ ದೇಶದವಳು” ಅನ್ನೋ ಪದ ಬೇರೆ ಮಿದ್ಯಾನ್ಯರ ಹಾಗೆ ಅವಳು ಅರೇಬಿಯ ಸ್ತ್ರೀ ಅನ್ನೋದನ್ನ ಸೂಚಿಸುತ್ತೆ ಹೊರತು ಇಥಿಯೋಪಿಯದವಳು ಅಂತಲ್ಲ.
-