ಪುನಃಸ್ಥಾಪಿಸಲ್ಪಟ್ಟ ಪ್ರಮೋದವನ ದೇವರಿಗೆ ಮಹಿಮೆ ತರುತ್ತದೆ
“ನನ್ನ ಪಾದ ಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.”—ಯೆಶಾಯ 60:13.
1, 2. ತನ್ನ ಪ್ರವಾದಿ ಯೆಶಾಯನ ಮೂಲಕ ದೇವರು ಭೂಮಿಯ ಕುರಿತು ಏನು ಮುಂತಿಳಿಸಿದನು? (ಬಿ) ಭವಿಷ್ಯತ್ತಿನಲ್ಲಿ ಒಂದು ಸಾವಿರ ವರ್ಷ ದೂರ ನೋಡುವಲ್ಲಿ ನಾವೇನು ನೋಡುತ್ತೇವೆ?
ಯೆಹೋವನು ಭೂಮಿಯನ್ನು ತನ್ನ ಪಾದಗಳ ಕೆಳಗೆ ಒಂದು ಗ್ರಹವಾಗಿ, ತನ್ನ ಸಾಂಕೇತಿಕ ಪಾದಪೀಠವಾಗಿ ನಿರ್ಮಿಸಿದನು. ತನ್ನ ಪ್ರವಾದಿ ಯೆಶಾಯನ ಮೂಲಕ ತಾನು ‘ತನ್ನ ಪಾದಸನ್ನಿಧಿಯ ಸ್ಥಳವನ್ನು ವೈಭವಪಡಿಸುವೆನು’ ಎಂದು ದೇವರು ನುಡಿದನು. (ಯೆಶಾಯ 60:13) ಪ್ರೇರಿತ ಬೈಬಲಿನ ನೆರವಿಂದ ನಾವು, ಶಕಿಭ್ತರಿತವಾದ ದೂರದರ್ಶಕದಿಂದಲೋ ಎಂಬಂತೆ, ಮಾನವ ಭವಿಷ್ಯತಿನ್ತೊಳಗೆ ಒಂದು ಸಾವಿರ ವರ್ಷದಷ್ಟು ದೂರ ನೋಡಬಲ್ಲೆವು. ಎಂತಹ ಆನಂದಪರವಶಗೊಳಿಸುವ ದೃಶ್ಯ ನಮ್ಮ ನೇತ್ರಗಳನ್ನು ಎದುರುಗೊಳ್ಳುತ್ತದೆ! ಭೂಮಿಯು ವಿಶ್ವವೆಲ್ಲಾದರ ಮಹಾ ತೋಟಗಾರನು ಉಂಟುಮಾಡಿದ ನಿರ್ದುಷ್ಟ ಸೌಂದರ್ಯದಿಂದ ಹೊಳೆಯುತ್ತದೆ. ಮಾನವ ಸಂತತಿಗಾಗಿ ಪ್ರಮೋದವನವು ಭೂವ್ಯಾಪಕವಾಗಿ ಪುನ:ಸ್ಥಾಪಿಸಲ್ಪಟ್ಟಿರುವುದು!
2. ಹೌದು, ಮನುಷ್ಯನ ಅಸ್ತಿತ್ವವನ್ನು ಪ್ರಮೋದವನದಲ್ಲಿ ಆರಂಭಿಸಿದ ದೈವಿಕ ಪರಮ ಶ್ರೇಷ್ಟನಿಗೆ ಮಾನವನ ಸಂತೋಷಾತಿಶಯವೇ ಮನಸ್ಸಿನಲ್ಲಿದೆ. ಮಾನವರಿಗೆ ಇಂತಹ ಸೃಷ್ಟಿಕರ್ತನು, ಯಾರನ್ನು “ಪ್ರೀತಿ ಸ್ವರೂಪನು” ಎಂದು ಕರೆಯುವದು ಅತಿಶಯೋಕ್ತಿಯಲ್ಲವೋ ಅಂಥ ಸೃಷ್ಟಿಕರ್ತನಿರುವದು ಎಷ್ಟು ಸಂತೋಷದ ವಿಷಯ! (1 ಯೋಹಾನ 4:8, 16) ಪುನ:ಸ್ಥಾಪಿಸಲ್ಪಟ್ಟ ಪ್ರಮೋದವನದಲ್ಲಿ ಪಕ್ವತೆಯುಳ್ಳ ಪುರುಷರೂ ಸ್ತ್ರೀಯರೂ ಕುಂದಿಲ್ಲದ ಮಾನವ ಪರಿಪೂರ್ಣತೆಯಲ್ಲಿ ಪ್ರೀತಿಸುವ ಸಹೋದರ, ಸಹೋದರಿಯರೋಪಾದಿ ಜೀವಿಸುವರು. (ಯೆಶಾಯ 9:6) ಪ್ರೀತಿಯಿಂದ ಪ್ರಚೋದಿಸಲ್ಪಡುವ ಅವರು ಭೂಮ್ಯಾಕಾಶಗಳ ಮಹಿಮಾಭರಿತ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಪರಿಪೂರ್ಣ ಅಧೀನತೆಯಲ್ಲಿರುವರು.
3, 4. (ಎ)ಆಕಾಶ ಮತ್ತು ಭೂಮಿ ಯಾವ ವಿಧದಲ್ಲಿ ತಮ್ಮೊಳಗೆ ಪರಸ್ಪರ ಅನುರೂಪವಾಗಿರುವುವು? (ಬಿ) ಪ್ರಮೋದವನವು ಭೂಮಿಗೆ ಪುನ:ಸ್ಥಾಪಿಸಲ್ಪಡುವಾಗ ದೇವದೂತರು ಹೇಗೆ ಪ್ರತಿವರ್ತನೆ ತೋರಿಸುವರು?
3. ಸಾವಿರಾರು ವರ್ಷಗಳ ಹಿಂದೆ ತನ್ನ ಕ್ಷೇತ್ರದ ದೈವಪ್ರೇರಿತ ವರ್ಣನೆಯಲ್ಲಿ ತನ್ನ ಆಯ್ಕೆ ಜನರಿಗೆ ದೇವರು, “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ” ಎಂಬ ಮನತಟ್ಟುವ ಮಾತುಗಳನ್ನಾಡಿದನು. (ಯೆಶಾಯ 66:1) ಆತನ “ಪಾದಪೀಠ” ವಾಗಿರುವ ಪ್ರಮೋದವನದ ಅಪ್ಪಟ ಸೌಂದರ್ಯವು ಅದೃಶ್ಯ ಆಕಾಶಗಳಲ್ಲಿರುವ ಆತನ ಸಿಂಹಾಸನದ ಮಹಿಮೆಗೆ ಅನುರೂಪವಾಗಿರಬೇಕು.
4. ಭೂಮಿಯ ಸೃಷ್ಟಿಯ ಸಮಯದಲ್ಲಿ ದಿವ್ಯ ಕ್ಷೇತ್ರದಲ್ಲಿ ದೇವರ ಸಿಂಹಾಸನ ಸೇವೆ ಮಾಡುತ್ತಿದ್ದವರು ಕೆಳಗೆ ಭೂಮಿಯ ದೃಶ್ಯವನ್ನು ಅವಲೋಕಿಸಿದರು. ಅವರ ಕಣ್ಣುಗಳು ಅದರ ಘನತೆಯ ಕಾಂತಿಯನ್ನು ನೋಡಿದಾಗ ಅವರೆಷ್ಟು ಆನಂದಪರವಶವಾಗಿದ್ದಿರಬೇಕು! ಅವರು ಸ್ವತ: ಪ್ರೇರಿತರಾಗಿ ಹಾಡನ್ನು ಹೇಗೆ ಹಾಡದಿರ ಸಾಧ್ಯವಿತ್ತು? (ಚೆಫನ್ಯ 3:17 ಹೋಲಿಸಿ; ಕೀರ್ತನೆ 100:2). ಇದನ್ನು ಮೆಚ್ಚಿದ ಸಂತುಷ್ಟ ಸೃಷ್ಟಿಕರ್ತನು ಈ ಸ್ವರ್ಗೀಯ ದೃಶ್ಯದ ಸ್ವಷ್ಟ ವರ್ಣನೆಯನ್ನು ತನ್ನ ಭೌಮ ಲೇಖಕನು “ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹದ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ” ಇದ್ದರು ಎಂದು ಬರೆದಿಡುವಂತೆ ಪ್ರೇರಿಸಿದನು. (ಯೋಬ 38:7) ಹಾಗಾದರೆ ಪ್ರಮೋದವನ ಪುನ:ಸ್ಥಾಪಿಸಲ್ಪಡುವಾಗ ಈ ದೇವದೂತ ಮಕ್ಕಳು ದೇವರ ಮಹಿಮೆಗಾಗಿ ಎಷ್ಟು ಹೆಚ್ಚು ಸಂತೋಷದಿಂದ ಹಾಡಲಾರರು!
5. ಭೂಮಿಯ ಕಡೆಗೆ ದೇವರ ಮೂಲ ಉದ್ದೇಶ ನೆರವೇರುವಾಗ ನಮಗೆ ಹೇಗೆ ಅನಿಸಬೇಕು?
5. ಯೆಹೋವ ದೇವರು ಮೊತ್ತಮೊದಲಿನಿಂದಲೂ ಇಟ್ಟಿದ್ದ ಗುರಿಯು ಪ್ರಮೋದವನವಾದ ಭೂಮಿಯನ್ನು ಪುನ: ಸಂಪಾದಿಸುವದೇ ಎಂದು ಪ್ರೇರಿತ ಪವಿತ್ರ ಶಾಸ್ತ್ರಗಳಿಂದ ಭರವಸೆ ನೀಡಲ್ಪಡುವದು ನಮಗೆ ನಿಜವಾಗಿಯೂ ಹೃದಯೋಲ್ಲಾಸವನ್ನು ತರುವದು. ಈ ಭೂಮಿಯ ಕಡೆಗೆ ದೇವರ ಉದ್ದೇಶದ ಈ ಸಂತೋಷಜನಕ, ಸ್ತುತಿಬರಿಸುವ ನೆರವೇರಿಕೆಯನ್ನು ಮಹಿಮೆಯಿಂದ ಮಹಿಮೆಗೆ ಹೋಗಿ ತನ್ನ ಶ್ರೇಷ್ಟತೆಯನ್ನು ಪ್ರದರ್ಶಿಸುವದರಲ್ಲಿ ಯಾವ ಅಸಾಫಲ್ಯವೂ ಇಲ್ಲದ ದೇವರಿಂದ ಮಾತ್ರ ನಾವು ನಿರೀಕ್ಷಿಸುವದು ನ್ಯಾಯಸಮ್ಮತವಾಗಿದೆ. ಆತನಿಗೆ ಸರ್ವ ಸ್ತುತಿ ಸಲಲ್ಲಿ!—ಕೀರ್ತನೆ 150:1, 2; ಯೆಶಾಯ 45:18; ಪ್ರಕಟನೆ 21:3-5.
ಪುನರುತ್ಥಾನ ಹೊಂದಿದವರು ಪ್ರಮೋದವನದ ಪುನ:ಸ್ಥಾಪನೆಯಲ್ಲಿ ನೆರವಾಗುವುದು
6. ಅರ್ಮಗೆದ್ದೋನಿನ ಬಳಿಕ ಭೂಮಿ ಜನರಿಂದ ಹೇಗೆ ತುಂಬಲ್ಪಡುವುದು?
6. ಅರ್ಮಗೆದ್ದೋನನ್ನು ಪಾರಾಗುವವರು ಸಂಬಂಧಸೂಚಕವಾಗಿ ಚಿಕ್ಕ ಸಂಖ್ಯೆಯಲ್ಲಿದ್ದರೂ ಅವರು ಮಕ್ಕಳನ್ನೂ ಹಡೆಯುವದರಿಂದಲೇ ಭೂಮಿಯ ಜನಭರಿತವಾಗದು. ಸ್ಮರಣೆಯ ಸಮಾಧಿಗಳಲ್ಲಿದ್ದು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ನದ ಪ್ರಯೋಜನ ಪಡೆಯುವವರನ್ನು ಪುನ: ಜೀವಿಸುವಂತೆ ಮಾಡುವುದರ ಮೂಲಕ ಸಹಾ ಯೆಹೋವನು ‘ತನ್ನ ಪಾದ ಸನ್ನಿಧಿಯನ್ನು ವೈಭವಗೊಳಿಸುವನು.’ ನಮ್ಮ ಭೂಗೋಳವನ್ನು ಅತಿ ಸುಂದರವಾದ ಪ್ರಮೋದವನವಾಗಿ ರೂಪಾಂತರಿಸುವ ಆನಂದಕಾರಕ ಕೆಲಸದಲ್ಲಿ ಪಾಲಿಗರಾಗುವ ಸುಯೋಗ ಅವರಿಗಿರುವದು.—ಅಪೋಸ್ತಲರ ಕೃತ್ಯ 24:15.
7. ರ್ಮಗೆದೋನ್ದನ್ನು ಪಾರಾಗುವವರು ಯೇಸುವಿನ ಯಾವ ಮಾತನ್ನು ಮನಸ್ಸಲ್ಲಿಡುವರು?
7. ಅರ್ಮಗೆದ್ದೋನನ್ನು ಪಾರಾಗುವವರು ಕರ್ತನಾದ ಯೇಸುಕ್ರಿಸ್ತನು ಹೇಳುವಂತೆ ಪ್ರಚೋದಿಸಲ್ಪಟ್ಟ ಆತ್ಮ ಪ್ರೇರಕ ಮಾತುಗಳನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುವರು. ಅವನಂದದ್ದು: “ಅದಕ್ಕೆ ಆಶ್ಚರ್ಯ ಪಡಬೇಡಿರಿ; [ಸ್ಮರಣೆಯ, NW] ಸಮಾಧಿಗಳಲ್ಲಿರುವವರೆಲ್ಲರೂ ಆತನ ದ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ದೇವಕುಮಾರನು ಬೇಥಾನ್ಯದ ಸಮಾಧಿಯಲ್ಲಿ ಶವವಾಗಿದ್ದ ಲಾಜರನನ್ನು ಸಂಭೋಧಿಸಿ, “ಲಾಜರನೇ, ಹೊರಗೆ ಬಾ” ಎಂದು ಹೇಳಿದ ರೀತಿಯಲ್ಲಿ ಸ್ಮರಣೆಯ ಸಮಾಧಿಯಲ್ಲಿರುವ ಮೃತ ಮಾನವರು ಅವನ ದ್ವನಿಯನ್ನು ಕೇಳಲಾರಂಭಿಸುವದು ಎಂತಹ ಸುಸಮಯವಾಗಿರುವದು!—ಯೋಹಾನ 11:43.
8, 9. ಭೂಮಿಯ ನವೀಕರಿಸಲ್ಪಟ್ಟ ಜೀವನಕ್ಕೆ ಯಾರು ಎಬ್ಬಿಸಲ್ಪಡುವ ಸಂಭವವಿದೆ, ಮತ್ತು ಇದು ಅರ್ಮಗೆದ್ದೋನ್ ಪಾರಾಗುವವರಿಗೆ ಯಾವ ಆನಂದವನ್ನು ತರಲಿದೆ?
8. ಯೇಸು ಕ್ರಿಸ್ತನ ಸಹಸ್ರ ಸಂವತ್ಸರಗಳಾಳಿಕೆಯಲ್ಲಿ ಮತ್ತು ಅವನ ಅಜ್ನೆಗೆ ಪ್ರತ್ಯುತ್ತರವಾಗಿ ಭೂಮಿಯ ಮೇಲೆ ನವೀಕರಿಸಲ್ಪಡುವ ಜೀವನಕ್ಕೆ ಎದ್ದು ಬರುವವರಲ್ಲಿ ಮೊದಲಿಗರು ಪ್ರಾಯಶ: ಯಾರಾಗಿರಬಹುದು? ಈ ವ್ಯವಸ್ಥೆ ಅಂತ್ಯವಾಗುವದಕ್ಕೆ ಮುಂಚಿತವಾಗಿದ್ದ ಕಡೇ ದಿವಸಗಳಲ್ಲಿ ಸತ್ತುಹೋದ “ಬೇರೆ ಕುರಿಗಳು” ಇವರಾಗಿರುವದು ನ್ಯಾಯ. ಇವರಿಗೆ ಮೊದಲು ಪುನರುತ್ಥಾನವಾಗುವದು. (ಯೋಹಾನ 10:16) ಹೊಸಲೋಕಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವದು ಪ್ರಾಯಶ: ಇವರಿಗೆ ಅತಿ ಕಡಿಮೆ ಕಷ್ಟಕರವಾಗಿರುವುದು.—ಮತ್ತಾಯ 25:34 ಸರಿಹೋಲಿಸಿ; ಯೋಹಾನ 6:53, 54.
9. “ಮಹಾ ಸಂಕಟ” ಕ್ಕೆ ಮುಂಚಿನ ಸಂತತಿಯಲ್ಲಿ ಸತ್ತಿದ್ದ “ಬೇರೆ ಕುರಿಗಳು” ಪುನರುತ್ಥಾನವಾಗುವದನ್ನು ನೋಡುವುದು ಅರ್ಮಗೆದ್ದೋನನ್ನು ಪಾರಾಗುವವರಿಗೆ ಎಷ್ಟೊಂದು ಆನಂದವನ್ನು ತಂದೀತು! (ಮತ್ತಾಯ 24:21) ಗುರುತು ಸ್ಥಾಪಿಸುವ ಸ್ಪಷ್ಟ ಶಕಿಯ್ತಿದವ್ದರಾಗಿ ಅವರು ಇವರನ್ನು ಗುರುತಿಸಿ, ಸ್ವಾಗತಿಸಿ, ಬಳಿಕ ಅವರೊಂದಿಗೆ ಸರ್ವೋನ್ನತ ದೇವರ ಐಕ್ಯ ಸೇವೆಯನ್ನು ನವೀಕರಿಸುತ್ತಾ ಹೋಗುವರು!
10. ಅರ್ಮಗೆದ್ದೋನನ್ನು ಪಾರಾಗುವದರಿಂದ ನೀವು ಯಾವುದನ್ನು ನೋಡಬಹುದು?
10. ಅರ್ಮಗೆದ್ದೋನ್ ಪಾರಾಗುವವರಲ್ಲಿ ನೀವು ಒಬ್ಬರಾಗಿರುವಲ್ಲಿ ನಿಮ್ಮ ಭೂಸಂಬಂಧಿಗಳಲ್ಲಿ ಮೊದಲನೆಯವರ ಪುನರುತ್ಥಾನವನ್ನು ನೀವು ನೋಡುವ ಸಂದರ್ಭವಿರಬಹುದು. ಇದರಿಂದ ನಿಮಗಾಗುವ ಭಾವೋದ್ರೇಕ ಪರಿಣಾಮ ಕರ್ತನಾದ ಯೇಸು ಯಾರ ಹನ್ನೆರಡು ವಯಸ್ಸಿನ ಮಗಳನ್ನು ಬದುಕಿಸಿ ಹಾತೊರೆಯುವ ಹಸ್ತಗಳಿಗೆ ಒಪ್ಪಿಸಿದನೋ ಆ ಹೆತ್ತವರಿಗಿಂತ ಹೇಗೆ ಭಿನ್ನವಾದೀತು? “ಅವರು ಆ ಕೂಡಲೇ ಅತ್ಯಾನಂದ ಪರವಶರಾದರು.” (ಮಾರ್ಕ 5:42, NW) ಹೌದು, ಹೇಡೀಸ್ ಮತ್ತು ಸಮುದ್ರಗಳಲ್ಲಿ ಸತ್ತಿರುವವರಿಗೆ ಪುನರುತ್ಥಾನವಾಗುವಾಗ ಅವರ್ಣನೀಯವಾದ ಸಂತೋಷ ನಿಮ್ಮದಾಗುವದು. (ಪ್ರಕಟನೆ 20:13) ಯಾವುದು ಶೀರ್ಘ ಬರಲಿರುವದೋ ಆ ನಾಳೆ ಅದೆಷ್ಟು ವೈಭವಭರಿತ ನಾಳೆಯಾಗಿರುವುದು!
“ಭೂಮಿಯಲ್ಲೆಲ್ಲಾ ಆಳುವ ಪ್ರಭುಗಳು”
11, 12. (ಎ)ಕೀರ್ತನೆ 45:16 ಏನು ಒತ್ತಿಹೇಳುತ್ತದೆ? (ಬಿ) ರಾಜ ಯೇಸು ಕ್ರಿಸ್ತನು ಯಾರೊಳಗಿಂದ “ಭೂಮಿಯ ಮೇಲೆಲ್ಲಾ. . .ಪ್ರಭುಗಳನ್ನು” ನೇಮಿಸಬಹುದು?
11. “ತಾನು ಯಾರಿಗಾಗಿ ತನ್ನ ಪರಿಪೂರ್ಣ ಮಾನವಜೀವವನ್ನು ಯಜ್ನವಾಗಿ ಕೊಟ್ಟನೋ ಆ ಮಾನವ ಮೃತರನ್ನು ಪುನರುತ್ಥಾನಗೊಳಿಸುವ ಶಕ್ತಿಯನ್ನು ನಿರ್ವಹಿಸುವ ಮೂಲಕ ಯೇಸು ಕೀರ್ತನೆ 45:16 (NW) ನ್ನು ನೆರವೇರಿಸಲು ಶಕ್ತನಾಗುವನು. ಈ ಕೀರ್ತನೆ ಪಟ್ಟಾಭಿಶೇಕವಾದ ಯೇಸು ಕ್ರಿಸ್ತನಿಗೆ ಪ್ರವಾದನಾರೂಪವಾಗಿ ಸಂಭೋದಿಸುತ್ತಾ ಹೇಳುವದು: “ನಿನ್ನ [ಭೂಸಂಬಂಧವಾದ] ಪೂರ್ವಜರ ಸ್ಥಾನದಲ್ಲಿ ನಿನಗೆ ಪುತ್ರರು ಬರುವರು. ಅವರನ್ನು ನೀನು ಭೂಮಿಯಲ್ಲೆಲ್ಲಾ ಆಳುವ ಪ್ರಭುಗಳಾಗಿ ನೇಮಿಸುವಿ.” ಈ ಕೀರ್ತನೆ, ಯೇಸು ಕ್ರಿಸ್ತನು ಕೆಳಗೆ ಭೂಮಿಯಲ್ಲಿರುವ ಮಕ್ಕಳಿಗೆ ಸ್ವರ್ಗೀಯ ತಂದೆಯಾಗಿರುವನೆಂದೂ ಅವರಲ್ಲಿ ಪುತ್ರರನ್ನು “ಆಳುವ ಪ್ರಭುಗಳಾಗಿ” ಅವನು ನೇವಿಸುವನೆಂದೂ ಒತ್ತಿಹೇಳುತ್ತದೆ. “ದಾವೀದನ ಮಗನೂ” ಯೂದಾಯದ ಕನ್ಯೆ ಮರಿಯಳ ಜೇಷ್ಟ ಪುತ್ರನೂ ಆದ ಯೇಸುವಿಗೆ ಪ್ರಥಮ ತಂದೆಯಾಗಿದ್ದ ಅದಾಮನ ವರೆಗೂ ಭೂಮಿಗೆ ಸಂಬಂಧಪಟ್ಟ ಪೂರ್ವಜರಿದ್ದರು.—ಲೂಕ 3:23-38.
12. ಹಾಗಾದರೆ, ಯೇಸುವಿನ ಹಿಂದಿನ ಪ್ರಾಕೃತಿಕ ಪೂರ್ವಜರು ಯೇಸು ಅವರನ್ನು ಮೃತರಿಂದ ಪುನರುತ್ಥಾನಗೊಳಿಸುವದರ ಮೂಲಕ ಅವನ ಪುತ್ರರಾಗುವರೆಂದು ಕೀರ್ತನೆ 45:16 ಇಲ್ಲಿ ಹೇಳುತ್ತಿದೆಯೇ? ಹೌದು. ಮತ್ತು ಅವರ ವಂಶಜನೆಂಬ ಕಾರಣ ಯೇಸು ಅವರಿಗೆ ವಿಶೇಷ ರಾಜಾನುಗ್ರಹ ತೋರಿಸಿ ಅವರನ್ನು ಮಾತ್ರ ಪ್ರಮೋದವನವಾದ “ಭೂಮಿಯಲ್ಲೆಲ್ಲಾ ಆಳುವ ಪ್ರಭುಗಳನ್ನಾಗಿ” ನೇಮಿಸುವನೆಂದು ಸಹ ಕೀರ್ತನೆ ಹೇಳುತ್ತಿದೆಯೇ? ಇಲ್ಲ. ಈ ರೀತಿಯ ಪ್ರವಾದನೆಯ ನೆರವೇರಿಕೆ ಆಗುವಲ್ಲಿ ಅದು ಭೂಮಿಯಲ್ಲೆಲ್ಲಾ ಸೀಮಿತ ಸಂಖ್ಯೆಯಲ್ಲಿ ಮಾತ್ರ “ಆಳುವ ಪ್ರಭು” ಗಳಿರುವಂತೆ ಅನುಮತಿಸುವದು. ಅದಲ್ಲದೆ ಯೇಸುವಿನ ಈ ಎಲ್ಲಾ ಪೂರ್ವಜರು ಸಹಸ್ರ ವರ್ಷದಾಳಿಕೆಯಲ್ಲಿ ವಿಶೇಷ ಗಣ್ಯತೆ ಪಡೆಯುವಷ್ಟು ಪ್ರಮುಖರಾಗಿರಲಿಲ್ಲ. ರಾಜ ಯೇಸು ಕ್ರಿಸ್ತನಿಗೆ “ಪ್ರಭು” ಗಳಾಗಿ ನೇಮಿಸಲು ಭೂಪೂರ್ವಜರನ್ನು ಬಿಟ್ಟು ಬೇರೆ ಅಸಂಖ್ಯಾತ ಜನರಿರುವರು. ಅರ್ಮಗೆದ್ದೋನಿನಲ್ಲಿ ಪಾರಾಗುವವರಲ್ಲಿ, ಪುನರುತ್ಥಾನಹೊಂದಿದ “ಬೇರೆ ಕುರಿ” ಗಳಲ್ಲಿ ಮತ್ತು ಕ್ರೈಸ್ತಪೂರ್ವದ ವಿಶ್ವಾಸಿ ಪುರುಷರಲ್ಲಿ ಯೋಗ್ಯತೆ ಪಡೆದಿರುವವರೇ ಇವರು. ಇವರೆಲ್ಲರೊಳಗಿಂದ ತನ್ನ ಭೂಪ್ರತಿನಿಧಿಗಳಾಗಿ ಪ್ರಭುಗಳ ಸ್ಥಾನದಲ್ಲಿರಲು ಅರ್ಹತೆ ಪಡೆದಿರುವ ಯೋಗ್ಯರನ್ನು ಅವನು ನಿಯಮಿಸಬಲ್ಲನು:
13, 14. ಅರ್ಮಗೆದ್ದೋನನ್ನು ಪಾರಾಗುವವರಿಗೆ ತಮ್ಮ ಸ್ವಂತ ಕಣ್ಣುಗಳಿಂದ ಪುನರುತ್ಥಾನಹೊಂದುವ ಯಾರನ್ನು ನೋಡುವ ಸುಯೋಗವಿರುವದು?
13. ಮೆಸ್ಸೀಯನ ರಾಜ್ಯದ ಕೆಳಗೆ ಪುನರುತ್ಥಾನ ಹೊಂದಲಿರುವ ಇಂಥವರ ಕುರಿತು ಯೋಚಿಸಿರಿ. ನೋಡಿ! ನೀವು ಕಾಣುವದನ್ನು ನಂಬುವದು ಸಾಧ್ಯವೂ? ಪ್ರಥಮ ಮಾನವ ಹುತಾತ್ಮನಾದ ಹೇಬೇಲನನ್ನು ಮತ್ತು ದೇವರೊಂದಿಗೆ ನಡೆದಾಡಿದ ಹನೋಕನನ್ನು ನೋಡಿ. ತೇಲು ಪೆಟ್ಟಿಗೆಯನ್ನು ರಚಿಸಿದ ನೋಹನೂ ಅಲ್ಲಿದ್ದಾನೆ. ಇಸ್ರಾಯೇಲ್ ಜನಾಂಗದ ಮೂಲಪಿತರಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬರೂ ಅಲ್ಲಿದ್ದಾರೆ. (ಲೇವಿ ಯಾಜಕ ಕುಲದ) ಮೋಶೆ ಮತ್ತು ಯಾರೊಂದಿಗೆ ರಾಜ್ಯದ ಶಾಶ್ವತ ಒಡಂಬಡಿಕೆ ಮಾಡಲ್ಪಟ್ಟಿತೋ ಆ ದಾವೀದನೂ ಅಲ್ಲಿದ್ದಾರೆ. ಮತ್ತು ಯೆಶಾಯ, ಯೆರೆಮೀಯ, ಯೆಹೆಜ್ಕೇಲ, ದಾನಿಯೇಲ ಮತ್ತು ಉಳಿದ ಎಲ್ಲಾ ಬೈಬಲ್ ಬರಹಗಾರರಾದ ಇಬ್ರಿಯ ಪ್ರವಾದಿಗಳೂ ಕೊನೆಯವನಾದ ಮಲಕೀಯನ ತನಕ ಅಲ್ಲಿದ್ದಾರೆ. ಹೌದು, ಸ್ನಾನಿಕನಾದ ಯೋಹಾನ ಮತ್ತು ಯೇಸುವಿನ ಸಾಕುತಂದೆಯಾದ ಯೋಸೇಫ- ಇವರೂ ಅಲ್ಲಿದ್ದಾರೆ.
14. ಒಂದು ಸಂದರ್ಭದಲ್ಲಿ ಯೇಸು ಯೆಹೂದ್ಯರಿಗೆ ಅವರು “ಅಬ್ರಹಾಮ ಇಸಾಕ ಯಾಕೋಬ ಇವರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವದನ್ನೂ [ಅವರು] ಮಾತ್ರ ಹೊರಗೆ” ಇರುವ ವಿಷಯವನ್ನೂ ಹೇಳಿದನು. (ಲೂಕ 13:28) “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ವನ್ನು ದಾಟಿ ಭೂಮಿಯನ್ನು ಪಾರಾಗುವ “ಮಹಾ ಸಮೂಹ” ಕ್ಕೆ “ಅಬ್ರಹಾಮ ಇಸಾಕ ಯಾಕೋಬ ಇವರು ಮತ್ತು ಎಲ್ಲಾ ಪ್ರವಾದಿಗಳಾಗಿದ್ದವರು” ಇದೇ ಪ್ರಮೋದವನವಾದ ಭೂಮಿಯಲ್ಲಿ “ನಿತ್ಯನಾದ ತಂದೆ” ಯಾಗಿರುವ ಯೇಸು ಕ್ರಿಸ್ತನ ಮೂಲಕ ಬರುವ ದೇವರ ರಾಜ್ಯದ ಕೆಳಗೆ ರಾಜಸೇವೆಯಲ್ಲಿರುವದನ್ನು ಅಕ್ಷರಾರ್ಥವಾಗಿ ನೋಡುವ ಸುಯೋಗ ಅನುಗ್ರಹಿಸಲ್ಪಡುವದು.—ಪ್ರಕಟನೆ 7:9, 14; 16:14; ಯೆಶಾಯ 9:6.
15. ಅರ್ಮಗೆದ್ದೋನನ್ನು ಪಾರಾಗುವವರಿಗೆ ಯಾವ ಅಸದೃಶ ಸುಯೋಗವು ಕಾಯುತ್ತಿದೆ?
15. ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗುವ ನಿಮಗೆ ಸಾ. ಶ. ಪೂ. 2370 ರಲ್ಲಿ ಬಂದ ಭೂವ್ಯಾಪಕ ಜಲಪ್ರಳಯದಲ್ಲಿ ಆ ಮೊದಲನೆಯ ಲೋಕದ ಅಂತ್ಯವನ್ನು ಪಾರಾಗಿ ಉಳಿದ ನೋಹ ಮತ್ತು ಅವನ ಒತ್ತಿನ ಕುಟುಂಬವಾದ ಆ “ಎಂಟೇ ಜನ” ರೊಂದಿಗೆ ಅಭಿಪ್ರಾಯವನ್ನು ಹೋಲಿಸಿ ನೋಡುವುದು ಅದೆಷ್ಟು ಆತ್ಮೋತ್ತೇಜಕ! ಮುಂದಿರುವ ಶಾಶ್ವತ ಕಾಲದಲ್ಲಿ ಇನ್ನಾರಿಗೂ ನಿಮ್ಮಂಥಾ ಅನುಭವವಾಗಿರದು. ಇನ್ನಾರೂ ಇಂಥಾ ಪ್ರಾಮುಖ್ಯ ಹಾಗೂ ಪುನರಾವರ್ತಿಸಲಾಗದ ವಿಧದಲ್ಲಿ ಯೆಹೋವ ದೇವರಿಗೆ ಸಾಕ್ಷಿಯಾಗಿರರು.—1 ಪೇತ್ರ3:20: ಮಾರ್ಕ 13:19: 2 ಪೇತ್ರ 3:5-7.
ಸಹಾನುಭೂತಿಯ ದುಷ್ಕರ್ಮಿ ಸ್ಮರಿಸಲ್ಪಡುವುದು
16, 17. (ಎ) ಸಹಾನುಭೂತಿಯ ದುಷ್ಕರ್ಮಿಯನ್ನು ಯೇಸು ನೆನಸುವಾಗ, ಆಗ ಜೀವಿಸುತ್ತಿರುವ ಅರ್ಮಗೆದ್ದೋನ್ ಪಾರಾಗುವವರಿಗೂ ಇತರರಿಗೂ ಯಾವ ಸುಯೋಗವಿರುವುದು? (ಬಿ) ಎದ್ದು ಬರುವ ದುಷ್ಕರ್ಮಿಯ ಸಂಬಂಧದಲ್ಲಿ ಯಾವ ನಿರೀಕ್ಷೆ ಇಡಲಾಗುತ್ತದೆ?
16. ಅಷ್ಟರೊಳಗೆ ಭೂಮಿಯನ್ನು ಪ್ರಮೋದವನವಾಗಿ ಪುನ:ಸ್ಥಾಪಿಸುವ ಕೆಲಸ ಮುಂದುವರಿದಿರುವದು. ಕಲ್ವೇರಿಯಲ್ಲಿ ಯೇಸುವಿನ ಪಕ್ಕದಲ್ಲಿ ಶೂಲಜಡಿತನಾಗಿದ್ದ ಮತ್ತು ಯೇಸುವಿನ ತಲೆಯ ಮೇಲ್ಭಾಗದಲ್ಲಿದ್ದ ಬರೆವಣಿಗೆಯನ್ನು ಗುರುತಿಸಿ, “ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ” ಎಂದು ಹೇಳಿದ್ದ ದುಷ್ಕರ್ಮಿಗೆ ಪುನ:ಸ್ಥಾಪಿತವಾದ ಪ್ರಮೋದವನದಲ್ಲಿ ಭೂಜೀವಿತಕ್ಕೆ ಪುನರುತ್ಥಾನವಾಗುವದು. (ಲೂಕ 23:42) ಅರ್ಮಗೆದ್ದೋನನ್ನು ಪಾರಾಗುವವರಿಗೆ ಮತ್ತು ಅಲ್ಲಿ ಬದುಕಿರುವ ಇತರರಿಗೆ ಮೃತರೊಳಗಿಂದ ಇವನನ್ನು ಸ್ವಾಗತಿಸುವ ಸುಯೋಗವಿರುವದು. ಸಾ. ಶ. 33ನೇ ವರ್ಷದ ನೈಸಾನ್ 14 ರಂದು ಅವನು ಯಾರಿಗೆ ಆಳವಾದ ಸಹಾನುಭೂತಿ ತೋರಿಸಿದನೋ ಈಗ ಆಳುತ್ತಿರುವ ಆ ರಾಜನಾದ ಯೇಸು ಕ್ರಿಸ್ತನ ವಿಷಯದಲ್ಲಿ ಅವರು ಅವನಿಗೆ ಪೂರ್ತಿಯಾಗಿ ಕಲಿಸುವರು.
17. ಕರ್ತನಾದ ಯೇಸು ಕ್ರಿಸ್ತನು ತನ್ನ ಸಹಸ್ರ ವರ್ಷದಾಳಿಕೆಯ ಯಾವುದೋ ಒಂದು ಸಮಯದಲ್ಲಿ ಇವನನ್ನು ಸ್ಮರಿಸಲು ತಪ್ಪನು. ಮತ್ತು ಆ ಸಹಾನುಭೂತಿಯ, ಪುನರುತ್ಥಾನ ಹೊಂದಿದ ದುಷ್ಕರ್ಮಿ ವಿಶ್ವ ಸಾರ್ವಭೌಮ ಯೆಹೋವ ದೇವರಿಗೆ ನಂಬಿಗಸ್ತನಾಗಿರುವ ಮೂಲಕ ತನ್ನ ಪುನರುತ್ಥಾನಕ್ಕೆ ಯಾರು ಕಾರಣನೋ ಆ ಆಳುವ ರಾಜನಾದ ಯೇಸು ಕ್ರಿಸ್ತನಿಗೆ ಗಣ್ಯತೆಯನ್ನು ತೋರಿಸುವನೆಂಬದು ನಿಸ್ಸಂದೇಹ. ಆಗ ಅವನು ಇತರ ಪೂರ್ವಸ್ಥಿತಿಗೆ ತರಲ್ಪಟ್ಟ ವಿಧೇಯ ಮಾನವ ವರ್ಗದೊಂದಿಗೆ ಪ್ರಮೋದವನವಾದ ಹೊಸಲೋಕದಲ್ಲಿ ಸದಾ ಸರ್ವದಾ ಜೀವಿಸಲು ಅರ್ಹನೆಂದೆಣಿಸಲ್ಪಡುವನು.
ಭೂವ್ಯಾಪಕವಾದ ಪೂರ್ವಸ್ಥಿತಿಗೆ ತರಲ್ಪಟ್ಟ ಏದೆನ್ ತೋಟದಲ್ಲಿ ಜೀವನ
18. ಪೂರ್ವಸ್ಥಿತಿಗೆ ತರಲ್ಪಡುವ ಪ್ರಮೋದವನದಲ್ಲಿ ಜೀವನ ಹೇಗಿರುವುದು?
18. ಪೂರ್ವಸ್ಥಿತಿಗೆ ತರಲ್ಪಟ್ಟ ಪ್ರಮೋದವನದಲ್ಲಿ ಪ್ರತಿಯೊಬ್ಬನು ಪ್ರತಿಯೊಬ್ಬನಿಗೆ ಸ್ನೇಹಿತ. ಲೋಕವ್ಯಾಪಕವಾದ ಪರಿವಾರ ಸಂಬಂಧದ ಕಟ್ಟು ಪ್ರತಿಯೊಬ್ಬನ ಆತ್ಮವನ್ನು ಆಳವಾಗಿ ತಟ್ಟಿರುತ್ತದೆ. ಎಲ್ಲರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ. ಅವರು ಸಾಮಾನ್ಯವಾದ ಒಂದು ಲೋಕ ಭಾಷೆಯನ್ನಾಡುತ್ತಾರೆ. ಯಾವುದನ್ನು ಮಾನವ ಅಸ್ತಿತ್ವದ ಅಂದರೆ ಸಾ. ಶ. ಪೂ. 4026 ರಲ್ಲಿ ಆದಾಮನ ಸೃಷ್ಟಿಯಿಂದ ಹಿಡಿದು ಪೆಲೆಗನ ದಿನ (ಸಾ.ಶ.ಪೂ. 2269 ರಿಂದ 2030) ಗಳ ಅಥವಾ “ಭೂಮಿಯ ಜನಗಳು ವಿಂಗಡ” ವಾಗುವ ವರೆಗೆ ಅಂದರೆ ಮಾನವ ಅಸ್ತಿತ್ವದ ಮೊದಲ 1800 ವರ್ಷಗಳ ತನಕ ಭೂಮಿಯ ಪ್ರತಿಯೊಬ್ಬನು ಮಾತಾಡಿದ್ದರೋ ಆ ಮೂಲ ಭಾಷೆಯೇ ಅದಾಗಿರ ಸಾಧ್ಯವಿದೆ. (ಆದಿಕಾಂಡ 10:25; 11:1) ಪ್ರತಿಯೊಬ್ಬನೂ ಭೂಮಿಯಲ್ಲಿ ಜೀವಿಸುವ ಸುಯೋಗದಲ್ಲಿ ಆನಂದಿಸುತ್ತಿದ್ದಾರೆ. ಮತ್ತು ಪ್ರತಿಯೊಂದು ಹೊಸದಿನ ಜೀವನಕ್ಕೆ ಕೂಡಿಸಲ್ಪಡುವಾಗ ಅದನ್ನು ಕೃತಜ್ಞತೆಯಿಂದ ಅಭಿವಂದಿಸಲಾಗುವದು. ಶಾರೀರಿಕ ದೌರ್ಬಲ್ಯಗಳು ಸಮಯ ದಾಟಿದಂತೆ ಹೆಚ್ಚುತ್ತಿಲ್ಲ. ಭೌತಿಕ ಶಕ್ತಿಗಳು ವೃದ್ಧಿಯಾಗುತ್ತಾ ಇವೆ, ಮತ್ತು ಶರೀರಗಳು ಸವೆದು ಹೋಗುತ್ತಾ ಇಲ್ಲ.—ಯೋಬ 33:25 ಹೋಲಿಸಿ.
19. ಹಿಂದೆ ದೌರ್ಬಲ್ಯವಿದವ್ದರ ಸಂಬಂಧದಲ್ಲಿ ಈಗ ಏನು ನೋಡಲಾಗುವುದು?
19. ಇಗೋ! ಒಮ್ಮೆ ಕುಂಟರಾಗಿದವ್ದರು ನಡೆದಾಡುತ್ತಿದ್ದಾರೆ. ಹೌದು, ಸಂತೋಷದಿಂದ ನಲಿದಾಡುತ್ತಿದ್ದಾರೆ. ಕಳೆದು ಹೋಗಿದ್ದ ತೋಳು ಮತ್ತು ಕಾಲುಗಳು ಅದ್ಭುತಕರವಾಗಿ ಪೂರ್ವ ಸ್ಥಿತಿಗೆ ತರಲ್ಪಟ್ಟಿದೆ. ಹಿಂದೆ ಕುರುಡರಾಗಿದ್ದವರು ಈಗ ನೋಡುತ್ತಿದ್ದಾರೆ. ಕಿವುಡರು ಕೇಳುತ್ತಿದ್ದಾರೆ. ಮೂಕರು ಮಾತಾಡುತ್ತಾ ಸಂತೋಷದಿಂದ ಹಾಡುತ್ತಿದ್ದಾರೆ. (ಯೆಶಾಯ 35:5, 6 ಹೋಲಿಸಿ) ಮಾನವ ರೂಪ ಮತ್ತು ತೋರಿಕೆಯು ವಿಕಾರಗಳಿಲ್ಲದೆ ಹೋಗುತ್ತವೆ. ಮಾನವ ಗಂಡಸುತನ ಮಾನವ ಹೆಂಗಸುತನದೊಂದಿಗೆ ಸುಂದರವಾಗಿ ಸಮತೆಯಲ್ಲಿರುತ್ತದೆ. (ಆದಿಕಾಂಡ 2.18) ಮಾನವ ಪರಿಪೂರ್ಣತೆ ಸಂಪೂರ್ಣ ಮಾನವ ದೇಹದ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಘನಪಡಿಸುತ್ತದೆ.
20. ಪ್ರಕೃತಿ ಶಕ್ತಿ, ಆಹಾರ ಸರಬರಾಯಿ. ಪ್ರಾಣಿ ಸೃಷ್ಟಿ ಮತ್ತು ಭೂಮಿಯ ಉಪಯೋಗ ಇವುಗಳ ವಿಷಯ ಏನು ಅವಲೋಕಿಸಲಾಗುವುದು?
20. ಇದೇ ಭೂಮಿಯೇ ಒಂದು ಭೂವ್ಯಾಪಕ ಸೌಂದರ್ಯ ಸ್ಥಳವಾಗುತ್ತಿದೆ. ಭೂಮಿಯ ಯಾವ ಭಾಗದಿಂದಲೂ ಅನಾವೃಷ್ಟಿ, ಭಾರಿ ಮಳೆಯಿಂದಾಗುವ ದ್ವಂಸ ಅಥವಾ ಸುಂಟರಗಾಳಿ, ಚಂಡಮಾರುತ, ತುಫಾನು ಮತ್ತು ಬಿರುಗಾಳಿ-ಇವುಗಳಿಂದಾಗುವ ದ್ವಂಸದ ವರದಿಯಿಲ್ಲ. (ಮಾರ್ಕ4:37-41 ಹೋಲಿಸಿ.) ಭೂಮಿಯನ್ನು ಜೀವಿಸಲು ಉತ್ಕೃಷ್ಟ ಸ್ಥ.ಳವಾಗಿ ಮಾಡುವ ಉದ್ದೇಶದಿಂದ ಪ್ರಕೃತಿಶಕ್ತಿಗಳೆಲ್ಲವೂ ಪರಿಪೂರ್ಣ ಸಮತೆಗೆ ತರಲ್ಪಟ್ಟಿವೆ. ಎಲ್ಲಿಯೂ ಆಹಾರದ ಕೊರತೆಯಿಲ್ಲ; ಏಕೆಂದರೆ ಭೂಮಿ ತನ್ನ ಪೂರ್ತಿ ಬೆಳೆಯನ್ನು ಬೆಳೆಸುತ್ತದೆ. (ಕೀರ್ತನೆ 72:16) ಲೋಕವ್ಯಾಪಕವಾಗಿ, ಯೆಹೋವನನ್ನುವಂತೆಯೇ, ಮನುಷ್ಯನಿಗೂ ಮೃಗಕ್ಕೂ ಶಾಂತಿ ಮತ್ತು ಭದ್ರತೆಯಿರುವದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳು ಮಾಡುವದಿಲ್ಲ.” (ಯೆಶಾಯ 11:9; 6-8 ವಚನಗಳನ್ನೂ ನೋಡಿ.) ಈ ರೀತಿ ಭೂಮಿ ಜೀವಿಸಲು ಮತ್ತು ಸೃಷ್ಟಿಕರ್ತನೂ ಭೂಮಿಯ ಒಡೆಯನೂ ಆದ ಯೆಹೋವ ದೇವರಿಗೆ ಆರಾಧನೆ ಮತ್ತು ಸೇವೆಯನ್ನು ಮುಂದುವರಿಸಲು ಆನಂದಕಾರಕ ಸ್ಥಳವಾಗಿ ಮಾಡಲ್ಪಡುವದು. ತಾನು ಸೃಷ್ಟಿಮಾಡಿದ ಕಾರಣದಿಂದ ಸೊತ್ತಾಗಿರುವ ಹಕ್ಕು ಆತನಿಗಿರುವದರಿಂದ ಅದು ಅತನು ಮೆಚ್ಚುವ ಮತ್ತು ಆತನನ್ನು ಘನಪಡಿಸುವ ರೀತಿಯಲ್ಲಿ ಉಪಯೋಗಿಸಲ್ಪಡುವದು ಯೋಗ್ಯ.—ಯೆಶಾಯ 35:1, 2, 6, 7 ಹೋಲಿಸಿ.
21. ವಿಮುಕ್ತ ಮಾನವರು ಭೂಮಿಯಲ್ಲಿ ಎಲ್ಲವನ್ನು ಹೇಗೆ ವೀಕ್ಷಿಸುವರು, ಮತ್ತು ಯಾವ ಸಂಗೀತ ಕೇಳಿಬರುವುದು?
21. ಮಾನವ ಜೀವ ಎಲ್ಲಿ ಸುಂದರ ಪೂರ್ಣತೆಯಿಂದ ಪ್ರಾರಂಭವಾಯಿತೋ ಆ ಪ್ರಮೋದವನದೊಳಗೆ ಹಿಂದೆಂದೂ ಇದ್ದಿರದ ಮುಕ್ತ ಮಾನವರಿಗೆ ಭೂಮಿಯಲ್ಲಿರುವ ಪ್ರತಿಯೊಂದು ವಿಷಯವೂ ಚೈತನ್ಯದಾಯಕವಾಗಿರುವುದು! (ಪ್ರಕಟನೆ 21:5) ಆಗ ಉಪಕರಣಗಳ ಹಾಗೂ ಬಾಯಿಮಾತಿನ ಸಂಗೀತಗಳು ಎಷ್ಟು ಆಹ್ಲಾದಕರವಾಗಿ—ಎಲ್ಲವೂ ಯೆಹೋವನನ್ನು ಸ್ತುತಿಸುತ್ತಾ—ಕೇಳಿಬರುವುದು!—1 ಪೂರ್ವಕಾಲವೃತ್ತಾಂತ 23:4, 5; ಕೀರ್ತನೆ 150:3-6.
22. ಪ್ರಮೋದವನವಾದ ಹೊಸಲೋಕದಲ್ಲಿ ಜೀವಿಸುವಾಗ ಯಾವ ಅನಿಸಿಕೆಯಾಗುವುದು?
22. ಮಾನವ ಜೀವ ಪೂರ್ಣ ರೀತಿಯಲ್ಲಿ ತುಂಬಿತುಳುಕುವ ಮತ್ತು ಆದಾಮನ ಆದಿ ಪಾಪದ ಕಾರಣ ಬಂದ ಸಾಯುವ ಪರಂಪರೆಗಳ ಹಂತಗಳನ್ನೆಲ್ಲಾ ತೆಗೆದು ಹಾಕಲ್ಪಡುವ ಭೂಮಿಯಲ್ಲಿ ಜೀವಿಸುವುದು ಅದೆಷ್ಟು ಅದ್ಭುತಕರ! (ಯೋಹಾನ 10:10 ಹೋಲಿಸಿ) ಹೌದು, ಪ್ರತಿಯೊಬ್ಬ ಮಂಜೂರಾದ ಮಾನವ ಜೀವಿ ಪ್ರಥಮ ಮಾನವನಾದ ಆದಾಮನು ಯಾವುದರಿಂದ ಸೃಷ್ಟಿಸಲ್ಪಟ್ಟನೋ ಆ ಯೆಹೋವ ದೇವರ ಸ್ವರೂಪ ಮತ್ತು ಹೋಲಿಕೆಯನ್ನು ಪ್ರಸರಿಸುವ ಭೂಮಿ ಅದಾಗಿರುವದು. (ಆದಿಕಾಂಡ 1:26, 27) ಆಗ ಭೂಮಿ ಸೆರಾಫರಿಗೆ, ಕೆರೂಬಿಗಳಿಗೆ ಮತ್ತು ಪ್ರಜ್ವಲಿಸುವ ದೇವದೂತರಿಗೆ ಅಸಹ್ಯ ವಸ್ತುವಾಗಿ ಕಂಡುಬರದು. ಅವರು ಪ್ರೀತಿಯ ಮುಖಗಳನ್ನು ಭೂಮಿಯ ಕಡೆಗೆ ತಿರುಗಿಸಿ ಪ್ರಮೋದವನೀಯ ಸೌಂದರ್ಯ ಧರಿಸಿದ ಅದನ್ನು ಪರೀಕ್ಷಿಸುವಾಗ ಯಾರ ಮುಖಭಾವವನ್ನು ನೇರವಾಗಿ ನೋಡುವ ಸುಯೋಗ ಅವರಿಗಿದೆಯೋ ಆ ವಿಶ್ವಪರಮಾಧಿಕಾರಿ ಯೆಹೋವನಿಗೆ ಕೇವಲ ಸ್ತುತಿ ಮತ್ತು ಕೃತಜ್ಞತೆಯನ್ನು ಸಲ್ಲಿಸುವಂತೆ ಅದು ಮಾಡುತ್ತದೆ.—ಮತ್ತಾಯ 18:10.
ಸಂತೋಷದ ಅನಂತ ಭವಿಷ್ಯತ್ತು
23. ಅಭಿಷಿಕ್ತ ಕ್ರೈಸ್ತರ ಕುರಿತು ಏನಾಗುವ ಸಾಧ್ಯತೆ ಇದೆ, ಮತ್ತು ಇದರಿಂದ ಭೂಪ್ರಮೋದವನದ ನಿವಾಸಿಗಳ ಮೇಲೆ ಪರಿಣಾಮವೇನು?
23. ಭವಿಷ್ಯತ್ತಿನಲ್ಲಿ ಸ್ವರ್ಗೀಯ ರಾಜ್ಯಕ್ಕೆ ತಮ್ಮ “ಕರೆಯನ್ನೂ ಆಯ್ಕೆಯನ್ನೂ” ನಿಶ್ಚಯ ಮಾಡಿಕೊಂಡಿರುವ ಮತ್ತು ದಿವ್ಯಪುನರುತ್ಥಾನಕ್ಕೆ ಆಶೀರ್ವದಿತರಾಗಿರುವ ಅಭಿಷಿಕ್ತ ಕ್ರೈಸ್ತರೆಲ್ಲರು ಹೆಸರುಗಳು ಭೂಪ್ರಮೋದವನದ ಮಾನವ ಸಂತತಿಯ ತಿಳುವಳಿಕೆಗಾಗಿ ಪೂರ್ತಿಯಾಗಿ ಪ್ರಕಟಿಸಲ್ಪಡುವುದು ಸಾಧ್ಯವೂ ಸಂಭವನೀಯವೂ ಆಗಿದೆ. (2 ಪೇತ್ರ 1:10; ಕೀರ್ತನೆ 87:5, 6) ಹೀಗೆ ಭೂಪ್ರಮೋದವನದಲ್ಲಿ ಯೇಸುಕ್ರಿಸ್ತನ ಈ 144,000 ಮಂದಿ ಆತ್ಮಜನಿತ ಶಿಷ್ಯರ ಗೈರು ಹಾಜರಿಯು ಸರ್ವರಿಗೆ ಸಂತೃಪ್ತಿಕರವಾಗಿ ಪೂರ್ತಿ ತಿಳಿದುಬಂದು ಇದರಿಂದಾಗಿ ಸರ್ವರು ಅವರೊಂದಿಗೆ ಹೃತ್ಪೂರ್ವಕವಾದ ಸಂತೋಷವನ್ನು ಪಡೆಯುವಂತಾಗುತ್ತದೆ.
24. (ಎ) ತನ್ನ “ಪಾದಪೀಠದ” ಸಂಬಂಧದಲ್ಲಿ ಯೆಹೋವನು ಏನು ನೆರವೇರಿಸಿದನು? (ಬಿ) ನೂತನ ಲೋಕ ಎಂದಿಗೂ ಅಂತ್ಯಗೊಳ್ಳದೆಂದು ನಮಗೆ ಹೇಗೆ ಗೊತ್ತು, ಮತ್ತು ಯಾವ ಪ್ರವಾದನಾ ಗೀತ ನೆರವೇರುವುದು?
24. ವಿಶ್ವವೆಲ್ಲಾದರ ಆದರ್ಶಪ್ರಾಯ ಸಾರ್ವಭೌಮನಾದ ಯೆಹೋವನಿಗೆ ಮುರಿಯಲಾಗದ ಭಕ್ತಿತೋರಿಸುವವರೆಲ್ಲರ ಅನಂತ ಭವಿಷ್ಯವು ಸಂತೋಷಕರವಾಗಿರುವುದು. ಹಿತಕರವಾಗಿ ತುಂಬಲ್ಪಟ್ಟಿರುವ ಭೂಪ್ರಮೋದವನ ದೇವರ ಪಾದಗಳು ಸಾಂಕೇತಿಕವಾಗಿ ಇಡಲ್ಪಡಲು ಯೋಗ್ಯವಾಗಿ, ಶ್ಲಾಘ್ಯವಾದ ಪಾದಪೀಠವಾಗಿರುವುದು. ಹೌದು, ಯೆಹೋವನು ತನ್ನ ‘ಪಾದ ಸನ್ನಿಧಿಯನ್ನು’ ಸದಾಕಾಲಕ್ಕೂ ವೈಭವಗೊಳಿಸಿರುವನು ಮತ್ತು ಮಾನವ ಸಂತತಿಯೆಲ್ಲಾ ಆತನಿಗೆ ಪಥಚ್ಯುತವಾಗದ ಅಧೀನತೆಯಲ್ಲಿರುವುದು! (ಮತ್ತಾಯ 5.34, 35; ಅಪೋಸ್ತಲರ ಕೃತ್ಯ 7:49) ನೂತನ ಲೋಕ ಅಂತ್ಯರಹಿತ ಲೋಕವಾಗಿರುವುದು. ಏಕೆಂದರೆ ಅಲ್ಲಿ “ಆಡಳಿತವು ಅಭಿವೃದ್ಧಿಯಾಗಿ” “ನಿತ್ಯ ಸಮಾಧಾನವಿರುವದು.” (ಯೆಶಾಯ 9:7) ಆಗ ಸ್ವರ್ಗೀಯ ದೇವದೂತರು ಸಾ.ಶ.ಪೂ. 2 ರಲ್ಲಿ ಯೂದಾಯದ ಬೆತ್ಲೆಹೇಮಿನಲ್ಲಿ ಯೇಸುವಿನ ಜನನದ ಸಮಯದಲ್ಲಿ ಹಾಡಿದ ಪ್ರವಾದನಾ ಹಾಡು ನೆರವೇರುವದು: “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ. ಭೂಲೋಕದಲ್ಲಿ [ಪ್ರಸನ್ನತೆಯ, NW] ಮನುಷ್ಯರೊಳಗೆ ಸಮಾಧಾನ.”—ಲೂಕ 2:13,14.
25. (ಎ)“ಬೇರೆ ಕುರಿ” ಗಳ “ಮಹಾ ಸಮೂಹ” ಕ್ಕೆ ಸೇರಿರುವವರು ಈಗ ಏನು ಗಣ್ಯಮಾಡುವರು? (ಬಿ) ನಮ್ಮ ಹೃತ್ಪೂರ್ವಕ ಬಯಕೆ ಏನಾಗಿರಬೇಕು?
25. ಉತ್ತಮ ಕುರುಬನ “ಬೇರೆ ಕುರಿ” ಗಳ “ಮಹಾ ಸಮೂಹ” ಕ್ಕೆ ಸೇರಿರುವವರು ಪೂರ್ವಸ್ಥಿತಿಗೆ ತರಲ್ಪಟ್ಟ ಪ್ರಮೋದವನದ ವಾಗ್ದಾನದ ಆತ್ಮೋತ್ತೇಜಕ ಮಾತುಗಳನ್ನು ಗಣ್ಯಮಾಡುತ್ತಾರೆ. ದೇವರ ಸಂಸ್ಥೆಯೊಂದಿಗೆ ಜತೆಗೊಂಡಿದ್ದು ಕರ್ತನಾದ ಯೇಸುಕ್ರಿಸ್ತನು ಮುಂತಿಳಿಸಿದ, ರಾಜ್ಯದ ಸುವಾರ್ತೆಯನ್ನು ಅಂತಿಮ ಸಾಕ್ಷಿಗಾಗಿ ನಿವಾಸಿತ ಭೂಮಿಯಲ್ಲೆಲ್ಲಾ ಸಾರುವ ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸುವುದು ಅವರಿಗಿರುವ ಸುಯೋಗವಾಗಿದೆ. (ಮತ್ತಾಯ 24:14: ಮಾರ್ಕ13:10) ಯೆಹೋವನ ಸಾಕ್ಷಿಗಳಾದ ನಮ್ಮ ಯಥಾರ್ಥವಾದ ಹೃತ್ಪೂರ್ವಕ ಬಯಕೆಯು, ವಿಶ್ವಸಾರ್ವಭೌಮನಾದ ಯೆಹೋವದೇವರ ನಿತ್ಯ ಘನತೆ ಮತ್ತು ನಿರ್ದೋಷೀಕರಣವಾಗಿದೆ ಮತ್ತು ಆತನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ರಾಜಧಿಕಾರದಲ್ಲಿ ನಮ್ಮ ಸಮಗ್ರತೆಯನ್ನು ಅನಂತಕಾಲ ಮಾಲಿನ್ಯರಹಿತವಾಗಿರುವಂತೆ ರಕ್ಷಿಸುವುದೇ ಆಗಿದೆ. “ಹಲ್ಲೆಲೂಯಾ!”—ಪ್ರಕಟನೆ 19:1, 3, 4, 6; ಜ್ಞಾನೋಕ್ತಿ 10:9. (w89 8/15)
ನಿಮ್ಮ ಉತ್ತರವೇನು?
◻ ಯೆಹೋವನು ತನ್ನ ಸಾಂಕೇತಿಕ ಪಾದಪೀಠವಾದ ಭೂಮಿಯ ಕುರಿತು ಯಾವ ವಚನ ಕೊಟ್ಟಿದ್ದಾನೆ?
◻ ಪ್ರಮೋದವನವನ್ನು ಪೂರ್ವಸ್ಥಿತಿಗೆ ತರಲು ಯಾರು ನೆರವಾಗುವರು?
◻ ರಾಜ ಯೇಸುಕ್ರಿಸ್ತನು ಯಾರೊಳಗಿಂದ “ಭೂಮಿಯಲ್ಲೆಲ್ಲಾ. . .ಪ್ರಭುಗಳನ್ನು ನೇಮಿಸುವನು?
◻ ಪುನರುತ್ಥಾನ ನಡೆಯುವಾಗ ಯಾವ ಆತ್ಮೋತ್ತೇಜಕ ಅನುಭವ ನಿಮ್ಮದಾಗಿರಬಹುದು?
◻ ಯೆಹೋವನಿಗೆ ಮುರಿಯಲಾಗದ ಭಕ್ತಿ ತೋರಿಸುವವರಿಗೆ ಯಾವ ಭವಿಷ್ಯ ಕಾದಿದೆ?