-
ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 08
ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
ನೀವು ಯೆಹೋವ ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು ಅಂತ ಆತನೇ ಬಯಸ್ತಾನೆ. ಯಾಕಂದ್ರೆ ಆತನ ಗುಣ, ವ್ಯಕ್ತಿತ್ವ, ಆತನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ಎಷ್ಟು ಹೆಚ್ಚು ತಿಳಿದುಕೊಳ್ಳುತ್ತಿರೋ ಅಷ್ಟು ಹೆಚ್ಚು ಆತನ ಫ್ರೆಂಡ್ ಆಗಬೇಕು ಅಂತ ಅನಿಸುತ್ತೆ. ನೀವು ನಿಜವಾಗಲೂ ದೇವರ ಫ್ರೆಂಡ್ ಆಗೋಕೆ ಸಾಧ್ಯನಾ? (ಕೀರ್ತನೆ 25:14 ಓದಿ.) ದೇವರ ಫ್ರೆಂಡ್ ಆಗಲು ನೀವೇನು ಮಾಡಬಹುದು? ಈ ಪ್ರಶ್ನೆಗಳಿಗೆ ಬೈಬಲ್ ಉತ್ತರ ಕೊಡುತ್ತೆ. ಅಷ್ಟೇ ಅಲ್ಲ, ಯೆಹೋವ ದೇವರಂಥ ಫ್ರೆಂಡ್ ಬೇರೆ ಯಾರೂ ಇಲ್ಲ ಅಂತನೂ ತಿಳಿಸುತ್ತೆ.
1. ಯೆಹೋವ ದೇವರು ಪ್ರೀತಿಯಿಂದ ಏನು ಕೇಳುತ್ತಿದ್ದಾನೆ?
“ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.” (ಯಾಕೋಬ 4:8) ಇದರ ಅರ್ಥ ಏನು? ತನ್ನ ಫ್ರೆಂಡ್ ಆಗೋಕೆ ಯೆಹೋವ ದೇವರು ನಿಮ್ಮನ್ನ ಕರೆಯುತ್ತಿದ್ದಾನೆ. ನಮ್ಮ ಕಣ್ಣಿಗೆ ಕಾಣದೆ ಇರೋ ದೇವರ ಫ್ರೆಂಡ್ ಆಗೋದು ಹೇಗೆ ಅಂತ ಕೆಲವರಿಗೆ ಅನಿಸಬಹುದು. ಆದರೆ ದೇವರು ತನ್ನ ಬಗ್ಗೆ ಎಲ್ಲವನ್ನ ಬೈಬಲಿನಲ್ಲಿ ಬರೆಸಿಟ್ಟಿದ್ದಾನೆ. ನಾವು ಅದನ್ನ ಓದುವಾಗ ಆತನ ಬಗ್ಗೆ ಹೆಚ್ಚನ್ನ ಕಲಿಯುತ್ತೇವೆ. ನಾವು ಆತನ ಬಗ್ಗೆ ಎಷ್ಟು ಹೆಚ್ಚು ಕಲಿಯುತ್ತೇವೋ ಅಷ್ಟು ಹೆಚ್ಚು ಆತನಿಗೆ ಆಪ್ತರಾಗುತ್ತೇವೆ. ಹೀಗೆ ನಾವು ಆತನ ಸ್ನೇಹಿತರಾಗಬಹುದು.
2. ಯೆಹೋವನಂಥ ಆಪ್ತ ಸ್ನೇಹಿತ ಬೇರೆ ಯಾರೂ ಇಲ್ಲ ಯಾಕೆ?
ಯೆಹೋವ ದೇವರು ನಿಮ್ಮನ್ನು ಪ್ರೀತಿಸುವಷ್ಟು ಬೇರೆ ಯಾರೂ ಪ್ರೀತಿಸಲ್ಲ. ನೀವು ಖುಷಿಯಾಗಿ ಇರಬೇಕು, ಸಹಾಯ ಬೇಕಿದ್ದಾಗ ತನ್ನನ್ನ ಕೇಳಬೇಕು ಅಂತ ದೇವರು ಬಯಸುತ್ತಾನೆ. “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ” ಅಂತ ಬೈಬಲ್ ಹೇಳುತ್ತೆ. (1 ಪೇತ್ರ 5:7) ಒಬ್ಬ ಫ್ರೆಂಡ್ ತರ ನೀವು ಹೇಳೋದನ್ನೆಲ್ಲ ಕೇಳಿಸಿಕೊಳ್ಳೋಕೆ, ಕಷ್ಟದಲ್ಲಿದ್ದಾಗ ಸಾಂತ್ವನ ಹೇಳೋಕೆ, ಬೆಂಬಲಿಸೋಕೆ ಯೆಹೋವನು ಯಾವಾಗಲೂ ರೆಡಿ ಇರುತ್ತಾನೆ.—ಕೀರ್ತನೆ 94:18, 19 ಓದಿ.
3. ತನ್ನ ಸ್ನೇಹಿತರು ಹೇಗಿರಬೇಕು ಅಂತ ಯೆಹೋವನು ಇಷ್ಟಪಡ್ತಾನೆ?
ಯೆಹೋವನು ಎಲ್ಲಾ ಜನರನ್ನ ಪ್ರೀತಿಸುತ್ತಾನೆ. “ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ.” (ಜ್ಞಾನೋಕ್ತಿ 3:32) ಯೆಹೋವನು ಯಾವುದನ್ನ ಒಳ್ಳೇದು ಅಂತ ನೆನಸುತ್ತಾನೋ ಅದನ್ನೇ ತನ್ನ ಸ್ನೇಹಿತರು ಮಾಡಬೇಕು ಅಂತ ಇಷ್ಟಪಡ್ತಾನೆ. ಅಷ್ಟೇ ಅಲ್ಲ, ನಾವು ಆತನ ದೃಷ್ಟಿಯಲ್ಲಿ ಕೆಟ್ಟದಾಗಿ ಇರೋದನ್ನ ಮಾಡಬಾರದು ಅಂತನೂ ಬಯಸುತ್ತಾನೆ. ‘ಯೆಹೋವನು ಹೇಳೋದನ್ನೆಲ್ಲ ನಮ್ಮಿಂದ ಮಾಡೋಕೆ ಆಗಲ್ಲ’ ಅಂತ ಕೆಲವರು ನೆನಸುತ್ತಾರೆ. ಆದರೆ ಯೆಹೋವನಿಗೆ ತುಂಬ ದೊಡ್ಡ ಮನಸ್ಸಿದೆ, ನಮ್ಮಿಂದ ಮಾಡಕ್ಕಾಗದೆ ಇರೋದನ್ನ ಆತನು ಕೇಳಲ್ಲ. ಯಾರೆಲ್ಲಾ ಆತನನ್ನ ನಿಜವಾಗಿ ಪ್ರೀತಿಸಿ, ಆತನಿಗೆ ಇಷ್ಟ ಆಗೋ ತರ ನಡೆಯೋಕೆ ತಮ್ಮಿಂದಾದಷ್ಟು ಪ್ರಯತ್ನಿಸುತ್ತಾರೋ ಅವರೆಲ್ಲರನ್ನ ಪ್ರೀತಿಸ್ತಾನೆ.—ಕೀರ್ತನೆ 147:11; ಅಪೊಸ್ತಲರ ಕಾರ್ಯ 10:34, 35.
ಹೆಚ್ಚನ್ನ ತಿಳಿಯೋಣ
ಯೆಹೋವ ದೇವರ ಫ್ರೆಂಡ್ ಆಗೋಕೆ ಏನು ಮಾಡಬೇಕು ಅನ್ನೋದರ ಬಗ್ಗೆ ಹೆಚ್ಚನ್ನ ತಿಳಿಯಿರಿ. ಅಷ್ಟೇ ಅಲ್ಲ, ಯೆಹೋವ ದೇವರಂಥ ಒಳ್ಳೇ ಫ್ರೆಂಡ್ ಇನ್ಯಾರೂ ಇಲ್ಲ ಅನ್ನೋದರ ಬಗ್ಗೆನೂ ತಿಳಿಯಿರಿ.
4. ಅಬ್ರಹಾಮ ಯೆಹೋವ ದೇವರ ಗೆಳೆಯನಾಗಿದ್ದ
ಅಬ್ರಹಾಮನ (ಅಬ್ರಾಮ) ಬಗ್ಗೆ ಬೈಬಲಿನಲ್ಲಿರೋ ಮಾಹಿತಿಯಿಂದ, ದೇವರ ಫ್ರೆಂಡ್ ಆಗಲು ನಾವೇನು ಮಾಡಬೇಕು ಅಂತ ಕಲಿಬಹುದು. ಅಬ್ರಹಾಮನ ಬಗ್ಗೆ ಆದಿಕಾಂಡ 12:1-4ರಲ್ಲಿ ಓದಿ. ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವ ದೇವರು ಅಬ್ರಹಾಮನಿಗೆ ಏನು ಮಾಡೋಕೆ ಹೇಳಿದನು?
ಯೆಹೋವ ದೇವರು ಏನಂತ ಮಾತು ಕೊಟ್ಟನು?
ಅಬ್ರಹಾಮ ಏನು ಮಾಡಿದ?
5. ತನ್ನ ಸ್ನೇಹಿತರು ಹೇಗಿರಬೇಕು ಅಂತ ಯೆಹೋವನು ಇಷ್ಟಪಡುತ್ತಾನೆ
ನಮ್ಮ ಸ್ನೇಹಿತರು ಕೆಲವೊಂದು ವಿಷಯಗಳಲ್ಲಿ ‘ಹೀಗೆ ಇರಬೇಕು, ಹೀಗೆ ಇರಬಾರದು’ ಅಂತ ಇಷ್ಟಪಡುತ್ತೇವೆ.
ನಿಮ್ಮ ಸ್ನೇಹಿತರು ಹೇಗಿರಬೇಕು ಅಂತ ನೀವು ಇಷ್ಟಪಡ್ತೀರಾ?
1 ಯೋಹಾನ 5:3 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:
ತನ್ನ ಸ್ನೇಹಿತರು ಏನು ಮಾಡಬೇಕು ಅಂತ ಯೆಹೋವನು ಇಷ್ಟಪಡ್ತಾನೆ?
ನಾವು ಯೆಹೋವನ ಮಾತಿನ ಪ್ರಕಾರ ನಡೆಯಬೇಕಂದ್ರೆ ನಮ್ಮಲ್ಲಿ ಇರೋ ಕೆಟ್ಟ ಗುಣಗಳನ್ನ ಬಿಡಬೇಕಾಗುತ್ತೆ, ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಯೆಶಾಯ 48:17, 18 ಓದಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ:
ತನ್ನ ಸ್ನೇಹಿತರು ಕೆಟ್ಟ ಗುಣಗಳನ್ನ ಬಿಟ್ಟು ಬದಲಾವಣೆಗಳನ್ನ ಮಾಡಿಕೊಳ್ಳಬೇಕು ಅಂತ ದೇವರು ಯಾಕೆ ಹೇಳುತ್ತಿದ್ದಾನೆ?
6. ಯೆಹೋವನು ತನ್ನ ಸ್ನೇಹಿತರಿಗೆ ಸಹಾಯ ಮಾಡ್ತಾನೆ
ಸಮಸ್ಯೆಗಳನ್ನ ನಿಭಾಯಿಸಿಕೊಂಡು ಹೋಗೋಕೆ ಯೆಹೋವನು ತನ್ನ ಸ್ನೇಹಿತರಿಗೆ ಸಹಾಯ ಮಾಡ್ತಾನೆ. ವಿಡಿಯೋ ನೋಡಿ, ನಂತರ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.
ಕೆಟ್ಟ ನೆನಪುಗಳಿಂದ ಹೊರ ಬರೋಕೆ ಆ ಸ್ತ್ರೀಗೆ ಯೆಹೋವನು ಹೇಗೆಲ್ಲಾ ಸಹಾಯ ಮಾಡಿದನು?
ಯೆಶಾಯ 41:10, 13 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಯೆಹೋವನು ತನ್ನ ಸ್ನೇಹಿತರಿಗಾಗಿ ಏನೆಲ್ಲಾ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ?
ನೀವು ಯೆಹೋವನ ಸ್ನೇಹಿತರಾಗೋಕೆ ಇಷ್ಟಪಡುತ್ತೀರಾ? ಯಾಕೆ?
7. ಮಾತಾಡ್ತಾ ಕಿವಿಗೊಡ್ತಾ ಯೆಹೋವನ ಫ್ರೆಂಡ್ ಆಗಿರಿ
ಸ್ನೇಹಿತರು ಒಬ್ಬರು ಇನ್ನೊಬ್ಬರ ಜೊತೆ ಎಷ್ಟು ಮಾತಾಡ್ತಾರೋ ಅವರ ಸ್ನೇಹ ಅಷ್ಟು ಗಟ್ಟಿ ಆಗುತ್ತೆ. ಕೀರ್ತನೆ 86:6, 11 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ನಾವು ಯೆಹೋವ ದೇವರ ಜೊತೆ ಹೇಗೆ ಮಾತಾಡಬಹುದು?
ಯೆಹೋವ ದೇವರು ನಮ್ಮ ಜೊತೆ ಹೇಗೆ ಮಾತಾಡ್ತಾನೆ?
ಕೆಲವರು ಹೀಗಂತಾರೆ: “ದೇವರ ಫ್ರೆಂಡ್ ಆಗೋಕೆ ಸಾಧ್ಯನೇ ಇಲ್ಲ.”
ಯೆಹೋವ ದೇವರ ಫ್ರೆಂಡ್ ಆಗಲು ಸಾಧ್ಯ ಅಂತ ತಿಳಿಸೋಕೆ ಯಾವ ಬೈಬಲ್ ವಚನವನ್ನ ನೀವು ತೋರಿಸುತ್ತೀರಾ?
ನಾವೇನು ಕಲಿತ್ವಿ
ಯೆಹೋವ ದೇವರು ನಿಮ್ಮ ಸ್ನೇಹಿತನಾಗೋಕೆ ಇಷ್ಟಪಡ್ತಾನೆ. ಅದಕ್ಕೆ ಬೇಕಾದ ಸಹಾಯನೂ ಮಾಡ್ತಾನೆ.
ನೆನಪಿದೆಯಾ
ಯೆಹೋವ ದೇವರು ತನ್ನ ಸ್ನೇಹಿತರಿಗೆ ಹೇಗೆ ಸಹಾಯ ಮಾಡ್ತಾನೆ?
ತನ್ನ ಸ್ನೇಹಿತರು ಬದಲಾವಣೆ ಮಾಡಿಕೊಳ್ಳಬೇಕು ಅಂತ ಯೆಹೋವನು ಯಾಕೆ ಇಷ್ಟಪಡ್ತಾನೆ?
ತನ್ನ ಸ್ನೇಹಿತರಿಂದ ಮಾಡಕ್ಕೆ ಆಗದ ವಿಷಯಗಳನ್ನ ಯೆಹೋವನು ಕೇಳುತ್ತಾನೆ ಅಂತ ನಿಮಗೆ ಅನಿಸುತ್ತಾ? ಯಾಕೆ ಹಾಗೆ ಅನಿಸುತ್ತೆ?
ಇದನ್ನೂ ನೋಡಿ
ನೀವು ಯೆಹೋವನ ಫ್ರೆಂಡ್ ಆದ್ರೆ ನಿಮ್ಮ ಜೀವನ ಹೇಗಿರುತ್ತೆ? ಅನ್ನೋದನ್ನ ನೋಡಿ.
“ಯೆಹೋವ ನಾವು ತಿಳಿದುಕೊಳ್ಳಲು ಅರ್ಹನಾಗಿರುವಂಥ ಒಬ್ಬ ದೇವರು” (ಕಾವಲಿನಬುರುಜು, ಫೆಬ್ರವರಿ 15, 2003)
ದೇವರ ಫ್ರೆಂಡ್ ಆಗೋದು ಹೇಗೆ ಅಂತ ಕಲಿಯಿರಿ.
ಯೆಹೋವ ದೇವರ ಜೊತೆ ಸ್ನೇಹವನ್ನ ಬೆಳೆಸಿಕೊಂಡಿದ್ರಿಂದ ಒಬ್ಬ ಸ್ತ್ರೀಗೆ ಹೇಗೆ ಹೊಸ ಜೀವನ ಸಿಕ್ಕಿತು ಅಂತ ನೋಡಿ.
ಹದಿವಯಸ್ಸಿನವರು ಯೆಹೋವ ದೇವರ ಬಗ್ಗೆ ಏನಂತಾರೆ ಅಂತ ಕೇಳಿಸಿಕೊಳ್ಳಿ.
-
-
ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
6. ದೀಕ್ಷಾಸ್ನಾನ ಪಡೆದುಕೊಂಡಾಗ ನಾವು ಯೆಹೋವನ ಕುಟುಂಬದ ಭಾಗ ಆಗುತ್ತೇವೆ
ನಾವು ದೀಕ್ಷಾಸ್ನಾನ ಪಡೆದುಕೊಂಡಾಗ ಲೋಕವ್ಯಾಪಕವಾಗಿರುವ ಯೆಹೋವನ ಕುಟುಂಬದಲ್ಲಿ ಒಬ್ಬರಾಗುತ್ತೇವೆ. ನಮ್ಮ ಮಧ್ಯ ಪ್ರೀತಿ, ಐಕ್ಯತೆ ಇದೆ. ಬೇರೆಬೇರೆ ಕಡೆಗಳಿಂದ, ಹಿನ್ನೆಲೆಯಿಂದ ಬಂದಿದ್ರೂ ನಮ್ಮ ನಂಬಿಕೆ ಒಂದೇ ಆಗಿರುತ್ತೆ ಮತ್ತು ನಾವೆಲ್ಲರೂ ಬೈಬಲಿನಲ್ಲಿರುವ ನೀತಿನಿಯಮಗಳ ಪ್ರಕಾರ ನಡೆಯುತ್ತೇವೆ. ಕೀರ್ತನೆ 25:14 ಮತ್ತು 1 ಪೇತ್ರ 2:17 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ದೀಕ್ಷಾಸ್ನಾನ ಪಡೆದುಕೊಳ್ಳೋದ್ರಿಂದ ಯೆಹೋವನ ಜೊತೆ ಮತ್ತು ಸಹೋದರ ಸಹೋದರಿಯರ ಜೊತೆ ನಮ್ಮ ಸಂಬಂಧ ಹೇಗಿರುತ್ತೆ?
-
-
ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
2. ಜೀವನದಲ್ಲಿ ಖುಷಿ ಮತ್ತು ತೃಪ್ತಿ ಇರಬೇಕಂದ್ರೆ ಏನು ಮಾಡಬೇಕು?
ಮನುಷ್ಯರಿಗೆ “ದೇವರ ಮಾರ್ಗದರ್ಶನ” ಬೇಕೇ ಬೇಕು. ಯೆಹೋವ ದೇವರು ನಮ್ಮನ್ನ ಸೃಷ್ಟಿಸಿದಾಗಲೇ ಆ ಬಯಕೆಯನ್ನ ನಮ್ಮಲ್ಲಿ ಇಟ್ಟಿದ್ದಾನೆ. ಹಾಗಾಗಿ ಆತನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಆತನನ್ನ ಆರಾಧಿಸಬೇಕು ಅನ್ನೋ ಬಯಕೆ ನಮ್ಮಲ್ಲಿದೆ. (ಮತ್ತಾಯ 5:3-6 ಓದಿ.) ನಾವು ಆತನ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳಬೇಕು, “ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು, ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ” ಸೇವೆ ಮಾಡಬೇಕು ಅಂತ ಯೆಹೋವ ದೇವರು ಇಷ್ಟಪಡುತ್ತಾನೆ. (ಧರ್ಮೋಪದೇಶಕಾಂಡ 10:12; ಕೀರ್ತನೆ 25:14) ನಾವು ಹೀಗೆ ಮಾಡುವಾಗ ನಮಗೆ ಎಷ್ಟೇ ಕಷ್ಟ ಇದ್ದರೂ ಖುಷಿ ಖುಷಿಯಾಗಿ ಇರಬಹುದು. ಜೀವನಕ್ಕೆ ಒಂದು ಅರ್ಥನೂ ಇರುತ್ತೆ.
-