ಇಂದಿನ “ದೇವಾಲಯ” ಮತ್ತು “ಪ್ರಭು”
“ಜನರು ಪ್ರವೇಶಿಸುವಾಗ ಪ್ರಭುವು ಅವರ ಮಧ್ಯದಲ್ಲಿ ಪ್ರವೇಶಿಸಲಿ; ಅವರು ಹೊರಡುವಾಗ ಅವನೂ ಹೊರಡಲಿ.”—ಯೆಹೆಜ್ಕೇಲ 46:10.
1, 2. ಯೆಹೆಜ್ಕೇಲನ ದೇವಾಲಯ ದರ್ಶನದ ಹೆಚ್ಚಿನ ಅರ್ಥವನ್ನು ಬಿಡಿಸಲು, ಯಾವ ಮೂಲ ಸತ್ಯವು ಸಹಾಯಮಾಡುತ್ತದೆ?
ಕೆಲವು ಪುರಾತನ ಯೆಹೂದಿ ರಬ್ಬಿಗಳು ಯೆಹೆಜ್ಕೇಲನ ಪುಸ್ತಕದಿಂದ ಸಂಪೂರ್ಣವಾಗಿ ಸಂತೃಪ್ತರಾಗಿರಲಿಲ್ಲ. ಟ್ಯಾಲ್ಮುಡ್ಗನುಸಾರ ಅವರಲ್ಲಿ ಕೆಲವರು, ಆ ಪುಸ್ತಕವನ್ನು ಪವಿತ್ರ ಶಾಸ್ತ್ರಗಳ ಪ್ರಮಾಣಗ್ರಂಥದಿಂದ ತೆಗೆದುಹಾಕಲು ಸಹ ಯೋಚಿಸಿದ್ದರು. ದೇವಾಲಯದ ದರ್ಶನವನ್ನು ಅರ್ಥಮಾಡಿಕೊಳ್ಳಲು ಅವರಿಗೆ ತುಂಬ ಕಷ್ಟವಾಯಿತು. ಅವರು ಅದನ್ನು ಮಾನವನ ಗ್ರಹಿಕೆಗೆ ನಿಲುಕದ ಸಂಗತಿಯೆಂದು ಘೋಷಿಸಿದರು. ಯೆಹೋವನ ಆಲಯದ ಕುರಿತಾದ ಯೆಹೆಜ್ಕೇಲನ ದರ್ಶನದಿಂದ ಇತರ ಬೈಬಲ್ ಪಂಡಿತರಾದರೋ ಕಕ್ಕಾಬಿಕ್ಕಿಯಾಗಿ ಹೋಗಿದ್ದಾರೆ. ಆದರೆ ನಮ್ಮ ಕುರಿತೇನು?
2 ಶುದ್ಧಾರಾಧನೆಯ ಪುನಃಸ್ಥಾಪನೆಯಾದಂದಿನಿಂದ, ಯೆಹೋವನು ತನ್ನ ಜನರನ್ನು ಆತ್ಮಿಕ ಒಳನೋಟದ ಅನೇಕ ಪ್ರಕಾಶಗಳನ್ನು ಕೊಟ್ಟು ಆಶೀರ್ವದಿಸಿದ್ದಾನೆ. ದೇವರ ಆತ್ಮಿಕ ಆಲಯದ—ಅಂದರೆ, ಶುದ್ಧಾರಾಧನೆಗಾಗಿರುವ ಯೆಹೋವನ ಆಲಯಸದೃಶ ಏರ್ಪಾಡಿನ ಕುರಿತಾದ ವಿವೇಚನೆಯೂ ಅದರಲ್ಲಿ ಸೇರಿದೆ.a ಈ ಮುಖ್ಯ ಸತ್ಯವು ಯೆಹೆಜ್ಕೇಲನ ದೇವಾಲಯ ದರ್ಶನದ ಹೆಚ್ಚಿನ ಅರ್ಥವನ್ನು ಬಿಡಿಸಲು ನಮಗೆ ಸಹಾಯ ಮಾಡುತ್ತದೆ. ಈ ದರ್ಶನದ ನಾಲ್ಕು ವಿಭಾಗಗಳನ್ನು—ದೇವಾಲಯ, ಯಾಜಕತ್ವ, ಪ್ರಭು ಮತ್ತು ಪುನರ್ಸ್ಥಾಪಿತ ದೇಶವನ್ನು ನಾವೀಗ ಹೆಚ್ಚು ನಿಕಟವಾಗಿ ಪರಿಗಣಿಸೋಣ. ಇಂದು ಇವುಗಳ ಅರ್ಥವೇನಾಗಿದೆ?
ದೇವಾಲಯ ಮತ್ತು ನೀವು
3. ದೇವಾಲಯದ ಪ್ರವೇಶಮಾರ್ಗಗಳ ಎತ್ತರದ ಒಳಮಾಳಿಗೆ ಮತ್ತು ಗೋಡೆಗಳ ಕೆತ್ತನೆಗಳಿಂದ ನಾವೇನನ್ನು ಕಲಿತುಕೊಳ್ಳುತ್ತೇವೆ?
3 ಈ ದಾರ್ಶನಿಕ ಆಲಯದ ಒಂದು ಸಂದರ್ಶನವನ್ನು ನಾವು ಮಾಡುತ್ತಿದ್ದೇವೆಂದು ಊಹಿಸಿಕೊಳ್ಳೋಣ. ಆ ದೊಡ್ಡ ಹೆಬ್ಬಾಗಿಲುಗಳಲ್ಲಿ ಒಂದಕ್ಕೆ ನಡೆಸುವ ಏಳು ಮೆಟ್ಟಿಲುಗಳನ್ನು ನಾವು ಹತ್ತುತ್ತೇವೆ. ಈ ಪ್ರವೇಶ ದ್ವಾರದೊಳಗೆ ಬಂದು ನಿಂತುಕೊಂಡು, ನಾವು ವಿಸ್ಮಯದಿಂದ ಮೇಲೆ ನೋಡುತ್ತೇವೆ. ಅದರ ಒಳಮಾಳಿಗೆಯು ಸುಮಾರು 30 ಮೀಟರಿಗಿಂತಲೂ ಹೆಚ್ಚು ಎತ್ತರದಲ್ಲಿದೆ! ಹೀಗೆ ಯೆಹೋವನ ಆರಾಧನಾ ಏರ್ಪಾಡಿನೊಳಗೆ ಪ್ರವೇಶಿಸುವುದಕ್ಕಾಗಿರುವ ಮಟ್ಟಗಳು ಅತ್ಯುನ್ನತವಾದವುಗಳೆಂದು ಇದು ನಮಗೆ ಜ್ಞಾಪಕ ಹುಟ್ಟಿಸುತ್ತದೆ. ಕಿಟಕಿಗಳಿಂದ ತೂರಿಬರುವ ಬೆಳಕಿನ ಕಿರಣಗಳು ಗೋಡೆಗಳ ಮೇಲೆ ಚಿತ್ರಿಸಲ್ಪಟ್ಟಿರುವ ಖರ್ಜೂರ ವೃಕ್ಷಗಳನ್ನು ಬೆಳಗಿಸುತ್ತವೆ. ಇದನ್ನು ಶಾಸ್ತ್ರಗಳು, ಯಥಾರ್ಥತೆಯನ್ನು ಚಿತ್ರಿಸಲಿಕ್ಕಾಗಿ ಬಳಸುತ್ತವೆ. (ಕೀರ್ತನೆ 92:12; ಯೆಹೆಜ್ಕೇಲ 40:14, 16, 22) ಈ ಪವಿತ್ರ ಸ್ಥಳವು, ನೈತಿಕವಾಗಿ ಮತ್ತು ಆತ್ಮಿಕವಾಗಿ ಯಥಾರ್ಥವಂತರು ಆಗಿರುವವರಿಗಾಗಿದೆ. ಅದಕ್ಕೆ ಹೊಂದಿಕೆಯಲ್ಲಿ, ನಮ್ಮ ಆರಾಧನೆಯು ಯೆಹೋವನಿಗೆ ಸ್ವೀಕಾರಯೋಗ್ಯವಾಗಿರುವಂತೆ, ನಾವು ಯಥಾರ್ಥವಂತರಾಗಿ ಉಳಿಯಲು ಬಯಸುತ್ತೇವೆ.—ಕೀರ್ತನೆ 11:7.
4. ಯಾರು ದೇವಾಲಯವನ್ನು ಪ್ರವೇಶಿಸಲಾರರು, ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ?
4 ಪ್ರವೇಶದ್ವಾರದ ಪ್ರತಿಯೊಂದು ಬದಿಯಲ್ಲಿ, ಮೂರು ಕಾವಲು ಕೋಣೆಗಳು ಇವೆ. ಕಾವಲುಗಾರರು ನಮಗೆ ಒಳಪ್ರವೇಶಿಸುವಂತೆ ಬಿಡುವರೊ? “ತನುಮನಗಳಲ್ಲಿ ಸುನ್ನತಿಹೀನನಾದ” ಯಾವ ಪರದೇಶಿಯೂ ಅಲ್ಲಿ ಪ್ರವೇಶಿಸಕೂಡದು ಎಂದು ಯೆಹೋವನು ಯೆಹೆಜ್ಕೇಲನಿಗೆ ಹೇಳುತ್ತಾನೆ. (ಯೆಹೆಜ್ಕೇಲ 40:10; 44:9) ಅದರ ಅರ್ಥವೇನು? ದೇವರ ನಿಯಮಗಳನ್ನು ಪ್ರೀತಿಸಿ ಅವುಗಳಿಗನುಸಾರ ಜೀವಿಸುವವರನ್ನು ಮಾತ್ರ ಯೆಹೋವನು ತನ್ನ ಆರಾಧಕರನ್ನಾಗಿ ಸ್ವೀಕರಿಸುತ್ತಾನೆಂಬುದು ಇದರ ಅರ್ಥ. (ಯೆರೆಮೀಯ 4:4; ರೋಮಾಪುರ 2:29) ಅಂಥವರನ್ನು ಆತನು ತನ್ನ ಆತ್ಮಿಕ ಗುಡಾರಕ್ಕೆ, ತನ್ನ ಆರಾಧನಾ ಆಲಯಕ್ಕೆ ಸ್ವಾಗತಿಸುತ್ತಾನೆ. (ಕೀರ್ತನೆ 15:1-5) 1919ರಲ್ಲಿ ಶುದ್ಧಾರಾಧನೆಯು ಪುನರ್ಸ್ಥಾಪಿಸಲ್ಪಟ್ಟಂದಿನಿಂದ ಹಿಡಿದು, ಯೆಹೋವನ ಐಹಿಕ ಸಂಸ್ಥೆಯು ಆತನ ನೈತಿಕ ನಿಯಮಗಳನ್ನು ಎತ್ತಿಹಿಡಿದು, ಅವುಗಳನ್ನು ಪ್ರಗತಿಪೂರ್ವಕವಾಗಿ ಸ್ಪಷ್ಟೀಕರಿಸಿದೆ. ಯಾರು ಬುದ್ಧಿಪೂರ್ವಕವಾಗಿ ಅವುಗಳಿಗೆ ವಿಧೇಯರಾಗಲು ನಿರಾಕರಿಸುತ್ತಾರೋ, ಅಂಥವರಿಗೆ ಆತನ ಜನರೊಂದಿಗೆ ಸಹವಾಸಿಸಲು ಅನುಮತಿಯಿಲ್ಲ. ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನು ಬಹಿಷ್ಕರಿಸುವ ಬೈಬಲಾಧಾರಿತ ಪದ್ಧತಿಯು, ಇಂದು ನಮ್ಮ ಆರಾಧನೆಯನ್ನು ಶುದ್ಧವೂ ನಿರ್ಮಲವೂ ಆಗಿ ಉಳಿಯುವಂತೆ ಸಾಧ್ಯಮಾಡಿದೆ.—1 ಕೊರಿಂಥ 5:13.
5. (ಎ) ಯೆಹೆಜ್ಕೇಲನ ದರ್ಶನ ಮತ್ತು ಪ್ರಕಟನೆ 7:9-15ರಲ್ಲಿ ದಾಖಲಿಸಲ್ಪಟ್ಟಿರುವ ಯೋಹಾನನ ದರ್ಶನದಲ್ಲಿ ಯಾವ ಹೋಲಿಕೆಗಳಿವೆ? (ಬಿ) ಯೆಹೆಜ್ಕೇಲನ ದರ್ಶನದಲ್ಲಿ, ಹೊರಗಣ ಪ್ರಾಕಾರದಲ್ಲಿ ಆರಾಧಿಸುತ್ತಿರುವ 12 ಕುಲಗಳು ಯಾರನ್ನು ಚಿತ್ರಿಸುತ್ತವೆ?
5 ಪ್ರವೇಶದ್ವಾರವು ಹೊರಗಣ ಪ್ರಾಕಾರಕ್ಕೆ ತೆರೆಯುತ್ತದೆ. ಅಲ್ಲಿ ಜನರು ಯೆಹೋವನನ್ನು ಸ್ತುತಿಸಿ, ಆರಾಧಿಸುತ್ತಾರೆ. ಇದು, ಯೆಹೋವನನ್ನು ‘ಆತನ ಆಲಯದಲ್ಲಿ ಹಗಲಿರುಳು ಸೇವೆ ಮಾಡುವ’ “ಮಹಾ ಸಮೂಹ”ದ ಕುರಿತಾದ ಅಪೊಸ್ತಲ ಯೋಹಾನನ ದರ್ಶನವನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ. ಎರಡೂ ದರ್ಶನಗಳಲ್ಲಿ ಖರ್ಜೂರದ ವೃಕ್ಷಗಳು ಸುವ್ಯಕ್ತವಾಗಿವೆ. ಯೆಹೆಜ್ಕೇಲನ ದರ್ಶನದಲ್ಲಿ ಅವು ಪ್ರವೇಶದ್ವಾರದ ಗೋಡೆಗಳನ್ನು ಅಲಂಕರಿಸುತ್ತವೆ. ಯೋಹಾನನ ದರ್ಶನದಲ್ಲಿ ಆರಾಧಕರು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿರುತ್ತಾರೆ. ಇದು ಯೆಹೋವನನ್ನು ಸ್ತುತಿಸುವುದರಲ್ಲಿ ಮತ್ತು ಯೇಸುವನ್ನು ತಮ್ಮ ರಾಜನನ್ನಾಗಿ ಸ್ವಾಗತಿಸುವುದರಲ್ಲಿ ಅವರಿಗಿರುವ ಸಂತೋಷವನ್ನು ಸಂಕೇತಿಸುತ್ತದೆ. (ಪ್ರಕಟನೆ 7:9-15) ಯೆಹೆಜ್ಕೇಲನ ದರ್ಶನದ ಪೂರ್ವಾಪರವಚನದಲ್ಲಿ, ಇಸ್ರಾಯೇಲಿನ 12 ಕುಲಗಳು “ಬೇರೆ ಕುರಿ”ಗಳನ್ನು ಚಿತ್ರಿಸುತ್ತವೆ. (ಯೋಹಾನ 10:16; ಹೋಲಿಸಿರಿ ಲೂಕ 22:28-30.) ಯೆಹೋವನ ರಾಜ್ಯವನ್ನು ಘೋಷಿಸುವ ಮೂಲಕ ಆತನನ್ನು ಸ್ತುತಿಸುತ್ತಾ ಸಂತೋಷವನ್ನು ಕಂಡುಕೊಳ್ಳುವವರಲ್ಲಿ ನೀವೂ ಒಬ್ಬರಾಗಿದ್ದೀರೋ?
6. ಹೊರಗಣ ಪ್ರಾಕಾರದಲ್ಲಿರುವ ಊಟದ ಕೋಣೆಗಳ ಉದ್ದೇಶವೇನಾಗಿತ್ತು, ಮತ್ತು ಇದು ಬೇರೆ ಕುರಿಗಳಿಗೆ ಯಾವ ಸುಯೋಗದ ಜ್ಞಾಪಕವನ್ನು ಹುಟ್ಟಿಸಬಹುದು?
6 ಹೊರಗಣ ಪ್ರಾಕಾರವನ್ನು ನಾವು ಸಂದರ್ಶಿಸಿದಂತೆ, 30 ಊಟದ ಕೋಣೆಗಳನ್ನು ನಾವು ನೋಡುತ್ತೇವೆ. ಅಲ್ಲಿ ಜನರು ತಮ್ಮ ಸ್ವಇಚ್ಛೆಯಿಂದ ಮಾಡಿದ ಅರ್ಪಣೆಗಳಲ್ಲಿ ಪಾಲುಗಾರರಾಗುತ್ತಿದ್ದಾರೆ. (ಯೆಹೆಜ್ಕೇಲ 40:17) ಇಂದು, ಬೇರೆ ಕುರಿಗಳವರು ಪಶುಯಜ್ಞಗಳನ್ನು ಅರ್ಪಿಸುವುದಿಲ್ಲ. ಆದರೂ ಅವರು ಆತ್ಮಿಕ ಆಲಯಕ್ಕೆ ಬರಿಗೈಯಲ್ಲಿ ಬರುವುದಿಲ್ಲ. (ವಿಮೋಚನಕಾಂಡ 23:15ನ್ನು ಹೋಲಿಸಿರಿ.) ಅಪೊಸ್ತಲ ಪೌಲನು ಬರೆದುದು: “ಆತನ [ಯೇಸುವಿನ] ಮೂಲಕವಾಗಿ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ. ಇದಲ್ಲದೆ ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” (ಇಬ್ರಿಯ 13:15, 16; ಹೋಶೇಯ 14:2) ಇಂಥ ಯಜ್ಞಗಳನ್ನು ಯೆಹೋವನಿಗೆ ಅರ್ಪಿಸುವುದು ಒಂದು ಮಹಾ ಸುಯೋಗವಾಗಿದೆ.—ಜ್ಞಾನೋಕ್ತಿ 3:9, 27.
7. ದೇವಾಲಯದ ಅಳತೆಮಾಡುವಿಕೆಯು ನಮಗೆ ಯಾವುದರ ಆಶ್ವಾಸನೆಯನ್ನು ಕೊಡುತ್ತದೆ?
7 ಈ ದಾರ್ಶನಿಕ ಆಲಯವನ್ನು ದೇವದೂತನೊಬ್ಬನು ಅಳತೆಮಾಡಿದಂತೆ, ಯೆಹೆಜ್ಕೇಲನು ಗಮನವಿಟ್ಟು ನೋಡುತ್ತಾನೆ. (ಯೆಹೆಜ್ಕೇಲ 40:3) ತದ್ರೀತಿಯಲ್ಲಿ, ಅಪೊಸ್ತಲ ಯೋಹಾನನಿಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆ ಮಾಡುವವರನ್ನು ಲೆಕ್ಕಿಸು.” (ಪ್ರಕಟನೆ 11:1) ಈ ಅಳತೆ ಮಾಡುವಿಕೆಯ ಅರ್ಥವೇನು? ಸತ್ಯಾರಾಧನೆಯ ಸಂಬಂಧದಲ್ಲಿ ಯೆಹೋವನ ಉದ್ದೇಶಗಳನ್ನು ಪೂರೈಸುವುದರಿಂದ ಆತನನ್ನು ಯಾವುದೂ ತಡೆಯಲಾರದು ಎಂಬುದಕ್ಕೆ ಇದು ಎರಡೂ ಸಂದರ್ಭಗಳಲ್ಲಿ ಒಂದು ಖಾತರಿ, ಒಂದು ಸಂಕೇತದೋಪಾದಿ ಕಾರ್ಯನಡಿಸಿತೆಂಬುದು ಸ್ಪಷ್ಟ. ತದ್ರೀತಿಯಲ್ಲಿ ಇಂದು, ಶುದ್ಧಾರಾಧನೆಯ ಪುನರ್ಸ್ಥಾಪನೆಯನ್ನು, ಯಾವುದೂ—ಶಕ್ತಿಶಾಲಿ ಸರಕಾರಗಳ ತೀಕ್ಷ್ಣ ವಿರೋಧವು ಸಹ—ತಡೆಗಟ್ಟಲಾರದೆಂಬ ಆಶ್ವಾಸನೆ ನಮಗಿರಸಾಧ್ಯವಿದೆ.
8. ಒಳಗಣ ಪ್ರಾಕಾರದ ಬಾಗಿಲುಗಳನ್ನು ಯಾರು ಪ್ರವೇಶಿಸುತ್ತಾರೆ, ಮತ್ತು ಈ ಬಾಗಿಲುಗಳು ನಮಗೆ ಏನನ್ನು ಜ್ಞಾಪಕಹುಟ್ಟಿಸುತ್ತವೆ?
8 ಹೊರಗಣ ಪ್ರಾಕಾರದಿಂದ ನಾವು ಆಚೆಕಡೆಗೆ ಹೋದರೆ, ಒಳಗಣ ಪ್ರಾಕಾರಕ್ಕೆ ನಡಿಸುವ ಮೂರು ಬಾಗಿಲುಗಳನ್ನು ನಾವು ಕಾಣಬಹುದು. ಒಳಗಣ ಬಾಗಿಲುಗಳು ಸಾಲಾಗಿದ್ದು, ಹೊರಗಣ ಬಾಗಿಲುಗಳಷ್ಟೇ ದೊಡ್ಡದ್ದಾಗಿವೆ. (ಯೆಹೆಜ್ಕೇಲ 40:6, 20, 23, 24, 27) ಕೇವಲ ಯಾಜಕರು ಅಲ್ಲಿ ಪ್ರವೇಶಿಸಬಹುದು. ಒಳಗಣ ಬಾಗಿಲುಗಳು ನಮಗೆ ಜ್ಞಾಪಕಹುಟ್ಟಿಸುವುದೇನಂದರೆ, ಅಭಿಷಿಕ್ತರು ದೈವಿಕ ಮಟ್ಟಗಳಿಗೆ ಮತ್ತು ನಿಯಮಗಳಿಗೆ ಹೊಂದಿಕೊಂಡು ಜೀವಿಸಬೇಕು. ಆದರೆ ಅವೇ ನಿಯಮಗಳು ಮತ್ತು ಮಟ್ಟಗಳು ಎಲ್ಲ ಸತ್ಯ ಕ್ರೈಸ್ತರನ್ನು ಮಾರ್ಗದರ್ಶಿಸುತ್ತವೆ. ಆದರೆ ಆ ಯಾಜಕರ ಕೆಲಸವೇನು ಮತ್ತು ಇಂದು ಅದು ಯಾವ ಅರ್ಥದಲ್ಲಿದೆ?
ಒಂದು ನಂಬಿಗಸ್ತ ಯಾಜಕತ್ವ
9, 10. ಯೆಹೆಜ್ಕೇಲನ ದರ್ಶನದಲ್ಲಿನ ಯಾಜಕ ವರ್ಗದಿಂದ ಮುನ್ಚಿತ್ರಿಸಲ್ಪಟ್ಟಿರುವಂತಹ, “ರಾಜವಂಶಸ್ಥರಾದ ಯಾಜಕರು” ಯಾವ ವಿಧದಲ್ಲಿ ಆತ್ಮಿಕ ಉಪದೇಶವನ್ನು ಒದಗಿಸಿದ್ದಾರೆ?
9 ಕ್ರೈಸ್ತಪೂರ್ವ ಸಮಯಗಳಲ್ಲಿ ಯಾಜಕರು ಆಲಯದಲ್ಲಿ ಕಷ್ಟಪಟ್ಟು ಕೆಲಸಮಾಡಿದರು. ಯಜ್ಞದ ಪಶುಗಳನ್ನು ವಧಿಸುವುದು, ವೇದಿಗಳ ಮೇಲೆ ಅವುಗಳನ್ನು ಅರ್ಪಿಸುವುದು, ಜೊತೆಯಾಜಕರ ಮತ್ತು ಜನರ ಸೇವೆಮಾಡುವುದು, ಶಾರೀರಿಕವಾಗಿ ಪ್ರಯಾಸಕರವಾದ ಕೆಲಸವಾಗಿತ್ತು. ಆದರೆ ಅವರಿಗೆ ಬೇರೆ ಪ್ರಾಮುಖ್ಯ ಕೆಲಸವೂ ಇತ್ತು. ಯೆಹೋವನು ಯಾಜಕರ ಕುರಿತು ಆಜ್ಞಾಪಿಸಿದ್ದು: “ಮೀಸಲಾದದ್ದಕ್ಕೂ ಮೀಸಲಲ್ಲದ್ದಕ್ಕೂ ಭೇದವನ್ನು ನನ್ನ ಜನರಿಗೆ ತೋರಿಸಿ ಶುದ್ಧಾಶುದ್ಧ ವಿವೇಚನೆಯನ್ನು ಅವರಿಗೆ ಬೋಧಿಸಲಿ.”—ಯೆಹೆಜ್ಕೇಲ 44:23; ಮಲಾಕಿಯ 2:7.
10 ‘ರಾಜವಂಶಸ್ಥರಾದ ಯಾಜಕರಾದ’ ಅಭಿಷಿಕ್ತರು, ಒಂದು ಸಮೂಹದೋಪಾದಿ, ಶುದ್ಧಾರಾಧನೆಯ ಸಲುವಾಗಿ ಮಾಡಿರುವ ಶ್ರಮದಾಯಕ ಕೆಲಸ ಮತ್ತು ನಮ್ರ ಸೇವೆಯನ್ನು ನೀವು ಗಣ್ಯಮಾಡುತ್ತೀರೋ? (1 ಪೇತ್ರ 2:9) ಪುರಾತನ ಕಾಲದ ಲೇವಿ ಯಾಜಕರಂತೆ, ಆತ್ಮಿಕ ಬೋಧನೆಯನ್ನು ಕೊಡುವುದರಲ್ಲಿ ಅವರು ನಾಯಕತ್ವವನ್ನು ವಹಿಸುತ್ತಾ, ದೇವರ ದೃಷ್ಟಿಯಲ್ಲಿ ಯಾವುದು ಶುದ್ಧವೂ ಸ್ವೀಕಾರಯೋಗ್ಯವೂ ಆಗಿದೆ ಮತ್ತು ಯಾವುದು ಆಗಿರುವುದಿಲ್ಲವೆಂಬುದನ್ನು ತಿಳಿಯುವಂತೆ ಜನರಿಗೆ ಸಹಾಯಮಾಡಿದ್ದಾರೆ. (ಮತ್ತಾಯ 24:45) ಬೈಬಲಾಧಾರಿತ ಸಾಹಿತ್ಯಗಳ ಮೂಲಕ ಮತ್ತು ಕ್ರೈಸ್ತ ಕೂಟಗಳು ಹಾಗೂ ಅಧಿವೇಶನಗಳ ಮೂಲಕ ಬರುವಂತಹ ಆ ಬೋಧನೆಯು, ಲಕ್ಷಾಂತರ ಜನರಿಗೆ ದೇವರೊಂದಿಗೆ ರಾಜಿಮಾಡಿಕೊಳ್ಳುವಂತೆ ಸಹಾಯಮಾಡಿದೆ.—2 ಕೊರಿಂಥ 5:20.
11. (ಎ) ಯಾಜಕರು ಶುದ್ಧರಾಗಿರುವುದರ ಮಹತ್ವವನ್ನು ಯೆಹೆಜ್ಕೇಲನ ದರ್ಶನವು ಹೇಗೆ ಎತ್ತಿತೋರಿಸುತ್ತದೆ? (ಬಿ) ಕಡೇ ದಿನಗಳಲ್ಲಿ, ಅಭಿಷಿಕ್ತರು ಆತ್ಮಿಕ ಅರ್ಥದಲ್ಲಿ ಶುದ್ಧೀಕರಿಸಲ್ಪಟ್ಟಿರುವುದು ಹೇಗೆ?
11 ಆದರೂ ಇತರರು ಶುದ್ಧರಾಗಿರುವಂತೆ ಕಲಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಯಾಜಕರು ಮಾಡತಕ್ಕದ್ದು. ಅವರು ಸ್ವತಃ ಶುದ್ಧರಾಗಿರಬೇಕು. ಹೀಗಿರುವುದರಿಂದ, ಯೆಹೆಜ್ಕೇಲನು ಇಸ್ರಾಯೇಲಿನ ಯಾಜಕತ್ವದ ಒಂದು ಶುದ್ಧೀಕರಣ ಕಾರ್ಯವಿಧಾನವನ್ನು ಮುಂಗಂಡನು. (ಯೆಹೆಜ್ಕೇಲ 44:10-16) ತದ್ರೀತಿ 1918ರಲ್ಲಿ, ಯೆಹೋವನು ತನ್ನ ಆತ್ಮಿಕಾಲಯದಲ್ಲಿ “ಅಕ್ಕಸಾಲಿಗನಂತೆ” ಕುಳಿತು, ಯಾಜಕಯೋಗ್ಯ ಅಭಿಷಿಕ್ತ ವರ್ಗವನ್ನು ಪರೀಕ್ಷಿಸಿದನೆಂದು ಇತಿಹಾಸವು ತೋರಿಸುತ್ತದೆ. (ಮಲಾಕಿಯ 3:1-5) ಯಾರು ಆತ್ಮಿಕವಾಗಿ ಶುದ್ಧರಾಗಿ ಪರಿಗಣಿಸಲ್ಪಟ್ಟರೋ, ಅಥವಾ ಹಿಂದಣ ಯಾವುದೇ ವಿಗ್ರಹಾರಾಧನೆಯ ವಿಷಯದಲ್ಲಿ ಪಶ್ಚಾತ್ತಾಪಪಟ್ಟರೋ, ಅವರು ಆತನ ಆತ್ಮಿಕ ಆಲಯದಲ್ಲಿನ ಸೇವಾಸುಯೋಗದಲ್ಲಿ ಮುಂದುವರಿಯಲು ಅನುಮತಿಸಲ್ಪಟ್ಟರು. ಆದರೂ ಪ್ರತಿಯೊಬ್ಬರಂತೆ, ವೈಯಕ್ತಿಕ ಅಭಿಷಿಕ್ತರು ಸಹ, ಆತ್ಮಿಕವಾಗಿ ಅಥವಾ ನೈತಿಕವಾಗಿ ಅಶುದ್ಧರಾಗಸಾಧ್ಯವಿದೆ. (ಯೆಹೆಜ್ಕೇಲ 44:22, 25-27) “ಪ್ರಪಂಚದ ದೋಷವು ಹತ್ತದಂತೆ” ಉಳಿಯಲು ಅವರು ಕಷ್ಟಪಡಬೇಕಾಗಿತ್ತು.—ಯಾಕೋಬ 1:27; ಹೋಲಿಸಿ ಮಾರ್ಕ 7:20-23.
12. ಅಭಿಷಿಕ್ತರ ಕೆಲಸವನ್ನು ನಾವು ಏಕೆ ಗಣ್ಯಮಾಡಬೇಕು?
12 ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಬಹುದು: ‘ಅಭಿಷಿಕ್ತರು ತಮ್ಮ ಅನೇಕ ವರ್ಷಗಳ ನಂಬಿಗಸ್ತ ಸೇವೆಯಿಂದ ಇಟ್ಟಿರುವ ಮಾದರಿಯನ್ನು ನಾನು ಗಣ್ಯಮಾಡುತ್ತೇನೋ? ನಾನು ಅವರ ನಂಬಿಕೆಯನ್ನು ಅನುಕರಿಸುತ್ತೇನೋ?’ ಅಭಿಷಿಕ್ತರು ಯಾವಾಗಲೂ ಇಲ್ಲಿ ಭೂಮಿಯಲ್ಲಿ ತಮ್ಮೊಂದಿಗೆ ಇರಲಾರರೆಂಬುದನ್ನು ಮಹಾಸಮೂಹದವರು ಜ್ಞಾಪಕದಲ್ಲಿಡುವುದು ಒಳ್ಳೆಯದು. ಯೆಹೆಜ್ಕೇಲನ ದರ್ಶನದ ಯಾಜಕರ ಕುರಿತು ಯೆಹೋವನಂದದ್ದು: “ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.” (ಯೆಹೆಜ್ಕೇಲ 44:28) ತದ್ರೀತಿಯಲ್ಲಿ, ಅಭಿಷಿಕ್ತರಿಗೆ ಭೂಮಿಯ ಮೇಲೆ ಅನಂತ ಸ್ಥಾನವಿಲ್ಲ. ಅವರಿಗೆ ಒಂದು ಸ್ವರ್ಗೀಯ ಸ್ವಾಸ್ತ್ಯವಿದೆ. ಮತ್ತು ಅವರು ಇನ್ನೂ ಭೂಮಿಯಲ್ಲಿ ಇರುವಾಗ ಅವರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುವುದನ್ನು ಮಹಾಸಮೂಹದವರು ಒಂದು ಸುಯೋಗವಾಗಿ ಪರಿಗಣಿಸುತ್ತಾರೆ.—ಮತ್ತಾಯ 25:34-40; 1 ಪೇತ್ರ 1:3, 4.
ಪ್ರಭು—ಅವನು ಯಾರು?
13, 14. (ಎ) ಪ್ರಭು, ಬೇರೆ ಕುರಿಯವನಾಗಿರಬೇಕು ಏಕೆ? (ಬಿ) ಪ್ರಭು ಯಾರನ್ನು ಚಿತ್ರಿಸುತ್ತಾನೆ?
13 ಈಗ ಕುತೂಹಲ ಕೆರಳಿಸುವ ಒಂದು ಪ್ರಶ್ನೆಯೇಳುತ್ತದೆ. ಹಾಗಾದರೆ ಆ ಪ್ರಭು ಯಾರನ್ನು ಪ್ರತಿನಿಧಿಸುತ್ತಾನೆ? ಅವನ ಕುರಿತಾಗಿ ಒಬ್ಬ ವ್ಯಕ್ತಿಯೋಪಾದಿಯೂ ಒಂದು ಗುಂಪಿನೋಪಾದಿಯೂ ತಿಳಿಸಲ್ಪಟ್ಟಿರುವುದರಿಂದ, ಅವನು ಪುರುಷರ ಒಂದು ವರ್ಗವನ್ನು ಪ್ರತಿನಿಧಿಸುತ್ತಾನೆಂದು ನಾವು ಭಾವಿಸಬಹುದು. (ಯೆಹೆಜ್ಕೇಲ 44:3; 45:8, 9) ಅವರು ಯಾರು? ಖಂಡಿತವಾಗಿಯೂ ಅಭಿಷಿಕ್ತರಲ್ಲ. ದರ್ಶನದಲ್ಲಿ ಅವನು ಯಾಜಕತ್ವದೊಂದಿಗೆ ನಿಕಟವಾಗಿ ಕೆಲಸಮಾಡುತ್ತಾನಾದರೂ, ಅವನು ಅವರಲ್ಲೊಬ್ಬನಲ್ಲ. ಯಾಜಕ ವರ್ಗಕ್ಕಿಂತ ಬೇರೆಯಾಗಿ, ದೇಶದಲ್ಲಿ ಅವನಿಗೆ ಒಂದು ಸ್ವಾಸ್ತ್ಯವು ಕೊಡಲಾಗಿದೆ. ಅವನಿಗೆ ಭೂಮಿಯ ಮೇಲೆ ಒಂದು ಭವಿಷ್ಯವಿದೆ, ಸ್ವರ್ಗದಲ್ಲಲ್ಲ. (ಯೆಹೆಜ್ಕೇಲ 48:21) ಅದಲ್ಲದೆ, ಯೆಹೆಜ್ಕೇಲ 46:10 ಹೇಳುವುದು: “ಜನರು [ಆಲಯದ ಹೊರಗಣ ಪ್ರಾಕಾರವನ್ನು] ಪ್ರವೇಶಿಸುವಾಗ ಪ್ರಭುವು ಅವರ [ಯಾಜಕರಲ್ಲದ ಕುಲಗಳ] ಮಧ್ಯದಲ್ಲಿ ಪ್ರವೇಶಿಸಲಿ. ಅವರು ಹೊರಡುವಾಗ ಅವನೂ ಹೊರಡಲಿ.” ಅವನು ಒಳಗಣ ಪ್ರಾಕಾರವನ್ನು ಪ್ರವೇಶಿಸುವುದಿಲ್ಲ, ಬದಲಿಗೆ ಹೊರಗಣ ಪ್ರಾಕಾರದಲ್ಲಿ ಆರಾಧಿಸುತ್ತಾನೆ, ಹಾಗೂ ಜನರೊಂದಿಗೆ ಆಲಯವನ್ನು ಪ್ರವೇಶಿಸುತ್ತಾನೆ ಮತ್ತು ಹೊರಟುಹೋಗುತ್ತಾನೆ. ನಿಸ್ಸಂದೇಹವಾಗಿಯೂ ಈ ವೈಶಿಷ್ಟ್ಯಗಳು ಆ ಪ್ರಭುವನ್ನು, ಬೇರೆ ಕುರಿಗಳ ಮಹಾ ಸಮೂಹದವರೊಂದಿಗೆ ಇರಿಸುತ್ತವೆ.
14 ಆ ಪ್ರಭುವಿಗೆ ದೇವಜನರ ನಡುವೆ ಒಂದಿಷ್ಟು ಜವಾಬ್ದಾರಿಯಿದೆಯೆಂಬುದು ಸ್ಪಷ್ಟ. ಅವನು ಹೊರಗಣ ಪ್ರಾಕಾರದಲ್ಲಿ ಮೂಡಣ ಹೆಬ್ಬಾಗಿಲ ಕೈಸಾಲೆಯಲ್ಲಿ ಕುಳಿತುಕೊಳ್ಳುತ್ತಾನೆ. (ಯೆಹೆಜ್ಕೇಲ 44:2, 3) ಇದು ಊರ ಹೆಬ್ಬಾಗಿಲಲ್ಲಿ ಕುಳಿತು ತೀರ್ಪನ್ನು ವಿಧಿಸುತ್ತಿದ್ದ ಇಸ್ರಾಯೇಲ್ಯರ ಹಿರಿಯ ಪುರುಷರಿಗೆ ಸರಿಸಮವಾದ, ಒಂದು ಮೇಲ್ವಿಚಾರಕ ಸ್ಥಾನವನ್ನು ಸೂಚಿಸುವುದು. (ರೂತಳು 4:1-12; ಜ್ಞಾನೋಕ್ತಿ 22:22) ಇಂದು ಬೇರೆ ಕುರಿಗಳ ನಡುವೆ ಮೇಲ್ವಿಚಾರಕ ಸ್ಥಾನಗಳಲ್ಲಿರುವವರು ಯಾರು? ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿರುವ, ಐಹಿಕ ನಿರೀಕ್ಷೆಯುಳ್ಳ ಹಿರಿಯರೇ. (ಅ. ಕೃತ್ಯಗಳು 20:28) ಹೀಗೆ ಈ ಪ್ರಭು ವರ್ಗವು, ಮುಂದೆ ಹೊಸ ಲೋಕದಲ್ಲಿ ಆಡಳಿತ ನಿರ್ವಹಣೆಯ ಸ್ಥಾನದಲ್ಲಿ ಸೇವೆಮಾಡುವ ಪ್ರತೀಕ್ಷೆಯೊಂದಿಗೆ, ಈಗ ತರಬೇತಿಯನ್ನು ಹೊಂದುತ್ತಿದೆ.
15. (ಎ) ಯೆಹೆಜ್ಕೇಲನ ದರ್ಶನವು, ಮಹಾ ಸಮೂಹದವರಲ್ಲಿನ ಹಿರಿಯರು ಮತ್ತು ಅಭಿಷಿಕ್ತ ಯಾಜಕ ವರ್ಗದವರ ನಡುವಿನ ಸಂಬಂಧದ ಮೇಲೆ ಹೇಗೆ ಬೆಳಕನ್ನು ಬೀರುತ್ತದೆ? (ಬಿ) ದೇವರ ಭೂಸಂಸ್ಥೆಯಲ್ಲಿ ಅಭಿಷಿಕ್ತ ಹಿರಿಯರು ಯಾವ ನಾಯಕತ್ವವನ್ನು ವಹಿಸುತ್ತಾರೆ?
15 ಆದರೂ, ಮೇಲ್ವಿಚಾರಕ ಸ್ಥಾನಗಳಲ್ಲಿದ್ದುಕೊಂಡು ಸೇವೆನಡಿಸುತ್ತಿರುವ ಮಹಾಸಮೂಹದ ಭಾಗವಾದ ಇಂತಹ ಹಿರಿಯ ಪುರುಷರ ಮತ್ತು ಅಭಿಷಿಕ್ತ ಯಾಜಕಯೋಗ್ಯ ವರ್ಗದವರ ನಡುವೆ ಇರುವ ಸಂಬಂಧವೇನು? ಯೆಹಜ್ಕೇಲನ ದರ್ಶನವು ಸೂಚಿಸುವುದೇನೆಂದರೆ, ಅಭಿಷಿಕ್ತರು ಆತ್ಮಿಕ ಮುಂದಾಳುತ್ವವನ್ನು ವಹಿಸುವಾಗ, ಮಹಾಸಮೂಹದ ಸದಸ್ಯರಾಗಿರುವ ಆ ಹಿರಿಯರಿಗೆ ಒಂದು ಬೆಂಬಲಾತ್ಮಕ ಹಾಗೂ ಅಧೀನತೆಯ ಪಾತ್ರವಿದೆ. ಅದು ಹೇಗೆ? ದರ್ಶನದಲ್ಲಿದ್ದ ಯಾಜಕರಿಗೆ, ಆತ್ಮಿಕ ವಿಷಯಗಳನ್ನು ಜನರಿಗೆ ಬೋಧಿಸುವ ಜವಾಬ್ದಾರಿಯು ಕೊಡಲ್ಪಟ್ಟಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನ್ಯಾಯಾಂಗ ವ್ಯಾಜ್ಯಗಳಲ್ಲಿ ನ್ಯಾಯಾಧೀಶರಾಗಿಯೂ ಕಾರ್ಯನಡಿಸುವಂತೆ ಅವರಿಗೆ ಹೇಳಲಾಗಿತ್ತು. ಅದಲ್ಲದೆ ಲೇವಿಯರು ಆಲಯದ ದ್ವಾರಗಳಲ್ಲಿ ‘ಮೇಲ್ವಿಚಾರಕ ಸ್ಥಾನಗಳಿಗೆ’ ನೇಮಿಸಲ್ಪಟ್ಟಿದ್ದರು. (ಯೆಹೆಜ್ಕೇಲ 44:11, 23, 24, NW) ಸ್ಪಷ್ಟವಾಗಿ, ಪ್ರಭುವು ಯಾಜಕರ ಆತ್ಮಿಕ ಸೇವೆಗಳಿಗೆ ಮತ್ತು ಮುಂದಾಳುತ್ವಕ್ಕೆ ಅಧೀನವಾಗಬೇಕಿತ್ತು. ಆದುದರಿಂದ ಆಧುನಿಕ ಕಾಲದಲ್ಲಿ ಅಭಿಷಿಕ್ತರು ಶುದ್ಧಾರಾಧನೆಯಲ್ಲಿ ನಾಯಕತ್ವವನ್ನು ವಹಿಸಿರುವುದು ತಕ್ಕದ್ದಾದ ವಿಷಯವೇ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರು ಅವರೊಳಗಿಂದಲೇ ಆರಿಸಲ್ಪಟ್ಟಿದ್ದಾರೆ. ಅಂತಹ ನಂಬಿಗಸ್ತ ಅಭಿಷಿಕ್ತ ಹಿರಿಯರು ಅಭಿವೃದ್ಧಿಯಾಗುತ್ತಿರುವ ಪ್ರಭು ವರ್ಗವನ್ನು ದಶಕಗಳಿಂದ ತರಬೇತುಗೊಳಿಸಿದ್ದಾರೆ. ಬರಲಿರುವ ದೇವರ ಹೊಸ ಲೋಕದಲ್ಲಿ ಅವರಿಗೆ ಪೂರ್ಣ ಪ್ರಮಾಣದ ಅಧಿಕಾರವು ವಹಿಸಲ್ಪಡುವ ದಿನಕ್ಕಾಗಿ ಭಾವೀ ಸದಸ್ಯರ ಈ ವರ್ಗವನ್ನು ಅಭಿಷಿಕ್ತರು ತಯಾರಿಸುತ್ತಿದ್ದಾರೆ.
16. ಯೆಶಾಯ 32:1, 2ಕ್ಕನುಸಾರ, ಎಲ್ಲ ಹಿರಿಯರು ಹೇಗೆ ವರ್ತಿಸಬೇಕು?
16 ಪ್ರಭು ವರ್ಗದೋಪಾದಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲು ನಿಂತಿರುವ ಈ ಭಾವೀ ಸದಸ್ಯರಾದರೋ ಯಾವ ರೀತಿಯ ಮೇಲ್ವಿಚಾರಕರಾಗಿದ್ದಾರೆ? ಯೆಶಾಯ 32:1, 2ರಲ್ಲಿ ಕಂಡುಬರುವ ಪ್ರವಾದನೆಯು ಹೇಳುವುದು: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು [“ರಾಜಪುತ್ರರು,” NW] ನ್ಯಾಯದಿಂದ ದೊರೆತನ ಮಾಡುವರು. ಮತ್ತು ಒಬ್ಬ ಪುರುಷನು [“ಪ್ರತಿಯೊಬ್ಬರು,” NW] ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” ಅಭಿಷಿಕ್ತರಾದ ಮತ್ತು ಬೇರೆ ಕುರಿಗಳವರಾದ ಕ್ರೈಸ್ತ ಹಿರಿಯರು ಹಿಂಸೆ ಮತ್ತು ನಿರಾಶೆಯಂತಹ “ಅತಿವೃಷ್ಟಿ”ಯಿಂದ ತಮ್ಮ ಮಂದೆಯನ್ನು ರಕ್ಷಿಸಲು ಕೆಲಸಮಾಡುತ್ತಾ ಇರುವಾಗ ಈ ಪ್ರವಾದನೆಯು ಇಂದು ನೆರವೇರಿಕೆಯನ್ನು ಪಡೆಯುತ್ತಾ ಇದೆ.
17. ಕ್ರೈಸ್ತ ಕುರುಬರು ತಮ್ಮನ್ನು ಹೇಗೆ ವೀಕ್ಷಿಸಬೇಕು, ಮತ್ತು ಹಿಂಡು ಅವರನ್ನು ಹೇಗೆ ವೀಕ್ಷಿಸಬೇಕು?
17 ಹೀಬ್ರುವಿನಲ್ಲಿ ಸರಿಸಮ ಅರ್ಥವುಳ್ಳ “ರಾಜಪುತ್ರ” ಮತ್ತು “ಪ್ರಭು” ಎಂಬ ಶಬ್ದಗಳು, ಮನುಷ್ಯರನ್ನು ಮಹಿಮೆಪಡಿಸಲು ರಚಿಸಲಾದ ಪದವಿಗಳಾಗಿ ಬಳಸಲ್ಪಡುವುದಿಲ್ಲ. ಬದಲಿಗೆ ದೇವರ ಕುರಿಗಳನ್ನು ಪರಾಮರಿಕೆಮಾಡುವುದರಲ್ಲಿ, ಈ ಮನುಷ್ಯರು ಹೊರುವ ಜವಾಬ್ದಾರಿಯನ್ನು ಅವು ವರ್ಣಿಸುತ್ತವೆ. ಯೆಹೋವನು ಕಟ್ಟುನಿಟ್ಟಾಗಿ ಎಚ್ಚರಿಸುವುದು: “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಸಾಕು; ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ ನೀತಿನ್ಯಾಯಗಳನ್ನು ನಡಿಸಿರಿ.” (ಯೆಹೆಜ್ಕೇಲ 45:9) ಇಂದಿನ ಹಿರಿಯರೆಲ್ಲರು ಅಂತಹ ಬುದ್ಧಿವಾದವನ್ನು ಮನಸ್ಸಿಗೆ ತೆಗೆದುಕೊಳ್ಳುವುದು ಒಳ್ಳೆಯದು. (1 ಪೇತ್ರ 5:2, 3) ಅದಕ್ಕೆ ಪ್ರತಿಯಾಗಿ ಮಂದೆಯು, ಈ ಕುರುಬರನ್ನು ಯೇಸುವು “ಮನುಷ್ಯರಲ್ಲಿ ದಾನಗಳು” ಆಗಿ ಒದಗಿಸಿದ್ದಾನೆಂಬುದನ್ನು ಅಂಗೀಕರಿಸುತ್ತದೆ. (ಎಫೆಸ 4:8) ದೇವರ ಪ್ರೇರಿತ ವಾಕ್ಯದಲ್ಲಿ ಅವರಿಗಿರಬೇಕಾದ ಯೋಗ್ಯತೆಗಳು ತಿಳಿಸಲ್ಪಟ್ಟಿವೆ. (1 ತಿಮೊಥೆಯ 3:1-7; ತೀತ 1:5-9) ಆದುದರಿಂದ ಕ್ರೈಸ್ತರು ಹಿರಿಯರ ಮಾರ್ಗದರ್ಶನವನ್ನು ಪಾಲಿಸುತ್ತಾರೆ.—ಇಬ್ರಿಯ 13:7.
18. ಭವಿಷ್ಯತ್ತಿನ ಪ್ರಭು ವರ್ಗಕ್ಕೆ ಈಗ ಇರುವ ಕೆಲವೊಂದು ಜವಾಬ್ದಾರಿಗಳು ಯಾವುವು, ಮತ್ತು ಭವಿಷ್ಯತ್ತಿನಲ್ಲಿ ಅದರ ಜವಾಬ್ದಾರಿ ಏನಾಗಿರುವುದು?
18 ಬೈಬಲಿನ ಸಮಯದಲ್ಲಿ ಕೆಲವು ಪ್ರಭುಗಳಿಗೆ ಹೆಚ್ಚು ಅಧಿಕಾರವಿತ್ತು, ಇತರರಿಗೆ ಕಡಿಮೆ ಅಧಿಕಾರವಿತ್ತು. ಇಂದು ಮಹಾಸಮೂಹದ ಹಿರಿಯರಿಗೆ ಬೇರೆ ಬೇರೆ ರೀತಿಯ ಜವಾಬ್ದಾರಿಗಳಿವೆ. ಕೆಲವರು ಒಂದು ಸಭೆಯಲ್ಲಿ ಸೇವೆಮಾಡುತ್ತಾರೆ; ಇತರರು ಸಂಚರಣ ಮೇಲ್ವಿಚಾರಕರಾಗಿ ಅನೇಕ ಸಭೆಗಳಲ್ಲಿ ಸೇವೆಮಾಡುತ್ತಾರೆ; ಇನ್ನಿತರರು ಬ್ರಾಂಚ್ ಕಮಿಟಿಯ ಸದಸ್ಯರಾಗಿ ಇಡೀ ದೇಶಗಳ ಸೇವೆಮಾಡುತ್ತಾರೆ. ಮತ್ತಿತರರು ಆಡಳಿತ ಮಂಡಲಿಯ ವಿವಿಧ ಕಮಿಟಿಗಳಿಗೆ ನೇರವಾಗಿ ನೆರವನ್ನೀಯುತ್ತಾರೆ. ಹೊಸ ಲೋಕದಲ್ಲಿ ಯೇಸುವು “ದೇಶದಲ್ಲೆಲ್ಲಾ ಅಧಿಕಾರಿಗಳನ್ನು [“ರಾಜಪುತ್ರರನ್ನು,” NW]” ನೇಮಿಸುವನು. ಅವರು ಭೂಮಿಯಲ್ಲಿ ಯೆಹೋವನ ಆರಾಧಕರ ನಡುವೆ ನಾಯಕತ್ವವನ್ನು ವಹಿಸುವರು. (ಕೀರ್ತನೆ 45:16) ಇವರಲ್ಲಿ ಅನೇಕರನ್ನು ಯೇಸುವು ಇಂದಿನ ನಂಬಿಗಸ್ತ ಹಿರಿಯರೊಳಗಿಂದ ಆರಿಸಿತೆಗೆಯುವನು ಎಂಬುದರಲ್ಲಿ ಸಂದೇಹವಿಲ್ಲ. ಈ ಪುರುಷರು ಈಗ ತಮ್ಮನ್ನು ಸಿದ್ಧಪಡಿಸಿ ತೋರಿಸುತ್ತಾರಾದುದರಿಂದ, ಭವಿಷ್ಯತ್ತಿನಲ್ಲಿ ಪ್ರಭುವರ್ಗದ ಪಾತ್ರವನ್ನು ಹೊಸ ಲೋಕದಲ್ಲಿ ಅವನು ಪ್ರಕಟಪಡಿಸುವಾಗ ಅನೇಕರಿಗೆ ಇನ್ನೂ ಹೆಚ್ಚಿನ ಸುಯೋಗಗಳನ್ನು ವಹಿಸಿಕೊಡಲು ಅವನು ನಿರ್ಣಯಿಸುವನು.
ಇಂದು ದೇವರ ಜನರ ದೇಶ
19. ಯೆಹೆಜ್ಕೇಲನ ದರ್ಶನದ ದೇಶವು ಏನನ್ನು ಪ್ರತಿನಿಧಿಸುತ್ತದೆ?
19 ಯೆಹೆಜ್ಕೇಲನ ದರ್ಶನವು ಇಸ್ರಾಯೇಲಿನ ಪುನರ್ಸ್ಥಾಪಿತ ದೇಶವನ್ನು ಸಹ ವರ್ಣಿಸುತ್ತದೆ. ದರ್ಶನದ ಈ ಭಾಗವು ಏನನ್ನು ಪ್ರತಿನಿಧಿಸುತ್ತದೆ? ಇತರ ಪುನರ್ಸ್ಥಾಪನಾ ಪ್ರವಾದನೆಗಳು ಮುಂತಿಳಿಸಿದ್ದೇನಂದರೆ ಆ ದೇಶವು, ಅಂದರೆ ಇಸ್ರಾಯೇಲ್, ಏದೆನ್ ಪ್ರಮೋದವನದಂತಿರುವುದು. (ಯೆಹೆಜ್ಕೇಲ 36:34, 35) ಇಂದು ನಾವು ಒಂದು ಪುನರ್ಸ್ಥಾಪಿತ “ದೇಶ”ವನ್ನು ಅನುಭವಿಸುತ್ತೇವೆ ಮತ್ತು ಅದು ಸಹ ಒಂದರ್ಥದಲ್ಲಿ ಏದೆನಿನಂತೆ ಇದೆ. ಅಂತೆಯೇ, ನಮ್ಮ ಆತ್ಮಿಕ ಪ್ರಮೋದವನದ ಕುರಿತು ನಾವು ಅನೇಕವೇಳೆ ಮಾತನಾಡುತ್ತೇವೆ. ಕಾವಲಿನಬರುರುಜು ಪತ್ರಿಕೆಯು ನಮ್ಮ “ದೇಶ”ವನ್ನು, ದೇವರಾದುಕೊಂಡ ಜನರ “ಚಟುವಟಿಕೆಯ ಕ್ಷೇತ್ರ”ವಾಗಿ ಅರ್ಥನಿರೂಪಿಸಿದೆ.b ಯೆಹೋವನ ಸೇವಕನೊಬ್ಬನು ಎಲ್ಲಿಯೇ ಇರಲಿ, ಅವನು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುವ ಮೂಲಕ ಸತ್ಯಾರಾಧನೆಯನ್ನು ಎತ್ತಿಹಿಡಿಯಲು ಪ್ರಯತ್ನಿಸುವಷ್ಟು ಸಮಯ, ಆ ಪುನರ್ಸ್ಥಾಪಿತ ದೇಶದಲ್ಲಿ ಇರುತ್ತಾನೆ.—1 ಪೇತ್ರ 2:21.
20. ಯೆಹೆಜ್ಕೇಲನ ದರ್ಶನದಲ್ಲಿನ “ಪವಿತ್ರ ಕಾಣಿಕೆಯ” ವಿಷಯದಿಂದ ನಾವು ಯಾವ ಮೂಲತತ್ವವನ್ನು ಕಲಿಯಬಹುದು, ಮತ್ತು ಈ ಮೂಲತತ್ವವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು?
20 “ಪವಿತ್ರ ಕಾಣಿಕೆ” ಎಂದು ಕರೆಯಲ್ಪಟ್ಟ ಭೂಭಾಗದ ಕುರಿತೇನು? ಅದು ಯಾಜಕತ್ವ ಮತ್ತು ನಗರದ ಪೋಷಣೆಗಾಗಿ ಜನರ ಕಾಣಿಕೆಯಾಗಿತ್ತು. ತದ್ರೀತಿಯಲ್ಲಿ, ‘ದೇಶದ ಜನರೆಲ್ಲರೂ’ ಪ್ರಭುವಿಗಾಗಿ ಭೂಮಿಯ ಒಂದು ಭಾಗವನ್ನು ಕಾಣಿಕೆಯಾಗಿ ಕೊಡಬೇಕಾಗಿತ್ತು. ಇಂದು ಅದು ಯಾವ ಅರ್ಥದಲ್ಲಿದೆ? ನಿಶ್ಚಯವಾಗಿಯೂ, ದೇವಜನರು ವೇತನ ಪಡೆಯುವ ವೈದಿಕ ವರ್ಗದ ವೆಚ್ಚವನ್ನು ಹೊರಬೇಕೆಂದು ಇದರ ಅರ್ಥವಲ್ಲ. (2 ಥೆಸಲೊನೀಕ 3:8) ಬದಲಿಗೆ ಇಂದು ಹಿರಿಯರಿಗೆ ಕೊಡಲ್ಪಡುವ ಬೆಂಬಲವು ಪ್ರಾಮುಖ್ಯವಾಗಿ ಆತ್ಮಿಕವಾದುದು. ಮಾಡಲಿರುವ ಕೆಲಸದಲ್ಲಿ ನೆರವಾಗುವುದು ಮತ್ತು ಸಹಕಾರದ ಹಾಗೂ ಅಧೀನತೆಯ ಮನೋಭಾವವನ್ನು ತೋರಿಸುವುದು ಅದರಲ್ಲಿ ಒಳಗೂಡಿದೆ. ಆದರೂ, ಯೆಹೆಜ್ಕೇಲನ ದಿನಗಳಂತೆಯೇ, ಈ ಕಾಣಿಕೆಯು ‘ಯೆಹೋವನಿಗೆ’ ಮಾಡಲ್ಪಡುತ್ತದೆ, ಯಾವ ಮಾನವನಿಗಾಗಿಯೂ ಅಲ್ಲ.—ಯೆಹೆಜ್ಕೇಲ 45:1, 7, 16, NW.
21. ಯೆಹೆಜ್ಕೇಲನ ದರ್ಶನದಲ್ಲಿನ ದೇಶದ ವಿಭಾಗಿಸುವಿಕೆಯಿಂದ ನಾವೇನನ್ನು ಕಲಿಯಬಹುದು?
21 ಈ ಪುನರ್ಸ್ಥಾಪಿತ ದೇಶದಲ್ಲಿ ನೇಮಿತವಾದ ಸ್ಥಳವಿರುವವರು, ಪ್ರಭು ಮತ್ತು ಯಾಜಕವರ್ಗದವರು ಮಾತ್ರವಲ್ಲ. 12 ಕುಲಗಳ ಪ್ರತಿಯೊಂದು ಕುಲಕ್ಕೆ ಒಂದು ಸುರಕ್ಷಿತ ಸ್ವಾಸ್ತ್ಯವು ಇದೆಯೆಂದು ದೇಶದ ವಿಭಾಗಿಸುವಿಕೆಯು ತೋರಿಸುತ್ತದೆ. (ಯೆಹೆಜ್ಕೇಲ 47:13, 22, 23) ಹೀಗೆ ಮಹಾ ಸಮೂಹದವರಿಗೆ ಇಂದು ಆತ್ಮಿಕ ಪ್ರಮೋದವನದಲ್ಲಿ ಒಂದು ಸ್ಥಾನವಿದೆ ಮಾತ್ರವಲ್ಲ, ದೇವರ ರಾಜ್ಯದ ಐಹಿಕ ಕ್ಷೇತ್ರದಲ್ಲಿ ಅವರು ಒಂದು ಸ್ಥಾನವನ್ನು ಬಾಧ್ಯತೆಯಾಗಿ ಪಡೆಯುವಾಗಲೂ, ದೇಶದ ನೇಮಕವನ್ನು ಪಡೆದುಕೊಳ್ಳುವರು.
22. (ಎ) ಯೆಹೆಜ್ಕೇಲನ ದರ್ಶನದಲ್ಲಿನ ನಗರವು ಏನನ್ನು ಪ್ರತಿನಿಧಿಸುತ್ತದೆ? (ಬಿ) ನಗರಕ್ಕೆ ಎಲ್ಲ ಪಕ್ಕಗಳಲ್ಲಿಯೂ ಬಾಗಿಲುಗಳಿರುವ ಸಂಗತಿಯಿಂದ ನಾವೇನನ್ನು ಕಲಿಯಬಹುದು?
22 ಕೊನೆಗೆ ದರ್ಶನದಲ್ಲಿರುವ ರಾಜಧಾನಿಯು [“ನಗರವು,” NW] ಏನನ್ನು ಪ್ರತಿನಿಧಿಸುತ್ತದೆ? ಅದೊಂದು ಸ್ವರ್ಗೀಯ ನಗರವಲ್ಲ, ಯಾಕಂದರೆ ಅದು ‘ಅಪಕೀರ್ತಿಯ’ (ಅಪವಿತ್ರ) ದೇಶದ ನಡುವೆ ನೆಲೆಸಿದೆ. (ಯೆಹೆಜ್ಕೇಲ 48:15-17) ಆದುದರಿಂದ ಅದು ಐಹಿಕವಾದ ಒಂದು ವಿಷಯವಾಗಿರಲೇಬೇಕು. ಒಂದು ನಗರವೆಂದರೇನು? ಜನರು ಒಂದು ಗುಂಪಾಗಿ ಜೊತೆಗೂಡಿ ಬಂದು, ಒಂದು ಕಟ್ಟಡರೂಪದ ಸಂಘಟನೆ ಮಾಡುವ ವಿಚಾರವನ್ನು ಅದು ತಿಳಿಯಪಡಿಸುವುದಿಲ್ಲವೇ? ಹೌದು. ಆದುದರಿಂದ, ನಗರವು ನೀತಿಯುತ ಐಹಿಕ ಸಮಾಜದಲ್ಲಿ ಕೂಡಿರುವ ಎಲ್ಲರಿಗೆ ಪ್ರಯೋಜನವನ್ನು ತರುವ ಐಹಿಕ ಆಡಳಿತವನ್ನು ಚಿತ್ರಿಸುತ್ತದೆಂದು ತೋರುತ್ತದೆ. ಬರಲಿರುವ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ಅದು ಪೂರ್ಣ ರೀತಿಯಲ್ಲಿ ಕಾರ್ಯಾಚರಣೆ ನಡಿಸುವುದು. (2 ಪೇತ್ರ 3:13) ಪ್ರತಿಯೊಂದು ಕುಲಕ್ಕೆ ಒಂದರಂತೆ, ಎಲ್ಲ ಬದಿಗಳಲ್ಲಿರುವ ನಗರದ ಬಾಗಿಲುಗಳು, ಮುಚ್ಚುಮರೆಯಿಲ್ಲದ ಸ್ಥಿತಿಯನ್ನು ಚಿತ್ರಿಸುತ್ತವೆ. ಇಂದು ದೇವರ ಜನರು, ಯಾವುದೊ ಗುಪ್ತ, ರಹಸ್ಯಾತ್ಮಕ ಆಡಳಿತದ ಕೆಳಗಿರುವುದಿಲ್ಲ. ಜವಾಬ್ದಾರಿಯುಳ್ಳ ಸಹೋದರರು ಸ್ನೇಹಶೀಲರಾಗಿರಬೇಕು. ಅವರನ್ನು ಮಾರ್ಗದರ್ಶಿಸುವ ಮೂಲತತ್ವಗಳು ಎಲ್ಲರಿಗೆ ತಿಳಿದಿವೆ. ಎಲ್ಲ ಕುಲಗಳ ಜನರು, ನಗರವನ್ನು ಬೆಂಬಲಿಸುವ ದೇಶವನ್ನು ವ್ಯವಸಾಯ ಮಾಡುತ್ತಿರುವ ವಾಸ್ತವಾಂಶವು, ಲೋಕವ್ಯಾಪಕವಾಗಿ ದೇವರ ಜನರಿಗಾಗಿ ಮಾಡಲ್ಪಟ್ಟಿರುವ ಆಡಳಿತ ಏರ್ಪಾಡುಗಳನ್ನು ಬೇರೆ ಕುರಿಗಳು ಪ್ರಾಪಂಚಿಕ ರೀತಿಯಲ್ಲೂ ಬೆಂಬಲಿಸುತ್ತವೆ ಎಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತದೆ.—ಯೆಹೆಜ್ಕೇಲ 48:19, 30-34.
23. ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?
23 ಆದರೆ ಆಲಯದ ಪವಿತ್ರಸ್ಥಾನದಿಂದ ಪ್ರವಹಿಸುವ ನದಿಯ ಕುರಿತೇನು? ಅದು ಇಂದು ಏನನ್ನು ಪ್ರತಿನಿಧಿಸುತ್ತದೆ ಮತ್ತು ಭವಿಷ್ಯತ್ತಿನ ಕುರಿತು ಏನನ್ನು ಸೂಚಿಸುತ್ತದೆಂಬುದು ಈ ಲೇಖನಮಾಲೆಯ ಮೂರನೆಯ ಮತ್ತು ಕೊನೆಯ ಲೇಖನದ ವಿಷಯವಾಗಿರುವುದು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ, 64ನೆಯ ಪುಟ, 22ನೆಯ ಪ್ಯಾರಗ್ರಾಫನ್ನು ನೋಡಿರಿ.
b 1995ರ, ಜುಲೈ 1 ಕಾವಲಿನಬುರುಜು ಪತ್ರಿಕೆಯ 20ನೆಯ ಪುಟವನ್ನು ನೋಡಿರಿ.
ಪುನರ್ವಿಮರ್ಶೆಗಾಗಿ ವಿಷಯಗಳು
◻ ಯೆಹೆಜ್ಕೇಲನ ದರ್ಶನದಲ್ಲಿನ ದೇವಾಲಯವು ಏನನ್ನು ಚಿತ್ರಿಸುತ್ತದೆ?
◻ ದೇವಾಲಯದಲ್ಲಿ ಸೇವೆಸಲ್ಲಿಸುತ್ತಿರುವ ಯಾಜಕರು ಯಾರನ್ನು ಚಿತ್ರಿಸುತ್ತಾರೆ?
◻ ಪ್ರಭು ವರ್ಗವು ಏನಾಗಿದೆ, ಮತ್ತು ಅದರ ಜವಾಬ್ದಾರಿಗಳಲ್ಲಿ ಕೆಲವೊಂದು ಯಾವುವು?
◻ ಯೆಹೆಜ್ಕೇಲನ ದರ್ಶನದಲ್ಲಿನ ದೇಶವು ಏನಾಗಿದೆ, ಮತ್ತು ಅದು ಯಾವ ಅರ್ಥದಲ್ಲಿ 12 ಕುಲಗಳಿಗೆ ಹಂಚಲ್ಪಟ್ಟಿದೆ?
◻ ನಗರವು ಏನನ್ನು ಚಿತ್ರಿಸುತ್ತದೆ?
[Diagram/Map on page 15]
(For fully formatted text, see publication)
ಯೆಹೆಜ್ಕೇಲನ ದರ್ಶನದಲ್ಲಿ ಚಿತ್ರಿಸಲ್ಪಟ್ಟಿರುವ ದೇಶದ ಪಾಲುಮಾಡುವಿಕೆ
ಹನ್ನೆರಡು ಕುಲಗಳು
ಮಹಾ ಸಾಗರ
ಗಲಿಲಾಯ ಸಮುದ್ರ
ಯೊರ್ದಾನ್ ನದಿ
ಲವಣ ಸಮುದ್ರ
ದಾನ್
ಆಶೇರ್
ನಫ್ತಾಲಿ
ಮನಸ್ಸೆ
ಎಫ್ರಾಯೀಮ್
ರೂಬೇನ್
ಯೆಹೂದ
ಪ್ರಭು
ಬೆನ್ಯಾಮೀನ್
ಸಿಮೆಯೋನ್
ಇಸ್ಸಾಕಾರ್
ಜೆಬುಲೂನ್
ಗಾದ್
[Diagram]
ಪವಿತ್ರ ಕಾಣಿಕೆಯ ವಿಸ್ತರಣ
ಎ. “ಯೆಹೋವನ ನೆಲೆ” (ಯೆಹೋವ ಶಾಮ್ಮಾ); ಬಿ. ನಗರದ ಫಲಪ್ರದ ದೇಶ
ಲೇವಿಯರ ಭಾಗ
ಯೆಹೋವನ ಪವಿತ್ರಾಲಯ
ಯಾಜಕರ ಭಾಗ
ಬಿ ಎ ಬಿ