ಮಿತವಾದ ಪ್ರಮಾಣಗಳಲ್ಲಿ ಹಂಚಲ್ಪಟ್ಟ “ಗುಣಮಟ್ಟ ಸಮಯ”
ಕೆಲವೇ ಹೆತ್ತವರು ತಮ್ಮ ಮಕ್ಕಳಿಗಾಗಿ ಸಾಕಷ್ಟು ಸಮಯವನ್ನು ಈ ದಿನಗಳಲ್ಲಿ ತೆಗೆದುಕೊಳ್ಳುತ್ತಾರೆ. ಅನೇಕರು ಒಂಟಿಗರಾಗಿದ್ದಾರೆ ಮತ್ತು ತಮ್ಮ ಸಂತಾನಕ್ಕೆ ಒಬ್ಬ ಗಂಡ ಯಾ ಹೆಂಡತಿಯ ಸಹಾಯವಿಲ್ಲದೆ ಒದಗಿಸಲು ಹೆಣಗಾಡುತ್ತಿದ್ದಾರೆ. ಮತ್ತು ಅವನತಿ ಹೊಂದುತ್ತಿರುವ ಆರ್ಥಿಕ ವಾಯುಗುಣದಿಂದಾಗಿ, ಕುಟುಂಬವು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿ ಇರಲಿಕ್ಕಾಗಿ ತಂದೆ ಮತ್ತು ತಾಯಿ ಇಬ್ಬರೂ ಮನೆಯ ಹೊರಗೆ ಕೆಲಸ ಮಾಡಬೇಕಾಗಿದೆ ಎಂದು ಹೆಚ್ಚಿನ ವಿವಾಹಿತ ಹೆತ್ತವರು ಕಂಡುಕೊಳ್ಳುತ್ತಿದ್ದಾರೆ. ಹಾಗಿರುವುದಾದರೆ, ಗುಣಮಟ್ಟ ಸಮಯದ ಅಭಿಪ್ರಾಯವು ಅಭಿವೃದ್ಧಿ ಹೊಂದಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಸಾಮಾನ್ಯವಾಗಿ ತಿಳಿದುಕೊಂಡಿರುವಂತೆ, ಗುಣಮಟ್ಟ ಸಮಯವು ಸಾಮಾನ್ಯವಾಗಿ ಒಂದು ಮಗುವಿನೊಂದಿಗೆ ಸ್ವಲ್ಪ ಸಮಯವನ್ನು ವ್ಯಯಿಸುವ ಏರ್ಪಾಡನ್ನು ಒಳಗೊಂಡಿರುತ್ತದೆ, ಅನೇಕ ವೇಳೆ ಒಂದು ನಿರ್ದಿಷ್ಟ ಚಟುವಟಿಕೆಯೊಂದಿಗೆ—ಉದಾಹರಣೆಗೆ, ಮೃಗಾಲಯಕ್ಕೆ ಒಂದು ಲಘು ಪ್ರವಾಸದಂತಹ ಒಂದು ವಿಶೇಷ ಸಂತೋಷ ಸಂಚಾರವಾಗಿರಬಹುದು. ಸ್ಪಷ್ಟವಾಗಿಗಿಯೂ, ಅಭಿಪ್ರಾಯಕ್ಕೆ ಮೌಲ್ಯವಿದೆ. ಪಡೆಯಬಹುದಾದ ಯಾವುದೇ ವಿಶೇಷ ಗಮನವು ಮಕ್ಕಳಿಗೆ ಅಗತ್ಯವಾಗಿದೆ. ಹಾಗಿದ್ದರೂ, ಮಕ್ಕಳ ಆರೈಕೆಯಲ್ಲಿ ಪರಿಣಿತರಿಗೆ ಹೆಚ್ಚಾಗಿ ಸ್ಪಷ್ಟವಾಗಿಗುತ್ತಿರುವ ಕೆಲವು ನ್ಯೂನತೆಗಳನ್ನು ಜನಪ್ರಿಯವಾದ ಗುಣಮಟ್ಟ ಸಮಯದ ಕಲ್ಪನೆಯು ಹೊಂದಿದೆ.
ಒಂದು ಮಗುವಿನೊಂದಿಗೆ ಕ್ರಮವಾದ, ನಿಶ್ಚಿತಮಾಡಲ್ಪಟ್ಟ ಸಮಯದ ಕೊಂಚ ಭಾಗವನ್ನು ವ್ಯಯಿಸುವುದರಿಂದ, ಹೆತ್ತವರ ಗಮನಕ್ಕಾಗಿರುವ ಮಗುವಿನ ಎಲ್ಲ ಅಗತ್ಯಗಳ ಬಗ್ಗೆ ಕಾಳಜಿವಹಿಸುವುದು ಎಂಬ ವಂಚಿಸುವ ಅಭಿಪ್ರಾಯವನ್ನು ಅನೇಕ ಕಾರ್ಯಮಗ್ನ, ಜೀವನೋಪಾಯ ಅಭಿಮುಖರಾದ ಹೆತ್ತವರು ಸ್ವೀಕರಿಸಿದ್ದಾರೆ. ಈ ಪ್ರಕಾರ, ನ್ಯೂ ಯಾರ್ಕ್ನ ಡೇಲಿ ನ್ಯೂಜ್, ಅಮೆರಿಕದ ಕಾರ್ನೆಲ್ ಯೂನಿವರ್ಸಿಟಿ ಮೆಡಿಕಲ್ ಸ್ಕೂಲ್ನ ಒಬ್ಬ ಪ್ರೊಫೆಸರ್, ಡಾ. ಲೀ ಸಾಕ್, ಹೀಗೆ ಹೇಳುವುದನ್ನು ಉದ್ಧರಿಸುತ್ತದೆ: “ಗುಣಮಟ್ಟ ಸಮಯದ ಕಲ್ಪನೆಯು ಅರ್ಥವಿಲ್ಲದ್ದು.” ಅವರು ವಿವರಿಸುವುದು: “ಈ ಪದವು ಹೆತ್ತವರ ದೋಷದಿಂದಾಗಿ ಬೆಳೆದಿದೆ. ಜನರು ತಮ್ಮ ಮಕ್ಕಳೊಂದಿಗೆ ಕಡಮೆ ಸಮಯವನ್ನು ವ್ಯಯಿಸಲು ತಮಗೆ ತಾವೇ ಅನುಮತಿ ಕೊಟ್ಟುಕೊಳ್ಳುತ್ತಿದ್ದರು.”
ಆದರೆ ಮಗುವಿನ ಮೇಲೆ ಕೇಂದ್ರೀಕೃತವಾದ ಹೆತ್ತವರ ಸಮಗ್ರ ಗಮನದ ಜೊತೆಗೆ ಸಮಯದ ಗುಣಮಟ್ಟವು, ಪ್ರಮಾಣದ ಕೊರತೆಯನ್ನು ನಷ್ಟ ಭರ್ತಿಮಾಡಿಕೊಳ್ಳುವದಿಲ್ಲವೊ? ಇಲ್ಲ, ಒಂದು ಸರಳವಾದ ಕಾರಣಕ್ಕಾಗಿ—ಹೆತ್ತವರು ಮಾದರಿಯ ಮೂಲಕ ತಮ್ಮ ಮಕ್ಕಳಿಗೆ ಅತಿ ಶಕ್ತಿಶಾಲಿಯಾಗಿ ಕಲಿಸುತ್ತಾರೆ. ಈ ನಿರ್ವಿವಾದದ ಅಹಿತಕರ ಪಕ್ಕವು ಒಂದು ನಗರದ ಜನಸಂದಣಿಯಲ್ಲಿ ಯುವಜನರ ನಡೆಸಲಾದ ಇತ್ತೀಚೆಗಿನ ಅಧ್ಯಯನದ ಮೂಲಕ ಕಠೋರವಾಗಿ ದೃಷ್ಟಾಂತಿಸಲ್ಪಟ್ಟಿತ್ತು. ಅವರು ಬೆಳೆಯುತ್ತಿರುವಾಗ ಸೆರೆಮನೆಯಲ್ಲಿರುವ ಕುಟುಂಬ ಸದಸ್ಯರನ್ನು ಹೊಂದಿದ್ದವರು, ತಾವೇ ಸೆರೆಮನೆವಾಸಿಗಳಾಗುವ ಸಾಧ್ಯತೆಯು ಎರಡು ಪಟ್ಟು ಇತ್ತು. ಅದೇ ರೀತಿಯಲ್ಲಿ, ಮದ್ಯಸಾರ ಯಾ ಅಮಲೌಷಧದ ಅಪಪ್ರಯೋಗಿಗಳ ಪರಾಮರಿಕೆಯ ಕೆಳಗೆ ಬೆಳೆಯುತ್ತಿದ್ದವರು, ಆ ಮಾರಕ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯು ಸುಮಾರು ಎರಡು ಪಟ್ಟಿನಷ್ಟು ಇದೆ.
ಹೆತ್ತವರ ಉತ್ತಮ ಮಾದರಿಯು ಇಷ್ಟೇ ಶಕ್ತಿಶಾಲಿಯಾಗಿರಬಲ್ಲದು. ಸಮಸ್ಯೆಯು ಏನೆಂದರೆ ಉತ್ತಮ ಮಾದರಿಯನ್ನು ಇಡುವುದು ಸಮಯವನ್ನು ತೆಗೆದುಕೊಳ್ಳುತ್ತದೆ, ದೀರ್ಘ ಸಮಯಾವಧಿಗಳು, ಕೇವಲ ಗುಣಮಟ್ಟ ಸಮಯದ ಅಚ್ಚುಕಟ್ಟಾದ, ಚಿಕ್ಕ ಪೊಟ್ಟಣಗಳಲ್ಲ. ನ್ಯೂ ಯಾರ್ಕ್ನ ಡೇಲಿ ನೂಜ್ ಅದನ್ನು ಹೇಳುವಂತೆ: “ಗುಣಮಟ್ಟ ಸಮಯದ ಕಲ್ಪನೆಯು ತಪ್ಪಾಗಿದೆ ಯಾಕೆಂದರೆ, ಮಗು ಮತ್ತು ತಂದೆ ಯಾ ತಾಯಿಯ ನಡುವಿನ ಮುಖ್ಯ ಕ್ಷಣಗಳು—ಭದ್ರತೆಯ ಅನಿಸಿಕೆಯನ್ನು, ಮೌಲ್ಯಗಳನ್ನು ಮತ್ತು ಸ್ವಪ್ರತಿಷ್ಠೆಯನ್ನು ತುಂಬುವ ಸಂಭಾಷಣೆಗಳು ಮತ್ತು ನಿರ್ಣಯಗಳು—ಸ್ವಯಂಪ್ರೇರಿತವಾಗಿವೆ.” ಒಂದು ಸ್ವಯಂಪ್ರೇರಿತ ಕ್ಷಣವನ್ನು ಯಾರೂ ಕಾರ್ಯತಖ್ತೆಗೊಳಪಡಿಸಲಾಗುವದಿಲ್ಲ. ಮಗುವಿನೊಂದಿಗೆ ವ್ಯಯಿಸಲು ಗುಣಮಟ್ಟ ಸಮಯದ 15 ನಿಮಿಷಗಳನ್ನು ತಂದೆ ಯಾ ತಾಯಿಯು ಬದಿಗಿಡಬಹುದು, ಆದರೆ ಆ ಸಮಯದಲ್ಲಿ ಅವರಿಬ್ಬರೂ ಉತ್ತಮವಾದೊಂದು ವಿಶ್ವಾಸದ ಸಂಬಂಧವನ್ನು ಬೆಳೆಸುವರೆಂದು ಒಬ್ಬರಿಗೆ ಗೊತ್ತಾಗುವುದು ಹೇಗೆ? ಮತ್ತು, ತಂದೆ ಯಾ ತಾಯಿಯೊಂದಿಗೆ ದಿನದಲ್ಲಿ ವ್ಯಯಿಸುವ ಸಮಯವು ಆ ನಿಮಿಷಗಳು ಮಾತ್ರವೇ ಆಗಿದ್ದರೆ, ಮಗುವು ಮಾದರಿಯ ಮೂಲಕ ಕಲಿಯುವುದು ಹೇಗೆ?
ಹೆತ್ತವರಿಗೆ ವ್ಯಯಿಸಲು ಇಷ್ಟು ಕಡಿಮೆ ಸಮಯವು ಇರುವದರಿಂದ, ಪರಿಹಾರವೇನು? ಸರಳವಾದ ಉತ್ತರಗಳು ಇರುವದಿಲ್ಲ. ಈ ಲೋಕವು ಮಕ್ಕಳ ಪರಾಮರಿಕೆಯನ್ನು ಬಹಳ ಕಠಿನಕರವಾದೊಂದು ಕೆಲಸವಾಗಿ ಮಾಡಿದೆ ಎಂಬ ನಿಜತ್ವವನ್ನು ಯಾವುದೂ ಬದಲಾಯಿಸಲು ಸಾಧ್ಯವಿಲ್ಲ. ಕೆಲವು ಹೆತ್ತವರು ತಮ್ಮ ಜೀವನೋಪಾಯಕ್ಕೆ ಕಡಮೆ ಗಮನವನ್ನು ಕೊಡಲು ಶಕ್ತರಾಗಬಹುದು. ಅದನ್ನು ಮಾಡಲು ಸಾಧ್ಯವಿರುವ ಯಾವುದೇ ತಂದೆ ಯಾ ತಾಯಿಯು ಅದನ್ನೇ ಮಾಡುವಂತೆ, ಮಗು ಪಾಲನೆಯ ಬಗ್ಗೆ ಇತ್ತೀಚಿನ ಒಂದು ಪುಸ್ತಕದ ಒಬ್ಬ ಲೇಖಕನು—ಮಕ್ಕಳೊಂದಿಗೆ ಮನೆಯಲ್ಲಿ ಇರುವುದನ್ನು ಪ್ರೋತ್ಸಾಹಿಸುತ್ತಾನೆ. ಆದರೆ ಅನೇಕ ಹೆತ್ತವರಿಗೆ, ಇಂಥ ಆಯ್ಕೆ ಇರುವದಿಲ್ಲ. ಮತ್ತು ಮಣಿಸಬಹುದಾದ ಕೆಲಸದ ವೇಳಾ ಪಟ್ಟಿಯನ್ನು ಹೊಂದಿರುವವರೂ ಯಾ ಸಂಬಳವನ್ನು ಕೊಡದ ಕೆಲಸವನ್ನು ಪಡೆದಿರುವವರೂ ಕೂಡ ತಮ್ಮ ಮಕ್ಕಳೊಂದಿಗೆ ಬೇಕಾದಷ್ಟು ಸಮಯವನ್ನು ವ್ಯಯಿಸುವುದು ಕಷ್ಟಕರವೆಂದು ಕಾಣುತ್ತಾರೆ.
ಅವರು ಶುಚಿಮಾಡುವುದು, ಅಡಿಗೆಮಾಡುವುದು, ದುರಸ್ತಾಗಿ ಇಡುವುದು, ವಾಹನಗಳ ಪರಾಮರಿಕೆ, ಬಟ್ಟೆ ಒಗೆಯುವುದು, ಮತ್ತು ಖರೀದಿಸುವುದು ಮುಂತಾದ ಮನೆಯ ಸುತ್ತಲೂ ಮಾಡುವಂಥ ಕೆಲಸಗಳನ್ನು ಹೆತ್ತವರು ಅವಲೋಕಿಸಲು, ಈ ಕೆಲಸಗಳಲ್ಲಿ ಕೆಲವೊಂದನ್ನು ತಮ್ಮ ಮಕ್ಕಳೊಂದಿಗೆ ಮಾಡಬಹುದೊ ಎಂದು ನೋಡಲು, ಕೆಲವು ಪರಿಣಿತರು ಪ್ರೋತ್ಸಾಹಿಸುತ್ತಾರೆ. ಅತಿ ಲೌಕಿಕವಾದ ಕೆಲಸಗಳನ್ನು ಕೂಡ ಜೊತೆಯಾಗಿ ಮಾಡುವುದು, ಯಾ ಕೇವಲ ಜೊತೆಯಾಗಿ ವಿಶ್ರಮಿಸುವುದು, ಸಂಸರ್ಗದ ಮಾರ್ಗವನ್ನು ತೆರೆದಿಡಲು ಮತ್ತು ಒಂದು ಸಕಾರಾತ್ಮಕ ಮಾದರಿಯನ್ನು ಒದಗಿಸಲು ಹೆತ್ತವರಿಗೆ ಬೇಕಾದ ಸಮಯವನ್ನು ನೀಡಬಹುದು. ತಮ್ಮ ಮಕ್ಕಳ ಜೊತೆಗೆ ಅವರು ಮಾಡಲು ಬಯಸುವ ಬೇರೆ ಕೆಲಸಗಳನ್ನು ಕ್ರೈಸ್ತ ಹೆತ್ತವರು ಹೊಂದಿದ್ದಾರೆ. ಕ್ರೈಸ್ತ ಕೂಟಗಳು, ಶುಶ್ರೂಷೆ, ಕುಟುಂಬ ಬೈಬಲ್ ಅಧ್ಯಯನ, ಸಹ ವಿಶ್ವಾಸಿಗಳೊಂದಿಗೆ ಸಹವಾಸ—ಇವೆಲ್ಲವು ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ಇರಲು ನಿರ್ಧಾರಕ ಸಮಯವನ್ನು ಒದಗಿಸುತ್ತವೆ.
ಕುತೂಹಲಜನಕವಾಗಿ, ಸುಮಾರು 3000 ವರ್ಷಗಳ ಹಿಂದೆ, ಇಸ್ರಾಯೇಲ ರಾಷ್ಟ್ರಕ್ಕೆ ಕೊಡಲಾದ ನಿಯಮವು ಸಮಾನವಾದೊಂದು ಅಂಶವನ್ನು ಹೇಳಿತು. ಧರ್ಮೋಪದೇಶಕಾಂಡ 6:6, 7ರಲ್ಲಿ, ನಾವು ಓದುವುದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಪ್ರಾಚೀನ ಸಮಯಗಳಲ್ಲಿ ಜೀವಿತವು ಅವಶ್ಯವಾಗಿ ಸುಲಭವಾಗಿರಲಿಲ್ಲ. ಕೇವಲ ದೈನಿಕ ಅಗತ್ಯಗಳನ್ನು ನೋಡಿಕೊಳ್ಳಲು ಬೇಕಾದ ಎಲ್ಲ ಸಮಯದ ಕುರಿತು ಯೋಚಿಸಿರಿ—ತನ್ನ ಕುಟುಂಬಕ್ಕಾಗಿ ಒದಗಿಸಲು ಒಬ್ಬ ತಂದೆಗೆ ಎಷ್ಟು ಕೆಲಸವನ್ನು ಅದು ಒಳಗೊಂಡಿರಬಹುದು, ಯಾ ಅಡಿಗೆ ಮಾಡುವ ಯಾ ಬಟ್ಟೆ ಒಗೆಯುವಂತಹ ಕೆಲಸಗಳಲ್ಲಿ ಎಷ್ಟು ಶ್ರಮದ ಅಗತ್ಯವಿದ್ದರಬಹುದು! ಆದರೆ ಯೆಹೋವನನ್ನು ಪ್ರೀತಿಸಿದ ಹೆತ್ತವರು ಅವರ ಮಕ್ಕಳೊಂದಿಗೆ, ಅವರ ಜೊತೆಯಲ್ಲಿ ಅವರಿಗೆ ಮಾಡಲು ಸಾಧ್ಯವಾದಷ್ಟನ್ನು ಮಾಡಿದರು ಮತ್ತು ಆದುದರಿಂದ ದಿನದಲ್ಲಿ ಅವರ ಎಳೆಯ ಹೃದಯಗಳಲ್ಲಿ ದೇವರ ನಿಯಮವನ್ನು ಒತ್ತಿ ಹೇಳಲು ಅನೇಕ ಕ್ಷಣಗಳನ್ನು ಕಂಡುಕೊಂಡರು.
ಇಂದು ಕ್ರೈಸ್ತ ಹೆತ್ತವರು ಅದನ್ನೇ ಮಾಡುವ ಅಗತ್ಯವಿದೆ. ತಮ್ಮ ಮಕ್ಕಳೊಂದಿಗೆ ಸಮಯವನ್ನು ವ್ಯಯಿಸುವ ವಿಷಯ ಬಂದಾಗ, ಬಹಳ ಅನುಕೂಲವಾಗಿ ತೋರುವ ವಿಷಯಗಳನ್ನೇ ಮಾಡುವದನ್ನು ತಡೆಯಬೇಕು. “ಪ್ರಮಾಣವಲ್ಲ, ಗುಣಮಟ್ಟ,” ಎಂಬ ಹಳೆಯ ನಾಣ್ಣುಡಿಯು, ಮಕ್ಕಳ ಪಾಲನೆಯಲ್ಲಿ ಅನ್ವಯವಾಗುವದಿಲ್ಲ. ವಿಶೇಷವಾಗಿ ಅವರ ಬೆಳೆಯುವ ವರ್ಷಗಳಲ್ಲಿ, ಮಕ್ಕಳಿಗೆ ವಿಶೇಷವಾದ ಸಮಯ ಮಾತ್ರವಲ್ಲ ಆದರೆ ಕೇವಲ “ಜೊತೆಯಾಗಿರುವ” ಸಮಯದ ಅಗತ್ಯವು ಕೂಡ ಇದೆ. (g93 5/22)
[ಪುಟ 27 ರಲ್ಲಿರುವ ಚಿತ್ರ]
ಮಕ್ಕಳನ್ನು ಒಳಗೊಂಡು, ಕುಟುಂಬವು ಮನೆಯಲ್ಲಿ ಕಾರ್ಯಮಗ್ನವಾಗಿದೆ
[ಪುಟ 27 ರಲ್ಲಿರುವ ಚಿತ್ರ]
ಯೆಹೋವನನ್ನು ಜೊತೆಯಾಗಿ ಸೇವಿಸುವುದು