ಪಾಠ 30
ಸತ್ತು ಹೋಗಿರುವ ನಮ್ಮ ಪ್ರಿಯರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರಾ?
ಸಾವು ತುಂಬ ದುಃಖ, ನೋವನ್ನ ಕೊಡುತ್ತೆ. ಅದಕ್ಕೇ ಬೈಬಲ್ ಸಾವನ್ನ ಶತ್ರು ಅಂತ ಹೇಳುತ್ತೆ. (1 ಕೊರಿಂಥ 15:26) ಯೆಹೋವ ದೇವರು ಸಾವನ್ನ ತೆಗೆದುಹಾಕುತ್ತಾನೆ ಅಂತ 27ನೇ ಪಾಠದಲ್ಲಿ ಕಲಿತ್ವಿ. ಆದ್ರೆ ಈಗಾಗಲೇ ಸತ್ತು ಹೋಗಿರೋ ಜನರ ಬಗ್ಗೆ ಏನು? ಸತ್ತು ಹೋಗಿರೋ ಕೋಟ್ಯಾಂತರ ಜನರನ್ನ ಯೆಹೋವ ದೇವರು ಮತ್ತೆ ಜೀವಂತವಾಗಿ ಎಬ್ಬಿಸುತ್ತಾನೆ ಅನ್ನೋದರ ಬಗ್ಗೆ ಈ ಪಾಠದಲ್ಲಿ ಕಲಿಯುತ್ತೇವೆ. ಅದು ನಿಜವಾಗಲೂ ಆಗುತ್ತಾ? ಸತ್ತು ಹೋಗಿರುವವರು ಮತ್ತೆ ಜೀವಂತವಾಗಿ ಎದ್ದು ಬಂದಾಗ ಸ್ವರ್ಗದಲ್ಲಿ ಇರುತ್ತಾರಾ ಅಥವಾ ಭೂಮಿಯಲ್ಲಿ ಇರುತ್ತಾರಾ?
1. ಸತ್ತು ಹೋಗಿರುವ ನಮ್ಮ ಪ್ರಿಯರನ್ನ ಮತ್ತೆ ಜೀವಂತವಾಗಿ ಎಬ್ಬಿಸಬೇಕು ಅಂತ ದೇವರು ಬಯಸ್ತಾನಾ?
ಸತ್ತು ಹೋಗಿರೋರನ್ನ ಪುನಃ ಜೀವಂತವಾಗಿ ಎಬ್ಬಿಸೋಕೆ ಯೆಹೋವ ದೇವರು ತುಂಬ ಆಸೆಯಿಂದ ಕಾಯ್ತಾ ಇದ್ದಾನೆ. ದೇವರ ಸೇವಕನಾದ ಯೋಬನಿಗೆ ತಾನು ಸತ್ತರೂ ದೇವರು ತನ್ನನ್ನ ಮರೆಯಲ್ಲ ಅನ್ನೋ ನಂಬಿಕೆಯಿತ್ತು. ಅವನು ದೇವರಿಗೆ ಹೀಗಂದನು: “ನೀನು ನನ್ನನ್ನ ಕರೀತಿಯ, ಆಗ ನಾನು [ಸಮಾಧಿಯಿಂದ] ಉತ್ತರ ಕೊಡ್ತೀನಿ.”—ಯೋಬ 14:13-15 ಓದಿ.
2. ಸತ್ತವರು ಮತ್ತೆ ಜೀವಂತವಾಗಿ ಬರೋಕೆ ಸಾಧ್ಯನಾ?
ಸತ್ತವರನ್ನ ಎಬ್ಬಿಸುವ ಶಕ್ತಿಯನ್ನ ದೇವರು ತನ್ನ ಮಗನಾದ ಯೇಸುವಿಗೆ ಕೊಟ್ಟನು. ಯೇಸು 12 ವರ್ಷದ ಹುಡುಗಿಯನ್ನ ಮತ್ತು ವಿಧವೆಯ ಮಗನನ್ನ ಜೀವಂತ ಎಬ್ಬಿಸಿದನು. (ಮಾರ್ಕ 5:41, 42; ಲೂಕ 7:12-15) ಕೆಲವು ದಿನಗಳ ನಂತರ ಯೇಸುವಿನ ಸ್ನೇಹಿತನಾದ ಲಾಜರ ಸತ್ತು ಹೋದ. ಅವನು ಸತ್ತು ಹೋಗಿ ನಾಲ್ಕು ದಿನ ಆದ್ರೂ ಯೇಸು ಅವನನ್ನ ಎಬ್ಬಿಸಿದನು. ದೇವರಿಗೆ ಪ್ರಾರ್ಥನೆ ಮಾಡಿ ಯೇಸು, “ಲಾಜರ, ಎದ್ದು ಹೊರಗೆ ಬಾ” ಅಂದನು. “ಆಗ ಸತ್ತಿದ್ದ ಲಾಜರ ಎದ್ದು ಹೊರಗೆ ಬಂದ.” (ಯೋಹಾನ 11:43, 44) ಸ್ವಲ್ಪ ಯೋಚನೆ ಮಾಡಿ ನೋಡಿ, ಲಾಜರ ಎದ್ದು ಬಂದಿದ್ದನ್ನ ನೋಡಿ ಅವನ ಕುಟುಂಬದವರಿಗೆ, ಸ್ನೇಹಿತರಿಗೆ ಎಷ್ಟು ಖುಷಿಯಾಗಿರಬೇಕು!
3. ಸತ್ತು ಹೋಗಿರೋ ನಿಮ್ಮ ಪ್ರಿಯರನ್ನ ಮತ್ತೆ ನೋಡಕ್ಕಾಗುತ್ತಾ?
‘ಸತ್ತು ಹೋದವರನ್ನ ದೇವರು ಮತ್ತೆ ಬದುಕಿಸುತ್ತಾನೆ’ ಅಂತ ಬೈಬಲ್ ಮಾತು ಕೊಡುತ್ತೆ. (ಅಪೊಸ್ತಲರ ಕಾರ್ಯ 24:15) ಯೇಸು ಭೂಮಿಯಲ್ಲಿದ್ದಾಗ ಯಾರನ್ನೆಲ್ಲಾ ಜೀವಂತವಾಗಿ ಎಬ್ಬಿಸಿದನೋ ಅವರು ಸ್ವರ್ಗಕ್ಕೆ ಹೋಗಲಿಲ್ಲ. (ಯೋಹಾನ 3:13) ಅವರನ್ನ ಮತ್ತೆ ಭೂಮಿಯಲ್ಲಿ ಜೀವಂತವಾಗಿ ಎಬ್ಬಿಸಿದಾಗ ಅವರು ತುಂಬ ಖುಷಿಪಟ್ಟರು. ಅದೇ ರೀತಿಯಲ್ಲಿ ಮುಂದೆ ಪರದೈಸಿನಲ್ಲಿ ಕೋಟ್ಯಾಂತರ ಜನರನ್ನ ಯೇಸು ಮತ್ತೆ ಎಬ್ಬಿಸುವಾಗ ಅವರೂ ಖುಷಿಪಡ್ತಾರೆ. ಅಲ್ಲಿ ಅವರು ಶಾಶ್ವತ ಜೀವವನ್ನ ಪಡೆಯುತ್ತಾರೆ. ಸತ್ತ ಎಷ್ಟೋ ಜನರನ್ನ ಮನುಷ್ಯರು ಮರೆತು ಹೋಗಿರಬಹುದು, ಆದರೆ ದೇವರು ಅವರನ್ನೆಲ್ಲಾ ನೆನಪಿನಲ್ಲಿಟ್ಟು ಮತ್ತೆ ಜೀವಂತವಾಗಿ ಎಬ್ಬಿಸಲಿದ್ದಾನೆ. ಯಾಕಂದ್ರೆ ‘ಸಮಾಧಿಗಳಲ್ಲಿ ಇರೋರನ್ನೆಲ್ಲಾ’ ಎಬ್ಬಿಸುತ್ತೇನೆ ಅಂತ ಯೇಸು ಮಾತು ಕೊಟ್ಟಿದ್ದಾನೆ.—ಯೋಹಾನ 5:28, 29.
ಹೆಚ್ಚನ್ನ ತಿಳಿಯೋಣ
ಸತ್ತವರನ್ನ ಎಬ್ಬಿಸೋಕೆ ಯೇಸುವಿಗೆ ಶಕ್ತಿ ಇದೆ ಅಂತ ನಾವು ಹೇಗೆ ಹೇಳಬಹುದು ಅನ್ನೋದನ್ನ ಬೈಬಲಿನಿಂದ ತಿಳಿಯೋಣ. ಇದು ನಮಗೆ ಹೇಗೆ ಸಾಂತ್ವನ ಮತ್ತು ನಿರೀಕ್ಷೆಯನ್ನ ಕೊಡುತ್ತೆ ಅಂತ ಕಲಿಯೋಣ.
4. ಸತ್ತವರನ್ನ ಬದುಕಿಸುವ ಶಕ್ತಿ ತನಗಿದೆ ಅಂತ ಯೇಸು ತೋರಿಸಿದನು
ತನ್ನ ಸ್ನೇಹಿತನಾದ ಲಾಜರ ಸತ್ತು ಹೋದಾಗ ಯೇಸು ಏನು ಮಾಡಿದ ಅನ್ನೋದ್ರ ಬಗ್ಗೆ ಕಲಿಯಿರಿ. ಯೋಹಾನ 11:14, 38-44 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಲಾಜರ ಸತ್ತು ಹೋಗಿದ್ದ ಅಂತ ನಾವು ಹೇಗೆ ಹೇಳಬಹುದು?—ವಚನ 39 ನೋಡಿ.
ಲಾಜರ ಸ್ವರ್ಗಕ್ಕೆ ಹೋಗಿದ್ರೆ ಯೇಸು ಅವನನ್ನು ಈ ಭೂಮಿಯಲ್ಲಿ ಎಬ್ಬಿಸುತ್ತಿದ್ದನಾ?
5. ತುಂಬ ಜನರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ!
ಕೀರ್ತನೆ 37:29 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಜೀವಂತವಾಗಿ ಎದ್ದು ಬರುವ ಕೋಟ್ಯಾಂತರ ಜನರು ಎಲ್ಲಿರುತ್ತಾರೆ?
ಯೆಹೋವನ ಆರಾಧಕರನ್ನ ಮಾತ್ರ ಅಲ್ಲ ಇನ್ನೂ ಅನೇಕ ಜನರನ್ನೂ ಯೇಸು ಎಬ್ಬಿಸುತ್ತಾನೆ. ಅಪೊಸ್ತಲರ ಕಾರ್ಯ 24:15 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸತ್ತು ಹೋದವರಲ್ಲಿ ಯಾರನ್ನ ನೋಡಲು ನೀವು ಇಷ್ಟಪಡ್ತೀರಾ?
ಇದರ ಬಗ್ಗೆ ಯೋಚಿಸಿ: ಒಬ್ಬ ತಂದೆ ತನ್ನ ಮಗನನ್ನ ನಿದ್ರೆಯಿಂದ ಎಷ್ಟು ಸುಲಭವಾಗಿ ಎಬ್ಬಿಸುತ್ತಾನೋ ಅದೇ ತರ ಯೇಸು ಸತ್ತುಹೋದ ಜನರನ್ನ ಮತ್ತೆ ಜೀವಂತವಾಗಿ ಎಬ್ಬಿಸುತ್ತಾನೆ
6. ನಮ್ಮ ಪ್ರಿಯರು ಮತ್ತೆ ಜೀವಂತವಾಗಿ ಎದ್ದು ಬರುವಾಗ!
ಯಾಯಿರನ ಮಗಳಿಗೆ ಏನಾಯ್ತು ಅಂತ ನೋಡಿ. ಈ ಘಟನೆ ದುಃಖದಲ್ಲಿರುವ ಅನೇಕರಿಗೆ ಬಲ ಮತ್ತು ಸಾಂತ್ವನ ಕೊಟ್ಟಿದೆ. ಅದರ ಬಗ್ಗೆ ಲೂಕ 8:40-42, 49-56ರಲ್ಲಿ ಓದಿ.
ಯೇಸು ಯಾಯಿರನ ಮಗಳನ್ನ ಮತ್ತೆ ಜೀವಂತವಾಗಿ ಎಬ್ಬಿಸುವ ಮುಂಚೆ ಅವಳ ತಂದೆಗೆ, “ಭಯಪಡಬೇಡ, ನಂಬಿಕೆ ಇಡು ಸಾಕು” ಅಂತ ಹೇಳಿದನು. (ವಚನ 50 ನೋಡಿ.) ಸತ್ತು ಹೋಗಿರುವವರು ಮತ್ತೆ ಜೀವಂತವಾಗಿ ಬರುತ್ತಾರೆ ಅನ್ನೋ ನಿರೀಕ್ಷೆ ನಮಗೆ ಈ ಸನ್ನಿವೇಶಗಳಲ್ಲಿ ಹೇಗೆ ಸಹಾಯ ಮಾಡುತ್ತೆ . . .
ನಮ್ಮ ಪ್ರಿಯರು ತೀರಿಹೋದಾಗ?
ನಮ್ಮ ಜೀವ ಅಪಾಯದಲ್ಲಿದ್ದಾಗ?
ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಸತ್ತು ಹೋಗಿರುವವರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ ಅನ್ನೋ ನಿರೀಕ್ಷೆ ಫೆಲ್ಸಿಟಾ ಹೆತ್ತವರಿಗೆ ಹೇಗೆ ನೆಮ್ಮದಿ ಮತ್ತು ಬಲ ಕೊಡ್ತು?
ಕೆಲವರು ಹೀಗಂತಾರೆ: “ಸತ್ತವರು ಮತ್ತೆ ಜೀವಂತವಾಗಿ ಬರ್ತಾರೆ ಅನ್ನೋದನ್ನ ನಂಬೋಕೆ ಆಗ್ತಿಲ್ಲ.”
ನಿಮಗೇನು ಅನಿಸುತ್ತೆ?
ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ ಅಂತ ವಿವರಿಸಲು ಯಾವ ವಚನವನ್ನ ನೀವು ತೋರಿಸುತ್ತೀರಾ?
ನಾವೇನು ಕಲಿತ್ವಿ
ಸತ್ತುಹೋದ ಕೋಟ್ಯಾಂತರ ಜನರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ. ಯೆಹೋವ ದೇವರು ಅದಕ್ಕಾಗಿ ತುಂಬ ಆಸೆಯಿಂದ ಕಾಯುತ್ತಾ ಇದ್ದಾನೆ ಮತ್ತು ಜನರನ್ನ ಮತ್ತೆ ಜೀವಂತವಾಗಿ ಎಬ್ಬಿಸೋ ಶಕ್ತಿಯನ್ನ ಯೇಸುವಿಗೆ ಕೊಟ್ಟಿದ್ದಾನೆ.
ನೆನಪಿದೆಯಾ
ಸತ್ತವರನ್ನ ಜೀವಂತವಾಗಿ ಎಬ್ಬಿಸೋಕೆ ಯೆಹೋವನು ಮತ್ತು ಯೇಸು ಕಾಯ್ತಾ ಇದ್ದಾರೆ ಅಂತ ನಮಗೆ ಹೇಗೆ ಗೊತ್ತು?
ಜೀವಂತವಾಗಿ ಎದ್ದು ಬರುವ ಕೊಟ್ಯಾಂತರ ಜನರು ಎಲ್ಲಿ ಇರುತ್ತಾರೆ: ಸ್ವರ್ಗದಲ್ಲಾ, ಭೂಮಿಯಲ್ಲಾ? ನಿಮಗೆ ಯಾಕೆ ಹಾಗನಿಸುತ್ತೆ?
ಸತ್ತು ಹೋಗಿರುವ ನಿಮ್ಮ ಆಪ್ತರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ ಅಂತ ನೀವು ಹೇಗೆ ಹೇಳ್ತೀರಾ?
ಇದನ್ನೂ ನೋಡಿ
ಸಾವಿನ ನೋವನ್ನ ತಾಳಿಕೊಳ್ಳೋಕೆ ಯಾವ ವಿಷಯಗಳು ಸಹಾಯ ಮಾಡುತ್ತೆ ಅಂತ ತಿಳಿಯಿರಿ.
ದುಃಖದಲ್ಲಿರೋ ವ್ಯಕ್ತಿಗೆ ಬೈಬಲ್ ನಿಜವಾಗಿಯೂ ಸಹಾಯ ಮಾಡುತ್ತಾ ಅನ್ನೋದ್ರ ಬಗ್ಗೆ ತಿಳಿಯಿರಿ.
ತಮ್ಮ ಕುಟುಂಬದವರನ್ನ ಅಥವಾ ಸ್ನೇಹಿತರನ್ನ ಕಳೆದುಕೊಂಡಾಗ ಮಕ್ಕಳು ತುಂಬ ದುಃಖಿಸ್ತಾರೆ, ಆ ನೋವಿಂದ ಹೊರಬರೋಕೆ ಅವರಿಗೆ ಯಾವುದು ಸಹಾಯ ಮಾಡುತ್ತೆ ಅಂತ ನೋಡಿ.
ಸ್ವರ್ಗಕ್ಕೆ ಯಾರು ಹೋಗ್ತಾರೆ? ಮತ್ತು ಎಂಥ ಜನರಿಗೆ ಮತ್ತೆ ಜೀವ ಸಿಗಲ್ಲ?
“ಸತ್ತವರು ಮತ್ತೆ ಬದುಕುವುದರ ಬಗ್ಗೆ ಬೈಬಲ್ ಏನು ಹೇಳುತ್ತದೆ?” (jw.org ಲೇಖನ)