-
ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿಕಾವಲಿನಬುರುಜು (ಅಧ್ಯಯನ)—2021 | ನವೆಂಬರ್
-
-
9. ಯೆಹೋವ ದೇವರು ತನಗೆ ವಿರುದ್ಧ ಆಗಿದ್ದಾನೆ ಅಂತ ನೊವೊಮಿ ಯಾಕೆ ಅಂದುಕೊಂಡಳು?
9 ರೂತ್ ಪುಸ್ತಕದಲ್ಲಿ ನೊವೊಮಿ, ಅವಳ ಸೊಸೆ ರೂತ್ ಮತ್ತು ಬೋವಜನ ಬಗ್ಗೆ ನಾವು ಕಲಿತೀವಿ. ಬೋವಜ ನೊವೊಮಿಯ ಗಂಡನ ಸಂಬಂಧಿಕನಾಗಿದ್ದ ಮತ್ತು ಅವನಿಗೆ ದೇವರ ಮೇಲೆ ಭಯಭಕ್ತಿ ಇತ್ತು. ಒಂದು ಕಾಲದಲ್ಲಿ ಇಸ್ರಾಯೇಲ್ ದೇಶದಲ್ಲಿ ಬರಗಾಲ ಬಂದಾಗ ನೊವೊಮಿ, ಅವಳ ಗಂಡ ಮತ್ತು ಇಬ್ಬರು ಗಂಡುಮಕ್ಕಳು ಮೋವಾಬ್ ದೇಶಕ್ಕೆ ಹೋದ್ರು. ಅಲ್ಲಿ ನೊವೊಮಿಯ ಗಂಡ ಸತ್ತುಹೋದ. ಅಷ್ಟೇ ಅಲ್ಲ, ಮದುವೆ ಆಗಿದ್ದ ಅವಳ ಇಬ್ಬರು ಗಂಡುಮಕ್ಕಳೂ ತೀರಿಕೊಂಡ್ರು. (ರೂತ್ 1:3-5; 2:1) ಹೀಗೆ ಒಂದರ ಮೇಲೊಂದು ಕಷ್ಟಗಳು ಬಂದಾಗ ನೊವೊಮಿಗೆ ಆಕಾಶನೇ ತಲೆಮೇಲೆ ಬಿದ್ದ ಹಾಗಾಯ್ತು. ಅವಳು ತುಂಬ ದುಃಖದಿಂದ ಯೆಹೋವ ದೇವರು ತನ್ನ ಕೈ ಬಿಟ್ಟುಬಿಟ್ಟಿದ್ದಾನೆ, ತನ್ನ ಜೊತೆ ಇಲ್ಲ ಅಂದುಕೊಂಡಳು. ಅವಳು, ‘ಯೆಹೋವ ದೇವ್ರ ಕೈ ನನ್ನ ವಿರುದ್ಧ ಇದೆ.’ “ಸರ್ವಶಕ್ತ ದೇವರು ನನ್ನ ಜೀವನವನ್ನ ದುಃಖದಲ್ಲಿ ಮುಳುಗಿಸಿದ್ದಾನೆ” ಅಂದಳು. ಅಷ್ಟೇ ಅಲ್ಲ, ‘ಯೆಹೋವ ನನಗೆ ವಿರುದ್ಧ ಆಗಿಬಿಟ್ಟಿದ್ದಾನೆ. ಸರ್ವಶಕ್ತ ದೇವ್ರೇ ನಾನು ಕಷ್ಟಪಡೋಕೆ ಬಿಟ್ಟುಬಿಟ್ಟಿದ್ದಾನೆ’ ಅಂತ ಹೇಳಿದಳು.—ರೂತ್ 1:13, 20, 21.
10. ನೊವೊಮಿಯ ಮಾತು ಕೇಳಿ ಯೆಹೋವ ದೇವರು ಏನು ಮಾಡಿದ್ರು?
10 ನೊವೊಮಿ ಹೇಳಿದ ಮಾತು ಕೇಳಿ ಯೆಹೋವ ದೇವರಿಗೆ ಕೋಪ ಬಂತಾ? ಇಲ್ಲ. ಅವಳ ನೋವನ್ನ, ಪರಿಸ್ಥಿತಿನ ಅರ್ಥಮಾಡಿಕೊಂಡನು. “ದಬ್ಬಾಳಿಕೆಗೆ ತುತ್ತಾದಾಗ ವಿವೇಕಿನೂ ಹುಚ್ಚನ ತರ ನಡ್ಕೊಳ್ತಾನೆ” ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. (ಪ್ರಸಂ. 7:7) ತಾನು ನೊವೊಮಿಯ ಕೈ ಬಿಟ್ಟಿಲ್ಲ ಅಂತ ಯೆಹೋವ ಅವಳಿಗೆ ಹೇಗೆ ಅರ್ಥಮಾಡಿಸಿದನು? (1 ಸಮು. 2:8) ನೊವೊಮಿಗೆ ಶಾಶ್ವತ ಪ್ರೀತಿ ತೋರಿಸೋ ಮನಸ್ಸನ್ನ ಯೆಹೋವ ದೇವರು ರೂತ್ಗೆ ಕೊಟ್ಟನು. ಅವಳು ಮನಸಾರೆ ನೊವೊಮಿಗೆ ಸಹಾಯ ಮಾಡಿದಳು. ದುಃಖದಲ್ಲಿ ಮುಳುಗಿ ಹೋಗೋಕೆ ಬಿಟ್ಟುಬಿಡಲಿಲ್ಲ. ಯೆಹೋವ ದೇವರು ಕೈ ಬಿಟ್ಟಿಲ್ಲ ಅಂತ ನೊವೊಮಿಗೆ ಅರ್ಥಮಾಡಿಸಿದಳು. ರೂತಳಿಂದ ನಾವೇನು ಕಲಿಬಹುದು?
-
-
ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸ್ತಾ ಇರಿಕಾವಲಿನಬುರುಜು (ಅಧ್ಯಯನ)—2021 | ನವೆಂಬರ್
-
-
18. ರೂತ್ಗೆ ಯಾಕೆ ಬೇಜಾರು ಆಗಿರಬಹುದು?
18 ತಪ್ಪು ತಿಳಿದುಕೊಳ್ಳಬೇಡಿ. ನೊವೊಮಿ ಮತ್ತು ರೂತ್ ಬೆತ್ಲೆಹೇಮಿಗೆ ಬಂದು ಮುಟ್ಟಿದಾಗ ನೊವೊಮಿ ತನ್ನ ಪಕ್ಕದ ಮನೆಯವರಿಗೆ, “ಇಲ್ಲಿಂದ ಹೋಗುವಾಗ ನನ್ನ ಹತ್ರ ಎಲ್ಲಾ ಇತ್ತು, ಆದ್ರೆ ಈಗ ಬರಿಗೈಯಲ್ಲಿ ಬರೋ ಹಾಗೆ ಯೆಹೋವ ಮಾಡಿದ್ದಾನೆ” ಅಂತ ಹೇಳಿದಳು. (ರೂತ್ 1:21) ಇದನ್ನ ಕೇಳಿಸಿಕೊಂಡಾಗ ರೂತ್ಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚನೆ ಮಾಡಿ. ಅವಳು ನೊವೊಮಿಗೆ ತುಂಬ ಸಹಾಯ ಮಾಡಿದ್ದಳು. ಅವಳ ಜೊತೆ ಅತ್ತಳು, ಅವಳಿಗೆ ಸಮಾಧಾನ ಮಾಡಿದ್ದಳು. ಇಲ್ಲಿ ತನಕ ಅವಳ ಜೊತೆನೇ ಬಂದಳು. ಇಷ್ಟೆಲ್ಲಾ ಸಹಾಯ ಸಿಕ್ಕಿದ್ರೂ ನನ್ನನ್ನ “ಬರಿಗೈಯಲ್ಲಿ ಬರೋ ಹಾಗೆ ಯೆಹೋವ ಮಾಡಿದ್ದಾನೆ” ಅಂತ ನೊವೊಮಿ ಹೇಳಿದಳು. ಅವಳಿಗೆ ಸಹಾಯ ಮಾಡಿದ ರೂತ್ ಪಕ್ಕದಲ್ಲೇ ಇದ್ರೂ ನೊವೊಮಿ ಅದನ್ನ ಗಮನಿಸಲೇ ಇಲ್ಲ. ಅವಳು ಮಾಡಿದ ಸಹಾಯದ ಬಗ್ಗೆ ಏನೂ ಹೇಳಲಿಲ್ಲ. ಆಗ ರೂತ್ಗೆ ಬೇಜಾರಾಗಿರಬಹುದು! ಆದ್ರೂ ಅವಳು ನೊವೊಮಿನ ತಪ್ಪು ತಿಳಿದುಕೊಳ್ಳಲಿಲ್ಲ.
19. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಾಗ ನಾವು ಏನನ್ನ ಮನಸ್ಸಲ್ಲಿಡಬೇಕು?
19 ನಾವೇನು ಮಾಡಬೇಕು? ಒಬ್ಬ ಸಹೋದರಿ ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ನಾವು ಎಷ್ಟೇ ಸಹಾಯ ಮಾಡಿದರೂ ಕೆಲವೊಮ್ಮೆ ಅವರು ನಮಗೆ ಬೇಜಾರಾಗೋ ತರ ನಡೆದುಕೊಳ್ಳಬಹುದು. ಹಾಗಂತ ನಾವು ಅವರ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಅವರಿಗೆ ಸಹಾಯ ಮಾಡೋದನ್ನ ನಿಲ್ಲಿಸಬಾರದು. ಅವರ ಜೊತೆನೇ ಇರಬೇಕು. ‘ಅವರಿಗೆ ಸಹಾಯ ಮಾಡೋಕೆ ಇನ್ನೂ ಬೇರೆ ದಾರಿ ತೋರಿಸಪ್ಪಾ’ ಅಂತ ಯೆಹೋವ ದೇವರ ಹತ್ರ ಬೇಡಿಕೊಳ್ಳಬೇಕು.—ಜ್ಞಾನೋ. 17:17.
-