-
‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನುಕಾವಲಿನಬುರುಜು—2010 | ಅಕ್ಟೋಬರ್ 1
-
-
ತನ್ನ ತಪ್ಪನ್ನು ಸಮರ್ಥಿಸಿಕೊಳ್ಳದಂತೆ ದಾವೀದನನ್ನು ತಡೆಯಲು ನಾತಾನನು ಒಂದು ಕಥೆಯನ್ನು ಹೇಳಿದನು. ಅದು ಹಿಂದೆ ಒಬ್ಬ ಕುರುಬನಾಗಿದ್ದ ದಾವೀದನಿಗೆ ತನ್ನ ತಪ್ಪಿನ ಅರಿವನ್ನು ಮೂಡಿಸಿತು. ಆ ಕಥೆ ಒಬ್ಬ ಬಡವ ಹಾಗೂ ಒಬ್ಬ ಶ್ರೀಮಂತನದ್ದು. ಆ ಶ್ರೀಮಂತನಿಗೆ “ಬಹಳ ಕುರಿದನಗಳಿದ್ದವು” ಆದರೆ ಬಡವನಿಗೆ “ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ.” ಒಮ್ಮೆ ಶ್ರೀಮಂತನ ಮನೆಗೆ ಅತಿಥಿಯೊಬ್ಬ ಬಂದ. ಅವನಿಗಾಗಿ ಔತಣ ಮಾಡಬೇಕೆಂದು ಶ್ರೀಮಂತ ಅಂದುಕೊಂಡ. ಅದಕ್ಕಾಗಿ ತನ್ನ ಸ್ವಂತ ಕುರಿಯೊಂದನ್ನು ಕೊಯ್ಯುವ ಬದಲು ಬಡವನ ಬಳಿಯಿದ್ದ ಆ ಏಕೈಕ ಕುರಿಮರಿಯನ್ನು ಕೊಯ್ದ. ಇದು ಸತ್ಯ ಕಥೆಯೆಂದು ನೆನಸಿದ ದಾವೀದನು “ಆ ಮನುಷ್ಯನು ಸಾಯಲೇ ಬೇಕು” ಎಂದು ಸಿಟ್ಟಿನಿಂದ ಕಿರುಚಿದ. ಆ ಶ್ರೀಮಂತ “ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ” ಅವನಿಗೆ ಶಿಕ್ಷೆ ಆಗಲೇ ಬೇಕೆಂದನು.a—ವಚನಗಳು 2-6.
-
-
‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನುಕಾವಲಿನಬುರುಜು—2010 | ಅಕ್ಟೋಬರ್ 1
-
-
a ಆ ಕಾಲದಲ್ಲಿ ಅತಿಥಿಗಾಗಿ ಕುರಿಮರಿಯನ್ನು ಕಡಿದು ಔತಣ ಮಾಡುವುದು ಅತಿಥಿಸತ್ಕಾರದ ಭಾಗವಾಗಿತ್ತು. ಆದರೆ ಕುರಿಮರಿಯನ್ನು ಕದಿಯುವುದು ಅಪರಾಧವಾಗಿತ್ತು. ಇದಕ್ಕೆ ಪ್ರತಿಯಾಗಿ 4 ಪಟ್ಟು ಹಿಂದಿರುಗಿಸಬೇಕಿತ್ತು. (ವಿಮೋಚನಕಾಂಡ 22:1) ಆ ಶ್ರೀಮಂತನು ಕುರಿಮರಿಯನ್ನು ತೆಗೆದುಕೊಂಡದ್ದು ದಾವೀದನ ದೃಷ್ಟಿಯಲ್ಲಿ ನಿರ್ದಯೆಯ ಕೃತ್ಯವಾಗಿತ್ತು. ಏಕೆಂದರೆ ಆ ಕುರಿಮರಿ ಮುಂದೊಂದು ದಿನ ಬಡವನ ಕುಟುಂಬಕ್ಕೆ ಹಾಲು, ಉಣ್ಣೆಯನ್ನು ಒದಗಿಸಲಿತ್ತು ಮತ್ತು ಬಹುಶಃ ಅದರ ಮೂಲಕ ಒಂದು ಕುರಿಹಿಂಡೇ ಉಂಟಾಗಸಾಧ್ಯವಿತ್ತು. ಇಂಥ ಪ್ರಾಣಿಯನ್ನು ಶ್ರೀಮಂತನು ಆ ಬಡವನಿಂದ ಕಸಿದುಕೊಂಡಿದ್ದನು.
-