ಯೋಬನು ತಾಳಿಕೊಂಡನು—ಅದು ನಮಗೂ ಸಾಧ್ಯ!
“ಇಗೋ! ತಾಳಿಕೊಂಡಿರುವವರನ್ನು ಧನ್ಯರೆಂದು ನಾವು ಹೇಳುತ್ತೇವೆ.”—ಯಾಕೋಬ 5:11, (NW).
1. ತಮ್ಮ ಪರೀಕ್ಷೆಗಳ ಕುರಿತು ವೃದ್ಧ ಕ್ರೈಸ್ತರೊಬ್ಬರು ಏನನ್ನು ಹೇಳಿದರು?
‘ಪಿಶಾಚನು ನನ್ನ ಬೆನ್ನುಹತ್ತಿದ್ದಾನೆ! ನನಗೆ ಯೋಬನಂತೆಯೇ ಅನಿಸುತ್ತದೆ!’ ಇಂತಹ ಮಾತುಗಳಿಂದ ಏ.ಏಚ್. ಮ್ಯಾಕ್ಮಿಲನ್ ತಮ್ಮ ಅನಿಸಿಕೆಗಳನ್ನು, ಯೆಹೋವನ ಸಾಕ್ಷಿಗಳ ಮುಖ್ಯಕಾಯಾರ್ಲಯದಲ್ಲಿ ಒಬ್ಬ ನಿಕಟ ಮಿತ್ರನಿಗೆ ವ್ಯಕ್ತಪಡಿಸಿದರು. 1966 ಆಗಸ್ಟ್ 26 ರಂದು, 89ರ ಪ್ರಾಯದಲ್ಲಿ ಸಹೋದರ ಮ್ಯಾಕ್ಮಿಲನ್ ತಮ್ಮ ಐಹಿಕ ಜೀವನವನ್ನು ಮುಗಿಸಿದರು. ತನ್ನ ಹಾಗೆ ಇರುವ ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಸೇವೆಗಾಗಿರುವ ಪ್ರಶಸ್ತಿಯು ‘ಅವರೊಡನೆ ಹೋಗುವುದು’ ಎಂದು ಅವರಿಗೆ ಗೊತ್ತಿತ್ತು. (ಪ್ರಕಟನೆ 14:13) ನಿಶ್ಚಯವಾಗಿಯೂ, ಸ್ವರ್ಗದಲ್ಲಿ ಅಮರ ಜೀವಿತಕ್ಕೆ ಪುನರುತ್ಥಾನ ಹೊಂದುವ ಮೂಲಕ ಅಭಿಷಿಕ್ತ ಕ್ರೈಸ್ತರು ಯೆಹೋವನ ಸೇವೆಯಲ್ಲಿ ತಡೆಯಿಲ್ಲದೆ ಮುಂದುವರಿಯುವರು. ಸಹೋದರ ಮ್ಯಾಕ್ಮಿಲನ್ ಆ ಬಹುಮಾನವನ್ನು ಪಡೆದುದಕ್ಕಾಗಿ ಅವರ ಮಿತ್ರರು ಹರ್ಷಿಸಿದರು. ಹಾಗಿದ್ದರೂ, ಭೂಮಿಯ ಮೇಲೆ ಅವರ ಇಳಿವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳನ್ನು ಸೇರಿಸಿ ಅವರು ಹಲವಾರು ಪರೀಕೆಗ್ಷಳಿಂದ ಸುತ್ತುವರಿದಿದ್ದರು, ಅದು ದೇವರ ಕಡೆಗೆ ಅವರ ಸಮಗ್ರತೆಯನ್ನು ಮುರಿಯಲಿಕ್ಕಾಗಿದ್ದ ಸೈತಾನನ ಪ್ರಯತ್ನಗಳನ್ನು ಅವರು ಅತಿ ಸೂಕ್ಷ್ಮವಾಗಿ ಅರಿಯುವಂತೆ ಮಾಡಿತು.
2, 3. ಯೋಬನು ಯಾರಾಗಿದ್ದನು?
2 ತಮಗೆ ಯೋಬನಂತೆಯೇ ಅನಿಸುತ್ತದೆ ಎಂದು ಸಹೋದರ ಮ್ಯಾಕ್ಮಿಲನ್ ಹೇಳಿದಾಗ, ನಂಬಿಕೆಯ ಮಹಾ ಪರೀಕ್ಷೆಗಳನ್ನು ತಾಳಿಕೊಂಡಿದ್ದ ಒಬ್ಬ ಮನುಷ್ಯನ ಕುರಿತು ಅವರು ಸೂಚಿಸಿ ಹೇಳುತ್ತಿದ್ದರು. ಯೋಬನು ಬಹುಶಃ ಉತ್ತರ ಅರೇಬಿಯದ “ಊಚ್ ದೇಶದಲ್ಲಿ” ಜೀವಿಸಿದನು. ನೋಹನ ಮಗನಾದ ಶೇಮನ ಸಂತತಿಯವನಾದ ಅವನು, ಯೆಹೋವನ ಆರಾಧಕನಾಗಿದ್ದನು. ಯೋಬನ ಪರೀಕ್ಷೆಗಳು ಸ್ಪಷ್ಟವಾಗಿಗಿ ಯೋಸೇಫನ ಮರಣ ಮತ್ತು ಮೋಶೆಯು ತನ್ನನ್ನು ಪ್ರಾಮಾಣಿಕನಾಗಿ ಸಿದ್ಧಪಡಿಸಿದ ಸಮಯದ ನಡುವೆ ಯಾವಾಗಲೋ ಸಂಭವಿಸಿದವು. ಆ ಅವಧಿಯಲ್ಲಿ ಭೂಮಿಯ ಮೇಲೆ ದಿವ್ಯ ಭಕ್ತಿಯ ವಿಷಯದಲ್ಲಿ ಯಾರೂ ಯೋಬನಿಗೆ ಸಮಾನರಾಗಿರಲಿಲ್ಲ. ಯೆಹೋವನು ಯೋಬನನ್ನು ನಿರ್ದೋಷಿಯೂ, ಯಥಾರ್ಥಚಿತ್ತನೂ, ದೇವರಿಗೆ ಭಯಪಡುವ ಮನುಷ್ಯನೆಂದೂ ವೀಕ್ಷಿಸಿದನು.—ಯೋಬ 1:1, 8.
3 “ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳ” ವನೋಪಾದಿ ಯೋಬನಿಗೆ ಅನೇಕ ಸೇವಕರಿದ್ದರು, ಮತ್ತು ಅವನ ಜಾನುವಾರುಗಳ ಸಂಖ್ಯೆ 11,500 ಆಗಿತ್ತು. ಆದರೆ ಆತ್ಮಿಕ ಸ್ವತ್ತುಗಳು ಅವನಿಗೆ ಅತ್ಯಧಿಕ ಮಹತ್ವದ್ದಾಗಿದ್ದವು. ಇಂದಿನ ದೈವಿಕ ತಂದೆಗಳೋಪಾದಿ, ಯೋಬನು ತನ್ನ ಏಳು ಮಂದಿ ಗಂಡು ಮಕ್ಕಳಿಗೆ ಮತ್ತು ಮೂವರು ಹೆಣ್ಣು ಮಕ್ಕಳಿಗೆ ಯೆಹೋವನ ಕುರಿತು ಕಲಿಸಿದನೆಂಬುದು ಸಂಭವನೀಯ. ಅವನ ಮನೆಯಲ್ಲಿ ಅವರು ಇನ್ನು ಮುಂದೆ ಜೀವಿಸದೆ ಇದ್ದಾಗಲೂ ಸಹ, ಅವರಿಗಾಗಿ ಬಲಿಗಳನ್ನು—ಅವರು ಒಂದು ವೇಳೆ ಪಾಪ ಮಾಡಿದ್ದಲ್ಲಿ—ಅರ್ಪಿಸುವ ಮೂಲಕ ಕುಟುಂಬದ ಯಾಜಕನಂತೆ ಅವನು ಕಾರ್ಯವೆಸಗಿದನು.—ಯೋಬ 1:2-5.
4. (ಎ) ಹಿಂಸಿಸಲ್ಪಟ್ಟ ಕ್ರೈಸ್ತರು ಮನುಷ್ಯನಾದ ಯೋಬನನ್ನು ಏಕೆ ಪರಿಗಣಿಸಬೇಕು? (ಬಿ) ಯೋಬನ ಸಂಬಂಧದಲ್ಲಿ, ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?
4 ಸಹನೆಯ ತಾಳ್ಮೆಗಾಗಿ ತಮ್ಮನ್ನು ಬಲಪಡಿಸಿಕೊಳ್ಳುವ ಸಲುವಾಗಿ ಹಿಂಸಿಸಲ್ಪಟ್ಟ ಕ್ರೈಸ್ತರು ಪರಿಗಣಿಸಬೇಕಾದ ಒಬ್ಬ ವ್ಯಕ್ತಿಯು ಯೋಬನಾಗಿದ್ದಾನೆ. “ಇಗೋ!” ಎಂದು ಶಿಷ್ಯನಾದ ಯಾಕೋಬನು ಬರೆಯುತ್ತಾನೆ. “ತಾಳಿಕೊಂಡಿರುವವರನ್ನು ನಾವು ಧನ್ಯರೆಂದು ಹೇಳುತ್ತೇವೆ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಯೆಹೋವನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ, ಯೆಹೋವನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11, NW) ಯೋಬನಂತೆ, ಯೇಸುವಿನ ಅಭಿಷಿಕ್ತ ಹಿಂಬಾಲಕರಿಗೆ ಮತ್ತು ಪ್ರಚಲಿತ ದಿನದ “ಮಹಾ ಸಮೂಹ” ದವರಿಗೆ ನಂಬಿಕೆಯ ಪರೀಕೆಗ್ಷಳೊಂದಿಗೆ ನಿಭಾಯಿಸಲು ತಾಳ್ಮೆಯ ಅಗತ್ಯವಿದೆ. (ಪ್ರಕಟನೆ 7:1-9) ಹಾಗಾದರೆ, ಯಾವ ಪರೀಕ್ಷೆಗಳನ್ನು ಯೋಬನು ತಾಳಿಕೊಂಡನು? ಅವು ಏಕೆ ಸಂಭವಿಸಿದವು? ಮತ್ತು ಅವನ ಅನುಭವಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
ಒಂದು ಜಲ್ವಂತ ವಿವಾದಾಂಶ
5. ಯೋಬನಿಗೆ ತಿಳಿಯದೆಯೇ, ಯಾವ ವಿಷಯವು ಪರಲೋಕದಲ್ಲಿ ಸಂಭವಿಸುತ್ತಿತ್ತು?
5 ಯೋಬನಿಗೆ ತಿಳಿಯದೆಯೇ, ಪರಲೋಕದಲ್ಲಿ ಒಂದು ಮಹಾ ವಿವಾದಾಂಶವು ಬೇಗನೆ ಎಬ್ಬಿಸಲ್ಪಡಲಿಕ್ಕಿತ್ತು. ಒಂದು ದಿನ “ದೇವದೂತರು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವದಕ್ಕೆ” ಬಂದರು. (ಯೋಬ 1:6) ದೇವರ ಏಕಜಾತ ಪುತ್ರನಾದ ವಾಕ್ಯವೆಂಬವನು, ಅಲ್ಲಿ ಉಪಸ್ಥಿತನಾಗಿದ್ದನು. (ಯೋಹಾನ 1:1-3) ಹಾಗೆಯೇ ನೀತಿವಂತ ದೇವದೂತರು ಮತ್ತು ‘ದೇವಪುತ್ರರಾಗಿದ್ದ’ ಅವಿಧೇಯ ದೇವದೂತರು ಅಲಿದ್ದರು. (ಆದಿಕಾಂಡ 6:1-3) ಸೈತಾನನೂ ಅಲ್ಲಿದ್ದನು, ಯಾಕೆಂದರೆ ಸ್ವರ್ಗದಿಂದ ಅವನ ದೊಬ್ಬುವಿಕೆಯು, 1914 ರಲ್ಲಿ ರಾಜ್ಯದ ಸ್ಥಾಪನೆಯ ತನಕ ಸಂಭವಿಸುವಂತಿರಲಿಲ್ಲ. (ಪ್ರಕಟನೆ 12:1-12) ಯೋಬನ ದಿನದಲ್ಲಿ, ಸೈತಾನನು ಒಂದು ಜಲ್ವಂತ ವಿವಾದಾಂಶವನ್ನು ಎಬ್ಬಿಸಲಿದ್ದನು. ತನ್ನ ಎಲ್ಲ ಸೃಷ್ಟಿಜೀವಿಗಳ ಮೇಲೆ ಯೆಹೋವನ ಸಾರ್ವಭೌಮತೆಯ ಯುಕ್ತತೆಯ ಕುರಿತು ಅವನು ಸಂಶಯವನ್ನು ವ್ಯಕ್ತಪಡಿಸಲಿದ್ದನು.
6. ಏನನ್ನು ಮಾಡಲು ಸೈತಾನನು ಪ್ರಯತ್ನಿಸುತ್ತಿದ್ದನು, ಮತ್ತು ಅವನು ಯೆಹೋವನ ಮೇಲೆ ಹೇಗೆ ಅಪವಾದ ಹೊರಿಸಿದನು?
6 “ಎಲ್ಲಿಂದ ಬಂದಿ” ಎಂದು ಯೆಹೋವನು ಕೇಳಿದನು. ಸೈತಾನನು ಉತ್ತರಿಸಿದ್ದು: “ಭೂಲೋಕದಲ್ಲಿ ಸಂಚರಿಸುತ್ತಾ ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು.” (ಯೋಬ 1:7) ನುಂಗಲಿಕ್ಕಾಗಿ ಅವನು ಯಾರನ್ನೊ ಹುಡುಕುತ್ತಿದ್ದನು. (1 ಪೇತ್ರ 5:8, 9) ಯೆಹೋವನನ್ನು ಸೇವಿಸುತ್ತಿರುವ ವ್ಯಕ್ತಿಗಳ ಸಮಗ್ರತೆಯನ್ನು ಮುರಿಯುವ ಮೂಲಕ, ಪ್ರೀತಿಯಿಂದ ಪ್ರಚೋದಿಸಲ್ಪಟ್ಟವರಾಗಿ ಯಾರೂ ದೇವರಿಗೆ ಪೂರ್ಣವಾಗಿ ವಿಧೇಯರಾಗಲಾರರು ಎಂಬುದನ್ನು ಸಿದ್ಧಪಡಿಸಲು ಸೈತಾನನು ಪ್ರಯತ್ನಿಸುವನು. ವಿವಾದಾಂಶವನ್ನು ಸಂಬೋಧಿಸುತ್ತಾ, ಯೆಹೋವನು ಸೈತಾನನನ್ನು ಕೇಳಿದ್ದು: “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” (ಯೋಬ 1:8) ಅವನ ಅಸಂಪೂರ್ಣತೆಗಳನ್ನು ಪರಿಗಣನೆಗೆ ತೆಗೆದುಕೊಂಡ ದೈವಿಕ ಮಟ್ಟಗಳನ್ನು ಯೋಬನು ಅನುಸರಿಸಿದನು. (ಕೀರ್ತನೆ 103:10-14) ಆದರೆ ಸೈತಾನನು ಎದುರುತ್ತರಿಸಿದ್ದು: “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.” (ಯೋಬ 1:9, 10) ಯೆಹೋವನು ಏನಾಗಿದಾನ್ದೊ ಅದಕ್ಕಾಗಿ ಯಾರೂ ಆತನನ್ನು ಪ್ರೀತಿಸುವುದಿಲ್ಲ ಮತ್ತು ಆರಾಧಿಸುವುದಿಲ್ಲ ಆದರೆ ಆತನನ್ನು ಸೇವಿಸುವಂತೆ ದೇವರು ತನ್ನ ಸೃಷ್ಟಿಜೀವಿಗಳಿಗೆ ಲಂಚಕೊಡುತ್ತಾನೆಂದು ಸೂಚಿಸುವ ಮೂಲಕ, ಪಿಶಾಚನು ಯೆಹೋವನ ಮೇಲೆ ಅಪವಾದ ಹೊರಿಸಿದನು. ಯೋಬನು ದೇವರನ್ನು ಪ್ರೀತಿಯಿಂದಲ್ಲ, ಸ್ವಾರ್ಥ ಲಾಭಕ್ಕಾಗಿ ಸೇವಿಸಿದನೆಂದು ಸೈತಾನನು ಆಪಾದಿಸಿದನು.
ಸೈತಾನನು ಆಕ್ರಮಣ ಮಾಡುತ್ತಾನೆ!
7. ಯಾವ ವಿಧದಲ್ಲಿ ಪಿಶಾಚನು ದೇವರಿಗೆ ಪಂಥಾಹ್ವಾನ ಹಾಕಿದನು, ಮತ್ತು ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
7 “ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು,” ಎಂದು ಸೈತಾನನು ಹೇಳಿದನು. ಇಂತಹ ಅವಮಾನಿಸುವ ಒಂದು ಪಂಥಾಹ್ವಾನಕ್ಕೆ ದೇವರು ಹೇಗೆ ಪ್ರತಿಕ್ರಿಯಿಸುವನು? “ನೋಡು” ಎಂದು ಯೆಹೋವನು ಹೇಳಿದನು. “ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ.” ಯೋಬನು ಪಡೆದಿದ್ದ ಎಲ್ಲವೂ ಆಶೀರ್ವದಿಸಲ್ಪಟ್ಟಿತ್ತೆಂದು, ವೃದ್ಧಿಮಾಡಲ್ಪಟ್ಟಿತ್ತೆಂದು, ಮತ್ತು ರಕ್ಷಿಸಲ್ಪಟ್ಟಿತ್ತೆಂದು ಪಿಶಾಚನು ಹೇಳಿದ್ದನು. ಯೋಬನು ಕಷ್ಟಾನುಭವಿಸುವಂತೆ ದೇವರು ಅನುಮತಿಸುವನು, ಆದರೆ ಅವನ ದೇಹವನ್ನು ಮುಟ್ಟುವಂತಿರಲಿಲ್ಲ. ಕೆಟ್ಟದ್ದನ್ನು ಮಾಡಲು ನಿರ್ಧರಿಸಿದ ಸೈತಾನನು, ಸಭೆಯಿಂದ ಹೊರಟುಹೋದನು.—ಯೋಬ 1:11, 12.
8. (ಎ) ಯಾವ ಪ್ರಾಪಂಚಿಕ ನಷ್ಟಗಳನ್ನು ಯೋಬನು ಅನುಭವಿಸಿದನು? (ಬಿ) “ದೇವರ ಬೆಂಕಿ”ಯ ಕುರಿತಾದ ಸತ್ಯಾಂಶವು ಏನಾಗಿತ್ತು?
8 ಬೇಗನೆ, ಸೈತಾನನ ಆಕ್ರಮಣವು ಆರಂಭಗೊಂಡಿತು. ಯೋಬನ ಸೇವಕರಲ್ಲಿ ಒಬ್ಬನು, ಅವನಿಗೆ ಈ ಕೆಟ್ಟ ಸುದ್ದಿಯನ್ನು ತಿಳಿಸಿದನು: “ನಿನ್ನ ಎತ್ತುಗಳು ಉಳುತ್ತಾ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇರುವಲ್ಲಿ ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು; ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು.” (ಯೋಬ 1:13-15) ಯೋಬನ ಆಸ್ತಿಯ ಸುತ್ತಲೂ ಇದ್ದ ಸಂರಕ್ಷಣೆಯು ತೆಗೆಯಲ್ಪಟ್ಟಿತ್ತು. ಬಹುಮಟ್ಟಿಗೆ ಒಡನೆಯೇ, ನೇರವಾದ ಪೈಶಾಚಿಕ ಶಕ್ತಿಯು ಅನ್ವಯಿಸಲ್ಪಟ್ಟಿತು, ಯಾಕೆಂದರೆ ಇನ್ನೊಬ್ಬ ಸೇವಕನು ವರದಿಸಿದ್ದು: “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ.” (ಯೋಬ 1:16) ತನ್ನ ಸ್ವಂತ ಸೇವಕನ ಮೇಲೆಯೂ ಇಂತಹ ವಿಪತ್ತಿಗಾಗಿ ದೇವರು ಜವಾಬ್ದಾರನಾಗಿದ್ದನೆಂದು ಕಾಣುವಂತೆ ಮಾಡುವುದು ಎಷ್ಟು ಪೈಶಾಚಿಕವಾಗಿತ್ತು! ಸಿಡಿಲು ಪರಲೋಕದಿಂದ ಬರುವುದರಿಂದ, ಯೆಹೋವನನ್ನು ಸುಲಭವಾಗಿ ದೂಷಿಸಬಹುದಿತ್ತು, ಆದರೆ ಬೆಂಕಿಯು ನಿಜವಾಗಿಯೂ ಪೈಶಾಚಿಕ ಮೂಲದಿಂದ ಬಂದಿತ್ತು.
9. ದೇವರೊಂದಿಗೆ ಯೋಬನಿಗಿದ್ದ ಸಂಬಂಧವನ್ನು ಆರ್ಥಿಕ ಧ್ವಂಸವು ಹೇಗೆ ಪ್ರಭಾವಿಸಿತು?
9 ಆಕ್ರಮಣವನ್ನು ಸೈತಾನನು ಮುಂದುವರಿಸಿದಂತೆ, ಕಸೀಯ್ದರು ಒಂಟೆಗಳನ್ನು ಹೊಡೆದುಕೊಂಡು ಹೋದರೆಂದು ಮತ್ತು ಇತರ ಎಲ್ಲ ಆಳುಗಳನ್ನು ಕೊಂದರೆಂದು ಮತ್ತೊಬ್ಬ ಸೇವಕನು ವರದಿಸಿದನು. (ಯೋಬ 1:17) ಹೀಗೆ ಯೋಬನು ಆರ್ಥಿಕ ಧ್ವಂಸವನ್ನು ಅನುಭವಿಸಿದರೂ, ದೇವರೊಂದಿಗಿದ್ದ ಅವನ ಸಂಬಂಧವನ್ನು ಇದು ನಾಶಗೊಳಿಸಲಿಲ್ಲ. ಯೆಹೋವನ ಕಡೆಗಿರುವ ನಿಮ್ಮ ಸಮಗ್ರತೆಯನ್ನು ಮುರಿದುಕೊಳ್ಳದೆಯೇ ನೀವು ಬಹಳಷ್ಟು ಪ್ರಾಪಂಚಿಕ ನಷ್ಟವನ್ನು ತಾಳಿಕೊಳ್ಳಬಲ್ಲಿರೊ?
ಹೆಚ್ಚಿನ ದುರಂತವು ತಾಕುತ್ತದೆ
10, 11. (ಎ) ಯೋಬನ ಹತ್ತು ಮಕ್ಕಳಿಗೆ ಏನು ಸಂಭವಿಸಿತು? (ಬಿ) ಯೋಬನ ಮಕ್ಕಳ ದುಃಖಕರ ಮರಣದ ಅನಂತರ, ಅವನು ಯೆಹೋವನನ್ನು ಹೇಗೆ ವೀಕ್ಷಿಸಿದನು?
10 ಯೋಬನ ಮೇಲೆ ಪಿಶಾಚನ ಆಕ್ರಮಣವು ಇನ್ನೂ ಮುಗಿದಿರಲಿಲ್ಲ. ಇನ್ನೂ ಮತ್ತೊಬ್ಬ ಸೇವಕನು ವರದಿಸಿದ್ದು: “ನಿನ್ನ ಕುಮಾರಕುಮಾರ್ತೆಯರು ತಮ್ಮ ಅಣ್ಣನ ಮನೆಯಲ್ಲಿ ಉಂಡು ಕುಡಿಯುತ್ತಿರುವಾಗ ಇಗೋ ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು; ಮನೆಯು ಯೌವನಸ್ಥರ ಮೇಲೆ ಬಿದ್ದಿತು; ಸತ್ತು ಹೋದರು; ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ.” (ಯೋಬ 1:18, 19) ಬಿರುಗಾಳಿಯಿಂದ ಉಂಟಾದ ಧ್ವಂಸವು ‘ದೇವರ ಕ್ರಿಯೆ’ ಯಾಗಿತ್ತೆಂದು ತಪ್ಪಾಗಿ ತಿಳಿದುಕೊಂಡವರು ಹೇಳಬಹುದು. ಹಾಗಿದ್ದರೂ, ಪೈಶಾಚಿಕ ಶಕ್ತಿಯು ಯೋಬನನ್ನು ವಿಶೇಷವಾಗಿ ಕೋಮಲವಾಗಿರುವ ಒಂದು ಸ್ಥಳದಲ್ಲಿ ಸ್ಪರ್ಶಿಸಿತ್ತು.
11 ದುಃಖದಿಂದ ತುಂಬಿದವನಾಗಿ, ಯೋಬನು ‘ತನ್ನ ತೋಳಿಲ್ಲದ ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು, ನೆಲದಲ್ಲಿ ಅಡಬ್ಡಿದ್ದು ನಮಸ್ಕರಿಸಿದನು.’ ಆದರೂ, ಅವನ ಮಾತುಗಳನ್ನು ಆಲಿಸಿರಿ. “ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ.” ದಾಖಲೆಯು ಕೂಡಿಸುವುದು: “ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.” (ಯೋಬ 1:20-22) ಸೈತಾನನು ಮತ್ತೊಮ್ಮೆ ಸೋಲಿಸಲ್ಪಟ್ಟನು. ದೇವರ ಸೇವಕರೋಪಾದಿ ನಾವು ವಿಯೋಗ ಮತ್ತು ದುಃಖವನ್ನು ಅನುಭವಿಸಬೇಕಾದರೆ ಆಗೇನು? ಯೋಬನು ಮಾಡಿದಂತೆಯೇ, ಸಮಗ್ರತೆಯನ್ನು ಕಾಪಾಡಿಕೊಳ್ಳುವವರೋಪಾದಿ ತಾಳಿಕೊಳ್ಳಲು, ಯೆಹೋವನ ಕಡೆಗಿರುವ ನಿಸ್ವಾರ್ಥ ಭಕ್ತಿ ಮತ್ತು ಆತನಲ್ಲಿ ಭರವಸೆಯು ನಮ್ಮನ್ನು ಶಕ್ತರನ್ನಾಗಿ ಮಾಡಬಲ್ಲದು. ಯೋಬನ ತಾಳ್ಮೆಯ ಕುರಿತಾದ ಈ ದಾಖಲೆಯಿಂದ ಅಭಿಷಿಕ್ತರು ಮತ್ತು ಭೂನಿರೀಕ್ಷೆಯಿರುವ ಅವರ ಸಂಗಾತಿಗಳು ಖಂಡಿತವಾಗಿಯೂ ಸಾಂತ್ವನವನ್ನು ಮತ್ತು ಬಲವನ್ನು ಪಡೆಯಬಲ್ಲರು.
ವಿವಾದಾಂಶವು ಹೆಚ್ಚು ತೀಕ್ಷೈವಾಗುತ್ತದೆ
12, 13. ಪರಲೋಕದಲ್ಲಿ ನಡೆದ ಇನ್ನೊಂದು ಸಭೆಯಲ್ಲಿ, ಸೈತಾನನು ಏನನ್ನು ವಿನಂತಿಸಿದನು, ಮತ್ತು ದೇವರು ಹೇಗೆ ಪ್ರತಿಕ್ರಿಯಿಸಿದನು?
12 ಯೆಹೋವನು ಸ್ವರ್ಗೀಯ ದರ್ಬಾರಿನಲ್ಲಿ ಬೇಗನೆ ಇನ್ನೊಂದು ಸಭೆಕರೆದನು. ಯೋಬನು ದೇವರಿಂದ ಪೀಡಿಸಲ್ಪಟ್ಟವನಂತೆ ತೋರುವ ಮಕ್ಕಳಿಲ್ಲದ, ಬಡ ಮನುಷ್ಯನಾಗಿ ಪರಿಣಮಿಸಿದ್ದನು, ಆದರೆ ಅವನ ಸಮಗ್ರತೆಯು ಅಖಂಡವಾಗಿತ್ತು. ನಿಶ್ಚಯವಾಗಿ, ದೇವರ ಮತ್ತು ಯೋಬನ ವಿರುದ್ಧವಿದ್ದ ಅವನ ಆಪಾದನೆಗಳು ಸುಳ್ಳಾಗಿದ್ದವೆಂದು ಸೈತಾನನು ಒಪ್ಪುತ್ತಿರಲಿಲ್ಲ. ವಿವಾದಾಂಶಕ್ಕೆ ಪರಿಹಾರವನ್ನು ತರುವುದಕ್ಕಾಗಿ ಯೆಹೋವನು ಪಿಶಾಚನನ್ನು ಯುಕ್ತಿಯಿಂದ ನಡೆಸಿದಾಗ, ‘ದೇವಪುತ್ರರು’ ಈಗ ವಾದ ಮತ್ತು ಪ್ರತಿವಾದವನ್ನು ಕೇಳಲಿದ್ದರು.
13 ಲೆಕ್ಕ ಒಪ್ಪಿಸಲು ಸೈತಾನನನ್ನು ಕರೆಯುತ್ತಾ, ಯೆಹೋವನು ಕೇಳಿದ್ದು: “ಎಲ್ಲಿಂದ ಬಂದಿ?” ಉತ್ತರವು ಏನಾಗಿತ್ತು? “ಭೂಲೋಕದಲ್ಲಿ ಸಂಚರಿಸುತ್ತಾ ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು.” ತನ್ನ ಸಮಗ್ರತೆಯನ್ನು ಇನ್ನೂ ದೃಢವಾಗಿ ಕಾಪಾಡಿಕೊಂಡಿದ್ದ ನಿರ್ದೋಷಿಯೂ, ಯಥಾರ್ಥಚಿತ್ತನೂ, ದೇವ ಭಯವಿರುವ ಸೇವಕನೂ ಆಗಿದ್ದ ಯೋಬನ ಕಡೆಗೆ ಯೆಹೋವನು ಪುನಃ ಗಮನವನ್ನು ಸೆಳೆಯುತ್ತಾನೆ. ಪಿಶಾಚನು ಉತ್ತರಿಸಿದ್ದು: “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” ಆದುದರಿಂದ ದೇವರು ಹೇಳಿದ್ದು: “ಅವನು ನಿನ್ನ ಕೈಯಲ್ಲಿದ್ದಾನೆ, ನೋಡು; ಅವನ ಪ್ರಾಣವನ್ನಾದರೋ ಉಳಿಸಲೇ ಬೇಕು.” (ಯೋಬ 2:2-6) ಎಲ್ಲಾ ರಕ್ಷಣಾತ್ಮಕ ತಡೆಗಳನ್ನು ಯೆಹೋವನು ಇನ್ನೂ ತೆಗೆದಿರಲಿಲ್ಲವೆಂದು ಸೂಕ್ಷ್ಮವಾಗಿ ಸೂಚಿಸುತ್ತಾ, ಯೋಬನ ಅಸ್ತಿಮಾಂಸಗಳಿಗೆ ಹಾನಿಯನ್ನುಂಟುಮಾಡುವಂತೆ ಸೈತಾನನು ಹೇಳಿದನು. ಯೋಬನನ್ನು ಕೊಲ್ಲುವಂತೆ ಪಿಶಾಚನು ಅನುಮತಿಸಲ್ಪಡುತ್ತಿರಲಿಲ್ಲವಾದರೂ; ಶಾರೀರಿಕ ಕಾಯಿಲೆಯು ಅವನಿಗೆ ನೋವನ್ನುಂಟುಮಾಡುವುದೆಂದು ಮತ್ತು ಗುಪ್ತವಾದ ಪಾಪಗಳಿಗಾಗಿ ಅವನು ದೇವರಿಂದ ದಂಡನೆಯನ್ನು ಅನುಭವಿಸುತ್ತಿದ್ದಾನೆಂದು ತೋರುವಂತೆ ಅದು ಮಾಡುವುದೆಂದು ಸೈತಾನನಿಗೆ ಗೊತ್ತಿತ್ತು.
14. ಯಾವುದರಿಂದ ಸೈತಾನನು ಯೋಬನನ್ನು ತಾಕಿದನು, ಮತ್ತು ಕಷ್ಟಾನುಭವಿಸುವವನಿಗೆ ಪರಿಹಾರವನ್ನು ಯಾವ ಮಾನವನೂ ಕೊಡಲು ಸಾಧ್ಯವಿರಲಿಲ್ಲ ಏಕೆ?
14 ಆ ಸಭೆಯಿಂದ ಹೊರಬಂದ ಸೈತಾನನು ಪೈಶಾಚಿಕ ಹರ್ಷದಿಂದ ಮುಂದೆ ಸಾಗಿದನು. ಅವನು ಯೋಬನನ್ನು “ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟ ಕುರು” ಗಳಿಂದ ತಾಕಿದನು. ಬೂದಿಯಲ್ಲಿ ಕೂತುಕೊಂಡು ಒಂದು ಬೋಕಿಯಿಂದ ತನ್ನನ್ನು ಕೆರೆದುಕೊಳ್ಳುತ್ತಿದ್ದಾಗ, ಎಂತಹ ಸಂಕಟವನ್ನು ಯೋಬನು ತಾಳಿಕೊಂಡನು! (ಯೋಬ 2:7, 8) ಭಯಂಕರವಾಗಿ ನೋಯುವ ಈ ಅಸಹ್ಯಕರವಾದ, ಮತ್ತು ಅಪಮಾನಗೊಳಿಸುವ ವೇದನೆಯಿಂದ ಯಾವ ಮಾನವ ವೈದ್ಯನೂ ಅವನಿಗೆ ಉಪಶಮನವನ್ನು ಕೊಡಲು ಸಾಧ್ಯವಿರಲಿಲ್ಲ, ಯಾಕೆಂದರೆ ಅದು ಸೈತಾನನ ಶಕಿಯ್ತಿಂದ ಉಂಟಾಗಿತ್ತು. ಯೆಹೋವನು ಮಾತ್ರ ಯೋಬನನ್ನು ಗುಣಪಡಿಸಬಹುದಿತ್ತು. ನೀವು ದೇವರ ಒಬ್ಬ ಅಸ್ವಸ್ಥ ಸೇವಕರಾಗಿರುವುದಾದರೆ, ತಾಳಿಕೊಳ್ಳುವಂತೆ ದೇವರು ನಿಮಗೆ ಸಹಾಯ ಮಾಡಬಲ್ಲನೆಂದು ಮತ್ತು ರೋಗರಹಿತವಾದ ಒಂದು ಹೊಸ ಲೋಕದಲ್ಲಿ ನಿಮಗೆ ಜೀವನವನ್ನು ಕೊಡಬಲ್ಲನೆಂಬುದನ್ನು ಎಂದಿಗೂ ಮರೆಯಬೇಡಿ.—ಕೀರ್ತನೆ 41:1-3; ಯೆಶಾಯ 33:24.
15. ಏನನ್ನು ಮಾಡುವಂತೆ ಯೋಬನ ಹೆಂಡತಿಯು ಅವನನ್ನು ಪ್ರೋತ್ಸಾಹಿಸಿದಳು, ಮತ್ತು ಅವನ ಪ್ರತಿಕ್ರಿಯೆಯು ಏನಾಗಿತ್ತು?
15 ಕೊನೆಯದಾಗಿ, ಯೋಬನ ಹೆಂಡತಿಯು ಹೇಳಿದ್ದು: “ನಿನ್ನ ಯಥಾರ್ಥತ್ವವನ್ನು (ಸಮಗ್ರತೆ, NW) ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ.” “ಸಮಗ್ರತೆ”ಯು ದೋಷರಹಿತ ಭಕ್ತಿಯನ್ನು ಸೂಚಿಸುತ್ತದೆ, ಮತ್ತು ದೇವರನ್ನು ದೂಷಿಸುವಂತೆ ಯೋಬನನ್ನು ಪ್ರೇರೇಪಿಸಲು ಆಕೆ ವ್ಯಂಗ್ಯವಾಗಿ ಮಾತಾಡಿರಬಹುದು. ಆದರೆ ಅವನುತರ್ತಿಸಿದ್ದು: “ಮೂರ್ಖಳು ಮಾತಾಡಿದಂತೆ ನೀನು ಮಾತಾಡುತ್ತೀ; ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ.” ಸೈತಾನನ ಈ ಯುಕ್ತಿಯೂ ಸಹ ಕೆಲಸಮಾಡಲಿಲ್ಲ, ಯಾಕೆಂದರೆ ನಾವು ಹೀಗೆ ಹೇಳಲ್ಪಟ್ಟಿದ್ದೇವೆ: “ಈ ಸಂದರ್ಭದಲ್ಲಿಯೂ ಪಾಪದ ಮಾತೊಂದೂ ಅವನ ತುಟಿಗಳಿಂದ ಹೊರಡಲಿಲ್ಲ.” (ಯೋಬ 2:9, 10) ನಾವು ಅವಿವೇಕವಾಗಿ ನಮ್ಮನ್ನು ಕ್ರಿಸ್ತೀಯ ಬೆನ್ನಟ್ಟುವಿಕೆಗಳಲ್ಲಿ ಬಳಲಿಸಿಕೊಳ್ಳುತ್ತಿದ್ದೇವೆಂದು ವಿರೋಧಿಸುವ ಕುಟುಂಬ ಸದಸ್ಯರು ಹೇಳುತ್ತಾರೆಂದು ಮತ್ತು ಯೆಹೋವ ದೇವರನ್ನು ತ್ಯಜಿಸುವಂತೆ ನಮ್ಮನ್ನು ಒತ್ತಯಾ ಪಡಿಸುತ್ತಾರೆಂದು ಭಾವಿಸಿಕೊಳ್ಳಿ. ಯೋಬನಂತೆ, ನಾವು ಅಂತಹ ಒಂದು ಪರೀಕ್ಷೆಯನ್ನು ತಾಳಿಕೊಳ್ಳಬಲ್ಲೆವು ಯಾಕೆಂದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನ ಪವಿತ್ರ ನಾಮವನ್ನು ಸ್ತುತಿಸಲು ಬಯಸುತ್ತೇವೆ.—ಕೀರ್ತನೆ 145:1, 2; ಇಬ್ರಿಯ 13:15.
ದುರಹಂಕಾರಿಗಳಾದ ಮೂವರು ಮೋಸಗಾರರು
16. ಯೋಬನನ್ನು ಸಂತೈಸುವ ನೆಪದಿಂದ ಯಾರು ಬಂದರು, ಆದರೆ ಅವರನ್ನು ಸೈತಾನನು ಹೇಗೆ ಕೌಶಲದಿಂದ ನಡೆಸಿದನು?
16 ಸೈತಾನನ ಇನ್ನೊಂದು ಯೋಜನೆಯಾಗಿ ಪರಿಣಮಿಸಿದ ಯುಕ್ತಿಯಲ್ಲಿ, ಮೂವರು “ಸಂಗಾತಿಗಳು”, ಯೋಬನನ್ನು ಸಂತೈಸುವ ನೆಪದಿಂದ ಬಂದರು. ಒಬ್ಬನು ಎಲೀಫಜನು, ಬಹುಶಃ ಏಸಾವನ ಮುಖಾಂತರ ಅಬ್ರಹಾಮನ ಸಂತತಿಯವನು. ಮಾತಾಡುವುದರಲ್ಲಿ ಎಲೀಫಜನಿಗೆ ಆದ್ಯತೆ ಇದ್ದ ಕಾರಣ, ನಿಸ್ಸಂದೇಹವಾಗಿ ಅವನು ಹಿರಿಯವನಾಗಿದ್ದನು. ಶೂಹನ ಸಂತತಿಯವನಾದ ಬಿಲದ್ದನೂ ಅಲ್ಲಿದ್ದನು, ಶೂಹನು ಕೆಟೂರಳ ಮೂಲಕ ಹುಟ್ಟಿದ ಅಬ್ರಹಾಮನ ಗಂಡುಮಕ್ಕಳಲ್ಲಿ ಒಬ್ಬನು. ಮೂರನೆಯ ಮನುಷ್ಯನು ಚೋಫರನು. ಅವನ ಕುಟುಂಬ ಯಾ ನಿವಾಸಸ್ಥಾನ—ಬಹುಶಃ ವಾಯವ್ಯ ಅರೇಬಿಯದಲ್ಲಿ—ವನ್ನು ಗುರುತಿಸಲು ಅವನು ನಾಮಾಥ್ಯನೆಂದು ಕರೆಯಲ್ಪಟ್ಟನು. (ಯೋಬ 2:11; ಆದಿಕಾಂಡ 25:1, 2; 36:4, 11) ಇಂದು ದೇವರನ್ನು ಯೆಹೋವನ ಸಾಕ್ಷಿಗಳು ತ್ಯಜಿಸುವಂತೆ ಮಾಡಲು ಪ್ರಯತ್ನಿಸುವವರೋಪಾದಿ, ಈ ಮೂವರ ತಂಡವು, ಸುಳ್ಳು ಆರೋಪಗಳಿಗೆ ತಾನು ದೋಷಿಯೆಂದು ಯೋಬನು ಒಪ್ಪಿಕೊಳ್ಳುವಂತೆ ಮತ್ತು ಅವನ ಸಮಗ್ರತೆಯನ್ನು ಮುರಿಯುವಂತೆ ಮಾಡುವ ಒಂದು ಪ್ರಯತ್ನದಲ್ಲಿ ಸೈತಾನನ ಮೂಲಕ ಕೌಶಲದಿಂದ ನಿರ್ವಹಿಸಲ್ಪಟ್ಟಿತು.
17. ಭೇಟಿ ನೀಡುತ್ತಿರುವ ಮೂವರ ತಂಡವು ಏನನ್ನು ಮಾಡಿತು, ಹಾಗೂ ಏಳು ದಿನಗಳ ಮತ್ತು ಏಳು ರಾತ್ರಿಗಳ ವರೆಗೆ ಅವರು ಏನನ್ನು ಮಾಡಲಿಲ್ಲ?
17 ಆ ಮೂವರ ತಂಡವು ಗಟ್ಟಿಯಾಗಿ ಅತ್ತು, ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮತ್ತು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಳ್ಳುವ ಮೂಲಕ ಸಹಾನುಭೂತಿಯ ಪ್ರದರ್ಶನಾತ್ಮಕ ತೋರಿಕೆಯನ್ನು ವ್ಯಕ್ತಪಡಿಸಿತು. ಆದರೆ ತದನಂತರ ಅವರು ಯೋಬನೊಂದಿಗೆ ಏಳು ದಿನಗಳು ಮತ್ತು ಏಳು ರಾತ್ರಿಗಳು ಸಾಂತ್ವನದ ಒಂದು ಮಾತನ್ನೂ ಆಡದೆ ಕುಳಿತರು! (ಯೋಬನು 2:12, 13; ಲೂಕ 18:10-14) ದುರಹಂಕಾರಿಗಳಾದ ಈ ಮೂವರು ಮೋಸಗಾರರು ಆತ್ಮಿಕತೆಯನ್ನು ಎಷ್ಟರ ಮಟ್ಟಿಗೆ ಕಳೆದುಕೊಂಡಿದ್ದರೆಂದರೆ, ಯೆಹೋವನ ಮತ್ತು ಆತನ ವಾಗ್ದಾನಗಳ ಕುರಿತು ಹೇಳುವಂತಹ ಯಾವ ಸಾಂತ್ವನದಾಯಕ ವಿಷಯವೂ ಅವರಲ್ಲಿರಲಿಲ್ಲ. ಆದರೂ, ಅವರು ತಪ್ಪು ತೀರ್ಮಾನಗಳನ್ನು ಮಾಡುತ್ತಿದ್ದರು ಮತ್ತು ಬಹಿರಂಗ ದುಃಖದ ಬಾಹ್ಯೋಪಚಾರದೊಂದಿಗೆ ಅನುವರ್ತಿಸಿದ ಕೂಡಲೆ ಯೋಬನ ವಿರುದ್ಧ ಅವುಗಳನ್ನು ಉಪಯೋಗಿಸಲು ಸಿದ್ಧರಾಗುತ್ತಿದ್ದರು. ಸ್ವಾರಸ್ಯಕರವಾಗಿ, ಏಳು ದಿನದ ಮೌನವು ಅಂತ್ಯಗೊಳ್ಳುವ ಮೊದಲೇ, ಯುವ ಪುರುಷನಾದ ಎಲೀಹು ಅವರ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವಷ್ಟು ದೂರದಲ್ಲಿ ಕುಳಿತುಕೊಂಡನು.
18. ಮರಣದಲ್ಲಿ ಶಾಂತಿಯನ್ನು ಯೋಬನು ಏಕೆ ಹುಡುಕಿದನು?
18 ಯೋಬನು ಕೊನೆಯದಾಗಿ ಮೌನವನ್ನು ಮುರಿದನು. ಭೇಟಿ ನೀಡುತ್ತಿರುವ ಮೂವರ ತಂಡದಿಂದ ಯಾವುದೇ ಸಾಂತ್ವನವನ್ನು ಪಡೆಯದ ಅವನು, ತನ್ನ ಜನ್ಮದಿನವನ್ನು ಶಪಿಸಿದನು ಮತ್ತು ತನ್ನ ಸಂಕಟಕರ ಜೀವಿತವನ್ನು ಯಾಕೆ ವಿಸ್ತರಿಸಲಾಗುತ್ತಿತ್ತು ಎಂದು ಕುತೂಹಲಿಯಾದನು. ಸಾಯುವ ಮೊದಲು ಮತ್ತೆ ನಿಜವಾದ ಆನಂದವನ್ನು ತಾನು ಎಂದಾದರೂ ಹೊಂದಬಹುದೆಂದು ಊಹಿಸದೆಯೂ, ಅವನು ಮರಣದಲ್ಲಿ ಶಾಂತಿಯನ್ನು ಹುಡುಕಿದನು. ಯಾಕೆಂದರೆ ಅವನೀಗ ನಿರ್ಗತಿಕನೂ, ತೊರೆಯಲ್ಪಟ್ಟವನೂ, ಮತ್ತು ತೀವ್ರವಾಗಿ ಅಸ್ವಸ್ಥನೂ ಆಗಿದ್ದನು. ಆದರೆ ಮರಣದ ಮಟ್ಟಿಗೆ ಯೋಬನು ತೊಂದರೆಗೊಳಪಡುವಂತೆ ದೇವರು ಬಿಡುತ್ತಿರಲಿಲ್ಲ.—ಯೋಬ 3:1-26.
ಯೋಬನ ಆಪಾದಕರು ಆಕ್ರಮಿಸುತ್ತಾರೆ
19. ಯಾವ ವಿಷಯಗಳಲ್ಲಿ ಎಲೀಫಜನು ಯೋಬನನ್ನು ಅಸತ್ಯವಾಗಿ ದೂಷಿಸಿದನು?
19 ಯೋಬನ ಸಮಗ್ರತೆಯನ್ನು ಇನ್ನೂ ಪರೀಕ್ಷಿಸಿದ ಮೂರು ಸುತ್ತಿನ ವಾಗ್ವಾದದಲ್ಲಿ ಎಲೀಫಜನು ಮೊದಲು ಮಾತಾಡಿದನು. ತನ್ನ ಮೊದಲ ಭಾಷಣದಲ್ಲಿ, ಎಲೀಫಜನು ಕೇಳಿದ್ದು: “ಯಥಾರ್ಥರು ಅಳಿದುಹೋದದ್ದೆಲ್ಲಿ?” ದೇವರ ದಂಡನೆಯನ್ನು ಪಡೆಯಲು ಯೋಬನು ಏನಾದರೂ ಕೆಟ್ಟದ್ದನ್ನು ಮಾಡಿರಬೇಕೆಂದು ಅವನು ತೀರ್ಮಾನಿಸಿದನು. (ಯೋಬ, ಅಧ್ಯಾಯಗಳು 4, 5) ತನ್ನ ಎರಡನೆಯ ಭಾಷಣದಲ್ಲಿ, ಎಲೀಫಜನು ಯೋಬನ ವಿವೇಕದ ಗೇಲಿಮಾಡಿ, ಕೇಳಿದ್ದು: “ನಮಗೆ ತಿಳಿಯದಿರುವ ಯಾವದು ನಿನಗೆ ಗೊತ್ತುಂಟು?” ಸರ್ವಶಕ್ತನಿಗಿಂತ ತಾನು ಶ್ರೇಷ್ಠನೆಂದು ತೋರಿಸಿಕೊಳ್ಳಲು ಯೋಬನು ಪ್ರಯತ್ನಿಸುತ್ತಿದ್ದನೆಂದು ಎಲೀಫಜನು ಸೂಚಿಸಿದನು. ತನ್ನ ಎರಡನೆಯ ದಾಳಿಯನ್ನು ಅಂತ್ಯಗೊಳಿಸುತ್ತಾ, ಅವನು ಯೋಬನನ್ನು ಧರ್ಮಭ್ರಷ್ಟತೆ, ಲಂಚಗಾರಿಕೆ, ಮತ್ತು ವಂಚನೆಯ ವಿಷಯಗಳಲ್ಲಿ ದೋಷಿಯೋಪಾದಿ ವರ್ಣಿಸಿದನು. (ಯೋಬ, ಅಧ್ಯಾಯ 15) ತನ್ನ ಅಂತಿಮ ಭಾಷಣದಲ್ಲಿ, ಅನೇಕ ದುಷ್ಕಾರ್ಯಗಳ—ಸುಲಿಗೆ, ಕಡು ಬಡವರಿಂದ ಅನ್ನ ನೀರನ್ನು ತಡೆದು ಹಿಡಿಯುವುದು, ಮತ್ತು ವಿಧವೆಯರನ್ನು ಹಾಗೂ ಅನಾಥರನ್ನು ಪೀಡಿಸುವುದು—ಕುರಿತು ಎಲೀಫಜನು ಯೋಬನನ್ನು ಅಸತ್ಯವಾಗಿ ದೂಷಿಸಿದನು.—ಯೋಬ, ಅಧ್ಯಾಯ 22.
20. ಯೋಬನ ಮೇಲೆ ಬಿಲದ್ದನ ಆಕ್ರಮಣಗಳ ಸ್ವರೂಪವು ಎಂತಹದ್ದಾಗಿತ್ತು?
20 ಮೂರು ಸುತ್ತಿನ ವಾಗ್ವಾದದ ಪ್ರತಿಯೊಂದು ಸುತ್ತಿನಲ್ಲಿ ಎರಡನೆಯ ಸರದಿಯನ್ನು ತೆಗೆದುಕೊಳ್ಳುತ್ತಾ, ಬಿಲದ್ದನು ಸಾಧಾರಣವಾಗಿ ಎಲೀಫಜನ ಮೂಲಕ ಸ್ಥಾಪಿಸಲಾದ ಸಾಮಾನ್ಯ ಮುಖ್ಯವಿಷಯವನ್ನು ಅನುಸರಿಸಿದನು. ಬಿಲದ್ದನ ಭಾಷಣಗಳು ಚಿಕ್ಕದ್ದಾಗಿದ್ದವು ಆದರೆ ಹೆಚ್ಚು ತೀಕ್ಷೈವಾಗಿದ್ದವು. ಯೋಬನ ಮಕ್ಕಳು ತಪ್ಪನ್ನು ಮಾಡಿರುವುದಾಗಿ ಮತ್ತು ಹೀಗೆ ಮರಣಕ್ಕೆ ಯೋಗ್ಯವಾಗಿದ್ದರೆಂದು ಸಹ ಅವನು ದೂಷಿಸಿದನು. ತಪ್ಪಾಗಿ ವಿವೇಚಿಸುತ್ತಾ, ಅವನು ಈ ದೃಷ್ಟಾಂತವನ್ನು ಬಳಸಿದನು: ಜಂಬುಹುಲ್ಲು ಮತ್ತು ಆಪುಹುಲ್ಲು ನೀರಿಲ್ಲದೆ ಒಣಗಿ ಸಾಯುವಂತೆ, “ದೇವರನ್ನು ಮರೆತು ಬಿಟ್ಟವರೆಲ್ಲರ” ಗತಿಯು ಹೀಗೆಯೇ ಇರುವುದು. ಆ ಹೇಳಿಕೆಯು ಸತ್ಯವಾಗಿದೆ, ಆದರೆ ಅದು ಯೋಬನಿಗೆ ಅನ್ವಯಿಸಲಿಲ್ಲ. (ಯೋಬ, ಅಧ್ಯಾಯ 8) ಯೋಬನ ಬಾಧೆಗಳನ್ನು ಬಿಲದ್ದನು ದುಷ್ಟರ ಮೇಲೆ ಬರುವ ಬಾಧೆಗಳೋಪಾದಿ ವರ್ಗೀಕರಿಸಿದನು. (ಯೋಬ, ಅಧ್ಯಾಯ 18) ತನ್ನ ಚಿಕ್ಕ ಮೂರನೆಯ ಭಾಷಣದಲ್ಲಿ, ಮನುಷ್ಯನು “ಹುಳು”ವೂ “ಕ್ರಿಮಿ”ಯೂ ಆಗಿದ್ದಾನೆಂದು, ಆದುದರಿಂದ ದೇವರ ಮುಂದೆ ಅಶುದ್ಧನಾಗಿ ಬಿಲದ್ದನು ವಾದಿಸಿದನು.—ಯೋಬ, ಅಧ್ಯಾಯ 25.
21. ಯಾವ ವಿಷಯದ ಕುರಿತು ಚೋಫರನು ಯೋಬನನ್ನು ದೂಷಿಸಿದನು?
21 ವಾಗ್ವಾದದಲ್ಲಿ ಮಾತಾಡುವವರಲ್ಲಿ ಮೂರನೆಯವನು ಚೋಫರನಾಗಿದ್ದನು. ಸಾಮಾನ್ಯವಾಗಿ, ಅವನ ವಾದಸರಣಿಯು ಎಲೀಫಜನ ಮತ್ತು ಬಿಲದ್ದನ ವಾದಸರಣಿಗೆ ಹೋಲಿಕೆಯಲ್ಲಿತ್ತು. ದುಷ್ಟತನದ ವಿಷಯವಾಗಿ ಚೋಫರನು ಯೋಬನನ್ನು ದೂಷಿಸಿದನು ಮತ್ತು ಪಾಪಪೂರ್ಣ ಆಚರಣೆಗಳನ್ನು ಬಿಟ್ಟುಬಿಡುವಂತೆ ಅವನನ್ನು ಒತ್ತಯಾಪಡಿಸಿದನು. (ಯೋಬ, ಅಧ್ಯಾಯಗಳು 11, 20) ಎರಡು ಸುತ್ತಿನ ಬಳಿಕ, ಚೋಫರನು ಮಾತಾಡುವುದನ್ನು ನಿಲ್ಲಿಸಿದನು. ಮೂರನೆಯ ಸುತ್ತಿನಲ್ಲಿ ಸೇರಿಸಲು ಅವನಲ್ಲಿ ಏನೂ ಇರಲಿಲ್ಲ. ಸಂಪೂರ್ಣ ವಾಗ್ವಾದದ ಉದ್ದಕ್ಕೂ, ಯೋಬನು ಧೈರ್ಯವಾಗಿ ತನ್ನ ದೂಷಕರಿಗೆ ಉತ್ತರವನ್ನು ನೀಡಿದನು. ದೃಷ್ಟಾಂತಕ್ಕೆ, ಒಂದು ಸಮಯದಲ್ಲಿ ಅವನಂದದ್ದು: “ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಆದರಣೆಯವರಾಗಿದ್ದೀರಿ. ಒಣಮಾತುಗಳಿಗೆ ಪಾರವಿಲ್ಲವೋ?”—ಯೋಬ 16:2, 3.
ನಾವು ತಾಳಿಕೊಳ್ಳಬಲ್ಲೆವು
22, 23. (ಎ) ಯೋಬನ ವಿಷಯದಲ್ಲಿ ಮಾಡಿದಂತೆ, ಯೆಹೋವ ದೇವರ ಕಡೆಗಿರುವ ನಮ್ಮ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸುತ್ತಾ ಪಿಶಾಚನು ಹೇಗೆ ಮುಂದುವರಿಯಬಹುದು? (ಬಿ) ವಿವಿಧ ಪರೀಕ್ಷೆಗಳನ್ನು ಯೋಬನು ತಾಳಿಕೊಳ್ಳುತ್ತಿದ್ದರೂ, ಅವನ ಮನೋಭಾವದ ಕುರಿತು ನಾವು ಏನನ್ನು ಕೇಳಬಹುದು?
22 ಯೋಬನಂತೆ, ಒಂದು ಸಮಯದಲ್ಲಿ ನಾವು ಒಂದಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ಎದುರಿಸಬಹುದು, ಮತ್ತು ನಮ್ಮ ಸಮಗ್ರತೆಯನ್ನು ಮುರಿಯುವ ತನ್ನ ಪ್ರಯತ್ನದಲ್ಲಿ ಸೈತಾನನು ನಿರಾಶೆಯನ್ನು ಯಾ ಇತರ ಅಂಶಗಳನ್ನು ಉಪಯೋಗಿಸಬಹುದು. ನಮಗೆ ಆರ್ಥಿಕ ತೊಂದರೆಗಳು ಇರುವುದಾದರೆ, ಯೆಹೋವನ ವಿರುದ್ಧ ನಾವು ತಿರುಗುವಂತೆ ಮಾಡಲು ಅವನು ಪ್ರಯತ್ನಿಸಬಹುದು. ಒಬ್ಬ ಪ್ರಿಯ ವ್ಯಕ್ತಿ ಸಾಯುವುದಾದರೆ ಅಥವಾ ನಾವು ಅನಾರೋಗ್ಯವನ್ನು ಅನುಭವಿಸುವುದಾದರೆ, ದೇವರನ್ನು ದೂಷಿಸುವಂತೆ ನಮ್ಮನ್ನು ಪ್ರೇರಿಸಲು ಸೈತಾನನು ಪ್ರಯತ್ನಿಸಬಹುದು. ಯೋಬನ ಸಂಗಾತಿಗಳಂತೆ, ಯಾರೊ ಒಬ್ಬರು ನಮ್ಮನ್ನು ಅಸತ್ಯವಾಗಿಯೂ ದೂಷಿಸಬಹುದು. ಸಹೋದರ ಮ್ಯಾಕ್ಮಿಲನ್ ಸೂಚಿಸಿದಂತೆ, ಸೈತಾನನು ‘ನಮ್ಮ ಹಿಂದೆ’ ಇರಬಹುದು, ಆದರೆ ನಾವು ತಾಳಿಕೊಳ್ಳಬಲ್ಲೆವು.
23 ನಾವು ಇಷ್ಟರ ವರೆಗೆ ಗಮನಿಸಿರುವಂತೆ, ತನ್ನ ವಿವಿಧ ಪರೀಕ್ಷೆಗಳನ್ನು ಯೋಬನು ತಾಳಿಕೊಳ್ಳುತ್ತಿದ್ದನು. ಹಾಗಿದ್ದರೂ, ಅವನು ಕೇವಲ ತಾಳಿಕೊಳ್ಳುತ್ತಿದ್ದನೊ? ಅವನಿಗೆ ನಿಜವಾಗಿಯೂ ಜಜ್ಜಿಹೋದ ಒಂದು ಆತ್ಮವಿತ್ತೊ? ಎಲ್ಲ ನಿರೀಕ್ಷೆಯನ್ನು ಯೋಬನು ನಿಜವಾಗಿಯೂ ಕಳೆದುಕೊಂಡಿದ್ದನೊ ಎಂದು ನಾವು ನೋಡೋಣ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
▫ ಯೋಬನ ದಿನದಲ್ಲಿ ಯಾವ ಮಹಾ ವಿವಾದಾಂಶವನ್ನು ಸೈತಾನನು ಎಬ್ಬಿಸಿದನು?
▫ ಯಾವ ವಿಧಾನಗಳ ಮೂಲಕ ಯೋಬನು ಕಟ್ಟಕಡೆಯ ಮಿತಿಯ ವರೆಗೆ ಪರೀಕ್ಷಿಸಲ್ಪಟ್ಟನು?
▫ ಯಾವ ವಿಷಯವಾಗಿ ಯೋಬನ ಮೂವರು “ಸಂಗಾತಿಗಳು” ಅವನನ್ನು ದೂಷಿಸಿದರು?
▫ ಯೋಬನ ವಿಷಯದಲ್ಲಿ ಮಾಡಿದಂತೆ, ಯೆಹೋವನ ಕಡೆಗಿರುವ ನಮ್ಮ ಸಮಗ್ರತೆಯನ್ನು ಮುರಿಯಲು ಸೈತಾನನು ಹೇಗೆ ಪ್ರಯತ್ನಿಸಬಹುದು?
[ಪುಟ 10 ರಲ್ಲಿರುವ ಚಿತ್ರ]
ಏ. ಏಚ್. ಮ್ಯಾಕ್ಮಿಲನ್