ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಎಪ್ರಿಲ್ 3-9
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 17-21
“ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ”
it-2 776 ¶4
ಪಶ್ಚಾತ್ತಾಪ
ಕುಂಬಾರನು ಪಾತ್ರೆಯನ್ನು ಮೊದಲು ಒಂದು ರೀತಿಯಲ್ಲಿ ರೂಪಿಸುತ್ತಾನೆ. ಆದರೆ ಅದು ‘ಅವನ ಕೈಯಲ್ಲಿ ಕೆಟ್ಟು’ ಹೋದರೆ ಅದನ್ನು ಇನ್ನೊಂದು ರೂಪಕ್ಕೆ ಬದಲಾಯಿಸುತ್ತಾನೆ. (ಯೆರೆ 18:3, 4) ಈ ದೃಷ್ಟಾಂತದಿಂದ ಯೆಹೋವನು ಚಿತ್ರಿಸಿದ್ದೇನೆಂದರೆ ಮಾನವ ಕುಂಬಾರನಂತೆ ತನ್ನ ಕೈಯಲ್ಲಿ ಏನೂ ‘ಕೆಟ್ಟು’ ಹೋಗುವಂತಿಲ್ಲವಾದರೂ, ನಿರ್ಮಾಣಿಕ ದೇವರಾದ ಆತನಿಗೆ ಮಾನವರ ಮೇಲೆ ಅಧಿಕಾರ ಇದೆ. ಆ ಅಧಿಕಾರದ ಕಾರಣ ಅವರೊಂದಿಗೆ ವ್ಯವಹರಿಸುವ ತನ್ನ ರೀತಿಯನ್ನು ಆತನು ಬದಲಾಯಿಸಬಲ್ಲನು. ಇದು, ಆತನ ನೀತಿನಿಯಮಗಳಿಗೆ ಮತ್ತು ಕರುಣೆಗೆ ಮಾನವರು ಪ್ರತಿಕ್ರಿಯಿಸುವ ರೀತಿಯ ಮೇಲೆ ಹೊಂದಿಕೊಂಡಿದೆ. (ಹೋಲಿಸಿ ಯೆಶಾ 45:9; ರೋಮ 9:19-21) ಹಾಗಾಗಿ ಒಂದು ಜನಾಂಗಕ್ಕೆ “ತಾನು ಮಾಡಬೇಕೆಂದಿದ್ದ ಕೇಡನ್ನೂ ಮಾಡದೆ ಮನಮರುಗಿ ಮಾಡದಿರುವೆನು” ಅಥವಾ ಮನಸ್ಸನ್ನು ಬದಲಾಯಿಸಿಕೊಂಡು ಅದರ ಹಿತಕ್ಕಾಗಿ “ಮಾಡಾಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು” ಎಂದು ದೇವರು ಹೇಳಿದ್ದಾನೆ. (ಯೆರೆ 18:5-10) ಹೀಗೆ ಮಹಾ ಕುಂಬಾರ ಯೆಹೋವನ ಕೈಯಲ್ಲಿ ಯಾರೂ ‘ಕೆಟ್ಟು ಹೋಗುವದಿಲ್ಲ.’ ಬದಲಾಗಿ “ಜೇಡಿಮಣ್ಣು” ಆಗಿರುವ ಮಾನವರು ತಮ್ಮ ಹೃದಯ ಸ್ಥಿತಿ-ಸ್ವಭಾವಗಳಲ್ಲಿ “ರೂಪಾಂತರ” (ರೂಪ ಯಾ ರಚನೆಯ ಬದಲು) ಆಗುವುದರಿಂದ ಯೆಹೋವನು ಮನಮರುಗುತ್ತಾನೆ ಇಲ್ಲವೆ ಮನಸ್ಸು ಬದಲಾಯಿಸುತ್ತಾನೆ.
ಏಪ್ರಿಲ್ 17-23
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 25-28
“ಯೆರೆಮೀಯನಂತೆ ಧೈರ್ಯವಾಗಿರಿ”
jr 21 ¶13
“ಕಟ್ಟಕಡೆಯ ದಿನಗಳಲ್ಲಿ” ಸೇವೆ ಮಾಡುವುದು
13 ಯೆಹೂದದಲ್ಲಿ ನೆಲೆಸಿದ್ದಂಥ ಧಾರ್ಮಿಕ ಮತ್ತು ರಾಜಕೀಯ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಯೆರೆಮೀಯನು ನುಡಿದ ಆ ಮಾತುಗಳಿಗೆ ಧಾರ್ಮಿಕ ಮುಖಂಡರು ಹೇಗೆ ಪ್ರತಿಕ್ರಿಯಿಸಿದರು? ಪ್ರವಾದಿಯ ಸ್ವಂತ ಮಾತುಗಳಲ್ಲಿ ಹೇಳುವುದಾದರೆ, “ಯಾಜಕರೂ ಪ್ರವಾದಿಗಳೂ ಎಲ್ಲಾ ಜನರೂ ಅವನನ್ನು ಹಿಡಿದು ನಿನಗೆ ಮರಣವೇ ಆಗಬೇಕು” ಎಂದು ಹೇಳಿದರು. ಅವರು ಕೋಪದಿಂದ “ಇವನು ಮರಣದಂಡನೆಗೆ ತಕ್ಕವನು” ಎಂದು ಘೋಷಿಸಿದರು. (ಯೆರೆಮೀಯ 26:8-11 ಓದಿ.) ಆದರೆ ಯೆರೆಮೀಯನ ವಿರೋಧಿಗಳಿಗೆ ಮೇಲುಗೈಯಾಗಲಿಲ್ಲ. ಯೆಹೋವನು ತನ್ನ ಪ್ರವಾದಿಯೊಂದಿಗಿದ್ದನು. ಅವನನ್ನು ಕಾಪಾಡಿದನು. ಯೆರೆಮೀಯನಾದರೊ ತನ್ನನ್ನು ಸುತ್ತುವರಿದ ವಿರೋಧಿಗಳ ದೊಡ್ಡಗುಂಪಿಗೆ ಅವರ ಭಯಸೂಚಕ ಬೆದರಿಕೆಗಳಿಗೆ ಸೊಪ್ಪುಹಾಕಲಿಲ್ಲ. ಅವನಂತೆ ನೀವೂ ವಿರೋಧಿಗಳಿಗೆ ಹೆದರಬಾರದು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
jr 27 ¶21
“ಕಟ್ಟಕಡೆಯ ದಿನಗಳಲ್ಲಿ” ಸೇವೆ ಮಾಡುವುದು
21 ಚಿದ್ಕೀಯನ ಆಳಿಕೆಯ ಆರಂಭದಲ್ಲಿ ಯೆರೂಸಲೇಮಿಗೆ ‘ರಾಯಭಾರಿಗಳು’ ಅಥವಾ ಸಂದೇಶವಾಹಕರು ಬರುತ್ತಿದ್ದರೆಂದು ವ್ಯಕ್ತ. ಇವರನ್ನು ಎದೋಮ್, ಮೋವಾಬ್, ಅಮ್ಮೋನ್, ತೂರ್, ಚೀದೋನ್ ಮುಂತಾದ ದೇಶಗಳ ರಾಜರುಗಳು ಕಳುಹಿಸುತ್ತಿದ್ದರು. ಪ್ರಾಯಶಃ ಅವರ ಉದ್ದೇಶವು ನೆಬೂಕದ್ನೆಚ್ಚರನ ವಿರುದ್ಧವಾಗಿ ಚಿದ್ಕೀಯನು ತಮ್ಮೊಂದಿಗೆ ಒಕ್ಕೂಟವಾಗಿ ಕೂಡಿಕೊಳ್ಳುವಂತೆ ಪ್ರೇರಿಸಲಿಕ್ಕಾಗಿ ಇರಬೇಕು. ಆದರೆ ಯೆರೆಮೀಯನಾದರೊ ಚಿದ್ಕೀಯನು ಬಾಬೆಲಿನ ರಾಜನಿಗೆ ಅಧೀನನಾಗಿರುವಂತೆ ಬುದ್ಧಿಹೇಳಿದನು. ಅದಕ್ಕೆ ಹೊಂದಿಕೆಯಲ್ಲಿ ಯೆರೆಮೀಯನು ಆ ರಾಯಭಾರಿಗಳಿಗೆ ಕಣ್ಣಿನೊಗಗಳನ್ನು ಹೆಗಲಿಗೆ ಕಟ್ಟಿಕೊಳ್ಳುಂತೆ ಕೊಟ್ಟನು. ಅವರ ರಾಜ್ಯಗಳು ಕೂಡ ಬಾಬೆಲಿನ ರಾಜನಿಗೆ ಅಡಿಯಾಳಾಗಿರಬೇಕೆಂದು ಆ ಕಣ್ಣಿನೊಗಗಳು ಚಿತ್ರರೂಪವಾಗಿ ಸೂಚಿಸಿದವು. (ಯೆರೆ. 27:1-3, 14) ಆ ನಿಲುವು ಎಲ್ಲ ಜನರಿಗೆ ಒಪ್ಪಿಗೆಯಾಗಿರಲಿಲ್ಲ. ಸುಳ್ಳು ಪ್ರವಾದಿ ಹನನ್ಯನ ಮಾತುಗಳಿಂದಾಗಿ ಜನರಿಗೆ ಯೆರೆಮೀಯನ ಅಪ್ರಿಯ ಸಂದೇಶವನ್ನು ಸ್ವೀಕರಿಸಲು ಇನ್ನಷ್ಟು ಕಷ್ಟಕರವಾಯಿತು. ಹೇಗಂದರೆ ಬಾಬೆಲಿನ ರಾಜನು ಹೇರಿರುವ ನೊಗವು ಮುರಿಯಲ್ಪಡುವುದು ಎಂದು ಅವನು ಯೆಹೋವನ ಹೆಸರಿನಲ್ಲಿ ಸುಳ್ಳಾಗಿ ಘೋಷಿಸಿದನು. ಈ ಕಾರಣಕ್ಕಾಗಿ ಆ ಠಕ್ಕ ಹನನ್ಯನು ಒಂದೇ ವರ್ಷದೊಳಗೆ ಸತ್ತುಹೋಗುವನೆಂದು ಯೆರೆಮೀಯನ ಮುಖಾಂತರ ಯೆಹೋವನು ನುಡಿದನು. ಆತನು ನುಡಿದಂತೆಯೇ ಸಂಭವಿಸಿತು.—ಯೆರೆ. 28:1-3, 16, 17.
jr 187-188 ¶11-12
“ನಾನು ಬಾಯಿಮುಚ್ಚಿಕೊಂಡಿರಲಾರೆ”
11 ಯೆರೆಮೀಯನು ಮತಾಂಧನಾಗಿರಲಿಲ್ಲ ಎಂದು ಮನಸ್ಸಿನಲ್ಲಿಡುವುದು ಒಳ್ಳೆಯದು. ವಿರೋಧಿಗಳನ್ನು ಎದುರಿಸಿದಾಗ ಅವನು ವ್ಯವಹಾರ ಜ್ಞಾನವನ್ನು ಬಳಸಿದನು. ಯಾವಾಗ ಹಿಂತೆಗೆಯಬೇಕೆಂದು ಅವನಿಗೆ ಗೊತ್ತಿತ್ತು. ಉದಾಹರಣೆಗೆ ಹನನ್ಯನೊಂದಿಗೆ ಅವನಿಗಾದ ಅನುಭವವನ್ನು ಗಮನಿಸಿ. ಆ ಸುಳ್ಳು ಪ್ರವಾದಿ ಯೆಹೋವನ ಪ್ರವಾದನಾ ನುಡಿಯನ್ನು ಸಕಲ ಜನರ ಮುಂದೆ ಪ್ರತಿರೋಧಿಸಿದ ಬಳಿಕವೇ ಯೆರೆಮೀಯನು ಅವನನ್ನು ತಿದ್ದಿದನು, ಸತ್ಯಪ್ರವಾದಿಯನ್ನು ಗುರುತಿಸುವುದು ಹೇಗೆಂದು ವಿವರಿಸಿದನು. ಯೆಹೂದವು ಬಾಬೆಲಿನ ದಬ್ಬಾಳಿಕೆಯ ನೊಗದ ಕೆಳಗೆ ಬರುವುದನ್ನು ಸೂಚಿಸಲಿಕ್ಕಾಗಿಯೇ ಯೆರೆಮೀಯನು ಮರದ ನೊಗವನ್ನು ಹೊತ್ತುಕೊಂಡಿದ್ದನು. ಹನನ್ಯನು ಜುಲುಮಿನಿಂದ ಯೆರೆಮೀಯನ ಮೇಲೆ ಕೈಮಾಡಿ ಆ ನೊಗವನ್ನು ಎಳೆದುತೆಗೆದು ಮುರಿದುಬಿಟ್ಟನು. ಹನನ್ಯನು ಮುಂದೇನು ಮಾಡಲಿದ್ದಾನೆಂದು ಯಾರಿಗೆ ಗೊತ್ತು? ಹಾಗಾಗಿ ಯೆರೆಮೀಯನು ಏನು ಮಾಡಿದ? ಇದನ್ನು ನೋಡಿ, “ಪ್ರವಾದಿಯಾದ ಯೆರೆಮೀಯನು ಹೊರಟುಹೋದನು” ಎಂದು ನಾವು ಓದುತ್ತೇವೆ; ಹೌದು, ಯೆರೆಮೀಯನು ಅಲ್ಲಿಂದ ಕಾಲ್ತೆಗೆದನು. ತದನಂತರ ಯೆಹೋವನ ಮಾರ್ಗದರ್ಶನೆಯಲ್ಲಿ ಹಿಂತಿರುಗಿ ಬಂದು ದೇವರು ತರಲಿದ್ದ ಸಂಗತಿಗಳನ್ನು ಹನನ್ಯನಿಗೆ ತಿಳಿಸಿದನು. ಏನೆಂದರೆ ಬಾಬೆಲಿನ ಅರಸನಿಗೆ ಯೆಹೂದ್ಯರು ಅಡಿಯಾಳಾಗುವರು ಮತ್ತು ಹನನ್ಯನು ಸತ್ತುಹೋಗುವನು.—ಯೆರೆ. 28:1-17.
12 ಈ ಪ್ರೇರಿತ ವೃತ್ತಾಂತ ನಾವು ಸಾರುವಿಕೆಯಲ್ಲಿ ಏನು ಮಾಡಬೇಕೆಂದು ಸ್ವಷ್ಟವಾಗಿ ತೋರಿಸುತ್ತದೆ. ನಾವು ಧೈರ್ಯ ತೋರಿಸಬೇಕು ಆದರೂ ಯುಕ್ತಾಯುಕ್ತ ಪರಿಜ್ಞಾನದೊಂದಿಗೆ. ವಾಕ್ಯವನ್ನು ಸಾರುವಾಗ ಮನೆಯವರು ತಿರಸ್ಕರಿಸಿದಲ್ಲಿ, ಕೋಪದಿಂದ ನಮ್ಮ ಮೇಲೆ ಕೈಮಾಡಲು ಬಂದಲ್ಲಿ ಸಹ, ನಮ್ಮನ್ನು ಕ್ಷಮಿಸುವಂತೆ ನಾವು ವಿನಯದಿಂದ ಹೇಳಿ ಆ ಸ್ಥಳವನ್ನು ಬಿಟ್ಟು ಬೇರೊಂದು ಮನೆಗೆ ಹೋಗಬಹುದು. ರಾಜ್ಯದ ಸುವಾರ್ತೆಯ ಸಂಬಂಧವಾಗಿ ಯಾರೊಂದಿಗೂ ಕೋಪದಿಂದ ವಾದಿಸುವ ಅಗತ್ಯವಿಲ್ಲ. ‘ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವರಾಗುವ’ ಮೂಲಕ ನಾವು ಮನೆಯವನಿಗೆ ಇನ್ನೊಮ್ಮೆ ಸಹಾಯ ಕೊಡಬಲ್ಲ ಇನ್ನೊಂದು ಅವಕಾಶವನ್ನು ತೆರೆದಿಡುತ್ತೇವೆ.—2 ತಿಮೊಥೆಯ 2:23-25 ಓದಿ; ಜ್ಞಾನೋ. 17:14.
ಏಪ್ರಿಲ್ 24-30
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 29-31
“ಹೊಸ ಒಡಂಬಡಿಕೆಯ ಬಗ್ಗೆ ಯೆಹೋವನು ಮುಂಚಿತವಾಗಿಯೇ ತಿಳಿಸಿದನು”
it-1 524 ¶3-4
ಒಡಂಬಡಿಕೆ
ಹೊಸ ಒಡಂಬಡಿಕೆ. ಪ್ರವಾದಿ ಯೆರೆಮೀಯನ ಮೂಲಕ ಯೆಹೋವನು ಹೊಸ ಒಡಂಬಡಿಕೆಯನ್ನು ಮುಂತಿಳಿಸಿದ್ದು ಕ್ರಿಸ್ತ ಪೂರ್ವ ಏಳನೆಯ ಶತಮಾನದಲ್ಲಿ. ಇದು ಇಸ್ರಾಯೇಲ್ಯರು ಮೀರಿದ್ದ ಧರ್ಮಶಾಸ್ತ್ರದ ಒಡಂಬಡಿಕೆಯಂಥದ್ದಲ್ಲ ಎಂದು ಹೇಳಲಾಯಿತು. (ಯೆರೆ 31:31-34) ತನ್ನ ಮರಣದ ಮುಂಚಿನ ರಾತ್ರಿಯಲ್ಲಿ ಅಂದರೆ ಕ್ರಿ.ಶ. 33 ರ ನೈಸಾನ್ 14 ರಲ್ಲಿ ಯೇಸು ಕ್ರಿಸ್ತನು ಕರ್ತನ ಸಂಜಾ ಭೋಜನದ ಆಚರಣೆಯನ್ನು ಸ್ಥಾಪಿಸಿದಾಗ ಈ ಹೊಸ ಒಡಂಬಡಿಕೆಯನ್ನು ಪ್ರಕಟಿಸಿದನು, ಅದು ಆತನ ವಿಮೋಚನ ಯಜ್ಞದ ಮೂಲಕ ಜಾರಿಗೆ ಬರಲಿತ್ತು. (ಲೂಕ 22:20) ಯೇಸು ತನ್ನ ಪುನರುತ್ಥಾನವಾದ 50ನೆಯ ದಿನದಲ್ಲಿ ಮತ್ತು ತಂದೆಯ ಬಳಿಗೆ ಏರಿಹೋದ 10 ದಿನಗಳ ಬಳಿಕ, ಯೆರೂಸಲೇಮಿನ ಮೇಲ್ಕೋಣೆಯಲ್ಲಿ ಕೂಡಿಬಂದಿದ್ದ ತನ್ನ ಶಿಷ್ಯರ ಮೇಲೆ ಯೆಹೋವನಿಂದ ದೊರೆತ ಪವಿತ್ರಾತ್ಮವನ್ನು ಸುರಿಸಿದನು.—ಅಕಾ 2:1-4, 17, 33; 2ಕೊರಿಂ 3:6, 8, 9; ಇಬ್ರಿ 2:3, 4.
ಈ ಹೊಸ ಒಡಂಬಡಿಕೆಯಲ್ಲಿ, ಒಂದು ಪಕ್ಕದಲ್ಲಿ ಯೆಹೋವ ದೇವರಿದ್ದನು ಮತ್ತು ಇನ್ನೊಂದು ಪಕ್ಕದಲ್ಲಿ ‘ದೇವರ ಇಸ್ರಾಯೇಲ್ಯರು’ ಅಂದರೆ ಕ್ರಿಸ್ತನೊಂದಿಗೆ ಐಕ್ಯರಾಗಿದ್ದು ಆತನ ಸಭೆಯೂ ದೇಹವೂ ಆಗಿರುವ ಆತ್ಮಾಭಿಷಿಕ್ತ ಕ್ರೈಸ್ತರಿದ್ದರು. (ಇಬ್ರಿ 8:10; 12:22-24; ಗಲಾ 6:15, 16; 3:26-28; ರೋಮ 2:28, 29) ಹೊಸ ಒಡಂಬಡಿಕೆಯು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಿಂದ (ಮಾನವ ಜೀವದ ಯಜ್ಞಾರ್ಪಣೆಯಿಂದ) ಜಾರಿಗೆ ಬಂತು. ಯೇಸು ಕ್ರಿಸ್ತನು ಸ್ವರ್ಗಕ್ಕೆ ಏರಿಹೋದ ಬಳಿಕ ಆದರ ಮೌಲ್ಯವನ್ನು ಯೆಹೋವನಿಗೆ ನೀಡಿದನು. (ಮತ್ತಾ 26:28) ದೇವರು ಒಬ್ಬನನ್ನು ಸ್ವರ್ಗೀಯ ಕರೆಗೆ ಆರಿಸಿಕೊಂಡಾಗ (ಇಬ್ರಿ 3:1), ಆ ವ್ಯಕ್ತಿಯನ್ನು ಕ್ರಿಸ್ತನ ಯಜ್ಞಾರ್ಪಣೆಯ ಆಧಾರದ ಮೇಲೆ ತನ್ನ ಒಡಂಬಡಿಕೆಯೊಳಗೆ ತರುತ್ತಾನೆ. (ಕೀರ್ತ 50:5; ಇಬ್ರಿ 9:14, 15, 26) ಏಕೆಂದರೆ ಯೇಸು ಕ್ರಿಸ್ತನು ಹೊಸ ಒಡಂಬಡಿಕೆಯ ಮಧ್ಯಸ್ಥನು. (ಇಬ್ರಿ 8:6; 9:15) ಅವನು ಅಬ್ರಹಾಮನ ಮುಖ್ಯ ಸಂತತಿಯೂ ಆಗಿದ್ದಾನೆ. (ಗಲಾ 3:16) ಹೊಸ ಒಡಂಬಡಿಕೆಯ ತನ್ನ ಮಧ್ಯಸ್ಥಿಕೆಯ ಮೂಲಕ ಕ್ರಿಸ್ತನು ಒಡಂಬಡಿಕೆಯಲ್ಲಿರುವವರ ಪಾಪಗಳನ್ನು ಕ್ಷಮಿಸಿ ಅವರು ಅಬ್ರಹಾಮನ ನಿಜ ಸಂತತಿಯ ಭಾಗವಾಗಲು ನೆರವಾಗುತ್ತಾನೆ. (ಇಬ್ರಿ 2:16; ಗಲಾ 3:29) ಅವರನ್ನು ನೀತಿವಂತರೆಂದು ನಿರ್ಣಯಿಸುವಾತನು ಯೆಹೋವನು.—ರೋಮ 5:1, 2; 8:33; ಇಬ್ರಿ 10:16, 17.
jr 173-174 ¶11-12
ಹೊಸ ಒಡಂಬಡಿಕೆಯಿಂದ ನೀವು ಪ್ರಯೋಜನ ಪಡೆಯಬಲ್ಲಿರಿ
11 ಹೊಸ ಒಡಂಬಡಿಕೆಯ ಬೇರೆ ವಿಶಿಷ್ಟಪೂರ್ಣ ಅಂಶಗಳನ್ನು ತಿಳಿಯಲು ನೀವು ಬಯಸುತ್ತೀರಾ? ಮೋಶೆಯ ಧರ್ಮಶಾಸ್ತ್ರ ಮತ್ತು ಹೊಸ ಒಡಂಬಡಿಕೆಗಿರುವ ಒಂದು ಮುಖ್ಯ ವ್ಯತ್ಯಾಸವು ಅವು ಯಾವುದರ ಮೇಲೆ ಬರೆಯಲ್ಪಟ್ಟಿವೆ ಎಂಬುದೇ. (ಯೆರೆಮೀಯ 31:33 ಓದಿ.) ಧರ್ಮಶಾಸ್ತ್ರದ ಆಜ್ಞೆಗಳನ್ನು ಕಲ್ಲಿನ ಹಲಗೆಗಳ ಮೇಲೆ ಬರೆಯಲಾಯಿತು. ಅದು ಕೊನೆಗೆ ಇಲ್ಲದೆ ಹೋಯಿತು. ಆದರೆ ಯೆರೆಮೀಯನ ಪ್ರವಾದನೆಗನುಸಾರ ಹೊಸ ಒಡಂಬಡಿಕೆಯ ನಿಯಮವು ಮನುಷ್ಯರ ಹೃದಯದ ಮೇಲೆ ಬರೆಯಲ್ಪಡಲಿತ್ತು ಮತ್ತು ಅದು ಸದಾಕಾಲ ಬಾಳುವುದು. ಹೊಸ ಒಡಂಬಡಿಕೆಯ ಭಾಗವಾಗಿರುವ ಅಭಿಷಿಕ್ತ ಕ್ರೈಸ್ತರು ಈ ನಿಯಮವನ್ನು ನಿಜವಾಗಿ ಮಾನ್ಯಮಾಡುತ್ತಾರೆ. ಹೊಸ ಒಡಂಬಡಿಕೆಯಲ್ಲಿ ನೇರವಾಗಿ ಒಳಗೂಡದ ಹಾಗೂ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆ ಇರುವ ‘ಬೇರೆ ಕುರಿಗಳ’ ವಿಷಯದಲ್ಲೇನು? (ಯೋಹಾ. 10:16) ಇವರೂ ದೇವರ ನಿಯಮದಲ್ಲಿ ಆನಂದಿಸುತ್ತಾರೆ. ಒಂದರ್ಥದಲ್ಲಿ ಅವರು, ಇಸ್ರಾಯೇಲ್ಯರ ಕಾಲದಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ಸ್ವೀಕರಿಸಿ ಅದರಿಂದ ಪ್ರಯೋಜನ ಪಡೆದಿದ್ದ ಅನ್ಯದೇಶಸ್ಥರ ಹಾಗೆ ಇದ್ದಾರೆ.—ಯಾಜ. 24:22; ಅರ. 15:15.
12 ಅಭಿಷಿಕ್ತ ಕ್ರೈಸ್ತರ ಹೃದಯದೊಳಗೆ ಬರೆಯಲಾದ ಆ ನಿಯಮ ಯಾವುದು ಎಂದು ಯಾರಾದರೂ ಪ್ರಶ್ನಿಸಿದಲ್ಲಿ ನೀವೇನು ಉತ್ತರ ಕೊಡುವಿರಿ? ಒಳ್ಳೆದು, ಈ ನಿಯಮವನ್ನು “ಕ್ರಿಸ್ತನ ನಿಯಮ” ಎಂದೂ ಕರೆಯಲಾಗಿದೆ. ಆ ನಿಯಮವನ್ನು ಹೊಸ ಒಡಂಬಡಿಕೆಯಲ್ಲಿರುವ ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ ಮೊದಲಾಗಿ ಕೊಡಲಾಯಿತು. (ಗಲಾ. 6:2; ರೋಮ. 2:28, 29) ಕ್ರಿಸ್ತನ ನಿಯಮವನ್ನು ‘ಪ್ರೀತಿ’ ಎಂಬ ಒಂದೇ ಪದದಲ್ಲಿ ಸಾರಾಂಶಿಸಬಹುದು. (ಮತ್ತಾ. 22:36-39) ಈ ನಿಯಮವು ಅಭಿಷಿಕ್ತ ಜನರ ಹೃದಯದಲ್ಲಿ ಬರೆಯಲ್ಪಡುವುದು ಹೇಗೆ? ಮುಖ್ಯವಾಗಿ, ದೇವರ ವಾಕ್ಯದ ಅಧ್ಯಯನ ಮತ್ತು ಪ್ರಾರ್ಥನೆಗಳಿಂದ ದೇವರಿಗೆ ಸಮೀಪವಾಗುವ ಮೂಲಕವೇ. ಸತ್ಯಾರಾಧನೆಯ ಈ ಅಂಶಗಳು ನಿಜ ಕ್ರೈಸ್ತರೆಲ್ಲರು ತಮ್ಮ ಜೀವನದಲ್ಲಿ ಕ್ರಮವಾಗಿ ನಡಿಸಬೇಕಾದ ವಿಷಯಗಳೇ. ಹೊಸ ಒಡಂಬಡಿಕೆಯಲ್ಲಿ ಸೇರಿರದಿದ್ದರೂ ಯಾರು ಅದರಿಂದ ಪ್ರಯೋಜನ ಪಡೆಯಲು ಬಯಸುತ್ತಾರೋ ಅವರೆಲ್ಲರು ಇದನ್ನು ಮಾಡಬೇಕು.
jr 177 ¶18
ಹೊಸ ಒಡಂಬಡಿಕೆಯಿಂದ ನೀವು ಪ್ರಯೋಜನ ಪಡೆಯಬಲ್ಲಿರಿ
18 ಇದಕ್ಕನುಸಾರ, ಪಾಪಿಗಳಾದ ಮಾನವರಿಗಾಗಿ ದೇವರು ನಡಿಸಿರುವ ಒಂದು ಆಶ್ಚರ್ಯಕರ ವಿಷಯವನ್ನು ಹೊಸ ಒಡಂಬಡಿಕೆಯು ಎತ್ತಿಹೇಳುತ್ತದೆ. ಅದರಲ್ಲಿ ಹೊಸ ಒಡಂಬಡಿಕೆಯಲ್ಲಿರುವ ಅಭಿಷಿಕ್ತರೂ ಭೂನಿರೀಕ್ಷೆಯುಳ್ಳ ಜನರೂ ಸೇರಿರುತ್ತಾರೆ. ಒಮ್ಮೆ ಯೆಹೋವನು ನಿಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟನೆಂದರೆ ಆತನು ಅವನ್ನು ಪುನಃ ಗಮನಕ್ಕೆ ತರುವುದಿಲ್ಲ ಎಂಬ ಭರವಸೆ ನಿಮಗಿರಬಲ್ಲದು. ಹೀಗೆ ಹೊಸ ಒಡಂಬಡಿಕೆಯ ಮೂಲಕ ದೇವರು ಕೊಟ್ಟ ವಾಗ್ದಾನವು ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಂದು ಪಾಠವನ್ನು ಕಲಿಸುತ್ತದೆ. ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಬೇರೆಯವರ ತಪ್ಪುಗಳನ್ನು ಕ್ಷಮಿಸಿದ್ದೇನೆಂದು ಒಮ್ಮೆ ಹೇಳಿದ ಮೇಲೆ ಅವರ ತಪ್ಪುಗಳನ್ನು ಮರಳಿ ಗಮನಕ್ಕೆ ತರದಿರುವ ಮೂಲಕ ನಾನು ಯೆಹೋವನನ್ನು ಅನುಕರಿಸಲು ಪ್ರಯತ್ನಿಸುತ್ತೇನಾ?’ (ಮತ್ತಾ. 6:14, 15) ಇದು ಚಿಕ್ಕ ಚಿಕ್ಕ ತಪ್ಪುಗಳಿಗೆ ಮಾತ್ರವಲ್ಲ, ದೊಡ್ಡ ತಪ್ಪುಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ವ್ಯಭಿಚಾರದಂಥ ಅತಿ ಗಂಭೀರವಾದ ಪಾಪವನ್ನು ಒಬ್ಬ ಕ್ರೈಸ್ತ ವಿವಾಹ ಸಂಗಾತಿಯು ಮಾಡಿದಾಗ ನಿರ್ದೋಷಿ ಸಂಗಾತಿಯು ಪಶ್ಚಾತ್ತಾಪಡುವ ಆ ಸಂಗಾತಿಯನ್ನು ಕ್ಷಮಿಸಿಬಿಡಬಹುದು. ಒಮ್ಮೆ ಕ್ಷಮಿಸಿದ ನಂತರ ‘ಆ ಪಾಪವನ್ನು ಇನ್ನು ಮುಂದೆ ಗಮನಕ್ಕೆ ತರದಿರುವುದು’ ಸೂಕ್ತವಲ್ಲವೇ? ಹೌದು, ತಪ್ಪುಗಳನ್ನು ಮರೆತು ಬಿಡುವುದು ಅಷ್ಟೊಂದು ಸುಲಭವಲ್ಲ ನಿಜ. ಆದರೂ ಅದು ನಾವು ಯೆಹೋವನನ್ನು ಅನುಕರಿಸುವ ಒಂದು ವಿಧವಾಗಿದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
g 6/12 14 ¶1-2
ಬೈಬಲ್—ನಿಜ ಪ್ರವಾದನೆಗಳ ಗ್ರಂಥ, ಭಾಗ 2
ನೆರವೇರಿಕೆ: ಕ್ರಿ.ಪೂ. 607 ರಿಂದ ಕ್ರಿ.ಪೂ. 537 ತನಕದ 70 ವರ್ಷಗಳ ದೇಶಭ್ರಷ್ಟತೆಯ ನಂತರ ಯೆಹೂದಿ ಬಂಧಿವಾಸಿಗಳನ್ನು ಪಾರಸಿಯ ರಾಜ ಕೋರೆಷನು ಬಿಡುಗಡೆ ಮಾಡಿದನು. ಅವರು ತಮ್ಮ ಸ್ವದೇಶಕ್ಕೆ ಹಿಂತಿರುಗಿ ಯೆರೂಸಲೇಮಿನಲ್ಲಿ ದೇವಾಲಯವನ್ನು ಪುನಃ ಕಟ್ಟುವಂತೆ ಬಿಟ್ಟನು.—ಎಜ್ರ 1:2-4.
ಇತಿಹಾಸ ಏನನ್ನು ತಿಳಿಸುತ್ತದೆ:
● ಬೈಬಲು ಮುಂತಿಳಿಸಿದ ಪ್ರಕಾರ ಇಸ್ರಾಯೇಲ್ಯರು ಬಬಿಲೋನಿನಲ್ಲಿ 70 ವರ್ಷ ಸೆರೆವಾಸಿಗಳಾಗಿ ಉಳಿದಿದ್ದರಾ? ಇಸ್ರಾಯೇಲಿನ ಮುಖ್ಯ ಶೋಧನ ಶಾಸ್ತ್ರಜ್ಞ ಎಫ್ರೆಮ್ ಸ್ಟೆಮ್ ಅವರ ಹೇಳಿಕೆಗಳನ್ನು ಗಮನಿಸಿ: “ಕ್ರಿ.ಪೂ. 607 ರಿಂದ ಕ್ರಿ.ಪೂ. 538 ರ ತನಕ ಜನನಿವಾಸವು ಅಲ್ಲಿತ್ತೆಂಬುದಕ್ಕೆ ಯಾವ ಪುರಾವೆಯು ಇರುವುದಿಲ್ಲ. ಬಬಿಲೋನ್ಯರಿಂದ ನಾಶಮಾಡಲಾಗಿದ್ದ ಯಾವೊಂದು ಪಟ್ಟಣವೂ ಆ ಸಮಯದಲ್ಲೆಲ್ಲ ಪುನಃಸ್ಥಾಪನೆಯಾಗಿರಲಿಲ್ಲ. ಅವರಿಂದ ವಶಪಡಿಸಲಾದ ಪ್ರದೇಶಗಳಲ್ಲಿ ಜನನಿವಾಸವು ಇತ್ತೆಂಬದಕ್ಕೆ ಅಥವಾ ಪುನರ್ವಸತಿ ಅಲ್ಲಿ ಆಗಿತ್ತೆಂಬದಕ್ಕೆ ಯಾವ ಪುರಾವೆಯೂ ಇಲ್ಲದಿರುವುದರಿಂದ ಕ್ರಿ.ಪೂ. 607 ರಿಂದ ಕ್ರಿ.ಪೂ. 577 ರ ತನಕ ಇಸ್ರಾಯೇಲ್ಯರು ಬಬಿಲೋನಿನಲ್ಲಿ ಸೆರೆವಾಸಿಗಳಾಗಿಯೇ ಉಳಿದಿದ್ದರು ಎಂಬುದಕ್ಕೆ ಹೊಂದಿಕೆಯಲ್ಲಿದೆ.— 2 ಪೂರ್ವಕಾಲವೃತ್ತಾಂತ 36:20, 21.